ಬೆಂಗಳೂರು : ರಾಜ್ಯದ ವಿವಿಧ ನಿಗಮ ಹಾಗೂ ಮಂಡಳಿಗಳ ಅಧ್ಯಕ್ಷರಾಗಿ ನೇಮಕಗೊಂಡಿದ್ದ 25 ಶಾಸಕರ ಸೇವಾವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಅವರ ಅವಧಿಯನ್ನು ಮುಂದಿನ ಆದೇಶದವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಮಹತ್ವದ ಅಧಿಸೂಚನೆ ಹೊರಡಿಸಿದೆ. 2024ರ ಜನವರಿ 26ರಂದು ಎರಡು ವರ್ಷಗಳ ಅವಧಿಗೆ ನಿಗಮ ಹಾಗೂ ಮಂಡಳಿಗಳ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಶಾಸಕರ ಸೇವಾವಧಿ 2026ರ ಜನವರಿ 26ರಂದು ಪೂರ್ಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಅಧಿಕೃತ ಅಧಿಸೂಚನೆ ಹೊರಡಿಸಿ, ಎಲ್ಲಾ 25 ಅಧ್ಯಕ್ಷರ […]
ಕರ್ನಾಟಕ ಶಿಕ್ಷಣ ಮಂಡಳಿ ನಡೆಸಿದ 2025-26 ಸಾಲಿನ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಕುಂದಾಪುರದ ಗುರುಕುಲ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಕುಮಾರಿ ಸಾನಿಧ್ಯ ಎಸ್ ನಾಯ್ಕ್ ವಿಶೇಷ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ. ಕುಂದಾಪುರದ ಖಾರ್ವಿಕೇರಿ ನಿವಾಸಿ ಶ್ರೀಮತಿ ಶ್ಯಾಮಲಾ ಮತ್ತು ಸಂತೋಷ ನಾಯ್ಕ್ ಇವರ ಪುತ್ರಿಯಾಗಿರುವ ಇವರು, ಪ್ರಸ್ತುತ ಚಿತ್ರಕಲಾ ಶಿಕ್ಷಕರಾದ ಮಲ್ಲಪ್ಪ ಇವರ ಮಾರ್ಗದರ್ಶನದಲ್ಲಿ ಚಿತ್ರಕಲೆಯನ್ನು ಅಭ್ಯಾಸ ಮಾಡುತ್ತಿದ್ದಾರೆ.
ರಾಜ್ಯಮಟ್ಟದ ರಾಷ್ಟ್ರೀಯ ಆವಿಷ್ಕಾರ ರಸಪ್ರಶ್ನೆ ಸ್ಪರ್ಧೆ ಡಿಡಿ ಚಂದನ ಕೇಂದ್ರ ಬೆಂಗಳೂರು. ಮೈಸೂರು ವಿಭಾಗದಿಂದ ಸ.ಹಿ.ಪ್ರಾ ಶಾಲೆ ಉಳ್ಳೂರು -11 5ನೇ ತರಗತಿಯ ವಚನ ಮತ್ತು ಹಾಸನದ ಸ ಹಿ ಪ್ರಾ ಶಾಲೆ ಹೊಳೆನರಸೀಪುರ 5ನೇ ತರಗತಿಯ ಹರ್ಷ ಇವರಿಬ್ಬರು ಪ್ರತಿನಿಧಿಸಿರುತ್ತಾರೆ. ವಚನ ದ್ವಿತೀಯ ಸ್ಥಾನವನ್ನು ಪಡೆದು ಉಳ್ಳೂರು ಸರಕಾರಿ ಶಾಲೆಯ ಶಾಲೆಯ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದ ವಚನಾಳಿಗೆ ಹಾಗೂ ತರಬೇತಿ ಗೊಳಿಸಿದ ಶಿಕ್ಷಕರಿಗೂ ಶಾಲಾ ಹಳೇವಿಧ್ಯಾರ್ಥಿ ಸಂಘ , ಶಾಲಾ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ […]
The Fourth Day of Celebrations at St. Lawrence Basilica, Karkal–Attur ಕಾರ್ಕಳ; ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವದ ನಾಲ್ಕನೇ ದಿನವಾದ ಬುದವಾರದಂದು ಮಹೋತ್ಸವದ ಮುಖ್ಯ ದಿನವಾದ್ದರಿಂದ ಬೆಳಗ್ಗೆಯಿಂದ ತಡ ರಾತ್ರಿ ತನಕ ಭಕ್ತರು ಭಾರೀ ಸಂಖ್ಯೆಯಲ್ಲಿ ಪುಣ್ಯಕ್ಷೇತಕ್ಕೆ ಹರಿದುಬಂದರು. ಸಂತ ಲಾರೆನ್ಸ್ ರವರ ಅತ್ಯದ್ಭುತ ಶಕ್ತಿಯುತ ಮಧ್ಯಸ್ಥಿಕೆಯಿಂದ ದೇವರಿಗೆ ತಮ್ಮ ಬೇಡಿಕೆಗಳನ್ನು ಸಮರ್ಪಿಸಿದರು. ಭಕ್ತರ ಭಾರೀ ಸಂಖ್ಯೆಯ ಕಾರಣ ವಾಹನಗಳನ್ನು ದೂರದಲ್ಲಿ ನಿಲ್ಲಿಸಲಾಗಿದ್ದು, ಜನರು ಸುಮಾರು ಒಂದು ಕಿಲೋಮೀಟರ್ ನಡೆದುಕೊಂಡು ಸ್ಥಳಕ್ಕೆ ತಲುಪಿದರು. […]
ಕುಂದಾಪುರದ; “ಕಾಲಕಾಲಕ್ಕೆ ಸಂದರ್ಭಾನುಸಾರವಾಗಿ ಹಲವು ತಿದ್ದುಪಡಿಗಳನ್ನು ಕಂಡ ಭಾರತದ ಸಂವಿಧಾನ ವಿಶಿಷ್ಟವಾದುದು. ನಮ್ಮ ಪ್ರದೇಶದವರೇ ಆದ ಬೆನಗಲ್ ನರಸಿಂಗ್ ರಾಯ್ ಮತ್ತು ಹಲವು ಶ್ರೇಷ್ಠ ವ್ಯಕ್ತಿತ್ವಗಳು ಮುಂಚೂಣಿಯಲ್ಲಿದ್ದು ಸಿದ್ಧಗೊಳಿಸಿದ ಸಂವಿಧಾನದಲ್ಲಿರುವ ಸೂಕ್ತ ತಿದ್ದುಪಡಿಗಳನ್ನು ನಾಗರೀಕರ ಒಳಿತಿಗೆ ಬಳಸಿಕೊಳ್ಳಬೇಕು ‘ ಎಂದು ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಕಾಲೇಜಿನಲ್ಲಿ ಗಣರಾಜ್ಯೋತ್ಸ ಸಮಾರಂಭದಲ್ಲಿ ಧ್ವಜಾರೋಹಣಗೈದು ಕರೆ ನೀಡಿದರು. ಕಂಪ್ಯೂಟರ್ ವಿಭಾದ ಮುಖ್ಯಸ್ಥರಾದ ಸಂದೀಪ್ ಪೂಜಾರಿಯವರು ಧ್ವಜಾರೋಹಣದ ವಿಧಿಗಳನ್ನು ನಿರ್ದೇಶಿಸಿದರು. ಕಾಲೇಜಿನ ದೈಹಿಕ […]
ಬೆಂಗಳೂರು : ದೇಶದ 77ನೇ ಗಣರಾಜ್ಯೋತ್ಸವವನ್ನು ನೀಲಸಂದ್ರದ ಸರ್ಕಾರಿ ಹೈಸ್ಕೂಲಿನಲ್ಲಿ ಭಕ್ತಿ, ಗೌರವ ಹಾಗೂ ರಾಷ್ಟ್ರಭಕ್ತಿ ಮನೋಭಾವದೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಆವರಣವನ್ನು ತ್ರಿವರ್ಣ ಧ್ವಜಗಳಿಂದ ಸುಂದರವಾಗಿ ಅಲಂಕರಿಸಲಾಗಿದ್ದು, ರಾಷ್ಟ್ರಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ರಾಷ್ಟ್ರಗೀತೆಯೊಂದಿಗೆ ಸಮಾರಂಭ ಆರಂಭಗೊಂಡು, ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಭಾಗವಹಿಸುವ ಮೂಲಕ ರಾಷ್ಟ್ರಪ್ರೇಮವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಸಯ್ಯದ್ ಸಾಜಿದ್ ಹುಸೈನ್ ವಹಿಸಿದ್ದರು. ಅವರು ಮಾತನಾಡಿ, ಭಾರತೀಯ ಸಂವಿಧಾನದ ರೂಪುಗೊಳಿಕೆಗೆ ಶ್ರಮಿಸಿದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಇತರ […]
ಕುಂದಾಪುರ : ಸೋಮವಾರ, 26.01.2026 : ಕುಂದಾಪುರದ ಯು.ಬಿ.ಎಂ.ಸಿ. ಇಂಗ್ಲಿಷ್ ಮಾಧ್ಯಮ ಶಾಲೆ ಮತ್ತು ಸಿ.ಎಸ್.ಐ. ಕೃಪಾ ವಿದ್ಯಾಲಯವು 77 ನೇ ‘ಗಣರಾಜ್ಯೋತ್ಸವ’ವನ್ನು ಸೋಮವಾರ, 26.01.2026 ರಂದು ಶಾಲಾ ಮೈದಾನದಲ್ಲಿ ಆಚರಿಸಿತು. ಮುಖ್ಯ ಅತಿಥಿ, ಬೆಟರ್ಮೆಂಟ್ ಸಮಿತಿ ಸದಸ್ಯರಾದ ಜೀವನ್ ಸಾಲಿನ್ಸ್ ಅವರು ತ್ರಿವರ್ಣ ಧ್ವಜಾರೋಹಣ ಮಾಡಿದರು. ತಮ್ಮ ಭಾಷಣದಲ್ಲಿ, ಅವರು ದಿನದ ಮಹತ್ವ ಮತ್ತು ವಿಶ್ವದ ಅತ್ಯಂತ ಸೂಕ್ಷ್ಮ ಮತ್ತು ಉದ್ದಮವಾದ ಸಂವಿಧಾನವೆಂದು ಪರಿಗಣಿಸಲಾದ ಭಾರತೀಯ ಸಂವಿಧಾನವನ್ನು ರಚಿಸಲು ಎಷ್ಟು ದಂತಕಥೆಗಳು ಒಟ್ಟಾಗಿ ಸೇರಿಕೊಂಡವು ಎಂಬುದರ […]
ಕೋಟೇಶ್ವರ : ಬೀಜಾಡಿಯಲ್ಲಿ ಮಿತ್ರ ಸಂಗಮ ಸಂಘಟನೆ ಕಳೆದ 29 ವರ್ಷಗಳಿಂದ ನಿರಂತರ ಸಮಾಜಪರ ಚಟುವಟಿಕೆಯ ಮೂಲಕ ಬೆಳಗಿರುವುದು ಸ್ವಾಗತಾರ್ಹವಾಗಿದೆ.ಇದನ್ನು ಇನ್ನೂ ಮುಂದೆಯು ನೂರಾರು ವರ್ಷಗಳ ಕಾಲ ಉಳಿಯುವ ಹಾಗೇ ನೋಡಿಕೊಳ್ಳಬೇಕಾದದ್ದು ಊರಿನವರ ಕರ್ತವ್ಯವಾಗಿದೆ ಎಂದು ಪ್ರಸಂಗಕರ್ತ, ಕಲ್ಮಾಡಿ ಆಸೆಮ್ಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪವನ್ ಕಿರಣಕೆರೆ ಹೇಳಿದರು. ಅವರು ಬೀಜಾಡಿ ಮಿತ್ರಸೌಧ ವಠಾರದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಬೀಜಾಡಿ-ಗೋಪಾಡಿ ಮಿತ್ರ ಸಂಗಮದ 29ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಮಾಜ ಸೇವಕ,ಕೋಟೇಶ್ವರ ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್ […]
ಕಾರ್ಕಳಃ ಅತ್ತೂರು ಸಂತ ಲಾರೆನ್ಸ್ ಮೈನರ್ ಬಾಸಿಲಿಕಾದಲ್ಲಿ ವಾರ್ಷಿಕ ಮಹೋತ್ಸವದ ಎರಡನೇ ದಿನದ8.00 ಗಂಟೆಗೆ ಸಂಭ್ರಮದ ಆಧ್ಯಾತ್ಮಿಕ ಕಾರ್ಯಗಳು ಹಾಗೂ ದೈವಾರಾಧನ ವಿಧಿಗಳು ಮಹತ್ವ ಪೂರ್ಣವಾಗಿ ನೆರವೇರಿದವು. ಬೆಳಗ್ಗೆ ಪ್ರಥಮ ಪವಿತ್ರ ಪ್ರಾರಂಭವಾಯಿತು. ಬೆಳ್ಮಣ್ ಧರ್ಮಕೇಂದ್ರದ ಸಹಾಯಕ ಫಾದರ್ ಓಸ್ವಾಲ್ಡ್ ವಾಜ್ ಬಲಿಪೂಜೆ ನಡೆಯುವ ಮೂಲಕ ಅದ್ದೂರಿಯಾಗಿ ನಡೆಸಿದರು. ದಿನವಾದಂತೆ, ತಾಪಮಾನ ಹೆಚ್ಚಾದರೂ, ಬೆಸಿಲಿಕಾಗೆ ಆಗಮಿಸುವ ಭಕ್ತರ ಸಂಖ್ಯೆಯು ಹೇರಳವಾಗಿ ಹೆಚ್ಚಿತು. ಈ ದಿನದ ಮಹೋತ್ಸವದ ಪ್ರಮುಖ ಆಡಂಭರದ ಬಲಿಪೂಜೆ ಸಂಜೆ 5.00 ಗಂಟೆಗೆ ಕನ್ನಡದಲ್ಲಿ ನೆರವೇರಿತು. […]

