ಶಂಕರನಾರಾಯಣ; ಗುರು ಅಬಾಕಸ್ ಮತ್ತು ವೇದಿಕ್ ಮ್ಯಾತ್ ಸೆಂಟರ್ ಪುಣೆ,ಮಹಾರಾಷ್ಟ್ರ ಇದರ ವತಿಯಿಂದ ಇತ್ತೀಚೆಗೆ ಆಯೋಜಿಸಲಾದ ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಪರೀಕ್ಷೆಯಲ್ಲಿ ಮದರ್ ತೆರೇಸಾ ಶಾಲೆ ಶಂಕರನಾರಾಯಣ, ಇಲ್ಲಿನ ನಲ್ಮೆಯ ವಿದ್ಯಾರ್ಥಿನಿಯರಾದ 4ನೇ ತರಗತಿಯ ದಶಮಿ ಡಿ ಹಾಗೂ 3ನೇ ತರಗತಿಯ ಸಮೀಕ್ಷಾ ದಿನೇಶ್ ಶೆಟ್ಟಿ ಇವರು ಚಾಂಪಿಯನ್ ಶಿಪ್ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ. ಪುಟಾಣಿ ವಿದ್ಯಾರ್ಥಿನಿಯರ ಯಶಸ್ಸಿಗೆ ಶಾಲಾ ಆಡಳಿತ ಮಂಡಳಿ , ಬೋಧಕ ಬೋಧಕೇತರ ವೃಂದದವರು ಸಂತಸ ವ್ಯಕ್ತಪಡಿಸಿದ್ದಾರೆ ಹಾಗೂ ಗೆಲುವಿನ ಭವಿಷ್ಯ […]
ದೇಶದ ಕ್ರಿಶ್ಚಿಯನ್ ನಾಗರಿಕರ ಹಕ್ಕು-ಸಂರಕ್ಷಣೆಗಾಗಿ ಹಲವು ವರ್ಷಗಳಿಂದ ರಾರ್ಯನಿರ್ವಹಿಸುತ್ತಿರುವ Concerned Christian Citizens of India (ccci) ಸಂಘಟನೆಯ ರಾಷ್ಟ್ರೀಯ ಕ್ರಿಶ್ಚಿಯನ್ ಕನ್ವೆನ್ಷನ್‌ನ್ನು ನವೆಂಬರ್ 29ರಂದು ಶನಿವಾರ ನವದೆಹಲಿಯ ಜಂತರ್ ಮಂತರ್ನಲ್ಲಿ ನವೆಂಬರ್ 29 ರಂದು 10 ರಿಂದ ಸಂಜೆ 5 ಗಂಚೆಯವರೆಗೆ ನಡೆಸಲು ಘೋಷಿಸಿದೆ. AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಇದರಲ್ಲಿ ಭಾಗಿಯಾಗಿ ಕರ್ನಾಟಕ ಕ್ರಿಶ್ಚಿಯನ್ ಸಮುದಾಯದವರನ್ನುಪ್ರತಿನಿಧಿಸಲಿದ್ದಾರೆ. ವಿಭಿನ್ನ ಪಂಥಗಳ ನಾಗರಿಕರ ಒಕ್ಕೂಟದಿಂದ ಆರಂಭವಾದ ಈ ಚಳವಳಿಗೆ ಯುನೈಟೆಡ್ ಕ್ರಿಶ್ಚಿಯನ್ ಫೋರಂ (UCF) ಸಂಪೂರ್ಣ […]
Statement from the All India Catholic Federation on the bomb blast in Delhi 2025 ರ ನವೆಂಬರ್ 12 ರಂದು ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟದಲ್ಲಿ ಸಂಭವಿಸಿದ ಹೃದಯ ವಿದ್ರಾವಕ ಜೀವಹಾನಿಯ ರಾಷ್ಟ್ರೀಯ ದುಃಖದಲ್ಲಿ ಅಖಿಲ ಭಾರತ ಕ್ಯಾಥೋಲಿಕ್ ಒಕ್ಕೂಟವು ನಮ್ಮ ದೇಶದ ಜನರೊಂದಿಗೆ ಸೇರುತ್ತದೆ. 13 ಜನರ ಸಾವು ಮತ್ತು 20 ಇತರರಿಗೆ ಗಾಯಗಳಾಗಿರುವುದನ್ನು ಸರ್ಕಾರ ದೃಢಪಡಿಸಿದೆ – ಅವರಲ್ಲಿ ಅನೇಕರು ಇನ್ನೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಲಿಪಶುಗಳನ್ನು […]
ನವೆಂಬರ್ 3, ಸೋಮವಾರ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಆರ್‌ಟಿಸಿ ಬಸ್ ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿ ಇಪ್ಪತ್ತು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಹೈದರಾಬಾದ್‌ನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಚೆವೆಲ್ಲಾ ಮಂಡಲದ ಮಿರ್ಜಾಗುಡ ಬಳಿ ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ಬೆಳಿಗ್ಗೆ 6.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ತಂದೂರಿನಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಬಸ್‌ಗೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾಂಕ್ರೀಟ್ ತುಂಬಿದ ಟಿಪ್ಪರ್ ಟ್ರಕ್ ಡಿಕ್ಕಿ ಹೊಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಟಿಪ್ಪರ್ ಲಾರಿ ಬಸ್‌ನೊಳಗೆ ನುಗ್ಗಿದಾಗ […]
Bank of Baroda announces Financial Results for the Quarter and Half Year ended – 30th September 2025 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ ಸೆಪ್ಟೆಂಬರ್‌ನಲ್ಲಿ ಅಂತ್ಯ ಕಂಡ ಎರಡನೇ ತ್ರೈಮಾಸಿಕ ಅವಧಿ ಲಾಭದಲ್ಲಿ ಶೇ.8ರಷ್ಟು ಕುಸಿತ ಕಂಡಿದೆ. ಬಡ್ಡಿ ಆದಾಯವು ಮಧ್ಯಮ ಮಟ್ಟದಲ್ಲಿರುವುದು ಇದಕ್ಕೆ ಕಾರಣ. ಪರಿಣಾಮ ಕಳೆದ ವರ್ಷ ಇದೇ ಅವಧಿಯಲ್ಲಿ 5238 ಕೋಟಿ ರು.ಗಳಷ್ಟಿದ್ದ ನಿವ್ವಳ ಲಾಭ 4809 ಕೋಟಿ ರು.ಗೆ ತಲುಪಿದೆ. ಇನ್ನು ಬ್ಯಾಂಕ್ ಆಫ್ […]
ಶ್ರೀನಿವಾಸಪುರ: ದೇಶದ ವಿವಿಧ ಬ್ಯಾಂಕ್ ಖಾತೆಗಳಲ್ಲಿ ನಾಮನಿರ್ದೇಶನವಿಲ್ಲದೆ ಉಳಿದಿರುವ ಸುಮಾರು ₹79,000 ಕೋಟಿ ಮೊತ್ತವನ್ನು ಭಾರತೀಯ ರಿಸರ್ವ್ ಬ್ಯಾಂಕ್ ವಶದಲ್ಲಿಟ್ಟಿದೆ. ಈ ಮೊತ್ತವನ್ನು ಕಾನೂನುಬದ್ಧ ವಾರಸುದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪಡೆದುಕೊಳ್ಳಬಹುದು ಎಂದು ಕೋಲಾರ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಮಹದೇವ್ ಎಸ್. ಜೋಶಿ ತಿಳಿಸಿದ್ದಾರೆ.ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಸಮೀಪದ ಶೀಗೆಹಳ್ಳಿ ಗ್ರಾಮದಲ್ಲಿ ಕೋಲಾರ ಜಿಲ್ಲಾ ಲೀಡ್ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ಶೀಗೆಹಳ್ಳಿ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಹಕ್ಕು ಪಡೆಯದ ಠೇವಣಿಗಳ ಇತ್ಯರ್ಥ […]
ಬಾಲಿವುಡ್‌ನ ಹಿರಿಯ ನಟ ಸತೀಶ್ ಶಾ ನಿನ್ನೆ ಮದ್ಯಾನ್ಹಾ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಸದ್ಯ ಶಾ ಅವರ ಮೃತದೇಹವನ್ನು ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಮ್ಯಾನೇಜರ್ ತಿಳಿಸಿದ್ದಾರೆ.ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ. ಅವರು ದೀರ್ಥಕಾಲದದರೆಗೆ ಮೂತ್ರಪಿಂಡದ ಸಮಸ್ಯೆಗಳಿಂದ ಬಳಲುತ್ತಿದ್ದರು ಮತ್ತು ಇತ್ತೀಚೆಗೆ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು.ಸಾರಾಭಾಯ್ ವರ್ಸಸ್ ಸಾರಾಭಾಯ್ ಮತ್ತು ಜಾನೆ ಭಿದೋ ಯಾರೋ ಎಂಬ ಟಿವಿ ಸೀರಿಯಲ್‌ಗಳ ಮೂಲಕ ಸತೀಶ್ ಶಾ ಖ್ಯಾತಿ ಪಡೆದಿದ್ದರು. ಅದರೊಂದಿಗೆ ಅವರು ಮೈ ಹೂನಾ (2004), […]
ಆಂಧ್ರ ಪ್ರದೇಶದ ಕರ್ನೂಲ್ ನಲ್ಲಿ ನಡೆದ ಬಸ್ ದುರಂತದಲ್ಲಿ 20 ಜನ ಸಾವನ್ನಪ್ಪಿದ್ದು, ಈ ಮೂವರು ಯುವತಿಯರು ಸಾವನ್ನಪ್ಪಿದ್ದಾರೆ.ಈ ಮೂವರು ಯುವತಿಯರು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಗಳಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.ಮೃತ ದುರ್ದೈವಿಗಳನ್ನು ಅನುಷಾ ರೆಡ್ಡಿ (22), ಗನ್ನಮನೇನಿ ಧಾತ್ರಿ (27) ಹಾಗೂ ಚಂದನಾ (23) ಎಂದು ಗುರುತಿಸಲಾಗಿದೆ.ಬಾಪಟ್ಟ ಜಿಲ್ಲೆಯ ಗನ್ನಮನೇನಿ ಧಾತ್ರಿ ಅವರು ಮಾವನ ಮನೆಯಿಂದ ಬೆಂಗಳೂರಿಗೆ ವಾಪಸ್ ಬರುತ್ತಿದ್ದ ವೇಳೆ ಬಸ್ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಟೆಕ್ಕಿ ಅನುಷಾ ರೆಡ್ಡಿ ಮೂಲತಃ ಯದಾದ್ರಿ ಭುವನಗಿರಿ […]
ತಿರುವನಂತಪುರಂ; ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಮಣ್ಣಿನಲ್ಲಿ ಚಕ್ರ ಹೂತ ಘಟನೆ ನಡೆದಿದೆ.ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಶಬರಿಮಲೆಗೆ ಭೇಟಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾರತೀಯ ವಾಯುಸೇನೆ ಎಂಐ-17 ಹೆಲಿಕಾಪ್ಟರ್ ನಲ್ಲಿ ತಿರುವನಂತಪುರಂನಿಂದ ತೆರಳಿದ್ದರು. ಬೆಳಿಗ್ಗೆ ಪ್ರಮಾಡಂ ಇನ್ ಡೋರ್ ಸ್ಟೇಡಿಯಂ ನಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಹೆಲಿಕಾಪ್ಟರ್ ಚಕ್ರ ನೆಲದಲ್ಲಿ ಹೋತು ಹೋಗಿ ಅವಾಂತರ ಸೃಷ್ಟಿಯಾಯಿತು.ಬಳಿಕ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹೆಲಿಕಾಪ್ಟರನ್ನು ತಳ್ಳಿ ಬದಿಗೆ ಸರಿಸಿದ್ದಾರೆ. […]

