ಶ್ರೀನಿವಾಸಪುರ : ಶ್ರೀನಿವಾಸಪುರ ಕ್ಷೇತ್ರದ ಅಭಿವೃದ್ಧಿಯಲ್ಲಿ ಮಾಜಿ ಶಾಸಕ ರಮೇಶ್ ಕುಮಾರ್ ಅವರು ನೀಡಿದ ಕೊಡುಗೆಯನ್ನು ನಿರಾಕರಿಸುವಂತಿಲ್ಲ. ಇಂತಹ ಸಂದರ್ಭದಲ್ಲಿ ಹಾಲಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಅವರು ನಿರಂತರವಾಗಿ ಅವರ ಹೆಸರನ್ನು ಎತ್ತಿ ಆರೋಪ ಮಾಡುವುದು ಅನಗತ್ಯವಲ್ಲದೆ ಕಾಲಹರಣವೆಂದು ಕೆಪಿಸಿಸಿ ಸದಸ್ಯ ಸಂಜಯ್ ರೆಡ್ಡಿ ಬುಧವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಕಚೇರಿಯಲ್ಲಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವದ ವೇದಿಕೆ ಎಂದರೆ ಭಾಷೆಯ ಗೌರವ. ಆದರೆ ಆ ವೇದಿಕೆಯನ್ನೇ ಬಳಸಿ ಮಾಜಿ ಶಾಸಕ ರಮೇಶ್ […]

Read More

ಶ್ರೀನಿವಾಸಪುರ : ಈ ಭಾಗದಲ್ಲಿ ಸಂಭವಿಸಿದ ವಿವಿಧ ರಸ್ತೆ ಅಪಘಾತಗಳಲ್ಲಿ ಹೆಲ್ಮೆಟ್ ಧರಿಸದೆ ಸಾವನ್ನುತ್ತಿರುವುದು ಆತಂಕಕಾರಿ ಇಂತಹ ದುರ್ಘಟನೆಗಳು ತಪ್ಪಿಸುವ ಉದ್ದೇಶದಿಂದ ಹೆಲ್ಮೆಟ್ ಕಡ್ಡಾಯವಾಗಿ ಧರಿಸುವಂತೆ ಸಾರ್ವಜನಿಕರಲ್ಲಿ ಎಂದು ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ ಮನವಿ ಮಾಡಿದರು.ಪಟ್ಟಣದ ತಾಲೂಕು ಕಚೇರಿ ಮುಂಭಾಗ ಸೋಮವಾರ ಪೊಲೀಸ್ ಇಲಾಖೆ ವತಿಯಿಂದ ಹೆಲ್ಮೆಟ್ ಹಾಕದೆ ಇರುವ ಗಾಡಿಗಳನ್ನು ಹಿಡಿದು ಅರಿವು ಮೂಡಿಸಿದರು. ನಮ್ಮ ಜಿಲ್ಲಾ ರಕ್ಷಣಾಧಿಕಾರಿಗಳಾದ ಬಿ.ನಿಖಿಲ್‍ರವರು ಕಳೆದ ಒಂದುವಾರದಿಂದಲೂ ಸಹ ಅನೇಕ ಬಾರಿ ಪ್ರತಿಕೆಗಳ ಮೂಲಕ ಮಾಹಿತಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ […]

Read More

ಶ್ರೀನಿವಾಸಪುರ : ಭಾಷೆಯ ಕಾಂತಿ ಮಸುಕಾದ ಕಾಲಗಳಲ್ಲಿಯೂ ಜನರನ್ನು ಒಂದೇ ನೆರಳಿಗೆ ಕರೆದೊಯ್ಯುವ ನಾಡಿನ ನಂಟು ಕನ್ನಡದದ್ದು ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಸಿ.ಎ. ರಮೇಶ್ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಚಕೋರ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು. ‘ಕರ್ನಾಟಕತ್ವ ಮತ್ತು ಕನ್ನಡ ಕವಿತೆ’ ವಿಷಯವಾಗಿ ಉಪನ್ಯಾಸ ನೀಡಿದ ಅವರು, ಆದಿ ಕವಿಗಳಿಂದ ಇಂದಿನ ಪೀಳಿಗೆತನಕ ಎಲ್ಲರೂ ಕಾವ್ಯದ ಮೂಲಕ ಕನ್ನಡದ ಹಿರಿಮೆಯನ್ನು ವಿಶ್ವದ ಅಂಚುಗಳಿಗೆ ಕರೆದುಕೊಂಡು […]

Read More

ಶ್ರೀನಿವಾಸಪುರ – 1 ಸಂವಿಧಾನದ ಆಶಯ ಅನುಸರಿಸಬೇಕು: ಡಾ. ಚಂದ್ರಕಳಾಶ್ರೀನಿವಾಸನ್ ಶ್ರೀನಿವಾಸಪುರ: ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶಗಳ ನಾಂದಿ. ಎಲ್ಲರೂ ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು ಎಂದು ಡಾ. ಚಂದ್ರಕಳಾಶ್ರೀನಿವಾಸನ್ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಬುಧವಾರ ತಾಲೂಕು ಆಡಳಿತ ಆಯೋಜಿಸಿದ್ದ ಸಂವಿಧಾನ ದಿನಾಚರಣೆಗೆ ಅಂಬೇಡ್ಕರ್ ಪುತ್ಥಳಿಗೆ ಹೂವಿನ ಹಾರ ಸಮರ್ಪಿಸಿ ಚಾಲನೆ ನೀಡಿ ಮಾತನಾಡಿದರು. ವೈವಿಧ್ಯತೆಯ ನಡುವೆಯೂ ದೇಶವನ್ನು ಏಕತೆಯ ನಡಿಗೆಯಲ್ಲಿ ಮುನ್ನಡೆಸುತ್ತಿರುವ ಸಂವಿಧಾನ, ಜನರ ಬದುಕಿಗೆ ಮಾರ್ಗದರ್ಶಕ. ಸಂವಿಧಾನದ ತತ್ವಗಳನ್ನು ಪಾಲಿಸುವ […]

Read More

ಶ್ರೀನಿವಾಸಪುರ: ಆಧುನಿಕ ಶಿಕ್ಷಣ ಪದ್ಧತಿಗೆ ತಕ್ಕಂತೆ ಶಿಕ್ಷಣ ಇಲಾಖೆಯಿಂದ ನೀಡಲಾಗುತ್ತಿರುವ ತರಬೇತಿಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಶಾಲೆಗಳಲ್ಲಿ ಬೋಧನಾ ವಿಧಾನವನ್ನು ಸುಧಾರಿಸಿ, ಮಕ್ಕಳ ಸಮಗ್ರ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಬಿ.ಸಿ. ಮುನಿಲಕ್ಷ್ಮಯ್ಯ ಕರೆ ನೀಡಿದರು. ಶ್ರೀನಿವಾಸಪುರ ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಪಿಎಬಿ ಅನುಮೋದಿತ ಸೇವಾ ನಿರತ ಶಿಕ್ಷಕರ ತರಬೇತಿ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುನಿಲಕ್ಷ್ಮಯ್ಯ, ಸರ್ಕಾರ ಒದಗಿಸುತ್ತಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳಿಗೆ ಗುಣಮಟ್ಟದ […]

Read More

ಶ್ರೀನಿವಾಸಪುರ : ಪ್ರತಿ ವರ್ಷ ಅವರೇಕಾಯಿ ಋತುಮಾನ ಆರಂಭವಾಗುವ ಮೊದಲೇ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೆ ವ್ಯಾಪಾರ ವಹಿವಾಟು ಸಾರ್ವಜನಿಕ ಸ್ಥಳದಲ್ಲಿ ನಡೆಯುವಾಗ ಟ್ರಾಪಿಕ್ ಸಮಸ್ಯೆ ಜೊತೆಗೆ ಹರಾಜು ಪಕ್ರಿಯೆ ಮೂರೇ ನಿಮಿಷದಲ್ಲಿ ಮುಗಿಸಿ 100 ರೂ ಬೆಲೆ ಇದ್ದರೆ 50 ರೂ ಗೆ ಮಾರಾಟ ಮಾಡಿ ವ್ಯಾಪಾರಸ್ಥರ ಜೊತೆ ಮಂಡಿ ಮಾಲೀಕರು ಒಳ ಒಪ್ಪಂದ ಮಾಡಿಕೊಂಡು ರೈತರಿಗೆ ಮೋಸ ಮಾಡುತ್ತಿದ್ದಾರೆಂದು ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಅಸಮಾಧಾನ ವ್ಯಕ್ತಪಡಿಸಿದರು.ಮಂಗಳವಾರ ಪಟ್ಟಣದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ ಕೃಷಿ […]

Read More

ಶ್ರೀನಿವಾಸಪುರ: ಜೀವನದಲ್ಲಿ ಬರುವ ನೋವು–ನಲಿವುಗಳಿಗೆ ತಾಳ್ಮೆ ಮತ್ತು ಸಂಯಮವೇ ಆಧಾರ. ಹರುಷಕ್ಕೆ ಹಿಗ್ಗದೆ, ಸಂಕಷ್ಟಕ್ಕೆ ಕುಗ್ಗದೆ ಬದುಕಿದರೆ ಜೀವನದ ಮೌಲ್ಯತೆ ಹೆಚ್ಚುತ್ತದೆ. ಇಂತಹ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ವಿರೇಂದ್ರ ಹೆಗ್ಗಡೆರವರ ಜೀವನ ನಿಜಕ್ಕೂ ಸಾರ್ಥಕ ಎಂದು ಜಿಲ್ಲಾ ಜನಜಾಗೃತಿ ಸಮಿತಿಯ ಸದಸ್ಯೆ ಮಾಯಾ ಬಾಲಚಂದ್ರ ಹೊಗಳಿದರು. ತಾಲೂಕಿನ ಎನಮೇರಿಪಳ್ಳಿ ಗ್ರಾಮದ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಮಂಗಳವಾರ ವಿರೇಂದ್ರ ಹೆಗ್ಗಡೆರವರ ಜನ್ಮದಿನದ ಅಂಗವಾಗಿ ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ವಿಶೇಷ ಪೂಜಾಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಳಿಕ ನಡೆದ ಸಭೆಯಲ್ಲಿ ಅವರು […]

Read More

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ₹5 ಲಕ್ಷ ಬಿಡುಗಡೆ ಮಾಡುವುದಾಗಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಘೋಷಿಸಿದರು. ಅವರು ಶುಕ್ರವಾರ ನ್ಯಾಷನಲ್ ಹೈಸ್ಕೂಲ್ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಯಲ್ದೂರು ಹೋಬಳಿ ಘಟಕಗಳ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಕನ್ನಡ ವ್ಯವಹಾರಿಕ ಭಾಷೆಯಾಗಬೇಕುಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವೆಂಕಟಶಿವಾರೆಡ್ಡಿ, ತಾಲ್ಲೂಕಿನಲ್ಲಿ ಭಾಷಾ ಬಾಂಧವ್ಯ ಮಾದರಿಯಾಗಿದೆ. ಕನ್ನಡ ಮನದ ಮಾತಾಗುವುದಷ್ಟೇ […]

Read More

ಶ್ರೀನಿವಾಸಪುರ : ಗ್ಯಾರಂಟಿ ಯೋಜನೆಗಳು ತಾಲ್ಲೂಕಿನ ನಾಗರಿಕರಿಗೆ ಯಾವ ಮಟ್ಟಿನಲ್ಲಿ ತಲುಪುತ್ತಿವೆ ಹಾಗೂ ಜಾರಿಯ ಸ್ಥಿತಿ ಹೇಗಿದೆ ಎಂಬುದನ್ನು ಪರಿಶೀಲಿಸಲು ಈ ಸಭೆಯನ್ನು ಕರೆಯಲಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಎ.ವಿ. ಮನೋರ್ ಹೇಳಿದರು. ಬುಧವಾರ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ತಾಲ್ಲೂಕು ಮಟ್ಟದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದಿಂದ ಬಿಡುಗಡೆಗೊಳ್ಳುವ ಅನುದಾನ ಯಾವುದೇ ಕಾರಣಕ್ಕೂ ದುರಪಯೋಗವಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಸಭೆಯಲ್ಲಿ ಮಾತನಾಡಿದ ಮನೋರ್, ನ್ಯಾಯಬೆಲೆ ಅಂಗಡಿಗಳಲ್ಲಿ […]

Read More
1 19 20 21 22 23 385