JANANUDI.COM NETWORK ಸರಕಾರ ತನ್ನ ಕನಿಷ್ಠ ಜವಾಬ್ದಾರಿಗಳನ್ನು ಒಂದು ಐತಿಹಾಸಿಕ ಸಾಧನೆ ಎನ್ನುವುದು ಸರಿಯಲ್ಲ. ಯಾವುದೇ ಯಶಸ್ಸು ಮೈಮರೆವಿಗೆ ಕಾರಣವಾಗಬಹುದು. ನಮ್ಮ ದೇಶದ ಜನಸಂಖ್ಯೆ ಮಕ್ಕಳನ್ನು ಸೇರಿಸಿದರೆ 136 ಕೋಟಿಗಿಂತ ಹೆಚ್ಚು. ಸರಕಾರ ತನ್ನ ಬೆನ್ನು ತಟ್ಟಿಕೊಳ್ಳುವ ವೇಗ ಮುಂದುವರೆದರೆ ಇನ್ನೂ ಉಳಿದ 172 ಕೋಟಿ ಲಸಿಕೆ ಹಾಕಿಸಿಕೊxಳ್ಳಲು ಇನ್ನು 479 ದಿನಗಳು ಬೇಕಾಗಬಹುದು. ಕೋವಿಡ್ ಹರಡುವಿಕೆಯ ವೇಗ ಮತ್ತು ಅದು ಉಂಟು ಮಾಡಬಹುದಾದ ಅನಾಹುತ ಗಣನೆಗೆ ತೆಗೆದುಕೊಂಡರೆ ಲಸಿಕೆ ಅಭಿಯಾನದಲ್ಲಿ ಭಾರತ ಹಿಂದುಳಿದಿರುವುದು ವಿಷಾದವಾಗಿದೆ ಎಂದು […]
JANANUDI.COM NETWORK ಇಂದು ಮೂಡುಬೆಳ್ಳೆಯ ಸಂತ ಲಾರೆನ್ಸ್ ಪ ಪೂರ್ವ ಕಾಲೇಜಿಗೆ ಉಡುಪಿ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಮಾರುತಿ ಸರ್ ಇವರು ಭೇಟಿ ನೀಡಿ ಕಾಲೇಜಿನಲ್ಲಿ ಕೋವಿಡ್ 19 ಸಂಬಂಧಿತ ನಿಯಮಾವಳಿಗಳ ಪಾಲನೆಯ ಪರಿಶೀಲನೆ ಮತ್ತು ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದರು. ವಿದ್ಯಾರ್ಥಿಗಳಿಗೆ ನಡೆಯುತ್ತಿರುವಂತಹ ಆಫ್ಲೈನ್ ಪಾಠಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿದರು. ಹಾಗೆಯೇ ವಿದ್ಯಾರ್ಥಿಗಳ ಕಲಿಕೆಯನ್ನು ಗಮನಿಸಿದರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ “ಎಲ್ಲ ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು […]
JANANUDI.COM NETWORK ಕುಂದಾಪುರ: ಮಂಗಳವಾರ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ನಾಗರಾಜ್ ಎಂಬಾತನ ಸಾವಿಗೆ ತಿರುವು ಲಭಿಸಿದ್ದು, ಪ್ರೇಮಿಸಿ ವಿವಾಹವಾಗಿದ್ದ ಮಮತಾಳಿಂದಲೇ ಕೊಲೆಯಾಗಿರುವುದಾಗಿ ಈಗ ತಿಳಿದು ಬಂದಿದೆ.ನಾಗರಾಜನು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಪತ್ನಿ ಮಮತಾ ಹೇಳಿಕೆ ನೀಡಿದ್ದರಿಂದ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮರಣೋತ್ತರ ಶವ ಪರೀಕ್ಷೆಗಾಗಿ ಶವವನ್ನು ವಶಕ್ಕೆ ಪಡೆದಿದ್ದರು.ಈ ಸಂದರ್ಬ ಮೃತ ನಾಗರಾಜನ ಸಹೋದರಿ ಮೃತದೇಹವನ್ನು ಪರೀಕ್ಷಿಸಿದಾಗ ನಾಗರಾಜನ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾದ ಹೊನ್ನೆಲೆಯಲ್ಲಿ ಪೊಲೀಸರಿಗೆ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿ […]
JANANUDI.COM NETWORK ಕುಂದಾಪುರ, ದಿನಾಂಕ 21-10-2021 ರಂದು ಮಾನ್ಯ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ವಿಷ್ಣುವರ್ಧನ್ ಎನ್ ರವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕುಮಾರಚಂದ್ರ ರವರ ಮಾರ್ಗದರ್ಶನದಲ್ಲಿ ಕುಂದಾಪುರ ಪೊಲೀಸ್ ಉಪವಿಭಾಗದ ಉಪಾಧೀಕ್ಷಕರಾದ ಶ್ರೀಕಾಂತ್ ಕೆ ರವರು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಕುಂದಾಪುರ ಶಾಸ್ತ್ರೀಪಾರ್ಕ್ ಬಳಿ ಅನುಮಾನಸ್ಪದವಾಗಿ ಕಂಡು ಬಂದ ಮಹಮ್ಮದ್ ಜಾಫರ್ ಗುಡುಮಿಯಾ, 28 ವರ್ಷ, ತಂದೆ : ಗುಡುಮಿಯಾ, ಅಸ್ಬಾಭಾಗ್, ಬಿಣಗಾ, ಕಾರವಾರ, ಉತ್ತರಕನ್ನಡ ಜಿಲ್ಲೆ ಎಂಬವನನ್ನು ದಸ್ತಗಿರಿ […]
JANANUDI.COM NETWORK ” ಸಮಾಜದಲ್ಲಿ ಸರಿಯಾಗಿ ಜೀವಿಸಬೇಕಾದರೆ ಕಾನೂನಿನ ಅಗತ್ಯತೆ ಇದೆ. ಪ್ರತಿಯೊಂದು ಕಾನೂನು ಒಂದಲ್ಲ ಒಂದು ಪ್ರಯೋಜನವನ್ನು ನೀಡುತ್ತದೆ. ಕಾನೂನಿನ ಅರಿವು ಇಲ್ಲದಿದ್ದಲ್ಲಿ ನಾವು ನೀವೆಲ್ಲ ಒಳ್ಳೆಯ ಪ್ರಜೆಗಳಾಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಬಹುಸಂಖ್ಯೆಯ ವಿದ್ಯಾರ್ಥಿ ಸಮೂಹಕ್ಕೆ ಅರಿವು ಮೂಡಿಸುವುದು ಕಾನೂನು ಪ್ರಾಧಿಕಾರದ ಧ್ಯೇಯವಾಗಿದ್ದು, ಎಲ್ಲ ವಿದ್ಯಾರ್ಥಿಗಳು ಕಾನೂನಿನ ಪ್ರಕ್ರಿಯೆಗಳನ್ನು ಮನವರಿಕೆ ಮಾಡಿಕೊಂಡು ಗೌರವದಿಂದ ಜೀವನ ನಡೆಸುವಂತಾಗಬೇಕು ” ಎಂದು ಬೆಂಗಳೂರು ಜಿಲ್ಲಾ ನ್ಯಾಯಾಧೀಶರು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಬೆಂಗಳೂರು ಇದರ […]
JANANUDI.COM NETWORK ಕುಂದಾಪುರ: ದೇಶದಲ್ಲಿ ಪ್ರಸ್ತುತ ಅತ್ಯಂತ ಜನಪರವಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿರುವ, ದೇಶದ ರಾಜಕೀಯದ ಭವಿಷ್ಯದ ಆಶಾಕಿರಣ ಎಂದೇ ಬಿಂಬಿತವಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕುರಿತು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಇತ್ತೀಚೆಗೆ ಮಾಡಿರುವ ಟೀಕೆಗಳು ಅತ್ಯಂತ ಕೀಳುಮಟ್ಟದ್ದಾಗಿವೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಪತ್ರಿಕಾ ಹೇಳಿಕೆಯ ಮೂಲಕ ಖಂಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ರಾಹುಲ್ ಗಾಂಧಿ ಕುರಿತು ಆಧಾರರಹಿತವಾಗಿ ಅವಾಚ್ಯ ಶಬ್ದ ಬಳಸಿ […]
ವರದಿ: ವಾಲ್ಟರ್ ಮೊಂತೇರೊ, ಬೆಳ್ಮಣ್ಣು ಇತಿಹಾಸ ಪ್ರಸಿದ್ದ ವನದುರ್ಗೆ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿರುವ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಕ್ಟೋಬರ್ 22ರಂದು ಶುಕ್ರವಾರ ಚಂಡಿಕಾಯಾಗ ಜರಗಲಿದೆ. ಆ ಪ್ರಯಕ್ತ ಬೆಳಿಗ್ಗೆ ಘಂಟೆ 9 ರಿಂದ ಚಂಡಿಕಾಯಾಗ ಪೂಜೆ ಆರಂಭ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಮಧ್ಯಾಹ್ನ 1 ರಿಂದ ಮಹಾ ಅನ್ನಸಂತರ್ಪಣೆ ಜರಗಲಿದೆ ಎಂದು ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ವೇದ ಮೂರ್ತಿ ಬಿ.ಎಂ.ಕೃಷ್ಣ ಭಟ್ ಮತ್ತು ವೇದ ಮೂರ್ತಿ ಬಿ.ಕೆ.ವಿಘ್ನೇಶ್ ಭಟ್ ಪತ್ರಿಕಾ […]
JANANUDI.COM NETWORK ಕುಂದಾಪುರ, ಆ.17; ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಸಮಿತಿಯ ನಿರ್ದೇಶನದಂತೆ ಕುಂದಾಪುರ ಚರ್ಚ್ ಕಥೊಲಿಕ್ ಸಭಾ ಘಟಕವು, 5 ರಿಂದ 7 ನೇ ತರಗತಿಯವರಿಗೆ “ಮಕ್ಕಳು ಮತ್ತು ದೇಶ ಪ್ರೇಮ” ಕನ್ನಡ ಮತ್ತು ಕೊಂಕಣಿ ಭಾಶೆಗಳಲ್ಲಿ, 8 ಮತ್ತು 10 ನೇ ತರಗತಿಯವರಿಗೆ “ಮಾಧ್ಯಮ ಸ್ವಾತಂತ್ರ್ಯ” ಕನ್ನಡ ಮತ್ತು ಕೊಂಕಣಿ ಭಾಶೆಗಳಲ್ಲಿ 16 ರಿಂದ 25 ವರ್ಷದವರಿಗಾಗಿ ಸಮಾಜದ ಅಭಿವ್ರದ್ದಿಯಲ್ಲಿ ಕಥೊಲಿಕ್ ಸಭೆಯ ಪಾತ್ರ” ಕನ್ನಡ ಮತ್ತುP Éೂಂಕಣಿ ಭಾಶೆಗಳಲ್ಲಿ ಭಾಷಣ ಸ್ಪರ್ಧೆಯು […]
ವರದಿ : ಮಝರ್, ಕುಂದಾಪುರ ಕುಂದಾಪುರ : ಸ್ಥಳೀಯ ಖ್ಯಾತ ಚಿಪ್ಪು ಉದ್ಯಮಿ ಕುಂದಾಪುರ ಖಾರ್ವಿ ಕೇರಿ ನಿವಾಸಿ ವೆಂಕಟೇಶ್ ಸಾರಂಗ(74) ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು( ದಿ 15.10 .2021) ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದ ಗಣೇಶೋತ್ಸವ ಸಮಿತಿಯ ಸ್ಥಾಪಕ ಅಧ್ಯಕ್ಷರಾಗಿದ್ದ ಇವರು,ದೇವಸ್ಥಾನ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಇವರು ಪತ್ನಿ,ಒಂದು ಗಂಡು ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ

