JANANUDI.COM NETWORK ಪಡುಕೋಣೆ: ಸ್ಥಳೀಯ ಗ್ರಾಮಾಂತರ ಜನರ ಆರೋಗ್ಯವರ್ಧನೆಗಾಗಿ ಆಯುಷ್ಮಾನ್ ಇಲಾಖೆಯ ಸೂಚನೆಯ ಮೇರೆಗೆ ಅಕ್ಟೋಬರ್ 26 ನಾಡ ಪ್ರಾಥಮಿಕ ಆರೋಗ್ಯಕೇಂದ್ರದ ಪ್ರಾಯೋಜಕತ್ವದಲ್ಲಿ ಇಲ್ಲಿನ ಶ್ರೀ ಮಹಾವಿಷ್ಣು ದೇವಸ್ಥಾನದ ಶ್ರೀಮಹಾವಿಷ್ಣು ಕಲಾಮಂದಿರದಲ್ಲಿ ಆಯೋಜನೆಗೊಂಡ ಸರಳ ಯೋಗ ಮತ್ತು ಪ್ರಾಣಾಯಾಮ ಶಿಬಿರವು ಅಕ್ಟೋಬರ್ 17ರಿಂದ ಪ್ರಾರಂಭವಾಗಿ 26 ರ ತನಕ 10 ದಿನಗಳ ಪರ್ಯಂತ ಶಿಬಿರಾರ್ಥಿಗಳಿಗೆ ತರಬೇತಿ ನಡೆದು, ಸಮಾರೋಪಗೊಂಡಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಪುರುಷೋತ್ತಮ ಅಡಿಗ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಆನಂದ ಪೂಜಾರಿ, ಆಶಾ ಕಾರ್ಯಕರ್ತೆ ಶೀಲಾವತಿ […]
JANANUDI.COM NETWORK ರೋಟರಿ ಕ್ಲಬ್ ಕುಂದಾಪುರ ಮತ್ತು ನಾರಾಯಣ ವಿಶೇಷ ಮಕ್ಕಳ ಶಾಲೆಯಲ್ಲಿ ಹಲ್ಲಿನ ಸ್ವಚ್ಛತೆ ಮತ್ತು ಬಾಯಿಯ ಆರೋಗ್ಯ ದ ಬಗ್ಗೆ ಮಾಹಿತಿ ಕಾರ್ಯಾಗಾರ ಮತ್ತು ದಂತ ಸ್ವಚ್ಛತಾ ಕಿಟ್ ವಿತರಣಾ ಕಾರ್ಯಕ್ರಮವು ಶಾಲೆಯಲ್ಲಿ ದಿನಾಂಕ 27.10.2021 ರಂದು ನಡೆಯಿತು.ಸಂಪನ್ಮೂಲ ವ್ಯಕ್ತಿಯಾಗಿ ರೊಟೇರಿಯನ್ ಡಾ. ರಾಜಾರಾಂ ಶೆಟ್ಟಿ. ದಂತ ವೈದ್ಯರು ಮಾರಲ ಡೆಂಟಲ್ ಕ್ಲಿನಿಕ್ ಕುಂದಾಪುರ ಇವರು ಮಾಹಿತಿಯನ್ನು ನೀಡಿದರು. ವಿಶೇಷ ಮಕ್ಕಳಲ್ಲಿ ಹಲ್ಲಿನ, ಬಾಯಿಯ ಆರೋಗ್ಯದ ಮಹತ್ವ ಮತ್ತು ಹಲ್ಲುಜ್ಜುವ ಸರಿಯಾದ ವಿಧಾನದ ಬಗ್ಗೆ […]
JANANUDI.COM NETWORK ಸಮೃದ್ಧ ಕನ್ನಡಭಾಷೆಯ ಹಿರಿಮೆಗೆ ಕನ್ನಡಿಗರ ಬದ್ದತೆಯನ್ನು ಸಾರಲು ದೇಶ ವಿದೇಶದಾದ್ಯಂತ ಏಕಕಾಲದಲ್ಲಿ ಆಯೋಜಿಸಲಾದ ‘ಕನ್ನಡಕ್ಕಾಗಿ ನಾವು’ ಅಭಿಯಾನದ ಅಂಗವಾಗಿ ಆರ್. ಎನ್ ಎಸ್. ಪದವಿ ಪೂರ್ವ ಕಾಲೇಜಿನ ಸರ್ವ ವಿದ್ಯಾರ್ಥಿಗಳಿಂದ ರಾಜ್ಯಸರ್ಕಾರದಿಂದ ಸೂಚಿತವಾದ ಕನ್ನಡಗೀತೆಗಳ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಕನ್ನಡ ನುಡಿ, ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವ ಧೃಢಸಂಕಲ್ಪವನ್ನು ಎತ್ತಿ ಹಿಡಿಯುವ ಪ್ರಮಾಣವಚನವನ್ನು ಬೋಧಿಸಲಾಯಿತು. ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ ತೊಡುಗೆಗಳನ್ನುಟ್ಟು ‘ ಸಾಂಪ್ರದಾಯಿಕ ದಿನ’ […]
JANANUDI.COM NETWORK ಕುಂದಾಪುರ: ಕನ್ನಡಕ್ಕಾಗಿ ನಾವು ಕರ್ನಾಟಕ ರಾಜ್ಯೋತ್ಸವ ಅಭಿಯಾನದ ಗೀತ ಗಾಯನ ಕಾರ್ಯಕ್ರಮ ಕುಂದಾಪುರ ಸೈಂಟ್ ಮೇರಿಸ್ ವಿದ್ಯಾಸಂಸ್ಥೆಯ ವಠಾರದಲ್ಲಿ ಸಂಭ್ರಮದಿಂದ ಗುರುವಾರ ಜರುಗಿತು.ಸೈಂಟ್ ಮೇರಿಸ್ ಪ್ರಾಥಮಿಕ ಮತ್ತು ಪ್ರೌಢಶಾಲೆ, ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜ್ ಹಾಗೂ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಸಂಘಟಿಸಲಾಯಿತು.ಕನ್ನಡ ಗೀತ ಗಾಯನ, ಕನ್ನಡ ಘೋಷಣೆಗಳ ಭಿತ್ತಿಫಲಕ, ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ ವಾದನ, ಜೋಗ ಜಲಪಾತದ ನಡುವೆ ತಾಯಿ ಭುವನೇಶ್ವರಿ ಎಲ್ಲರ ಗಮನ ಸೆಳೆಯಿತು. […]
JANANUDI.COM NETWORK ಬೀಜಾಡಿ: ಗ್ರಾಮ ಪಂಚಾಯಿತಿ ಬೀಜಾಡಿ ಮತ್ತು ಮಿತ್ರ ಸಂಗಮ ಬೀಜಾಡಿ-ಗೋಪಾಡಿ ಇವರ ಜಂಟಿ ಆಶ್ರಯದಲ್ಲಿ ಕನ್ನಡಕ್ಕಾಗಿ ನಾವು ಕರ್ನಾಟಕ ರಾಜ್ಯೋತ್ಸವ ಅಭಿಯಾನದ ಮಾತಾಡ್ ಮಾತಾಡ್ ಕನ್ನಡ ಕಾರ್ಯಕ್ರಮ ಬೀಜಾಡಿ ಗ್ರಾಮ ಪಂಚಾಯಿತಿ ವಠಾರದಲ್ಲಿ ಗುರುವಾರ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ, ಕೆ.ಎಸ್.ನಿಸಾರ್ ಅಹಮದ್ ಅವರ ಜೋಗದ ಸಿರಿ ಬೆಳಕಿನಲ್ಲಿ, ಹಂಸಲೇಖ ಅವರ ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಗೀತೆಗಳನ್ನು ಸಾಮೂಹಿಕವಾಗಿ ಹಾಡಲಾಯಿತು.ಈ ಸಂದರ್ಭದಲ್ಲಿ ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ […]
JANANUDI.COM NETWORK ಬೀಜಾಡಿ: ಗ್ರಾಮ ಪಂಚಾಯಿತಿ ಬೀಜಾಡಿ, ಬೀಜಾಡಿ ಗೋಪಾಡಿ ಮಿತ್ರ ಸಂಗಮ ಇವರ ಜಂಟಿ ಆಶ್ರಯದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ಕುಂದಾಪುರ ವಕೀಲರ ಸಂಘ, ತಾಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ,ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಉಚಿತ ಕಾನೂನು ಅರಿವು ನೆರವು ಮಾಹಿತಿ ಕಾರ್ಯಕ್ರಮ ಬೀಜಾಡಿ ಮಿತ್ರಸೌಧದಲ್ಲಿ ಸೋಮವಾರ ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮತಿ ಮೊಗವೀರ ವಹಿಸಿದ್ದರು. ಕುಂದಾಪುರದ ವಕೀಲೆ ಕವಿತಾ […]
ವರದಿ: ವಾಲ್ಟರ್ ಮೊಂತೇರೊ, ಬೆಳ್ಮಣ್ಣು ಭಜನೆ ಎಂಬುದು ಮನುಷ್ಯನ ಜೀವನದಲ್ಲಿ ದೇವರನ್ನು ಅತೀ ವೇಗವಾಗಿ ಒಲಿಸುವಂತಹ ಒಂದು ಅದ್ಬುತವಾದ ಶಕ್ತಿ. ಎಲ್ಲಿ ಭಜಕರು ಇರುವರೋ ಅಲ್ಲಿ ದೇವನಿರುವುದು ಖಂಡಿತ. ದೇವರಿಗೆ ಮತ್ತು ಮನುಷ್ಯರಿಗೆ ಹತ್ತಿರದ ಸಂಬಂಧ ಅಂದ್ರೆ ಭಜನೆ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಹೇಳಿದರು.ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ನಂದಳಿಕೆ ಅಬ್ಬನಡ್ಕ ಶ್ರೀ […]
JANANUDI.COM NETWORK ಉಡುಪಿ : 25-10-2021 ರಂದು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಬಗ್ಗೆ ಉಡುಪಿ ಧರ್ಮಪ್ರಾಂತದ ವತಿಯಿಂದ ಸ್ಪಷ್ಟೀಕರಣ ನೀಡಿದೆ2021 ಅಕ್ತೋಬರ್ 24 ರಂದು ಉಡುಪಿ ಜಿಲ್ಲೆಯ ಬೆಳ್ವೆ ಗುಮ್ಮ ಹೊಲದ ಸ0ತ ಜೋಸೆಫ್ ಅಗ್ರಿಕಲ್ಚರ್ ಕಾಲನಿಯ ಜನರು ಚರ್ಚಿನ ಧರ್ಮಗುರುಗಳ ಎರುದ್ಧ ಅನೇಕ ಆರೋಪಗಳನ್ನುಮಾಡಿ, ಅವರನ್ನು ತಕ್ಷಣ ಅಲ್ಲಿಂದ ವರ್ಗಾವಣೆ ಮಾಡಬೇಕೆಂಬ ಬೇಡಿಕೆಯಿಟ್ಟು ಮಾಡಿದ ಪ್ರತಿಭಟನೆಯ ವರದಿಗಳು ಅಕ್ತೋಬರ್ 25 ರಂದು ವಿವಿಧ ಮಾಧ್ಯಮಗಳು ವರದಿಮಾಡಿವೆ. ಇವುಗಳಲ್ಲಿ ಸತ್ಯಕ್ಕೆ ದೂರವಾದ ಅನೇಕ ವಿಷಯಗಳಿದ್ದು, ಅವುಗಳ ಹಿ0ದಿನ […]
JANANUDI.COM NETWORK ಕುಂದಾಪುರ, ಅ.24; ಕುಂದಾಪುರ ಕಥೊಲಿಕ್ ಸಭಾ ವಲಯ ಸಮಿತಿಯಿಂದ ಹಿಮೋಗ್ಲೊಬಿನ್ ಪರೀಕ್ಷೆ, ಆರೋಗ್ಯ ಮಾಹಿತಿ ಶಿಬಿರ ಹಾಗೂ ಫಾ|ಮುಲ್ಲರ್ಸ್ ಆಸ್ಪತ್ರೆಯ ಹೆಲ್ತ್ ಕಾರ್ಡ್ ಬಗ್ಗೆ ಮಾಹಿತಿ ಕಾರ್ಯಕ್ರಮ ಕುಂದಾಪುರ ಸಂತ ಮೇರಿಸ್ ಪಿ.ಯು. ಕಾಲೇಜು ಸಭಾ ಭವನದಲ್ಲಿ ನಡೆಯಿತು.ಫಾ|ಮುಲ್ಲರ್ಸ್ ಆಸ್ಪತ್ರೆಯ ಮಾಜಿ ಸಾರ್ವಜನಿಕ ಸಂಪರ್ಕ ಅದಿಕಾರಿü ಹಾಗೂ ಸಮಾಜ ಸೇವಕ ಡೇವಿಡ್ ಸಿಕ್ವೇರಾ ಫಾ|ಮುಲ್ಲರ್ಸ್ ಆಸ್ಪತ್ರೆಯ ಆರೋಗ್ಯ ಕಾರ್ಡಗಳ ಬಗ್ಗೆ, ಅದರಿಂದ ಸಿಗುವ ಲಾಭ ಮತ್ತು ವೈದ್ಯಕೀಯ ಚಿಕಿತ್ಸೆಯಲ್ಲಿ ರಿಯಾತಿಗಳ ಬಗ್ಗೆ ವಿವರಿಸಿದರು. ತೆಕ್ಕಟ್ಟೆಯ […]

