

ಕುಂದಾಪುರ; ದಿನಾಂಕ 3 -07-2026 ಶುಕ್ರವಾರ ಮಧ್ಯಾಹ್ನ2.30ಕ್ಕೆ ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆ, ಮತ್ತು ಸಿ ಎಸ್ ಐ ಕೃಪಾ ನರ್ಸರಿ ಶಾಲೆ ಕುಂದಾಪುರ ಇವೆರಡರ 2026- 27 ನೇ ಸಾಲಿನ ಶೈಕ್ಷಣಿಕ ವರ್ಷದ “ಒಟ್ಟಾಗಿ ಬೆಳೆಯೋಣ” ಎನ್ನುವ ಧ್ಯೇಯ ವಾಕ್ಯದೊಂದಿಗೆ ಶಿಕ್ಷಕರಕ್ಷಕ ಸಭೆ ನಡೆಯಿತು. ಈ ಸಭೆಗೆ ಸಂಪನ್ಮೂಲ ವ್ಯಕ್ತಿಗಳಾಗಿ ಕುಂದಾಪುರದ ಸಿ ಎಸ್ ಐ ಕೃಪಾ ಚರ್ಚ್ನನ ಧರ್ಮ ಗುರುಗಳಾದ ರೆವೆರೆಂಡ್ ಜಯಕರ್ ರವರು “ಇಂದಿನ ಯುಗದಲ್ಲಿ ಮಕ್ಕಳಿಗೆ ಶಿಕ್ಷಣದೊಂದಿಗೆ, ಕೆಟ್ಟ ಚಟ ಗಳಿಂದ ಮಕ್ಕಳು ದೂರವಿರುವಂತೆ ಶಿಕ್ಷಕರು ರಕ್ಷಕರು ಆದಷ್ಟು ಜಾಗೃತೆ ವಹಿಸಬೇಕು” ಎಂದರು.
ಅಂತೆಯೇ ಸಿಎಸ್ಐ ಕೃಪಾ ನರ್ಸರಿ ಶಾಲೆಯ ಮುಖ್ಯೋಪಾಧ್ಯಾಯನಿ ಸವಿತಾ “ಮಕ್ಕಳಿಗೂ ಸ್ವಯಂ ಗೌರವವಿದೆ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳಿ” ಎಂದರು ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಅನಿತಾ ಅಲಿಸ್ ಡಿಸೋಜ ರವರು “ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕ ಪೋಷಕ ಇಬ್ಬರೂ ಕೂಡ ಒಟ್ಟಾಗಿ ಶ್ರಮಿಸಬೇಕಾಗುತ್ತದೆ” ಎಂದರು.
ಶಾಲಾ ಸಂಚಾಲಕಿ ಐರಿನ್ ಸಾಲಿನ್ಸ್ ರವರು ಶಾಲೆಯ ಬಗ್ಗೆ ಪೋಷಕರಿಂದ ಸಲಹೆಗಳನ್ನು ತೆಗೆದುಕೊಂಡು ಅದಕ್ಕೆ ಪರಿಹಾರಗಳನ್ನು ಸೂಚಿಸಿದರು. ಕಾರ್ಯಕ್ರಮಕ್ಕೆ ಸಹ ಶಿಕ್ಷಕಿ ರಾಜೇಶ್ವರಿ ಸ್ವಾಗತಿಸಿದರು, ಸಹ ಶಿಕ್ಷಕಿ ವೀಣಾ ಧನ್ಯವಾದಗೈದರು. ಕಾರ್ಯಕ್ರಮ ನಿರೂಪಿಸಿದ ಶಿಕ್ಷಕಿ ಪವಿತ್ರ ಕೊತ್ವಾಲ್ ರವರು ಸಮಾಜದ ಒಳಿತಿಗಾಗಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಮಾದಕ ವಸ್ತುಗಳನ್ನು ಬಳಸದಂತೆ ಮತ್ತು ಮುನ್ನೆಚ್ಚರಿಕೆ ವಹಿಸುವಂತೆ ಸಂದೇಶ ನೀಡಿ ಅವರ ಮುಂದಾಳತ್ವದಲ್ಲಿ ಸಭೆಯಲ್ಲಿರುವ ಶಿಕ್ಷಕರು ಅತಿಥಿಗಳು ಹಾಗೂ ಪೋಷಕರು ಎಲ್ಲರೂ ಪ್ರತಿಜ್ಞೆ ಮಾಡಿದರು.
Teacher-Guardian Meeting with the motto “Let’s Grow Together” at UBMC Educational Institute

Kundapur; On Friday, 3-07-2026 at 2.30 pm, UBMC English Medium School and CSI Krupa Nursery School, Kundapur, held a Parents teacher meeting with the theme “growing together” for the academic year 2026-27. The resource person for this meeting was Reverend Jayakar, a Presbyter of CSI Krupa Church, Kundapur. He said that in today’s era, along with education, teachers and guardians should be as vigilant as possible so that children stay away from bad habits. Similarly, CSI Krupa Nursery School Headmistress Mrs. Savita said that children also have self-respect and should take care of children with love. UBMC English Medium School Principal Mrs. Anita Alice Dsouza said that both teachers and parents should work together for the all-round development of children.All the teachers, guests and parents present in the meeting, under the leadership of Mrs. Pavitra Kotwal, took a pledge to avoid using drugs and take precautions for the betterment of the society and the bright future of the children. The school correspondent , Mrs. Irene Sallins, took suggestions from the parents about the school and suggested solutions for it. The program was welcomed by the assistant teacher, Mrs. Rajeshwari, and the assistant teacher, Mrs. Veena, expressed her gratitude. The entire program was a success under the guidance of Mrs. Pavithra Kotwal.













