ಸಂತೆಕಟ್ಟೆ, ಕಲ್ಯಾಣಪುರ – ಜೂನ್ 1, 2025: ಮೌಂಟ್ ರೋಸರಿ ಚರ್ಚ್ ಭಾನುವಾರ ನಂಬಿಕೆ ಮತ್ತು ಉತ್ಸಾಹದಿಂದ ತುಂಬಿದ ಸುಂದರವಾದ ಉದ್ಘಾಟನಾ ಆಚರಣೆಯೊಂದಿಗೆ 2024-25 ರ ಸಂತೆಕಟ್ಟೆ, ಮೌಂಟ್ ರೋಸರಿ ಚರ್ಚ್ – ಶೈಕ್ಷಣಿಕ ವರ್ಷಕ್ಕೆ ಉತ್ಸಾಹಭರಿತ ಮತ್ತು ಭಕ್ತಿಪೂರ್ವಕ ಕ್ರೈಸ್ತ ಶಿಕ್ಷಣ ಆರಂಭೋತ್ಸವ ನಡೆಯಿತು. ಬೆಳಿಗ್ಗೆ 8:00 ಗಂಟೆಗೆ ನಡೆದ ಪವಿತ್ರ ಯೂಕರಿಸ್ಟ್ ಹೊಸ ಕ್ಯಾಟೆಕಿಟಿಕಲ್ ವರ್ಷದ ಆರಂಭವನ್ನು ಗುರುತಿಸಿತು. ಗಂಭೀರವಾದ ಬಲಿಪೂಜೆಯನ್ನು ಪ್ಯಾರಿಷ್ ಫಾ। ರೆವರೆಂಡ್ ಡಾ. ರೋಕ್ ಡಿ’ಸೋಜಾ, ಸಹಾಯಕ ಪ್ಯಾರಿಷ್ ಫಾದರ್ […]

Read More

ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ (ರಿ) 2025 ರ ಮೇ 31 ರ ಶನಿವಾರ ಕಾಲೇಜು ಎವಿ ಹಾಲ್‌ನಲ್ಲಿ ಹೃದಯಸ್ಪರ್ಶಿ ಮತ್ತು ಸ್ಮರಣೀಯ ಹಳೆಯ ವಿದ್ಯಾರ್ಥಿಗಳ ದಿನವನ್ನು ಆಯೋಜಿಸಿತು. ಈ ಕಾರ್ಯಕ್ರಮವು ತಲೆಮಾರುಗಳಾದ್ಯಂತದ ಹೆಮ್ಮೆಯ ಹಳೆಯ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ, ಸಹಭಾಗಿತ್ವ, ಕೃತಜ್ಞತೆ ಮತ್ತು ಹಂಚಿಕೆಯ ಪರಂಪರೆಯ ಸಂತೋಷದಾಯಕ ಆಚರಣೆಯನ್ನು ಮಾಡಿತು. 1967 ರಲ್ಲಿ ಸ್ಥಾಪನೆಯಾದ ಮಿಲಾಗ್ರಿಸ್ ಕಾಲೇಜು ಸುಮಾರು 60 ವರ್ಷಗಳ ಅದ್ಭುತ ಇತಿಹಾಸವನ್ನು ಹೊಂದಿದೆ. ಪ್ರಾರಂಭವಾದಾಗಿನಿಂದ, ಕಾಲೇಜು ಭರವಸೆಯ ದಾರಿದೀಪವಾಗಿದೆ ಮತ್ತು ಉನ್ನತ […]

Read More

ಕೋಟ ಜೂ. 2, : ಕೋಟ ಸಂತ ಜೋಸೆಫ್ ಇಗರ್ಜಿಯಲ್ಲಿ ಕ್ರೈಸ್ತ ಶಿಕ್ಷಣ ಆರಂಭತ್ಸೋವವ ಕಾರ್ಯಕ್ರಮ ಜೂನ್ 1 ರಂದು ನೆಡೆಯಿತು. ಚರ್ಚಿನ ಧರ್ಮಗುರುಗಳಾದ ಅ|ವಂ| ಸ್ಟ್ಯಾನಿ ತಾವ್ರೊ, ಶಿಕ್ಷಕರು, ಮಕ್ಕಳು ಹೂ ಗೀಡಗಳಿಗೆ ನೀರು ಎರೆಯುವ ಮೂಲಕ ಕ್ರೈಸ್ತ ಶಿಕ್ಷಣದ ಶಿಕ್ಷಣಕ್ಕೆ ಚಾಲನೆಯನ್ನು ನೀಡಿದರು. ಬಳಿಕ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು, ಪವಿತ್ರ ಬಲಿದಾನದ ಪ್ರಾರ್ಥನ ವಿಧಿಗಳನ್ನು ಮಕ್ಕಳು ನೆಡೆಸಿಕೊಟ್ಟರು.

Read More

ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ನಲ್ಲಿ ” ಹೈ ರಿಸ್ಕ್ ಅಂಡ್ ಕ್ರಿಟಿಕಲ್ ಕೇರ್ ಒಬ್ಸೆಟ್ರಿಕ್ಸ್  ” ಕುರಿತು ಪ್ರಾದೇಶಿಕ ಸಮ್ಮೇಳನ ವನ್ನು ಗುರುವಾರ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು .   ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ , ಫಾದರ್ ಮುಲ್ಲರ್ ಕಾಲೇಜಿನ ಪ್ರಾಧ್ಯಾಪಕಿಯಾದ ಡಾ. ರೀನಾ ವಿಲ್ಟಾ   ಪ್ರಾಂಕ್, ಐಎಂಜೆ ಇನ್ಸ್ಟಿಟ್ಯೂಷನ್ಸ್ ಬ್ರಾಂಡ್ ಬಿಲ್ಡಿಂಗ್ ಡೈರೆಕ್ಟರ್ ಡಾ. ರಾಮಕೃಷ್ಣ ಹೆಗಡೆ, ಮತ್ತು  ಉಪ ಪ್ರಾಂಶುಪಾಲರಾದ ಶ್ರೀಮತಿ ರೂಪಶ್ರೀ ಕೆ ಎಸ್ ದೀಪ ಪ್ರಜ್ವಲನದೊಂದಿಗೆ  ಕಾರ್ಯಕ್ರಮವನ್ನು ಉದ್ಘಾಟಿಸಿದರು. […]

Read More

ಕುಂದಾಪುರ: ಶುಕ್ರವಾರ: 31.05.2025 : ಕುಂದಾಪುರದ ಯುಬಿಎಂಸಿ ಇಂಗ್ಲಿಷ್ ಮಾಧ್ಯಮ ಶಾಲೆ ಮತ್ತು ಸಿಎಸ್ಐ ಕೃಪಾ ವಿದ್ಯಾಲಯವು ಸ್ವಾಗತ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಪರಿಚಯ ಕಾರ್ಯಕ್ರಮವನ್ನು ಶನಿವಾರ 31.05.2025 ರಂದು ನಡೆಸಿತು. ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕರು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮವು ಪ್ರಾರ್ಥನಾ ಗೀತೆ ಮತ್ತು ದೀಪ ಬೆಳಗುವಿಕೆಯೊಂದಿಗೆ ಪ್ರಾರಂಭವಾಯಿತು. ಸಿಎಸ್ಐ ಕೃಪಾ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸವಿತಾ ಮತ್ತು ಶ್ರೀಮತಿ ರಾಜೇಶ್ವರಿ ಅವರು ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಶುಭಾಶಯಗಳು ಮತ್ತು ಆಶೀರ್ವಾದಗಳನ್ನು ತಿಳಿಸಿದರು. ಪ್ರಾಂಶುಪಾಲರಾದ ಅನಿತಾ […]

Read More

ಉಡುಪಿ : ಐಸಿವೈಎಮ್ ಉಡುಪಿ ಧರ್ಮಪ್ರಾಂತ್ಯ ಮತ್ತು ಉಡುಪಿ ವಲಯದ ಸಹಯೋಗದಲ್ಲಿ ಉಡುಪಿಯ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಸ್ಪೊರ್ಟಿಫೈ’25 ಕ್ರೀಡಾಕೂಟವು ವಿಜೃಂಭಣೆಯಿಂದ ಜರಗಿತು. ಉಡುಪಿ ವಲಯದ ಪ್ರಧಾನ ಧರ್ಮ ಗುರು ವo. ಫಾ. ಚಾರ್ಲ್ಸ್ ಮಿನೇಜಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಉಡುಪಿ ವಲಯವು ವಿವಿಧ ಗುಂಪು ಕ್ರೀಡಾ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿ ‘ಚಾಂಪಿಯನ್ಸ್’ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಈ ಸ್ಪರ್ಧೆಯು ಉಡುಪಿ ಧರ್ಮಪ್ರಾಂತ್ಯದ 5 ವಲಯಗಳ ನಡುವೆ ನಡೆದಿತ್ತು. ಉಡುಪಿ ವಲಯ ಗೆಲುವು ಸಾಧಿಸಿದ ಸ್ಪರ್ಧೆಯ ವಿವರ ಕ್ರೀಡಾಕೂಟದಲ್ಲಿ […]

Read More

ಭಾರೀ ಮಳೆಯ ಹಿನ್ನಲೆಯಲ್ಲಿ ದ.ಕ.ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು ಮತ್ತು ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು (ಮೇ 30) ದ.ಕ. ಜಿಲ್ಲಾಧಿಕಾರಿ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಾದ್ಯಂತ ಹೆಚ್ಚಿನ ಮಳೆ ಆಗುತ್ತಿರುವ ಹಿನ್ನೆಲೆ ಉಡುಪಿ ಜಿಲ್ಲೆಯಾದ್ಯಂತ ಅಂಗನವಾಡಿ ಹಾಗೂ ಒಂದರಿಂದ ಹತ್ತನೇ ತರಗತಿವರೆಗೆ( ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ) ಇಂದು ದಿನಾಂಕ 30-5-2025 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ.ಕೆಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಳ್ಳೈ ಮುಗಿಲನ್‌ ಆದೇಶಿಸಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಉಡುಪಿ ಹಾಗೂ […]

Read More

ಕಥೊಲಿಕ್‌ ಸಭಾ ಮಂಗ್ಳುರ್‌ ಪ್ರದೆಶ್‌(ರಿ) ಸಂಘಟನೆಗೆ 2025-26 ನೇ ವರ್ಷಕ್ಕೆ ಹೊಸದಾಗಿ. ಚುನಾಯಿತರಾದ ಪದಾಧಿಕಾರಿಗಳು, ಸದ್ರಿ ಸಂಘಟನೆಯ ಪೋಷಕರಾಗಿರುವ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿರುವ ಅತೀ ವಂದನೀಯ ಡಾಪೀಟರ್‌ ಪಾವ್ಲ್ಸಲ್ಪನ್ಹಾರವರನ್ನು ದಿನಾಂಕ 29/5/2025 ರಂದು ಭೇಟಿ ಮಾಡಿ ಸದ್ರಿ ವರ್ಷದ ವಾರ್ಷಿಕ ಕಾರ್ಯಯೋಜನೆಗಳ ಕುರಿತು ಚರ್ಚೆ ನಡೆಸಿದರು. ಬಳಿಕ ವಿಗಾರ್‌ ಜೆರಾಲ್‌ ಮೊನ್ಸಿಂಜೊರ್‌ ಮ್ಯಾಕ್ಸಿಮ್‌ ನೊರೋನ್ಹಾ, ಕಥೊಲಿಕ್‌ ಸಭಾದ ಆಧ್ಯಾತ್ಮಿಕ ನಿರ್ದೇಶಕರಾದ ವಂ। ಡಾ।ಜೆ.ಬಿ.ಸಲ್ಜಾನ್ಹಾ, ಚಾನ್ಸಲರ್‌. ವಂ। ಫಾ। ವಿಕ್ಟರ್‌ ಡಿಸೋಜಾ, ಪ್ರೊಕ್ಕೂರೇಟರ್‌ ವಂ। ಫಾ। ಜಗದೀಶ್‌ ಪಿಂಟೊ, […]

Read More

ಕುಂದಾಪುರ ; ಸಾಧಕರಿಗೆ ಸನ್ಮಾನ. ಮೂಳೆ, ಮತ್ತು ಕೀಲು ವೈದ್ಯಕೀಯದಲ್ಲಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಡಾ. ರಿಶೆಲ್ ರೆಬೆಲ್ಲೊ ಇವರಿಗೆ ಕುಂದಾಪುರ ತಾಲೂಕು ಮಹಿಳಾ ಒಕ್ಕೂಟದ ವತಿಯಿಂದ ತಾ. 26ರಂದು ಸನ್ಮಾನಿಸಲಾಯಿತು. ರಾಧಾದಾಸ್, ಎ ಎಸ್ ಎನ್ ಹೆಬ್ಬಾರ್, ರವಿಕಿರಣ್ ಮುರ್ಡೇಶ್ವರ, ಶಾಲೆಟ್ ರೆಬೆಲ್ಲೊ, ಸುಧಾಕರ ಶೆಟ್ಟಿ, ಶೇಖರ ಶೆಟ್ಟಿ, ತಿಲೋತ್ತಮ ನಾಯಕ್, ಪ್ರೇಮಾ ಎಚ್, ಸಿಡಿಪಿಒ ಉಮೇಶ ಕೋಟಿಯಾನ್ ಮತ್ತಿತರರು ಉಪಸ್ಥಿತರಿದ್ದರು.

Read More