ಕುಂದಾಪುರ; ತ್ರಿವರ್ಣ ಆರ್ಟ್ ಕ್ಲಾಸ್ಸಸ್ ಕುಂದಾಪುರ ವತಿಯಿಂದ ಪ್ರಾಥಮಿಕ ಚಿತ್ರಕಲೆಯ ರಚನೆಯಲ್ಲಿ ರೇಖೆ, ಆಕಾರ, ಬಣ್ಣದ ಸಹಯೋಗದಲ್ಲಿ ವ್ಯಕ್ತಪಡಿಸುವ ರಚನಾ ಪರಿ ಮತ್ತು ಕಲಾಮಹತ್ವತೆಯ ಬಗ್ಗೆ ಉಚಿತ ಕಲಾ ತರಬೇತಿಯನ್ನು ಆಯೋಜಿಸಲಾಗಿದೆ. 19 ರಿಂದ 75 ವಯೋಮಿತಿಯ ಕಲಾಸಕ್ತ ಸಾರ್ವಜನಿಕರಿಗೆ ದಿನಾಂಕ 05.10.2025ನೇ ರವಿವಾರ ಬೆಳಿಗ್ಗೆ 10.00ರಿಂದ ಸಂಜೆ 5.30ರ ತನಕ ಹಮ್ಮಿಕೊಳ್ಳಲಾಗಿದ್ದು; ಆಸಕ್ತರು ದಿನಾಂಕ 03.10.25ರ ಒಳಗೆ 9739140607 ವಾಟ್ಸಾಪ್ ಸಂಪರ್ಕದ ಮೂಲಕ ತಮ್ಮ ಭಾಗವಹಿಸುವಿಕೆಯನ್ನು ದೃಢಪಡಿಸಿಕೊಳ್ಳುವಂತೆ ಕೋರಲಾಗಿದೆ.
“Sauharda Tenehabba” (Harmony Festival) organized by Catholic Sabha Mangalore Pradesh® at Nejiguri ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಮುಂದಾಳುತ್ವದಲ್ಲಿ, ನೇಜಿಗುರಿ ಗುಂಪು, ಕರಾವಳಿ ಮಾಣಿಕ್ಯ ಸೆವಾ ಸಂಸ್ಥೆ(ರಿ), ಪೃಥ್ವಿ ಸೇವಾ, ಕಥೊಲಿಕ್ ಸಭಾ ಸಿಟಿ ವಾರಾಡೊ ಮತ್ತು ಕಥೊಲಿಕ್ ಸಭಾ ಶಕ್ತಿನಗರ ಘಟಕ ಇವರ ಸಹಯೋಗದೊಂದಿಗೆ ಸೆಪ್ಟೆಂಬರ್ 28 ರಂದು ಶಕ್ತಿನಗರದ ನೇಜಿಗುರಿ ಸುಜಿ ಅಣ್ಣ ತಾರಕ್ಕ ಇವರ ಮನೆಯ ಅಂಗಳದಲ್ಲಿ ಸೌಹಾರ್ದಯುತವಾಗಿ ನಡೆಯಿತು. ಪ್ರಾರ್ಥನೆಯೊಂದಿಗೆ, ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮುಖಾಂತರ […]
ಬೆಂಗಳೂರು, ಸೆಪ್ಟೆಂಬರ್ 27: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ದ್ವಿತೀಯ ಪದವಿ ಪ್ರದಾನ ಸಮಾರಂಭ ಶನಿವಾರ ದಂದು ನಡೆಯಿತು. ಮೊದಲಿಗೆ ರ್ಯಾಂಕ್ ಹೋಲ್ಡರ್ಸ್ ಮತ್ತು ವಿಶೇಷ ಪ್ರಶಸ್ತಿ ವಿಜೇತರ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ|ಎಂ.ಸಿ. ಸುಧಾಕರ್, ಹಾಗೂ ಮುಖ್ಯ ಅತಿಥಿ ಡಾ. ಜೆ.ಎನ್ .ಮೂರ್ತಿ ,ನಿರ್ದೇಶಕರು, ಐಐಎಸ್ಇಆರ್ , ತಿರುವನಂತಪುರಂ. ಚಾನ್ಸಲರ್ ವಂದನೀಯ ಡೈನೋಸಿಯಸ್ ವಾಸ್, ಉಪಕುಲಪತಿ ವಂದನೀಯ ವಿಕ್ಟರ್ ಲೋಬೋ ಉಪಸ್ಥಿತರಿದ್ದರುಒಟ್ಟು 2,747 ವಿದ್ಯಾರ್ಥಿಗಳು ಪದವಿ ಪಡೆದಿದ್ದು, […]
ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪನಿ ರೋಹನ್ ಕಾರ್ಪೊರೇಶನ್ ಪೌರ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಳಜಿ ವಹಿಸುವ ಉದ್ದೇಶದಿಂದ, ಸೆಪ್ಟೆಂಬರ್ 29 ರಂದು ಮಂಗಳೂರು ಮಹಾನಗರ ಪಾಲಿಕೆಗೆ 100 ಜೋಡಿ ಸುರಕ್ಷತಾ ಪಾದರಕ್ಷೆಗಳನ್ನು ವಿತರಣೆ ಮಾಡುವ ಮೂಲಕ ಸಾಮಾಜಿಕ ಕಾರ್ಯವನ್ನು ಹಮ್ಮಿಕೊಂಡಿತು.ಈ ಕಾರ್ಯಕ್ರಮವು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀರವಿಚಂದ್ರ ನಾಯಕ್ ಉಪಸ್ಥಿತರಿದ್ದರು. ರೋಹನ್ ಕಾರ್ಪೊರೇಶನ್ ಮಾರ್ಕೆಟಿಂಗ್ ಮ್ಯಾನೇಜರ್ ಮಾಕ್ಷಿಮ್ ಲೋಬೊ ಕಾರ್ಮಿಕರಿಗೆ ಪಾದರಕ್ಷೆಗಳನ್ನು […]
ಕೊಂಕಣಿ ಲೇಖಕರ ಸಂಘ, ಕರ್ನಾಟಕದ ವಾರ್ಷಿಕ ಸಭೆ ಸಂದೇಶ ಪ್ರತಿಷ್ಠಾನದಲ್ಲಿ ನಡೆಯಿತು. ಸಂಘದ ಸಂಚಾಲಕರಾದ ಶ್ರೀ ರಿಚ್ಚಾರ್ಡ್ ಮೊರಸ್ ಖರ್ಚು–ವೆಚ್ಚದ ಲೆಕ್ಕಪತ್ರವನ್ನು ಮಂಡಿಸಿದ್ದು, ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಮುಖ್ಯ ಆಕರ್ಷಣೆಯಾಗಿ ನಿವೃತ್ತ ಪೋಸ್ಟ್ ಮಾಸ್ಟರ್ ಜನರಲ್ ಡಾ. ಚಾರ್ಲ್ಸ್ ಲೋಬೊ IPS ಅವರೊಂದಿಗೆ ಖ್ಯಾತ ಕವಿ–ಲೇಖಕ ಶ್ರೀ ಅ್ಯಂಡ್ರು ಎಲ್. ಡಿಕುನ್ಹಾ ಮುಕ್ತ ಸಂವಾದ ನಡೆಸಿದರು. ಡಾ. ಲೋಬೊ ಅವರ ವೃತ್ತಿ ಜೀವನ, ಆಡಳಿತ ಸಾಧನೆಗಳು ಹಾಗೂ ಕೊಂಕಣಿ ಭಾಷೆ–ಸಾಹಿತ್ಯಕ್ಕೆ ನೀಡಿದ ಕೊಡುಗೆಗಳನ್ನು ಈ ಸಂದರ್ಭದಲ್ಲಿ ವಿವರಿಸಲಾಯಿತು. […]
The Cloistered Carmel Sisters of the Sacred Heart Monastery, Kankanady, Mangaluru, celebrated the Centenary of the Sainthood of St. Thérèse of Lisieux along with the Solemnity of St. Thérèse of Lisieux. ಮಂಗಳೂರಿನ ಕಂಕನಾಡಿಯ ಸೇಕ್ರೆಡ್ ಹಾರ್ಟ್ ಮಠದ ಕ್ಲೋಯಿಸ್ಟೆಡ್ ಕಾರ್ಮೆಲ್ ಸಿಸ್ಟರ್ಸ್, ಸೇಂಟ್ ಥೆರೆಸ್ ಆಫ್ ಲಿಸಿಯಕ್ಸ್ ಅವರ ಸಂತತ್ವದ ಶತಮಾನೋತ್ಸವವನ್ನು ಮತ್ತು ಸೇಂಟ್ ಥೆರೆಸ್ ಆಫ್ ಲಿಸಿಯಕ್ಸ್ ಅವರ ಪವಿತ್ರ ಹಬ್ಬವನ್ನು ಆಚರಿಸಿದರು. […]
ಶಂಕರನಾರಾಯಣದ ಮದರ್ ತೆರೆಸಾ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ “ ಸೈನ್ಸ್ ಚಾಂಪ್ – 2025” ಸ್ಪರ್ಧೆಯನ್ನು ಅತ್ಯುತ್ತಮವಾಗಿ ಆಯೋಜಿಸಿತು. ವಿಜ್ಞಾನ ವಿದ್ಯಾರ್ಥಿಗಳಲ್ಲಿ ಜ್ಞಾನವೃದ್ಧಿ, ವಿಶ್ಲೇಷಣಾತ್ಮಕ ಚಿಂತನೆ ಹಾಗೂ ನವೀನತೆಗೆ ಪ್ರೋತ್ಸಾಹ ನೀಡುವ ಉದ್ದೇಶದೊಂದಿಗೆ ಈ ಸ್ಪರ್ಧೆ ನಡೆಯಿತು. ಆರಂಭಿಕ ಸುತ್ತಿನ ಮೂಲಕ ಆಯ್ಕೆಯಾದ ನಾಲ್ವರು ಸ್ಪರ್ಧಾರ್ಥಿಗಳು ಅಂತಿಮ ಸುತ್ತಿನಲ್ಲಿ ತಮ್ಮ ಪ್ರತಿಭೆ ಹಾಗೂ ಚಾತುರ್ಯವನ್ನು ಮೆರೆದರು. ವಿವಿಧ ಹಂತಗಳನ್ನು ಒಳಗೊಂಡ ಈ ಸ್ಪರ್ಧೆಯಲ್ಲಿ — ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರದ ಪ್ರಶ್ನೋತ್ತರಗಳು, ತಂತ್ರಜ್ಞಾನದ ಕುರಿತು […]
ಕುಂದಾಪುರ;”ಯಾವುದೇ ವಿಪತ್ತು ಎದುರಾದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಸ್ವಯಂಸೇವಕರು ಸ್ವಯಂಸ್ಪೂರ್ತಿಯಿಂದ ನಿಷ್ಪಕ್ಷಪಾತದಿಂದ ತಾರತಮ್ಯವಿಲ್ಲದೇ ಪ್ರಪಂಚದಾದ್ಯಂತ ಅಗತ್ಯವಿರುವ ಸೇವೆ ನೀಡುತ್ತಾರೆ. ವಿದ್ಯಾರ್ಥಿಗಳು ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೇ ಸಹವರ್ತಿಗಳ ಆರೋಗ್ಯ ಕಾಪಾಡುವ ಜವಾಬ್ದಾರಿಯನ್ನು ಕಲಿಯಬೇಕು ” ಎಂದು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಕುಂದಾಪುರ ಘಟಕದ ಸಭಾಪತಿ ಶ್ರೀ ಜಯಕರ ಶೆಟ್ಟಿಯವರು ಕಾಲೇಜಿನಲ್ಲಿ ಜ್ಯೂನಿಯರ್ ರೆಡ್ ಕ್ರಾಸ್ ಘಟಕವನ್ನು ಉದ್ಘಾಟಿಸಿ ಕರೆ ನೀಡಿದರು.ಕುಂದಾಪುರ ತಾಲೂಕು ವಲಯದ ಜ್ಯೂನಿಯರ್ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಶ್ರೀ ದಿನಕರ್ ಆರ್. ಶೆಟ್ಟಿಯವರು ವಿದ್ಯಾರ್ಥಿಗಳಿಗೆ ರೆಡ್ ಕ್ರಾಸ್ ಪ್ರತಿಜ್ಞಾವಿಧಿ ಬೋಧಿಸಿ, ವಿದ್ಯಾರ್ಥಿಗಳು ಸಮಾಜದ ಋಣವನ್ನು ತೀರಿಸುವಲ್ಲಿ ತಮ್ಮಿಂದಾದ ಪ್ರಯತ್ನವನ್ನು ಮಾಡಬೇಕೆಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ವಿದ್ಯಾರ್ಥಿಗಳು ಇತರರಿಗೆ ಸಕಾಲದಲ್ಲಿ ನೆರವು ನೀಡುವ ನಿಸ್ವಾರ್ಥ ಗುಣವನ್ನು ಬೆಳೆಸಿಕೊಳ್ಳಬೇಕು’ ಎಂದು ಕರೆ ನೀಡಿದರು. ಇಂಡಿಯನ್ ರೆಡ್ ಕ್ರಾಸ್, ಕುಂದಾಪುರ ಘಟಕದ ವತಿಯಿಂದ ಕಾಲೇಜಿಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಹಸ್ತಾಂತರಿಸಲಾಯಿತು.ಇಂಗ್ಲೀಷ್ ಉಪನ್ಯಾಸಕಿ ರೂಪಾ ಜಿ.ಪಾಲಂಕರ್ ರವರು ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ಶರಧಿ ಪ್ರಾರ್ಥನೆ ಹಾಡಿದರು.ಇಂಗ್ಲೀಷ್ ಉಪನ್ಯಾಸಕಿ ಸುಮತಿ ಶೆಣೈಯವರು ಕಾರ್ಯಕ್ರಮ ನಿರ್ವಹಿಸಿದರು.
ಕುಂದಾಪುರ, ಸೆ. 28.: ಕುಂದಾಪುರ ರೋಜರಿ ಚರ್ಚಿನ ವೈಶಂತಿಕ ಸಭೆ ಅವರ ಪೋಷಕ ಸಂತ ವಿನ್ಸೆಂಟ್ ಪಾವ್ಲರ (ಸೆ.28 ರಂದು) ದಿನಾಚರಣೆಯನ್ನು ಆಚರಿಸಿತು.ಚರ್ಚಿನ ಧರ್ಮಗುರುಗಳಾದ ಅ|ವಂ|ಪೌಲ್ ರೇಗೊ ಕ್ರತ್ಞತಾ ಬಲಿದಾನವನ್ನು ಅರ್ಪಿಸಿದರು. ವೈಶಂತಿಕ ಸಭೆಯ ಸದಸ್ಯರು ಬಲಿದಾನದ ಪ್ರಾರ್ಥನ ವಿಧಿಯನ್ನು ನಡೆಸಿಕೊಟ್ಟರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅ|ವಂ|ಪೌಲ್ ರೇಗೊ ‘ಸಂತ ವಿನ್ಸೆಂಟ್ ಪಾವ್ಲ್ ವೈಶಂತಿಕ ಸಭೆಯವರು ಸಮಾಜಕ್ಕೆ ಅಮೂಲ್ಯ ಸೇವೆಯನ್ನು ನೀಡುತಿದ್ದಾರೆ, ಸಂತ ವಿನ್ಸೆಂಟ್ ಪಾವ್ಲರು ದೇವರ ವಾಕ್ಯವನ್ನು ಮನಗಂಡು ಅವರು ನಿರ್ಗತಿಕರಿಗೆ, ರೋಗಿಗಳಿಗೆ, ಅನಾಥರಿಗಾಗಿ […]

