

ಕುಂದಾಪುರ; ಶ್ರೀ ಪ್ರಮೋದ್ ಮಧ್ವರಾಜ್ ಹುಟ್ಟುಹಬ್ಬದ ಪ್ರಯುಕ್ತ ಕುಂದಾಪುರ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ರಕ್ತ ನಿಧಿ ಕೇಂದ್ರದಲ್ಲಿ ಅಭಿಮಾನಿ ಬಳಗದವರಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ಶಿಬಿರದ ಉದ್ಘಾಟನೆಯನ್ನು ರೆಡ್ ಕ್ರಾಸನ ಸಭಾಪತಿ ಎಸ್ ಜಯಕರ ಶೆಟ್ಟಿಯವರು ನೆರವೇರಿಸಿದರು. ಉದ್ಘಾಟನೆಯ ಸಂದರ್ಭದಲ್ಲಿ ಅಭಯ ಹಸ್ತ ಚಾರಿಟೇಬಲ್ ಸಂಸ್ಥೆಯ ಸತೀಶ ಸಾಲಿಯಾನ್, ಗೆಳೆಯರ ಬಳಗ ಆನಗಳ್ಳಿಯ ಅಧ್ಯಕ್ಷ ಗಣೇಶ ಕೆ ಕಾಂಚನ್, ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುರಭಿ ಪೈ, ರೆಡ್ ಕ್ರಾಸನ ಶಿವರಾಮ ಶೆಟ್ಟಿ, ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ ಹಾಗೂ ಪ್ರಮೋದ್ ಮಧ್ವರಾಜ್ ಅಭಿಮಾನಿ ಬಳಗದ ಸದಸ್ಯ, ಈ ರಕ್ತದಾನ ಶಿಬಿರದ ಸಂಘಟಕ ಶರತ್ ಕಾಂಚನ್ ಹಾಗೂ ಅನೇಕ ಮಂದಿ ಪ್ರಮೋದ್ ಮಧ್ವರಾಜ್ ಅಭಿಮಾನಿಗಳು ಉಪಸ್ಥಿತರಿದ್ದರು. ರಕ್ತ ದಾನ ಶಿಬಿರದಲ್ಲಿ ಅಭಿಮಾನಿಗಳು ಉತ್ಸಾಹದಿಂದ ಪಾಲ್ಗೊಂಡು 69 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

