

ಬಸ್ರೂರು ಸೈಂಟ್ ಫಿಲಿಪ್ ನೇರಿ ಚರ್ಚ್ ನಲ್ಲಿ ಯೇಸು ಕ್ರಿಸ್ತರ ಅಜ್ಜಿ ಅಜ್ಜ ಸಂತ ಅನ್ನಾ ಮತ್ತು ಸಂತ ಜೊಕಿಮ್ ಹಬ್ಬದ ಪ್ರಯುಕ್ತ ಹಿರಿಯರ ದಿನಾಚರಣೆ ಆಚರಿಸಿ ಯೋಗಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸಿ ಚರ್ಚಿನ ಧರ್ಮಗರುಗಳಾದ ಫಾದರ್ ರೋಯ್ ಶುಭ ಹಾರೈಸಿದರು ಅತಿಥಿ ಗುರುಗಳಾಗಿ ಕರ್ನಾಟಕ ಪ್ರಾಂತೀಯ ಸೆಮಿನರಿ ಮೂಡುಬೆಳ್ಳೆ ಇದರ ನಿರ್ದೆಶಕರಾದ ಬೊನಿಪಾಸ್ ಪಿಂಟೊ ‘ ನಾವು ಹಿರಿಯರ ಸಲಹೆ ಗೌರವಿಸಬೇಕು ಮತ್ತು ಆಶೀರ್ವಾದ ಪಡೆದು ಮುನ್ನಡೆಯಬೇಕು ಅವರಲ್ಲಿ ಇರುವ ಅಪಾರ ಜ್ಞಾನ ಮುಂದಿನ ಪೀಳಿಗೆಗೆ ಬಳಸಿಕೊಳ್ಳ ಬೇಕು’ ಎಂದು ಸಂದೇಶ ನೀಡಿದರು.ಪವಿತ್ರ ಬಲಿದಾನದ ಪ್ರಾರ್ಥನ ವಿಧಿಯನ್ನು ಹಿರಿಯರು ನಡೆಸಿಕೊಟ್ಟರು. ದಿಯಾಕೊನ್ ಕೆನಾನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು ಅನೇಕ ಸಂಖ್ಯೆಯಲ್ಲಿ ಹಿರಿಯರು ಉಪಸ್ಥಿತರಿದ್ದು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.










