

ಕುಂದಾಪುರ; “ಮಾತುಗಳು ಸಂಸ್ಕ್ರತ ಭೂಯಿಷ್ಠವಾಗಿದ್ದರೆ ಸಭ್ಯ. ಯಾವುದೇ ಭಾಷೆಯ ಮೇಲೆ ಹಿಡಿತ ಬರಬೇಕಾದರೆ ಮೂಲಬೇರು ಸರಿಯಾಗಿರಬೇಕು. ಅಮೂಲ್ಯವಾದ ಜ್ಞಾನ ದಿಂದ ಪ್ರಯತ್ನಶಾಲಿಗಳಾಗಿ ಜಗತ್ತಿನ ಹಲವು ಸಂಗತಿಗಳನ್ನು ಪಡೆದುಕೊಳ್ಳಬಹುದು. ಮಾತೃಸ್ಥಾನದಲ್ಲಿ ಕಂಗೊಳಿಸುವ ಸಂಸ್ಕ್ರತದ ಅಭ್ಯಾಸವು ಪರಿಪೂರ್ಣ ಜ್ಞಾನ ಸಂಗ್ರಹಕ್ಕೆ ತುಂಬ ಸಹಕಾರಿಯಾಗುತ್ತದೆ ” ಎಂದು ಕುಂದಾಪುರದ ಆರ್. ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ ಸಂಸ್ಕ್ರತೋತ್ಸವ ‘ಶ್ರಾವಣಿ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೋಟದ ವಿವೇಕ ಪದವಿ ಪೂರ್ವ ಕಾಲೇಜಿನ ಸಂಸ್ಕ್ರತ ಉಪನ್ಯಾಸಕರಾದ ಶ್ರೀ ಬಾಲಕೃಷ್ಣ ನಕ್ಷತ್ರಿ ಯವರು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ನವೀನ್ ಕುಮಾರ ಶೆಟ್ಟಿಯವರು ‘ಉನ್ನತ ಬುದ್ಧಿಮತ್ತೆಯ ವಿದ್ಯಾರ್ಥಿಗಳು ಆಯ್ದುಕೊಳ್ಳುವ ಭಾಷೆಯೆಂದಿದ್ದ ಸಂಸ್ಕ್ರತವು ಅಭಿವ್ಯಕ್ತಿಯಲ್ಲಿ ಸರಳೀಕರಣಗೊಂಡು ಹೆಚ್ಚೆಚ್ಚು ವಿದ್ಯಾರ್ಥಿಗಳ ಆಯ್ಕೆಯ ವಿಷಯವಾಗುತ್ತಿರುವುದು ಸಂತಸ ‘ ಎಂದು ತಿಳಿಸಿದರು.
ಕಳೆದ ಶೈಕ್ಷಣಿಕ ವರ್ಷದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಂಸ್ಕ್ರತದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿನಿ ಅಕ್ಷಯಾ ಹಾಗೂ ಪ್ರಥಮ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶತ ಅಂಕ ಪಡೆದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.
ಸಂಸ್ಕ್ರತ ವಿಭಾಗದ ಮುಖ್ಯಸ್ಥರಾದ ರವಿ ಉಪಾಧ್ಯರವರು ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಅದಿತಿ ಅಡಿಗ ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ಅನನ್ಯ ಸಿ.ಶೆಟ್ಟಿ ಧನ್ಯವಾದ ಸಲ್ಲಿಸಿದರು.

