

ಪಡುಕೋಣೆ:- ಸಂತ ಅಂತೋನಿ ಚರ್ಚಿನಲ್ಲಿ ಹಿರಿಯ ನಾಗರಿಕರ ದಿನಾಚರಣೆ. ದಿನಾಂಕ 27. 7. 26 ರಂದು ಸಂತ ಜೊಕಿಮ್ ಮತ್ತು ಸಂತ ಅನ್ನಾ ಮಾತೆಯ ಹಬ್ಬದ ದಿನವಾದ ಜುಲೈ 26 ರಂದು ಧರ್ಮ ಗುರುಗಳಾದ ವಂ। ಫಾ। ಪ್ರಾನ್ಸಿಸ್ ಕರ್ನೆಲಿಯೊರವರು ದಿವ್ಯ ಬಲಿಪೂಜೆಯನ್ನು ಅರ್ಪಿಸಿದರು. ಬಲಿಪೂಜೆಯಲ್ಲಿ ಹಿರಿಯ ನಾಗರಿಕರು, ಕುಟುಂಬ ಅಯೋಗಾದ ಸದಸ್ಯರು ಐ.ಸಿ.ವೈ.ಎಮ್. ಸಂಘದ ಯುವಕ – ಯುವತಿಯರು, ಚರ್ಚಿನ ಭಕ್ತಾದಿಗಳೆಲ್ಲರೂ ಪಾಲ್ಗೊಂಡರು. ಬಲಿ ಪೂಜೆಯ ಪ್ರವಚನದಲ್ಲಿ ಧರ್ಮಗುರುಗಳು, ಜಗತ್ಗುರುಗಳಾದ ಪೋಪ್ ಲಿಯೋ ರವರು ಈ ಸಂದರ್ಭದಲ್ಲಿ ಪ್ರಕಟಿಸಿದ ಹಿರಿಯರಿಗೆ ಸಂಬಂಧಪಟ್ಟ ಪರಿಪತ್ರವನ್ನು ಉಲ್ಲೇಖಿಸಿ ಸಂದೇಶವನ್ನು ನೀಡಿದರು. ಅದರ ಜೊತೆಗೆ ಸಂತ ಜೊಕಿಮ್ ಮತ್ತು ಸಂತ ಅನ್ನಾರವರ ಬಗ್ಗೆ ಕೂಡ ಪ್ರಸ್ತಾಪಿಸಿ, ಸಂತ ಜೊಕಿಮ್ ರವರು ನಮಗೆ ರಕ್ಷಣೆ, ನೀಡುವರು. ಸಂತ ಅನ್ನಾ ನಮ್ಮ ಮೇಲೆ ಕರುಣೆ, ದಯೆ ತೋರುವರು. ಎಂದು,ಅವರ ಆದರ್ಶ ಜೀವನದ ಬಗ್ಗೆ ಉತ್ತಮ ಸಂದೇಶವನ್ನು ನೀಡಿದರು.
ಚರ್ಚಿನ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮವನ್ನು ಐ.ಸಿ.ವೈ.ಎಮ್. ಸಂಘದವರು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ ಸ್ವಾಗತ ನೃತ್ಯ, ಹಾಗೂ ಇತರ ವಿವಿಧ ವಿನೋದಾ ವಳಿಗಳನ್ನು ಪ್ರದರ್ಶಿಸಿ, ಹಿರಿಯರಿಗೆ ಕೆಲವು ಆಟಗಳನ್ನು ಆಡಿಸಿದರು. ನಂತರ ವೇದಿಕೆ ಕಾಯ೯ಕ್ರಮ ಪ್ರಾರಂಭಿಸಿ, , ಮಾಜಿ ಪಾಲನ ಮಂಡಳಿ ಉಪಾಧ್ಯಕ್ಷ ಕೆನಡಿ ಪಿರೇರಾರವರು ಮಾತನಾಡಿ ‘ನಮ್ಮ ಮನೆಯ ಹಿರಿಯ ವ್ಯಕ್ತಿಗಳು ನಮ್ಮ ಕುಟುಂಬದ ದೊಡ್ಡ ಆಸ್ತಿ, ಅವರವರ ಮನೆಯ ಹಿರಿಯವರನ್ನು ಅವರವರೇ ಗೌರವ ನೀಡಿ ಚೆನ್ನಾಗಿ ನೋಡಿಕೊಳ್ಳಬೇಕು. ಯಾರ ಮನೆಯಲ್ಲಿ ತಂದೆ, ತಾಯಿ, ಹಿರಿಯವರನ್ನು ಪ್ರೀತಿ, ಗೌರವದಿಂದ ನೋಡಿ ಕೊಳ್ಳುವರೋ, ಆ ಮನೆಯೇ ಇಂದು ಭಾಗ್ಯವಂತ ಅಂದರೆ ಭಗವಂತನ ಕೃಪೆ, ಪಡೆದ ಅಧ್ರಷ್ಟವಂತ ಕುಟುಂಬ’ ಎಂದು ಸಂದೇಶ ನೀಡಿದರು. ಕಾರ್ಯಕ್ರಮದ ಅಧ್ಯಕ್ಷರಾದ ವಂ। ಫಾ। ಪ್ರಾನ್ಸಿಸ್ ಕರ್ನೆಲಿಯೊ ‘ನಾನು ಗಮನಿಸಿದ ಪ್ರಕಾರ ಪಡುಕೋಣೆಯಲ್ಲಿ ಹೆಚ್ಚಿನ ಮನೆಗಳಲ್ಲಿ ಹಿರಿಯ ವ್ಯಕ್ತಿಗಳು ತಮ್ಮ ತಮ್ಮ ಕುಟುಂಬದಲ್ಲಿ ಅವರವರ ಮಕ್ಕಳ ಜೊತೆಯಲ್ಲಿಯೇ ಇದ್ದಾರೆ. ಇದರ ಅರ್ಥ ನಮ್ಮ ಹಿರಿಯವರು ನಮಗೆ ಬೇಕು ಎಂಬ ಅರ್ಥ ವನ್ನು ಸೂಚಿಸುತ್ತದೆ. ಇದು ಸಂತೋಷ, ಅಭಿಮಾನ, ನಿಮ್ಮ ಕುಟುಂಬಗಳಿಗೆ ಗೌರವ’ ಎಂದರು. ಮುಖ್ಯ ಅತಿಥಿಗಳಾಗಿ ಕಾನ್ವೆಂಟಿನಾ ಸುಪಿರಿಯರ್ ಸಿಸ್ಟರ್ ಪಾವನಾ, ಪಾಲನಾ ಮಂಡಳಿಯ ಕಾರ್ಯದರ್ಶಿ ಸಿಂತಿಯಾ ವಾಜ್, ಸರ್ವ ಆಯೋಗಗಳಾ ಅಧ್ಯಕ್ಷೆ ಟ್ರಿಜಾ ಸಿಕ್ವೇರಾ, ಕುಟುಂಬ ಆಯೋಗಾದ ಅಧ್ಯಕ್ಷೆ ಫಿಲೋಮಿನಾ ಡಿಸೋಜ, ಉಪಸ್ಥಿತರಿದ್ದರು.
ಅತೀ ಹಿರಿಯ ನಾಗರಿಕರಾದ ವೆಲೆನ್ಸಿಯಸ್ ಪಿರೇರಾರವರನ್ನು ಸನ್ಮಾನಿಸಲಾಯಿತು. ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ಬಹುಮಾನವನ್ನು ನೀಡಲಾಯಿತು. ಐ.ಸಿ.ವೈ.ಎಮ್. ಸದಸ್ಯೆ ಶೈನಿ ಡಿ ಆಲ್ಮೇ ಡಾ ಸ್ವಾಗತಿಸಿದರು. ಐ.ಸಿ. ವೈ.ಎಮ್. ನ ಜೋವಿಯೆಲ್ ಫೆರ್ನಾಂಡಿಸ್ ಧನ್ಯವಾದ ಅರ್ಪಿಸಿದರು, ಅಧ್ಯಕ್ಷೆ ರಿಯಾ ಫೆರ್ನಾಂಡಿಸ್ ನಿರೂಪಿಸಿದರು. ಕುಟುಂಬ
ಆಯೋಗದ ಸದಸ್ಯರೆಲ್ಲರೂ ಕಾರ್ಯಕ್ರಮಕ್ಕೆ ಫೋತ್ಸಾಹಿಸಿದರು. ಹಿರಿಯರು ಕೃತಜ್ಞತೆ ಸಲ್ಲಿಸಿದರು


























