ಮನುಷ್ಯ ಆಧ್ಯಾತ್ಮದ ಕಡೆ ಗಮನ ಹರಿಸಬೇಕು:ಧರ್ಮದರ್ಶಿ ಎಸ್.ರಮೇಶ್ ಬಾಬು

ಶ್ರೀನಿವಾಸಪುರ: ಈ ಸಂದರ್ಭದಲ್ಲಿ, ಮನುಷ್ಯ ಆಧ್ಯಾತ್ಮದ ಕಡೆ ಗಮನ ಹರಿಸಬೇಕು ಎಂದು ಅರಿಕೆರೆ ಗ್ರಾಮದ ನಾಗನಾಥೇಶ್ವರ ದೇವಾಲಯದ ಧರ್ಮದರ್ಶಿ ಎಸ್.ರಮೇಶ್ ಬಾಬು ಹೇಳಿದರು.
ತಾಲ್ಲೂಕಿನ ಅರಿಕೆರೆ ಗ್ರಾಮದ ನಾಗನಾಥೇಶ್ವರ ದೇವಾಲಯದ ಮಹಾದ್ವಾರ ನಿರ್ಮಾಣ ಕಾಮಗಾರಿಗೆ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಬದಲಾದ ಪರಿಸ್ಥಿತಿಯಲ್ಲಿ ಜನರಲ್ಲಿ ಆಸ್ತಿಕತೆ ಹೆಚ್ಚುತ್ತಿದೆ. ದೇವಾಲಯಗಳಿಗೆ ಭೇಟಿ ನೀಡುವ ಜನರ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ಅಗತ್ಯವಾದ ಮೂಲ ಸೌಕರ್ಯ ಕಲ್ಪಿಸಬೇಕಾಗಿದೆ ಎಂದು ಹೇಳಿದರು.
ಗ್ರಾಮದಲ್ಲಿನ ಪುರಾತನ ನಾಗನಾಥೇಶ್ವರ ದೇವಾಲಯ, ಶ್ರೀರಾಮ ಮಂದಿರ ಹಾಗೂ ಗ್ರಾಮ ದೇವತೆ ಚೌಡೇಶ್ವರಿ ಮಾತೆ ದೇವಾಲಯಗಳಿಗೆ ರೂ.20 ಲಕ್ಷ ವೆಚ್ಚದಲ್ಲಿ ಒಂದೇ ಮಹಾದ್ವಾರ ನಿರ್ಮಿಸಲಾಗುತ್ತಿದೆ. ದೇವಾಲಯ ಅಭಿವೃದ್ಧಿಗೆ ಪೂರಕವಾದ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ರಾಜಣ್ಣ ಮಾತನಾಡಿ, ದೇವಾಲಯಗಳು ನಗರ ಕೇಂದ್ರೀಕರಣಗೊಳ್ಳುತ್ತಿವೆ. ದೇವಾಲಗಳಲ್ಲೂ ಲಾಭಾಕಾಂಕ್ಷೆ ಹೆಚ್ಚುತ್ತಿದೆ. ಆದರೆ ಅರಿಕೆರೆ ಗ್ರಾಮದ ದೇವಾಲಯಗಳು9 ಅದಕ್ಕೆ ಭಿನ್ನವಾಗಿವೆ. ಜನಪರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರರಲ್ಲಿ ಧಾರ್ಮಿಕ ಭಾವನೆ ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು.
ಮುಖಂಡರಾದ ಜಗದೀಶ್, ಹರಿ, ಪ್ರೇಮ್‍ತೇಜ್, ಜಗನ್ ಇದ್ದರು.

ಶ್ರೀನಿವಾಸಪುರವನ್ನು ನಾಲ್ಕು ದಶಕಗಳಿಂದ ಪ್ರತಿನಿಧಿಸುತ್ತಿರುವ ರಾಜಕಾರಣಿಗಳು ಅಭಿವೃದ್ದಿಗೆ ಯಾವುದೇ ಕೊಡುಗೆ ನೀಡಿಲ್ಲ : ಮುನಿಸ್ವಾಮಿ

ಶ್ರೀನಿವಾಸಪುರ:- ಶ್ರೀನಿವಾಸಪುರವನ್ನು ನಾಲ್ಕುದಶಕಗಳಿಂದ ಪ್ರತಿನಿಧಿಸುತ್ತಿರುವ ಇಲ್ಲಿನ ಸಂಪ್ರದಾಯಿಕ ಎದುರಾಳಿ ರಾಜಕಾರಣಿಗಳು ತಾಲೂಕಿನ ಅಭಿವೃದ್ದಿಗೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಕೋಲಾರದ ಸಂಸದ ಮುನಿಸ್ವಾಮಿ ಶ್ರೀನಿವಾಸಪುರದ ಹಾಲಿ ಮತ್ತು ಮಾಜಿ ಶಾಸಕರ ವಿರುದ್ದ ಪರೋಕ್ಷವಾಗಿ ಆರೋಪ ಮಾಡಿದರು.
ಪಟ್ಟಣದ ಮಾರುತಿ ಸಭಾಭವನದಲ್ಲಿ ಭಾನುವಾರ ಬಿಜೆಪಿ ಪಕ್ಷದವತಿಯಿಂದ ಜನೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಇಷ್ಟು ವರ್ಷಗಳಿಂದ ಕ್ಷೇತ್ರ ಪ್ರತಿನಿಧಿಸುತ್ತಿರುವರು ಇಲ್ಲಿಗೆ ಯಾವುದೇ ಉನ್ನತ ಮಟ್ಟದ ಶೈಕ್ಷಣಿಕ ಸಂಸ್ಥೆಗಳಾಗಲಿ ಕಾರ್ಖಾನೆಗಳಾಗಲಿ, ಗುಣಮಟ್ಟದ ಆಸ್ಪತ್ರೆ ಇಲ್ಲ ಯಾವುದೆ ಕಾರ್ಯಕ್ರಮ ತಾರದೆ ಜನಸಾಮಾನ್ಯರಿಗೆ ಅನಕೂಲ ಅಗುವಂತ ಶಾಶ್ವತ ಅಭಿವೃದ್ದಿಗಳನ್ನು ಮಾಡದೆ ಇರುವುದು ವಿಷಾದನೀಯ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ವ್ಯಸ್ಥಿತವಾಗಿ ದಲಿತರನ್ನು ತುಳಿಯಲಾಗುತ್ತಿದೆ ಎಂದು ಆರೋಪಿಸಿದರು
ಯಾರು ಎನೇ ಹೇಳಿದರು ಕೆ.ಸಿ.ವ್ಯಾಲಿ ಯೋಜನೆಯ ಎರಡನೆ ಹಂತದಲ್ಲಿ ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಹಣ ಬಿಡುಗಡೆ ಮಾಡಿದ್ದು
ಬಿಜೆಪಿ ಸರ್ಕಾರ ಈ ಬಗ್ಗೆ ಯಾರು ಏನೇ ಮಾತನಾಡಲಿ ಸಾಧನೆ ಬಿಜೆಪಿಯದೆ ಎಂದು ಒತ್ತಿ ಹೇಳಿದರು.
ಡಿಸಿಸಿ ಬ್ಯಾಂಕಿನಿಂದ ನೀಡುತ್ತಿರುವ ಸ್ತ್ರೀ ಶಕ್ತಿ ಸಂಘಗಳ ಸಾಲವನ್ನು ಯಾರು ಯಾರ ಮನೆಯಿಂದಲೂ ದುಡ್ಡು ತಂದುಕೊಡುತ್ತಿಲ್ಲ ಕೇಂದ್ರ ಸರ್ಕಾರದ ನಬಾರ್ಡ ಯೋಜನೆಯ ಹಣವನ್ನು ತಂದು ಸ್ತ್ರೀ ಶಕ್ತಿ ಸಂಘಗಳಿಗೆ ನೀಡಲಾಗುತ್ತಿದೆ ಜೊತೆಗೆ ಸಾಲ ನೀಡುತ್ತೇವೆ ಎಂದು ಮಹಿಳೆಯರನ್ನು ಕರೆತಂದು ಮತಯಾಚಿಸುತ್ತಾರೆ ಎಂದು ಆಪಾದಿಸಿದರು.

ಡಿಸಿಸಿ ಬ್ಯಾಂಕ್ ಸಾಲ ವಿತರಿಸಲು ರಾಹುಲ್ ಗಾಂಧಿ ಯಾರು?

ರಾಹುಲ್ ಗಾಂಧಿಯನ್ನು ಕರೆತಂದು ಕ್ಷೇತ್ರದಲ್ಲಿ ಡಿಸಿಸಿ ಬ್ಯಾಂಕ್ ಸಾಲ ಯೋಜನೆಯನ್ನು ವಿತರಿಸುವುದಾಗಿ ಹೇಳುತ್ತಾರೆ ಸಾಲ ವಿತರಿಸಲು ರಾಹುಲ್ ಗಾಂಧಿ ಯಾರು ಅವರಿಗೆ ಗೌರವ ಇದ್ದರೆ ಇಲ್ಲಿಗೆ ಸಾಲ ವಿತರಣೆಗೆ ಬರಬಾರದು ಎಂದು ವಿಧಾನಪರಿಷತ್ ಮುಖ್ಯ ಸಚೇತಕ ವೈ.ಎ.ನಾರಯಣಸ್ವಾಮಿ ಹೇಳಿದರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಖೆಡ್ಡಾ ತೋಡಿದ್ದಾಯಿತು ಈಗ ರಾಹುಲ್ ಗಾಂದಿಗೆ ಖೆಡ್ಡಾ ತೋಡಲು ಹೋರಟಿದ್ದಾರೆ ಎಂದು ಶಾಸಕ ರಮೇಶ್ ಕುಮಾರ್ ವಿರುದ್ದ ಪರೋಕ್ಷವಾಗಿ ವ್ಯಂಗ್ಯವಾಡಿದರು. ರಾಜ್ಯ ಕಾಂಗ್ರೆಸ ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ರೈಲ್ವೆ ಹಳಿಗಳಿದ್ದಂತೆ ಎರಡು ರೈಲ್ವೆ ಹಳಿಗಳು ಒಂದಾದರೆ ರೈಲು ಒಡಲು ಸಾಧ್ಯವಿಲ್ಲವೋ ಸಿದ್ದರಾಮಯ್ಯ-ಶಿವಕುಮಾರ್ ಯಾವತ್ತು ಒಂದಾಗಲ್ಲ ಎಂದರು.
ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಮಾತನಾಡಿ ಬಿಜೆಪಿ ಸರ್ಕಾರದ ಸಾಧನೆ ಕುರಿತಾಗಿ ಸೆಪ್ಟಂಬರ್ 8 ರಂದು ಆಯೋಜಿಸಿರುವ ಜನೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಜನತೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದರು.
ಸಭೆಯಲ್ಲಿ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್,ಕೋಲಾರದ ಮಾಜಿ ಶಾಸಕ ವರ್ತರೂಪ್ರಕಾಶ್,ಮುಖಂಡರಾದ ಕೇಶವಪ್ರಸಾದ್, ತಾಲೂಕು ಅಧ್ಯಕ್ಷ ಆಶೋಕ್ ರೆಡ್ಡಿ,ಪುರಸಭೆ ಸದಸ್ಯ ನಲ್ಲಪಲ್ಲಿರೆಡ್ಡೆಪ್ಪ,ರಾಮಾಂಜಿ,ಲಕ್ಷ್ಮಣಗೌಡ,ವೆಂಕಟಮುನಿಯಪ್ಪ,ಎಸ್.ಬಿ.ಮುನಿವೆಂಕಟಪ್ಪ ಮುಂತಾದವರು ಇದ್ದರು.

ಅಥ್ಲೆಟಿಕ್ಸ್ ಅಸೋಸಿಯೇಷನ್‍ನಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆ: ಧ್ಯಾನಚಂದ್ ಯುವ ಕ್ರೀಡಾಪಟುಗಳ ಆದರ್ಶವಾಗಲಿ – ಬಿಂದುರಾಣಿ

ಕೋಲಾರ: ಹಾಕಿ ಮಾಂತ್ರಿಕ ಧ್ಯಾನಚಂದ್ ಆದರ್ಶದಲ್ಲಿ ಸಾಗುವ ಮೂಲಕ ಯುವ ಕ್ರೀಡಾಪಟುಗಳು ಹೆಮ್ಮೆಯ ಕ್ರೀಡಾಪಟುಗಳಾಗಿ ದೇಶಕ್ಕೆ ಕೀರ್ತಿ ತರಬೇಕೆಂದು ಅಂತರಾಷ್ಟ್ರೀಯ ಅಥ್ಲೆಟಿಕ್ ಬಿಂದುರಾಣಿ ಹೇಳಿದರು.
ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಕಾರ್ಯಕ್ರಮವನ್ನು ತ್ರಿವರ್ಣದ ಬಲೂನ್‍ಗಳನ್ನು ಹಾರಿ ಬಿಟ್ಟು ಹಾಕಿ ಮಾಂತ್ರಿಕ ಧ್ಯಾನಚಂದ್‍ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡುತ್ತಿದ್ದರು.
ಕಿರಿಯ ವಯಸ್ಸಿನಲ್ಲಿಯೇ ಕ್ರೀಡಾ ಕ್ಷೇತ್ರವನ್ನು ಪ್ರವೇಶಿಸಿದ ಧ್ಯಾನಚಂದ್ ಸೌಲಭ್ಯ ಸವಲತ್ತು ತರಬೇತಿಯ ಕೊರತೆ ನಡುವೆಯೂ ಹಾಕಿಯಲ್ಲಿ ಇಡೀ ವಿಶ್ವವೇ ಗಮನಿಸುವಂತ ಕ್ರೀಡಾಪಟುವಾಗಿ ಬೆಳೆದರು. ಈಗಿನ ಕ್ರೀಡಾಪಟುಗಳು ಸರಕಾರದ ಯೋಜನೆ ಮತ್ತು ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಕ್ರೀಡಾಪಟುಗಳಾಗಬೇಕೆಂದು ಕಿವಿಮಾತು ಹೇಳಿದರು.
ಅಥ್ಲೆಟಿಕ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಕೆ.ಜಯದೇವ್ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಕ್ರೀಡಾಚಟುವಟಿಕೆಗಳನ್ನು ಹೆಚ್ಚಿಸುವ ಸಲುವಾಗಿ ಸರಕಾರ ಈಗಾಗಲೇ ಬಿಡುಗಡೆ ಮಾಡಿರುವ ಅನುದಾನದಲ್ಲಿ ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಶೀಘ್ರದಲ್ಲಿಯೇ ಅತ್ಯಾಧುನಿಕ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಿ ಯುವ ಕ್ರೀಡಾಪಟುಗಳಿಗೆ ಅತ್ಯುತ್ತಮ ತರಬೇತಿ ಸಿಗುವಂತೆ ಮಾಡಲಾಗುವುದು ಎಂದರು.
ಚಿಕ್ಕಬಳ್ಳಾಪುರ ಅಥ್ಲೆಟಿಕ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಮಂಚನಬೆಲೆ ಶ್ರೀನಿವಾಸ್ ಮಾತನಾಡಿ, ಹಾಕಿ ಮಾಂತ್ರಿಕ ಧ್ಯಾನಚಂದ್ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು, ಹಿಟ್ಲರ್ ಅವರಿಗೆ ಮೇಜರ್ ಹುದ್ದೆ ನೀಡುವ ಆಮಿಷ ತೋರಿದರು ಭಾರತ ದೇಶವನ್ನು ಪ್ರತಿನಿ„ಸುವ ಅವಕಾಶವನ್ನು ಕಳೆದುಕೊಳ್ಳದ ಅಪ್ರತಿಮ ದೇಶಪ್ರೇಮಿ ಧ್ಯಾನಚಂದ್ ಆಗಿದ್ದರೆಂದು ವರ್ಣಿಸಿದರು.
ಜಿಲ್ಲಾ ಭಾರತ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಧ್ಯಾನಚಂದ್‍ರಂತ ಮತ್ತೊರ್ವ ಹಾಕಿ ಕ್ರೀಡಾಪಟು ಇದುವರೆವಿಗೂ ಹುಟ್ಟಿಲ್ಲ, ಹಾಕಿ ಕ್ರೀಡೆಯಲ್ಲಿ ಅವರು ಮಾಡಿರುವ ಸಾಧನೆ ಮೇರು ಶಿಖರವಾಗಿ ಉಳಿದುಬಿಟ್ಟಿದೆ. ಅನೇಕ ದಂತಕಥೆಗಳು ಅವರ ಬಗ್ಗೆ ಇಂದಿಗೂ ಉಳಿದುಕೊಂಡಿರುವುದು ಅವರ ಕ್ರೀಡಾ ಸಾಧನೆಗೆ ಕನ್ನಡಿಯಾಗಿದೆ.ಇಂತ ಮಹನೀಯರ ಆದರ್ಶದಲ್ಲಿ ಕ್ರೀಡಾಪಟುಗಳು ದೇಶದ ಕೀರ್ತಿ ಪತಾಕೆ ಹಾರಿಸುವಂತಾಗಬೇಕೆಂದರು.
ಕಾರ್ಯಕ್ರಮದಲ್ಲಿ ಕುಡಾ ಅಧ್ಯಕ್ಷ ವಿಜಯಕುಮಾರ್, ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಜಗನ್, ಬೆಂಗಳೂರು ಉತ್ತರ ವಿವಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಕುಮುದಾ, ಜಿಲ್ಲಾ ದೈಹಿಕ ಶಿಕ್ಷಣಾ„ಕಾರಿ ಮಂಜುನಾಥ್, ಕ್ರೀಡಾಪಟುಗಳಾದ ನಿರಂಜನ್, ದೈಹಿಕ ಶಿಕ್ಷಕ ಮುರಳಿ ಮೋಹನ್, ಅರುಣ್‍ಕುಮಾರ್, ಅಂಬರೀಷ್, ತರಬೇತುದಾರ ವೆಂಕಟೇಶ್ ಇತರರು ಹಾಜರಿದ್ದರು.


ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕ್ರೀಡಾದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಕ್ರೀಡೆಗಳಿಗೆ ಬಿಂದುರಾಣಿ ಚಾಲನೆ ನೀಡಿದರು.
ಬೆಂಗಳೂರು ಉತ್ತರ ವಿವಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಮತ್ತು ಕ್ರೀಡಾ ಹಾಸ್ಟೆಲ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೋಲಾರ ಡಿಸಿಸಿ ಬ್ಯಾಂಕ್ ವಿರುದ್ದ ನಿರಾಧಾರವಾದ ಆರೋಪ ಮಾಡುವುದನ್ನು ಬಿಡಿ:ಜಾತಿ,ಧರ್ಮ,ಪಕ್ಷ ಕೇಳಿ ಯಾರಿಗಾದರೂ ಸಾಲ ನೀಡಿದ್ದರೆ ತಿಳಿಸಿ-ಅನಿಲ್ ಕುಮಾರ್ ಸವಾಲು

ಕೋಲಾರ:- ಡಿಸಿಸಿ ಬ್ಯಾಂಕ್ ವಿರುದ್ದ ದಿನನಿತ್ಯ ಆರೋಪಗಳು ಕೇಳಿಬರುತ್ತಿವೆ, ಸಾಲಕ್ಕೆ ಬಂದ ಯಾರನ್ನಾದರೂ ನಿಮ್ಮ ಜಾತಿ,ಪಕ್ಷ,ಧರ್ಮ ಯಾವುದೆಂದು ಕೇಳಿದ ನಿದರ್ಶನವಿದ್ದರೆ ಕೂಡಲೇ ತಿಳಿಸಲಿ, ನಿಯಮಾನುಸಾರ ಸಾಲ ಕೇಳಿ ಬಂದ ಯಾರಿಗಾದರೂ ಸಾಲ ನೀಡಿಲ್ಲ ಎಂಬ ದೂರುಗಳಿದ್ದರೆ ತಿಳಿಸಿ ಎಂದು ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಸವಾಲು ಹಾಕಿದರು.
ತಾಲೂಕಿನ ವಕ್ಕಲೇರಿಯಲ್ಲಿ ಸೋಮವಾರ ರೇಷ್ಮೆ ಬೆಳಗಾರರ ರೈತರ ಸೇವಾ ಸಹಕಾರ ಸಂಘದಿಂದ ರೈತ ಭವನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ, ರೈತರಿಗೆ ಕೆಸಿಸಿ ಸಾಲ ವಿತರಿಸಿ ಅವರು ಮಾತನಾಡಿ, ಬ್ಯಾಂಕ್ ಬಗ್ಗೆ ಟೀಕೆ ಮಾಡುವ ಮಹಾನುಭಾವರು ಯಾರೇ ಆಗಲಿನಿರಾಧಾರವಾದ ಹೇಳಿಕೆ ನೀಡಿ ನಗೆಪಾಟಲಿಗೆ ಈಡಾಗಬೇಡಿ ಎಂದು ಕಿವಿಮಾತು ಹೇಳಿದರು.
ಗೋವಿಂದಗೌಡರ ನೇತೃತ್ವದ ಆಡಳಿತ ಮಂಡಳಿ ರೈತರ ಸ್ತ್ರೀ ಶಕ್ತಿ ಸಂಘಗಳ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಿದ್ದೇವೆ, ನಮ್ಮ ಕೆಲಸ ಪಾರದರ್ಶನ ಹಾಗೂ ಪ್ರಾಮಾಣಿಕವಾಗಿವೆ ಇಂತಹ ಸಂದರ್ಭದಲ್ಲಿ ಎದುರಾಗುವ ನಿರಾಧಾರ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೇ ಕೆಲಸ ಮಾಡುತ್ತಿದ್ದೇವೆ ಎಂದರು.
ನರ್ಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕ್‍ನಿಂದ ಸಾಲ ಕೊಡತ್ತಾರೆ ಅಷ್ಟೇ ನಮಗೆ ಯಾವುದೇ ಅನುದಾನ ಅಲ್ಲ, ಆರೋಪ ಮಾಡುವವರು ಮೊದಲು ಅದನ್ನು ಅರ್ಥಮಾಡಿಕೊಳ್ಳಬೇಕು ಈ ಸೊಸೈಟಿ ಬೆಳವಣಿಗೆಗೆ ರೈತ ಭವನ ಮುಂದಿನ ದಿನಗಳಲ್ಲಿ ರೈತರ ಅಭಿವೃದ್ಧಿಗೆ ಪೂರಕವಾಗಲಿದೆ ಈ ಭವನಕ್ಕೆ ನನ್ನ ಎಂಎಲ್ಸಿ ಅನುದಾನದಲ್ಲಿ 10 ಲಕ್ಷ ರೂ ನೀಡಲಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.

ರೈತಭವನಕ್ಕೆ ಮಾಕೊಂಡಪ್ಪ ಹೆಸರಿಡಿ


ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಸಹಕಾರಿ ಕ್ಷೇತ್ರದಲ್ಲಿ ಅತಿ ದೊಡ್ಡ ಇತಿಹಾಸ ಹೊಂದಿರುವ ವಕ್ಕಲೇರಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಂಘದ ಸದಸ್ಯತ್ವ ನೀಡಬೇಕು, ಈಗ ನಿರ್ಮಿಸುತ್ತಿರುವ ರೈತ ಭವನಕ್ಕೆ ಸೊಸೈಟಿ ಮಾಜಿ ಅಧ್ಯಕ್ಷ ಪ್ರಗತಿಪರ ರೈತ ದಿವಂಗತ ಮಾರ್ಕೊಂಡಪ್ಪ ಅವರ ಹೆಸರು ಇಡುವಂತೆ ಕರೆ ನೀಡಿದರು.
ಪ್ರತಿಯೊಂದು ಸೊಸೈಟಿಯೂ ಒಂದೊಂದು ಬ್ಯಾಂಕಾಗಬೇಕು, ಆರ್ಥಿಕವಾಗಿ ಸಬಲಗೊಳ್ಳಲು ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದ ಅವರು, ಕೇವಲ ನಿಮ್ಮ ವಹಿವಾಟು ಪಡಿತರ ವಿತರಣೆಗೆ ಸೀಮಿತವಾಗದೇ ರೈತರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳು ಒಂದೇ ಸೂರಿನಲ್ಲಿ ಸಿಗುವಂತೆ ಮಾಡಿ ಎಂದು ಸಲಹೆ ನೀಡಿದರು.

ರೈತರಿಗೆ ತಂತ್ರಜ್ಞಾನ ಸಿಗಲಿ-ಡಿ.ದೇವರಾಜ್


ಜಿಲ್ಲಾ ಪೆÇೀಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್ ಮಾತನಾಡಿ, ರೈತರು ಪ್ರಯೋಗಾತ್ಮಕ ಚಟುವಟಿಕೆಗಳ ಮೂಲಕ ಹೊಸ ಹೊಸ ತಳಿಗಳನ್ನು ತಮ್ಮ ತೋಟಗಳಲ್ಲಿ ಬೆಳೆಯುವಂತಹ ಮಾಹಿತಿ ಕೇಂದ್ರವಾಗಿ ವಕ್ಕಲೇರಿ ರೈತ ಭವನ ಕಾರ್ಯನಿರ್ವಹಿಸಲಿ, ರೈತರಿಗೆ ಕೃಷಿಯಲ್ಲಿ ಅಗತ್ಯವಾದ ತಂತ್ರಜ್ಞಾನ ನೀಡುವ ಕೇಂದ್ರವಾಗಲಿ ಎಂದು ಹಾರೈಸಿದರು.
ರೈತರಿಗೆ ಬೆಳೆಗಳ ಬಗ್ಗೆ ಮಾಹಿತಿ ಕೊರತೆಯಿಂದಾಗಿ ಸಾಲ ಮಾಡಿ ಅದೇ ಟಮೋಟ ಅದೇ ಆಲೂಗಡ್ಡೆಯಂತಹ ಬೆಳೆಗಳನ್ನು ಬೆಳೆಯಲು ಮಾತ್ರ ಸೀಮಿತವಾಗಿದ್ದಾರೆ ಸಾಲದಲ್ಲಿ ಸಿಲುಕಿದ್ದಾರೆ ಬೇರೆ ಬೇರೆ ವಿಭಿನ್ನ ರೀತಿಯ ಮಿಶ್ರ ಬೆಳೆಗಳ ಹಾಗೂ ದೀರ್ಘಕಾಲದ ಬೆಳೆಗಳನ್ನು ಬೆಳೆಯುವ ಮಾಹಿತಿಯನ್ನು ರೈತರಿಗೆ ನೀಡಬೇಕಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಡಿಸಿಸಿ ಬ್ಯಾಂಕ್ ಇಂದು ಸಹಕಾರ ರಂಗದ ಶಕ್ತಿಯಾಗಿ ಬೆಳೆದಿದೆ, ಅದೇ ಮಾದರಿಯಲ್ಲಿ ಗ್ರಾಮೀಣ ಸೊಸೈಟಿಗಳನ್ನು ಸದೃಢಗೊಳಿಸುವ ಕಾರ್ಯವೂ ನಡೆದಿದೆ ಎಂದ ಅವರು, ಅವಿಭಜಿತ ಜಿಲ್ಲೆಯಲ್ಲಿ ದಿವಾಳಿಯಾಗಿದ್ದ ಸೊಸೈಟಿಗಳಿಗೆ ಇಂದು ಮರುಜೀವ ಬಂದಿದ್ದು, ಕೋಟಿಗಟ್ಟಲೆ ವಹಿವಾಟು ನಡೆಯುವಂತಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಯಲವಾರ ಸೊಣ್ಣೇಗೌಡ ಮಾತನಾಡಿ, ಡಿಸಿಸಿ ಬ್ಯಾಂಕ್ ಎಷ್ಟೇ ಸಾಲ ನೀಡಲು ಸಿದ್ದವಿದೆ ಆದರೆ ಅದನ್ನು ಸಕಾಲಕ್ಕೆ ಮರುಪಾವತಿಸುವ ಮೂಲಕ ಬ್ಯಾಂಕಿನ ಘನತೆ ಉಳಿಸುವುದರ ಜತೆಗೆ ಮತ್ತಷ್ಟು ಮಹಿಳೆಯರು,ರೈತರಿಗೆ ಸಾಲಸೌಲಭ್ಯ ಸಿಗಲು ಕಾರಣರಾಗಿ, ಠೇವಣಿಯನ್ನು ವಾಣಿಜ್ಯ ಬ್ಯಾಂಕಿನಲ್ಲಿಡದಿರಿ, ನಿಮಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡುವ ಡಿಸಿಸಿ ಬ್ಯಾಂಕಿನಲ್ಲಿಡಿ ಎಂದು ಮನವಿ ಮಾಡಿದರು.
ವಕ್ಕಲೇರಿ ಸೊಸೈಟಿ ಅಧ್ಯಕ್ಷ ಪಾಲಾಕ್ಷಿಗೌಡ ಮಾತನಾಡಿ, ಸೊಸೈಟಿ ಪ್ರಾರಂಭವಾಗಿ 48 ವರ್ಷವಾಗಿದ್ದು ಸುಮಾರು 14 ಕೋಟಿಗೂ ಹೆಚ್ಚು ಸಾಲವನ್ನು ರೈತರಿಗೆ ಹಾಗೂ ಸ್ತ್ರೀ ಶಕ್ತಿ ಸಂಘಗಳಿಗೆ ನೀಡಿದ್ದು ಹೋಬಳಿ ಕೇಂದ್ರವಾಗಿದ್ದರೂ ದೂರದ ತಾಲೂಕಿನಿಂದ ರೈತರು ಬಂದು ಔಷಧಿ ಹಾಗೂ ಗೊಬ್ಬರ ಕೊಂಡುಕೊಳ್ಳುತ್ತಾರೆ ಆದರೆ ಜಾಗ ಕಡಿಮೆ ಇದ್ದು ಅದಕ್ಕಾಗಿ ವಿವಿಧ ಜನಪ್ರತಿನಿಧಿಗಳ ಸಹಾಯದಿಂದ ರೈತ ಭವನ ನಿರ್ಮಾಣ ಮಾಡುತ್ತೀದ್ದವೆ ಇದಕ್ಕೆ ಎಲ್ಲರೂ ಸಹಕಾರ ಮುಖ್ಯವಾಗಿದೆ ಎಂದರು.
ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ವಕ್ಕಲೇರಿ ರಾಮು, ಗ್ರಾಮದ ಸಹಕಾರ ಸಂಘದ ಸಾಧನೆ ನಿಜಕ್ಕೂ ಶ್ಲಾಘನೀಯವಾಗಿದ್ದು, ಕೇವಲ ಪಡಿತರಕ್ಕೆ ಸೀಮಿತವಾಗಿದ್ದ ಸೊಸೈಟಿ ಇಂದು 14 ಕೋಟಿ ಸಾಲ ನೀಡಿದೆ ಎಂದರೆ ಅದು ಆಶ್ಚರ್ಯ ತರಿಸುವ ವಿಷಯವಾಗಿದ್ದು, ಇದಕ್ಕೆ ಡಿಸಿಸಿ ಬ್ಯಾಂಕ್ ಕಾರಣ ಎಂದು ಅಭಿನಂದಿಸಿದರು.
ಸಮಾಜಸೇವಕ ಸಿಎಂಆರ್ ಶ್ರೀನಾಥ್ ಮಾತನಾಡಿ, ಇಂದು ಮಹಿಳೆಯರಿಗೆ ಅತಿ ಹೆಚ್ಚು ಭದ್ರತೆ ರಹಿತ ಸಾಲ ನೀಡಿದ ಖ್ಯಾತಿಯನ್ನು ಡಿಸಿಸಿ ಬ್ಯಾಂಕ್ ಹೊಂದಿದೆ, 7 ಲಕ್ಷಕ್ಕೂ ಹೆಚ್ಚು ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗುವುದು ಸುಲಭದ ಮಾತಲ್ಲ, ಬ್ಯಾಂಕ್ ಆಡಳಿತ ಮಂಡಳಿ ಶ್ಲಾಘನೀಯ ಕಾರ್ಯ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಹಿರಿಯ ಮುಖಂಡ ಬಂಡಿ ವೆಂಕಟೇಶಪ್ಪ, ಅಶ್ವಥ್‍ರಾಮ್, ವಕ್ಕಲೇರಿ ರೇಷ್ಮೆ ಬೆಳೆಗಾರರ ರೈತರ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ಎಂ.ಆನಂದ್ ಕುಮಾರ್, ನಿರ್ದೇಶಕರಾದ ಮುನಿಯಪ್ಪ, ರಮೇಶ್, ಚಂದ್ರೇಗೌಡ, ಚೌಡಮ್ಮ, ಕೃಷ್ಣಪ್ಪ, ಚಿದಾನಂದ್ ಸದಾಶಿವಾ, ಶಾಂತಕುಮಾರಿ, ಗ್ರಾಪಂ ಮಾಜಿ ಅಧ್ಯಕ್ಷ ಮುನಿರಾಜು, ಸೊಸೈಟಿ ವ್ಯವಸ್ಥಾಪಕ ಎಂ. ಮಂಜುನಾಥ್ ಸಿಬ್ಬಂದಿ ಮುಂತಾದವರು ಇದ್ದರು.

ಶ್ರೇಷ್ಟ ವೈದ್ಯಪ್ರಶಸ್ತಿಗೆ ಭಾಜನರಾದ ಡಾ.ಪ್ರಸನ್ನಕುಮಾರ್ಮ ತ್ತು ಅರಸು ಪ್ರಶಸ್ತಿ ಪಡೆದ ಶಂಕರಪ್ಪರಿಗೆ ಅಭಿನಂದನೆ

ಕೋಲಾರ:- ನಗರದ ಕಿಲಾರಿಪೇಟೆ ಯಾದವ ಸಮಾಜದಿಂದ ಇತ್ತೀಚೆಗೆ ಡಿ.ದೇವರಾಜ ಅರಸು ಪ್ರಶಸ್ತಿಗೆ ಭಾಜನರಾದ ಡಾ.ಶಂಕರಪ್ಪ ಹಾಗೂ ರಾಜ್ಯಮಟ್ಟದ ಶ್ರೇಷ್ಟ ವೈದ್ಯಪ್ರಶಸ್ತಿಗೆ ಭಾಜನರಾದ ಮಾಲೂರು ಆರೋಗ್ಯಾಧಿಕಾರಿ ಡಾ.ಜಿ.ಪ್ರಸನ್ನಕುಮಾರ್‍ರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಪ್ರಸನ್ನಕುಮಾರ್, ಕರ್ತವ್ಯನಿಷ್ಠೆ ಇದ್ದರೆ ಗೌರವ ತಾನಾಗಿಯೇ ಹುಡುಕಿಕೊಂಡು ಬರುತ್ತದೆ, ಕೋವಿಡ್ ಸಂದರ್ಭದಲ್ಲಿ ಮಾಡಿದ ಸೇವೆಯನ್ನು ಗುರುತಿಸುವಂತಾಗಿದೆ, ಇದೆಲ್ಲಕ್ಕೂ ನನ್ನ ತಂದೆ,ತಾಯಿ ಕಲಿಸಿಕೊಟ್ಟ ಸಂಸ್ಕಾರವೇ ಕಾರಣ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಆರ್.ಶಂಕರಪ್ಪ, ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿರದಿದ್ದರೆ ಖಂಡಿತಾ ಹಿಂದುಳಿದ ಸಮಾಜಗಳಿಗೆ ಇಷ್ಟೊಂದು ಅವಕಾಶಗಳು ಸಿಗುತ್ತಿರಲಿಲ್ಲ, ಹಾವನೂರು ಸಮಿತಿ ರಚಿಸಿ ಹಿಂದುಳಿದವರಿಗೂ ಬದುಕು ಕೊಟ್ಟ ಮಹಾಮಹಿಮರು ಅರಸು ಎಂದ ಅವರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲು ಆ ಧೈರ್ಯಶಾಲಿಯೇ ಸಿಎಂ ಆಗಬೇಕಾಯಿತು ಎಂದರು.
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ಮಾತನಾಡಿ, ಸಮಾಜದ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಯಾದವ ಸಮುದಾಯದ ಮತ್ತಷ್ಟು ಯುವಕರಿಗೆ ಪ್ರೇರಣೆ ನೀಡುವ ಕೆಲಸ ಮಾಡಲಾಗಿದೆ, ಇಂತಹ ಕಾರ್ಯಗಳ ಜತೆಗೆ ಯಾದವ ಸಮಾಜದ ಬಂಧುಗಳು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಆದ್ಯತೆ ನೀಡಬೇಕು ಎಂದರು.
ಜಿಲ್ಲಾ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್, ಹಿಂದುಳಿದ ವರ್ಗಗಳಲ್ಲೂ ಅನೇಕ ಪ್ರತಿಭೆಗಳಿವೆ, ಅವರನ್ನು ಗುರುತಿಸುವ ಕೆಲಸವನ್ನು ಅದೇ ಸಮುದಾಯದವರು ಮಾಡಬೇಕು, ಇದರಿಂದ ಸಮಾಜದಲ್ಲಿ ಅನೇಕರು ಧೈರ್ಯದಿಂದ ಸಾಧಕರಾಗಿ ಹೊರಬಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಬರೀಷ್, ಯಾದವ ಸಮುದಾಯದಲ್ಲೂ ಸಾಧಕರಿದ್ದಾರೆ ಎಂಬುದನ್ನು ಡಾ.ಶಂಕರಪ್ಪ ಹಾಗೂ ಡಾ.ಜಿ.ಪ್ರಸನ್ನಕುಮಾರ್ ಸಾಕ್ಷೀಕರಿಸಿದ್ದಾರೆ, ಮುಂದಿನ ದಿನಗಳಲ್ಲಿ ಸಮುದಾಯದಿಂದ ಸಾಧಕರನ್ನು ಗುರುತಿಸಿ ನಿರಂತರವಾಗಿ ಗೌರವಿಸುವ ಕೆಲಸ ಮಾಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಗುತ್ತಿಗೆದಾರ ಮುನಿರಾಜಪ್ಪ ಹಾಗೂ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ಅವರನ್ನು ಸನ್ಮಾನಿಸಲಾಯಿತು ಮತ್ತು ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಿ ಶುಭ ಹಾರೈಸಲಾಯಿತು. ಮುಖಂಡರಾದ ಮುನಿರಾಜಪ್ಪ, ವಕೀಲ ದಿವಾಕರ್ ಬಾಬು ಮತ್ತಿತರರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭೆ ಮಾಜಿ ಸದಸ್ಯ ಮೇಸ್ತ್ರಿ ನಾರಾಯಣಸ್ವಾಮಿ ವಹಿಸಿದ್ದು, ಸಮುದಾಯದ ಮುಖಂಡರಾದ ಮುನಿರಾಮೊಪ್ಪ, ಮುನಿಸ್ವಾಮಪ್ಪ, ಕೆ.ವಿ.ಚೌಡಪ್ಪ, ದೊಡ್ಡವೀರಪ್ಪ, ಗೋಪಿ, ಕೆ.ಜೆ.ಗೋಪಾಲ್ ಪುರುಷೋತ್ತಮ್, ಮುನಿವೆಂಕಟಯಾದವ್, ಆರ್.ರಮೇಶ್, ಮಣಿ,ಕೆ.ವಿ.ಮಂಜು, ವಿಶ್ವನಾಥ್, ಸಂಜೀವಪ್, ಕೃಷ್ಣಮೂರ್ತಿ, ಮೇಸ್ತ್ರಿ ಮೂರ್ತಿ, ವೆಂಕಟೇಶ್, ಸತೀಶ್, ಪ್ರಬಾಕರ್, ವಿನಯ್ ಮತ್ತಿತರರಿದ್ದರು.

ಕುಂದಾಪುರ ಸಂತ ಜೋಸೆಫ್ ಪ್ರೌಢಶಾಲೆ:ಇಂಟರಾಕ್ಟ್ ಕ್ಲಬ್ ಉದ್ಘಾಟನೆ

ಕುಂದಾಪುರ :ಕುಂದಾಪುರ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಇದರ ಅಧ್ಯಕ್ಷರಾಗಿರುವ ರೋ. ಕೆ ಎಸ್ ಮಂಜುನಾಥ್ ’ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ, ನಾಯಕತ್ವ, ಸಹಕಾರ ಮುಂತಾದ ಗುಣಗಳನ್ನು ಬೆಳೆಸಿ ಅವರ ವ್ಯಕ್ತಿತ್ವ ವಿಕಸನಕ್ಕೆ ಇಂಟರಾಕ್ಟ್ ಕ್ಲಬ್ ನ ಚಟುವಟಿಕೆ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.

ಕ್ಲಬ್ಬಿನ ಜಿ. ಎಸ್. ಆರ್. ಆಗಿರುವ ರೋ. ಪಿ ಎಚ್ ಎಫ್. ನರಸಿಂಹ ಹೊಳ್ಳ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇಂಟರಾಕ್ಟ್ ಅಧ್ಯಕ್ಷರಾಗಿ ಕೃಷ್ಣಪ್ರಸಾದ್, ಉಪಾಧ್ಯಕ್ಷರಾಗಿ ಸಿಂಚನರಾಜು, ಕಾರ್ಯದರ್ಶಿಯಾಗಿ ಸಂಜನಾ, ಉಪ ಕಾರ್ಯದರ್ಶಿಯಾಗಿ ಹರ್ಷಿತ್, ನಿರ್ದೇಶಕರಾಗಿ ರಶ್ಮಿರವಿ, ರಜತ ,ವಿಜೇತ್ ,ಸ್ಪಂದನ ,ಗೌತಮ್, ನಿಹಾಲ್ ಆಯ್ಕೆಯಾದರು.

ರೋಟರಿ ಕ್ಲಬ್ಬಿನ ಉಪಾಧ್ಯಕ್ಷರಾದ ರೊನಾಲ್ಡ್ ಡಿ ಮೆಲ್ಲೋ ,ರೋಟರಿ ಗ್ರಾಮೀಣದಳ ಚೇರ್ ಮ್ಯಾನ್ ಆಗಿರುವ ಮಂಜುನಾಥ ಗಾಣಿಗ ಉಪಸ್ಥಿತರಿದ್ದರು. ಕಾನ್ವೆಂಟಿನಾ ಸುಪೇರಿಯರಾಗಿರುವ ಸಿಸ್ಟರ್ ಸಂಗೀತ ರವರು ಶುಭ ಹಾರೈಸಿದರು. ಶಿಕ್ಷಕರಾದ ಮೈಕಲ್ ಇವರು ನಿರೂಪಿಸಿ ವಂದಿಸಿದರು.

ಭಂಡಾರ್ಕಾರ್ಸ್:ಸ್ವಚ್ಛ ಕರಾವಳಿ ಸುರಕ್ಷಿತ ಸಮುದ್ರ” ಕುರಿತು ಜಾಗೃತಿ ಕಾರ್ಯಕ್ರಮ

ಕುಂದಾಪುರ: ಆಗಸ್ಟ್ 29ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಸೇವಾ ಯೋಜನೆ ಘಟಕ, ಯುಥ್ ರೆಡ್ ಕ್ರಾಸ್ ಘಟಕ, ಎನ್.ಸಿ.ಸಿ ಘಟಕ, ಭಾರತ ಸರ್ಕಾರದ ಭೂವಿಜ್ಞಾನ ಸಚಿವಾಲಯ, ದೆಹಲಿ, ಬೆಂಗಳೂರಿನ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಮಂಗಳೂರಿನ ಪಿಲಿಕುಳ ವಿಜ್ಞಾನ ಕೇಂದ್ರ ಮತ್ತು ಪುರಸಭೆ ಕುಂದಾಪುರ ಇವರ ಸಹಯೋಗದಲ್ಲಿ ” ಸ್ವಚ್ಛ ಕರಾವಳಿ ಸುರಕ್ಷಿತ ಸಮುದ್ರ” ಕುರಿತು ಜಾಗೃತಿ ಕಾರ್ಯಕ್ರಮ ಕಾಲೇಜಿನ ರಾಧಾಬಾಯಿ ಹಾಲ್ ನಲ್ಲಿ ನಡೆಯಿತು.
ಮಣಿಪಾಲದ ಎಂ.ಐ.ಟಿಯ ಸಹಪ್ರಾಧ್ಯಾಪಕ ಡಾ. ಅನಿಶ್ ಕುಮಾರ್ ವಾರಿಯರ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅವರು ಸಮುದ್ರದ ಮಾಲಿನ್ಯಕ್ಕೆ ಕಾರಣವಾಗುವ ಅಂಶಗಳು ಮತ್ತು ಸಮುದ್ರದ ಮಾಲಿನ್ಯ ತಡೆಯಲು ಇರುವಂತಹ ಪರಿಹಾರಾತ್ಮಕ ಸಲಹೆಗಳ ಕುರಿತು ಮಾಹಿತಿ ನೀಡಿದರು.
ಇನ್ನೋರ್ವ ಅತಿಥಿ ಕುಂದಾಪುರ ಪುರಸಭೆಯ ಪರಿಸರ ವಿಜ್ಞಾನಿ ( Engineer) ಗುರುಪ್ರಸಾದ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶುಭಕರಾಚಾರಿ, ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಪ್ರೊ.ಸತ್ಯನಾರಾಯಣ, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ರಾಮಚಂದ್ರ ಆಚಾರ್ಯ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳು ಕುಂದಾಪುರ ಸಮುದ್ರ ತೀರಕ್ಕೆ ತೆರಳಿ ತೀರವನ್ನು ಸ್ವಚ್ಛಗೊಳಿಸಿ ಜಾಗೃತಿ ಮೂಡಿಸಿದರು.

ಸುಗಟೂರು ಸೊಸೈಟಿ ಆಶ್ರಯದಲ್ಲಿ 10 ಕೋ.ಸಾಲ ವಿತರಿಸಿದ ರಮೇಶ್‍ಕುಮಾರ್ : ಬಡ್ಡಿರಹಿತ 5 ಲಕ್ಷ ಸಾಲ-ರಸಗೊಬ್ಬರ ಬೆಲೆ ನಿಯಂತ್ರಣ,ರೈತರ ಹಿತ ರಕ್ಷಣೆ ಗುರಿ

ಕೋಲಾರ:- ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಸಗೊಬ್ಬರ,ಕೀಟನಾಶಕಗಳ ಬೆಲೆ ನಿಯಂತ್ರಣದ ಅಧಿಕಾರ ನಮ್ಮ ಕೈಗೆ ತೆಗೆದುಕೊಂಡು ರೈತರ ಹಿತ ರಕ್ಷಣೆ ಮಾಡುತ್ತೇವೆ, ಶೂನ್ಯಬಡ್ಡಿ ಸಾಲದ ಪ್ರಮಾಣವನ್ನು 5 ಲಕ್ಷಕ್ಕೇರಿಸುತ್ತೇವೆ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ಘೋಷಿಸಿದರು.
ತಾಲ್ಲೂಕಿನ ಸುಗಟೂರು ಸಬರಮತಿ ಪ್ರೌಢಶಾಲೆ ಮೈದಾನದಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‍ನಿಂದ ಸುಗಟೂರು ಎಸ್‍ಎಫ್‍ಸಿಎಸ್ ಆಶ್ರಯದಲ್ಲಿ 196 ಮಹಿಳಾ ಸ್ವಸಹಾಯ ಸಂಘಗಳಿಗೆ 9.80 ಕೋಟಿ ರೂ ಸಾಲ ವಿತರಿಸಿ ಅವರು ಮಾತನಾಡಿ ಮಹಿಳೆಯರಿಗೆ ನೀಡುತ್ತಿರುವ ಶೂನ್ಯ ಬಡ್ಡಿ ಸಾಲವನ್ನು 10 ಲಕ್ಷಕ್ಕೇರಿಸುವುದೇ ಗುರಿ ಎಂದರು.
ಈಗ ಉದ್ದಾರ ಆಗುತ್ತಿರೋದು ಗೊಬ್ಬರ,ಕೀಟನಾಶಕ, ಕೃಷಿಪೇಪರ್ ಮಾರಾಟಗಾರ ಮತ್ತು ಮಂಡಿ ಕಮಿಷನ್ ಏಜೆಂಟ್‍ಗಳು ಮಾತ್ರ ರೈತನ ಪರಿಸ್ಥಿತಿ ಅಧೋಗತಿಗೆ ಸಾಗುತ್ತಿದೆ, ಎಲ್ಲಿಯವರೆಗೂ ದುಡಿದು ತಿನ್ನುವ ರೈತ ಚೆನ್ನಾಗಿರೋದಿಲ್ಲವೋ ಅಲ್ಲಿಯವರೆಗೂ ದೇಶ ಉದ್ದಾರವಾಗದು ಎಂದರು.

ಗೋವಿಂದಗೌಡ ಗೈರುಅನುಮಾನಕ್ಕಡೆ


ಈ ನಡುವೆ ಸಭೆಯಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರ ಗೈರು ವಿವಿಧ ಅನುಮಾನಗಳಿಗೆ ಎಡೆಮಾಡಿಕೊಟ್ಟಿತಾದರೂ, ರಮೇಶ್‍ಕುಮಾರ್ ತಮ್ಮ ಭಾಷಣದಲ್ಲಿ ರೈತರು,ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ನೆರವಾಗಲು ಕಾರಣರಾದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮತ್ತವರ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದ್ದು ವಿಶೇಷವಾಗಿತ್ತು.
ಮಹಿಳೆಯರು ಈ ಸಾಲಕ್ಕೆ ಸೀಮಿತರಾಗದೇ ಸ್ವಯಂ ಉದ್ಯೋಗ ಬಯಸಿ ಅರ್ಜಿ ಹಾಕಿದರೆ ಅದಕ್ಕೂ ಸಾಲ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿ, ಬಡವರಿಗೆ ಅನುಕೂಲವಾಗುವಂತೆ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳನ್ನು ಮೀರಿ ಅಭಿವೃದ್ದಿಪಡಿಸುವ ಆಶಯವಿದೆ ಎಂದರು.
ವಾಣಿಜ್ಯ ಬ್ಯಾಂಕುಗಳು ನಿಮಗೆ ಸಾಲ ನೀಡಲ್ಲ, ಡಿಸಿಸಿ ಬ್ಯಾಂಕ್ ಮಾತ್ರ ನಿಮ್ಮನ್ನು ಶಾಮಿಯಾನ ಹಾಕಿ ಕೂರಿಸಿ ಸಾಲ ನೀಡುತ್ತದೆ ಎಂದ ಅವರು, ಬಡವನಿಗೆ ಸಾಲ ನೀಡಲು ಹಲವು ಷರತ್ತು ಆದರೆ ಕೇಂದ್ರ ಸರ್ಕಾರ ಅದಾನಿಗೆ 1.63 ಲಕ್ಷ ಕೋಟಿ ಸಾಲ ನೀಡಿದೆ, ನಮ್ಮ ರಾಜ್ಯದ ಬಜೆಟ್ ಇರುವುದೇ 2.67 ಕೋಟಿ ಎಂದ ಅವರು, ಅಡುಗೆ ಅನಿಲ ಬೆಲೆ ಏರಿಕೆ ವಿರುದ್ದವೂ ಕಿಡಿ ಕಾರಿ ಕೇವಲ ಧರ್ಮಗಳ ನಡುವೆ ಬೆಂಕಿ ಇಡುವ ಕೆಲಸ ಮಾಡಲಾಗುತ್ತಿದೆ ಅಷ್ಟೆ ಅವರ ಸಾಧನೆ ಎಂದರು.

ಜನರಿಗಾಗಿ ದುಡಿದದ್ದಕ್ಕೆ ಕೂಲಿಯಾಗಿ ಮತ ನೀಡಿ


ವಿಧಾನಪರಿಷತ್ ಸದಸ್ಯ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‍ಕುಮಾರ್ ಮಾತನಾಡಿ, ಸುಗಟೂರು ಸೊಸೈಟಿ ಒಂದರಿಂದಲೇ 5 ಸಾವಿರ ಮಹಿಳೆಯರಿಗೆ ಬಡ್ಡಿರಹಿತ ಸಾಲ ನೀಡಿದ್ದೇವೆ, ಇದಕ್ಕೆ ಕಾರಣ ರಮೇಶ್‍ಕುಮಾರ್ ಎಂದು ತಿಳಿಸಿ, ಶ್ರೀನಿವಾಸಪುರ ಕ್ಷೇತ್ರದಲ್ಲಿ ಒಂದೇ ಒಂದು ಗುಡಿಸಲು ಇಲ್ಲ, ಅತಿ ಹೆಚ್ಚು ಮನೆಗಳನ್ನು ಮಂಜೂರು ಮಾಡಿಸಿದ್ದಾರೆ ಎಂದರು.
ಪ್ರತಿ ಹಳ್ಳಿಗೂ ಶುದ್ದ ಕುಡಿಯುವ ನೀರು,ರಸ್ತೆ, ಕಾಂಕ್ರಿಟ್ ಚರಂಡಿ, ಕ್ಷೇತ್ರದಲ್ಲಿ 510 ಸಮುದಾಯ ಭವನ, ಚೇಳೂರು-ಚಿಂತಾಮಣಿ-ಕೋಲಾರದ ದ್ವಿಪಥ ರಸ್ತೆಗೆ 135 ಕೋಟಿ ಮಂಜೂರು ಮಾಡಿಸಿದ್ದು, 1380 ಕೋಟಿ ವೆಚ್ಚದಲ್ಲಿ ಕೆಸಿ ವ್ಯಾಲಿ ನೀರು ತಂದಿದ್ದರಿಂದ ಅಂತರ್ಜಲ ವೃದ್ದಿ ಹೀಗೆ ರಾಜ್ಯದ ಯಾವ ಶಾಸಕರು ಮಾಡದಷ್ಟು ಜನಪರ ಕೆಲಸ ಮಾಡಿರುವ ರಮೇಶ್‍ಕುಮಾರ್ ಅವರ ಸೇವೆಗೆ ನೀವು ನಿಮ್ಮ ಮತದ ಮೂಲಕ ಕೂಲಿ ನೀಡಬೇಕು ಎಂದು ಕೋರಿದರು.
ಮಹಿಳೆಯರಿಗೆ 50 ಸಾವಿರ ಬಡ್ಡಿರಹಿತ ಸಾಲ ನೀಡಿದ್ದು, ಉಚಿತ ಅಕ್ಕಿ ನೀಡಿದ್ದು ಸಿದ್ದರಾಮಯ್ಯ ಸರ್ಕಾರ, ಮತ್ತೆ ಸಿದ್ದರಾಮಯ್ಯ ಸಿಎಂ ಆಗುತ್ತಾರೆ ಆಗ ಸಾಲದ ಮೊತ್ತವನ್ನು 1 ಲಕ್ಷಕ್ಕೇರಿಸುವುದು ಖಚಿತ ಎಂದು ಘೋಷಿಸಿ, ಬಡ್ಡಿರಹಿತ ಸಾಲಕ್ಕೆ ಒತ್ತಡ ಹಾಕಿದ್ದೆ ರಮೇಶ್‍ಕುಮಾರ್ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಟಿ.ವಿ.ಕೃಷ್ಣಪ್ಪ, ಮೀಟರ್ ಬಡ್ಡಿ ಸಾಲದ ಶೋಷಣೆಯಿಂದ ಮಹಿಳೆಯರನ್ನು ರಕ್ಷಿಸುವ ಕೆಲಸ ಡಿಸಿಸಿ ಬ್ಯಾಂಕಿನಿಂದ ಆಗಿದೆ, ಜತೆಗೆ ಕೆಸಿ ವ್ಯಾಲಿ ನೀರು ತಂದ ಭಗೀರಥ ರಮೇಶ್‍ಕುಮಾರ್ ಎಂದು ಬಣ್ಣಿಸಿದರು.
ಸುಗಟೂರು ಎಸ್‍ಎಫ್‍ಸಿಎಸ್ ಅಧ್ಯಕ್ಷ ಎ.ಸಿ.ಭಾಸ್ಕರ್‍ಬಾಬು ಪ್ರಾಸ್ತಾವಿಕವಾಗಿ ಮಾತನಾಡಿ, ಭದ್ರತೆ ರಹಿತ ಸಾಲ ವಿತರಿಸಲು ದಿವಂಗತ ತಿಮ್ಮರಾಯಪ್ಪ ಅವರಿಗೆ ಧೈರ್ಯ ತುಂಬಿದ ಬ್ಯಾಲಹಳ್ಳಿ ಗೋವಿಂದಗೌಡರನ್ನು ಸ್ಮರಿಸಿ, ವೈಯಕ್ತಿಕ ಕಾರಣಗಳಿಂದ ಅವರು ಬಂದಿಲ್ಲ ಎಂದರು.
ಕಾರ್ಯಕ್ರಮದಲ್ಲಿಜಾನಪದ ಅಕಾಡೆಮಿ ಸದಸ್ಯ ರಾಜಪ್ಪ ಹಾಗೂ ಬೆಂಗಳೂರು ಉತ್ತರ ವಿವಿ ಬಿಎಡ್ ನಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ನಿಖಿಲ್‍ರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ವಿ.ವೆಂಕಟಮುನಿಯಪ್ಪ,ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಗ್ರಾ.ಪಂ ಅಧ್ಯಕ್ಷರುಗಳಾದ ಉರಿಗಿಲಿ ರಮೇಶ್,ಜನ್ನಘಟ್ಟ ಅಧ್ಯಕ್ಷ ಸತೀಶ್, ಮದನಹಳ್ಳಿ ಅಧ್ಯಕ್ಷ ನರಸಿಂಹರೆಡ್ಡಿ, ಸದಸ್ಯರಾದ ಭೂಪತಿಗೌಡ,ನವೀನ್ ಬಾಬು, ಆಲೇರಿ ಬಾಬು, ಸೊಸೈಟಿ ಉಪಾಧ್ಯಕ್ಷೆ ರುಕ್ಕಮ್ಮ , ನಿರ್ದೇಶಕರಾದ ವೆಂಕಟರಾಮರೆಡ್ಡಿ,ಗೋಪಾಲಗೌಡ,ಟಿ.ಗೋಪಾಲಪ್ಪ, ಸಿರಾಜ್, ಹನುಮೇಗೌಡ, ಸವಿತಾನಾಗೇಂದ್ರಶೆಟ್ಟಿ, ವೆಂಕಟಮ್ಮ, ರಮಣರೆಡ್ಡಿ, ಅಮರನಾರಾಯಣ, ವೆಂಕಟರಮಣಪ್ಪ, ಸಿಇಒ ಪುಟ್ಟರಾಜು, ದಿವಂಗತ ತಿಮ್ಮರಾಯಪ್ಪ ಪುತ್ರ ರಾಘವೇಂದ್ರ, ಮುನಿರಾಜು ಮತ್ತಿತರರಿದ್ದರು
.

ಎಸ್ಸಿಎಸ್ಟಿ ಶಿಕ್ಷಕರ ಸಂಘದಿಂದ ಪ್ರತಿಭಾ ಪುರಸ್ಕಾರ:ಹೊಳಲಿ ಶಿಕ್ಷಕಿ ಇಂದ್ರಮ್ಮರಿಗೆ ಗುರುರತ್ನ ಪ್ರಶಸ್ತಿ

ಕೋಲಾರ:- ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಎಸ್ಸಿಎಸ್ಟಿ ಶಿಕ್ಷಕರ ಸಂಘದಿಂದ ನಗರದ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಹೊಳಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಎಂ.ಇಂದ್ರಮ್ಮ ಸೇರಿದಂತೆ ಹಲವು ಶಿಕ್ಷಕರಿಗೆ ಗುರುರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಗರದ ರಂಗಮಂದಿರದಲ್ಲಿ ಎಸ್ಸಿಎಸ್ಟಿ ಶಿಕ್ಷಕರ ಸಂಘದಿಂದ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಗುರುರತ್ನ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ, ಸಂಘದ ರಾಜ್ಯ ಅಧ್ಯಕ್ಷ ಟಿ.ಸೊಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಟಿ.ನಾಗರಾಜ್, ಜಿಲ್ಲಾ ಅಧ್ಯಕ್ಷ ಎನ್.ಮುನಿಯಪ್ಪ, ತಾಲ್ಲೂಕು ಅಧ್ಯಕ್ಷ ವೈ.ವೆಂಕಟೇಶ್, ಕಾರ್ಯದರ್ಶಿ ಎನ್.ವಿ.ರಮೇಶ್, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪಿಗೌಡ, ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್, ಅಂತರ್ಜಲ ಇಲಾಖೆ ತಿಪ್ಪೇಸ್ವಾಮಿ, ಮಹಿಳಾ ಮಕ್ಕಳ ಇಲಾಖೆ ಮುದ್ದಣ್ಣ,ವಿಷಯ ಪರಿವೀಕ್ಷಕ ವೆಂಕಟೇಶಪ್ಪ ಮತ್ತಿತರರಿದ್ದರು.