ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯ ತಿಥಿ ಹಾಗೂ ದೇಶದ ಪ್ರಥಮ ಗೃಹ ಸಚಿವ ಸರದಾರ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನಾಚರಣೆ

ಕುಂದಾಪುರ, ಅ.31: ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯ ತಿಥಿ ಹಾಗೂ ದೇಶದ ಪ್ರಥಮ ಗೃಹ ಸಚಿವ ಸರದಾರ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನಾಚರಣೆ ಆಚರಿಸಲಾಯಿತು.

“ಸ್ವತಂತ್ರ ಭಾರತದ ಇತಿಹಾಸದಲ್ಲಿ ಕ್ರಾಂತಿಕಾರಕವಾದ ಉಳುವವನೆ ಹೊಲದೊಡೆಯ ಕಾನೂನನ್ನು ಜಾರಿಗೊಳಿಸುವ ಮೂಲಕ ದೇಶದ ಕಟ್ಟ ಕಡೆಯ ಕೃಷಿಕಾರ್ಮಿಕನಿಗೆ ಭೂಮಿಯ ಹಕ್ಕನ್ನು ನೀಡುವ ಮೂಲಕ ಮತ್ತು ಶ್ರೀಮಂತ ವರ್ಗಕ್ಕಷ್ಟೆ ಸೀಮಿತವಾಗಿದ್ದ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣದ ಮಾಡುವ ಮೂಲಕ ದೇಶದ ಸಾಮಾನ್ಯ ಜನತೆಗೆ ಬ್ಯಾಂಕಿನ ಸಾಲ ಮತ್ತಿತರ ಸೌಲಭ್ಯಗಳು ದೊರೆಯುವಂತಹ ವಾತಾವರಣ ನಿರ್ಮಸಿದವರು ಇಂದಿರಾಗಾಂಧಿಯವರು, ಸಿಖ್ ಉಗ್ರಗಾಮಿಗಳ ವಿರುದ್ಧದ ಅಪರೇಷನ್ ಬ್ಲೂಸ್ಟಾರ್ ಕಾರ್ಯಾಚರಣೆ ದೇಶದ ಸಮಗ್ರತೆಗಾಗಿ ತಗೆದುಕೊಂಡ ನಿರ್ಧಾರ ತೆಗೆದುಕೊಂಡ್ಡದ್ದು ಇಂದಿರ ಗಾಂಧಿಯವರದು. ಆದರೆ ದುರಾದೃಷ್ಟವಶಾತ್ ಅವರು ಅದೇ ಸಿಖ್ ಭಯೋತ್ಪಾದಕರ ಗುಂಡಿಗೆ ಬಲಿಯಾದದ್ದು ಸ್ವತಂತ್ರ ಭಾರತಕ್ಕಾದ ಬಹುದೊಡ್ಡ ನಷ್ಟ.

ಹಾಗೇ ಜವಹರಲಾಲ್ ನೆಹರೂ ಸಂಪುಟದ ದೇಶದ ಮೊದಲ ಗೃಹ ಸಚಿವ, ಮಾಜಿ ಉಪ ಪ್ರದಾನಿ, ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ ಸರ್ಧಾರ್ ವಲ್ಲಭಭಾಯಿ ಪಟೇಲರು ದೇಶದಾದ್ಯಂತ ಚಿಕ್ಕಚಿಕ್ಕ ರಾಜ್ಯಗಳಾಗಿ ಹಂಚಿ ಹೋಗಿದ್ದ ಐನೂರಕ್ಕೂ ಹೆಚ್ಚು ರಾಜ ಸಂಸ್ಥಾನಗಳ ಅರಸರ ಮನಒಲಿಸಿ ನವ ಭಾರತ ನಿರ್ಮಿಸುವಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಚಾಚಾ ನೆಹರೂ ರವರ ಜೊತೆ ಸೇರಿ ಶ್ರಮಿಸಿದ್ದು ಅದು ಅವರು ಈ ದೇಶಕ್ಕೆ ನೀಡಿರುವ ಬಹುದೊಡ್ಡ ಕೊಡುಗೆ ಮತ್ತು ಅವರು ಗಾಂಧಿ ಹತ್ಯೆಯ ನಂತರ ಹಂತಕ ನಾಥೂರಾಮ್ ಘೋಡ್ಸೆಯ ಮಾತೃಸಂಸ್ಥೆ ಎನ್ನಲಾದ ಆರೆಸ್ಸೆಸ್ ಅನ್ನು ನಿಷೇಧಿಸಿದ್ದರು ಮತ್ತು ಆ ಮೂಲಕ ದೇಶದ ಭವಿಷ್ಯಕ್ಕೆ ಉಂಟಾಗಬಹುದಾದ ಅಪಾಯವನ್ನು ಅಂದೇ ಊಹಿಸಿದ್ದರು.” ಎಂದು ಭೂ ಅಭಿವೃದ್ಧಿ ಬ್ಯಾಂಕ್ ಕುಂದಾಪುರ ಇದರ ಅಧ್ಯಕ್ಷ, ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಯಾಡಿ ಶಿವರಾಮ ಶೆಟ್ಟಿ ಯವರು ಹೇಳಿದರು.

ಅವರು ಇಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿ ‘ಇಂದಿರಾ ಪ್ರಿಯದರ್ಶಿನಿ’ ಇಲ್ಲಿ ನಡೆದ ಇಂದಿರಾ ಗಾಂಧಿ ಪುಣ್ಯತಿಥಿ ಮತ್ತು ಸರ್ಧಾರ್ ಪಟೇಲ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರಸಿಗ ಕಾಳಪ್ಪ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕಾಸ ಹೆಗಡೆ, ಕಾಂಗ್ರೆಸ್ ಐ.ಟಿ ಸೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಪುರಸಭಾ ಸದಸ್ಯರಾದ ದೇವಕಿ ಸಣ್ಣಯ್ಯ, ಪ್ರಭಾವತಿ ಶೆಟ್ಟಿ, ಲಕ್ಷ್ಮೀಬಾಯಿ, ಕೋಡಿ ಅಶ್ವಕ್, ಯುವ ಕಾಂಗ್ರೆಸ್‌ನ ಮುನಾಫ್ ಕೋಡಿ, ಧರ್ಮಪ್ರಕಾಶ್, ರೇವತಿ ಶೆಟ್ಟಿ, ಗಂಗಾಧರ ಶೆಟ್ಟಿ, ಸುಭಾಷ್ ಪೂಜಾರಿ, ಆಶಾ ಕರ್ವಾಲೋ , ಕೇಶವ ಭಟ್, ವಿಜಯಧರ್ ಕೆ ವಿ, ಅಶೋಕ್ ಸುವರ್ಣ, ರೋಷನ್ ಬರೆಟ್ಟೊ, ಗಣಪತಿ ಶೇಟ್, ಸತೀಶ್ ಶೆಟ್ಟಿ ಶೇಡಿಮನೆ, ನರಸಿಂಹ ಪೂಜಾರಿ, ಗೌರವ ಹಲ್ಸನಾಡ್, ರಾಮ ಪೂಜಾರಿ, ಅಭಿಜಿತ್ ಪೂಜಾರಿ, ರಾಕೇಶ ಶೆಟ್ಟಿ, ಕುಮಾರ ಖಾರ್ವಿ, ಸದಾನಂದ ಖಾರ್ವಿ, ವಿಠಲ್ ಕಾಂಚನ್, ಎಡೋಲ್ಪ್ ಡಿಕೋಸ್ಟ, ಕೆ. ಸಚಿನ್ ಕುಮಾರ್, ಜೋಸೆಫ್ ರೆಬೆಲ್ಲೊ, ಸುಜನ್ ಶೆಟ್ಟಿ, ವಿವೇಕಾನಂದ, ವೇಣುಗೋಪಾಲ, ಸವಿತಾ, ಮೌರಿಸ್ ಕರ್ವಾಲೋ, ಚಂದ್ರ ಪೂಜಾರಿ, ಸಂದೇಶ ಶೆಟ್ಟಿ, ಸಂಗೀತಾ ಮುಂತಾದವರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಕಾರ್ಯಕ್ರಮವನ್ನು ನಿರೂಪಿಸಿದರು. ಚಂದ್ರಶೇಖರ ಖಾರ್ವಿ ಸ್ವಾಗತಿಸಿ, ಸುನಿಲ್ ಪೂಜಾರಿ ವಂದಿಸಿದರು.

ಬೆಳ್ತಂಗಡಿ ಹೋಲಿ ರೆಡೀಮರ್ ಆ.ಮಾ. ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಕ್ಲಸ್ಟರ್ ಕ್ರೀಡಾಕೂಟದಲ್ಲಿ ಅನೇಕ ಪದಕಗಳನ್ನು ಗೆದ್ದುಕೊಂಡರು

ಬೆಳ್ತಂಗಡಿ, ಅ. 28 ರಂದು ನಡೆದ ಶ್ರೀ ಮಂಜುನಾಥೇಶ್ವರ ರತ್ನವರ್ಮ ಕ್ರೀಡಾಂಗಣದಲ್ಲಿ ಕ್ರೀಡಾಕೂಟದಲ್ಲಿ ಬೆಳ್ತಂಗಡಿ ಹೋಲಿ ರೆಡೀಮರ್ ಆ.ಮಾ. ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಅನೇಕ ಪದಕಗಳನ್ನು ಗೆದ್ದುಕೊಂಡಿದ್ದಾರೆ.  

ಆಲ್ಸ್ಟನ್ (7 ನೇ ತರಗತಿ) ಮತ್ತು ದೀಕ್ಷಿತಾ (8 ನೇ ತರಗತಿ) ಕ್ಲಸ್ಟರ್ ಮಟ್ಟದ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಆಲ್ಸ್ಟನ್ (7 ನೇ ತರಗತಿ) 600 ಮೀ ಮತ್ತು 400 ಮೀ ಓಟದಲ್ಲಿ ಪ್ರಥಮ ಸ್ಥಾನ ಮತ್ತು 200 ಮೀ ಓಟದಲ್ಲಿ ದ್ವಿತೀಯ ಸ್ಥಾನ. ರಿಲೇಯಲ್ಲಿ ಅಲ್ಸ್ಟನ್, ಸಬಿತ್, ಮುಕದ್ದಮ್ ಮತ್ತು ಶ್ರೇಯಸ್ ಮೂರನೇ  ಸ್ಥಾನ ಪಡೆದರು. ಹೈಜಂಪ್ ನಲ್ಲಿ ಪ್ರಜ್ನೇಶ್ (8 ನೇ ತರಗತಿ) ಪ್ರಥಮ ಹಾಗೂ 600 ಮೀಟರ್ ಓಟದಲ್ಲಿ ತೃತೀಯ, ಕರಣ್ (8 ನೇ ತರಗತಿ) ಹೈಜಂಪ್ ನಲ್ಲಿ ದ್ವಿತೀಯ ಹಾಗೂ 400 ಮೀಟರ್ ಓಟದಲ್ಲಿ ಲೆವಿನ್ (8 ನೇ ತರಗತಿ) ಪ್ರಥಮ ಸ್ಥಾನ ಪಡೆದರು. ಪ್ರಜ್ನೇಶ್, ಲೆವಿನ್, ಆಶಿಶ್ ಮತ್ತು ಅವೀಜ್ ರಿಲೇಯಲ್ಲಿ  ಮೊದಲ ಸ್ಥಾನ ಪಡೆದರು. ದೀಕ್ಷಿತಾ (8 ನೇ ತರಗತಿ) 200ಮೀ ಮತ್ತು 400ಮೀ ಓಟದಲ್ಲಿ ಪ್ರಥಮ ಹಾಗೂ 100ಮೀ ಓಟದಲ್ಲಿ ದ್ವಿತೀಯ, ಸಿಂಚನಾ ಶೆಟ್ಟಿ (7 ನೇ ತರಗತಿ) ಶಾಟ್‌ಪುಟ್‌ನಲ್ಲಿ ಪ್ರಥಮ ಹಾಗೂ ವೈಷ್ಣವಿ  (8 ನೇ ತರಗತಿ) 600ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದರು. ರಿಲೇಯಲ್ಲಿ ದೀಕ್ಷಿತಾ, ವೈಷ್ಣವಿ, ಶರಣ್ಯ ಮತ್ತು ಸಾನ್ವಿ ದ್ವಿತೀಯ ಸ್ಥಾನ ಪಡೆದರು. ಈ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕ ಶರತ್ ಪಿಂಟೋ ತರಬೇತಿ ನೀಡಿದ್ದರು.

ಬೆಳ್ತಂಗಡಿ ಹೋಲಿ ರೆಡೀಮರ್ ಆ.ಮಾ. ಪ್ರೌಢಶಾಲಾ ವಿದ್ಯಾರ್ಥಿಗಳು ಕ್ಲಸ್ಟರ್ ಕ್ರೀಡಾಕೂಟದಲ್ಲಿ ಅನೇಕ ಪದಕಗಳನ್ನು ಗೆದ್ದುಕೊಂಡರು.

ಬೆಳ್ತಂಗಡಿ, ಅ. 28 ರಂದು ನಡೆದ ಶ್ರೀ ಮಂಜುನಾಥೇಶ್ವರ ರತ್ನವರ್ಮ ಕ್ರೀಡಾಂಗಣದಲ್ಲಿ ಕ್ರೀಡಾಕೂಟದಲ್ಲಿ ಹೋಲಿ ರೆಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿಗಳು ಅನೇಕ ಪದಕಗಳನ್ನು ಗೆದ್ದುಕೊಂಡಿದ್ದಾರೆ.   ಶಾಟ್‌ಪುಟ್‌ನಲ್ಲಿ ಸೃಷ್ಟಿ (10ನೇ ತರಗತಿ) ಪ್ರಥಮ ಸ್ಥಾನ, 200 ಮೀಟರ್ ಓಟ ಮತ್ತು ಎತ್ತರ ಜಿಗಿತದಲ್ಲಿ ಜೋಶನ್ (10ನೇ ತರಗತಿ) ಪ್ರಥಮ ಸ್ಥಾನ. ಬಾಲಕರ ರಿಲೇಯಲ್ಲಿ ಜೋಶನ್, ವರುಣ್, ಧನುಷ್ ಮತ್ತು ಶಾಮಿಲ್ ಪ್ರಥಮ ಸ್ಥಾನ ಪಡೆದರು. 400ಮೀ ಮತ್ತು 800ಮೀ ಓಟದಲ್ಲಿ ಲುಹಾ (10ನೇ ತರಗತಿ)ದ್ವಿತೀಯ, ಶಾಟ್‌ನಲ್ಲಿ ವಿಯೋನಾ (10ನೇ ತರಗತಿ)ದ್ವಿತೀಯ, ವರುಣ್ (10ನೇ ತರಗತಿ) 800ಮೀ ಓಟದಲ್ಲಿ ದ್ವಿತೀಯ, 400 ಮೀಟರ್ ಓಟದಲ್ಲಿ ಧನುಷ್ (10ನೇ ತರಗತಿ) ತೃತೀಯ, 100 ಮೀಟರ್ ಓಟದಲ್ಲಿ ಜೋಶನ್ (10ನೇ ತರಗತಿ) ತೃತೀಯ ಮತ್ತು 200 ಮೀಟರ್ ಓಟದಲ್ಲಿ ಶಾಮಿಲ್ (10ನೇ ತರಗತಿ)ತೃತೀಯ. ಪ್ರೌಢಶಾಲಾ ವಿಭಾಗದ ಹುಡುಗರ ವಿಭಾಗದಲ್ಲಿ  ಹೋಲಿ ರೆಡೀಮರ್ ಆಂಗ್ಲ ಮಾಧ್ಯಮ ಶಾಲೆಯು ಕ್ಲಶ್ಟರ್ ಚಾಂಪಿಯನ್‌ಶಿಪ್ ಅನ್ನು ಪಡೆದುಕೊಂಡಿತು.ಹಾಗೇ ವಿದ್ಯಾರ್ಥಿ ಜೋಶನ್ ಕ್ಲಸ್ಟರ್ ಮಟ್ಟದ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕ ಶರತ್ ಪಿಂಟೋ ತರಬೇತಿ ನೀಡಿದ್ದರು.

ಶ್ರೀನಿವಾಸಪುರದಲ್ಲಿ ಪುನೀತ್ ರಾಜ್‍ಕುಮಾರ್ ಪುಣ್ಯತಿಥಿ ಪ್ರಯುಕ್ತ ಅಪ್ಪು ಅಭಿಮಾನಿಗಳ ಸಂಘದಿಂದ ಅನ್ನದಾನ

ಶ್ರೀನಿವಾಸಪುರದಲ್ಲಿ ಪುನೀತ್ ರಾಜ್‍ಕುಮಾರ್ ಪುಣ್ಯತಿಥಿ ಪ್ರಯುಕ್ತ ಅಪ್ಪು ಅಭಿಮಾನಿಗಳ ಸಂಘದಿಂದ ಶನಿವಾರ ಏರ್ಪಡಿಸಿದ್ದ ಅನ್ನದಾನ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಮುಖ್ಯ ಸಚೇತಕ ಡಾ. ವೈ.ಎ.ನಾರಾಯಣಸ್ವಾಮಿ ಚಾಲನೆ ನೀಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್, ಸಂಘದ ಅಧ್ಯಕ್ಷ ಎಸ್.ಎಚ್.ನಾರಾಯಣಮೂರ್ತಿ ಇದ್ದರು.

ಕೆಂಪೇಗೌಡರ ಆಡಳಿತ ಮಾದರಿಯಾಗಿದೆ : ಡಾ. ವೈ.ಎ.ನಾರಾಯಣಸ್ವಾಮಿ

ಶ್ರೀನಿವಾಸಪುರ: ಕೆಂಪೇಗೌಡರ ಆಡಳಿತ ಮಾದರಿಯಾಗಿದೆ.ಎಂದು ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಡಾ. ವೈ.ಎ.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಬಾಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಸ್ಥಾಪನೆ ಪ್ರಯುಕ್ತ ಶನಿವಾರ ಏರ್ಪಡಿಸಿದ್ದ ಮೃತ್ತಿಕೆ ಸಂಗ್ರಹ ರಥಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ವಿಮಾನ ನಿಲ್ದಾಣದ ಸಮೀಪ ಕೆಂಪೇಗೌಡರ ಪುತ್ಥಳಿ ಸ್ಥಾಪನೆ ನಾಡಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಪುತ್ಥಳಿ ಅನಾವಣರಣ ಕಾರ್ಯಕ್ರಮ ನ.11 ರಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಂದ ಪುತ್ಥಳಿ ಅನಾವರಣಗೊಳ್ಳಲಿದೆ. ಕಾರ್ಯಕ್ರಮ ಜಾತ್ಯಾತೀತ ಹಾಗೂ ಪಕ್ಷಾತೀತವಾಗಿದ್ದು, ಸಮಾಜದ ಎಲ್ಲ ವರ್ಗದ ಜನರೂ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು. ನಾಡಿನ ಘನತೆ ಎತ್ತಿಹಿಡಿಯಬೇಕು ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್, ಮಾಜಿ ಶಾಸಕ ಬಿ.ಬಿ.ವೆಂಕಟಮುನಿಯಪ್ಪ, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್, ತಾಲ್ಲೂಕು ಒಕ್ಕಲಿಗರ ಸಂಘದ ಮುಖಂಡರಾದ ದಿಂಬಾಲ ಅಶೋಕ್, ಡಾ. ವೈ.ವಿ.ವೆಂಕಟಾಚಲ, ಎನ್.ಹನುಮೇಶ್ ವೇಣುಗೋಪಾಲರೆಡ್ಡಿ, ಸತ್ಯನಾರಾಯಣ, ಮುಖಂಡರಾದ ಕೆ.ಕೆ.ಮಂಜುನಾಥರೆಡ್ಡಿ, ಎಂ.ಲಕ್ಷ್ಮಣಗೌಡ, ಜೆಸಿಬಿ ಅಶೋಕ್‍ರೆಡ್ಡಿ, ವಾಸುದೇವ್, ಅಶೋಕ್‍ರೆಡ್ಡಿ, ವಿ.ನಿಶಾಂತ್ ಕುಮಾರ್ ಪುರಸಭೆ ಮುಖ್ಯಾಧಿಕಾರಿ ಎಂ.ಜಯರಾಂ ಮತ್ತಿತರರು ಇದ್ದರು.

ಕೋಲಾರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಲಿದ್ದು, ಎಲ್ಲ ವರ್ಗದ ಜನರೂ ಅವರನ್ನು ಬೆಂಬಲಿಸಬೇಕು:ಶಾಸಕ ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ಕೋಲಾರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಲಿದ್ದು, ಎಲ್ಲ ವರ್ಗದ ಜನರೂ ಅವರನ್ನು ಬೆಂಬಲಿಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ, ತಾಲ್ಲೂಕು ವಾಲ್ಮೀಕಿ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಕೈಗೊಂಡ ನಿರ್ಧಾರದಿಂದಾಗಿ ಬಡವರು, ಅನ್ನ ತಿನ್ನುವಂತಾಗಿದೆ. ಬಡವರಿಗೆ ಅಕ್ಕಿ ನೀಡಿದ ಪರಿಣಾಮವಾಗಿ ಹಸಿವು ಮುಕ್ತ ಕರ್ನಾಟಕದ ಕನಸು ನನಸಾಗಿದೆ. ಬಡವರ ಪರ ಕಾಳಜಿ ಇರುವ ಸಿದ್ದರಾಮಯ್ಯ ಅವರನ್ನು ಆರಿಸಿ ಕಳುಹಿಸಿದರೆ ಹೆಚ್ಚಿನ ಪ್ರಯೋಜನವಾಗುತ್ತದೆ ಎಂದು ಹೇಳಿದರು.
ರಾಮಾಯಣ ಮಹಾಕಾವ್ಯ ನೀಡಿದ ಮಹರ್ಷಿ ವಾಲ್ಮೀಕಿ ನಿತ್ಯ ಸ್ಮರಣೀಯರು. ಅವರು ರಚಿಸಿದ ಮಹಾಕಾವ್ಯ ನಿತ್ಯ ನೂತನವಾಗಿದೆ. ವಾಲ್ಮೀಕಿ ಸಮುದಾಯ ಸಂವಿಧಾನ ನೀಡಿರುವ ಹಕ್ಕುಗಳಿಗಾಗಿ ಸಾಂಘಿಕ ಪ್ರಯತ್ನ ನಡೆಸಬೇಕು. ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಮಹರ್ಷಿ ವಾಲ್ಮೀಕಿ ತಮ್ಮ ಕೃತಿಯ ಮೂಲಕ ಸಮಾಜದ ಎಲ್ಲ ವರ್ಗದ ಜನರ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಕಾವ್ಯ ಹಲವು ಶತಮಾನಗಳಿಂದ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್, ಸಮಾಜ ಕಲ್ಯಾಣ ಅಧಿಕಾರಿ ಶಿಕುಮಾರ್, ಮುಖಂಡರಾದ ಮ್ಯಾಕಲ ನಾರಾಯಣಸ್ವಾಮಿ, ಗೋವಿಂದಸ್ವಾಮಿ, ಅಂಬರೀಶ್, ದಿಂಬಾಲ ಅಶೋಕ್, ಎನ್.ಹನುಮೇಶ್, ನರೇಶ್, ಎಚ್.ಎನ್.ಆಂಜಿನಪ್ಪ, ರೋಣೂರು ಚಂದ್ರಶೇಖರ್, ಕೆ.ನಾಗರಾಜ ನಾಯಕ್, ರಾಮಕೃಷ್ಣ, ವಿಠ್ಠಲ್ ನಾರಾಯಣ್, ಕೆ.ಕೆ.ಮಂಜು, ಸರಸ್ವತಮ್ಮ, ರಾಮಾಂಜಮ್ಮ ಇದ್ದರು.
ಮೆರವಣಿಗೆ: ಪಟ್ಟಣದ ತಾಲ್ಲೂಕಿನ ಬೇರೆ ಬೇರೆ ಕಡೆಗಳಿಂದ ವಾಹನಗಳಲ್ಲಿ ತರಲಾಗಿದ್ದ ವಾಲ್ಮೀಕಿ ಭಾವ ಚಿತ್ರ ಮೆರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ಕಲಾ ತಂಡಗಳು ಭಾಗವಹಿಸಿ ಪ್ರದರ್ಶನ ನೀಡಿದವು. ವಾಲ್ಮೀಕಿ ಸಮುದಾಯದ ಮುಖಂಡರು ಹಾಗೂ ಜನರು ಭಾಗವಹಿಸಿದ್ದರು.

ಡಾ. ರಾಜ್ ಸಂಘಟನೆಯಿಂದ ಪುನೀತ ರಾಜ್ ಕುಮಾರ್ ಸ್ಮರಣೆ

ಕುಂದಾಪುರ : ಎಷ್ಟೋ ಜನರ ಬಾಳಿಗೆ ಬೆಳಕಾಗಿದ್ದ ಅಪ್ಪು ಇಲ್ಲದೆ ವರುಷವೊಂದು ಕಳೆದು ಹೋಗಿದೆ ಕನ್ನಡ ಚಿತ್ರರಂಗದ ದಂತ ಕತೆಯಾಗಿರುವ ಪುನೀತ್ ರಾಜ್ ಕುಮಾರ್ ಸೂರ್ಯ ಚಂದ್ರರಿರುವ ತನಕ ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತರಾಗಿರುತ್ತಾರೆ. ಎಂದು ಕನ್ನಡಾಭಿಮಾನಿ ಡಾ.ರಾಜ್ ಸಂಘಟನೆಯ ಅಧ್ಯಕ್ಷ ರತ್ನಾಕರ ಪೂಜಾರಿಯವರು ಹೇಳಿದರು.ಅವರು ಸಂಘ ವತಿಯಿಂದ ಕುಂದಾಪುರ ಹೊಸ ಬಸ್ ನಿಲ್ದಾಣದಲ್ಲಿ ಆಯೋಜಿಸಲಾದ ಪುನೀತ ಸ್ಮರಣೆ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಚಿತ್ರಕ್ಕೆ ದೀಪ ಹಚ್ಚಿ ಮಾತನಾಡಿದರು.
ಮೊಂಬತ್ತಿ ಬೆಳಗಿಸುವುದರ ಮೂಲಕ ಒಂದು ನಿಮಿಷ ಮೌನವನ್ನುಆಚರಿಸಲಾದ ಕಾರ್ಯಕ್ರಮದಲ್ಲಿ ಸಂಘದ ಅಗಸ್ಟಿನ್ ಡಿಸೋಜಾ,ದುಂಡಿರಾಜ್, ಹರ್ಷ ಖಾರ್ವಿ,ಶ್ರೀಧರ ಗಾಣಿಗ, ಗಾಳಿ ಮಾಧವ ಖಾರ್ವಿ,ಪ್ರಭಾಕರಖಾರ್ವಿ,ಕೋಡಿ ಶಂಕರ, ಸಂತೋಷ್ ಕುಂದೇಶ್ವರ್, ಗುರು ಖಾರ್ವಿ,ಕಿಶನ್ ಖಾರ್ವಿ,ನಾರಾಯಣ ಗಾಣಿಗ ತೆಕ್ಕಟ್ಟೆ ಸಹಿತ ಹಲವಾರು ಸಾರ್ವಜನಿಕರು ಭಾಗವಹಿಸಿದ್ದರು .ಸುನಿಲ್ ಕುಮಾರ್ ತಲ್ಲೂರು ಸ್ವಾಗತ ಕೋರಿದರು.ಪತ್ರಕರ್ತ ಮಝರ್ ಕುಂದಾಪುರ ನಿರೂಪಿಸಿದರು.

ಕುಂದಾಪುರ ಸೈಂಟ್ ಮೇರಿಸ್ ಸಮೂಹ ಸಂಸ್ಥೆ: ಕೋಟಿ ಕಂಠ ಗಾಯನ


ಕುಂದಾಪುರ:ಇಲ್ಲಿನ ಸೈಂಟ್ ಮೇರಿಸ್ ಸಮೂಹ ಸಂಸ್ಥೆಯಾದ ಸೈಂಟ್ ಮೇರಿಸ್ ಪ್ರೌಢಶಾಲೆ, ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ,ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜ್, ಹೋಲಿ ರೋಜರಿ ಆ.ಮಾ.ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಬೃಹತ್ ಕೋಟಿ ಕಂಠ ಗಾಯನ ಕಾರ್ಯಕ್ರಮ ಶುಕ್ರವಾರ ಸಂಭ್ರಮದಿಂದ ನಡೆಯಿತು.

ಸೈಂಟ್ ಮೇರಿಸ್ ಸಮೂಹ ಸಂಸ್ಥೆಯ ಸಮಾರು 1300 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು.


ಸೈಂಟ್ ಮೇರಿಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅಸುಂತಾ ಲೋಬೋ,ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ಪ್ರಾಶುಂಪಾಲೆ ರೇಷ್ಮಾ ಫರ್ನಾಂಡೀಸ್, ಸೈಂಟ್ ಮೇರಿಸ್ ಹಿ.ಪ್ರಾ ಶಾಲಾ ಮುಖ್ಯ ಶಿಕ್ಷಕಿ ಡೋರಾ ಸುವಾರಿಸ್, ಹೋಲಿ ರೋಜರಿ ಆ.ಮಾ.ಶಾಲೆ ಮುಖ್ಯ ಶಿಕ್ಷಕಿ ಸಿಸ್ಟರ್ ತೆರೆಜಾ ಶಾಂತಿ, ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿ ಗೀತಾ ಸ್ವಾಗತಿಸಿದರು. ಎನ್‍ಸಿಸಿ ಹಿರಿಯ ಅಧಿಕಾರಿ ಭಾಸ್ಕರ ಗಾಣಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಸ್ಟರ್ ಚೇತನಾ ಸಂಕಲ್ಪವಿಧಿ ಭೋದಿಸಿದರು. ಶಿಕ್ಷಕ ಪ್ರಶಾಂತ್ ಲುಯಿಸ್ ವಂದಿಸಿದರು. ಉಪನ್ಯಾಸಕ ನಾಗರಾಜ ಶೆಟ್ಟಿಕಾರ್ಯಕ್ರಮ ನಿರೂಪಿಸಿದರು