ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ವರಕವಿ ಮುದ್ದಣನ ಊರಿನಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮ

ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್, ಕನ್ನಡ ಜಾನಪದ ಪರಿಷತ್ತು ಕಾರ್ಕಳ ತಾಲೂಕು ಘಟಕ, ಕನ್ನಡ ಸಂಸ್ಕøತಿ ಇಲಾಖೆ, ಉಡುಪಿ ಜಿಲ್ಲೆ ಇದರ ಸಂಯುಕ್ತ ಆಶ್ರಯದಲ್ಲಿ ನಂದಳಿಕೆ ಅಬ್ಬನಡ್ಕದ ಕುಂಟಲಗುಂಡಿಯಲ್ಲಿರುವ ವರಕವಿ ಮುದ್ದಣನ ಊರಿನಲ್ಲಿ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ರಂಗಮಂದಿರದಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಅತ್ಯಂತ ಯಶಸ್ವಿಯಾಗಿ ಜರಗಿತು. ಕನ್ನಡಾಂಬೆಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿ ಪುಷ್ಪರ್ಚನೆ ಸಲ್ಲಿಸಲಾಯಿತು.      
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷರಾದ ನಂದಳಿಕೆ ಪ್ರಶಾಂತ್ ಪೂಜಾರಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದವರು ಸಮೃದ್ಧ, ಸದೃಢ, ಸ್ವಾಭಿಮಾಣದ ಕರ್ನಾಟಕಕ್ಕಾಗಿ ನಾವೆಲ್ಲರೂ ಪಣತೊಡಬೇಕಾಗಿದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡ ಜಾನಪದ ಪರಿಷತ್ತು ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾದ ದೇವದಾಸ್ ಮಾತನಾಡಿ ರಾಜ್ಯದ ಸಂಸ್ಕøತಿ ಮತ್ತು ಇತಿಹಾಸವನ್ನು ಉಳಿಸಿ ಬೆಳೆಸುವ ಕೆಲಸ ನಮ್ಮಿಂದಾಗಬೇಕಾಗಿದೆ ಎಂದರು.
ಮುಖ್ಯ ಅತಿಥಿ ಕನ್ನಡ ಜಾನಪದ ಪರಿಷತ್ತು ಕಾರ್ಕಳ ತಾಲೂಕು ಘಟಕದ ಸಂಚಾಲಕರಾದ ಚಂದ್ರನಾಥ್ ಬಜಗೋಳಿ ಮಾತನಾಡಿ ಸಾಂಸ್ಕøತಿಕವಾಗಿ, ಧಾರ್ಮಿಕವಾಗಿ ಮತ್ತು ಐತಿಹಾಸಿಕವಾಗಿ ಅತ್ಯಂತ ವೈವಿಧ್ಯತೆಯಿಂದ ಕೂಡಿರುವ ಕರ್ನಾಟಕದಲ್ಲಿ ಹುಟ್ಟಿರುವುದೇ ನಮ್ಮ ಭಾಗ್ಯ ಎಂದರು.
ಹಿರಿಯ ದೈವನರ್ತಕರಾದ ಬೋಳ ಕೃಷ್ಣಪ್ಪ ಪಾಣರ ಅವರನ್ನು ಸನ್ಮಾನಿಸಲಾಯಿತು. 
ವೇದಿಕೆಯಲ್ಲಿ ಸಂಘದ ಸ್ಥಾಪಕಾಧ್ಯಕ್ಷರಾದ ವಿಠಲ ಮೂಲ್ಯ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನೇಶ್ ಪೂಜಾರಿ ಬೀರೊಟ್ಟು, ನಿಕಟ ಪೂರ್ವಾಧ್ಯಕ್ಷ ಉದಯ ಅಂಚನ್ ಮೊದಲಾದವರಿದ್ದರು.
ಬೋಳ ನಮಿತಾ ಮತ್ತು ಪದ್ಮಶ್ರೀ ಪೂಜಾರಿ ನಾಡಗೀತೆ ಹಾಡಿದರು. ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ದೇವದಾಸ್ ಸ್ವಾಗತಿಸಿದರು. ಲಲಿತಾ ಆಚಾರ್ಯ ವಂದಿಸಿದರು. ಸಂಧ್ಯಾ ಶೆಟ್ಟಿ ಸನ್ಮಾನಿತರ ಪರಿಚಯ ವಾಚಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಅಮಿತಾ ಮತ್ತು ತಂಡದವರಿಂದ ಕನ್ನಡ ಗೀತಾ ಗಾಯನ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ಜರಗಿತು.

ಡಾ. ರಾಜ್ ಸಂಘಟನೆ ಯಿಂದ ರಾಜ್ಯೋತ್ಸವ ಆಚರಣೆ

ಕುಂದಾಪುರ : ಕನ್ನಡ ರಾಜ್ಯೋತ್ಸವ ಎನ್ನವುದು ನಾಡಿನ ಪ್ರತಿ ಮನೆಯಲ್ಲಿ ಆಚರಿಸುವ ಹಬ್ಬವಾಗ ಬೇಕು ಈ ನಿಟ್ಟಿನಲ್ಲಿ ಸಂಘವು ಪ್ರತಿ ವರ್ಷ ಆಚರಿಸುವ ರಾಜ್ಯೋತ್ಸವ ಕಾರ್ಯಕ್ರಮವು ಶ್ಲಾಘನೀಯ ಎಂದು ಹಿರಿಯ ನ್ಯಾಯವಾದಿ ಮುದ್ದಣ ಶೆಟ್ಟಿ ಹೇಳಿದರು. ಅವರು ಕನ್ನಡಾಭಿಮಾನಿ ಡಾ. ರಾಜ್  ಸಂಘಟನೆಯ ವತಿಯಿಂದ ಹೊಸ ಬಸ್ ನಿಲ್ದಾಣದಲ್ಲಿ ಆಯೋಜಿಸಲಾದ 67ನೇ ರಾಜ್ಯೋತ್ಸವದ ಧ್ವಜಾರೋಹಣ ಗೈದು ಮಾತನಾಡಿದರು. ಸಂಘಟನೆಯ ಅಧ್ಯಕ್ಷ ರತ್ನಾಕರ ಪೂಜಾರಿ ಅವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು.ಉದ್ಯಮಿ ಶ್ರೀಧರ್ ಗಾಣಿಗ ದೀಪ ಬೆಳಗಿಸಿದರು. ಪ್ರಣಮ್ಯಾ ಡಿ.ಅವರ ಪ್ರಾರ್ಥನೆ ಯಿಂದ ಆರಂಭಗೊಂಡ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೊಬೈಲ್ ಎಕ್ಸ್ ನ ಮುಸ್ತಫಾ, ರೊಯ್ಸನ್ ಡಿಸೋಜಾ ಆಗಮಿಸಿದ್ದರು.ಸಭೆಯಲ್ಲಿ ಅಗಸ್ಟಿನ್ ಡಿಸೋಜ,ಪ್ರಭಾಕರ ಶಾಮಿಯಾನ,ನವೀನ್ ಪೂಜಾರಿ ,ಯಾಸಿನ್ ಹೆಮ್ಮಾಡಿ,ಕಿಶನ್ ಖಾರ್ವಿ,ನಾರಾಯಣ ಗಾಣಿಗ ತೆಕ್ಕಟ್ಟೆ,ಗುರು ಖಾರ್ವಿ, ಗಾಳಿ ಮಾಧವ ಖಾರ್ವಿ,ದಯಾ,ಶಿವರಾಜ್ ಖಾರ್ವಿ, ನಾಗರಾಜ್ ಖಾರ್ವಿ,ಪ್ರಶಾಂತ್ ಖಾರ್ವಿ,ನಾಗರಾಜ್ ಗಾಣಿಗ, ಪ್ರಕಾಶ್ ಸಾರಂಗ ಮುಂತಾದವರು ಉಪಸ್ಥಿತರಿದ್ದರು. ಸುನೀಲ್ ಖಾರ್ವಿ ತಲ್ಲೂರು ಸ್ವಾಗತಿಸಿದರು. ಪ್ರಸಾದ್ ಗಾಣಿಗ ನಿರೂಪಣೆಗೈದರು. ದುಂಡಿರಾಜ್ ಹಟ್ಟಿಕುದ್ರು ಧನ್ಯವಾದ ಅರ್ಪಿಸಿದರು.

ಕುಂದಾಪುರದಲ್ಲಿ ಅಗಲಿದ ವಿಶ್ವಾಸಿಗಳ ನೆನಪಿನ ದಿನದ ಆಚರಣೆ


ಕುಂದಾಪುರ, ನ.2: ಕುಂದಾಪುರ ರೋಸರಿ ಮಾತಾ ಚರ್ಚಿನಲ್ಲಿ ಅಗಲಿದ ವಿಶ್ವಾಸಿಗಳ ನೆನಪಿನ ದಿನವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು. ಈ ಆಚರಣೆಯು ವಿಶ್ವಾದಾದ್ಯಂತ ಕಥೊಲಿಕ್ ಕ್ರೆಸ್ತರು ಆಚರಿಸುತ್ತಾರೆ. ಮೊದಲಿಗೆ ಹೋಲಿ ರೋಸರಿ ಚರ್ಚಿನಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು. ಪ್ರಧಾನ ಧರ್ಮಗುರು |ವಂ| ಸ್ಟ್ಯಾನಿ ತಾವ್ರೊ ಬಲಿದಾನದ ಪ್ರಧಾನ ಯಾಜಕರಾಗಿದ್ದು “ನಮ್ಮನ್ನು ಅಗಲಿ ಹೋದ ವಿಶ್ವಾಸಿಗಳಿಗೆ ನಮ್ಮ ಪ್ರಾರ್ಥನೇಯ ಅಗತ್ಯವಿದೆ, ನಾವು ದೇವರಲ್ಲಿ ಪ್ರಾಥಿಸಿದರೆ ಅವರಿಗೆ ಸದ್ಗತಿ ದೊರಕಬಲ್ಲದು, ನಾವು ನಮ್ಮ ಕುಟುಂಬದ ಆತ್ಮಗಳಿಗಾಗಿ ಮತ್ತು ಅನಾಥ ಆತ್ಮಗಳಿಗಾಗಿಯೂ ಪ್ರಾರ್ಥನೆ ಸಲ್ಲಿಸಬೇಕು, ಪ್ರಭು ಯೇಸು ಸ್ವಾಮಿಗೆ ನಮ್ಮಲ್ಲಿ ಯಾರನ್ನೂ ಕಳೆದುಕೊಳ್ಳಲು ಮನಸಿಲ್ಲ, ನಾವು ಜೀವಿತದಲ್ಲಿ ಸದ್ಗತಿ ಪಡೆಯಲು ಉತ್ತಮ ಜೀವನ ನಡೆಸಬೇಕು” ಎಂದು ತಿಳಿಸಿದರು.
ನಂತರ ಮ್ರತಪಟ್ಟ ಸಮಾಧಿ ಭೂಮಿಗೆ ತೆರಳಿ ಅಗಲಿದವರ ಸದ್ಗತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಮತ್ತು ಸಮಾಧಿ ಮಾಡಲ್ಪಟ ಗೋರಿಗಳನ್ನು ಪವಿತ್ರ ಜಲದಲ್ಲಿ ಪವಿತ್ರಿಕರಿಸಲಾಯಿತು. ಈ ಪ್ರಾರ್ಥನ ವಿಧಿಯಲ್ಲಿ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಸಹಕರಿಸಿದರು.

ಅಗಲಿದ ವಿಶ್ವಾಸಿಗಳ ನೆನಪಿನ ದಿನದ ಆಚರಣೆಯ ಹಿಂದಿನ ಸಂಜೆ, ಕುಂದಾಪುರ ಹೋಲಿ ರೋಸರಿ ಚರ್ಚಿನ ಸಮಾಧಿ ಭೂಮಿಯಲ್ಲಿ, ತಮ್ಮ ಕುಟುಂಬದ ಅಗಲಿದ ಸದಸ್ಯರ ಗೋರಿಗಳನ್ನು ಮುಂಬತ್ತಿ ಮತ್ತು ಹೂವುಗಳಿಂದ ಅಲಕ್ರಂತಗೊಂಡ ದ್ರಶ್ಯವಿದು.

ಭಾರತೀಯ ಸಂಸ್ಕ್ರತಿಯಲ್ಲಿ ಹಬ್ಬ ಹರಿದಿನಗಳಿಗೆ ಮಹತ್ವ ನೀಡಲಾಗಿದೆ:ಸುಧೀರ ಚೈತನ್ಯ ಸ್ವಾಮೀಜಿ

ಶ್ರೀನಿವಾಸಪುರ: ಭಾರತೀಯ ಸಂಸ್ಕøತಿಯಲ್ಲಿ ಹಬ್ಬ ಹರಿದಿನಗಳಿಗೆ ಮಹತ್ವ ನೀಡಲಾಗಿದೆ ಎಂದು ಸುಧೀರ ಚೈತನ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ವೈಆರ್‍ಎಸ್ ಸಭಾಂಗಣದಲ್ಲಿ ಪತಂಜಲಿ ಮುದ್ರಾ ಯೋಗ ಶಿಕ್ಷಣ ಸಮಿತಿ ವತಿಯಿಂದ ದೀಪಾವಳಿ ಹಾಗೂ ಕಾರ್ತೀಕ ಮಾಸದ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ದೀಪೋತ್ಸವ ಹಾಗೂ ಜ್ಯೋತಿರ್ಬಿಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೌರಾಣಿಕ ಹಾಗೂ ಸಾಂಸ್ಕøತಿಕ ಮಹತ್ವ ಹೊಂದಿರುವ ಹಬ್ಬಗಳು ಸಮಾಜದ ಎಲ್ಲ ಸಮುದಾಯಗಳನ್ನೂ ಒಗ್ಗೂಡಿಸುತ್ತವೆ ಎಂದು ಹೇಳಿದರು.
ಯಾವುದೇ ಆಚಾರ ಹಾಗೂ ವಿಚಾರದ ನಡುವೆ ಸಮನ್ವಯ ಇರಬೇಕು. ದೀಪ ಜ್ಞಾನದ ಸಂಕೇತ. ಆತ್ಮಜ್ಞಾನದ ಬೆಳಕು ಎಲ್ಲೆಲ್ಲೂ ಹರಡಬೇಕು. ಆತ್ಮಶಕ್ತಿಗಿಂತ ಮಿಗಿಲಾದ ಆಯುಧವಿಲ್ಲ. ಆತ್ಮಶಕ್ತಿಗೆ ಎಲ್ಲವನ್ನೂ ಗೆಲ್ಲುವ ಸಾಮಥ್ರ್ಯ ಇದೆ. ಅದು ಧ್ಯಾನದಿಂದ ಲಭ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಯೋಗ ಶಿಕ್ಷಕ ನರಸಿಂಹರೆಡ್ಡಿ ಮಾತನಾಡಿ, ದೈಹಿಕ ಹಾಗೂ ಮಾನಸಿಕ ಆರೋಗ್ಯ ರಕ್ಷಣೆ ಮಾಡುವಲ್ಲಿ ಯೋಗ ಮತ್ತು ಪ್ರಾಣಾಯಾಮ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಅರ್ಹ ವ್ಯಕ್ತಿಗಳು ಯೋಗಾಭ್ಯಾಸ ಮಾಡಬೇಕು. ಅದರ ಮಹತ್ವ ಅರಿಯಲು ಪೂರಕವಾಗಿ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಮುಖ್ಯ ಯೋಗ ಶಿಕ್ಷಕ ವೆಂಕಟೇಶ್ ಯೋಗ ಪಟುಗಳಿಗೆ ಜ್ಯೋತಿರ್ಬಿಂಬ ಧ್ಯಾನ ತರಬೇತಿ ನೀಡಿದರು. ದೀಪಾವಳಿ ಆಚರಣೆ ಮಹತ್ವ ಕುರಿತು ಮಾತನಾಡಿದರು.
ಶಿಕ್ಷಕಿಯರಾದರ ಮಂಜುಳ, ತಿಲೋತ್ತಮೆ, ಶಿಕ್ಷಕ ಕೆ.ಸಿ.ಶ್ರೀನಿವಾಸ್, ಉಪನ್ಯಾಸಕ ಎನ್.ಶಂಕರೇಗೌಡ ಇದ್ದರು.

ಸೈಂಟ್ ಆಗ್ನೆಸ್ ಪಿಯು ಕಾಲೇಜು ಗ್ರಂಥಾಲಯ ಸಪ್ತಾಹವನ್ನು ಆಚರಿಸಿತು

ಮಂಗಳೂರು: ಗ್ರಂಥಾಲಯಗಳು ಮತ್ತು ಗ್ರಂಥಾಲಯ ಕಾರ್ಯಕರ್ತರ ಕೊಡುಗೆಗಳನ್ನು ಸ್ಮರಿಸಲು  ಸೈಂಟ್ ಆಗ್ನೆಸ್ ಪಿಯು ಕಾಲೇಜು ಗ್ರಂಥಾಲಯ ಸಪ್ತಾಹವನ್ನು ಆಚರಿಸಿತು. ಸಾಂಕ್ರಾಮಿಕ ಕಾಯಿಲೆಯ ಸಮಯದಲ್ಲಿ ಪುಸ್ತಕಗಳನ್ನು ಓದಲು ಮತ್ತು ಓದುವ ಆಸಕ್ತಿಯನ್ನು ಕ್ಷೀಣಿಸಿದಾಗ, ಒದುವಿಕೆಯಲ್ಲಿ ಆಸಕ್ತಿ ಬೆಳೆಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಒಂದು ವಾರದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

   ಪುಸ್ತಕಗಳಿ ಗೆ ಅಂಕ ಸ್ಪರ್ಧೆ, ಪುಸ್ತಕ ವಿಮರ್ಶೆ, ವರ್ಷದ ಓದುಗರು ಮತ್ತು ಅತ್ಯುತ್ತಮ ಶೀರ್ಷಿಕೆ ಸ್ಪರ್ಧೆಯನ್ನು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ನಡೆಸಲಾಯಿತು. ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿದ ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಂತ ಆಗ್ನೆಸ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ನೊರಿನ್ ಡಿಸೋಜಾ ಎ.ಸಿ. ಅವರು  ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಸಿಬ್ಬಂದಿಯನ್ನು ಅಭಿನಂದಿಸಿದರು “ಗ್ರಂಥಾಲಯ ಸಪ್ತಾಹದ ಉದ್ದೇಶವು ಜೀವನವನ್ನು ಪರಿವರ್ತಿಸುವಲ್ಲಿ ಮತ್ತು ಸಮುದಾಯಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ” ಎಂದರು.    

 ಲೈಬ್ರರಿ ಸಪ್ತಾಹದ ಬಗ್ಗೆ ವಿವರಗಳನ್ನು ನೀಡಿದ ಸೇಂಟ್ ಆಗ್ನೆಸ್ ಪಿಯು ಕಾಲೇಜಿನ ಗ್ರಂಥಪಾಲಕ ಡಾ.ಟ್ರೆಸ್ಸಿ ಮಿನೆಜಸ್ “ಗ್ರಂಥಾಲಯ ಸಪ್ತಾಹವು ಬ್ರಾಡ್‌ಬ್ಯಾಂಡ್, ಕಂಪ್ಯೂಟರ್‌ಗಳು ಮತ್ತು ಇತರ ಸಂಪನ್ಮೂಲಗಳನ್ನು ಬಳಸಿಕೊಂಡು ತಂತ್ರಜ್ಞಾನದೊಂದಿಗೆ ಸಂಪರ್ಕದೊಂದಿಗೆ ತಮ್ಮ ಒದುವಿಕೆಯನ್ನು ಉತ್ತಮ ಪಡಿಸಹುದು, ಈ ಗ್ರಂಥಾಲಯವು ಅದಕ್ಕೆ ಯೋಗ್ಯವಾಗಿದೆ ಮತ್ತು ನಿಮ್ಮನ್ನು ಗ್ರಂಥಾಲಯ  ಉತ್ತೇಜಿಸುತ್ತದೆ” ಎಂದು ಹೇಳಿದರು. ಮಾಧ್ಯಮ, ಕಾರ್ಯಕ್ರಮಗಳು, ಆಲೋಚನೆಗಳು ಮತ್ತು ತರಗತಿಗಳು – ಪುಸ್ತಕಗಳ ಜೊತೆಗೆ. ಸೇಂಟ್ ಆಗ್ನೆಸ್ ಪಿಯು ಕಾಲೇಜು ಗ್ರಂಥಾಲಯವು ನಗರದ ಅತ್ಯುತ್ತಮ ಗ್ರಂಥಾಲಯಗಳಲ್ಲಿ ಒಂದಾಗಿದೆ, ಇದನ್ನು ಓದುವ ಕೋಣೆ, ಪರಿಚಲನೆ (ಪ್ರಸರಣ) ವಿಭಾಗ ಮತ್ತು ಫೋಟೋ ಕಾಪಿ ವಿಭಾಗಗಳಂತಹ ಮೂರು ಪ್ರಮುಖ ವಿಭಾಗಗಳಾಗಿ ವಿಂಗಡಿಸಲಾಗಿದೆ. ಗ್ರಂಥಾಲಯ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಎರವಲು ನೀಡುವ ಸೌಲಭ್ಯಗಳನ್ನು ಒದಗಿಸುತ್ತದೆ, ಇದರಲ್ಲಿ ಅವರು ಒಂದು ಪುಸ್ತಕ ಒಂದು ವಾರದ ಮಟ್ಟಿಗೆ ಪುಸ್ತಕಗಳನ್ನು ಪಡೆದುಕೊಳ್ಳಬಹುದು, ಈ ರೀತಿ ಇಡೀ ವರ್ಷ ಪುಸ್ತಕಗಳನ್ನು ಎರವಲು ಪಡೆಯಬಹುದು. ಗ್ರಂಥಾಲಯವು ಹಳೆಯ ಪ್ರಶ್ನೆ ಪತ್ರಿಕೆಗಳು ಮತ್ತು ಹಳೆಯ ನಿಯತಕಾಲಿಕೆಗಳು ಮತ್ತು ಜರ್ನಲ್‌ಗಳ ಬೌಂಡ್ ಸಂಪುಟಗಳನ್ನು ಸಹ ಹೊಂದಿದೆ, ಇದು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಮಾನಸಿಕ ಆಹಾರವನ್ನು ನೀಡುತ್ತದೆ. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಬೆಳೆಸಲು, ಕಡ್ಡಾಯ ಗ್ರಂಥಾಲಯದ ಸಮಯವನ್ನು ವೇಳಾಪಟ್ಟಿಯಲ್ಲಿ ಗುರುತಿಸಲಾಗಿದೆ’ಎಂದರು

RELEASE OF 25rd ANNUAL,FR. MULLER HOMOEOPATHIC COLLEGE MAGAZINE “PIONEER 2022”

The 25thannual college magazine of Father Muller Homoeopathic Medical College ‘PIONEER 2022’with the theme “Our Planet our Health” was released by commemorating the 112nd death anniversary of the founder Rev Fr Augustus Muller SJ on 31st  October 2022in the College Auditorium.Dr Rohan S. Monis, Chief Administrative Officer, Kanachur Hospital & Research Centre was the Chief Guest and Rev. Fr Richard Aloysius Coelho, Director, Father Muller Charitable Institutions presided over the programme. The programme commenced with a prayer song.

Dr E S J Prabhu Kiran, Principal welcomed the gathering with a note on the legacy of Father Muller and the zeal that has inspired us to serve the suffering humanity and introduced the Chief Guests.The programme was inaugurated by lighting the lamp by the dignitaries.

The Chief Guest Dr Rohan S. Monis in his address mentioned about the growth of the Institute far and wide and also praised the works of the management which deserved to the marvellous growth of the Institute each day and each yearby requesting a applaud from the gathering ,.

Rev. Fr Roshan Crasta, Administrator, FMHMC&H in his message, congratulated the editor and the editorial board for selecting the WHO theme for the magazine. He also mentioned about the works of Fr Muller which kept growing to see the motto of “Heal and comfort” in serving the society.

On this occasion the faculty members, student researchers and Women throw ball team were felicitated for their achievements. Followed by this prizes were distributed for the winners of the competitions held in view of Pioneer 2022. 

Rev. Fr Richard Aloysius Coelho, Director, FMCIin his presidential note expressed his joy for compiling this literary publication which sees improvement and innovations year by year. He said it also serves to reclaim the memories and refresh those cherishable moments in the future. He stressed on the leadershipqualities which help in progress for self and the organisation.

Dr Ameer C T, Staff Chief Editor, Pioneer 2022 was present on the dais.

Ms Gaganalakshmi, Student Editor, Pioneer 2022, proposed the vote of thanks. 

Ms  Oshin Dsouza and Ms Anagha K. compered the program.

The programme concluded with the Institution Anthem.

ಅಬ್ಬಾಸ್ ಬಾಬು – ದೇಹದಾಢ್ರ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಶ್ರೀನಿವಾಸಪುರದ ಅಬ್ಬಾಸ್ ಬಾಬು, ನ್ಯೂ ಆಂಧ್ರ ಬಾಡಿ ಬಿಲ್ಡಿರ್ಸ್ ಅಸೋಸಿಯೇಷನ್ ವತಿಯಿಂದ ಈಚೆಗೆ ರಾಯಚೂಟಿಯಲ್ಲಿ ಏರ್ಪಡಿಸಿದ್ದ ದೇಹದಾಢ್ರ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಸರ್ಕಾರಿ ನೌಕರರು ಸಂಬಳಕ್ಕಾಗಿ ಮಾತ್ರವೇ ಸೇವೆ ಸಲ್ಲಿಸಿದರೆ ಸಾಲದು ಜೊತೆಗೆ ಪ್ರಾಮಾಣಿಕತೆ ಬೇಕು:ಆರ್.ಚಂದ್ರಶೇಖರ್

ಶ್ರೀನಿವಾಸಪುರ : ಸರ್ಕಾರಿ ನೌಕರರು ಸಂಬಳಕ್ಕಾಗಿ ಮಾತ್ರವೇ ಸೇವೆ ಸಲ್ಲಿಸಿದರೆ ಸಾಲದು ಜೊತೆಗೆ ಪ್ರಾಮಾಣಿಕತೆಯೂ ಇದ್ದರೆ ಜೀವನಪೂರ್ತಿ ಸಾರ್ಥಕತೆ ಇರುತ್ತದೆ ಅಂತಹ ಪ್ರಮಾಣಿಕ ವ್ಯಕ್ತಿಗಳನ್ನು ಸಾರ್ವಜನಿಕರು ಗೌರವಿಸುತ್ತಾರೆ ಎಂದು ಕಾರ್ಯ ಪಾಲಕ ಇಂಜನೀಯರ್ ಕೋಲಾರ ವಿಬಾಗ ಇಇ ಆರ್.ಚಂದ್ರಶೇಖರ್ ಹೇಳಿದರು.
ಪಟ್ಟಣದ ಪಿಡಬ್ಲೂಡಿ ಕಛೇರಿಯಲ್ಲಿ ನಿವೃತ್ತರಾದ ಸಹಾಯಕ ಕಾರ್ಯಪಾಲಕ ಇಂಜಿನೀಯರ್ ಎಂ.ಕೆ.ಹುಸೇನ್‍ಸಾಬ್ ರವರಿಗೆ ಬೀಳ್ಕೋಡಿಗೆ ಸನ್ಮಾನ ಸಮಾರಂಭದಲ್ಲಿ ಬಾಗವಹಿಸಿ ಮಾತನಾಡಿ ಉತ್ತಮ ಕೆಲಸ ಕಾರ್ಯಗಳಿಂದ ತಮ್ಮ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಿದ್ದು, ಎಂ.ಕೆ.ಹುಸೇನ್‍ಸಾಬ್ 37 ವರ್ಷಗಳ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದು ಅವರ ನಿವೃತ್ತಿ ಜೀವನವು ಸಖಕರವಾಗಲಿ ಎಂದು ಆಶಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಕೆ ಹುಸೇನ್ ಸಾಬ್ ಈ ಇಲಾಖೆಯಲ್ಲಿ ಕೆಲಸದ ಒತ್ತಡದಲ್ಲಿ ನಾನು ಏನಾದರು ದುಬಾರಿಯಿಂದ ಮಾತನಾಡಿ ನಿಮ್ಮ ಮನಸ್ಸ್ಸುಗಳು ನೋವಾಗಿದ್ದರೆ ಕ್ಷಮಿಸಿ ನಾನು ಇಲ್ಲಿಬಂದು ಒಂದುವರೆ ವರ್ಷಗಳಾಗಿದೆ ಎಲ್ಲಾ ಗುತ್ತಿಗೆ ದಾರರು ಮತ್ತು ನಮ್ಮ ಸಿಬ್ಬಂದಿ ಸಹಕಾರದಿಂದ ನಾನು ಉತ್ಸಾಹದಿಂದ ಕೆಲಸ ಮಾಡಲು ಸಹಕಾರಿಯಾಗಿದೆ ವಿಷೇಶವಾಗಿ ನಮ್ಮ ಇಇ ಚಂದ್ರ ಶೇಖರ್ ರವರು ತುಂಬು ಹೃದಯದಿಂದ ನನಗೆ ಕೆಲಸಮಾಡಲು ಸಹಕರಿಸಿದ್ದಾರೆ, ನನ್ನ ಅವದಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದೇನೆ ಎಂಬ ಆತ್ಮಸಾಕ್ಷಿನನಗಿದೆ ಎಲ್ಲರಸಹಕಾರ ನೀಡಿದ್ದಕ್ಕೆ ತುಂಬಾ ದನ್ಯವಾದಗಳು ಎಂದು ತಿಳಿಸಿದರು.
ಇದೇ ಸಮಯದÀಲ್ಲಿ ನೂತನವಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಎಂ. ನಾರಾಯಣಸ್ವಾಮಿ ಅಧಿಕಾರ ಸ್ವೀಕರಿಸಿದರು.
ಈ ವೇಳೆಯಲ್ಲಿ ಸಣ್ಣನೀರಾವರಿ ಸಚಿವರ ಆಪ್ತ ಕಾರ್ಯದರ್ಶಿ ಅರುಣ್, ಕೆ.ಸಿ ವ್ಯಾಲಿ ಇಂಜನೀಯರ್ ಕೃಷ್ಣ, ಎಂ.ಐ ಇಲಾಖೆಯ ಎಕ್ಸಿಕ್ಯೂಟಿವ್ ಇಂಜನೀಯರ್ ಕುಮಾರಸ್ವಾಮಿ, ಇಂಜನೀಯರ್‍ಗಳಾದ ಎಲ್.ಎಂ.ನಾಗರಾಜ್, ಗೋವಿಂದಪ್ಪ, ಚಲಪತಿ, ಟಿ.ನಾಗರಾಜ್, ಕಛೇರಿ ವ್ಯವಸ್ಥಾಪಕ ಮುನಿರಾಜು, ಹಾಗು ಗುತ್ತಿಗೆ ದಾರರಾದ ಆಲವಾಟ ಮಂಜುನಾಥ್ ರೆಡ್ಡಿ, ಶಿವಪುರ ವೆಂಕಟೇಶ್, ಜೆ.ವಿ ಕಾಲೋನಿ ವೆಂಕಟೇಶ್, ಕಂಬಾಲಪಲ್ಲಿ ಶ್ರೀನಿವಾಸ್, ರವಣಪ್ಪ, ಕಲ್ಲುಕುಂಟೆ ಮಂಜು, ದಿಂಬಾಲ ಮಂಜುನಾಥ್ ರೆಡ್ಡಿ, ನಿವೃತ್ತ ಎಇಇ ಶ್ರೀನಿವಾಸಮೂರ್ತಿ, ಟೆಂಕಾಯಿಲು ಶ್ರೀನಿವಾಸ್, ಹಾಗು ಕಛೇರಿಸಿಬ್ಬಂದಿ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ ‘ಸವಿತಾ’ ಫೌಂಡೇಶನ್ನಿನ ಮೂಲಕ ಹೊಲಿಗೆ ಯಂತ್ರ ಹಸ್ತಾಂತರ

ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ ರೋಟರಿ ಜಿಲ್ಲೆಯ ಈ ವರ್ಷದ ಯೋಜನೆಗಳಲ್ಲಿ ಒಂದಾದ ಸ್ತ್ರೀ ಸಶಕ್ತೀಕರಣದ ಅಂಗವಾಗಿ ಶ್ರೀಮತಿ ಲಕ್ಷ್ಮಿ ಬೀಜಾಡಿ ಇವರಿಗೆ ಅಧ್ಯಕ್ಷ ರೋ. ಸತ್ಯನಾರಾಯಣ ಪುರಾಣಿಕರ ‘ಸವಿತಾ’ ಫೌಂಡೇಶನ್ನಿನ ಮೂಲಕ ಹೊಲಿಗೆ ಯಂತ್ರವನ್ನು ಪೂರ್ವಾಧ್ಯಕ್ಷರ ಉಪಸ್ಥಿತಿಯಲ್ಲಿ ಹಸ್ತಾಂತರಿಸಲಾಯಿತು.