ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸಿ: ಎಸ್.ಮುನಿಸ್ವಾಮಿ

ಶ್ರೀನಿವಾಸಪುರ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸಿ ಕೀರ್ತಿ ರಾಜ್ಯ ಬಿಜೆಪಿಸರ್ಕಾರಕ್ಕೆ ಸೇರುತ್ತದೆ ಎಂದು ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಹೇಳಿದರು.
ಪಟ್ಟಣದ ಮಾರುತಿ ಸಭಾ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರ ತಾಲ್ಲೂಕು ಮಟ್ಟದ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದಶಕಗಳ ಕಾಲ ಆಳಿದ ಕಾಂಗ್ರೆಸ್ ಹಿಂದುಳಿದ ಸಮುದಾಯಗಳಿಗೆ ನ್ಯಾಯ ಒದಗಿಸುವ ಕಾರ್ಯಕ್ಕೆ ಕೈ ಹಾಕಲಿಲ್ಲ. ಬಿಜೆಪಿ ಅದನ್ನು ಮಾಡಿ ತೋರಿಸಿದೆ ಎಂದು ಹೇಳಿದರು.
ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 35 ಸಾವಿರ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 40 ಸಾವಿರ ಜನಸಂಖ್ಯೆ ಇದೆ. ಬದಲಾದ ಪರಿಸ್ಥಿತಿಯಲ್ಲಿ ಇವರು ಬಿಜೆಪಿ ಪರ ಇದ್ದಾರೆ. ಸರ್ಕಾರ ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಪೂರಕವಾದ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ನಾಲ್ಕು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಮೀಸಲಾತಿ ಬೇಡಿಕೆಯನ್ನು ಈಡೇರಿಸಿದ್ದು ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ. ಹಾಗಾಗಿ ವಾಲ್ಮೀಕಿ ಜನಾಂಗ ಕೊಟ್ಟ ಮಾತಿಗೆ ತಪ್ಪುವುದಿಲ್ಲ. ಬಿಜೆಪಿ ಸರ್ಕಾರಕ್ಕೆ ಋಣಿಯಾಗಿರುತ್ತದೆ. ಬಳ್ಳಾರಿಯಲ್ಲಿ ನ.20 ರಂದು ಏರ್ಪಡಿಸಲಾಗಿರುವ ರಾಜ್ಯ ಮಟ್ಟದ ಪರಿಶಿಷ್ಟ ಪಂಗಡ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಶಿವಪುರ ಶಾಸಕ ರಾಜುಗೌಡ ಮಾತನಾಡಿ, ಶ್ರೀರಾಮನ ಸಿದ್ಧಾಂತ ಬಿಜೆಪಿಯದು, ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿ ಆದರ್ಶ ನಮ್ಮದು. ಕಾಂಗ್ರೆಸ್‍ಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿ ಕುರಿತು ಕಾಳಜಿ ಇಲ್ಲ. ಕಾಂಗ್ರೆಸ್ ದ್ರೋಣಾಚಾರ್ಯ ಇದ್ದಂತೆ. ಬಿಜೆಪಿ ವಾಲ್ಮೀಕಿ ಸಮುದಾಯಕ್ಕೆ ಶಕ್ತಿ ನೀಡಿದೆ. ವಾಲ್ಮೀಕಿ ಸಮುದಾಯದ ಹಲವು ಮುಖಂಡರಿಗೆ ಸರ್ಕಾರದಲ್ಲಿ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದರು.
ಮುಖಂಡರಾದ ಕೇಶವಪ್ರಸಾದ್, ನರಸಿಂಹನಾಯಕ್, ಮಂಜುನಾಥಗೌಡ, ಜಯಚಂದ್ರಾರೆಡ್ಡಿ, ಎಂ.ನಾರಾಯಣಸ್ವಾಮಿ, ಕೃಷ್ಣಮೂರ್ತಿ, ವಾಸುದೇವ್, ಎಸ್‍ಎಲ್‍ಎನ್ ಮಂಜುನಾಥ್, ಅಶ್ವತ್ಥರೆಡ್ಡಿ, ವೆಂಕಟೇಗೌಡ, ಹನುಮಂತಪ್ಪ, ಅಂಬರೀಶ್, ಆಂಜಿನಪ್ಪ, ನರಸಿಂಹಯ್ಯ, ಕೃಷ್ಣಪ್ಪ, ಹರೀಶ್ ನಾಯಕ್, ನಾರಾಯಣಪ್ಪ, ಗೋವಿಂದಸ್ವಾಮಿ, ಮಮತ, ಅರುಣಮ್ಮ, ವಿ.ನಿಶಾಂತ್, ಜೆಸಿಬಿ ಅಶೋಕ್ ರೆಡ್ಡಿ, ಎ.ಅಶೋಕ್ ಇದ್ದರು

ಸಂತ ಸೆಬಾಸ್ಟಿಯನ್ ಆಡಿಟೋರಿಯಂ ಉದ್ಘಾಟನೆ: ನಂಬಿಕೆಯಿಂದ ಎಲ್ಲವೂ ಸಾಧ್ಯ – ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ

ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮ್ಯಾಕ್ಸಿಂ ನೊರೊನ್ಹಾ,  ಇವರ ಪ್ರಧಾನ ಯಾಜಕತ್ವದಲ್ಲಿ ಕೃತಜ್ಞತಾ ಬಲಿದಾನದ ಮೂಲಕ ಸೇಂಟ್ ಸೆಬಾಸ್ಟಿಯನ್ ಆಡಿಟೋರಿಯಂ ಉದ್ಘಾಟನ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ನೂತನವಾಗಿ ನಿರ್ಮಿಸಿದ ಹೈ ಮಾಸ್ಕ್ ದೀಪವನ್ನು ವಿಕಾರ್ ಜನರಲ್ ಮ್ಯಾಕ್ಸಿಂ ನೊರೊನ್ಹಾ ಉದ್ಘಾಟಿಸಿದರು.  

ಬಳಿಕ ನೂತನವಾಗಿ ನಿರ್ಮಿಸಲಾದ ಸಂತ ಸೆಬಾಸ್ಟಿಯನ್ ಸಭಾಂಗಣವನ್ನು ಖ್ಯಾತ ವೈದ್ಯ ಡಾ.ಯು.ಸಿ.ಎಸ್. ಭಟ್ ಇವರು ನ. 1 ರಂದು ಉದ್ಘಾಟಿಸಿದರು.  ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್ ಆವರಣದಲ್ಲಿ ನಡೆದ ಉದ್ಘಾಟನ ಸಮಾರಂಭದ ಅಧ್ಯಕ್ಷರಾದ ಮಂಗಳೂರಿನ ಧರ್ಮಾಧ್ಯಕ್ಷರಾದ ಅ| ವಂ| ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಸಭಾಂಗಣವನ್ನು ಆಶೀರ್ವದಿಸಿ  “ಈ ಸಭಾಂಗಣ ದೇವರ ಕೃಪೆ, ನಂಬಿಕೆ ಮತ್ತು ಪ್ರೀತಿಯ ಫಲವಾಗಿದೆ, ಇದು ಧಾರ್ಮಿಕತೆಯ ಏಕತೆಗೆ ಸಾಕ್ಷಿಯ ಪೂರಕವಾಗಿದ್ದು, ಇದೊಂದು ದೇವರ ಅನುಗ್ರಹ ಆಗಿದೆ ‘ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ, ನಂಬಿಕೆಯಿಂದ ಎಲ್ಲವೂ ಸಾಧ್ಯ, ಈ ಸಭಾಂಗಣವು ನಂಬಿಕೆಯ ದೊಡ್ಡ ಸಂಕೇತವಾಗಿದೆ’ ಎಂದು ಅವರು ಸಂದೇಶ ನೀಡಿದರು

ಶ್ರೀ ಯು.ಟಿ.ಖಾದರ್ ಶಾಸಕರು, ಮಂಗಳೂರು ಕ್ಷೇತ್ರ, ವಿರೋಧ ಪಕ್ಷದ ಉಪನಾಯಕ,ಮುಖ್ಯ ಅತಿಥಿಗಳಾಗಿದ್ದರು, ಮಂಗಳೂರು ನಗರ ದಕ್ಷಿಣ ಕರ್ನಾಟಕ ವಿಧಾನಸಭಾ ಸದಸ್ಯರಾದ ಶ್ರೀ ಡಿ.ವೇದವ್ಯಾಸ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಸಕರಿಗೆ ಹಾಗೂ ಡಾ.ಯು.ಸಿ.ಎಸ್ ಭಟ್ ಅವರ ಕುಟುಂಬದವರಿಗೆ ಬಿಷಪ್ ಸನ್ಮಾನಿಸಿದರು.

   ಬಿಜೈ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚಿನ ಧರ್ಮಗುರು ಬಿ.ಸಲ್ಡಾನ್ಹಾ, ಧಾರ್ಮಿಕ ಮುಖಂಡರಾದ ಶ್ರೀ ಚಂದ್ರಹಾಸ್ ಮತ್ತು ಹಾಜಿ ರಶೀದ್ ಹಾಗೂ ಉಳ್ಳಾಲ ಪುರಸಭಾ ಅಧ್ಯಕ್ಷರಾದ ಶ್ರೀಮತಿ ಚಿತ್ರಕಲಾ ಚಂದ್ರಕಾಂತ್, ಪುರಸಭಾ ಸದಸ್ಯರಾದ ಶ್ರೀ ಬಾಸಿಲ್ ಡಿಸೋಜ ಮತ್ತು ಶ್ರೀಮತಿ ವೀಣಾ ಡಿಸೋಜ, ಬೆತೆಲ್ ಕಾನ್ವೆಂಟ್ ಪೆರ್ಮನ್ನೂರು ಇದರ ಮುಖ್ಯಸ್ಥೆ  ಸಿಸ್ಟರ್ ಜೋಸೆಫ್ ಮೇರಿ ಬಿಎಸ್ ಮತ್ತು ನಿರ್ಮಲ ಕಾನ್ವೆಂಟ್ ಮುಖ್ಯಸ್ಥೆ  ಸಿಸ್ಟರ್ ಅಲ್ಫೋನ್ಸಾ ಕಾರ್ಯಕ್ರಮದಲ್ಲಿ  ಉಪಸ್ಥಿತಿರಿದ್ದರು. ಈ ಸಂದರ್ಭದ ನೆನಪಿಗಾಗಿ ಆಡಿಟೋರಿಯಂ ಸ್ಮರಣಿಕೆಯನ್ನು ಬಿಡುಗಡೆ ಮಾಡಲಾಯಿತು. ಅದೃಷ್ಟ ಕೂಪನ್ ಡ್ರಾ ಮಾಡಲಾಯಿತು. ಚರ್ಚಿನ ವಾಳೆಯ ಗುರಿಕಾರರಿಗೆ, ದಾನಿಗಳಿಗೆ, ಹಾಗೂ ಸಹಾಯ ಮಾಡಿದ ಎಲ್ಲರಿಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸೇಂಟ್ ಸೆಬಾಸ್ಟಿಯನ್ ಚರ್ಚಿನ  ಧರ್ಮಗುರು ವಂ| ಸಿಪ್ರಿಯನ್ ಪಿಂಟೋ  ಪ್ರೀತಿ ಪೂರ್ವಕವಾಗಿ  ಸ್ವಾಗತಿಸಿದರು.

    ಚರ್ಚಿನನ  ಉಪಾಧ್ಯಕ್ಷ ಶ್ರೀ ಮೌರಿಸ್ ಮೊಂತೆರೊ ಧನ್ಯವಾದಗಳನ್ನು ಅರ್ಪಿಸಿದರು. ಶ್ರೀ ರೊನಾಲ್ಡ್ ಫೆರ್ನಾಂಡಿಸ್ ಮತ್ತು ಶ್ರೀಮತಿ ಸಿಂಥಿಯಾ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು. ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಟ್ಯಾಲಿ ಕಾರ್ಯಗಾರ


ಶಿರ್ವ: ಆಧುನಿಕ ತಂತ್ರಜ್ಞಾನದಲ್ಲಿ ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳಿದ್ದು, ವಾಣಿಜ್ಯ ಕ್ಷೇತ್ರದಲ್ಲಿ ಅಕೌಂಟ್ಸ್ ಬಗ್ಗೆ ಅಪಾರಜ್ಞಾನ ಹೊಂದಿದರಲ್ಲಿ ಟ್ಯಾಲಿ ಮತ್ತು ಎಸ್ಎಪಿ ಅಂತ ಸಾಫ್ಟ್ವೇರ್ ಕಲಿಕೆ ಸರಳವಾಗುವುದು, ತನ್ಮೂಲಕ ಚಾರ್ಟರ್ಡ್ ಅಕೌಂಟೆನ್ಸಿ ವಿಷಯದ ಬಗ್ಗೆ ಜ್ಞಾನ ಪಡೆದುಕೊಳ್ಳಬಹುದು. ಬಿಸಿಎ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ವಿದ್ಯಾಭ್ಯಾಸದ ಜೊತೆಗೆ ವಿವಿಧ ಸಂಸ್ಥೆಯಲ್ಲಿ ಲಭ್ಯವಿರುವ ಅಕೌಂಟೆಂಟ್ ಹಾಗೂ ಎಸ್ಎಪಿ ಇಂಜಿನಿಯರ್ ಉದ್ಯೋಗ ಪಡೆಯಲು ಈ ಕಾರ್ಯಗಾರ ಸಹಾಯಕಾರಿ ಎಂದು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ವತಿಯಿಂದ ಏರ್ಪಡಿಸಿದ್ದ ಟ್ಯಾಲಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ಸಂತ ಅಲಾಶಿಯಸ್ ಕಾಲೇಜಿನ ಉಪನ್ಯಾಸಕಿ ಶರ್ಲಿ ವ್ಯಾಲೆಂಟಿನ ಅಂದ್ರದೆ ರವರು ಮಾತನಾಡಿ, ಪ್ರಾಯೋಗಿಕವಾಗಿ ವಿವರಿಸಿದರು.

ಇಂದಿನ ವಾಣಿಜ್ಯ ಕ್ಷೇತ್ರಗಳಲ್ಲಿ ಲೆಕ್ಕಪತ್ರಗಳ ಲೆಕ್ಕಚಾರ ಮಾಡಲು ಅಕೌಂಟಿಂಗ್ ಬಗ್ಗೆ ಎಲ್ಲಾ ಯುವಕರಲ್ಲಿ ಜ್ಞಾನದ ಅರಿವು ಇರಬೇಕು. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಪ್ರತಿಯೊಬ್ಬ ವಿದ್ಯಾರ್ಥಿಯು ಇಂತಹ ಕೌಶಲಾಭಿವೃದ್ಧಿ ಕಲಿಕೆಯ ಮೂಲಕ ಸಂಶೋಧನ ಮನಸ್ಥಿತಿ ಬೆಳೆಸಿ ಮತ್ತು ಉತ್ತಮ ಮಾಹಿತಿ ಮತ್ತು ಮಾರ್ಗದರ್ಶನ ಮೂಲಕ ಉದ್ಯೋಗ ಪಡೆಯಲು ಈ ಕಾರ್ಯಗಾರ ಸಹಕಾರಿ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಅಧ್ಯಕ್ಷ ನೆಲೆಯಲ್ಲಿ ಮಾತನಾಡಿ ಶುಭ ಹಾರೈಸಿದರು.

ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಮಾಹಿತಿ ತಂತ್ರಜ್ಞಾನ ಕ್ಲಬ್ ನ ನಿರ್ದೇಶಕ ಲೆಫ್ಟಿನೆಂಟ್ ಶ್ರೀ ಕೆ ಪ್ರವೀಣ್ ಕುಮಾರ್ ರವರು ಕಾರ್ಯಗಾರದ ಮುಖ್ಯ ಉದ್ದೇಶ ಮತ್ತು ಪ್ರಾಮುಖ್ಯತಾ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಉಪನ್ಯಾಸಕ ಪ್ರಕಾಶ್, ಸುಷ್ಮಾ, ದಿವ್ಯಶ್ರೀ,ಬಿಸಿಎ ವಿಭಾಗದ ವಿದ್ಯಾರ್ಥಿಗಳು, ಅಧ್ಯಾಪಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನುಪ್ ನಾಯಕ್, ಅಲಿಸ್ಟಾರ್ ಸುಜಯ್ ಡಿಸೋಜ ಸಹಕರಿಸಿದರು. ಕು. ಸುಪ್ರಿಯ ಮತ್ತು ಬಳಗ ಪ್ರಾರ್ಥಿಸಿ, ಪ್ರಜ್ವಲ್ ಸಿ ಮೆಂಡನ್ ವಂದಿಸಿದರು. ಶೆಟ್ಟಿ ತರುಣ ರಮೇಶ್ ಸ್ವಾಗತಿಸಿ, ಗೌರವ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು.

ಫಿಟ್ ಇಂಡಿಯಾ ಪ್ರೀಡಂ ರನ್ ಹಾಗೂ ಬೀಚ್ ಸ್ವಚ್ಛತಾ ಕಾರ್ಯಕ್ರಮ


ಅಕ್ಟೋಬರ್ 30ರಂದು ಭಂಡಾರ್ಕಾರ್ಸ್ ಕಾಲೇಜಿನ ಏನ್ ಎಸ್ ಎಸ್ ಘಟಕ , ಮಂಗಳೂರಿನ ಯಾನೆಪೋಯ ದಂತ ವಿಜ್ಞಾನ ಕಾಲೇಜಿನ ಏನ್ ಏಸ್ ಎಸ್ ಘಟಕ, ನಾವುಂದ ಗ್ರಾಮ ಪಂಚಾಯತ್ ಹಾಗೂ ಲಯನ್ಸ್ ಕ್ಲಬ್ ನಾವುಂದ ಇವರ ಸಹಯೋಗದಲ್ಲಿ ಫಿಟ್ ಇಂಡಿಯಾ ಫ್ರಿಡಂ ರನ್ 3.0 ಹಾಗೂ ಬೀಚ್ ಸ್ವಚ್ಛತಾ ಕಾರ್ಯಕ್ರಮವು ನಾವುಂದ ಗ್ರಾಮ ಪಂಚಾಯತ್ ಪರಿಸರದಲ್ಲಿ ನಡೆಯಿತು.
ಸುಮಾರು 200 ಏನ್ ಎಸ್ ಎಸ್ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೀಚ್ ಪರಿಸರವನ್ನು ಸ್ವಚ್ಚಗೊಳಿಸಿದರು.
ಸಂದರ್ಭದಲ್ಲಿ ವಲಯ ಅಧ್ಯಕ್ಷರಾದ ನರಸಿಂಹ ದೇವಾಡಿಗ, ಹಾಗೂ ಸ್ಥಾಪಕ ಅದ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಹಾಗೂ ಎಲ್ಲಾ ಲಯನ್ಸ್ ಸದಸ್ಯರು, ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಶಿಧರ ಶೆಟ್ಟಿ ಸ್ವಾಗತಿಸಿದರು, ಕಾರ್ಯದರ್ಶಿ ದಿನೇಶ್ ಆಚಾರ್ ವಂದಿಸಿದರು.ಯೆನೆಪೋಯ ಕಾಲೇಜಿನ ಏನ್ ಎಸ್ ಎಸ್ ಯೋಜನಾಧಿಕಾರಿಗಳಾದ ಡಾ. ಇಮ್ರಾನ್, ಭಂಡಾರ್ಕರ್ಸ್ ಕಾಲೇಜಿನ ಏನ್ ಎಸ್ ಎಸ್ ಯೋಜಾನಾಧಿಕಾರಿಗಳಾದ ರಾಮಚಂದ್ರ ಆಚಾರ್ ಹಾಗೂ ಅರುಣ್ ಎ ಎಸ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ|ಶುಭಕಾರಾಚಾರಿ ಹಾಗೂ ಉಪನ್ಯಾಸಕರಾದ ಅಣ್ಣಪ್ಪ ಪೂಜಾರಿ, ಶರಣ್ ಹಾಗೂ ಸಂತೋಷ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿರುವುದು ಸಂತಸದ ವಿಷಯ:ಸಚಿವ ಮುನಿರತ್ನ

ಕೋಲಾರ ; ಜಿಲ್ಲೆಯಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿರುವುದು ಸಂತಸದ ವಿಷಯ. ಕನ್ನಡ ರಾಜ್ಯೋತ್ಸವ ಮತ್ತು ಕನ್ನಡಾಭಿಮಾನ ಬರಿ ನವೆಂಬರ್ ಮಾಸಕ್ಕೆ ಸೀಮಿತವಾಗದೆ ಪ್ರತಿದಿನವೂ ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು ಎಂದು ತೋಟಗಾರಿಕೆ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸ್ಯಾಂಖಿಕ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು ತಿಳಿಸಿದರು.
ಇಂದು ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶ್ರೀ ಭುವನೇಶ್ವರಿ ಕನ್ನಡ ಸಂಘ, ಕೋಲಾರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 67 ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಕೊಲಾರ ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವದ ಧ್ವಜಾರೋಹನವನ್ನು ನೆರೆವೇರಿಸುವುದು ನನ್ನ ಸೌಭಾಗ್ಯ. ಕರ್ನಾಟಕ ಏಕೀಕರಣವಾಗಲು ಅನೇಕ ನಾಯಕರ ಶ್ರಮವಿದೆ. ಕನ್ನಡ ಭಾμÉ, ಕನ್ನಡ ನೆಲ, ಸಂಸ್ಕøತಿಗೆ ತನ್ನದೇ ಆದ ವಿಶಿಷ್ಟ ಗೌರವವಿದೆ ಎಲ್ಲರಿಗೂ ಒಳ್ಳೆಯದಾಗಲಿ ಕೋಲಾರ ಜಿಲ್ಲೆಯನ್ನು ಒಂದು ಮಾದರಿ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬರೂ ಶ್ರಮಿಸೋಣ ಎಂದು ತಿಳಿಸಿದರು.
ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ಮಾತನಾಡಿ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಕ್ರೀಡಾಂಗಣದಲ್ಲಿ ಆಚರಣೆ ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ. 50 ವರ್ಷಗಳ ನಂತರ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿರುವುದು ಇದೇ ಮೊದಲು ಮುಂದಿನ ವರ್ಷ 68ನೇ ಕನ್ನಡ ರಾಜ್ಯೋತ್ಸವವನ್ನು ಜಿಲ್ಲೆಯಲ್ಲಿ ಇನ್ನು ವಿಜೃಂಭಣೆಯಿಂದ ಆಚರಿಸೋಣ, ಕನ್ನಡ ಭಾμÉ ಮತ್ತು ಕನ್ನಡ ಸಂಸ್ಕೃತಿಗೆ ಶಾಸ್ತ್ರೀಯ ಸ್ಥಾನ ಮಾನ ಸಿಕ್ಕಿದೆ. ಈ ಕನ್ನಡ ನೆಲದಲ್ಲಿ ಅನೇಕ ಸಾಹಿತಿಗಳು, ವಿದ್ವಾಂಸರು ಹುಟ್ಟಿ ಬೆಳೆದು ಕನ್ನಡವನ್ನು ಉಳಿಸಲು ತಮ್ಮ ಪ್ರಾಣವನ್ನು ಅರ್ಪಣೆ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ವಿಧಾನಪರಿಷತ್ ಸದಸ್ಯರಾದ ಎಂಎಲ್ ಅನಿಲ್ ಕುಮಾರ್ ಅವರು ಮಾತನಾಡಿ 1956 ರಲ್ಲಿ ಕರ್ನಾಟಕ ಏಕೀಕರಣವಾಗಿ ನಂತರ 1973 ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಇದಕ್ಕೆ ಅನೇಕ ನಾಯಕರ ಹೋರಾಟದ ಪ್ರತಿಫಲ. ಜಿಲ್ಲೆಯಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕøತಿಗೆ ಅನೇಕ ಸಾಹಿತಿಗಳ ಕೊಡುಗೆ ಹೆಚ್ಚಿದೆ. ಜ್ಞಾನಪೀಠ ಪ್ರಶಸ್ತಿ ಪಡೆದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಡಿ.ವಿ.ಗುಂಡಪ್ಪ ನವರು ನಮ್ಮ ಜಿಲ್ಲೆಯವರಾಗಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ನಂತರ ವಿವಿಧ ಇಲಾಖೆಗಳು ಹಾಗೂ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್‍ಗಳಿಂದ ಸ್ತಬ್ದಚಿತ್ರಗಳ ಮೆರವಣಿಗೆಗೆ ಗಣ್ಯರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೋಲಾರ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ 2022-23ನೇ ಸಾಲಿನ ಜಿಲ್ಲಾಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕೋಲಾರ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಶ್ರೀನಿವಾಸಗೌಡ, ನಗರಸಭಾ ಅಧ್ಯಕ್ಷೆ ಶ್ವೇತ ಶಬರೀಶ್, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯಕುಮಾರ್, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕ ವೈ.ಸಂಪಂಗಿ, ದಿಶಾ ಸಮಿತಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯುಕೇಶ್ ಕುಮಾರ್, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಡಿ.ದೇವರಾಜ್, ಅಪರ ಜಿಲ್ಲಾಧಿಕಾರಿ ಡಾ|| ಸಿ.ವಿ.ಸ್ನೇಹ, ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮಿ, ಜಿಲ್ಲಾ ಪಂಚಾಯತಿ ಉಪಕಾರದರ್ಶಿ ಲಕ್ಷ್ಮಿ, ಪೌರಾಯುಕ್ತೆ ಸುಮ, ಕೋಲಾರ ತಹಶೀಲ್ದಾರ್ ನಾಗರಾಜ್, ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕಿ ಶ್ರುತಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ್‍ಬಾಬು, ಶ್ರೀ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಕೆ.ಆರ್.ತ್ಯಾಗರಾಜು, ಕನ್ನಡಪರ ಸಂಘಟನೆಗಳ ಹೋರಾಟಗಾರರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಉಪಸ್ಥಿತರಿದ್ದರು.

ಶ್ರೀನಿವಾಸಪುರ: ನಿತ್ಯ ವ್ಯವಹಾರದಲ್ಲಿ ಕನ್ನಡ ಭಾಷೆ ಬಳಸಬೇಕು : ತಹಶೀಲ್ದಾರ್ ಶಿರಿನ್ ತಾಜ್

ಶ್ರೀನಿವಾಸಪುರ: ನಿತ್ಯ ವ್ಯವಹಾರದಲ್ಲಿ ಕನ್ನಡ ಭಾಷೆ ಬಳಸಬೇಕು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮತಿಯಿಂದ ಮಂಗಳವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಗಡಿ ಭಾಗದಲ್ಲಿ ಕನ್ನಡ ಬಾಷೆ ಬಗ್ಗೆ ಗೌರವ ಭಾವನೆ ಇದ್ದರೆ ಸಾಲದು. ಹೃದಯದ ಭಾಷೆಯಾಗಿದ್ದರೆ ಸಾಲದು, ಅದು ಮಾತಾಗಿ ಬರಬೇಕು ಎಂದರು.
ಗಡಿ ಭಾಗದ ಪೋಷಕರು ತಮ್ಮ ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡಬೇಕು. ಕನ್ನಡದ ಹಿರಿಮೆ ಕುರಿತು ಪರಿಚಯ ಮಾಡಿಕೊಡಬೇಕು. ಕನ್ನಡ ಕೃತಿಗಳ ಓದಿಗೆ ಪ್ರೇರಣೆ ನೀಡಬೇಕು. ಕನ್ನಡ ಪರಿಸರ ನಿರ್ಮಾಣ ಮಾಡಲು ಶ್ರಮಿಸಬೇಕು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಕೃಷ್ಣಪ್ಪ, ಉಪನ್ಯಾಸಕ ಎನ್.ಶಂಕರೇಗೌಡ ನಾಡು ನುಡಿಯ ಬಗ್ಗೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಸಾಧನೆ ಮಾಡಿರುವ ಕೆ.ನರಸಿಂಹಮೂರ್ತಿ, ಡಾ. ಉಮಾಶಂಕರ್, ಎಸ್.ಆರ್.ಅಶೋಕ್‍ರೆಡ್ಡಿ, ಕೆ.ನಾಗರತ್ನಮ್ಮ, ಮುರಳಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕನ್ನಡ ನಾಡಿನ ಮಹತ್ವ ಸಾರುವ ಕನ್ನಡ ಗೀತೆಗಳಿಗೆ ನೃತ್ಯ ಪ್ರದರ್ಶನ ನೀಡಿದರು. ನಾಡು ನುಡಿ ಅಭಿವೃದ್ಧಿಗಾಗಿ ಶ್ರಮಿಸಿದ ವ್ಯಕ್ತಿಗಳ ವೇಷ ಹಾಕಿ ರಂಜಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ತಾಲ್ಲೂಕು ವೈದ್ಯಾಧಿಕಾರಿ ಡಾ. ಎಂ.ಸಿ.ವಿಜಯ, ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಮಂಜುನಾಥರೆಡ್ಡಿ ಇದ್ದರು.ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ್, ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸನ್, ರೇಷ್ಮೆ ಕೃಷಿ ಸಹಾಯಕ ನಿರ್ದೇಶಕ ಕೃಷ್ಣಪ್ಪ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಪುರಸಭಾಧ್ಯಕ್ಷೆ ಲಲಿತಾ ಶ್ರೀನಿವಾಸ್, ಮುಖ್ಯಾಧಿಕಾರಿ ಎಂ.ಜಯರಾಂ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪಿ.ಎಸ್.ಮಂಜುಳ, ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ, ಎಪಿಎಂಸಿ ಕಾರ್ಯದರ್ಶಿ ಉಮಾ, ವಿವಿಧ ಕನ್ನಡಪರ ಸಂಘಟನೆಗಳ ಮುಖ್ಯಸ್ಥರಾದ ಶ್ರೀನಿವಾಸ್, ರಮೇಶ್, ಬಲರಾಮೇಗೌಡ, ಆರ್.ರವಿಕುಮಾರ್ ತಾಲ್ಲೂಕು ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ರಮಣಿ ಇದ್ದರು.
ಮೆರವಣಿಗೆ: ಪಟ್ಟಣದಲ್ಲಿ ಜಡಿಮಳೆ ನಡುವೆ ಭುವನೇಶ್ವರಿ ಮೆರವಣಿಗೆ ನಡೆಯಿತು. ಭುವನೇಶ್ವರಿ ಭಾವ ಚಿತ್ರ ಹೊತ್ತ ವಿವಿಧ ಇಲಾಖೆಗಳ ಪಲ್ಲಕಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಮಿಲಾಗ್ರಿಸ್ ಸೆಂಟ್ರಲ್ ಸ್ಕೂಲ್ :67ನೇ ಕನ್ನಡ ರಾಜ್ಯೋತ್ಸವ ಆಚರಣೆ

ಮಂಗಳೂರು : 67ನೇ ಕನ್ನಡ ರಾಜ್ಯೋತ್ಸವವನ್ನು 2022ರ ನವಂಬರ್ 1ರಂದು ಮಿಲಾಗ್ರಿಸ್ ಸೆಂಟ್ರಲ್ ಸ್ಕೂಲ್, ಮಂಗಳೂರು ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಆರಂಭಗೊಂಡಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಲೆಯ ಪ್ರಾಂಶುಪಾಲರು ಎಲ್ಲರನ್ನೂ ಉದ್ದೇಶಿಸಿ ಮಾತನಾಡುತ್ತಾ ಪ್ರದೇಶಗಳಿಗೆ ಅನುಗುಣವಾಗಿ ಕನ್ನಡ ಭಾಷೆಯ ಭಿನ್ನತೆಯ ಕುರಿತು ಹೇಳಿದರು. ‘ಕನ್ನಡವನ್ನು ಉಳಿಸಿ ಬೆಳೆಸಿ’ ಎಂದು ಕರೆ ನೀಡಿದರು. 6ನೇ ತರಗತಿಯ ಭವಿಷ್ ಎಸ್ ಶೆಟ್ಟಿಯವರು ಸ್ವಾಗತಿಸಿದರು. ವಿದ್ಯಾರ್ಥಿಗಳು ಸಮೂಹ ಗೀತೆ ಹಾಗೂ ನಾಡಗೀತೆಯನ್ನು ಹಾಡಿದರು. 9ನೇ ತರಗತಿಯ ಆಲಿವರ್ ರಾಯನ್ ಬ್ರ್ಯಾಗ್ಸ್ ದಿನದ ಮಹತ್ವವನ್ನು ತಿಳಿಸಿದರು.

ಶಾಲೆಯ ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ವಿ. ನಿತೀಶ್ ಕುಮಾರ್ ರವರು ವಂದನಾರ್ಪಣೆಗೈದರು, ದರ್ಶನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮವು ನಾಡಗೀತೆಯೊಂದಿಗೆ ಮುಕ್ತಾಯಗೊಂಡಿತು.

ಸೇಂಟ್ ಆಗ್ನೆಸ್ ಪಿಯು ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ

ಮಂಗಳೂರು: 1956 ರಲ್ಲಿ ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಕರ್ನಾಟಕ ರಾಜ್ಯವನ್ನು ರೂಪಿಸಿದ ದಿನ.

ಸೇಂಟ್ ಆಗ್ನೆಸ್ ಪಿಯು ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದ ನೆನಪಿಗಾಗಿ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು, ನಂತರ ನೃತ್ಯ ನಾಟಕ ಮತ್ತು ಪ್ರಸ್ತುತಿಗಳ ಮೂಲಕ ಕರ್ನಾಟಕ ಮತ್ತು ಕನ್ನಡದ ವೈಭವ ಮತ್ತು ಹಿರಿಮೆಯನ್ನು ಬಿಂಬಿಸಲಾಯಿತು.

     ಈ ಸಂದರ್ಭದಲ್ಲಿ “ರಾಷ್ಟ್ರದ ಭಾಷಾ ಸಂಹಿತೆಯನ್ನು ಅಧ್ಯಯನ ಮಾಡದೆ ಸಂಸ್ಕೃತಿಯ ಸಂರಕ್ಷಣೆ, ಸಂಶೋಧನೆ, ಅಭಿವೃದ್ಧಿ ಅಸಾಧ್ಯ” ಎಂದು ಕವಿ, ಲೇಖಕ, ಆಕಾಶವಾಣಿ ಮಾಜಿ ನಿರ್ದೇಶಕ ಡಾ.ವಸಂತಕುಮಾರ್ ಪೆರ್ಲ ಅಭಿಪ್ರಾಯಪಟ್ಟರು. “ಭಾಷೆ ನಿರ್ಣಾಯಕವಾಗಿದೆ, ಏಕೆಂದರೆ ಇದು ಸಂವಹನ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ, ಅದು ಭರಿಸಲಾಗದ ಸಾಂಸ್ಕೃತಿಕ ಪರಂಪರೆ, ಜ್ಞಾನ ಮತ್ತು ಸಂಪ್ರದಾಯಗಳನ್ನು ಒಳಗೊಂಡಿದೆ. ಭಾಷೆಯ ಉಳಿವು ಎಂದರೆ ಜೀವನ ಕ್ರಮದ ಉಳಿವು” ಎಂದು ಹೇಳಿದರು.

ಅಕ್ಟೋಬರ್ 28 ರಂದು ಸಿಬ್ಬಂದಿ, ವಿದ್ಯಾರ್ಥಿಗಳಿಂದ ಕನ್ನಡ ದೇಶಭಕ್ತಿ ಗೀತೆಗಳ ಸಾಮೂಹಿಕ ಗಾಯನವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ನೊರಿನ್ ಡಿಸೋಜ, ಉಪಪ್ರಾಂಶುಪಾಲೆ ಸಿಸ್ಟರ್ ಜಾನೆಟ್ ಸಿಕ್ವೇರಾ, ತಾ.ಪಂ ಉಪಾಧ್ಯಕ್ಷೆ ಶ್ರೀಮತಿ ಆಶಾ ಸಂಜೀವನ, ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಶೈಲಜಾ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸೌಜನ್ಯ ಮತ್ತು ನಿಶಾ ನಿರೂಪಿಸಿದರು. ಅನ್ವಿತಾ ಸ್ವಾಗತಿಸಿ, ಭೂಮಿಕಾ ವಂದಿಸಿದರು.

ಕುಂದಾಪುರದಲ್ಲಿ ವಿದುಷಿ ಸುಜಾತ ಗುರವ್ ಹಿಂದುಸ್ಥಾನಿ ಗಾಯನ ನಡೆಯಲಿದೆ


ವಿದುಷಿ ಶ್ರೀಮತಿ ಸುಜಾತ ಗುರವ್ ಅವರ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ ನ. 6 ರಂದು ಆದಿತ್ಯವಾರ ಕುಂದಾಪುರದ ಪಾರಿಜಾತ ಹೋಟೆಲ್‍ನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ.
ಕುಂದಾಪುರದ ಸಂಗೀತ ಭಾರತಿ ಟ್ರಸ್ಟ್ (ರಿ.) ಮತ್ತು ಆರ್. ಕೆ. ಸಂಜೀವ ರಾವ್ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್, ಖಂಬದಕೋಣೆ ಇವರ ಜಂಟಿ ಆಶ್ರಯದಲ್ಲಿ ಶ್ರೀಮತಿ ಸುಶೀಲಾ ಸಂಜೀವ ರಾವ್, ಶ್ರೀಮತಿ ನಿರ್ಮಲಾ ಪ್ರಕಾಶ್ ರಾವ್ ಮತ್ತು ಶ್ರೀ ಪ್ರಕಾಶ್ ರಾವ್ ಸ್ಮಾರಕ ಹಿಂದುಸ್ಥಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮಕ್ಕೆ ಸಂಗೀತಾಸಕ್ತರನ್ನ ಆಹ್ವಾನಿಸಲಾಗಿದೆ.
ತಬಲಾದಲ್ಲಿ ಟಿ. ರಂಗ ಪೈ, ಮಣಿಪಾಲ, ಹಾರ್ಮೋನಿಯಂನಲ್ಲಿ ಶಶಿಕಿರಣ, ಮಣಿಪಾಲ ಸಹಕರಿಸಲಿದ್ದಾರೆ. ಶ್ರೀಮತಿ ಸುಜಾತ ಗುರವ್ ಪ್ರಸಿದ್ಧ ಸಂಗೀತಕಾರ ಸಂಗಮೇಶ್ವರ ಗುರವ್ ಅವರ ಪುತ್ರಿಯಾಗಿದ್ದಾರೆ. ಇವರ ಸಹೋದರ ಕೈವಲ್ಯ ಕುಮಾರ್ ಗುರವ್ ಸಹ ಇವರ ಗುರುವಾಗಿದ್ದಾರೆ.