ಕುಂದಾಪುರ ತೆರಾಲಿ ಪೂರ್ವಭಾವಿ ಭ್ರಾತತ್ವ ಬಾಂಧವ್ಯ ದಿನ – ಪರಮ ಪ್ರಸಾದದ ಭವ್ಯ ಮೆರವಣಿಗೆ ಆರಾಧನೆ – ಕ್ರಿಸ್ತರಾಜನ ಹಬ್ಬ


ಕುಂದಾಪುರ,ನ.21: ಉಡುಪಿ ಧರ್ಮ ಪ್ರಾಂತ್ಯದಲ್ಲೆ ಅಂತ್ಯಂತ ಪುರಾತನವಾದ “ಪವಿತ್ರ ರೋಜರಿ ಮಾತಾ” ಕುಂದಾಪುರದ ಇಗರ್ಜಿಯಲ್ಲಿ ಕ್ರಿಸ್ತ ರಾಜನ ಹಬ್ಬದಂದು, ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನೆಡೆಯುವ “ಕೊಂಪ್ರಿ ಆಯ್ತಾರ್” ಭ್ರಾತತ್ವ ಬಾಂಧವ್ಯ ದಿನವನ್ನು “ಪ್ರಭು ಯೇಸುವಿನ ದಯೆ ನಮಗೆಲ್ಲರಿಗೂ ಪ್ರೇರಣೆ” ಎಂಬ ಧ್ಯೇಯದೊಂದಿಗೆ, ಪವಿತ್ರ ಬಲಿದಾನ ಮತ್ತು ಪರಮ ಪ್ರಸಾದದ ಆರಾಧನೆ ನ.20 ರಂದು ನೆಡೆಯಿತು.
ಪವಿತ್ರ ರೋಜರಿ ಮಾತಾ ದೇವಾಲಯಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿದ ತರುವಾಯ ಅಪಾರ ಭಕ್ತಾದಿ ಜನ ಮತ್ತು ಅನೇಕ ಧರ್ಮ ಭಗಿನಿಯರೊಡನೆ ಬೆಳೆಗಿಸಿದ ಬಣ್ಣದ ಮೇಣದ ಬತ್ತಿಗಳನ್ನು ಹಿಡಿದುಕೊಂಡು ಭಕ್ತಿ ಗಾಯನ, ಸಂಗೀತ, ಬ್ಯಾಂಡು, ಬಣ್ಣ ಬಣ್ಣದ ಕೊಡೆಗಳ ಜೊತೆ, ಗಾಯನ ಮಂಡಳಿಯೊಡನೆ ವಿದ್ಯುತ್ ದೀಪಗಳ ಅಲಕ್ರಂತದೊಂದಿಗೆ ಪರಮ ಪ್ರಸಾದದ ಪುರ ಮೆರವಣಿಗೆಯನ್ನು ಕುಂದಾಪುರದ ಮುಖ್ಯ ರಸ್ತೆಗಳಲ್ಲಿ ವೈಭವದ ಜೊತೆ ಭಕ್ತಿ ಮತ್ತು ಶಿಸ್ತಿನಿಂದ ನೆಡೆಸಲಾಯಿತು.
ನಂತರ ಸಂತ ಮೇರಿಸ್ ವಿಧ್ಯಾ ಸಂಸ್ಥೆಯ ಮೈದಾನದಲ್ಲಿ ಪರಮ ಪ್ರಸಾದದ ಆರಾಧನೆ ಕನ್ನಡದಲ್ಲಿ ನೆಡೆಯಿತು. ಈ ಧಾರ್ಮಿಕ ವಿಧಿಯನ್ನು ನೆಡೆಸಿದ ಗಂಗೊಳ್ಳಿ ಚರ್ಚಿನ ಧರ್ಮಗುರು ವಂ|ತೋಮಸ್ ರೋಶನ್ ಡಿಸೋಜಾ ‘ಕ್ರಿಸ್ತ ರಾಜನು ನಮ್ಮ ಹ್ರದಯದಲ್ಲಿರು ರಾಜ, ಅವನಲ್ಲಿ ಇತರ ರಾಜರಂತೆ ರಾಜ ವೈಭೋಗಳು ಇರಲಿಲ್ಲ, ವಸ್ತ್ರ ವೈಡುರ್ಯಗಳಿರಲಿಲ್ಲ, ಇವರಿಗೆ ಸರಿಯಾದ ಬಟ್ಟೆ ಕೂಡ ಇರಲಿಲ್ಲ, ನಿಲ್ಲಲು ನೆಲೆಯಿರಲಿಲ್ಲ, ಆದರೆ ನಮ್ಮನ್ನು ನಮ್ಮನ್ನು ಸ್ವರ್ಗ ಸಾಮ್ರಜ್ಯದಲ್ಲಿ ಕರೆದುಕೊಂಡು ಹೋಗಲು ಈ ಭೂಮಿಗೆ ಬಂದ ಅವರು ನೀತಿ, ಧರ್ಮದಲ್ಲಿ, ಸತ್ಯ ಪ್ರೀತಿಯಲ್ಲಿ ನಡೆಯಲು ಉಪದೇಶಿಸಿ ಇಡೀ ಜಗತ್ತಿನ ರಾಜರಾಗಿದ್ದಾರೆ, ಈ ಭೂಮಿಯ ಮೇಲಿದ್ದ ರಾಜರೆಲ್ಲ ನಶಿಸಿ ಹೋದರು, ಆದರೆ ದೇವ ಪುತ್ರನಾದ ಯೇಸುವಿನ ರಾe್ಯಕ್ಕೆ ಅಂತ್ಯ ಇರದು, ತಮ್ಮ ಮಾಂಸವನ್ನು ರೊಟ್ಟಿಯ ಮೂಲಕ ನಮಗೆ ನೀಡಿದ ಪರಮ ಪ್ರಸಾದ ಬಹಳ ಪವಿತ್ರವಾದುದು, ಅದನ್ನು ಭುಜಿಸುವರು ಮತ್ತು ನನ್ನ ರಕ್ತವನ್ನು ಪಾನ ಮಾಡುವರು ನನ್ನಲ್ಲಿ ನೆಲೆಸುತ್ತಾರೆ, ಅವರಲ್ಲಿ ನಾನು ನೆಲೆಸುತ್ತೇನೆ, ಎಂದು ಯೇಸು ಹೇಳಿದ್ದಾರೆ. ನಾವು ಹಸಿದಿರುವಾಗ ತಿನ್ನುವ ರೊಟ್ಟಿ (ಆಹಾರ) ನಮ್ಮ ಹೊಟ್ಟೆಗಾದರೆ, ಯೇಸು ನೀಡಿದ ಪರಮ ಪ್ರಸಾದ ನಮ್ಮ ಆತ್ಮಕ್ಕಾಗಿ, ಎನ್ನುತ್ತಾ ಅವರು “ಇಡೀ ವಿಶ್ವದಲ್ಲಿ ನಾವೆಲ್ಲ ಶಾಂತಿ ಪ್ರೀತಿಯಿಂದ ಜೀವಿಸಿ, ಭ್ರಾತತ್ವ ಭಾಂದವ್ಯವನ್ನು ಗಟ್ಟಿಗೊಳಿಸಬೇಕು” ಎಂದು ಸಂದೇಶ ನೀಡಿದ ಅವರು ಪರಮ ಪ್ರಸಾದದ ಮೂಲಕ ಆಶಿರ್ವಾದವನ್ನು ನೀಡಿದರು.
ಈ ಧಾರ್ಮಿಕ ವಿಧಿಯು ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ಪ್ರಧಾನ ಧರ್ಮಗುರು ಅ|ವ|ಸ್ಟ್ಯಾನಿ ತಾವ್ರೊ ಮಾರ್ಗದರ್ಶನದಲ್ಲಿ ನಡೆದಿದ್ದು ಅವರು ಎಲ್ಲರನ್ನು ವಂದಿಸಿದರು. ಕಾರ್ಯಕ್ರಮಗಳ ಸಹ ಉಸ್ತುವಾರಿಯನ್ನು ವಹಿಸಿಕೊಂಡ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಈ ಧಾರ್ಮಿಕ ವಿಧಿಯಲ್ಲಿ ಪಾಲ್ಗೊಂಡರು. ಈ ಕಾರ್ಯಕ್ರಮದ ಪೆÇೀಶಕರಾದ, ಮೊನಿಕಾ ಡಿಆಲ್ಮೇಡಾ, ಸ್ಟೀವನ್ ಡಿಆಲ್ಮೇಡಾ ಮತ್ತು ಜೆನವಿ ಡಿಆಲ್ಮೇಡಾ, ಪಾಲನ ಮಂಡಳಿ ಉಪಾಧ್ಯಕ್ಷ ಎಲ್.ಜೆ ಫೆರ್ನಾಂಡಿಸ್, ಕಾರ್ಯದರ್ಶಿ ಅಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಧರ್ಮಭಗಿನಿಯರು, ವಾಳೆಯ ಗುರಿಕಾರರು ಪಾಲನ ಮಂಡಳಿ ಸದಸ್ಯರು, ಇಗರ್ಜಿಯ ಹಲವು ಸಂಘ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಹಾಗೂ ಸಹಸ್ರಾರು ಭಕ್ತರು ಪಾಲ್ಗೊಂಡರು.

ಉಡುಪಿ: ಕ್ರಿಸ್ತ ರಾಜರ ಮಹೋತ್ಸವದ ಪ್ರಯುಕ್ತ ಪರಮಪ್ರಸಾದ ಆರಾಧನೆ – ಉಡುಪಿ ಧರ್ಮಪ್ರಾಂತ್ಯದ ದಶಮಾನೋತ್ಸವ

ಉಡುಪಿ:ನ.20: ಕ್ರಿಸ್ತರಾಜರ ಹಬ್ಬದ ಪ್ರಯುಕ್ತ ಕ್ರೈಸ್ತ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ, ಆರಾಧನೆ ಮತ್ತು ಮೆರವಣಿಗೆ ಹಾಗೂ ಧರ್ಮಪ್ರಾಂತ್ಯದ ಉಗಮದ ದಶಮಾನೋತ್ಸವ ಸಮಾರಂಭ ರವಿವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥಡ್ರಲ್ ನಲ್ಲಿ ಭಕ್ತಿ ಭಾವದೊಂದೊಂದಿಗೆ ಜರುಗಿತು.
ಪರಮ ಪ್ರಸಾದ ಮೆರವಣಿಗೆಯ ಬಲಪೂಜೆಯ ನೇತೃತ್ವ ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಇಂದು ನಾವು ಕ್ರಿಸ್ತ ರಾಜರ ಮಹೋತ್ಸವವನ್ನು ಆಚರಿಸುತ್ತಿದ್ದು ಯೇಸುಕ್ರೀಸ್ತರು ಪ್ರತಿಯೊಬ್ಬರು ಶಾಂತಿ ಮತ್ತು ಕ್ಷಮೆಯ ದೂತರಾಗಬೇಕು ಎನ್ನುವ ಸಂದೇಶವನ್ನು ತನ್ನ ಜೀವನದಲ್ಲಿ ಬದುಕಿ ತೋರಿಸಿದ್ದು ಅದರಂತೆ ನಾವೂ ಕೂಡ ಅವರ ಮಾರ್ಗದಲ್ಲಿ ಸಾಗಬೇಕು ಎಂದರು.
ಬಲಿಪೂಜೆಯ ಬಳಿಕ ದಿವ್ಯ ಜ್ಯೋತಿ ನಿರ್ದೇಶಕರಾದ ವಂ ಸಿರಿಲ್ ಲೋಬೊ ಅವರು ಪರಮಪ್ರಸಾದದ ಆರಾಧನೆಯನ್ನು ನೆರವೇರಿಸಿದರು. ಬಳಿಕ ಪರಮ ಪ್ರಸಾದವನ್ನು ವಿಶೇಷವಾಗಿ ಅಲಂಕರಿಸಲ್ಪಟ್ಟ ತೆರೆದ ವಾಹನದಲ್ಲಿ ಮಿಲಾಗ್ರಿಸ್ ಕ್ಯಾಥೆಡ್ರಲ್ ನಿಂದ ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನ ವರೆಗೆ ಸಾರ್ವಜನಿಕವಾಗಿ ಕೊಂಡೊಯ್ದು ಗೌರವ ಸಲ್ಲಿಸಲಾಯಿತು.
ಮೌಂಟ್ ರೋಸರಿ ಚರ್ಚಿನಲ್ಲಿ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಉಡುಪಿ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂ| ಜೋನ್ಸನ್ ಅವರು ಪವಿತ್ರ ಬೈಬಲ್ ನ ವಾಚನ ನೆರವೇರಿಸಿ ಪರಮ ಪ್ರಸಾದ ಕುರಿತು ಸಂದೇಶ ನೀಡಿ ಪರಮ ಪ್ರಸಾದವು ಏಕತೆ ತ್ಯಾಗ ಮತ್ತು ಕ್ಷಮೆಯ ಸಂಕೇತವಾಗಿದ್ದು ನಿಜವಾದ ಪ್ರೀತಿಯು ನಮ್ಮ ನೆರೆಹೊರೆಯವರಲ್ಲಿ ತೋರಿಸುವುದರಲ್ಲಿ ಅಡಕವಾಗಿದೆ ಎಂದರು. ಬಳಿಕ ಧರ್ಮಾಧ್ಯಕ್ಷರು ಪರಮ ಪ್ರಸಾದ ಸಾರ್ವಜನಿಕ ಆಶೀರ್ವಚನವನ್ನು ನೀಡಿದರು.

ಧರ್ಮಪ್ರಾಂತ್ಯದ ದಶಮಾನೋತ್ಸವ ಸಂಭ್ರಮ

ಉಡುಪಿ ಧರ್ಮಪ್ರಾಂತ್ಯ ಆರಂಭವಾಗಿ ಹತ್ತು ವರ್ಷಗಳು ಸಂದಿದ್ದು ಇದರ ನೆನಪಿಗಾಗಿ ಅದ್ದೂರಿ ಸಂಭ್ರಮವನ್ನು ಮಾಡದೆ ಸಮುದಾಯದ ಅಗತ್ಯಕ್ಕಾಗಿ ಆರೋಗ್ಯ ನಿಧಿಗೆ ಧರ್ಮಾಧ್ಯಕ್ಷರು ಚಾಲನೆ ನೀಡಿದರು. ಅಲ್ಲದೆ ಧರ್ಮಪ್ರಾಂತ್ಯದ ಚರಿತ್ರೆ, ಧರ್ಮಪ್ರಾಂತ್ಯದ ವ್ಯಾಪ್ತಿಗೊಳಪಟ್ಟ ಚರ್ಚುಗಳ ಚರಿತ್ರೆಗಳನ್ನೊಂಡ ಪುಸ್ತಕಗಳು ಮತ್ತು ಧರ್ಮಪ್ರಾಂತ್ಯದ ಹತ್ತು ವರ್ಷಗಳ ಸಾಧನೆಯನ್ನು ಬಿಂಬಿಸುವ ಸಾಕ್ಷ್ಯಚಿತ್ರ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಧರ್ಮಪ್ರಾಂತ್ಯಕ್ಕೆ ತನ್ನ ನಿಸ್ವಾರ್ಥ ಹಾಗೂ ಪ್ರೀತಿ ಪೂರ್ವಕ ಸೇವೆ ನೀಡಿದ ಧರ್ಮಾಧ್ಯಕ್ಷ ಅತಿ ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರಿಗೆ ಧರ್ಮಾಪ್ರಾಂತ್ಯದ ಪರವಾಗಿ ಸನ್ಮಾನಿಸಲಾಯಿತು.

ಉಡುಪಿ ಧರ್ಮಪ್ರಾಂತ್ಯ ಆರಂಭವಾಗಿ ಹತ್ತು ವರ್ಷಗಳು ಸಂದಿದ್ದು ಇದರ ನೆನಪಿಗಾಗಿ ಅದ್ದೂರಿ ಸಂಭ್ರಮವನ್ನು ಮಾಡದೆ ಸಮುದಾಯದ ಅಗತ್ಯಕ್ಕಾಗಿ ಆರೋಗ್ಯ ನಿಧಿಗೆ ಧರ್ಮಾಧ್ಯಕ್ಷರು ಚಾಲನೆ ನೀಡಿದರು. ಅಲ್ಲದೆ ಧರ್ಮಪ್ರಾಂತ್ಯದ ಚರಿತ್ರೆ, ಧರ್ಮಪ್ರಾಂತ್ಯದ ವ್ಯಾಪ್ತಿಗೊಳಪಟ್ಟ ಚರ್ಚುಗಳ ಚರಿತ್ರೆಗಳನ್ನೊಂಡ ಪುಸ್ತಕಗಳು ಮತ್ತು ಧರ್ಮಪ್ರಾಂತ್ಯದ ಹತ್ತು ವರ್ಷಗಳ ಸಾಧನೆಯನ್ನು ಬಿಂಬಿಸುವ ಸಾಕ್ಷ್ಯಚಿತ್ರ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಧರ್ಮಪ್ರಾಂತ್ಯಕ್ಕೆ ತನ್ನ ನಿಸ್ವಾರ್ಥ ಹಾಗೂ ಪ್ರೀತಿ ಪೂರ್ವಕ ಸೇವೆ ನೀಡಿದ ಧರ್ಮಾಧ್ಯಕ್ಷ ಅತಿ ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರಿಗೆ ಧರ್ಮಾಪ್ರಾಂತ್ಯದ ಪರವಾಗಿ ಸನ್ಮಾನಿಸಲಾಯಿತು. ಉಡುಪಿ ಧರ್ಮಪ್ರಾಂತ್ಯದ ಕುಲಪತಿ ವಂ|ರೋಶನ್ ಡಿಸೋಜಾ, ಶಿರ್ವ ವಲಯ ಪ್ರಧಾನ ಧರ್ಮಗುರು ವಂ|ಲೆಸ್ಲಿ ಡಿಸೋಜಾ, ಕಲ್ಯಾಣಪುರ ಮಿಲಾಗ್ರಿಸ್ ಕಾಥೆಡ್ರಲ್ ನ ರೆಕ್ಟರ್ ವ|ವಲೇರಿಯನ್ ಮೆಂಡೊನ್ಸಾ, ಕಾರ್ಕಳ ವಲಯ ಪ್ರಧಾನ ಧರ್ಮಗುರು ವಂ| ಪಾವ್ಲ್ ರೇಗೊ, ಮೌಂಟ್ ರೋಸರಿ ಚರ್ಚಿನ ಧರ್ಮಗುರು ವಂ|ರೊಕ್ ಡೆಸಾ, ಉದ್ಯಾವರ ಚರ್ಚಿನ ಧರ್ಮಗುರು ವಂ|ಸ್ಟ್ಯಾನಿ ಬಿ ಲೋಬೊ, ಧರ್ಮಪ್ರಾಂತ್ಯದ ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಹಾಗೂ ಇತರ ಹಿರಿಯ ಧರ್ಮಗುರುಗಳು ಉಪಸ್ಥಿತರಿದ್ದರು. ಕುಟುಂಬ ಆಯೋಗದ ನಿರ್ದೇಶಕ ಲೆಸ್ಲಿ ಆರೋಜಾ ಕಾರ್ಯಕ್ರಮ ನಿರೂಪಿಸಿದರು.


ಉಡುಪಿ ಧರ್ಮಪ್ರಾಂತ್ಯ ಆರಂಭವಾಗಿ ಹತ್ತು ವರ್ಷಗಳು ಸಂದಿದ್ದು ಇದರ ನೆನಪಿಗಾಗಿ ಅದ್ದೂರಿ ಸಂಭ್ರಮವನ್ನು ಮಾಡದೆ ಸಮುದಾಯದ ಅಗತ್ಯಕ್ಕಾಗಿ ಆರೋಗ್ಯ ನಿಧಿಗೆ ಧರ್ಮಾಧ್ಯಕ್ಷರು ಚಾಲನೆ ನೀಡಿದರು. ಅಲ್ಲದೆ ಧರ್ಮಪ್ರಾಂತ್ಯದ ಚರಿತ್ರೆ, ಧರ್ಮಪ್ರಾಂತ್ಯದ ವ್ಯಾಪ್ತಿಗೊಳಪಟ್ಟ ಚರ್ಚುಗಳ ಚರಿತ್ರೆಗಳನ್ನೊಂಡ ಪುಸ್ತಕಗಳು ಮತ್ತು ಧರ್ಮಪ್ರಾಂತ್ಯದ ಹತ್ತು ವರ್ಷಗಳ ಸಾಧನೆಯನ್ನು ಬಿಂಬಿಸುವ ಸಾಕ್ಷ್ಯಚಿತ್ರ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಧರ್ಮಪ್ರಾಂತ್ಯಕ್ಕೆ ತನ್ನ ನಿಸ್ವಾರ್ಥ ಹಾಗೂ ಪ್ರೀತಿ ಪೂರ್ವಕ ಸೇವೆ ನೀಡಿದ ಧರ್ಮಾಧ್ಯಕ್ಷ ಅತಿ ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರಿಗೆ ಧರ್ಮಾಪ್ರಾಂತ್ಯದ ಪರವಾಗಿ ಸನ್ಮಾನಿಸಲಾಯಿತು.

ಪ್ರತಿಯೊಬ್ಬರೂ ಡಾ. ಪುನೀತ್ ರಾಜ್‍ಕುಮಾರ್ ಅವರ ಆದರ್ಶ ಪಾಲಿಸಬೇಕು ಪಿ.ಎಸ್.ಐ. ಜೆ.ಸಿ.ನಾರಾಯಣಸ್ವಾಮಿ

ಶ್ರೀನಿವಾಸಪುರ: ಪ್ರತಿಯೊಬ್ಬರೂ ಡಾ. ಪುನೀತ್ ರಾಜ್‍ಕುಮಾರ್ ಅವರ ಆದರ್ಶ ಪಾಲಿಸಬೇಕು ಎಂದು ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಜೆ.ಸಿ.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಸಮೀಪ ಡಾ. ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಶನಿವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪುನೀತ್ ರಾಜ್‍ಕುಮಾರ್ ನೆನಪಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಸ್ತುತ್ಯಾರ್ಹ ಸಂಗತಿಯಾಗಿದೆ ಎಂದು ಹೇಳಿದರು.
ಪುನೀತ್ ರಾಜ್‍ಕುಮಾರ್ ಅವರ ಸ್ಮರಣಾರ್ಥ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಅನ್ನ ಸಂತರ್ಪಣೆ ಮುಂತಾದ ಸಮಾಜ ಮುಖಿ ಚಟುವಟಿಕೆ ಕೈಗೊಳ್ಳಲಾಗಿದೆ. ಇಂಥ ಸೇವಾ ಪ್ರವೃತ್ತಿ ಗರಿಗೆದರಬೇಕು. ಕನ್ನಡ ಗಡಿ ಭಾಗದ ಜನರ ಆಡು ಭಾಷೆಯಾಗಬೇಕು ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್ ಕನ್ನಡ ಧ್ವಜಾರೋಹಣ ಮಾಡಿದರು. ಪುರಸಭೆ ಮುಖ್ಯಾಧಿಕಾರಿ ಎಂ.ಜಯರಾಂ, ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಶ್ರೀನಿವಾಸ್, ಸಾಹಿತಿ ಆರ್.ಚೌಡರೆಡ್ಡಿ, ಆವಲಕುಪ್ಪ ಬಾಬು, ತಾಲ್ಲೂಕು ಡಾ. ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಎಸ್.ಎಂ.ಶ್ರೀನಿವಾಸ್, ಬಳಗದ ಪದಾಧಿಕಾರಿಗಳಾದ ಎಸ್.ವಿ.ಚಂದ್ರಶೇಖರ್, ಶ್ರವಣ್, ಪಿ.ಶ್ರೀನಿವಾಸಲು, ಡಿ.ಎಸ್.ಕಾರ್ತಿಕರ್, ಎನ್.ಮುನಿರಾಜು, ವಿ.ಮಂಜುನಾಥ್, ಎಸ್.ವೇದಾಂತ್, ಎಸ್.ಬಾಬು, ಮದನ್ ಮೋಹನ್, ನಾರಾಯನಮೂರ್ತಿ, ಯಾಹ್ಯಾಖಾನ್, ಶ್ರೀನಿವಾಸ, ಹೈದರವಲ್ಲಿ, ಹರೀಶ್, ಕೆ.ರಾಮಣ್ಣ, ಜಿ.ಆರ್.ರೆಡ್ಡಪ್ಪ, ಬಿ.ಎಂ.ಪ್ರವೀಣ್ ಕುಮಾರ್, ಎಸ್.ವಿ.ಕಾರ್ತಿಕ್ ಇದ್ದರು.
ಸಂಜೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಸದುಪಯೋಗ ಪಡಿಸಿಕೊಳ್ಳಬೇಕು:ತಹಶೀಲ್ದಾರ್ ಶಿರಿನ್ ತಾಜ್

ಶ್ರೀನಿವಾಸಪುರ: ಜನರು ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಸದುಪಯೋಗ ಪಡಿಸಿಕೊಳ್ಳಬೇಕುಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ತಾಲ್ಲೂಕಿನ ಪಾತನೆಲವಂಕಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ಸಾಧ್ಯವಾಗುತ್ತದೆ. ಇನ್ನು ಕೆಲವು ಸಮಸ್ಯೆಗಳನ್ನು ಕಾಲ ಮಿತಿಯಲ್ಲಿ ಪರಿಹರಿಸಲಾಗುವುದು. ಗ್ರಾಮದ ಸ್ಮಶಾನ ಒತ್ತುವರಿ ತೆರವುಗೊಳಿಸಿ, ಶಾಂತಿ ಧಾಮ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವುದು. ಕೆರೆಯಲ್ಲಿ ನೀರು ಮುಗಿದ ಬಳಿಕ ಕೆರೆ ಒತ್ತುವರಿ ತೆರವುಗೊಳಿಸಿ ಕೆರೆ ಅಭಿವೃದ್ಧಿ ಕೈಗೊಳ್ಳಲಾಗುವುದು. ಪಹಣಿ ಜೋಡಣೆಗೆ ಕ್ರಮ ಕೈಗೊಳ್ಳಾಗುವುದು. ಅಂಗನವಾಡಿ ಕಟ್ಟಡ ನಿರ್ಮಿಸಲಾಗುವುದು ಎಂದು ಹೇಳಿದರು.
ವಿವಿಧ ಇಲಾಖೆಗಳ ಮುಖ್ಯಸ್ಥರು ಮಾತನಾಡಿ, ತಮ್ಮ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ 10 ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಸೌಲಭ್ಯ ವಿತರಿಸಲಾಯಿತು.
ವಿವಿಧ ಇಲಾಖೆಗಳ ಅಧಿಕಾರಿಗಳಾದ ಮಂಜುನಾಥ್, ಗೌಸ್‍ಸಾಬ್, ಎಂ.ನಾರಾಯಣಸ್ವಾಮಿ, ಡಾ.ವಿಶ್ವನಾಥ್, ಡಾ.ಕವಿತ, ಡಾ. ಮಂಜುನಾಥ್, ಎಂ.ಶ್ರೀನಿವಾಸನ್, ಕೃಷ್ಣಪ್ಪ, ಮಂಜುನಾಥ್, ಅಬೀಬ್, ಮೆಘಾ ನಾಯಕ್, ವಿರೂಪಾಕ್ಷಪ್ಪ, ಬಾಬು, ನಟರಾಜ್, ಭಾವನಾ, ಶರಣಮ್ಮ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಲಮೇಲಮ್ಮ, ಸದಸ್ಯರಾದ ರಘುನಾಥರೆಡ್ಡಿ, ಸಿ.ಎಂ.ರಮೇಶ್, ಬಾಬೂರೆಡ್ಡಿ ಇದ್ದರು.

ಗ್ರಾಮೀಣ ವಿದ್ಯಾರ್ಥಿನಿ ಅನುಶ್ರೀಗೆ ದಾನಿ ಎಸ್.ಆರ್.ಧರ್ಮೇಶ್ ಸೈಕಲ್ ಕೊಡುಗೆ ನೀಡಿದರು.

ಶ್ರೀನಿವಾಸಪುರ: ಶಾಲೆಗೆ ಹೋಗಲು ತೊಂದರೆ ಅನುಭವಿಸುತ್ತಿದ್ದ ವಿದ್ಯಾರ್ಥಿನಿಯೊಬ್ಬರಿಗೆ ಸಿಂಗನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಸೈಕಲ್ ಕೊಡಿಸುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೊತ್ತನೂರು ಗ್ರಾಮದ ವಿದ್ಯಾರ್ಥಿನಿ ಅನುಶ್ರೀ ದೂರದ ಪ್ರೌಢ ಶಾಲೆಗೆ ಕಾಲ್ನಡಿಗೆಯಲ್ಲೇ ಹೋಗುತ್ತಿದ್ದರು. ಅದನ್ನು ಕಂಡ ದಾನಿ ಧರ್ಮೇಶ್ ತಮ್ಮ ಸಂಬಳದಲ್ಲಿ ಉಳಿಸಿಟ್ಟ ಹಣದಿಂದ ಹೊಸ ಸೈಕಲ್ ಖರೀದಿಸಿ ನೀಡಿದ್ದಾರೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ಎನ್.ಮುನಿಯಪ್ಪ, ಶಿಕ್ಷಕರ ಸಂಘದ ಸದಸ್ಯರು ಹಾಗೂ ವಿದ್ಯಾರ್ಥಿನಿ ಪೋಷಕರು, ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ನೆರವಾದ ಧರ್ಮೇಶ್ ಅವರನ್ನು ಅಭಿನಂದಿಸಿದ್ದಾರೆ.

ಶ್ರೀನಿವಾಸಪುರ ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಪುರಸಭಾ ಸದಸ್ಯರ ವಿಶೇಷ ಸಭೆ

ಶ್ರೀನಿವಾಸಪುರ: ಇಲ್ಲಿ ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಪುರಸಭಾ ಸದಸ್ಯರ ವಿಶೇಷ ಸಭೆ ಏರ್ಪಡಿಸಲಾಗಿತ್ತು.
ಸಭೆಯಲ್ಲಿ ಪುರಸಭಾ ಕಚೇರಿ ಸ್ವಚ್ಛತೆ ವಿಭಾಗದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಚಾಲಕರು, ಕಾವರಲುಗಾರರು, ಆಪರೇಟರ್‍ಗಳು, ಸೂಪರ್‍ವೈಸರ್‍ಗಳು, ಜೆಸಿಬಿ, ಸಕ್ಕಿಂಗ್, ಜಟ್ಟಿಂಗ್ ಯಂತ್ರ, ಟ್ರ್ಯಾಕ್ಟರ್, ಆಟೋ ಟಿಪ್ಪರ್ ವಾಹನಗಳ ಕಾರ್ಮಿಕರು ಹಾಗೂ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ನಾಲ್ಕು ಮಂದಿ ಡಾಟಾ ಎಂಟ್ರಿ ಆಪರೇಟರ್‍ಗಳ ಸೇವೆಯನ್ನು ಡಿ.22 ರಿಂದ ಪೂರ್ವಾನ್ವಯವಾಗುವಂತೆ ಮುಂದುವರಿಸಿ, ಟೆಂಡರ್ ಕರೆಯಲು ಒಪ್ಪಿಗೆ ನೀಡಲಾಯಿತು.
ಪಟ್ಟಣದ ಜೆಸಿ ರಸ್ತೆ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಶಿಥಿಲಗೊಂಡಿರುವ ಪುರಸಭೆಗೆ ಸೇರಿದ 16 ವಾಣಿಜ್ಯ ಮಳಿಗೆ ಹಾಗೂ ದಕ್ಷಿಣ ಭಾಗದ 10 ಅಂಗಡಿ ತೆರವುಗೊಳಿಸಲು ಸಮ್ಮತಿ ಸೂಚಿಸಲಾಯಿತು.
ಪುರಸಭೆ ನೂತನ ಕಚೇರಿ ದಕ್ಷಿಣ ಭಾಗದ ಕಾಂಪೌಂಡ್ ಪಕ್ಕದಲ್ಲಿ ನಿರ್ಮಿಸಲಾಗಿರುವ ಕಾಲುವೆಗೆ ಸಂಬಂಧಿಸಿದ ಬಿಲ್ ಪಾವತಿಸು ವಿಚಾರ ಮುಂದೂಡಲಾಯಿತು.
ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಹೆಚ್ಚು ಚರ್ಚೆ ಇಲ್ಲದೆ ಎರಡು ವಿಷಯಗಳಿಗೆ ಸಮ್ಮತಿ ಸೂಚಿಸಲಾಯಿತು. ಒಂದು ವಿಷಯವನ್ನು ಮುಂದೂಡಲಾಯಿತು.
ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್, ಮುಖ್ಯಾಧಿಕಾರಿ ಎಂ.ಜಯರಾಂ, ಕಂದಾಯ ಅಧಿಕಾರಿ ವಿ.ನಾಗರಾಜ್, ಕಂದಾಯ ನಿರೀಕ್ಷಕರಾದ ಶಂಕರ್, ಫಾತಿಮಾ ಬೇಗಂ, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್ ಇದ್ದರು.

ಶ್ರೀನಿವಾಸಪುರ: ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮುತ್ತಕಪಲ್ಲಿಯ ಎಂ. ಚಲಪತಿಗೌಡರು ಸರ್ವಾನುತದಿಂದ ಆಯ್ಕೆ

ಶ್ರೀನಿವಾಸಪುರ: ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಕವಿಗಳು, ಕನ್ನಡದ ಕಟ್ಟಾಳು, ಕನ್ನಡ ಭಾಷಾ ಶಿಕ್ಷಕರು, ಸಾಹಿತ್ಯ ಲೋಕದಲ್ಲಿ ಕೃಷಿ ಮಾಡಿದ ಪಾತ ಮುತ್ತಕಪಲ್ಲಿಯ ಎಂ. ಚಲಪತಿಗೌಡರನ್ನು ಸರ್ವಾನುತದಿಂದ ಆಯ್ಕೆಮಾಡಲಾಗಿದೆ ಎಂದು ಕ.ಸ.ಪ. ಜಿಲ್ಲಾಧ್ಯಕ್ಷಗೋಪಾಲ ಗೌಡ ತಿಳಿಸಿದರು.
ಪಟ್ಟಣದ ಕರ್ನಾಟಕ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಸಮ್ಮೇಳನದ ಪೂರ್ವಬಾವಿ ಸಭೆ ಆಯೋಜಿಸಿ ಸಭೆಯಲ್ಲಿ ಭಾಗವಹಿಸಿದ್ದ ಪರಿಷತ್ತಿನ ಎಲ್ಲ ಪದಾಧಿಕಾರಿಗಳು, ಕರ್ನಾಟಕದ ಅಭಿಮಾನಿಗಳು, ಅಭಿಪ್ರಾಯವನ್ನು ಸಂಗ್ರಹಿಸಿ ಒಮ್ಮತವಾಗಿ ಪಾತ ಮುತ್ತಕಪಲ್ಲಿ ಚಲಪತಿ ಗೌಡರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಮಾತನಾಡಿದ ಗೋಪಾಲಗೌಡ, ಸಾಹಿತ್ಯ ಪರಿಷತ್ತು ವಿಭಿನ್ನವಾಗಿ ಕೆಲಸ ಮಾಡಬೇಕಾಗಿದೆ, ಇಲ್ಲಿ ಗುಂಪುಗಾರಿಕೆ, ಪರ ವಿರೋಧಕ್ಕೆ ಅವಕಾಶ ಮಾಡಿ ಕೊಡದೆ ಎಲ್ಲರೂ ಒಮ್ಮತದಿಂದ ಕನ್ನಡದ ಕೆಲಸ ಮಾಡಲು ಮುಂದಾಗೋಣ, ಕಾರ್ಯಕ್ರಮ ಅತ್ಯಂತ ವೈಭವ ಪೂರಿತವಾಗಿ ಆಚರಿಸಲು ಸಿದ್ದರಾಗೋಣ, ಚಲಪತಿ ಗೌಡ್ರುಇದೆ ತಾಲ್ಲೂಕಿನ ಪಾತ ಮುತ್ತಕಪಲ್ಲಿ ನಿವಾಸಿಗಳಾಗಿದ್ದು, ಕನ್ನಡ ಭಾಷೆಯ ಶಿಕ್ಷಕರಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರು ಸಾಹಿತ್ಯ ಲೋಕದಲ್ಲಿ ಅಪಾರ ಕೃಷಿಯನ್ನು ಮಾಡಿರುತ್ತಾರೆ. ಜೊತೆಗೆ ಕೃತಿಗಳನ್ನು ರಚಿಸಿರುತ್ತಾರೆ. 2008ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದು, ಹಾಗೆಯೇ ಅನೇಕ ಬಿರುದುಗಳನ್ನು ಪಡೆದಿರುವ ಇವರನ್ನು ಆಯ್ಕೆ ಮಾಡಿರುವುದು ಸಂತಸದ ವಿಷಯಎಂದು ತಿಳಿಸಿದರು.
ಕ.ಸ.ಪ. ಕಾರ್ಯದರ್ಶಿ ಬೈರೇಗೌಡ ಮಾತನಾಡಿ, ಸಮ್ಮೇಳನದ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಚಲಪತಿ ಗೌಡ ಜೊತೆಗೆ ಶಂಕರೇಗೌಡ ಹೆಸರು ಪ್ರಸ್ತಾಪವಾಗಿದ್ದು, ಪರ ವಿರೋಧ ಇಲ್ಲದೆ ಈ ಬಾರಿಯಲ್ದೂರು ಹೋಬಳಿಯಲ್ಲಿ ನ್ಯಾಶನಲ್ ಹೈಸ್ಕೂಲ್‍ ಆವರಣದಲ್ಲಿ ಸಮ್ಮೇಳನ ನಡೆಯಲು ತೀರ್ಮಾನವಾದ್ದರಿಂದ ಆ ಭಾಗಕ್ಕೆ ಸೇರುವ ಪಾತಮುತ್ತಕಪಲ್ಲಿ ಚಲಪತಿ ಗೌಡರನ್ನು ಗುರ್ತಿಸಿ ಕಾರ್ಯಕ್ರಮ ನಡೆಸಿದರೆ ಅರ್ಥಪೂರ್ಣವಾಗಿರುತ್ತದೆ ಎಂಬ ಇವರ ಹೆಸರನ್ನು ಅಂತಿಮಗೊಳಿಸಲಾಯಿತು.ಎರಡನೇ ಸ್ಥಾನದಲ್ಲಿ ಉಳಿದ ಶಂಕರೇಗೌಡ ಕಸಬಾ ಹೋಬಳಿಗೆ ಒಳಪಡುವುದರಿಂದ ಮುಂದಿನ ವರ್ಷದ ಸಮ್ಮೇಳನಕ್ಕೆ ಇವರ ಹೆಸರನ್ನು ಪರಿಗಣಿಸಿ ಕಸಬಾ ಹೋಬಳಿಯಲ್ಲೇ ಸಮ್ಮೇಳನ ಮಾಡಲು ಅಭಿಪ್ರಾಯ ವ್ಯಕ್ತಪಡಿಸಿದಾಗ ಎಲ್ಲಕನ್ನಡ ಮನಸ್ಸುಗಳು ಒಮ್ಮತದಿಂದ ತೀರ್ಮಾನಿಸಿದರು.
ಕ.ಸ.ಪ. ಅಧ್ಯಕ್ಷಿಣಿ ಮಂಜುಳ ಮಾತನಾಡಿ, ಸರ್ವಾಧ್ಯಕ್ಷರ ಆಯ್ಕೆಯಲ್ಲಿ ಪಾತಮುತ್ತಕಪಲ್ಲಿ ಚಲಪತಿಗೌಡ, ಕಸಬಾ ಹೋಬಳಿಯ ಗಾಂಡ್ಲಹಳ್ಳಿಯ ಶಂಕ್ರೇಗೌಡರ ಹೆಸರು ಪ್ರಸ್ತಾಪವಾಗಿದ್ದು, ಇವರಿಬ್ಬರ ಆಯ್ಕೆಯಲ್ಲಿ ತಳಮಳ ಗೊಂದಲವಿದ್ದು, ಶಂಕರೇಗೌಡರೇ ಉದಾರ ಮನಸ್ಸಿನಿಂದ ನನಗಿಂತ ಬಿನ್ನವಾಗಿ ಚಲಪತಿಗೌಡರೇ ಸೂಕ್ತವಾಗಿದ್ದಾರೆ, ಈ ಸಾಲಿನಲ್ಲಿ ಅವರೇ ಸೂಕ್ತ ಎಂಬ ಗೌರವದ ಮಾತನ್ನು ಪೂರ್ವ ಬಾವಿ ಸಭೆಯ ಮುನ್ನವೇ ಪ್ರಸ್ಥಾಪ ಮಾಡಿರುವ ಉಪನ್ಯಾಸ ಶಂಕರೇಗೌಡರ ಔದಾರ್ಯಕ್ಕೆ ಸಭೆಯಲ್ಲಿ ಎಲ್ಲಾ ಕನ್ನಡ ಮನಸ್ಸುಗಳ ಪರವಾಗಿ ಶಂಕರೇಗೌಡರನ್ನುಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕ.ಸ.ಪ. ಜಿಲ್ಲಾ ಸಂಚಾಲಕ ಡಾ. ರವಿಕುಮಾರ್, ಗೌ. ಅಧ್ಯಕ್ಷ ಲಕ್ಷ್ಮಣ್‍ರೆಡ್ಡಿ, ಕಾರ್ಯದರ್ಶಿ ಶಿವರಾಮೇಗೌಡ, ಖಜಾನ್ಸಿ ಮುರಳಿ ಬಾಬು, ಕವಿ ಆರ್. ಚೌಡರೆಡ್ಡಿ, ಪ್ರತಿನಿಧಿಗಳಾದ ಚಂದ್ರಪ್ಪ, ನಟರಾಜ್, ರಾಮಚಂದ್ರಪ್ಪ, ಚಿಕ್ಕರೆಡ್ಡೆಮ್ಮ, ಪ್ರಸನ್ನ, ಜಾಮಕಾಯಲು ವೆಂಕಟೇಶ್, ಯಲ್ದೂರು ಮುರಳೀ ಬಾಬು, ಪ್ರತಿಕಾ ಪತಿನಿಧಿ ಆರ್. ಬಾಬು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಕುಂದಾಪುರ ಕಾಂಗ್ರೆಸ್ ಇಂದಿರಾಗಾಂಧಿ ಜನ್ಮ ದಿನಾಚರಣೆ


ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಜನ್ಮ ದಿನಾಚರಣೆ ನಡೆಯಿತು. ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಶಿವರಾಮ ಶೆಟ್ಟಿ ಅವರು ಈ ಸಂದರ್ಭದಲ್ಲಿ ಮಾತನಾಡಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಭೂಮಸೂದೆ ,ಬ್ಯಾಂಕ್ ರಾಷ್ಟ್ರೀಕರಣ, 20 ಅಂಶಗಳ ಕಾರ್ಯಕ್ರಮಗಳ ಮೂಲಕ ದೇಶದ ಎಲ್ಲಾ ವರ್ಗದ ಜನರ ಏಳಿಗೆಗೆ ಶ್ರಮಿಸಿದ್ದರು’ ಎಂದರು.
ಇಂದಿರಾ ಗಾಂಧಿಯವರು ದೇಶಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಕಿಸಾನ್ ಘಟಕದ ಅಧ್ಯಕ್ಷ ಭಾಸ್ಕರ್ ಶೆಟ್ಟಿ, ಹಿರಿಯರಾದ ಕಾಳಪ್ಪ ಪೂಜಾರಿ ಮತ್ತು ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ನೆರವೇರಿಸಿದರು.
ಚಂದ್ರಶೇಖರ್ ಶೆಟ್ಟಿ ಮೊಳಹಳ್ಳಿ
, ಮಹಿಳಾ ಬ್ಲಾಕ್ ಅಧ್ಯಕ್ಷ ದೇವಕಿ ಸಣ್ಣಯ್ಯ, ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ, ಅಬ್ದುಲ್ಲಾ ಕೋಡಿ, ಮಂಜಿತ್ ನಾಗರಾಜ್, ಕೋಣಿ ಪಂಚಾಯತ್ ಉಪಾಧ್ಯಕ್ಷ ಅಶೋಕ್ ಭಂಡಾರಿ, ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿ, ಚಂದ್ರಶೇಖರ್ ಖಾರ್ವಿ, ಶ್ರೀಧರ್ ಶೇರಿಗಾರ , ಜಿಲ್ಲಾ ಕಾಂಗ್ರೆಸ್ ಸೋಶಿಯಲ್ ಮೀಡಿಯ ಅಧ್ಯಕ್ಷ ರೋಷನ್ ಶೆಟ್ಟಿ, , ಸುಭಾಷ್ ಪೂಜಾರಿ,ಘಟಕಗಳ ಅಧ್ಯಕ್ಷರಾದ ಧರ್ಮ ಪ್ರಕಾಶ್ ,ಅಶ್ವತ್ ಕುಮಾರ್, ಮುನಫ್ ಕೋಡಿ, ರೇವತಿ ಶೆಟ್ಟಿ, ಗಣಪತಿ ಶೇಟ್ ಕೇಶವ್ ಭಟ್, ಸ್ಟೀವನ್ ಡಿಕೋಸ್ಟ, ಕುಮಾರ ಕಾರ್ವಿ, ಕೋಡಿ ಪ್ರಭಾಕರ್, ಸದಾನಂದ ಕಾರ್ವಿ, ಜ್ಯೋತಿ ನಾಯಕ್, ಸವಿತಾ ಸಿಕ್ವೆರಾ, ಅಭಿಜಿತ್ ಪೂಜಾರಿ, ಸುಜನ್ ಶೆಟ್ಟಿ, ಪ್ರಭಾಕರ್ ಕಡ್ಗಿ ಮನೆ, ವಿವೇಕಾನಂದ, ರಾಕೇಶ್ ಶೆಟ್ಟಿ, ವಿಟ್ಟಲ್ ಕಾಂಚನ್, ಕೆ ಪಿ ಅರುಣ್ ಪಟೇಲ್, ದಿನೇಶ್ ಬೆಟ್ಟ, ಸಚಿನ್ ಕುಮಾರ್, ಜೋಸೆಫ್ ರೆಬೆಲ್ಲೊ, ವೇಣುಗೋಪಾಲ್, ಸಂಪತ್ತು ಶೆಟ್ಟಿ, ಲಕ್ಷ್ಮಣ, ಸತೀಶ್ ಶೆಟ್ಟಿ, ಶಶಿರ, ಗುರುರಾಜ್ ,ರಮ್ಶೀದ್, ನಾಗರಾಜ್, ಫೈರೋಜ್, ಸಂಗೀತ ಇನ್ನಿತರರು ಉಪಸ್ಥಿತರಿದ್ದರು.

ಹೇರಿ ಕುದ್ರು ಗಂಗಾಧರ ಶೆಟ್ಟಿ ಸ್ವಾಗತಿಸಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರೂಪಿಸಿ, ಅಶೋಕ್ ಸುವರ್ಣ ವಂದಿಸಿದರು.

ಕುಂದಾಪುರ ; ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಕುಂದಾಪುರ: ನ.18; ದಿನಾಂಕ 14.11.2022 ರಂದು ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು. ಶಾಲೆಯ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರಿಂದ ನೆಹರುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವವನ್ನು ಸಲ್ಲಿಸಲಾಯಿತು. ಮತ್ತು ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆಯ ಮಹತ್ವವನ್ನು ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ತೆರೆಜ್ ಶಾಂತಿ ಎ.ಸಿ ತಿಳಿಸಿದರು. ಬೋಧಕ ಹಾಗೂ ಬೋಧಕೇತರ ವರ್ಗದವರಿಂದ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆ ಏರ್ಪಡಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿ ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರವರ ವೃಂದದವರಿಂದ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಯಿತು. ಸಹ ಶಿಕ್ಷಕಿ ರಂಜಿತ ಸ್ವಾಗತಿಸಿದರು ಹಾಗೂ ಶಾಲಾ ವಿದ್ಯಾರ್ಥಿ ನಾಯಕ ಕಲ್ಯಾಣ ಬಸವರಾಜ್ ಧನ್ಯವಾದವನ್ನು ಸಮರ್ಪಿಸಿದರು. ಸಹ ಶಿಕ್ಷಕಿ ಪ್ರೀತಿ ಅಂದ್ರಾದೆ ಮತ್ತು ಸಹ ಶಿಕ್ಷಕಿ ŒŒವಿದ್ಯಾ ಕಾರ್ಯಕ್ರಮ ನಿರೂಪಿಸಿದರು.