Establishment Day – The Apostolic Carmel Congregation in India

The tiny sapling planted by Venerable Mother Veronica, the founder of the Apostolic Carmel Congregation in the year 1870 has grown as a mighty tree. She was ever attentive and attuned to the will of God and fulfilled her desires with heroic faith, generosity and a spirt of joyful surrender. St Agnes PU College conducted various activities from 13November 2022 to 19 November 2022 to remember and celebrate the life of Venerable Mother Veronica.

To help students get a deeper understanding of her saintly life, Mother Veronica ‘photos and videos on her life was displayed on the television projector. A digital painting competition, poetry writing competition and quiz on Mother Veronica was held for all the students. Students decorated the notice boards creatively with Venerable Mother Veronica’s gems and life.

Students formed a human chain displaying the number 200to mark the opening year of Bicentennial Celebration of the Birth of Mother Veronica (1823-2023).

To mark the 116th death anniversary of Venerable Mother Veronica, on 19th November. Holy Mass was celebrated and Mother Veronica’ s portrait was adorned with a garland with much devotion and reverence. A sapling was planted by the Principal, Vice Principal ,staff and students and a documentary ‘Life in Letters’ on her life was shown to the students.

The varied activities conducted helped students to understand and imbibe the values and virtues of Venerable Mother Veronica.

ಪಟ್ಟಣದ ನಗರೇಶ್ವರಸ್ವಾಮಿ ದೇವಾಲಯದಲ್ಲಿ ಕಡೆ ಕಾರ್ತಿಕ ಪ್ರಯುಕ್ತ ವಿಶೇಷ ಪೂಜೆ

ಪಟ್ಟಣದ ನಗರೇಶ್ವರಸ್ವಾಮಿ ದೇವಾಲಯದಲ್ಲಿ ಕಡೆ ಕಾರ್ತಿಕ ಸೋಮವಾರದ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು.

ಜೆ.ತಿಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಯ್ಕೆಯಾಗಿ ಜೆಡಿಎಸ್‍ನ ಮಂಜುಳಮ್ಮ ಚುನಾಯಿತರಾಗಿದ್ದಾರೆ

ಶ್ರೀನಿವಾಸಪುರ: ತಾಲ್ಲೂಕಿನ ಜೆ.ತಿಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಯ್ಕೆಯಾಗಿ ಜೆಡಿಎಸ್‍ನ ಮಂಜುಳಮ್ಮ ಚುನಾಯಿತರಾಗಿದ್ದಾರೆ.
ಹಿಂದಿನ ಅಧ್ಯಕ್ಷೆ ಕ್ರಿಷ್ಣಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 17 ಸದಸ್ಯರಿದ್ದು, ಮಂಜುಳಮ್ಮ 11 ಮತ ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರತ್ನಮ್ಮ 6 ಮತ ಪಡೆದು ಪರಾಭವ ಅನುಭವಿಸಿದ್ದಾರೆ.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಶಿವಕುಮಾರ್, ಪಿಡಿಒ ಎಸ್.ವಿನೋದ ಇದ್ದರು.
ವಿಜಯೋತ್ಸವ: ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ನಡೆಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ಸ್ಥಳೀಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗೇಶ್ ರೆಡ್ಡಿ, ಮುಖಂಡರಾದ ಸಿ.ಆರ್.ಟಿ.ವೆಂಕಟರಾಮರೆಡ್ಡಿ, ಕೃಷ್ಣಾರೆಡ್ಡಿ, ಮಂಜುನಾಥರೆಡ್ಡಿ, ಚಂದ್ರಶೇಖರ್, ಶ್ರೀರಾಮರೆಡ್ಡಿ, ರಾಮಕೃಷ್ಣಾರೆಡ್ಡಿ, ಸುರೇಶ್ ಬಾಬು, ಬಚ್ಚಿರೆಡ್ಡಿ, ನಾಗರಾಜ್ ಮತ್ತಿತರರು ಇದ್ದರು.

ಶ್ರೀನಿವಾಸಪುರ: ಡಾ|ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಸಮಂಜರಿ ತಹಶೀಲ್ದಾರ್ ಶಿರಿನ್ ತಾಜ್ ಉದ್ಘಾಟನೆ

ಶ್ರೀನಿವಾಸಪುರ: ಇಲ್ಲಿ ಡಾ. ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶನಿವಾರ ರಾತ್ರಿ ಏರ್ಪಡಿಸಿದ್ದ ರಸಮಂಜರಿ ಕಾರ್ಯಕ್ರಮವನ್ನು ತಹಶೀಲ್ದಾರ್ ಶಿರಿನ್ ತಾಜ್ ಉದ್ಘಾಟಿಸಿದರು.
ತುಮಕೂರು ಕಲಾವಿದರು ಹಾಗೂ ಜಿಜಿ ವೇಣ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು. ಚಳಿಯನ್ನು ಲೆಕ್ಕಿಸದೆ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದರು. ಪುನೀತ್ ರಾಜ್ ಕುಮಾರ್ ಚಿತ್ರಗಳ ಹಾಡುಗಳು ಹಾಗೂ ಮಿಮಿಕ್ರಿ ಮೂಲಕ ಕಲಾವಿದರು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು.
ಈ ಸಂದರ್ಭದಲ್ಲಿ ಸಾಹಿತಿ, ಕವಿ, ಕಲಾವಿದರು ಹಾಗೂ ಗಣ್ಯ ವ್ಯಕ್ತಿಳನ್ನು ಸನ್ಮಾನಿಸಿ, ನೆನೆಪಿನ ಕಾಣಿಕೆ ನೀಡಲಾಯಿತು.
ಡಾ. ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಬಳಗದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಂ.ಶ್ರೀನಿವಾಸ್, ಮುಖಂಡರಾದ ಎಂ.ಎಲ್.ಸತೀಶ್, ಎಂ.ಮುನಿರೆಡ್ಡಿ, ಡಾ. ಜಿ.ಎಸ್.ಶ್ರೀನಿವಾಸ್, ಡಾ. ಉಮಾಶಂಕರ್, ಬಳಗದ ಪಧಾಧಿಕಾರಿಗಳಾದ ಎಸ್.ವಿ.ಚಂದ್ರಶೇಖರ್, ಶ್ರವಣ್, ಪಿ.ಶ್ರೀನಿವಾಸಲು, ಡಿ.ಎಸ್.ಕಾರ್ತಿಕರ್, ಎನ್.ಮುನಿರಾಜು, ವಿ.ಮಂಜುನಾಥ್, ಎಸ್.ವೇದಾಂತ್, ಎಸ್.ಬಾಬು, ಮದನ್ ಮೋಹನ್, ನಾರಾಯನಮೂರ್ತಿ, ಯಾಹ್ಯಾಖಾನ್, ಶ್ರೀನಿವಾಸ, ಹೈದರವಲ್ಲಿ, ಹರೀಶ್, ಕೆ.ರಾಮಣ್ಣ, ಜಿ.ಆರ್.ರೆಡ್ಡಪ್ಪ, ಬಿ.ಎಂ.ಪ್ರವೀಣ್ ಕುಮಾರ್, ಎಸ್.ವಿ.ಕಾರ್ತಿಕ್ ಇದ್ದರು.

ಪರಿಸರ ಸ್ನೇಹಿ ವಸ್ತು ಪ್ರದರ್ಶನ ಉದ್ಘಾಟನೆ

ಕುಂದಾಪುರ: ಪ್ರತಿಯೊಬ್ಬರಲ್ಲಿಯೂ ಪರಿಸರ ಕಾಳಜಿ ಇದ್ದಾಗ ಮಾತ್ರ ಪರಿಸರ ಸ್ನೇಹಿ ಸಮಾಜ ನಿಮಾ೯ಣ ಮಾಡಲು ಸಾಧ್ಯವಿದೆ. ಮೊದಲು ನಾವು ಬದಲಾಗಬೇಕು. ಪರಿಸರ ಪೂರಕ ವಸ್ತುಗಳ ಬಳಕೆಯಿಂದ ನಮ್ಮ ಆರೋಗ್ಯದ ಜತೆಯಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಅವಕಾಶವಿದೆ ಎಂದು ಪತ್ರಕರ್ತ ಗಣೇಶ್ ಐಶ್ವರ್ಯ ಬೀಜಾಡಿ ಹೇಳಿದರು.
ಕೋಟೇಶ್ವರ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸಕಾ೯ರಿ ಪ್ರಥಮ ದಜೆ೯ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಬಿಬಿಎ ವಿದ್ಯಾಥಿ೯ಗಳಿಂದ ಕಾಲೇಜಿನ ಸಭಾಭವನದಲ್ಲಿ ಜರುಗಿದ ಪರಿಸರ ಸ್ನೇಹಿ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್.ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಪರಿಸರವನ್ನು ಮಾಲಿನ್ಯ ಮತ್ತು ನಾಶಪಡಿಸುವಂತಹ ಕೆಲಸಗಳು ನಡೆಯುತ್ತಿವೆ. ಪ್ರಕೃತಿ ದತ್ತವಾದ ಸಂಪನ್ಮೂಲಗಳನ್ನು ಕಾಪಾಡಿಕೊಂಡು ಮತ್ತು ನೈಸಗಿ೯ಕ ವಸ್ತುಗಳನ್ನು ವೃದ್ಧಿಸಿಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ. ಶಿಕ್ಷಣ ಸಂಸ್ಥೆ ಎನ್ನುವುದು ಕೇವಲ ಪ್ರಮಾಣ ಪತ್ರಗಳನ್ನು ಉತ್ಪಾದಿಸುವ ಪ್ಯಾಕ್ಟರಿಯಾಗಬಾರದು. ವಿದ್ಯಾಥಿ೯ಗಳಲ್ಲಿ ಸಮಾಜಮುಖಿ ಚಿಂತನೆಗಳನ್ನು ಬಿತ್ತಿಸಲು ಹಾಗೂ ಪ್ರೇರಣೆ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪರಿಸರ ಸ್ನೇಹಿ ಆಟಿಕೆ ಸಾಮಾಗ್ರಿಗಳಾದ ಚೆನ್ನೆಮಣೆ, ಮಕ್ಕಳ ಮರದ ಆಟಿಕೆಗಳು, ನಗುಗೊಂಬೆ, ಅಲಂಕಾರಿಕ ವಸ್ತುಗಳಾದ ಹಾಸುಕಲ್ಲಿನ ದೀಪ, ಬಿದಿರುಕಟ್ಟಿಗೆಯ ಉತ್ಪನಗಳಾದ ಕಳಸಿಗೆ, ಹೂಬುಟ್ಟಿ, ಕಡಗೋಲು, ಮರದ ಚಮಚ, ಬಟ್ಟೆ ಚೀಲ, ಗಾಜಿನ ಲೋಟ ಸೇರಿದಂತೆ ದಿನೋಪಯೋಗಿ ವಸ್ತುಗಳು, ಸಿರಿಧಾನ್ಯ ಉತ್ಪನ್ನಗಳು, ಮಣ್ಣಿನ ಮಡಿಕೆ, ಲೋಟ, ತಟ್ಟೆ, ಪೇಪರ್ ಕಪ್, ಹಲಸಿನ ಕೊಟ್ಟೆ, ಪೇಪರ್ ಪೆನ್ ಸ್ಟ್ಯಾಂಡ್ ಹೀಗೆ ಪರಿಸರ ಸ್ನೇಹಿ ಜೀವನ ಶೈಲಿಯನ್ನು ತಿಳಿಸುವ ವಸ್ತು ಪ್ರದರ್ಶನ ಗಮನ ಸೆಳೆಯಿತು. ವಿದ್ಯುತ್ ಬೈಕ್ ಮತ್ತು ಸೈಕಲ್ ಬಳಕೆ ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವ ಕುರಿತು ಅರಿವು ಮೂಡಿಸಿದ ವಿದ್ಯಾಥಿ೯ಗಳ ಶ್ರಮ ಮತ್ತು ಹುಮ್ಮಸ್ಸು ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.
ವಿದ್ಯಾಥಿ೯ ಕ್ಷೇಮಪಾಲನಾಧಿಕಾರಿ ಡಾ.ಉಷಾದೇವಿ ಜೆ.ಎಸ್, ಉಪನ್ಯಾಸಕರಾದ ಶ್ರೀಧರ್, ವನಮಾಲ, ಧನ್ಯ, ಗಣೇಶ್ ಪೈ, ರಾಮರಾಯ ಆಚಾರ್ಯ, ನಾಗರಾಜ್, ವೆಂಕಟರಾಮ್ ಭಟ್, ರೋಹಿಣಿ, ಸುಚಿತ್ರ, ಮುನಿರತ್ನ, ರಮೇಶ್ ಮತ್ತಿತರರು ಉಪಸ್ಥಿತರಿದ್ದರು. ಬಿಬಿಎ ವಿಭಾಗದ ಮುಖ್ಯಸ್ಥೆ ಚೇತನ ಎಂ ಕಾರ್ಯಕ್ರಮ ಸಂಘಟಿಸಿ ನಿರ್ವಹಿಸಿದರು.

ಜೆಡಿಎಸ್ ಕಾರ್ಯಕರ್ತರು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಏರ್ಪಡಿಸಲಾಗಿರುವ ಪಂಚರತ್ನ ರಥಯಾತ್ರೆ ಯಶಸ್ಸಿಗೆ ಸಹಕರಿಸಬೇಕು:ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ನ.22 ರಂದು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಏರ್ಪಡಿಸಲಾಗಿರುವ ಪಂಚರತ್ನ ರಥಯಾತ್ರೆ ಯಶಸ್ಸಿಗೆ ಸಹಕರಿಸಬೇಕು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಜೆಡಿಎಸ್ ಕಚೇರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ತಾಲ್ಲೂಕು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಂಚರತ್ನ ಯೋಜನೆ ಜೆಡಿಎಸ್ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ರಾಜ್ಯದ ಸರ್ವತೋಮುಖ ಪ್ರಗತಿಗೆ ಪೂರಕವಾಗಿದೆ. ಆ ಕುರಿತು ಜನರ ಗಮನ ಸೆಳೆಯುವ ಉದ್ದೇಶದಿಂದ ಪಂಚರತ್ನ ರಥಯಾತ್ರೆ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರ ಸುಗಟೂರು ಗ್ರಾಮದಲ್ಲಿ ಡಿ.22 ರಂದು ಬೆಳಿಗ್ಗೆ 10 ಗಂಟೆಗೆ ರಥಯಾತ್ರೆ ಪ್ರಾರಂಭಿಸಲಾಗುವುದು. ರೋಜೇನಹಳ್ಳಿ, ಹೋಳೂರು, ಯಲ್ದೂರು, ಶ್ರೀನಿವಾಸಪುರ, ಪುಂಗನೂರು ಕ್ರಾಸ್, ಲಕ್ಷ್ಮೀಪುರ, ರಾಯಲ್ಪಾಡ್ ಮೂಲಕ ಗೌನಿಪಲ್ಲಿಯಲ್ಲಿ ಕೊನೆಗೊಳಿಸಲಾಗುವುದು. ಅಂದು ಗೌನಿಪಲ್ಲಿ ಸಮೀಪದ ನಕ್ಕಲಗಡ್ಡ ಗ್ರಾಮದಲ್ಲಿ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ನಡೆಸುವರು ಎಂದು ಹೇಳಿದರು.
ನಕ್ಕಲಗಡ್ಡ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನ ಸಂಖ್ಯೆಯಿದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರೇ ಹೆಚ್ಚಾಗಿ ವಾಸಿಸುತ್ತಾರೆ. ಅವರ ಸಮಸ್ಯೆ ಅರಿಯುವ ಹಾಗೂ ಪರಿಹಾರ ಸೂಚಿಸುವ ಉದ್ದೇಶದಿಂದ ವಾಸ್ತವ್ಯಕ್ಕೆ ಆ ಗ್ರಾಮ ಆಯ್ಕೆಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ರಥಯಾತ್ರೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ.ಇಬ್ರಾಹೀಂ ಭಾಗವಹಿಸಲಿದ್ದಾರೆ. ಇತರ ಪಕ್ಷಗಳ ಮುಖಂಡರು ಪರಸ್ಪರ ಆರೋಪ ಪ್ರತ್ಯಾರೊಪದಲ್ಲಿ ತೊಡಗಿದ್ದಾರೆ ಆದರೆ ಜೆಡಿಎಸ್ ರಥಯಾತ್ರೆ ನಡೆಸುವುದರ ಮೂಲಕ ಜನರ ಸಮಸ್ಯೆ ನಿವಾರಣೆಗೆ ಪೂರಕ ಪ್ರಯತ್ನ ನಡೆಸುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಆಶೀರ್ವಾದದಿಂದ ಅಧಿಕಾರಕ್ಕೆ ಬರುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.

ಸಹಕಾರ ರಂಗದಲ್ಲಿ ಟೀಕೆ ಸಹಜ-ಜನರ ಹಣಕ್ಕೆ ಕಾವಲುಗಾರರಂತೆ ಕೆಲಸ ಮಾಡಿ
ಆತ್ಮವಿಮರ್ಶೆ ಮೂಲಕ ಸಂಸ್ಥೆ ಕಟ್ಟುವ ಕೆಲಸವಾಗಬೇಕು-ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:- ಸಹಕಾರ ರಂಗದಲ್ಲಿ ಟೀಕೆಗಳು ಸಹಜ ಆದರೆ ನಾವು ಜನರ ಹಣಕ್ಕೆ ಕಾವಲುಗಾರರಂತೆ ಕೆಲಸ ಮಾಡುತ್ತಿದ್ದೇವೆಯೇ ಎಂಬುದರ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳುವ ಮೂಲಕ ಸಂಸ್ಥೆ ಕಟ್ಟುವ ಕೆಲಸ ಮಾಡಬೇಕು ಎಂದು ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಡಿಸಿಸಿ ಬ್ಯಾಂಕ್,ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ, ಕಾರಂಜಿಕಟ್ಟೆಯ ನರ್ಮದಾ ಮಹಿಳಾ ಪತ್ತಿನ ಸಹಕಾರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ೬೯ನೇ ಅಖಿಲಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಸಹಕಾರ ರತ್ನ ಪುರಸ್ಕೃತರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಕೆಟ್ಟ ಹೆಸರು, ಒಳ್ಳೆಯ ಹೆಸರು ಎರಡೂ ಬರುತ್ತದೆ ಆದರೆ ಅದೆಲ್ಲವನ್ನು ಮೀರಿ ನಾವು ಸರಿಯಾಗಿದ್ದೇವೆಯೇ, ಸಹಕಾರ ತತ್ವಗಳಿಗೆ ಗೌರವ ನೀಡುತ್ತಿದ್ದೇವೆಯೇ ಎಂಬುದರ ಕುರಿತು ಆತ್ಮವಿಮರ್ಶೆ ಮಾಡಿಕೊಂಡು ಸಹಕಾರಿಗಳು ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಸ್ಮರಣೀಯರಾಗಿದ್ದ ಮಳ್ಳೂರು ಪಾಪಣ್ಣ ಅವರು ಸ್ಥಾಪಿಸಿದ್ದ ಸಹಕಾರಿ ಆಸ್ಪತ್ರೆ ಪುನಶ್ಚೇತನಕ್ಕೆ ಸಹಕಾರಿ ಸಚಿವರಿಗೆ ಮನವಿ ಮಾಡುವುದಾಗಿ ತಿಳಿಸಿದ ಅವರು, ಟೀಕೆ ಮಾಡೋರು ನೂರಾರು ಮಂದಿ ಇದ್ದೇ ಇರುತ್ತಾರೆ ಆದರೆ ನಮ್ಮ ಆತ್ಮಸಾಕ್ಷಿಗೆ ವಂಚನೆ ಮಾಡದಂತೆ ಕೆಲಸ ನಿರ್ವಹಿಸೋಣ, ಸಹಕಾರ ರಂಗವನ್ನು ಕಟ್ಟೋಣ ಎಂದರು.


ಕೋಚಿಮುಲ್ ವಿಭಜನೆ ಧ್ವನಿಯೆತ್ತಲಿಲ್ಲ


ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ಮಾತನಾಡಿ, ಘಟಾನುಘಟಿ ನಾಯಕರಿದ್ದರೂ ಸಹಾ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಒಕ್ಕೂಟ ಇನ್ನೂ ಅಸ್ಥಿತ್ವದಲ್ಲೇ ಇದೆ, ಇದರ ವಿರುದ್ದ ಯಾರೂ ಮಾತನಾಡುತ್ತಿಲ್ಲ ಕಾರಣ ರೈತರ ಹಿತ ಮುಖ್ಯವೆಂದು ಭಾವಿಸಿದ್ದಾರೆ ಆದರೆ ಕೋಲಾರ,ಚಿಕ್ಕಬಳ್ಳಾಪುರ ಒಕ್ಕೂಟ ಬೇರ್ಪಡಿಸಲು ನಡೆದ ಯತ್ನ ಖಂಡನೀಯ ಆದರೆ ಸಹಕಾರ ವ್ಯವಸ್ಥೆಯಲ್ಲಿ ಇರುವವರು ಇದರ ವಿರುದ್ದ ಧ್ವನಿಯೆತ್ತಲಿಲ್ಲ ಎಂದು ವಿಷಾದಿಸಿದರು.
ಸಹಕಾರಿ ವ್ಯವಸ್ಥೆಗೆ ಕೆ.ಶ್ರೀನಿವಾಸಗೌಡರ ನಂತರ ಹೆಸರು ತಂದವರು ಜಿಲ್ಲೆಯಲ್ಲಿ ಬ್ಯಾಲಹಳ್ಳಿ ಗೋವಿಂದಗೌಡರು ಎಂದ ಅವರು, ಸಹಕಾರಿ ಅಭಿವೃದ್ದಿಯ ನಡುವೆಯೂ ೬೯ ವರ್ಷಗಳ ನಂತರವೂ ಇನ್ನೂ ಸಹಕಾರಿ ರಂಗದಲ್ಲಿ ಸರ್ವರಿಗೂ ಪಾಲು ಸಿಕ್ಕಿಲ್ಲ, ಕೆಲವೇ ಜನರ ಹಿಡಿತದಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿ, ಹೊಸಬರಿಗೆ ಜವಾಬ್ದಾರಿ ಸಿಗಬೇಕು ಎಂದರು.


ಮಳ್ಳೂರಿನಲ್ಲಿ ಸಪ್ತಾಹ ಮಾಡಿ ಕ್ಷಮೆಯಾಚಿಸಿ


ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ದೇಶದಲ್ಲೇ ಮೊದಲ ಬಾರಿಗೆ ಸಹಕಾರ ಆಸ್ಪತ್ರೆ ಸ್ಥಾಪಿಸಿದ್ದು, ಮಳ್ಳೂರಿನಲ್ಲಿ ಪಾಪಣ್ಣ ಅವರು, ಆದರೆ ಇಂದು ಆಸ್ಪತ್ರೆ ಮುಚ್ಚಿದೆ, ಈ ಹಿನ್ನಲೆಯಲ್ಲಿ ಅಲ್ಲೇ ರಾಜ್ಯಮಟ್ಟದ ಸಹಕಾರಿ ಸಪ್ತಾಹ ಆಚರಿಸುವ ಮೂಲಕ ಆಸ್ಪತ್ರೆ ಪುನಶ್ಚೇತನಗೊಳಿಸಿ ಪಾಪಣ್ಣನವರ ಕ್ಷಮೆಯಾಚಿಸಬೇಕು ಎಂದರು.
ಸಪ್ತಾಹ ಕಾರ್ಯಕ್ರಮಕ್ಕೆ ಸೀಮಿತಬೇಡ, ಕಳೆದ ವರ್ಷದ ಬೆಳವಣಿಗೆ ಕುರಿತು ಚರ್ಚೆಯಾಗಲಿ, ಸಹಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು, ಜಿಲ್ಲೆಯಲ್ಲಿ ಆತ್ಮಹತ್ಯೆ ತಡೆಗೆ ಎಂಪಿಸಿಎಸ್ ಸಹಕಾರಿ ವ್ಯವಸ್ಥೆಯೇ ಆತ್ಮಸ್ಥೈರ್ಯ ತುಂಬಿದ್ದು, ಅಂತಹ ಕೋಚಿಮುಲ್ ವಿಭಜನೆಯಲ್ಲಿ ರಾಜಕೀಯ ಹಿತಾಸಕ್ತಿ ಕೆಲಸ ಮಾಡಿತು ಎಂದು ವಿಷಾದಿಸಿದರು.
ಸಣ್ಣಪುಟ್ಟ ದೋಷ ಸಾಮಾನ್ಯ, ವ್ಯಕ್ತಿ ಪ್ರತಿಷ್ಟೆ ಬಿಟ್ಟು ಸಮಾಜದ ಪ್ರತಿಯೊಬ್ಬರಿಗೂ ಸಹಕಾರಿ ಸದಸ್ಯತ್ವ ಸಿಗುವಂತೆ ಮಾಡಬೇಕು, ರಾಜಕೀಯ ಪಕ್ಷಗಳ ಸಾಲ ಮನ್ನಾ ಘೋಷಣೆಯಿಂದ ಸಹಕಾರಿ ವ್ಯವಸ್ಥೆಗೆ ಪೆಟ್ಟು ಬೀಳುತ್ತಿದೆ ಎಂದರು.
ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ವಿ.ಮುನಿರಾಜು ಮಾತನಾಡಿ, ಸಹಕಾರಿ ಸಪ್ತಾಹ ಹಬ್ಬವಾಗಿ ಆಚರಿಸಬೇಕು, ಶಾಸ್ತ್ರಿಯವರಿಗೆ ಸಹಕಾರಿ ಖಾತೆಯೇ ಇಷ್ಟವಾಗಿತ್ತು ಎಂದ ಅವರು,ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಕೆ.ಸಿ.ರೆಡ್ಡಿ, ಎಂ.ವಿ.ಕೃಷ್ಣಪ್ಪ, ಪಾಪಣ್ಣ, ನಾರಾಯಣಗೌಡ, ಸೀತಪ್ಪ, ಶಾಸಕ ಕೆ.ಶ್ರೀನಿವಾಸಗೌಡ ಮತ್ತಿತರ ಸೇವೆಯನ್ನು ಮರೆಯಲಾಗದು ಎಂದು ತಿಳಿಸಿ, ಹೊಸ ರೈತರಿಗೂ ಸಾಲ ನೀಡಲು ಡಿಸಿಸಿ ಬ್ಯಾಂಕ್ ಮುಂದಾಗಲಿ ಎಂದರು.


ಸಹಕಾರ ಕಾಯಿದೆ ಗೊಂದಲ ಪರಿಹರಿಸಿ


ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಸ್.ಗಣೇಶ್ ಮಾತನಾಡಿ,೧೪೦ ಕೋಟಿ ಜನಸಂಖ್ಯೆಯಲ್ಲಿ ಕೇವಲ ೩೦ ಕೋಟಿ ಸಹಕಾರಿ ಸಂಘದ ಸದಸ್ಯರಿದ್ದಾರೆ, ಕೆಲವೇ ಮಂದಿಗೆ ಈ ಸಂಘಗಳು ಸೀಮಿತವಾಗಿದ್ದು, ಇದು ಬದಲಾವಣೆಯಾಗಬೇಕು,ಆಧಾರ್,ರೇಷನ್ ಕಾರ್ಡ್ ಕಡ್ಡಾಯದ ರೀತಿ ಸಹಕಾರ ಸಂಘದ ಸದಸ್ಯತ್ವ ಕಡ್ಡಾಯವಾಗಬೇಕು, ಪ್ರತಿ ಶಾಲೆ,ಕಾಲೇಜುಗಳಲ್ಲೂ ಸಹಕಾರ ಸಂಘ ರಚನೆಯಾಗಿ ಅಲ್ಲಿನ ಮಕ್ಕಳ ಕಲಿಕಾ ಸಾಮಗ್ರಿ ಪೂರೈಸುವ ಕೇಂದ್ರಗಳಾಗಬೇಕು ಎಂದರು.
ಅನುಮಾನ,ಗೊಂದಲಗಳಿಲ್ಲದಂತೆ ಸಹಕಾರಿ ಕಾಯಿದೆ ನಿಯಮ ಸರಳೀಕರಿಸಿ ಪರಿಷ್ಕರಿಸಬೇಕು, ಪೂರ್ಣ ಕಾಯಿದೆ ಅರಿವು ಯಾರಿಗೂ ಇಲ್ಲ. ಏಕ ರೂಪ ಸಾಫ್ಟ್‌ವೇರ್ ಅಭಿವೃದ್ದಿಪಡಿಸಿ ಸಹಕಾರ ಸಂಘಗಳಿಗೆ ಕೇಂದ್ರ ಸರ್ಕಾರವೇ ಒದಗಿಸುವ ಮೂಲಕ ಡಿಜಟಲೀಕರಣಕ್ಕೆ ಒತ್ತು ನೀಡಿ ಪಾರದರ್ಶಕತೆಗೆ ಅವಕಾಶ ಕಲ್ಪಿಸಬೇಕು ಎಂದರು.
ಸಹಕಾರ ರತ್ನ ಪುರಸ್ಕೃತರಾದ ಘಟ್ಟಕಾಮಧೇನಹಳ್ಳಿ ಶಾಂತಮ್ಮ, ಕ್ಯಾಲನೂರು ನೂಲು ಬಿಚ್ಚಾಣಿಕೆ ಕೈಗಾರಿಕೆ ಸಹಕಾರ ಸಂಘದ ಅಧ್ಯಕ್ಷ ಷೇಕ್ ಅಹಮದ್ ಅವರನ್ನು ಹಾಗೂ, ಪತ್ರಕರ್ತರಾದ ಬಿ.ವಿ.ಗೋಪಿನಾಥ್, ಕೆ.ಎಸ್.ಗಣೇಶ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ವಿ.ಮುನಿರಾಜು ಅವರನ್ನು ಜಿಲ್ಲಾ ಸಹಕಾರಿ ಯೂನಿಯನ್ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿ ಯೂನಿಯನ್ ಅಧ್ಯಕ್ಷ ಡಾ.ಇ.ಗೋಪಾಲಪ್ಪ ವಹಿಸಿದ್ದು, ಸಪ್ತಾಹದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಯೂನಿಯನ್ ಸಿಇಒ ಸಿಎಂ.ಲಕ್ಷ್ಮಿ ಸ್ವಾಗತಿಸಿ, ನಿರೂಪಿಸಿದ ಕಾರ್ಯಕ್ರಮದಲ್ಲಿ ಯೂನಿಯನ್ ಉಪಾಧ್ಯಕ್ಷ ಟಿ.ಕೆ.ಬೈರೇಗೌಡ, ನಿರ್ದೇಶಕರಾದ ಉರಿಗಿಲಿ ರುದ್ರಸ್ವಾಮಿ, ಪೆಮ್ಮಶೆಟ್ಟಿಹಳ್ಳಿ ಸುರೇಶ್,ಅರುಣಮ್ಮ,ಷೇಕ್ ಮೊಹಮದ್, ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷ ಕೋ.ನಾ.ಮಂಜುನಾಥ್, ಸಿಇಒ ಜಿ.ಗಂಗಾಧರ್, ನರ್ಮದಾ ಮಹಿಳಾ ಪತ್ರಿನ ಸಹಕಾರ ಸಂಘದ ಕಾರ್ಯದರ್ಶಿ ಸುನಿತಾ, ಯೂನಿಯನ್ ರವಿ, ಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.