‘ರೋಸ್’ ಸಮಾರಂಭದಲ್ಲಿ ಯುವತಿ ಕುಸಿದು ಬಿದ್ದು ಸಾವು / A young woman collapsed and died during the ‘Roce’ ceremony

ಉಡುಪಿ: ಕೊಳಲಗಿರಿ ಹಾವಂಜೆಯ ಸಮೀಪ ಸಂಬಂಧಿಕರ ರೋಸ್  ಕಾರ್ಯಕ್ರಮಕ್ಕೆ ಆಗಮಿಸಿದ್ದ ಯುವತಿಯೋರ್ವಳು ಕುಸಿದು ಬಿದ್ದು ಅಸ್ಥಸ್ಥಗೊಂಡಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ. ದುರ್ಧೈವಿ ಮ್ರತ ಯುವತಿಯನ್ನು ಕುಂದಾಪುರ ಸಮೀಪದ ಆನಗಳ್ಳಿಯ ಜೋಸ್ನಾ ಮರಿಯಾ ಕೊತಾ (23) ಎಂದು ಎಂದು ತಿಳಿದು ಬಂದಿದೆ.

ಜೋಸ್ನಾ ಅವರು ಮೂಲತ ಬಸ್ರೂರು ಚರ್ಚಿನ ಅಧೀನಕ್ಕೆ ಒಳಪಟ್ಟವರಾಗಿದ್ದು, ಬುಧವಾರ ರಾತ್ರಿ ಕೊಳಲಗಿರಿ ಸಮೀಪದ ಹಾಂವಜೆಯ ತನ್ನ ಸಂಬಂಧಿಕರ ಮನೆಯಲ್ಲಿ ನಡೆದ ರೋಸ್ ಕಾರ್ಯಕ್ರಮಕ್ಕೆ ತೆರಳಿದ್ದು, ಅಲ್ಲಿ ಸುಮಾರು 8.30 ರ ಹೊತಿಗೆ ರೋಸ್ ಕಾರ್ಯಕ್ರಮದಲ್ಲಿ ಹೊರೆ ಕಾಣಿಕೆಯ ಸಂದರ್ಭದಲ್ಲಿ ನ್ರತ್ಯ ಮಾಡುತ್ತಾ ಬರುತ್ತಿರುವಾಗ ಹಠಾತ್ತಾನೆ ಕುಸಿದು ಬಿದ್ದಿದ್ದಳು, ಕೂಡಲೇ ಅವಳನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಸ್ ಕಾರ್ಯಕ್ರಮ ನಡೆಯುತಿದ್ದಲ್ಲಿ ಕರಾಳ ವಾತವರಣ ಸ್ರಷ್ಟಿಯಾಯ್ತು, ರೋಸ್ ಕಾರ್ಯಕ್ರಮ ತಟಸ್ಥಗೊಳಿಸಿ, ಕಾರ್ಯಕ್ರಮಕ್ಕೆ ಬಂದ ಜನರಿಗೆ ಭೋಜನ ನೀಡಿ ರೋಸ್ ಕಾರ್ಯಕ್ರಮ ಮುಗಿಸಲಾಯಿತು ಎಂದು ತಿಳಿದು ಬಂದಿದೆ.

ಮರುದಿನ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಿಗ್ಗೆ ಜೊಸ್ನಾ ಸಾವಿನ್ನಪ್ಪಿದಾಳೆಂದು ಖಚಿತವಾಯಿತು.

ಜೊಸ್ನಾ ಕೋತಾ ಆನಗಳ್ಳಿಯ ಜಾರ್ಜ್ ಕೋತಾ ಮತ್ತು ಐರಿ ಕೋತಾಳ ಮಗಳಾಗಿದ್ದು, ಒರ್ವ ತಮ್ಮನಿದ್ದು, ಜೊಸ್ನಾ ಇವರನ್ನು ಅಪಾರ ಬಂಧುಗಳನ್ನು ಅಗಲಿದ್ದಾರೆ. ಜೊಸ್ನಾ ಕುಂದಾಪುರದಲ್ಲಿ ವಿಧ್ಯಾಭಾಸ ಮಾಡಿದ್ದು, ಅವಳು ಹಾವಂಜೆಯಲ್ಲಿರು ಚಿಕ್ಕಮ್ಮನ ಮನೆಯಲ್ಲಿ ಉಳಿದು ವ್ಯಾಸಂಹ ಮಾಡುತಿದ್ದು, ಕಲ್ಯಾಣಪುರ ಮಿಲಾಗ್ರೆಸ್ ಕಾಲೇಜಿನಲ್ಲಿ ಎಂ.ಕೋಮ್ ಪದವಿ ಮುಗಿದಿದ್ದಳು.

ಈ ದುರ್ಘಟನೆ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

A young woman collapsed and died during the ‘Roce’ ceremony

Udupi: An incident took place near Kolalagiri Havanje where a young woman who had arrived for a relative’s roce program collapsed and fell unconscious and died without treatment. unlucky has identified the dead young woman as Josna Maria Kota (23) of Anagalli near Kundapur.

Josna, who originally belonged to the Basrur Church, had gone to a rose ceremony at her relative’s house in Hamvaje near Kolalagiri on Wednesday night, where she suddenly collapsed while dancing during the roce ceremony at around 8.30 p.m. She was immediately admitted to a private hospital in Manipal. It is learned that a dark atmosphere was created when the Rose program was going on, the Rose program was neutralized and the people who came to the program were given dinner and the roce program ended.

The next day the treatment failed and on Thursday morning it was confirmed that Josna had died.

Josna Kota is the daughter of George Kota and Airi Kota of Anangalli and has one son, Josna is survived by many relatives. Josna did her graduation in Kundapur, she studied at her aunt’s house in Havanje and completed her M.Com degree from Milagres College, Kalyanpur.

A case has been registered in Brahmavar police station regarding this mishap.

 

ಆರ್.ಎನ್. ಶೆಟ್ಟಿ‌ ಪದವಿ‌ ಪೂರ್ವ ಕಾಲೇಜ್: ಚಾರ್ಟರ್ಡ್ ಎಕೌಟಂಟ್ ಚಿತ್ತೂರು ಶ್ರೀ ಗುರುರಾಜ್ ಶೆಟ್ಟಿಯವರಿಂದ ಔದ್ಯೋಗಿಕ ಅವಕಾಶಗಳ ಮಾಹಿತಿ

ಕುಂದಾಪುರದ ಆರ್.ಎನ್. ಶೆಟ್ಟಿ‌ ಪದವಿ‌ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಬಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ  ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ  ಚಾರ್ಟರ್ಡ್ ಎಕೌಟಂಟ್ ಚಿತ್ತೂರು ಶ್ರೀ ಗುರುರಾಜ್ ಶೆಟ್ಟಿಯವರು ವಿದ್ಯಾರ್ಥಿಗಳಿಗೆ  ಮುಂದಿನ ವ್ಯಾಸಂಗದಲ್ಲಿ ಮತ್ತು ಔದ್ಯೋಗಿಕ ವಲಯಗಳಲ್ಲಿರುವ ವಿಫುಲವಾದ ಅವಕಾಶಗಳು ಮತ್ತು ಅವುಗಳನ್ನು ಲಭಿಸಿಕೊಳ್ಳುವುದರ ವಿವಿಧ ವಿಧಾನಗಳ ಬಗ್ಗೆ ಸವಿವರವಾದ ಮಾಹಿತಿ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಸ್ವಾಗತಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ದೀಪಾ ಶೆಟ್ಟಿ ಧನ್ಯವಾದ ಸಲ್ಲಿಸಿದರು. 

ಉಪ್ಪಿನಕುದ್ರುವಿನಲ್ಲಿ ಶಿರೂರು ಫಣಿಯಪ್ಪಯ್ಯ ಸಂಸ್ಮರಣೆ

ಶಿರೂರು ಫಣಿಯಪ್ಪಯ್ಯ ಸಂಸ್ಮರಣಾ ಕಾರ್ಯಕ್ರಮ 20 -11 -2022 ರಂದು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 77 ನೆಯ ಕಾರ್ಯಕ್ರಮವಾಗಿ ಅಕಾಡೆಮಿಯ ಸಭಾಂಗಣದಲ್ಲಿ ನಡೆಯಿತು. ಈಶಾನ್ಯ ರಾಜ್ಯಗಳ ವಿಶ್ರಾಂತ ರಾಜ್ಯಪಾಲ ಶ್ರೀ ಪದ್ಮನಾಭ ಆಚಾರ್ಯ ದಂಪತಿಗಳ ಉಪಸ್ಥಿತಿಯಲ್ಲಿ ಹಿರಿಯ ಯಕ್ಷಗಾನ ಕವಿ ಕಂದಾವರ ರಘುರಾಮ ಶೆಟ್ಟಿಯವರಿಗೆ ಫಣಿಗಿರಿ ಪ್ರಶಸ್ತಿ-2022 ಪ್ರದಾನ, ಹಿರಿಯ ಯಕ್ಷಗಾನ ವಿದ್ವಾನ್ಸ ಡಾ ಕಬ್ಬಿನಾಲೆ ವಸಂತ ಭಾರದ್ವಾಜ ಅವರ ಸಂಪಾದಕತ್ವದಲ್ಲಿ ಪ್ರಕಟಿಸಲ್ಪಟ್ಟ ಶಿರೂರು ಫಣಿಯಪ್ಪಯ್ಯ ವಿರಚಿತ ಐದು ಯಕ್ಷಗಾನ ಪ್ರಸಂಗಗಳ ಸಂಪುಟ ಬಿಡುಗಡೆ, ಶಿರೂರು ಫಣಿಗಿರಿ ಸಂಗ್ರಹದ 3000 ಪುಟಗಳ ತಾಳೆಗರಿ ಗ್ರಂಥ ಹಾಗೂ ಇತರ ಹಳೆಯ ಯಕ್ಷಗಾನ ಹಸ್ತಪ್ರತಿ , ಮುದ್ರಿತ ಪುಸ್ತಕಗಳ ಪ್ರದರ್ಶನ, ಹಿರಿಯ ಭಾಗವತ ಹೆರಾಂಜಾಲು ಗೋಪಾಲ ಗಾಣಿಗ ಮತ್ತು ಸಂಗಡಿಗರಿಂದ ಯಕ್ಷ ಗಾನ ವೈಭವ, ಭಾಸ್ಕರ ಕೊಗ್ಗ ಕಾಮತ ತಂಡದವರಿಂದ ಗೊಂಬೆಯಾಟ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮೈಸೂರಿನಿಂದ ಆಗಮಿಸಿದ ಡಾ ಕಬ್ಬಿನಾಲೆ ವಸಂತ ಭಾರದ್ವಾಜಮುಖ್ಯ ಅತಿಥಿಯಾಗಿ ಭಾಗವಹಿಸಿ ಯಕ್ಷಗಾನ ಸಾಹಿತ್ಯ ಕೃತಿಗಳನ್ನು ಸರ್ಕಾರ ಮತ್ತು ಕನ್ನಡ ಸಾಹಿತ್ಯ ವಿದ್ವಾನ್ಸರು ನಿರ್ಲಕ್ಸಿಸುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸುತ್ತ ಶಿರೂರು ಫಣಿಯಪ್ಪಯ್ಯನವರ ಯಕ್ಷಗಾನ ಪ್ರಸಂಗಗಳು ಅವರ ನಿಧನದ ೧೮ ವರ್ಷಗಳ ನಂತರವಾದರೂ ಪ್ರಕಟವಾಗಿ ಯಕ್ಷಲೋಕಕ್ಕೆ ಸಮರ್ಪಿತವಾಗುವುದಕ್ಕೆ ಸಂತಸ ವ್ಯಕ್ತಪಡಿಸಿದರು.ಫಣಿಗಿರಿ ಪ್ರಶಸ್ತಿ ಸ್ವೀಕರಿಸಿದ ಕಂದಾವರ ರಘುರಾಮ ಶೆಟ್ಟಿ ಮತ್ತು ಕಾರ್ಯಕ್ರಮದ ಅಧ್ಯಕ್ಷ ಐರೋಡಿ ರಾಜಶೇಖರ ಹೆಬ್ಬಾರರು ತಮ್ಮ ಭಾಷಣದಲ್ಲಿ ಶಿರೂರು ಫಣಿಯಪ್ಪಯ್ಯನವರೊಂದಿಗೆ ತಮ್ಮ ಒಡನಾಟವನ್ನು ನೆನಪಿಸಿಕೊಂಡರು. ಫಣಿಗಿರಿ ಪ್ರತಿಷ್ಠಾನದ ಗೌರವ ಅಧ್ಯಕ್ಷರಾದ ಶ್ರೀ ಎಸ್ ಜನಾರ್ಧನ ಮರವಂತೆ ವೇದಿಕೆಯಲ್ಲಿ ಉಪಸ್ಥಿತರಿದ್ದರು ಶ್ರೀ ಸತ್ಯನಾರಾಯಣ ಪುರಾಣಿಕ್ ಉಪ್ಪುಂದ ಸ್ವಾಗತಿಸಿದರು. ಶ್ರೀ ಕೃಷ್ಣಮೂರ್ತಿ ಬ್ರಹ್ಮಾವರ ತಾಳೆಗರಿ ಗ್ರಂಥಗಳ ಬಗ್ಗೆ ವಿವರಣೆ ನೀಡಿದರು ಉಮೇಶ ಶಿರೂರು ,ರಮೇಶ ಶಿರೂರು ಫಣಿಗಿರಿ ಪ್ರತಿಷ್ಠಾನದ ಕಾರ್ಯ ವಿವರ ವರದಿ ಓದಿದರು . ಕೌಶಿಕ ಶಿರೂರು ವಂದಿಸಿದರು. ಮಂಜುನಾಥ್ ಶಿರೂರು ಕಾರ್ಯಕ್ರಮ ನಿರ್ವಹಿಸಿದರು.

ಕೋಲಾರ : ಪಂಚರತ್ನ ರಥಯಾತ್ರೆ ಹಾಗೂ ಪ್ರವಾಸ ಯಶಸ್ವಿ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸುವ ವಿಶ್ವಾಸವಿದೆ -ಎಚ್.ಡಿ.ಕುಮಾರಸ್ವಾಮಿ

ಶ್ರೀನಿವಾಸಪುರ: ಕೋಲಾರ ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆ ಹಾಗೂ ಪ್ರವಾಸ ಯಶಸ್ವಿಯಾಗಿದ್ದು, ಐದು ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಕ್ಕಲಗಡ್ಡ ಗ್ರಾಮದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಕೆರೆಗಳಿಗೆ ಹರಿಸಲಾಗಿರುವ ಕೆಸಿ ವ್ಯಾಲಿ ಕೊಳಚೆ ನೀರು, ಹಣ್ಣು ಮತ್ತು ತರಕಾರಿ ಬೆಳೆಗಳಿಗೆ ಮಾರಕವಾಗಿದೆ. ಜನರ ಆರೊಗ್ಯ ಜನರ ಆರೋಗ್ಯ ಕೆಡಿಸುತ್ತಿದೆ ಎಂದು ಹೇಳಿದರು.
ಕೆಸಿ ವ್ಯಾಲಿ ಕೊಳಚೆ ನೀರು ಶುದ್ಧೀಕರಣ ಯಂತ್ರಗಳು ಕೆಟ್ಟಿಹೋಗಿವೆ. ಶುದ್ಧೀಕರಿಸದ ನೀರನ್ನೇ ಕೆರೆಗಳಿಗೆ ಹರಿಸಲಾಗುತ್ತಿದೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ದಶೇರಿ ಘಟಕ ಸ್ಥಾಪಿಸದೆ, ಕೋಲಾರ ಹಾಗು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗುವುದು ಎಂದು ಹೇಳಿದರು.
ಮಹಾರಾಷ್ಟ್ರ ಸರ್ಕಾರ ಅನಗತ್ಯವಾಗಿ ಗಡಿ ಖ್ಯಾತೆ ತೆಗೆಯುತ್ತಿದೆ. ಆದರೆ ಡಬಲ್ ಇಂಜಿನ್ ಸರ್ಕಾರದಿಂದ ಗಡಿ ವಿವಾದ ಬಗೆಹರಿಯುವ ವಿಶ್ವಾಸವಿಲ್ಲ. ಎಲ್ಲಾ ವಿಷಯಗಳಲ್ಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ರಾಜ್ಯಕ್ಕೆ ದ್ರೊಹ ಬಗೆಯುತ್ತಿವೆ. ನೆಲ ಜಲ ರಕ್ಷಣೆ ಮಾಡುವಲ್ಲಿ ವಿಫಲವಾಗಿವೆ ಎಂದು ಅಭಿಪ್ರಾಯಪಟ್ಟರು.
ಪಂಚರತ್ನ ಯೋಜನೆ ಪ್ರಾಮಾಣಿಕ ಅನುಷ್ಠಾನದಿಂದ ಸಮಾಜದ ಎಲ್ಲ ವರ್ಗದ ಜನರ ಸಮಸ್ಯೆ ಪರಿಹಾರ ಸಾಧ್ಯವಾಗುತ್ತದೆ. ಮಕ್ಕಳಿಗೆ ಉಚಿತ ಹಾಗೂ ಗುಣಾತ್ಮ ಶಿಕ್ಷಣ ನೀಡಲು ಒತ್ತು ನೀಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ 1.62 ಲಕ್ಷ ಮಕ್ಕಳ ಕೊರತೆ ಉಂಟಾಗಿರುವುದು ಕಳವಳಕಾರಿ ಅಂಶವಾಗಿದೆ ಎಂದು ಹೇಳಿದರು.
ಜಿಲ್ಲಾ ಜನತಾ ದಳ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮಾಜಿ ಸದಸ್ಯ ತೂಪಲ್ಲಿ ಆರ್.ಚೌಡರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಜಿ.ಕೆ.ನಾಗರಾಜ್, ಮುಖಂಡರಾದ ಬಿ.ವಿ.ಶಿವಾರೆಡಡಿ, ಸಿಎಂಆರ್ ಶ್ರೀನಾಥ್, ಕುಂದಿಟಿವಾರಿಪಲ್ಲಿ ಶಿವಾರೆಡ್ಡಿ, ಸಮೃದ್ಧ ಮಂಜುನಾಥ್, ಶಶಿಕುಮಾರ್, ಶೇಷಾದ್ರಿ, ಅಬ್ದುಲ್, ರಾಜಣ್ಣ, ಶ್ರೀನಿವಾಸ್, ಬಾಬು, ಪಾಷ, ಕುರ್ಕಿ ರಾಜೇಶ್ವರಿ, ಗಾಯಿತ್ರಿ ಮುತ್ತಪ್ಪ ಮತ್ತಿತರರು ಇದ್ದರು.

ಚೆನ್ನೈ ಕಾರಿಡಾರ್ ರಸ್ತೆಗೆ ಭೂಮಿ ಕಳೆದುಕೊಂಡಿರುವ ರೈತರ ಜಮೀನಿನಿ ಪಿ ನಂಬರ್ ದುರಸ್ಥಿ ಮಾಡಲು ವಿಶೇಷ ತಂಡ ರಚನೆ ಮಾಡಿ-ರೈತರಿಂದ ಆಗ್ರಹ

ತಾಯಲೂರು; ನ.23: ಚೆನ್ನೈ ಕಾರಿಡಾರ್ ರಸ್ತೆಗೆ ಭೂಮಿ ಕಳೆದುಕೊಂಡಿರುವ ರೈತರ ಜಮೀನಿನಿ ಪಿ ನಂಬರ್ ದುರಸ್ಥಿ ಮಾಡಲು ವಿಶೇಷ ತಂಡ ರಚನೆ ಮಾಡಿ ಮರ ಕಳೆದುಕೊಂಡಿರುವ ರೈತರಿಗೆ ಪರಿಹಾರ ಬಿಡುಗಡೆ ಮಾಡಬೇಕೆಂದು ನೊಂದ ರೈತರಿಂದ ಜಿಲ್ಲಾಡಳಿತಕ್ಕೆ ಆಗ್ರಹ.
ಭೂಮಿ ಕಳೆದುಕೊಂಡ ಗಡಿ ಭಾಗದ ಚುಕ್ಕನಹಳ್ಳಿ ವ್ಯಾಪ್ತಿಯ ಕಾರಿಡಾರ್ ರಸ್ತೆಯ ಮೇಲೆ ನಷ್ಟ ಬೆಳೆ ಸಮೇತ ಹೋರಾಟ ಮಾಡಿ ಪರಿಹಾರಕ್ಕಾಗಿ ಆಹೋರಾತ್ರಿ ಧರಣಿ ಮಾಡುವ ಎಚ್ಚರಿಕೆಯನ್ನು ತಾಲೂಕು ಆಡಳಿತಕ್ಕೆ ನೊಂದ ರೈತ ವೆಂಕಟೇಶ್, ರಾಮೇಗೌಡ ನೀಡಿದರು.
ರಸ್ತೆ ಅಭಿವೃದ್ಧಿಗೆ ನೂರಾರು ವರ್ಷಗಳಿಂದ ಕೃಷಿ ಮಾಡುತ್ತಿರುವ ಗಡಿ ಭಾಗದ ಚುಕ್ಕನಹಳ್ಳಿ, ಏತೋರನಹಳ್ಳಿ ಮತ್ತಿತರ ಗ್ರಾಮಗಳ ರೈತರ ಜಮೀನನ್ನು ಭೂಸ್ವಾಧೀನ ಮಾಡಿಕೊಂಡು ರಸ್ತೆ ಅಭಿವೃದ್ಧಿ ಮಾಡುತ್ತಿರುವುದಕ್ಕೆ ರೈತರ ತಕರಾರಿಲ್ಲ. ಆದರೆ, ಜಮೀನಿಗೆ ಕಡಿಮೆ ಮೊತ್ತದ ಪರಿಹಾರ ನೀಡುವ ಜೊತೆಗೆ ಜಮೀನಿನಲ್ಲಿದ್ದ ತೆಂಗು ಸೀಬೆ ಹುಣಸೆ ಮಾವು ಮರಗಳನ್ನು ಕಳೆದುಕೊಂಡಿರುವ ರೈತರಿಗೆ ನೀಡಬೇಕಾದ ಕೋಟ್ಯಾಂತರ ರೂಪಾಯಿ ಪರಿಹಾರ ಪಿ ನಂಬರ್ ಜಮೀನು ಎಂದು ತಡೆ ಹಿಡಿದಿರುವುದುದು ರೈತ ವಿರೋಧಿ ಧೋರಣೆಯಾಗಿದೆ ಎಂದು ಆರೋಪ ಮಾಡಿದರು.
60 ವರ್ಷಗಳಿಂದ ಕೃಷಿ ಮಾಡುತ್ತಿರುವ ಭೂಮಿಗೆ ತಾಲೂಕು ಆಡಳಿತದಿಂದ ಸಾಗುವಳಿ ಪಹಣಿ ಖಾತೆ ಎಲ್ಲಾ ದಾಖಲೆಗಳು ನೀಡಿರುವುದನ್ನು ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಅದೇ ದಾಖಲೆಗಳನ್ನು ನೀಡಿದ್ದಾರೆ. ಪಿ ನಂಬರ್ ದುರಸ್ಥಿ ಮಾಡುವಂತೆ ಕಂದಾಯ ಸಚಿವರಿಗೆ ಜನಪ್ರತಿನಿಧಿಗಳಿಗೆ ಜಿಲ್ಲಾಡಳಿತಕ್ಕೆ ಹತ್ತಾರು ವರ್ಷಗಳಿಂದ ಹೋರಾಟಗಳ ಮುಖಾಂತರ ಒತ್ತಾಯ ಮಾಡುತ್ತಿದ್ದರೂ ಯಾವುದೇ ಕ್ರಮವಾಗುತ್ತಿಲ್ಲ ಎಂದು ದೂರಿದರು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಪಿ ನಂಬರ್ ದುರಸ್ಥಿ ಮಾಡಲು ತಾಲೂಕು ಕಚೇರಿಯಲ್ಲಿ ದೊಡ್ಡ ದಂಧೆಯೇ ನಡೆಯುತ್ತಿದೆ. ಎಲ್ಲಾ ದಾಖಲೆಗಳ ಕಡತ ಸರಿಯಿದ್ದರೂ ನೂರೊಂದು ನೆಪ ಹೇಳಿ ಮೂಲೆಗುಂಪಿಗೆ ಕಡತ ಬಿಸಾಕುವ ಅಧಿಕಾರಿಗಳು ದಲ್ಲಾಳಿಗಳ ಮುಖಾಂತರ ಒಂದು ಎಕರೆಗೆ ಕನಿಷ್ಠ 2 ಲಕ್ಷದಿಂದ 5 ಲಕ್ಷದವರೆಗೆ ಲಂಚ ನಡೆಯುತ್ತದೆ. ರಿಯಲ್ ಎಸ್ಟೇಟ್ ದಂಧೆಕೋರರಿಗೆ 24 ಗಂಟೆಯಲ್ಲಿ ಪಿ ನಂಬರ್ ದುರಸ್ಥಿ ಮಾಡಿ ಬಡವರನ್ನು ನಿರ್ಲಕ್ಷ್ಯ ಮಾಡುವ ದಂಧೆಗೆ ಕಡಿವಾಣ ಬೀಳಬೇಕು ಎಂದು ಆಗ್ರಹಿಸಿದರು.
ಗಡಿ ಭಾಗದ ರೈತರು ಕೃಷಿಯನ್ನೇ ನಂಬಿ ಜೀವನ ಮಾಡುತ್ತಿದ್ದು ಅದರಲ್ಲೂ ಭೂಮಿ ಕಳೆದುಕೊಂಡ ರೈತರಿಗೆ ಪರ್ಯಾಯ ಜಮೀನಿಲ್ಲ. ಆ ಜಮೀನಿನಲ್ಲಿ ಬೆಳೆದಿದ್ದ ಮಾವು ಹುಣಸೆ ಸೀಬೆ ತೆಂಗು ಮರಗಳ ಫಸಲನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಈಗ ರಾಮನಗರದ ಆರ್ ಸಿ ಆದೇಶ ನೆಪದಲ್ಲಿ ಪಿ ನಂಬರ್ ದುರಸ್ಥಿಯಾಗುವವರೆಗೂ ಮರಗಳಿಗೆ ಪರಿಹಾರ ನೀಡಬಾರದು ಎಂಬ ಆದೇಶ ರೈತ ವಿರೋಧಿ ಧೋರಣೆಯಾಗಿದೆ ಎಂದು ಆರೋಪ ಮಾಡಿದರು.
ಹಾಗಾಗಿ ಮಾನ್ಯ ಜಿಲ್ಲಾಧಿಕಾರಿಗಳು ಮರಗಳ ಪರಿಹಾರ ಹಣವನ್ನು ಬಿಡುಗಡೆ ಮಾಡಿ ವಿಶೇಷ ಭೂಸ್ವಾಧೀನಾಧಿಕಾರಿಗಳ ಖಾತೆಯಲ್ಲಿ 11.5 ಕೋಟಿ ಹಣವಿದ್ದು, ಈ ಕೂಡಲೇ ಪಿ ನಂಬರ್ ನೆಪ ಹೇಳದೆ ಪರಿಹಾರವನ್ನು ಬಿಡುಗಡೆ ಮಾಡಿ ನಂತರ ಪಿ ನಂಬರ್ ದುರಸ್ಥಿ ಮಾಡಲು ವಿಶೇಷ ತಂಡ ರಚನೆ ಮಾಡಿ ರೈತರಿಗೆ ತೊಂದರೆಯಾಗದ ರೀತಿ ಕ್ರಮವಹಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್, ಶೋಭಿತಾ ಅವರು ಪಿ ನಂಬರ್ ದುರಸ್ಥಿ ಬಗ್ಗ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ತಡೆ ಹಿಡಿದಿರುವ ಬಗ್ಗೆ ಸಹ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮಾಡಿ ಪರಿಹಾರ ನೀಡುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಖ್ ಪಾಷ, ಜುಬೇದ್ ಪಾಷ, ವಿಶ್ವನಾಥ್, ಜನಾರ್ಧನ್, ರಾಜಣ್ಣ, ಕುಮಾರ್, ಮಂಗಮ್ಮ, ಶಿವಣ್ಣ, ವೆಂಕಟೇಶಪ್ಪ, ಸೀನಪ್ಪ, ಸುಬ್ರಮಣಿ, ವೆಂಕಟರಾಮಪ್ಪ, ರಾಮಸಾಗರ ವೇಣು, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಮಾಸ್ತಿ ವೆಂಕಟೇಶ್, ತೆರ್ನಹಳ್ಳಿ ಆಂಜಿನಪ್ಪ, ಕೋಟೆ ಶ್ರೀನಿವಾಸ್ ಮುಂತಾದವರಿದ್ದರು.

ಕುಂದಾಪುರ ರೋಜರಿ ಮಾತಾ ಇಗರ್ಜಿಯ ವಾರ್ಷಿಕ ಮಹಾ ಉತ್ಸವ “ನಮ್ಮ ಕುಟುಂಬಗಳಲ್ಲಿ ದೇವರ ಪ್ರೀತಿ ಇರಬೇಕು” – ಫಾ| ವಿಲ್ಫ್ರೆಡ್ ಡಿಸೋಜಾ

ಕುಂದಾಪುರ,ನ.28: 452 ವರ್ಷಗಳ ಐತಿಹಾಸಿಕ ಚರಿತ್ರೆಯುಳ್ಳ ಹೋಲಿ ರೋಜರಿ ಮಾತಾ ಇಗರ್ಜಿಯ ವಾರ್ಷಿಕ ಮಹಾ ಹಬ್ಬವು ನ. 23 ರಂದು ‘ಆತನು ಎನು ಹೇಳುತಾನೊ, ನೀವು ಹಾಗೆ ಮಾಡಿರಿ” ಮೇರಿ ಮಾತೆ ಯೇಸುವಿಗೆ ತನ್ನ ಪ್ರಥಮ ಅದ್ಬುತವನ್ನು ಮಾಡಲು ಪ್ರೇರೆಪಿಸಿದ ಮಾತುಗಳನ್ನು ಮಹಾ ಉತ್ಸವದ ಧ್ಯೇಯ ವಾಕ್ಯವನ್ನು ಅಳವಡಿಸಿಕೊಂಡು ಮಹಾಉತ್ಸವವನ್ನು ಸಡಗರ ಸಂಭ್ರಮದ ಜೊತೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ಹಬ್ಬದ ಮಹಾ ಬಲಿದಾನದ ನೇತ್ರತ್ವವನ್ನು ವಹಿಸಿದ ಮಂಗಳೂರು ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕರಾದ ವಂ|ವಿಲ್ಫ್ರೆಡ್ ಪ್ರಕಾಶ್ ಡಿಸೋಜಾ “ಹಲವು ನಾಮಗಳಿಂದ ಕರೆಯಲ್ಪಡುತ್ತಾಳೆ ಮೇರಿ ಮಾತೆ. ನೀವು ರೋಜರಿ ಮಾತೆಯನ್ನು ನೀವು ಪೆÇೀಷಕರನ್ನಾಗಿ ಪಡೆದು, ಹಲವು ಕ್ರಪಾಟಕ್ಷಗಳನ್ನು ಪಡೆದಿದ್ದಿರಿ. ಮೇರಿ ಮಾತೆ ಪರರಿಗೆ ನೆರವಾಗುವ ಪರೋಪಾಕಾರಿ ಮಹಿಳೆ, ಮೇರಿ ಮಾತೆ ಯೇಸುವಿನ ಉಪದೇಶಗಳನ್ನು ಪಾಲಿಸಿಕೊಂಡು ಬಂದವಳು, ಮೇರಿ ಪವಿತ್ರ ಕುಟುಂಬದ ಮಾತೆ, ಅವರಂತೆ ಯೇಸು ನಮಗೆ ದೈವ ಭಕ್ತಿಯ ಪವಿತ್ರ ಕುಟುಂಬಗಳನ್ನು ಕಟ್ಟಲು ಕರೆ ನೀಡುತ್ತಾರೆ. ನಮ್ಮ ಕುಟುಂಬಗಳು ಪಿತನ ಸುತನ ಪವಿತ್ರಾತ್ಮನ ಹೆಸರಿನಲ್ಲಿ ಕಟ್ಟಬೇಕು, ನಮ್ಮ ಕುಟುಂಬಗಳಲ್ಲಿ ದೇವರ ಪ್ರೀತಿ ಇರಬೇಕು. ಸಂಪೂರ್ಣ ಹ್ರದಯದಿಂದ ದೇವರನ್ನು ಪ್ರೀತಿಸಬೇಕು, ದೇವರಿಗೆ ನಮ್ಮ ನಾಲಿಗೆಯಿಂದ ಸ್ತ್ರೋತ್ರ ಸಲ್ಲಿಸಬೇಕು, ಕಷ್ಟಕಾಲದಲ್ಲಿ ವಿಚಲಿತರಾಗದೆ ದೇವರಲ್ಲಿ ನಂಬಿಕೆ ಇಡಬೇಕು, ಸಂಪೂರ್ಣ ನಂಬಿಕೆಯಿಂದ ದೇವರಲ್ಲಿ ವಿಶ್ವಾಸ ಇಡಬೇಕು. ಪಾಪಕ್ರತ್ಯಗಳಿಂದ ದೂರವಿದ್ದು, ನಿಮ್ಮ ಸಂತತಿಯ ಮೇಲೆ ಆಶಿರ್ವಾದಗಳನ್ನು ಪಡೆಯಿರಿ. ನಾವು ವಿಶ್ವಾಸಿಗಳು, ಭಕ್ತಿಕರು ಎಲ್ಲರೂ ಒಂದು ಕುಟುಂಬದಂತೆ ಜೀವಿಸಿ ಪವಿತ್ರ ಸಭೆಯನ್ನು ಬಲಪಡಿಸೋಣ” ಎಂದು ಅವರು ಸಂದೇಶ ನೀಡಿದರು..
ಕುಂದಾಪುರ ಚರ್ಚಿನ ಧರ್ಮಗುರು ಅ|ವಂ|ಸ್ತ್ಯಾನಿ ತಾವ್ರೊ ಬಲಿ ಪೂಜೆಯಲ್ಲಿ ಭಾಗವಹಿಸಿ ಧನ್ಯವಾದಗಳನ್ನು ಅರ್ಪಿಸಿದರು ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಕುಂದಾಪುರ ವಲಯದ ಧರ್ಮಕೇಂದ್ರಗಳ ಅನೇಕ ಧರ್ಮಗುರುಗಳು, ಕಾರ್ಮೆಲ್ ಸಂಸ್ಥೆಯ ಹಾಗೂ ಡಾನ್ ಬಾಸ್ಕೊ ಸಂಸ್ಥೆಯ ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ಸಂತ ಜೋಸೆಫ್ ಕಾನ್ವೆಂಟಿನ ಧರ್ಮಭಗಿನಿಯರು, ದಿವ್ಯ ಬಲಿಪೂಜೆಯಲ್ಲಿ ಭಾಗಿಯಾದರು.ಅನೇಕ ಧರ್ಮ ಭಗಿನಿಯರು, ಪಾಲನ ಮಂಡಳಿ ಉಪಾಧ್ಯಕ್ಷ, ಕಾರ್ಯದರ್ಶಿ, ಆಯೋಗಗಳ ಸಂಯೋಜಕಿ, ಗುರಿಕಾರರು, ಪಾಲನ ಮಂಡಳಿ ಸದಸ್ಯರು ಹಾಗೂ ಬಹು ಸಂಖ್ಯೆಯ ಭಕ್ತಾದಿಗಳು ರೊಜರಿ ಮಾತೆಯ ವಾರ್ಷಿಕ ಜಾತ್ರೆಯ ಪವಿತ್ರ ಬಲಿದಾನದಲ್ಲಿ ಭಾಗಿಯಾದರು.

ಕುಂದಾಪುರ ತೆರಾಲಿಯ ಸಂಭ್ರಮ –ದೇವರ ವಾಕ್ಯ ಆಲಿಸಿ ಪಾಲಿಸಿದವರು ಎಂದಿಗೂ ಸಂತೋಷ ಭರಿತರಾಗುತ್ತಾರೆ – ಫಾ|ವಿನ್ಸೆಂಟ್ ಕುವೆಲ್ಲೊ

ಕುಂದಾಪುರ,.23: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ತೆರಾಲಿ ಜಾತ್ರೆಯು 22 ದಂದು ದೇವರ ದೇವರ ವಾಕ್ಯದ ಪೂಜಾ ವಿಧಿಯಿಂದ ಆರಂಭ ಗೊಂಡಿತು.  ಸಂಜೆ ರೋಜರಿ ಮಾತೆಯ ಪಲ್ಲಕ್ಕಿಯ ಮೆರವಣಿಗೆ ಬಹಳ ವಿಜ್ರಂಭಣೆಯಿಂದ ನೆಡೆಸಿದ ತರುವಾಯ ಈ  
ಈ ಪೂಜಾ ವಿಧಿಯನ್ನು ಬೈಂದೂರು ಇಗರ್ಜಿಯ ವಂ|ಫಾ| ವಿನ್ಸೆಂಟ್ ಕುವೆಲ್ಲೊ ನಡೆಸಿಕೊಟ್ಟು  ಉತ್ತಮ ಮತ್ತು ಸಂತೋಷಭರಿತ ಜೀವನಕ್ಕೆ ದೇವರ ವಾಕ್ಯದ ಪ್ರೇರಣೆ ಅಗತ್ಯಎಂಬ ಧ್ಯೇಯ ವಾಕ್ಯದೊಂದಿಗೆ, ದೇವರ ವಾಕ್ಯಗಳ ಸಂಭ್ರಮ ನಡೆಯಿತು. ಪುಸ್ತಕಗಳಲ್ಲಿ ಅತೀ ಉತ್ತಮ ,ಜ್ನಾನ ಮತ್ತು ಸಂತೋಷ ನೀಡುವ ಪುಸ್ತಕ ಅಂದರೆ  ದೇವರ ವಾಕ್ಯಗಳು ತುಂಬಿರುವ ಬೈಬಲ್ ಪುಸ್ತಕ. ಮೇರಿ ಮಾತೆ ಯೇಸುವಿನ ವಾಕ್ಯಗಳನ್ನು ಕೇಳಲು ಅವರ ಪಾದ ಥಳದಲ್ಲಿ ಇರುತಿದ್ದಳು, ಅದರಿಂದ ಅವಳು ಸಂತೋಷಭರಿತಳಾಗಿದ್ದಳು. ಮೇರಿ ಮಾತೆಯ ಹಾಗೆ ನಡೆದು, ನಾವು ಸಂತೋಷ ಭರಿತರಾಗೋಣಬೈಬಲನಲ್ಲಿ ನಮಗೆ ನಮ್ಮ ಜೀವಿತದಲ್ಲಿ  ಅಗತ್ಯವಿರುವ ಎಲ್ಲಾ ಸಂಗತಿಗಳು ಇವೆ ಉತ್ತಮ ಸಂದೇಶಗಳಿವೆ, ಬೈಬಲ್ ಪುಸ್ತಕ ಜ್ನಾದ ಭಂಡಾರಬೈಬಲಿನ ಎರಡು ಕವರ್ ಪುಟಗಳ ನಡುವೆ ಇರುವ ಪುಟಗಳಲ್ಲಿ ಇಡೀ ವಿಶ್ವಕ್ಕೆ ವಿಮುಕ್ತಿಗೊಳಿಸುವ ಶಕ್ತಿಯಿದೆ ಎಂದು ಅಮೇರಿಕಾದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಹೇಳಿದ್ದಾರೆ, ಅತ್ಯಂತ ಕೆಟ್ಟ ಜನರು ಕೂಡ ದೇವರ ವಾಕ್ಯಗಳಿಂದ ಪ್ರೇರಣೆ ಪಡೆದು ಪರಿವರ್ತನೆಗೊಂಡಿದ್ದಾರೆ. ಅಗರ್ಭ ಶ್ರೀಮಂತರು ತಮ್ಮ ಆಸ್ತಿ ಪಾಸ್ತಿ ದಾನ ಮಾಡಿ, ತ್ಯಜಿಸಿ ಯೇಸು ಕ್ರಿಸ್ತರನ್ನು ಹಿಂಬಾಲಿಸಿ ಸಂತರಾಗಿದ್ದಾರೆ, ಹರಿಯುವ ನೀರಿನ ಸಮೀಪ ಇರುವ ಮರಗಳು, ಹಸಿರಾಗಿದ್ದು ಅವು ಎಂದಿಗೂ ಬಾಡುವುದಿಲ್ಲ, ಹಾಗೆ  ದೇವರ ವಾಕ್ಯ ಆಲಿಸಿ ಪಾಲಿಸುವರು ಎಂದಿಗೂ ಬಾಡದೆ, ಅವರು ಸಂತೋಷ ಭರಿತರಾಗುತ್ತಾರೆಎಂದು ಅವರು ಸಂದೇಶ ನೀಡಿದರು.

    ಕುಂದಾಪುರ ಇಗರ್ಜಿಯ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ಹಾ, ಮತ್ತು ಸಂತ ಜುಜೆ ವಾಜ್ ಇವರಿಗೆ ಸಮರ್ಪಿಲ್ಪಟ್ಟ ಕುಂದಾಪುರ ವಲಯದ, ಎಲ್ಲಾ ಇಗರ್ಜಿಗಳ ಧರ್ಮಗುರುಗಳು, ಕಟ್ಖರೆ ಬಾಲ ಯೇಸು ಆಶ್ರಮದ ಧರ್ಮಗುರುಗಳು, ಡಾನ್ ಬಾಸ್ಕೊ ಸಂಸ್ಥೆಯ ಹಾಗೂ ಅತಿಥಿ ಧರ್ಮಗುರುಗಳು ಈ ಪೂಜಾವಿಧಿಯಲ್ಲಿ ಪಾಲ್ಗೊಂಡರು.

ಇಗರ್ಜಿಯ ಪಾಲನ ಮಂಡಳಿಯ ಉಪಾಧ್ಯಕ್ಷ ಲುವಿಸ್ ಫೆರ್ನಾಂಡಿಸ್. ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಪಾಲನ ಮಂಡಳಿ ಸದಸ್ಯರು, ಗುರಿಕಾರರು, ಧರ್ಮ ಭಗಿನಿಯರು ಉಪಸ್ಥಿತರಿದ್ದರು. ಈ ಜಾತ್ರೆಗೆ ಕ್ರೈಸ್ತ ಬಾಂಧವರಲ್ಲದೆ, ಜಾತಿ ಧರ್ಮ ಭೇದ ಭಾವ ಮರೆತು ಬಹು ಸಂಖ್ಯೆಯಲ್ಲಿ ಜನರು ಭಾಗವಹಿಸಿ ಭಾವೈಕತೆ ಮೆರೆದರು.