ರಾಜ್ಯದ ಅಭಿವೃದ್ಧಿಗಾಗಿ ಮತದಾರರು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಬೇಕು:ಎಚ್.ಡಿ.ಕುಮಾರಸ್ವಾಮಿ

ಶ್ರೀನಿವಾಸಪುರ: ರಾಜ್ಯದ ಅಭಿವೃದ್ಧಿಗಾಗಿ ಮತದಾರರು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಬೇಕು ಎಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಲ್ಲೂಕಿನ ರೋಜೇನಹಳ್ಳಿ ಕ್ರಾಸ್ ಸಮೀಪ ಜೆಡಿಎಸ್ ಪಂಚರತ್ನ ರಥಯಾತ್ರೆ ಪ್ರಯುಕ್ತ ಮಂಗಳವಾರ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಎತ್ತಿನ ಹೊಳೆ ನೀರಿಗೆ ಬದಲಾಗಿ, ಕೆಸಿ ವ್ಯಾಲಿ ಕೊಳಚೆ ನೀರು ಹರಿಸಲಾಗುತ್ತಿದೆ. ಅಂಥ ನೀರು ಬಳಸಿಕೊಂಡು ಬೆಳೆದ ಟೊಮೆಟೊ ತರಕಾರಿಗೆ ಬೆಲೆ ಸಿಗುತ್ತಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಮಕ್ಕಳು ಸ್ವಾಭಿಮಾನದಿಂದ ಬದುಕಲು ಪೂರಕವಾದ ಎಲ್ಲ ಕ್ರಮ ಕೈಗೊಳ್ಳಲಾಗುವುದು. ರೈತರ ಮಕ್ಕಳಿಗೆ ಹೆಣ್ಣು ಸಿಗದ ಪರಿಸ್ಥಿತಿ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಕ್ಕೆ ಬಂದ 24 ಗಂಟೆ ಒಳಗೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡಲಾಗುದು. ಪಂಚರತ್ನ ಯೋಜನೆ ಜಾರಿ ಮೂಲಕ ಸಮಾಜದ ಎಲ್ಲ ವರ್ಗದ ಜನರಿಗೆ ಉತ್ತಮ ಬದುಕು ನೀಡಲಾಗುವುದು ಎಂದು ಹೇಳಿದರು.
ಸುಗಟೂರು ಗ್ರಾಮದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಶಾಸಕ ಕೆ.ಆರ್.ರಮೇಶ್ ಕುಮಾರ್ ಕಾರಣ. ರಮೇಶ್ ಕುಮಾರ್ ಹೇಳಿರುವಂತೆ ಕಾಂಗ್ರೆಸ್ ಮುಖಂಡರು ಮೂರು ತಲೆಮಾರಿಗೆ ಸಾಕಾಗುವಷ್ಟು ಆಸ್ತಿ ಮಾಡಿದ್ದಾರೆ. ಅವರು ಜನರ ಕಷ್ಟಕ್ಕೆ ಎಲ್ಲಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಸ್ತ್ರೀ ಶಕ್ತಿ ಸಂಘದ ಸದಸ್ಯರು ಪಡೆದಿರುವ ಡಿಸಿಸಿ ಬ್ಯಾಂಕ್ ಸಾಲ ರಮೇಶ್ ಕುಮಾರ್ ತೀರಿಸುವುದಿಲ್ಲ. ಅಧಿಕಾರಕ್ಕೆ ಬಂದರೆ ನಾನು ತೀರಿಸುತ್ತೇನೆ. ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಅವರನ್ನು ಗೆಲ್ಲಿಸಿಕೊಡಿ, ನಾನು ಮಂತ್ರಿ ಮಾಡುತ್ತೇನೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮಾಜಿ ಸದಸ್ಯ ತೂಪಲ್ಲಿ ಆರ್.ಚೌಡರೆಡ್ಡಿ, ಶ್ರೀನಿವಾಸಪುರ ಜೆಡಿಎಸ್ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ, ಮಾಲೂರು ಅಭ್ಯರ್ಥಿ ಜೆಇ ರಾಮೇಗೌಡ. ಕೋಲಾರ ಅಭ್ಯರ್ಥಿ ಸಿಎಂಆರ್ ಶ್ರೀನಾಥ್, ಮುಖಂಡರಾದ ಬಿ.ವಿ.ಶಿವಾರೆಡ್ಡಿ, ನಿಖಿಲ್ ಕುಮಾರಸ್ವಾಮಿ, ಮಂಗಮ್ಮ ಮುನಿಶಾಮಿ, ಜಂಜಪ್ಪ, ಗೋಪಾಲ್, ಗಾಯಿತ್ರಿ ಮುತ್ತಪ್ಪ, ಎಚ್.ನಾರಾಯಣಸ್ವಾಮಿ, ಪೂಲ ಶಿವಾರೆಡ್ಡಿ, ಮಂಜುನಾಥರೆಡ್ಡಿ, ಕೆ.ಪಿ.ನಾಗೇಶ್, ರಾಮಚಂದ್ರೇಗೌಡ, ಸಂತೋಷ್, ಮನು, ನಾರಾಯಣಗೌಡ, ನಂಜೇಗೌಡ, ವೆಂಕಟಲಕ್ಷ್ಮಮ್ಮ ದ್ಯಾವಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಎಂ.ವಿ.ಶ್ರೀನಿವಾಸ್, ಗಣೇಶ್, ನಂಜುಂಡಪ್ಪ ಮತ್ತಿತರರು ಇದ್ದರು.
ರಾತ್ರಿ ಲಕ್ಷ್ಮೀಪುರ, ರಾಯಲ್ಪಾಡ್, ಗೌನಿಪಲ್ಲಿಯಲ್ಲಿ ರೋಡ್ ಷೋ ಮೂಲಕ ಜೆಡಿಎಸ್‍ಗೆ ಬೆಂಬಲ ಕೋರಿದರು. ತಡರಾತ್ರಿ ನಕ್ಕಲಗಡ್ಡ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲಾಯಿತು.

ರೋಜೇನಹಳ್ಳಿ ಸಮೀಪ ಜೆಡಿಎಸ್ ಪಂಚರತ್ನ ರಥಯಾತ್ರೆ-ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು

ಶ್ರೀನಿವಾಸಪುರ ತಾಲ್ಲೂಕಿನ ರೋಜೇನಹಳ್ಳಿ ಸಮೀಪ ಜೆಡಿಎಸ್ ಪಂಚರತ್ನ ರಥಯಾತ್ರೆ ಪ್ರಯುಕ್ತ ಮಂಗಳವಾರ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು.

ಗಡಿ ಪ್ರದೇಶದಲ್ಲಿ ಕನ್ನಡ ಬಳಕೆಗೆ ಆದ್ಯತೆ ನೀಡಬೇಕು :ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಗಡಿ ಪ್ರದೇಶದಲ್ಲಿ ಕನ್ನಡ ಬಳಕೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ವಿವೇಕಾನಂದ ವೃತ್ತದಲ್ಲಿ ಚೈತನ್ಯ ಜನ ಜಾಗೃತಿ ವೇದಿಕೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಭಾಷೆಯೊಂದಿಗೆ ಬದುಕುವ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ಚೈತನ್ಯ ಜನ ಜಾಗೃತಿ ವೇದಿಕೆ ಸುಮಾರು 26 ಈ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದೆ. ಗಡಿ ಭಾಗದ ಜನರಲ್ಲಿ ಕನ್ನಡ ಪ್ರೇಮ ಉಂಟುಮಾಡಲು ಶ್ರಮಿಸುತ್ತಿದೆ. ಇಂಥ ಪ್ರಯತ್ನಗಳು ಎಲ್ಲ ಕನ್ನಡ ಪರ ಸಂಘಟನೆಗಳಿಂದಲೂ ನಡೆಯಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥರೆಡ್ಡಿ, ಪುರಸಭಾ ಸದಸ್ಯ ಬಿ.ವಿ.ರೆಡ್ಡಿ, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಜಿ.ಚಂದ್ರು. ಜಿಲ್ಲಾ ಘಟಕದ ಉಪಾಧ್ಯಕ್ಷ ಹೈದರ್ ಷರೀಫ್, ಮುಖಂಡರಾದ ಪೂಲ ಶಿವಾರೆಡ್ಡಿ, ವಿ.ಮುನಿಯಪ್ಪ, ಶ್ರೀನಿವಾಸರೆಡ್ಡಿ, ಗಾಯಿತ್ರಿ ಮುತ್ತಪ್ಪ, ರಸೂಲ್ ಖಾನ್, ಕಾರ್ ಬಾಬು, ಜಗನ್, ಸಾದಿಕ್ ಪಾಷ, ಸಂತೋಷ್, ಮಂಜು, ಜಗದೀಶ್, ಅಪ್ಪೂರು ರಾಜು, ರವಿ ಇದ್ದರು.

ಸೇಂಟ್ ಆಗ್ನೆಸ್ ಪಿ ಯು ಕಾಲೇಜು ಮೈದಾನದಲ್ಲಿ ಸಂಭ್ರಮದ ಕಾಲೇಜು ದಿನ

ಮಂಗಳೂರು: ಸೇಂಟ್ ಆಗ್ನೆಸ್ ಪಿ ಯು ಕಾಲೇಜು ತಮ್ಮ ಮೈದಾನದಲ್ಲಿ ಸಂಭ್ರಮದ ಕಾಲೇಜು ದಿನವನ್ನು ಆಚರಿಸಿತು.

    ಕಾರ್ಯಕ್ರಮಕ್ಕೆ ನಿಟ್ಟೆ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಎನ್ ವಿನಯಹೆಗ್ಡೆ ಮುಖ್ಯ ಅತಿಥಿಗಳಾಗಿದ್ದು, ಸಭೆಯನ್ನುದ್ದೇಶಿಸಿ ಅವರು  ಮಾತನಾಡಿ “ಸೇಂಟ್ ಆಗ್ನೆಸ್ ಸಂಸ್ಥೆಗಳು ಮಂಗಳೂರಿನ ಸಂಪೂರ್ಣ ಜನಸಂಖ್ಯೆಗೆ ಸೇರಿವೆ. ಸೇಂಟ್ ಆಗ್ನೆಸ್ ಒಂದು ಖ್ಯಾತಿ ಪಡೆದ ಸಂಸ್ಥೆಯಾಗಿದ್ದು, ಅಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮಾತ್ರ ಉತ್ತಮ ಸಾಧನೆ ಮಾಡದೆ ಉತ್ತಮ ಗುಣವನ್ನು ಬೆಳೆಸಿಕೊಳ್ಳಬೇಕು ಮತ್ತು ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಅವರು ಹೇಳಿದರು. “ಶಿಕ್ಷಣವು ನಿಂತ ಪ್ರಕ್ರಿಯೆಯಲ್ಲ. ಕಾಲ ಬದಲಾದಂತೆ ಬದಲಾಗಬೇಕು.ಅದು ಸೇಂಟ್ ಆಗ್ನೆಸ್ ಸಂಸ್ಥೆಯಲ್ಲಿ ಆಗುತ್ತದೆ. ಅದು ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನವನ್ನು ನೀಡುತ್ತದೆ” ಎಂದರು

     ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಆಟಗಾರರನ್ನು, ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ವರ್ಷದ ಅತ್ಯುತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿದರು.

   ಸೇಂಟ್ ಆಗ್ನೆಸ್ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಡಾ.ಸಿಸ್ಟರ್ ಲಿಡಿಯಾ ಫೆರ್ನಾಂಡಿಸ್ ಎ.ಸಿ. ಗೌರವ ಅತಿಥಿಗಳಾಗಿದ್ದರು. ಪ್ರಾಂಶುಪಾಲರಾದ ಸಿಸ್ಟರ್.ನೋರಿನ್ ಡಿಸೋಜಾ ಎ.ಸಿ, ಉಪ ಪ್ರಾಂಶುಪಾಲರಾದ ಸಿಸ್ಟರ್ ಜಾನೆಟ್ ಸಿಕ್ವೇರಾ ಎ.ಸಿ,  ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಆಶಾ ಸಂಜೀವನ,  ಕಾರ್ಯದರ್ಶಿ ಅವಿನಾಶ್ ಕೃಷ್ಣ ಕುಮಾರ್ ಉಪಸ್ಥಿತರಿದ್ದರು.

ಸಿಸ್ಟರ್ ನೊರಿನ್ ಡಿಸೋಜಾ ಸ್ವಾಗತವನ್ನು ಕೋರಿದರು.ಕಾರ್ಯಕ್ರಮದ ಸಂಯೋಜಕಿ ಶ್ರೀಮತಿ ಜೇಷ್ಮಾ ಡಿಸೋಜಾ ಸಂಚಾಲಕರು ಕೃತಜ್ಞತೆ ಸಲ್ಲಿಸಿದರು. ಮತ್ತು ಶ್ರೀ ಜೋಯಲ್ ಫೆರ್ನಾಂಡಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.

ಔಪಚಾರಿಕ ಕಾರ್ಯಕ್ರಮದ ನಂತರ ವೈವಿಧ್ಯಮಯ ಕಲಾ ಪ್ರಕಾರಗಳು, ಸಂಗೀತ ಹಾಡುಗಳು, ನ್ರತ್ಯಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನೆಡದವು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ನೈಟಿಂಗೇಲ್ ಲತಾಮಂಗೇಶ್ಕರ್ ಅವರಿಗೆ ಗೌರವ ಸಲ್ಲಿಸಾಲಾಯಿತು.    ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಮತ್ತು  ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಓತ್ತಿ ಹೇಳುವ ಇಂಗ್ಲಿಷ್ ಕೋಷ್ಟಕ ‘ಒನ್ ಅರ್ಥ್’  ಕಾರ್ಯಕ್ರಮಗಳು ಗಮನ ಸೆಳೆದವು. ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಕಾಲೇಜು ವಿದ್ಯಾಥಿ ಸಂಘದ ಅಧ್ಯಕ್ಷೆ ಕತೀಜ ಝಮಿಯಾ ಪಿ.ಯು. ಹಾಗೂ ಉಪಾಧ್ಯಕ್ಷೆ ಅನ್ವಿಕಾ ಮಿರಾಂದ  ನಿರೂ

ಕುಂದಾಪುರ : ಅಂಜನಿ ಶ್ಯಾನುಭಾಗ್ ನಿಧನ

ಕುಂದಾಪುರದ ಹಿರಿಯ ವ್ಯವಹಾರಸ್ಥರಾದ ರತ್ನಾಕರ ಶ್ಯಾನುಭಾಗ್-ವಸಂತಿ ದಂಪತಿಯ ಪುತ್ರಿ ಅಂಜನಿ ಶ್ಯಾನುಭಾಗ್ (51) ಹೃದಯಾಘಾತದಿಂದ ನ.24ರಂದು ಮಂಗಳೂರಿನ ಸಹೋದರಿಯ ಮನೆಯಲ್ಲಿ ನಿಧನರಾದರು. ಕುಂದಾಪುರದಲ್ಲಿ ತನ್ನ ಕುಟುಂಬದ ವ್ಯವಹಾರದಲ್ಲಿ ಕ್ರಿಯಾಶೀಲತೆಯಿಂದ ದುಡಿಯುತ್ತಿದ್ದ ಇವರು ಉತ್ತಮ ಜನಸಂಪರ್ಕ ಹೊಂದಿದ್ದರು. ತಂದೆ, ತಾಯಿ ಸಹೋದರ, ಸಹೋದರಿಯನ್ನು ಇವರು ಅಗಲಿದ್ದಾರೆ.

ಮಾವು ಬೆಳೆಗಾರರಿಗೆ ಬೆಳೆ ನಷ್ಟ ಪರಿಹಾರ ನೀಡುವಂತೆ ಆಗ್ರಹಿಸಿ ಡಿ.8 ರಂದು ತಾಲ್ಲೂಕು ಬಂದ್ ಆಚರಿಸಲಾಗುವುದು-ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಚಿನ್ನಪ್ಪರೆಡ್ಡಿ

ಶ್ರೀನಿವಾಸಪುರ: ಮಾವು ಬೆಳೆಗಾರರಿಗೆ ಬೆಳೆ ನಷ್ಟ ಪರಿಹಾರ ನೀಡುವಂತೆ ಆಗ್ರಹಿಸಿ ಡಿ.8 ರಂದು ತಾಲ್ಲೂಕು ಬಂದ್ ಆಚರಿಸಲಾಗುವುದು ಎಂದು, ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಚಿನ್ನಪ್ಪರೆಡ್ಡಿ ಹೇಳಿದರು.
ಪಟ್ಟಣದ ರಾಮ ಮಂದಿರದ ಆವರಣದಲ್ಲಿ ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಾವು ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಅವರು, ಅಂದು ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಮಾವು ಬೆಳೆಗಾರರು ಹಾಗೂ ವಿವಿಧ ರೈತ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಬೇಡಿಕೆ ಒಳಗೊಂಡ ಮನವಿ ಪತ್ರ ನೀಡುವರು ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಾಕ್ಷ ಪಿ.ಆರ್.ಸೂರ್ಯನಾರಾಯಣ ಮಾತನಾಡಿ, ಹೋರಾಟಕ್ಕೆ ಶಕ್ತಿ ತುಂಬಲು ಜಿಲ್ಲಾ ಮಟ್ಟಲ್ಲಿ ಸಂಘಟನೆ ಬಲಪಡಿಸಬೇಕು. ಹೋರಾಟದಲ್ಲಿ ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರದ ಜಿಲ್ಲೆಯ ಮಾವು ಬೆಳೆಗಾರರನ್ನು ತೊಡಗಿಸಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ಮಾವಿನ ಬೆಳೆ ನಷ್ಟ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಜಿಲ್ಲಾ ಮಟ್ಟದಲ್ಲಿ ಮಟ್ಟದಲ್ಲಿ ನಡೆದ ಜಂಟಿ ಸಭೆಯಿಂದ ರೈತರಿಗೆ ಅನುಕೂಲವಾಗಿಲ್ಲ. ಜಿಲ್ಲಾ ಮಟ್ಟದ ವಿಸ್ತøತ ಸಭೆಯಲ್ಲಿ ಕೂಲಂಕುಷವಾಗಿ ಚರ್ಚಿಸಿದ ಬಳಿಕ ಹೋರಾಟದ ಹಾದಿ ಹಿಡಿಯಲಾಗಿದೆ ಎಂದು ಹೇಳಿದರು.
ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀರಾಮರೆಡ್ಡಿ ಮಾತನಾಡಿ, ವಿಮಾ ಕಂಪನಿಯಿಂದ ಹಗಲು ದರೋಡೆ ನಡೆಯುತ್ತಿದೆ. ಸರ್ಕಾರ ತಾಲ್ಲೂಕು ಆಡಲಿತ ನೀಡಿರುವ ಬೆಳೆ ನಷ್ಟದ ವರದಿ ಆಧರಿಸಿ ಪರಿಹಾರ ನೀಡಬೇಕು. ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆಯಲು ಬಂದ್ ಅಗತ್ಯ ಎಂದು ಹೇಳಿದರು.
ಮುಖಂಡರಾದ ಬೈಚೇಗೌಡ, ವೀರಭದ್ರೇಗೌಡ, ಆನಂದಕುಮಾರ್, ಬಿ.ಎಸ್.ಸೈಯದ್ ಫಾರೂಕ್ ಮಾತನಾಡಿದರು. ಮುಖಂಡರಾದ ಎನ್.ವೀರಪ್ಪರೆಡ್ಡಿ, ಕೃಷ್ಣಮೂರ್ತಿ ಇದ್ದರು.

ರಾಯಲ್ಪಾಡಿನ ಸರ್ಕಾರಿ ಪ್ರೌಡಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಹಳೇ ವಿದ್ಯಾರ್ಥಿಗಳ ಸಂಘದವತಿಯಿಂದ ಕನ್ನಡರಾಜ್ಯೋತ್ಸವ

ಶ್ರೀನಿವಾಸಪುರ 1 ; ಆತ್ಮವಿಶ್ವಾಸ, ಶ್ರದ್ದೆ , ಪರಿಶ್ರಮ ಸ್ವಾಲಂಭನೆ ಗುಣಾತ್ಮಕಗಳನ್ನು ರೂಡಿಸಿಕೊಂಡರೆ ಎಂಥಹ ಸಾಮಾನ್ಯ ಮನುಷ್ಯ ಕೂಡ ಸಾಧನೆಯ ಉತ್ತಂಗಕ್ಕೆ ಏರಬಹುದು ಎಂದು ಖ್ಯಾತ ಕಥೆಗಾರ ಕೇಶವರೆಡ್ಡಿ ಹಂದ್ರಾಳರು ಹೇಳಿದರು.
ತಾಲೂಕಿನ ರಾಯಲ್ಪಾಡಿನ ಸರ್ಕಾರಿ ಪ್ರೌಡಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಶನಿವಾರ ಶಾಲೆಯ 1983-84 ಸಾಲಿನ ಹಳೇ ವಿದ್ಯಾರ್ಥಿಗಳ ಸಂಘದವತಿಯಿಂದ ಕನ್ನಡರಾಜ್ಯೋತ್ಸವ ಪುರಸ್ಕøತ ಸಿ.ಜಿ.ಶ್ರೀನಿವಾಸ್‍ರವರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಅರವತ್ತು, ಎಪ್ಪತ್ತು , ಎಂಬತ್ತರ ದಶಕಳಿಗೆ ಹೋಲಿಸಿದರೆ ಪ್ರಸ್ತುತ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭೆಗಳಲ್ಲಿ ಪ್ರತಿಭೆಗಳು ಆರಳುವುದಕ್ಕೆ ಉತ್ತಮವಾದ ವಾತಾವರಣ ಇದೆಯೆಂದು . ಅಂಥ ವಾತಾವರಣವನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಮತ್ತು ಯುವ ಜನತೆ ಯಶಸ್ವಿಯಾಗಿ ತಮ್ಮ ಬದುಕಗಳನ್ನು ರೂಪಿಸಿಕೊಳ್ಳಬೇಕೆಂದು ಕರೆನೀಡಿದರು.
ಇಂಥ ಗುಣಗಳಿಂದಾಗಿಯೇ ಕೋಲಾರ ಜಿಲ್ಲೆಯ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಮಾಸ್ತಿ ವೆಂಕಟೇಶ್ ಅಯ್ಯಾಂಗಾರ್, ಸರ್.ಎಂ.ವಿಶ್ವೇಶ್ವರಯ್ಯ , ಡಿ.ವಿ.ಗುಂಡಪ್ಪ ಮುಂತಾದವರು ಯಶಸ್ಸಿನ ಉತ್ತುಂಗಕ್ಕೆ ಏರಿದರೆಂದರು. ಈ ಸಂದರ್ಭದಲ್ಲಿ ಮಹನೀಯರನ್ನು ಸ್ಮರಿಸಿದರು. ಬಡತನ ಮತ್ತು ಸಂಕಷ್ಟಗಳು ಬದುಕಿನ ಉತ್ಕøಷ್ಟ ಮಾರ್ಗಗಳನ್ನು ಅನ್ವೇಷಣೆ ಮಾಡುತ್ತೇವೆ. ಸಾಮಾನ್ಯ ದಲಿತ ಕುಟುಂಬದಲ್ಲಿ ಹುಟ್ಟಿದ ಮುದಿಮಡುಗು ಗ್ರಾಮದ ಸಿ.ಜಿ.ಶ್ರೀನಿವಾಸ್ ಕನ್ನಡರಾಜ್ಯೋತ್ಸವಕ್ಕೆ ಭಾಜನಾರಾಗಿರುವುದು ಹಿಂದೆ ಪರಿಶ್ರಮ , ಆತ್ಮವಿಶ್ವಾಸ ಅಡಗಿದೆ ಎಂದರು.

ಕನ್ನಡರಾಜ್ಯೋತ್ಸವ ಪುರಸ್ಕøತ ಸಿ.ಜಿ.ಶ್ರೀನಿವಾಸ್ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ ನಾವು ಎಷ್ಟು ಓದಿದ್ದೇವೆ ಎಂಬುದು ಮುಖ್ಯವಲ್ಲ , ಆ ಓದು ಎಷ್ಟು ಸಂಸ್ಕಾರವನ್ನು ಕಲಿಸಿದೆ ಎಂಬುದು ಮುಖ್ಯ .
ಒಬ್ಬ ವಿದ್ಯಾರ್ಥಿಯು ಎಷ್ಟೇ ವಿದ್ಯಾವಂತರಾದರೂ ಆ ವಿದ್ಯಾರ್ಥಿಯಲ್ಲಿ ತಂದೆತಾಯಿ, ಗುರು , ಹಿರಿಯರಲ್ಲಿ ಗೌರವವನ್ನು ನೀಡುತ್ತಾ, ಮಾನವೀಯ ಮೌಲ್ಯಗಳನ್ನು ಇದ್ದರೆ ಆಗ ಸಮಾಜವು ಗೌರವಿಸುತ್ತದೆ.
ವಿದ್ಯಾರ್ಥಿಗಳು ದೃಡ ನಿರ್ಧಾರ ಇರಬೇಕು. ಸಮಯಪ್ರಜ್ಞೆ ಇರಬೇಕು ಹಾಗೂ ವಿದ್ಯಾರ್ಥಿಗಳಿಗೆ ವಿದ್ಯೆಯೊಂದಿಗೆ ಕೌಶಲ್ಯ ಇದ್ದರೆ ಜೀವನದ ಗುರಿಯನ್ನು ಸಾಧಿಸಲು ಸಾಧ್ಯ ಹಾಗೂ ಆದರ್ಶ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.

ಪರಿಸರವಾದಿ ಡಾ|| ಹೆಚ್.ಆರ್. ಸ್ವಾಮಿ ಮಾತನಾಡಿ ಸಮಾಜವನ್ನು ಗೆಲ್ಲಲು ವಿದ್ಯೆಯೊಂದೆ, ವಿದ್ಯಾರ್ಥಿಗಳು ಬದ್ದತೆ, ಜ್ಞಾನ, ಶಿಸ್ತು ,ಸಮಯಪ್ರಜ್ಞೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು.
ವಿದ್ಯಾರ್ಥಿಗಳು ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಒಂದು ಗಿಡವನ್ನು ದತ್ತು ಪಡೆದು ಪರಿಸರವನ್ನು ಉಳಿಸುವಂತೆ ಕರೆನೀಡಿದರು.
ರಂಗಕರ್ಮಿಗಳಾದ ಎನ್.ಶಿವಲಿಂಗಯ್ಯ, ಅಶೋಕ್, ಕಲಾವಿದ ಮುರಳಿಧರ ವಿ.ರಾಠೋಡ್, ಪ್ರಾಂಶುಪಾಲ ಎನ್.ಶಶಿಕುಮಾರ್, ಪ್ರೌಡಶಾಲೆ ಮುಖ್ಯ ಶಿಕ್ಷಕ ಪಿ.ಮಾರಣ್ಣ, ಎಸ್‍ಡಿಎಂಸಿ ಅಧ್ಯಕ್ಷ ರೆಡ್ಡಿಶ್ರೀನಿವಾಸ್ , ನಿವೃತ್ತ ಉಪನ್ಯಾಸಕ ವಿ.ವೆಂಕಟರಮಣ, ಶಾಲೆಯ ಹಳೇ ವಿದ್ಯಾರ್ಥಿಗಳಾದ ಸಿ.ಜಿ.ಶಿವಪ್ಪ, ಸಿಮೆಂಟ್‍ನಾರಾಯಣಸ್ವಾಮಿ, ಮೋಹನ್ ಹಾಗೂ ಉಪನ್ಯಾಸಕರು, ಶಿಕ್ಷಕರು ಇದ್ದರು.

ಸರ್ಕಾರಕ್ಕೆ ಮನವಿ ಮಾಡಿ ರಾಜ್ಯದಲ್ಲಿ ಮೀಸಲಾತಿ ಬೇಕು ಎಂದು ಎಲ್ಲಾ ಸಮುದಾಯಗಳು ಕೇಳುತ್ತಿವೆ. ಆದರೆ ಸರ್ಕಾರವು ಆಯಾ ಸಮುದಾಯಕ್ಕೆ ತಕ್ಕಂತೆ 100ರಷ್ಟು ಮೀಸಲಾತಿ ನೀಡಿದರೆ ಅನುಕೂಲವಾಗಿದೆ ಎಂದು ಪತ್ರಿಕೆಗಳ ಮೂಲಕ ಕನ್ನಡರಾಜ್ಯೋತ್ಸವ ಪುರಸ್ಕøತ ಸಿ.ಜಿ.ಶ್ರೀನಿವಾಸನ್ಸರ್ಕಾರಕ್ಕೆ ಮನವಿ ಮಾಡಿದರು.

ಕುಂದಾಪುರ್ : ಸಹಾಯಕ್ ವಿಗಾರ್ ಮಾ|ಬಾ|ಅಶ್ವಿನ್ ಆರಾನ್ಹಾಚೊ ಜಲ್ಮಾ ದೀಸ್ ಆಚರಣ್


ಕುಂದಾಪುರ್, ನ.27: ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆಚೊ ಸಹಾಯಕ್ ವಿಗಾರ್ ಮಾ|ಬಾ|ಅಶ್ವಿನ್ ಆರಾನ್ಹಾ ನವೆಂವರಾಚ್ಯಾ 26 ವೆರ್ ಬಲಿದಾನ್ ಪಾಟವ್ನ್ ಆಪ್ಲೊ 33 ವೊ ಜಲ್ಮಾ ದೀಸ್ ಆಚರಣ್‍ಕೆಲೊ. ಭೊ|ಮಾ|ಬಾ| ಸ್ಟ್ಯಾನಿ ತಾವ್ರೊ ಹಾಣಿ ಸಹ ಭೆಟವ್ಣಿ ಕೆಲಿ. ಉಪ್ರಾಂತ್ ಇಗರ್ಜೆಚ್ಯಾ ಪೊರ್ಟಿಕೊಂತ್ ಕೇಕ್ ಕಾತರ್ನ್ ಫಿರ್ಗಜ್ ಪ್ರಜಾ ಸಾಂಗಾತಾ ಜಲ್ಮಾ ದೀಸ್ ಆಚರಣ್ ಕೆಲೊ.


ಫಿರ್ಗಜೆಚೊ ವ್ಹಡಿಲ್ ಭೊ|ಮಾ|ಬಾ| ಸ್ಟ್ಯಾನಿ ತಾವ್ರೊ ಹಾಣಿ ಬಾಪ್ ಅಶ್ವಿನಾಕ್ ಶುಭಾಶಯ್ ಪಾಟಯ್ಲೆ. ಫಿರ್ಗಜೆಚ್ಯಾ ತರ್ಫೆನ್ ಮಂಡಳಿಚೊ ಉಪಾಧ್ಯಕ್ಷ್ ಎಲ್.ಜೆಫೆರ್ನಾಂಡಿಸಾನ್ ಬೊರೆ ಮಾಗ್ಲೆ. ಹ್ಯಾ ಸಂದರ್ಭಾರ್ ಗೊವ್ಳಿಕ್ ಮಂಡಳಿಚಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಾಚಿ ಸಂಯೋಜಕಿ, ಗೊವ್ಳಿಕ್ ಮಂಡಳಿಚೆ ಸಾಂದೆ, ಸಾಂ.ಜುಜೆ ಕೊವೆಂತಾಚಿ ವ್ಹಡಿಲ್ನ್ ಸಿಸ್ಟರ್ ಸಂಗೀತಾ ಆನಿ ಹೇರ್ ಧರ್ಮ್ ಭಯ್ಣ್ಯೊ ತಸೆಂಚ್ ಫಿರ್ಗಜ್ ಲೋಕ್ ಹಾಜರ್ ಆಸೊನ್ ಸರ್ವಾನಿಂ ಉಲ್ಲಾಸ್ ಪಾಟಯ್ಲೆ.


ಬಾಪ್ ಅಶ್ವಿನಾನ್ ಸರ್ವಾಂಚೊ ಉಪ್ಕಾರ್ ಆಟಯ್ಲೊ.

ಚುನಾವಣಾ ವರ್ಷ-ಘೋಷಣೆಗಳಿಂದ ಸಾಲ ವಸೂಲಾತಿ ಮೇಲೆ ಪರಿಣಾಮ ಸಾಧ್ಯತೆ
ಡಿಸಿಸಿ ಬ್ಯಾಂಕ್ ಸಿಬ್ಬಂದಿಗಿದು ಅಗ್ನಿಪರೀಕ್ಷೆಯ ಕಾಲ-ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:- ಚುನಾವಣಾ ವರ್ಷವಾಗಿದ್ದು, ಬ್ಯಾಂಕ್ ಸಿಬ್ಬಂದಿಗೆ ಅಗ್ನಿಪರೀಕ್ಷೆಯ ಕಾಲ, ರಾಜಕೀಯ ಪಕ್ಷಗಳ ಘೋಷಣೆಗಳಿಂದಾಗಿ ಸಾಲ ವಸೂಲಾತಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಎಚ್ಚರಿಕೆಯಿಂದ ಬ್ಯಾಂಕ್ ಉಳಿಸುವ ಕೆಲಸ ಮಾಡಿ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಬ್ಯಾಂಕ್ ನೌಕರರು, ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಡಿಸಿಸಿ ಬ್ಯಾಂಕಿನ ಎಲ್ಲಾ ಶಾಖೆಗಳ ಅಧಿಕಾರಿ,ಸಿಬ್ಬಂದಿಗಳ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡುತ್ತಿದ್ದರು.
ಚುನಾವಣಾ ವರ್ಷವಾಗಿದ್ದು, ಸಾಲ ಮನ್ನಾ, ಬಡ್ಡಿಮನ್ನಾದಂತಹ ಘೋಷಣೆಗಳು ಈಗಾಗಲೇ ಮೊಳಗುತ್ತಿವೆ, ಇದು ಬ್ಯಾಂಕಿನ ಸಾಲ ವಸೂಲಾತಿಯ ಮೇಲೆ ಪರಿಣಾಮ ಬೀರಲಿದೆ, ಬ್ಯಾಂಕ್ ಸಿಬ್ಬಂದಿ ಸಾಲ ಪಡೆದವರ ಮನೆಗಳಿಗೆ ತೆರಳಿ ಮನವೊಲಿಸಿ ಸಾಲ ವಸೂಲಿ ಮಾಡಿ ಎಂದು ಸೂಚಿಸಿದರು.
ಮುಂದೆ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದು ಸರ್ಕಾರ ಜಾರಿಗೆ ತರುವ ಸಾಲ ಮನ್ನಾ,ಬಡ್ಡಿಮನ್ನಾದಂತಹ ಯೋಜನೆಗಳ ಜಾರಿಗೆ ಬ್ಯಾಂಕ್ ಸದಾ ಸಿದ್ದವಿದೆ ಆದರೆ ಚುನಾವಣಾ ಪೂರ್ವ ಭರವಸೆಗಳನ್ನು ನಂಬಿ ಸಾಲ ಪಡೆದ ಸ್ತ್ರೀಶಕ್ತಿಸಂಘಗಳು, ರೈತರು ಸಾಲ ಮರುಪಾವತಿಸದಿದ್ದರೆ ಬಡ್ಡಿಯ ಸುಳಿಗೆ ಸಿಲುಕುತ್ತಾರೆ ಎಂಬ ಅಂಶವನ್ನು ಗಮನಕ್ಕೆ ತನ್ನಿ ಎಂದು ಕಿವಿಮಾತು ಹೇಳಿದರು.
ಸರ್ಕಾರದ ಸೌಲಭ್ಯಗಳನ್ನು ಜಾರಿಯಾದರೆ ಒದಗಿಸಲು, ಅದರ ಪ್ರಯೋಜನ ರೈತರು,ಮಹಿಳೆಯರಿಗೆ ತಲುಪಿಸಲು ಬ್ಯಾಂಕ್ ಬದ್ದತೆ ಹೊಂದಿದೆ ಎಂದ ಅವರು, ಗ್ರಾಹಕರು ಈಗ ಭರವಸೆಗಳನ್ನು ನಂಬಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯೂ ಇದೆ, ಇದರಿಂದ ಬ್ಯಾಂಕಿನ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮವೂ ಬೀರುತ್ತದೆ ಎಂದು ಎಚ್ಚರಿಸಿದರು.
ಬ್ಯಾಂಕಿನ ಎನ್‍ಪಿಎ ಕಡಿಮೆಯಾಗಬೇಕು, ಸಾಲದ ಬಾಕಿ ಕಂತುಗಳು ಸಕಾಲಕ್ಕೆ ಪಾವತಿಸದವರ ಮನವೊಲಿಸಿ, ಅಗತ್ಯವಾದರೆ ನೋಟೀಸ್ ನೀಡಿ, ಸಾಲ ವಸೂಲಾತಿ ಮೂಲಕ ಬ್ಯಾಂಕಿನ ಆರ್ಥಿಕ ಶಕ್ತಿ ಕುಂದದಂತೆ ನೋಡಿಕೊಳ್ಳಿ, ಇಲ್ಲವೇ ನೀವೇ ಕಷ್ಟಕ್ಕೆ ಸಿಲುಕುತ್ತೀರಿ ಎಂದು ಎಚ್ಚರಿಸಿದರು.
ಡಿ.31ಕ್ಕೆ ರೈತರಿಗೆ ನೀಡಿರುವ ಬೆಳೆಸಾಲ, ಮಹಿಳಾ ಸಂಘಗಳಿಗೆ ನೀಡಿರುವ ಬಡ್ಡಿರಹಿತ ಸಾಲ, ಮಧ್ಯಮಾವಧಿ, ಚಿನ್ನದ ಮೇಲಿನ ಸಾಲ ಯಾವುದೇ ಇರಲಿ ಕಂತು ಬಾಕಿ ಇದ್ದರೆ ಕ್ಷಮಿಸುವುದಿಲ್ಲ, ಬ್ಯಾಂಕಿನಲ್ಲಿ ಕುಳಿತು ಏನು ಮಾಡುತ್ತೀರಿ, ವಸೂಲಾತಿಗೆ ಕ್ರಮವಹಿಸಿ ಎಂದರು.


500 ಕೋಟಿರೂ ಠೇವಣಿ ಗುರಿ


ಡಿಸಿಸಿ ಬ್ಯಾಂಕ್ ಎಲ್ಲಾ ರೀತಿಯ ಆರ್ಥಿಕವ್ಯವಹಾರಗಳು, ಸಾಲ ವಿತರಣೆ, ವಸೂಲಾತಿ, ಕಂಪ್ಯೂಟರೀಕರಣ ಎಲ್ಲಾ ವಿಷಯಗಳಲ್ಲೂ ದೇಶಕ್ಕೆ ನಂ.1 ಆಗಿದೆ ಆದರೆ ಠೇವಣಿ ಸಂಗ್ರಹದಲ್ಲಿ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದ ಅವರು,ಬ್ಯಾಂಕ್ ಸಿಬ್ಬಂದಿ ಶ್ರದ್ಧೆ ವಹಿಸಿ, ಈ ಸಾಲಿನಲ್ಲಿ 500 ಕೋಟಿ ಠೇವಣಿ ಸಂಗ್ರಹದ ಗುರಿ ಸಾಧನೆಗೆ ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದರು.
ಜಿಲ್ಲೆಯ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳು ಈಗಾಗಲೇ ಗಣಕೀಕರಣಕ್ಕೆ ಒಳಪಟ್ಟಿವೆ, ಆದರೆ ಆಯಾ ದಿನದ ಲೆಕ್ಕ,ವಹಿವಾಟು ಆಯಾ ದಿನವೇ ಅಪ್‍ಡೇಟ್ ಆಗಬೇಕು, ಆನ್‍ಲೈನ್‍ನಲ್ಲಿ ಮಾಹಿತಿ ಸಿಗಬೇಕು. ಗಣಕೀಕೃತ ಲೆಕ್ಕಪರಿಶೋಧನೆಗೆ ಸುಲಭವಾಗಬೇಕು ಎಂದು ತಾಕೀತು ಮಾಡಿದರು. ಗಣಕೀಕರಣದಲ್ಲಿ ಯಾವುದಾದರೋ ದೋಷವಿದ್ದರೆ ವಿ-ಸಾಫ್ಟ್ ಸಿಬ್ಬಂದಿ ಗಮನಕ್ಕೆ ತನ್ನಿ ಎಂದು ತಿಳಿಸಿದರು.
ಸಾಲಕ್ಕೆ ಮಾತ್ರ ಬ್ಯಾಂಕಿಗೆ ಬರುವವರಿಗೆ ಸೌಲಭ್ಯ ನೀಡದಿರಿ, ಡಿಸಿಸಿ ಬ್ಯಾಂಕಿನಲ್ಲೇ ವಹಿವಾಟು ನಡೆಸಲು ಸೂಚಿಸಿ ಎಂದ ಅವರು, ಬ್ಯಾಂಕ್‍ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ಮಾಡಿ, ಠೇವಣಿ ಹೆಚ್ಚಿಸಿ ಎಂದು ತಿಳಿಸಿ, ಜಿಲ್ಲೆಯ ಪ್ಯಾಕ್ಸ್‍ಗಳ ಕಾರ್ಯದರ್ಶಿಗಳು ತಲಾ 50 ಲಕ್ಷ ಠೇವಣಿ ಸಂಗ್ರಹಿಸಿಕೊಡಲು ಮನವೊಲಿಸಿ ಎಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಸಾಲ ವಸೂಲಾತಿಯಲ್ಲಿ ನಿರೀಕ್ಷಿತ ರೀತಿ ಕೆಲಸ ಮಾಡದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಬ್ಯಾಂಕ್ ನಿಮಗೆ ಅನ್ನನೀಡುತ್ತಿದೆ, ನಿಮ್ಮ ಕುಟಂಬದ ಆರೋಗ್ಯ ರಕ್ಷಣೆಗೆ ವಿಮಾ ಯೋಜನೆ ನೀಡಿದ್ದೇವೆ, ಜವಾಬ್ದಾರಿ ಅರಿತು ಕೆಲಸ ಮಾಡಿ ಎಂದರು. ಈ ಸಂದರ್ಭದಲ್ಲಿ ಎಲ್ಲಾ ಶಾಖೆಗಳ ಅಧಿಕಾರಿಗಳು, ತಮಗೆ ನೀಡಿರುವ ಠೇವಣಿ ಸಂಗ್ರಹ, ಸಾಲ ವಸೂಲಾತಿಯ ಗುರಿ ಸಾಧನೆಯ ಭರವಸೆ ನೀಡಿದರು.
ಸಭೆಯಲ್ಲಿ ಬ್ಯಾಂಕಿನ ಎಜಿಎಂ ಶಿವಕುಮಾರ್, ಹುಸೇನ್ ದೊಡ್ಡಮುನಿ, ಬೈರೇಗೌಡ,ಬಾಲಾಜಿ, ಅರುಣ್‍ಕುಮಾರ್, ಹ್ಯಾರೀಸ್,ಪದ್ಮಮ್ಮ, ತಿಮ್ಮಯ್ಯ, ವಿ-ಸಾಫ್ಟ್ ಸಿಬ್ಬಂದಿ ವಿಶ್ವಪ್ರಸಾದ್, ಸಿರೀಶ್, ಫರ್ನಾಂಡೀಸ್ ಮತ್ತಿತರರಿದ್ದರು.