ವಿದ್ಯಾ ಅಕಾಡೆಮಿ ಯಲ್ಲಿ ಎರಡನೇ ವರ್ಷದ ಕ್ರೀಡೋತ್ಸವ ಕಾರ್ಯಕ್ರಮವು ಸಂಭ್ರಮದಿಂದ ನೆರೆವೇರಿತು

ಕುಂದಾಪುರ, ಡಿಸೆಂಬರ್.17: ಐ.ಎಮ್. ಜೆ ವಿದ್ಯಾ ಸಂಸ್ಥೆಯ ಅಂಗ ಸಂಸ್ಥೆ ಆಗಿರುವ ವಿದ್ಯಾ ಅಕಾಡೆಮಿ ಯಲ್ಲಿ ಎರಡನೇ ವರ್ಷದ ಕ್ರೀಡೋತ್ಸವ ಕಾರ್ಯಕ್ರಮವು, ವಿದ್ಯಾರ್ಥಿಗಳು ಹಾಗೂ ಪೋಷಕರ ಉಪಸ್ಥಿತಿಯಲ್ಲಿ ಸಂಭ್ರಮದಿಂದ ನೆರೆವೇರಿತು.
ಈ ಕಾರ್ಯಾರಂಭವನ್ನು ಐ ಎಂ ಜೆ ವಿದ್ಯಾಸಂಸ್ಥೆಯ ನಿರ್ದೇಶಕರಾದ ಪ್ರೊ. ದೋಮ ಚಂದ್ರಶೇಖರ್ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು, ಉದ್ಘಾಟನಾ ಸಮಾರಂಭದಲ್ಲಿ ಎಂ ಐ ಟ ಕಾಲೇಜಿನ ಅಡ್ಮಿನಿಸ್ಟ್ರೇಷನ್ ಆಫೀಸರ್ ಶ್ರೀ ಪ್ರದೀಪ್ ಕುಮಾರ್, ಪಿ ರ್ ಓ ಶ್ರೀ ಸುಧೀರ್ ಹೆಗ್ಡೆ ಹಾಗೂ ದೈಹಿಕ ಶಿಕ್ಷಕ ಶ್ರೀ ಪ್ರವೀಣ್ ಖಾರ್ವಿ ಅವರು ಭಾಗವಹಿಸಿದ್ದರು,
ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ಮತ್ತು ಪೋಷಕರಿಗೆ ಹಗ್ಗ ಜಗ್ಗಾಟ, ಮ್ಯೂಸಿಕಲ್ ಚೇರ್ ನಂತಹ ಕ್ರೀಡೆಗಳು ಜರಗಿದವು, ವಿದ್ಯಾ ಅಕ್ಯಾಡೆಮಿ ಯಾ ಸಿಬ್ಬಂದಿವರ್ಗ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನೆರವೇರಿಸಿ ಕೊಟ್ಟರು.

ಶ್ರೀನಿವಾಸಪುರ ನಂಬಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸ್ವಯಂ ಚಾಲಿತ ಸಮೂಹ ಹಾಲು ಕರೆಯುವ ಯಂತ್ರ ಘಟಕ ಉದ್ಘಾಟನೆ

ಶ್ರೀನಿವಾಸಪುರ : ತಾಲ್ಲೂಕು ವ್ಯಾಪ್ತಿಯಲ್ಲಿ ನಂಬಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸ್ವಯಂ ಚಾಲಿತ ಸಮೂಹ ಹಾಲು ಕರೆಯುವ ಯಂತ್ರ ಘಟಕವನ್ನು ಕೋಮುಲ್ ತಾಲ್ಲೂಕು ನಿರ್ದೇಶಕರಾದ ಎನ್. ಹನುಮೇಶ್ ರವರು ಉದ್ಘಾಟನೆ ಮಾಡಿ ರವರು ಮಾತನಾಡಿ , ಸ್ವಯಂ ಚಾಲಿತ ಸಮೂಹ ಹಾಲು ಕರೆಯುವ ಯಂತ್ರ ಘಟಕದ ಯೂನಿಟ್ ಧರ 2.5 ಲಕ್ಷ ಘಟಕವನ್ನು ಒಕ್ಕೂಟದಿಂದ ಶೇ .100 % ರಿಯಾಯತಿ ಧರದಲ್ಲಿ ಸಂಘಗಳಿಗೆ ಸರಬರಾಜು ಮಾಡಿಸಿ , ಮಿಲ್ಕಿಂಗ್ ಕಟ್ಟಡ ನಿರ್ಮಾಣಕ್ಕಾಗಿ 50,000 / – ರೂಗಳ ಸಹಾಯಧನವನ್ನು ನೀಡಿರುತ್ತಾರೆ . ಇದರ ಜೊತೆಗೆ ಒಕ್ಕೂಟದಿಂದ ಪ್ರತಿ ಲೀಟರ್‌ಗೆ 0.30 ಪೈಸೆಯಂತೆ ಸಂಘಗಳಿಗೆ ಪ್ರೋತ್ಸಾಹಧನ ನೀಡುತ್ತಿದ್ದು , ಈ ಮೊತ್ತದಲ್ಲಿ ಪ್ರತಿ ಲೀಟರ್‌ಗೆ 0.10 ಪೈಸೆಯಂತೆ ಹಾಲು ಕರೆಯುವ ರೈತರಿಗೆ ಪ್ರೋತ್ಸಾಹ ಧನ ನೀಡಲಾಗುವುದು , ಉಳಿಕೆ 0.20 ಪೈಸೆ ಯಂತ್ರಗಳ ನಿರ್ವಹಣೆ ವೆಚ್ಚಕ್ಕಾಗಿ ವಿನಿಯೋಗಿಸಲು ಒಕ್ಕೂಟದಿಂದ ನೀಡಲಾಗುತ್ತಿದೆ .
ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಚಾಲಿತ ಸಮೂಹ ಹಾಲು ಕರೆಯುವ ಯಂತ್ರ ಘಟಕಗಳನ್ನು ಸಂಘಗಳಲ್ಲಿ ಅಳವಡಿಸಲು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿರುತ್ತಾರೆ .
ಉಪ ವ್ಯವಸ್ಥಾಪಕರಾದ ಕೆ.ಎಂ.ಮುನಿರಾಜು ರವರು ಮಾತನಾಡಿ , ಗ್ರಾಮೀಣ ಪ್ರದೇಶಗಳಲ್ಲಿ ವಾಸವಿರುವ ಹಾಲು ಉತ್ಪಾದಕರು ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳನ್ನು ಸಾಕಾಣಿಕೆ ಮಾಡಿ ತಮ್ಮ ತಮ್ಮ ಆರ್ಥಿಕ ಜೀವನ ಮಟ್ಟವನ್ನು ಉತ್ತಮಪಡಿಸಿಕೊಳ್ಳಲು ಹಾಗೂ ಸ್ವಾವಲಂಬಿಗಳಾಗಿ ಜೀವನ ನಡೆಸಲು ಹಾರಿ ದೀಪವಾಗಿರುತ್ತದೆ ಹಾಗೂ ವೈಜ್ಞಾನಿಕವಾಗಿ ಸ್ವಯಂ ಚಾಲಿತ ಸಮೂಹ ಹಾಲು ಕರೆಯುವ ಯಂತ್ರ ಘಟಕಗಳಲ್ಲಿ ಹಾಲು ಕರೆಯುವ ವ್ಯವಸ್ಥೆ ಮಾಡಿರುವುದರಿಂದ ರಾಸುಗಳ ಆರೋಗ್ಯ , ಹಾಲಿನ ಗುಣಮಟ್ಟ , ಶುದ್ಧತೆ ಪರಿಣಾಮಕಾರಿಯಾಗಿ ಕಾಪಾಡಿ ಗ್ರಾಹಕರಿಗೆ ಪರಿಶುದ್ಧವಾದ ಹಾಲನ್ನು ಪೂರೈಕೆ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಕೋಮುಲ್ ಮಾಜಿ ನಿರ್ದೇಶಕರು ದ್ವಾರಸಂದ್ರ ಸಿ.ಮುನಿವೆಂಕಟಪ್ಪ , ಕೇತಗಾನಹಳ್ಳಿ ನಾಗರಾಜ್ ರವರು , ಉಪ ವ್ಯವಸ್ಥಾಪಕರು ( ಬಿ.ಎಂ.ಸಿ . ಇಂಜಿನಿಯರಿಂಗ್ ) ಪಿ.ಮೋಹನ್ , ವಿಸ್ತರಣಾಧಿಕಾರಿಗಳಾದ ಪಿ.ಕೆ.ನರಸಿಂಹರಾಜು , ಎನ್.ಶಂಕರ್ , ಸಂಘದ ಅಧ್ಯಕ್ಷರಾದ ನರಸಿಂಹಮೂರ್ತಿ , ಹಾಗೂ ಎಲ್ಲಾ ನಿರ್ದೇಶಕರು , ಹಾಲು ಉತ್ಪಾದಕರು , ಗ್ರಾಮಸ್ಥರು , ಸಂಘದ ಸಿಬ್ಬಂದಿ ಹಾಜರಿದ್ದರು .

ಬೀಜಾಡಿ ಮಿತ್ರ ಸಂಗಮ ರಜತ ಮಹೋತ್ಸವ: ಛಾಯಾಚಿತ್ರ ಸಂಚಿಕೆ ಬಿಡುಗಡೆ


ಬೀಜಾಡಿ: ಜಿಲ್ಲಾ ಪ್ರಶಸ್ತಿ ಪುರಸ್ಕøತ ಬೀಜಾಡಿ ಗೋಪಾಡಿ ಮಿತ್ರ ಸಂಗಮದ 25 ಸಾರ್ಥಕ ವಸಂತಗಳ ಸಂಭ್ರಮಾಚರಣೆ “ರಜತಪಥ”ದ ಸಡಗರ ಫೆಬ್ರುವರಿ 3 ರಿಂದ 5ರ ತನಕ ನಡೆಯಲಿದ್ದು, ಈ ಪ್ರಯುಕ್ತ ಸಂಸ್ಥೆಯ ಸಾಧನೆಯ ಛಾಯಾಚಿತ್ರದ ಸಂಚಿಕೆ ಅನಾವರಣ ಕಾರ್ಯಕ್ರಮ ಭಾನುವಾರ ನಡೆಯಿತು.
ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸಂಸ್ಥೆಯ ಸಾಧನೆಯ ಛಾಯಾಚಿತ್ರ ಸಂಚಿಕೆ ಅನಾವರಣಗೊಳಿಸಿ ಮಾತನಾಡಿ ಮಿತ್ರಸಂಗಮ ಹತ್ತು ಹಲವು ಜನಪರ ಕಾರ್ಯಕ್ರಮ ಸಂಘಟಿಸಿ ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಸಂಸ್ಥೆಯ ರಜತ ಮಹೋತ್ಸವ ಯಶಸ್ವಿಯಾಗಲಿ ನಡೆಯಲಿ ಎಂದರು.
ಈ ಸಂದರ್ಭದಲ್ಲಿ ಬೀಜಾಡಿ ಮಿತ್ರ ಸಂಗಮದ ಗೌರವಾಧ್ಯಕ್ಷ ಬಿ.ವಾದಿರಾಜ ಹೆಬ್ಬಾರ್, ಉಪಾಧ್ಯಕ್ಷ ನಾಗರಾಜ ಬೀಜಾಡಿ, ಕಾರ್ಯದರ್ಶಿ ಬಿ.ರಾಜೇಶ್ ಆಚಾರ್ಯ ಬೀಜಾಡಿ, ರಜತ ಮಹೋತ್ಸವದ ಸಮಿತಿಯ ಕಾರ್ಯದರ್ಶಿ ಚಂದ್ರ ಬಿ.ಎನ್., ಉಪಾಧ್ಯಕ್ಷ ಅನುಪ್ ಕುಮಾರ್ ಬಿ.ಆರ್., ಸಂಚಾಲಕರಾದ ಸುಭಾಷ್ ಪುತ್ರನ್, ಗಿರೀಶ್ ಆಚಾರ್ಯ, ಗಣೇಶ್ ಐಶ್ವರ್ಯ, ಮಹೇಶ ಮೊಗವೀರ ಮೊದಲಾದವರು ಉಪಸ್ಥಿತರಿದ್ದರು.
ಮಿತ್ರ ಸಂಗಮದ ಅಧ್ಯಕ್ಷ ಚಂದ್ರಶೇಖರ ಬೀಜಾಡಿ ಸ್ವಾಗತಿಸಿ, ನಿರೂಪಿಸಿದರು.

ಸಂತ ಜೋಸೆಫ್ ಪ್ರೌಢ ಶಾಲೆಯ ವಾರ್ಷಿಕೋತ್ಸವ : ‘ನನ್ನಿಂದ ಸಾಧ್ಯವಿದೆಯೆಂದು ಧ್ರಡವಾಗಿ ನಂಬಿರಬೇಕು’- ಭಗಿನಿ ಆಶಾ

ಕುಂದಾಪುರ: ಡಿ.20: “ಪ್ರತಿಭೆಗಳು ಎಲ್ಲರಲ್ಲಿಯು ಆದಗಿವೆ, ಅವುಗಳನು ಸದುಪಯೋಗಿಸಿ ಕೊಂಡರೆ ಅವುಗಳು ಅಭಿವ್ರದ್ದಿ ಹೊಂದುತ್ತವೆ, ಉಪಯೋಗಿಸಿಕೊಳ್ಳದಿದ್ದಲ್ಲಿ, ಕಬ್ಬಿಣ ತುಕ್ಕು ಹಿಡಿಯುವಂತೆ, ನಶಿಸಿ ಹೋಗುತ್ತವೆ. ಓದು, ಧ್ಯಾನ ಮತ್ತು ವ್ಯಾಯಮ ಮನುಷ್ಯನಿಗೆ ಅತೀ ಮುಖ್ಯ” ಎಂದು ಸಂತ ಜೋಸೆಫ್ ಶಾಲೆಗಳ ಜಂಟಿ ಕಾರ್ಯದರ್ಶಿ ಭಗಿನಿ ಆಶಾ ಎ.ಸಿ. ಹೇಳಿದರು.
ಅವರು ಸಂತ ಜೋಸೆಫ್ ಪ್ರೌಢ ಶಾಲೆಯ ವಾರ್ಷಿಕೋತ್ಸವದ (10—12-22) ದಿನದಂದು ಅಧ್ಯಕ್ಷತೆ ವಹಿಸಿಕೊಂಡು ಮಾತಾನಾಡುತ್ತ ‘ವಿದ್ಯಾರ್ಥಿಗಳು ತಮ್ಮ ಓದಿನಲ್ಲಿ ತೊಡಗಿಕೊಳ್ಳಲು ಬೆಳಗಿನ ಸಮಯವನ್ನು ಆರಿಸಿಕೊಳ್ಳಬೇಕು, ಬೆಳಿಗೆ ಮನಸು ಶುಭ್ರವಾಗಿದ್ದು, ನಾವು ಒದಿದ ವಿಷಗಳು ಮನಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ವಿದ್ಯಾರ್ಥಿಗಳು ವೇಳಾಪಟ್ಟಿಯನ್ನು ತಯಾರಿಸಿಕೊಳ್ಳಬೇಕು, ಅದರಂತೆ ನಿಗದಿತ ಸಮಯದೊಳಗೆ ತಮ್ಮ ಯೋಜನೆಗಳನ್ನು ಪೂರ್ಣಗೊಳಿಸಬೇಕು, ಗುರಿ ಇದ್ದರೆ ಮಾತ್ರ ಸಾಲದು, ಗುರಿಯಡೆ ಗಮನವೂ ಇರಬೇಕು. ಹಳೆಯದನ್ನು ನೆಚ್ಚಿಕೊಂಡಿರಬಾರದು, ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಬೇಕು, ನನ್ನಿಂದ ಸಾಧ್ಯವಿದೆಯೆಂದು ಧ್ರಡವಾಗಿ ನಂಬಿರಬೇಕು’ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಎಮ್.ಸಿ.ಸಿ. ಬ್ಯಾಂಕಿನ ನಿರ್ದೇಶಕರಾದ ಎಲ್‍ರೋಯ್ ಕಿರಣ್ ಕ್ರಾಸ್ಟೊ ಮಾತನಾಡಿ, ‘ಏಕಾಗ್ರತೆಯಿಂದ, ಮನಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಪಾಠಗಳನ್ನು ಅಧ್ಯಯನ ಮಾಡಿದರೆ, ಉತ್ತಮ ಸಫಲತೆ ಪಡೆಯಹುದು, ಮಕ್ಕಳು ಮೊಬಾಯ್ಲ್ ಆಟಗಳನ್ನು ಕಡಿಮೆ ಮಾಡಿ, ಮೈದಾನದ ಆಟಗಳಲ್ಲಿ ತೊಡಗಿಸಿಕೊಂಡು, ಓದಿನಲ್ಲಿ ಅಲ್ಲದೆ ತಮ್ಮ ದೈಹಿಕ ಕ್ಷಮತೆಯನ್ನು ಪಡೆದುಕೊಳ್ಳುವ ಅವಶ್ಯಕತೆ ಇದೆಯೆಂದು’ ತಿಳಿಸಿದರು.
ಕುಂದಾಪುರ ಸಂತ ಜೋಸೆಫ್ ಕನ್ಯಾಮಠದ ಮುಖ್ಯಸ್ಥೆ ಭಗಿನಿ ಮರಿಯಾ ಸಂಗೀತ ನಮ್ಮ ಜೀವನದಲ್ಲಿ ಅಸಾಧ್ಯವೆಂಬುದೇ ಇಲ್ಲ. ಸತತ ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯ.ಪೋಷಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಅದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ ಅವುಗಳಲ್ಲೆ ಯಸಸ್ಸನ್ನು ಪಡೆಯಲು ಶ್ರಮಿಸಬೇಕು’ ಎಂದರು.
ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರವಿ ಪೂಜಾರಿ ಶುಭ ಕೋಇದರು, ಸಂತ ಜೋಸೆಫ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ಪ್ರೇಮಿಕಾ ಉಪಸ್ಥಿತರಿದ್ದರು. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರಶಸ್ತಿ ಮತ್ತು ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಶಿಕ್ಷಕಿಯರಾದ ಸ್ವಾತಿ, ಸೆಲಿನ್ ಡಿಸೋಜಾ, ಪ್ರತಿಮಾ ಸಹಕರಿಸಿದರು.
ಸಂತ ಜೋಸೆಫ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ಐವಿ ಶಾಲಾ ವರದಿಯನ್ನು ವಾಚಿಸಿದರು, ಶಿಕ್ಷಕಿ ಸರ್ಸಪತಿ ಸ್ವಾಗತಿಸಿದರು. ಶಿಕ್ಷಕಿ ಶ್ರೀಲತಾ ವಂದಿಸಿದರು. ಶಿಕ್ಷಕ ಅಶೋಕ ದೇವಾಡಿಗ ನಿರೂಪಿಸಿದರು.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ, ಕೆ.ಜಿ.ಎಫ್, ಮಾಲೂರು ಪಟ್ಟಣಗಳಲ್ಲಿ ಏಕಕಾಲಕ್ಕೆ “ನಮ್ಮ ಕ್ಲಿನಿಕ್” ಗಳನ್ನು ಉದ್ಘಾಟನೆ

ಶ್ರೀನಿವಾಸಪುರ : ನಗರ ಪ್ರದೇಶದ ಬಡ ದುರ್ಬಲ ವರ್ಗದ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ , ಕೆ.ಜಿ.ಎಫ್ ಹಾಗೂ ಮಾಲೂರು ಪಟ್ಟಣಗಳಲ್ಲಿ ಏಕಕಾಲಕ್ಕೆ ನಮ್ಮ ಕ್ಲಿನಿಕ್ ಗಳನ್ನು ಉದ್ಘಾಟನೆ ಮಾಡಲಾಯಿತು.

ಶ್ರೀನಿವಾಸಪುರದಲ್ಲಿ ಜಿಲ್ಲಾ ಮಟ್ಟದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಗಫರ್ ಖಾನ್ ಮೊಹಲ್ಲಾದಲ್ಲಿ ಹೊಸದಾಗಿ ನಮ್ಮ ಕ್ಲಿನಿಕ್‌ನ್ನು ಪುರಸಭೆ ಅಧ್ಯಕ್ಷರಾದ ಲಲಿತ ಶ್ರೀನಿವಾಸ್ ಉದ್ಘಾಟನೆ ಮಾಡಿದರು.

ರಾಜ್ಯಾದ್ಯಂತ 438 ಕ್ಲಿನಿಕ್‌ಗಳನ್ನು ಏಕಕಾಲಕ್ಕೆ ವರ್ಚುವಲ್ ಮೂಲಕ ಸನ್ಮಾನ್ಯ ಮುಖ್ಯ ಮಂತ್ರಿಗಳು ಉದ್ಘಾಟಿಸಿದರು. ಸ್ಥಳೀಯವಾಗಿ ಶ್ರೀನಿವಾಸಪುರದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಲಾಗಿತ್ತು .

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ವಿಜಯಲಕ್ಷ್ಮಿ ರವರು ನಮ್ಮ ಕ್ಲಿನಿಕ್‌ನ ಬಗ್ಗೆ ಸವಿವರವಾಗಿ ತಿಳಿಸಿದರು.

ನಗರ ಪ್ರದೇಶಗಳ ಬಡ ಜನತೆಗೆ ನಮ್ಮ ಕ್ಲಿನಿಕ್‌ಗಳು 12 ಆರೋಗ್ಯ ಸೇವೆಗಳ ಮೂಲಕ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸಲು , ನಿರಂತರ ಆರೈಕೆಯನ್ನು ನೀಡುವ ನಿಟ್ಟಿನಲ್ಲಿ ದ್ವಿತೀಯ ಮತ್ತು ತೃತೀಯ ಹಂತದ ಆರೋಗ್ಯ ಕೇಂದ್ರಗಳಿಗೆ ರೆಫರಲ್ ಸೇವೆಗಳನ್ನು ಒದಗಿಸುವ ಮೂಲಕ , ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಸುಧಾರಿಸಲು ಸೂಕ್ತವಾದ ಕಾರ್ಯವಿಧಾನಗಳನ್ನು ಬಲಪಡಿಸಲು ಹಾಗೂ ಸಮುದಾಯದ ಸಹಭಾಗಿತ್ವವನ್ನು ಉತ್ತೇಜಿಸುವಲ್ಲಿ ನಮ್ಮ ಕ್ಲಿನಿಕ್‌ಗಳು ಸಹಾಯಕಾರಿಯಾಗಲಿದೆ ಎಂದು ಹೇಳಿದರು.

ಕುಟುಂಬ ಕಲ್ಯಾಣಧಿಕಾರಿಗಳಾದ ಚಂದನ್‌ ಕುಮಾರ್‌ ಮಾತನಾಡಿ ಇಲ್ಲಿ ನಿರೀಕ್ಷಣಾ ಸ್ಥಳ , ಹೊರ ರೋಗಿಗಳ ಕೊಠಡಿ , ಚುಚ್ಚು ಮದ್ದು ನೀಡುವ ಕೊಠಡಿ , ಪ್ರಯೋಗಶಾಲೆ , ಯೋಗ ಕೂಠಡಿ , ಔಷಧಿ ದಾಸ್ತಾನು ಮತ್ತು ವಿತರಣಾ ಕೊಠಡಿ , ಆಡಳಿತ ಕಛೇರಿ , ಹೀಗೆ ಪ್ರತ್ಯೇಕ ಕೊಠಡಿಗಳಿದ್ದು ಆಸ್ಪತ್ರೆ ಸಿಬ್ಬಂದಿ , ಮಹಿಳಾ ಮತ್ತು ಪುರುಷ ರೋಗಿಗಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ .

ನಮ್ಮ ಕ್ಲಿನಿಕ್‌ಗಳಲ್ಲಿ ಒಬ್ಬರು ವೈದ್ಯಾಧಿಕಾರಿ , ಒಬ್ಬರು ಶುಕ್ರೂಷಕರು , ತಲಾ ಒಬ್ಬೊಬ್ಬ ಪ್ರಯೋಗಶಾಲಾ ತಂತ್ರಜ್ಞರು ಹಾಗೂ ಕಿರಿಯ ದರ್ಜೆ ಸಹಾಯಕರು ,ಒಬ್ಬರು ಡಿ ದರ್ಜೆ ನೌಕರರು ಕಾರ್ಯನಿರ್ವಹಿಸಲಿದ್ದಾರೆ . ನಮ್ಮ ಕ್ಲಿನಿಕ್‌ಗಳು ಬೆಳಗ್ಗೆ 9 ರಿಂದ ಸಂಜೆ 4-30 ರವರೆಗೆ ಸೋಮವಾರದಿಂದ ಶನಿವಾರದವರೆಗೆ ಕಾರ್ಯನಿರ್ವಹಿಸುತ್ತವೆ ಎಂದು ಅವರು ತಿಳಿಸಿದರು.

ನಮ್ಮ ಕ್ಲಿನಿಕ್‌ಗಳಲ್ಲಿ 12 ಪ್ರಮುಖ ಆರೋಗ್ಯ ಸೇವೆಗಳನ್ನು ನೀಡುವುದರ ಜೊತೆಗೆ ಈ ಕೆಳಕಂಡ ಸೇವೆಗಳನ್ನು ನೀಡಲಾಗುತ್ತದೆ. ಗರ್ಭಿಣಿ ಮತ್ತು ಜನನ ಸಮಯದ ಆರೈಕೆ , ನವಜಾತ ಮತ್ತು ಶಿಶುವಿನ ಸಮಗ್ರ ಆರೋಗ್ಯ , ಆರೈಕೆ , ಬಾಲ್ಯ ಮತ್ತು ಹದಿಹರೆಯದವರ ಸಮಗ್ರ ಆರೋಗ್ಯ ಸೇವೆಗಳು ಸಾರ್ವತ್ರಿಕ ಲಸಿಕಾ ಸೇವೆಗಳು , ಕುಟುಂಬ ಕಲ್ಯಾಣ ಗರ್ಭನಿರೋಧಕ ಸೇವೆಗಳು ಮತ್ತು ಇತರ ಸಂತಾನೋತ್ಪತ್ತಿ ಆರೈಕೆ ಕೇಂದ್ರಗಳು , ಸಾಂಕ್ರಾಮಿಕ ರೋಗಗಳ ನಿರ್ವಹಣೆ , ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಖಾಯಿಲೆಗಳಿಗೆ ಹೊರ ರೋಗಿ ಸೇವೆಗಳು , ಸಾಂಕ್ರಾಮಿಕ ಟಿ. ಬಿ. , ಕುಷ್ಟ ರೋಗ ಇತ್ಯಾದಿ ಮತ್ತು ಅಸಾಂಕ್ರಾಮಿಕ ರೋಗಗಳ ಮಧುಮೇಹ ದೀರ್ಘಾವಧಿ ಶ್ವಾಸಕೋಶ ಕಾಯಿಲೆ , ಕೀಲು ನೋವು ಮತ್ತು ಸಂಧಿವಾತ , ಸ್ತನ ಮತ್ತು ಗರ್ಭಕಂತ ಕ್ಯಾನ್ಸರ್ , ಸೀನಿಂಗ್ , ತಡೆಗಟ್ಟುವಿಕೆ ಮತ್ತು ನಿರ್ವಹಣೆ , ಮೂಲಭೂತ ಬಾಯಿ ಆರೋಗ್ಯ ಸೇವೆಗಳು , ಮೂಲಭೂತ ನೇತ್ರ ಹಾಗೂ ಕಿವಿ , ಮೂಗು , ಗಂಟಲು ಆರೋಗ್ಯ ಆರೈಕೆ ಸೇವೆಗಳು , ಮಾನಸಿಕ ಆರೋಗ್ಯದ ಮೂಲಭೂತ ಸೀನಿಂಗ್ ಸೇವೆಗಳು , ಮೂಲಭೂತ ವೃದ್ಧಾಪ್ಯ ಆರೈಕೆ ಮತ್ತು ಉಪಶಮನಕಾರಿ ಆರೈಕೆ ಸೇವೆಗಳು , ಸುಟ್ಟ ಗಾಯಗಳು , ಅಪಘಾತ , ಮತ್ತಿತರ ಗಾಯಗಳು ಸೇರಿದಂತೆ ತುರ್ತು ವೈದ್ಯಕೀಯ ಸೇವೆಗಳು , ಉಚಿತ ಆರೋಗ್ಯ ತಪಾಸಣೆ , ಉಚಿತ ಔಷಧ , ಉಚಿತ ಪ್ರಯೋಗಶಾಲಾ ಸೇವೆಗಳು ರಕ್ತ ಹೀನತೆ , ಸಕ್ಕರೆ ಕಾಯಿಲೆ , ಮೂತ್ರ ಪರೀಕ್ಷೆ , ಕ್ಷಯ ಪರೀಕ್ಷೆ , ಡೆಂಗಿ , ಮಲೇರಿಯಾದಂತಹ ಕನಿಷ್ಠ 14 ಪರೀಕ್ಷೆಗಳ ಸೇವೆಯನ್ನು ನೀಡಲಾಗುತ್ತದೆ ಎಂದರು.

ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷರಾದ ಆಯೇಷಾ ನಯಾಜ್ , ಸದಸ್ಯರಾದ ರಸೂಲ್ ಖಾನ್ , ತಾಲ್ಲೂಕು ಆರೋಗ್ಯಧಿಕಾರಿಗಳಾದ ವಿಶ್ವನಾಥಾರೆಡ್ಡಿ , ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ || ಕಮಲಮ್ಮ , ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ || ಚಾರಿಣಿ , ಡಾ || ಅಂರೀನ್ ,
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು .

ಶ್ರೀನಿವಾಸಪುರ : ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯಸ್ಥ ಸುನಿಲ್ ಎಸ್.ಹೊಸಮನಿ ಭೇಟಿ

ಶ್ರೀನಿವಾಸಪುರ : ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯಸ್ಥ ಸುನಿಲ್ ಎಸ್.ಹೊಸಮನಿ ಭೇಟಿ ನೀಡಿ ಪರಿಶೀಲಿಸಿದರು . ಆಸ್ಪತ್ರೆಯ ವಿವಿಧ ಘಟಕಗಳು ಹಾಗೂ ಒಳ ರೋಗಿಗಳ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು , ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಆಸತ್ರೆಗೆ ಬರುವ ರೋಗಿಗಳಿಗೆ ಉತ್ತಮ ಸೇವೆ ಒದಗಿಸಬೇಕು . ರೋಗಿಗಳಿಗೆ ಚೆನ್ನಾಗಿ ಶುಚಿಗೊಳಿಸಿದ ಬಟ್ಟೆಗಳನ್ನು ನೀಡಬೇಕು ಎಂದು ಹೇಳಿದರು . ಆಸ್ಪತ್ರೆ ಶುಚಿತ್ವ , ನಿರ್ವಹಣೆ ಮತ್ತು ಸಿಬ್ಬಂದಿಯ ವೈದ್ಯಕೀಯ ಸೇವೆ ಕುರಿತು ತೃಪ್ತಿ ವ್ಯಕ್ತಪಡಿಸಿದ ಅವರು , ಆಸ್ಪತ್ರೆ ಮುಂದೆ ವಾಹನಗಳ ನಿಲುಗಡೆ ಮಾಡುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತದೆ . ಆದ್ದರಿಂದ ವಾಹನಗಳನ್ನು ವ್ಯವಸ್ಥಿತವಾಗಿ ನಿಲುಗಡೆ ಮಾಡಲು ಪೊಲೀಸ್ ಇಲಾಖೆ ನೆರವು ಪಡೆಯುಂತೆ ಸೂಚಿಸಿದರು . ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ . ಕುಡಿಯುವ ನೀರಿನ ಸಮಸ್ಯೆ ಇದೆ . ಐಸಿಯು ಘಟಕ ಇದೆಯಾದರೂ , ತಜ್ಞ ವೈದ್ಯರಿಲ್ಲ ಎಂದು ವೈದ್ಯರು ನ್ಯಾಯಾಧೀಶರಿಗೆ ತಿಳಿಸಿದರು . ಅದಕ್ಕೆ ಸ್ಪಂದಿಸಿದ ನ್ಯಾಯಾಧೀಶರು ಸಮಸ್ಯೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು .
ಆಸ್ಪತ್ರೆ ಆಡಳಿತಾಧಿಕಾರಿ ಡಾ . ಜಿ.ಎಸ್.ಶ್ರೀನಿವಾಸ್ , ಡಾ . ಉಮಾಶಂಕರ್‌ , ಡಾ . ದಿವಾಕರ್ , ಡಾ . ಕಮಲಮ್ಮ , ಡಾ . ನಿರಂಜನ್ , ಸಿಬ್ಬಂದಿ ಪ್ರಕಾಶ್ , ಲೀಡಿಯಾ , ಔಷಧಿಕಾರ ಮೊಹಮ್ಮದ್ ಅಲಿ , ಸೈಯದ್ , ಉಷಾ , ಇದ್ದರು .

ಗ್ರಾಮಸ್ಥರು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು-ಕೆ.ಎಲ್.ಜಯರಾಂ

ಶ್ರೀನಿವಾಸಪುರ: ಗ್ರಾಮಸ್ಥರು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು. ತಮ್ಮ ಸಮಸ್ಯೆಗಳನ್ನು ನೇರವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಬೇಕು. ಪರಿಹಾರ ಪಡೆದುಕೊಳ್ಳಬೇಕು ಎಂದು ಗ್ರೇಡ್ 2 ತಹಶೀಲ್ದಾರ್ ಕೆ.ಎಲ್.ಜಯರಾಂ ಹೇಳಿದರು.
ತಾಲ್ಲೂಕಿನ ಮಟ್ಟಕನ್ನಸಂದ್ರ ಗ್ರಾಮದಲ್ಲಿ ತಾಲ್ಲೂಕು ಆಡಳಿತದಿಂದ ಶನಿವಾರ ಏರ್ಪಡಿಸಿದ್ದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದೆ. ಆಯಾ ಗ್ರಾಮದ ಸಮಸ್ಯೆಗಳನ್ನು ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹರಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸಲು, ಅಗತ್ಯ ಇರುವ ಕಡೆ ರಸ್ತೆ ಚರಂಡಿ ನಿರ್ಮಿಸಲು, ವಿದ್ಯುತ್ ಪರಿವರ್ತಕ ಬದಲಿಸಲು ಹಾಗೂ ಗ್ರಾಮದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಗ್ರಾಮಸ್ಥರ ಹಿತ ದೃಷ್ಟಿಯಿಂದ ಹಂತ ಹಂತವಾಗಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಹೇಳಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯಲ್ಲಿ ದೊರೆಯುವ ಸೌಲಭ್ಯ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ಉಪ ತಹಶೀಲ್ದಾರ್ ಬಲರಾಮಚಂದ್ರೇಗೌಡ, ಪಿಡಿಒ ಚಲಪತಿ, ಕಂದಾಯ ನಿರೀಕ್ಷಕರಾದ ಬಿ.ವಿ.ಮುನಿರೆಡ್ಡಿ, ವಿನೋದ್, ಗ್ರಾಮ ಲೆಕ್ಕಾಧಿಕಾರಿ ಸ್ವಾತಿ ಭಂಡಾರಿ, ಬೆಸ್ಕಾಂ ಇನ್ಸ್‍ಪೆಕ್ಟರ್ ನಂಜುಂಡೇಶ್ವರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್.ರಜನಿ ರಮೇಶ್, ಉಪಾದ್ಯಕ್ಷ ಸತೀಶ್, ಮಾಜಿ ಅಧ್ಯಕ್ಷ ಕಾರಂಗಿ ರಮೇಶ್, ಡಾ. ಮೇಘಶ್ಯಾಂ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಗಿರೀಶ್, ಶ್ರೀನಿವಾಸಯ್ಯ, ನಾಗಾರ್ಜುನ ಬಾಬು, ಹರೀಶ್, ವೆಂಕಟಾಚಲಪತಿ, ವಿರೂಪಾಕ್ಷಪ್ಪ ಇದ್ದರು.

ಶಿರ್ವ ನಡಿಬೆಟ್ಟು ಸೂರ್ಯಚಂದ್ರ ಜೋಡುಕರೆ ಕಂಬಳ ವೈಭವದಿಂದ ನಡೆಯಿತು

ಶಿರ್ವ: ಇತಿಹಾಸ ಪ್ರಸಿದ್ಧ 27ನೇ ವರ್ಷದ ಶಿರ್ವ ನಡಿಬೆಟ್ಟುಸೂರ್ಯ ಚಂದ್ರ ಜೋಡುಕರೆ ಕಂಬಳವು ದಿನಾಂಕ 13-12-2022 ರಂದು ವೈಭವದಿಂದ ನೆಡೆಯಿತು. ಇದರ ಉದ್ಭಾಟನೆಯನ್ನು ಶ್ರೀ ವೈ. ಪ್ರಫುಲ್ಲಶೆಟ್ಟಿ, ಎಲ್ಲೂರು ಗುತ್ತು ಮಾಜಿ ಆಡಳಿತ ಮೊಕ್ತೇಸರರು, ಶ್ರೀ ವಿಶ್ವೇಶ್ವರ ದೇವಸ್ಥಾನ ಶ್ರೀ ಕ್ಷೇತ, ಎಲ್ಲೂರು ಇವರುಗಳು ನೆರವೇರಿಸಿದರು

ಶಿರ್ವ ನಡಿಬೆಟ್ಟು ಶ್ರೀ ದಾಮೋದರ ಚೌಟ ಕಂಬಳದ ಯಜಮಾನರಾಗಿದ್ದು, ಶಿರ್ವ ನಡಿಬೆಟ್ಟು ತ್ರೀ ನಿತ್ಯಾನಂದ ಹೆಗ್ಡೆ ಅಧ್ಯಕ್ಷರಾಗಿದ್ದರು ಶಿರ್ವ ನಡಿಬೆಟ್ಟು ಶ್ರೀ ಶಶಿಧರ ಹೆಗ್ಡೆ ವ್ಯವಸ್ಥಾಪಕರಾಗಿದ್ದರು. ಶಿರ್ವ ನಂಗ್ಯೊಟ್ಟು ಮನೆತನದವರು ಮತ್ತು ಶಿರ್ವ ನಡಿಬೆಟ್ಟುಸೂರ್ಯ ಚಂದ್ರ ಜೋಡುಕರೆ ಕಂಬಳ ಸಮಿತಿ ಸರ್ವಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

   ಕಂಬಳದಲ್ಲಿ ಜೂನಿಯರ್ ಮತ್ತು ಸಬ್ ಜೂಜಿಯರ್ ವಿಭಾಗದಲ್ಲಿ ಸುಮಾರು ೬೦ ಜೋಡಿ ಕೋಣಗಳು ಭಾಗವಹಿಸಿದ್ದವು. ಕಂಬಳದ ದಿನ ಸುರೇಂದ್ರ ಹೆಗ್ಡೆ, ಪ್ರದೀಪ್ ಶೆಟ್ಟಿ, ಸುಧೀರ್ ಶೆಟ್ಟಿ, ಸತೀಶ್ಚಂದ್ರ ಶೆಟ್ಟಿ, ತಮ್ಮಣ್ಣ ಪೂಜಾರಿ, ವಿಠಲ್ ಅಂಚನ್, ಸುಧಾಕರ ಪಂಡ್ರಿಯಾಲ್, ವಿರೇಂದ್ರ ಪೂಜಾರಿ, ಸುರೇಂದ್ರ ಪೂಜಾರಿ, ವಿಶ್ವನಾಥ ಪ್ರಭು, ರಾಮಾರಾಯ್ ಪಾಟ್ಕರ್, ರಾಜೇಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Passed away Mrs Jessie Rasquinha (84)Kundapur, Funeral cortège leaves residence Pais Villa, Herikudru, Kundapur on 19th December at 2.30pm. Followed by Mass at 3pm at Holy Rosary Church, Kundapur

Mrs Jessie Rasquinha (84) Kundapur

W/o Edward Rasquinha

M/o Colin/Rashmi, Lavina/Navin,

grandmother/o Kelly, Ethan, Abby, Shaun,

D/o Late John Dennis Pais and Late Agnes Pais,

Sister/o Late Francis, Late Charles, Sr. Josephine, Late Daniel, Henry and James Pais (St. Sebastian Ward) Passed away on 18th December.
Funeral cortège leaves residence Pais Villa, Herikudru, Kundapur on 19th December at 2.30pm. Followed by Mass at 3pm at Holy Rosary Church, Kundapur

Contact no: 8197845077