ಭಂಡಾರ್ಕಾರ್ಸ್ : ಮಣಿಪಾಲ ಅಕಾಡೆಮಿ ಆಫ್ ಎಜುಕೇಶನ್ ಸಹಯೋಗದಲ್ಲಿ ದೆಹಲಿಯ ಸ್ಟಿಕ್ ಮೆಕೆಯಿಂದ ಕಥಕ್ ನೃತ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ

ಕುಂದಾಪುರ: ಡಿಸೆಂಬರ್ 21ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಎಜುಕೇಶನ್ ಇದರ ಸಾಂಸ್ಕೃತಿಕ ಸಹಕಾರ ಸಮಿತಿಯ ಸಹಯೋಗದಲ್ಲಿ ದೆಹಲಿಯ ಸ್ಟಿಕ್ ಮೆಕೆಯಿಂದ ಕಥಕ್ ನೃತ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ನಡೆಯಿತು.
ರಾಷ್ಟ್ರೀಯ ಕಥಕ್ ನೃತ್ಯ ಕಲಾವಿದ ಪಂಡಿತ್ ರಾಜೇಂದ್ರ ಗಂಗಾನಿ ಅವರು ಕಥಕ್ ನೃತ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಜನಮನ ಸೆಳೆಯಿತು.
ಮೋಹಿತ್ ಗಂಗಾನಿಯವರು ತಬಲಾ, ವಿನೋದ್ ಕುಮಾರ್ ಅವರು ಹಾಡುಗಾರಿಕೆ ಮತ್ತು ಹಾರ್ಮೋನಿಯಂ, ಕಿಶೋರ್ ಕುಮಾರ್ ಮೃದಂಗ ಮತ್ತು ರವಿಶಂಕರ್ ಶರ್ಮಾ ಅವರು ಸಿತಾರ್ ವಾದನದಲ್ಲಿ ಸಹಕರಿಸಿದರು.
ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ , ಕಲಾ ಸಂಘದ ಸಂಯೋಜಕರಾದ ಶಶಾಂಕ್ ಪಟೇಲ್ ಉಪಸ್ಥಿತರಿದ್ದರು. ವಾಣಿಜ್ಯ ಉಪನ್ಯಾಸಕಿ ಸುಮಾ ಸ್ವಾಗತಿಸಿ ವಂದಿಸಿದರು.

ಬೈಂದೂರು ಕಥೊಲಿಕ್‌ ಸಭಾ, ಕುಂದಾಪುರ ವಲಯ ಕಥೊಲಿಕ್‌ ಸಭಾ ಮತ್ತು ಶೆವೊಟ್‌ ಪ್ರತಿಷ್ಠಾನ್‌ ಸಂಯುಕ್ತ ಆಶ್ರಯದಲ್ಲಿ “ಸೌರ್ಹಾದ ಕ್ರಿಸ್ಮಸ್‌”

ಬೈಂದೂರು: ಕಥೊಲಿಕ್‌ ಸಭಾ ಬೈಂದೂರು, ಕುಂದಾಪುರ ವಲಯ ಕಥೊಲಿಕ್‌ ಸಭಾ ಮತ್ತು ಶೆವೊಟ್‌ ಶ್ರತಿಷ್ಟಾನ್‌, ಸಿ.ಎಸ್‌.ಐ., ಕ್ರೈಸ್ತ ಸಮಿತಿ ಕುಂದಾಪುರ ಮತ್ತು ಪವಿತ್ರ ಶಿಲುಭೆಯ ಇಗರ್ಜಿ ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ, ಬೈಂದೂರು ಇಗರ್ಜಿಯ ಸಮುದಾಯ ಭವನದಲ್ಲಿ ಡಿ.೧೮ ರಂದು, ಕುಂದಾಪುರ ವಲಯ ಮಟ್ಟದಲ್ಲಿ “ಸೌರ್ಹಾದ ಕ್ರಿಸ್ಮಸ್‌” ಕಾರ್ಯಕ್ರಮ ಮತ್ತು ಶೆವೊಟ್‌ ಶ್ರತಿಷ್ಟಾನ್‌ ಇವರಿಂದ ಅಶಕ್ತರಿಗೆ ಸಹಾಯಧನ ವಿತರಣ ಕಾರ್ಯಕ್ರಮ ನಡೆಯಿತು.  

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ವಲಯ ಕಥೊಲಿಕ್‌ ಸಭಾದ ಅಧ್ಯಕ್ಷೆ ಶಾಂತಿ ಪಿರೇರಾ ವಹಿಸಿದ್ದರು. ಉಡುಪಿ ಧರ್ಮಪ್ರಾಂತ್ಯ ಅಂತರ್‌ ಧರ್ಮೀಯ ಸಂವಾದ ಆಯೋಗದ ನಿರ್ದೇಶಕರಾದ ವಂ| ಲೂಯಿಸ್‌ ಡೆ’ಸಾ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಬೈಂದೂರು ಇಗರ್ಜಿಯ ಧರ್ಮಗುರು ವಂ|ವಿನ್ಸೆಂಟ್‌ ಕುವೆಲ್ಗೊ, ಕ್ರಿಸ್ಮಸ್ ಸಂದೇಶ ನೀಡಿದರು. ಶಂಸುದ್ದಿನ್‌ ಬಳ್ಕುಂಜೆ ಶುಭಾಶಂಸನೆ ಮಾಡಿದರು. ಕುಂದಾಪುರ ವಲಯ ಪ್ರಧಾನ ಹಾಗೂ ಕುಂದಾಪುರ ವಲಯ ಕಥೊಲಿಕ್‌ ಸಭಾದ ಅಧ್ಯಾತ್ಮಿಕ ನಿರ್ದೇಶಕರಾದ  ಅ|ವಂ| ಸ್ಟ್ಯಾನಿ ತಾವ್ರೊ, ಪ್ರಗತಿಷರ ಚಿಂತಕರಾದ  ಡಾ|ಸುಬ್ರಮಣ್ಯ ಭಟ್‌ ಇವರುಗಳು ಸಂದೇಶ ನೀಡಿದರು.

ಕುಂದಾಪುರ ಸಿ,ಎಸ್‌.ಐ. ಕೃಪಾ ಚರ್ಚ್‌  ರೆ| ದಿಲನ್‌ ಚಕ್ರವರ್ತಿ ದಾಸ್‌,  ಬೈಂದೂರ್‌ ಸೈಂಟ್‌ ಥೋಮಸ್‌ ಶಾಲೆಯ ಪ್ರಿನ್ಸಿಪಾಲ್‌ ರೆ| ಜೇಸನ್‌ ನಲ್ಲಿವಿಲ್ಲಾ, ಕುಂದಾಪುರ ವಲಯ ಕಥೊಲಿಕ್‌ ಸಭಾದ ಪೂರ್ವಾಧ್ಯಕ್ಷೆ  ಮೇಬಲ್‌ ಡಿ’ಸೋಜಾ  ಬೈಂದೂರು ಪಾಲನ ಮಂಡಳಿ ಉಪಾಧ್ಯಕ್ಷ ಸ್ಟ್ಯಾನಿ ಡಾಯಸ್‌, ಕಥೊಲಿಕ್‌ ಸಭಾ ಕುಂದಾಪುರ ವಲಯ ಸಮಿತಿಯ ಕಾರ್ಯದರ್ಶಿ ಪ್ರೇಮಾ ಡಿ’ಕುನ್ಹಾ, ಕಾರ್ಯಕ್ರಮದ ಉಪಸಂಚಾಲಕ ಜೀವನ್‌ ಸಾಲಿನ್ಸ್‌ ಮತ್ತು ಇತರರು ಕಾರ್ಯಕ್ರಮದ ವೇದಿಕೆಯಲ್ಲಿದ್ದರು.

   ಈ ಸಂದರ್ಭದಲ್ಲಿ  ಸಮಾಜ  ಸೇವಕರಾದ  ಶೇಖ್‌ ಷಯಾಜ್‌ ಆಲಿ (ರಕ್ತದಾನ), ಪ್ರವೀಣ್ ಆಚಾರಿ (ಅಂಬುಲೆನ್ಸ್‌ ಸೇವೆ) ಆನಿ. ಮಿಲಿಯಾನ ಲೋಬೊ (ನರ್ಸ್‌, ಸರ್ಕಾರಿ ಆಸ್ಪತ್ರೆ ಬೈಂದೂರು) ಇವರುಗಳಿಗೆ ಸನ್ಮಾನಿಸಲಾಯಿತು.

   ಶೆಪೊಟ್‌ ಪ್ರತಿಷ್ಟಾನ್‌ (ರಿ.) ಕುಂದಾಪುರ ಇದರ ಅದ್ಯಕ್ ವಿನೋದ್‌ ಕ್ರಾಸ್ಟೊ ಇವರ ನೇತ್ರತ್ವದಲ್ಲಿ, ಕಥೊಲಿಕ್‌ ಸಭಾದ ಅಧ್ಯಾತ್ಮಿಕ ನಿರ್ದೇಶಕರಾದ  ಅ|ವಂ| ಸ್ಟ್ಯಾನಿ ತಾವ್ರೊ, ಸಮಾಜದ ಅಶಕ್ತರಿಗೆ ಸಹಾಯಧನವನ್ನು ವಿತರಣೆ ಮಾಡಿದರು.

   ಕಾರ್ಯಕ್ರಮದ ಸಂಚಾಲಕಿ ಜೊಸ್ಟಿನ್‌ ರೊಡ್ರಿಗಸ್‌ ವಂದಿಸಿದರು,  ದಿವ್ಯಾ ನಜ್ರೆತ್‌ ಮತ್ತು ಸಿರಿಲ್‌ ರೆಬೇರೊ ಕಾರ್ಯಕ್ರಮ ನಿರೂಪಿಸಿದರು.

ಜೇಸಿಐ ಕುಂದಾಪುರದ 49ನೇ ಅಧ್ಯಕ್ಷರಾಗಿ ಸುಧಾಕರ್ ಕಾಂಚನ್, ಕಾರ್ಯದರ್ಶಿಯಾಗಿ ರಾಕೇಶ್ ಶೆಟ್ಟಿ ಆಯ್ಕೆ

ಜೇಸಿಐ ಕುಂದಾಪುರದ 49ನೇ ಅಧ್ಯಕ್ಷರಾಗಿ ಸುಧಾಕರ್ ಕಾಂಚನ್ ಕಾರ್ಯದರ್ಶಿಯಾಗಿ ರಾಕೇಶ್ ಶೆಟ್ಟಿ ಆಯ್ಕೆ
ಜೇಸಿಐ ಕುಂದಾಪುರ ಘಟಕದ 49ನೇ ನೂತನ ಅಧ್ಯಕ್ಷರಾಗಿ ಜೇ.ಎಪ್.ಎಮ್.ಸುಧಾಕರ್ ಕಾಂಚನ್ ನಿಕಟಪೂರ್ವಧ್ಯಕ್ಷರಾಗಿ ಶ್ರೀಮತಿ ನಾಗರತ್ನ ಜಿ ಹೆರ್ಳೆ ಉಪಾಧ್ಯಕ್ಷರುಗಳಾಗಿ ಪ್ರವೀಣ್ ಎಮ್ , ಶ್ರೀಮತಿ ಶರ್ಮಿಳಾ ಕಾರಂತ್, ಚಂದನ್ ಗೌಡ , ಸುಬ್ರಮಣ್ಯ ಆಚಾರ್ಯ , ಶಶಿಧರ್ ಶೆಟ್ಟಿ ಆಯ್ಕೆಯಾಗಿರುತ್ತಾರೆ.
ಕಾರ್ಯದರ್ಶಿಯಾಗಿ ರಾಕೇಶ್ ಶೆಟ್ಟಿ ವಕ್ವಾಡಿ , ಜೊತೆ ಕಾರ್ಯದರ್ಶಿಯಾಗಿ ಚೇತನ್ ದೇವಾಡಿಗ , ಕೋಶಾಧಿಕಾರಿಯಾಗಿ ಧನುಷ್ ಕುಮಾರ್, ಜ್ಯೂನಿಯರ್ ಜೇ.ಸಿ ಅಧ್ಯಕ್ಷರಾಗಿ ಸತ್ಯನ್ ಎಸ್ ಕಾಂಚನ್ , ಮಹಿಳಾ ಜೇ.ಸಿ ಕೋ ಆರ್ಡಿನೇಟರ್ ಆಗಿ ಚಂದ್ರಾವತಿ ಸುಧಾಕರ್, ಘಟಕದ ನಿರ್ದೇಶಕರುಗಳಾಗಿ ಪ್ರದೀಪ್ ಹೆಗ್ಡೆ , ರವೀಶ್ ಮೋಗವಿರ , ಶ್ರೀಮತಿ ಪುಷ್ಪ ರತ್ನಾಕರ್ , ಶ್ರೀಮತಿ ಮಾಲತಿ ವಿಷ್ಣು , ಶ್ರೀಮತಿ ಲಕ್ಷ್ಮೀ ಡಿ. ಕೆ ಇವರನ್ನ ಆಯ್ಕೆಮಾಡಲಾಯಿತು
.

ಭಂಡಾರ್ಕಾರ್ಸ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರ 2022-23 ಡಿಸೆಂಬರ್23 ರಿಂದ ಡಿಸೆಂಬರ್29ರವರೆಗೆ, ಹಾಲಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೂರಿಲ್ಲಿ ನಡೆಯಲಿದೆ.

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರ 2022-23 ಡಿಸೆಂಬರ್23 ರಿಂದ ಡಿಸೆಂಬರ್29ರವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೂರಿ, ಹಾಲಾಡಿ ಎಂಬಲ್ಲಿ ನಡೆಯಲಿದೆ.
ಡಿಸೆಂಬರ್ 23ರಂದು ಶಿಬಿರದ ಉದ್ಘಾಟನಾ ನಡೆಯಲಿದೆ. ಶಿಬಿರವನ್ನು ಹಾಲಾಡಿ ಶ್ರೀನಿವಾಸ ಶೆಟ್ಟಿ ಶಾಸಕರು ಕುಂದಾಪುರ ಕ್ಷೇತ್ರ ಇವರು ಉದ್ಘಾಟಿಸಲಿದ್ದಾರೆ.
25ರಂದು ಕಸ್ತೂರಬಾ ಆಸ್ಪತ್ರೆ ಮಣಿಪಾಲ ಮತ್ತು ಹಾಲಾಡಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಲಯನ್ಸ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ಗ್ರಾಮಸ್ಥರಿಗೆ ನುರಿತ ವೈದ್ಯರಿಂದ ಬ್ರಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡಿಸೆಂಬರ್ 24,26,26,27,28ರಂದು ವಿವಿಧ ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಡಿಸೆಂಬರ್ 29ರಂದು ಶಿಬಿರ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ. ಸಂಘಟನೆ ಬಲಗೊಳಿಸಲು ಶ್ರಮವಹಿಸಬೇಕು:ರೋಝಿ ಜಾನ್‌

ಕುಂದಾಪುರ,ಡಿ20: “ಕರ್ನಾಟಕದ ಜನ ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೊಗೆಯುವ ಮನಸ್ಸಿನಲ್ಲಿದ್ದಾರೆ ಜನ ಬದಲಾವಣೆ ಬಯಸುತ್ತಿದ್ದಾರೆ. ಅದಕ್ಕಾಗಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಸಂಘಟನೆಯನ್ನು ಬಲಗೊಳಿಸಲು ಶ್ರಮವಹಿಸಬೇಕಾಗಿದೆ” ಎಂದು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಕಾರ್ಯದರ್ಶಿ ಝೋಝಿ  ಜಾನ್‌ ಹೇಳಿದರು.

ಅವರು ಇಲ್ಲಿನ ಆರ್‌.ಎನ್‌. ಶೆಟ್ಟಿ ಸಭಾಂಗಣದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಪಕ್ಷ ಸಂಘಟನೆ ಸಭೆಯಲ್ಲಿ ಮಾತನಾಡಿ ಕಾಂಗ್ರೆಸ್‌ ಪಕ್ಷದ ಎದುರು ಕಠಿಣ ಸವಾಲುಳಿದ್ದು ಎಲ್ಲವನ್ನೂ ಚುನಾವಣೆಯಲ್ಲಿಯಲ್ಲಿ ಗೆಲುಪು ಸಾಧಿಸುವ ಹೊಣೆಗಾರಿಕೆ ಇದೆ. ರಾಜ್ಯದಲ್ಲಿ ಕಾಂಗ್ರೆಸ್‌ ಜಯ ನಿಶ್ಚಿತವಾಗಿದೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಉಡುಪಿ ಜಿಲ್ಲಾ ಉಸ್ತುಪಾರಿ ಆರ್‌. ಧವನಾರಯಣ ಮಾತನಾಡಿ ಪಕ್ಷ ಸಂಘಟನೆಯಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು.ಎಂದರು.

ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್‌, ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಪ್ರಸನ್ನ ಕುಮಾರ್‌ ಶಟ್ಟಿ, ಕೋಟ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಂಕರ ಕುಂದರ್‌,  ಜಿಲ್ಲಾ ಕಾಂಗ್ರೆಸ್‌ ಪದಾಧಿಕಾರಿಗಳಾದ ಸತೀಶ್‌ ಕಿಣಿ ಬೆಳ್ವೆ, ಬಿ. ಹಿರಿಯಣ್ಣ, ಸದಾನಂದ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ಮುಸ್ತಾಕ್‌ ಅಹಮದ್‌ ಬೆಳ್ಳೆ, ಬಾಲಕೃಷ್ಣ ಪೂಜಾರಿ, ವಿಕಾಸ: ಹೆಗ್ಳ, ಮುರಳಿ ಶೆಟ್ಟಿ ಉಡುಪಿ, ಚುನಾವನೆಗೆ ಅರ್ಜಿ ಸಲ್ಲಿಸಿದ ದಿನೇಶ್‌ ಹೆಗ್ಡೆ ಎಂ., ಅಶೋಕ್‌ ಪೂಜಾರಿ ಬೀಜಾಡಿ, ಶ್ಯಾಮಲಾ ಭಂಡಾರಿ, ಕಿಶನ್‌ ಹೆಗ್ಡೆ ಕೆ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಯುವ ಕಾಂಗ್ರೆಸ್‌ ಅಧ್ಯಕ್ಷ ಇಚ್ಛಿತಾರ್ಥಶೆಟ್ಟಿ, ಸುನಿಲ್‌, ರಾಜ್ಯ ಯುವ ಕಾಂಗ್ರೆಸ್‌ ಕಾರ್ಯದರ್ಶಿ ಅಜಿತ್‌ ಕುಮಾರ ಶೆಟ್ಟಿ, ಜಿಲ್ಲಾ ಎನ್‌ಎಸ್‌ಯುಐ ಅಧ್ಯಕ್ಷ ಸೌರಭ್‌ ಬಲ್ಲಾಳ್‌, ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿ ಫಾರೂಕ್‌ ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ ಕೊಡವೂರು ಪ್ರಸ್ತಾವಿಸಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ ಕಾನ್ಶಕ್ಕಿ ಸ್ವಾಗತಿಸಿ, ಕಾರ್ಯದರ್ಶಿವಿನೋದ್‌ ಕ್ರಾಸ್ಟೊ ನಿರ್ವಹಿಸಿದರು

ಶ್ರೀನಿವಾಸಪುರ:ದಳಸನೂರು ರೇಷ್ಮೆ ಬೆಳೆಗಾರರ ಹಾಗು ರೈತರ ಸೇವಾಸಹಕಾರ ಸಂಘಕ್ಕೆ 12 ಮಂದಿ ನೂತನ ನಿರ್ದೆಶಕರು ಆಯ್ಕೆ

ಶ್ರೀನಿವಾಸಪುರ: ದಳಸನೂರು ರೇಷ್ಮೆ ಬೆಳೆಗಾರರ ಹಾಗು ರೈತರ ಸೇವಾಸಹಕಾರ ಸಂಘಕ್ಕೆ 12 ಮಂದಿ ನೂತನ ನಿರ್ದೆಶಕರು ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ದಳಸನೂರು ರೇಷ್ಮೆ ಬೆಳೆಗಾರರ ಸಹಕಾರರ ಸಂಘ ನಿ. ಆಡಳಿತ ಮಂಡಳಿಯ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಈ ಕೆಳಕಂಡಂತೆ ನಿರ್ದೆಶಕರು ಆಯ್ಕೆಯಾಗಿದ್ದಾರೆ. ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ದಳಸನೂರು ನಾಗಭೂಷಣ್ ರೆಡ್ಡಿ, ಒಳಗೇರನಹಳ್ಳಿ ಮುರಳಿ, ಚಿರುವನಹಳ್ಳಿ ರಾಮಕೃಷ್ಣಾರೆಡ್ಡಿ ಸಿ, ಗಾಂಡ್ಲಹಳ್ಳಿ ಬಿ.ಎಸ್ ಶಶಿಕುಮಾರ್, ಒಳಗೇರನಹಳ್ಳಿ ಶಿವಾರೆಡ್ಡಿ ಎಸ್, ಸಾಲಗಾರರ ಪರಿಶಿಷ್ಟ ಮೀಸಲು ಕ್ಷೇತ್ರದಿಂದ ಕೋನೇಟಿ ತಿಮ್ಮನಹಳ್ಳಿ ವೀರಪ್ಪ ಎಂ, ಸಾಲಗಾರರ ಹಿಂದುಳಿದ ಪ್ರ.ವರ್ಗ,ಎ ಮೀಸಲು ಕ್ಷೇತ್ರದಿಂದ ನೂಲುಪುರ ನಿಸಾರ್ ಅಹಮದ್, ಸಾಲಗಾರರ ಪ್ರ.ವರ್ಗ ಬಿ ಮೀಸಲು ಕ್ಷೇತ್ರದಿಂದ ದಳಸನೂರು ಎಸ್.ಜಿ ವೀರಬದ್ರ ಸ್ವಾಮಿ, ಸಾಲಗಾರರ ಮಹಿಳಾ ಮೀಸಲು ಕ್ಷೇತ್ರದಿಂದ ಕಾಡುದೇವಂಡಹಳ್ಳಿ ಮಂಜುಳಮ್ಮ, ಪಾಳ್ಯ ಗ್ರಾಮದ ಶ್ಯಾಮಲ, ಸಾಲಗಾರರಲ್ಲದ ಕ್ಷೇತ್ರದಿಂದ ಬಿಸನಹಳ್ಳಿ ಅಶ್ವಥ್ ನಾರಾಯಣಗೌಡ, ಹಾಗು ಪರಿಶಿಷ್ಠ ಪಂಗಡ ಕ್ಷೇತ್ರಕ್ಕೆ ಗುಮ್ಮರೆಡ್ಡಿ ಪುರ ಶ್ರೀರಾಮಪ್ಪ ನವರು ಒಂದೇ ನಾಮಪತ್ರ ಸಲ್ಲಿಸಿದ್ದು ಇವರು ಅವಿರೋದವಾಗಿ ಆಯ್ಕೆಯಾಗಿರುತ್ತಾರೆ ಇದರಲ್ಲಿ ಕಾಂಗ್ರೇಸ್ ಬೆಂಬಲಿತ ನಿರ್ದೆಶಕರಾಗಿ 11 ಮಂದಿ, ಜೆಡಿಎಸ್ ಬೆಂಬಲಿತ 1 ಸ್ಥಾನಗಳು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನೂತನ ನಿರ್ದೆಶಕರನ್ನು ಅಭಿನಂದಿಸಿ ಮಾತನಾಡಿದ ಮಾವು ಮಂಡಳಿ ಅಭಿವೃದ್ದಿ ಮಾಜಿ ಅದ್ಯಕ್ಷ ದಳಸನೂರು ಗೋಪಾಲಕೃಷ್ಣ ಮಾತನಾಡಿ ಈ ಚುನಾವಣೆಯಲ್ಲಿ ಒಟ್ಟು 12 ಸ್ಥಾನಗಳಿದ್ದು ಇದರಲ್ಲಿ 11 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಇದರಲ್ಲಿ ಸಾಮಾಜಿಕವಾಗಿ ಕಾಂಗ್ರೇಸ್ ಪಕ್ಷದ ವತಿಯಿಂದ ಎಲ್ಲಾ ಮುಖಂಡರ ತೀರ್ಮಾನದಿಂದ ಒಂದು ಸ್ಥಾನ ಜೆಡಿಎಸ್ ಪಕ್ಷದ ಸದಸ್ಯ ಶಿವಾರೆಡ್ಡಿ ಯವರಿಗೆ ಒಂದು ಸ್ಥಾನ ಬಿಟ್ಟುಕೊಟ್ಟು ಉಳಿದ 10 ಸ್ಥಾನಗಳನ್ನು ನಮ್ಮ ತಕ್ಕೆಗೆ ಪಡೆದಿದ್ದೇವೆ, ಅವಿರೋದವಾಗಿ ಆಯ್ಕೆಯಾದ ಶ್ರೀರಾಮಪ್ಪನವರು ಸೇರಿ ಒಟ್ಟು ಕಾಂಗ್ರೇಸ್ ಪಕ್ಷಕ್ಕೆ 11 ಸ್ಥಾನ ಗಳಿಸುವಲ್ಲಿ ಸಫಲರಾಗಿದ್ದೇವೆ, ರೈತರ ಹಿತಕ್ಕಾಗಿ ಸ್ಥಾಪನೆಯಾಗಿರುವ ಸಂಘದ ಶ್ರೇಯೋಭಿವೃದ್ದಿಗೆ ಎಲ್ಲಾ ನಿರ್ದೆಶಕರು ಜೊತೆಗೂಡಿ ಕೆಲಸ ಮಾಡಬೇಕು, ಈ ಚುನಾವಣೆಗೆ ಎಲ್ಲಾ ಸದಸ್ಯರು ಸಹಕಾರ ನೀಡಿದ್ದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸಹಕರಿಸಿ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಎಲ್ಲಾ ಮುಖಂಡರಿಗೂ ಕೃತಜ್ನತೆಗಳನ್ನು ತಿಳಿಸಿದರು.
ಈ ಚುನಾವಣೆಯನ್ನು ರಿಟರ್ನಿಂಗ್ ಅಧಿಕಾರಿ ಬಿ.ಆರ್ ಶಿವಶಂಕರ್, ಕಾರ್ಯನಿರ್ವಾಹಣಾಧಿಕಾರಿ ಶ್ರೀನಾಥ್, ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮುಖಂಡರಾದ ಬೀಮಗುಂಟಪಲ್ಲಿ ಶಿವಾರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ವಿ ಶ್ರೀನಿವಾಸ್, ಪಾಳ್ಯ ಗೋಪಾಲರೆಡ್ಡಿ, ಮಾಸ್ತೇನಹಳ್ಳಿ ಗ್ರಾ.ಪಂ ಅದ್ಯಕ್ಷ ರವಿಕುಮಾರ್, ಕಂಬಾಲಪಲ್ಲಿ ಶ್ರೀನಿವಾಸ್, ಗೊಲ್ಲಪಲ್ಲಿ ಪ್ರಸನ್ನ, ಆನಂದ್ ರೆಡ್ಡಿ, ರೇಲಿಂಗಿ ಶ್ರೀನಿವಾಸ್, ಅಂಬೇಡ್ಕರ್ ಪಾಳ್ಯ ರವಿ, ಜಗದೀಶ್, ಮೊಗಿಲಹಳ್ಳಿ ಮಣಿ, ಮುಂತಾದ ಮುಖಂಡರು ಹಾಜರಿದ್ದರು.

ಭಂಡಾರ್ಕಾರ್ಸ್:ಮಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಕರಾಟೆ ಚಾಂಪಿಯನ್ ಶಿಪ್

ಕುಂದಾಪುರ ಡಿಸೆಂಬರ್ 20ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಪುರುಷರ ಮತ್ತು ಮಹಿಳೆಯರ ಕರಾಟೆ ಚಾಂಪಿಯನ್ ಶಿಪ್ 2022-23 ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಂಡಾರ್ಕಾರ್ಸ್ ಪದವಿ ಕಾಲೇಜಿನ ವಿಶ್ವಸ್ಥರಾದ ಪ್ರಕಾಶ್ ಟಿ.ಸೋನ್ಸ್ ಅವರು ಸಾವಿರಾರು ಮಕ್ಕಳು ಕರಾಟೆಯಿಂದ ಶಿಸ್ತು ಕಲಿಯುತ್ತಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಪಡೆದ ಕರಾಟೆ ಪಟುಗಳಿಗೆ ವಿಶ್ವವಿದ್ಯಾಲಯದ ವತಿಯಿಂದ ಆರ್ಥಿಕ ನೆರವು ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಬ್ಲ್ಯಾಕ್ ಬೆಲ್ಟ್ 5ಡ್ಯಾನ್ ಸಂದೀಪ್ ಪೂಜಾರಿ ದಕ್ಷಿಣ ಕನ್ನಡ ಉಡುಪಿ ಕರಾಟೆ ಅಧ್ಯಕ್ಷ ಪ್ರವೀಣ್ ಕುಮಾರ್, ಮಂಗಳೂರು ವಿಶ್ವವಿದ್ಯಾಲಯ ಸಹಾಯಕ ದೈಹಿಕ ನಿರ್ದೇಶಕ ಹರಿದಾಸ್ ಕೂಳೂರು ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ದೈಹಿಕ ನಿರ್ದೇಶಕ ಶಂಕರನಾರಾಯಣ. ಕೆ ಸ್ವಾಗತಿಸಿದರು. ದೈಹಿಕ ನಿರ್ದೇಶಕಿ ವನಿತಾ ವಂದಿಸಿದರು. ವಿದ್ಯಾರ್ಥಿನಿ ಚಂದ್ರಿಕಾ ಕಾರ್ಯಕ್ರಮ ನಿರೂಪಿಸಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಸದಸ್ಯರ ಗಮನಕ್ಕೆ

ಕೋಲಾರ : ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಸದಸ್ಯರಿಗೆ 2022-23 ನೇ ಸಾಲಿನ ಯಶಸ್ವಿನಿ ಯೋಜನೆಯ ಪಲಾನುಭವಿಗಳಾಗಲು ಸಂಘದಿಂದ ವ್ಯವಸ್ಥೆ ಕಲ್ಪಿಸಲಾಗಿದೆ.
ಸಂಘದ ಷೇರುದಾರ ಸದಸ್ಯರು ಕುಟುಂಬದ ನಾಲ್ಕ ಮಂದಿಗೆ ಶುಲ್ಕ 500 ರೂಗಳಾಗಿರುತ್ತದೆ. ಒಂದು ಕುಟುಂಬದಲ್ಲಿ 10 ಸದಸ್ಯರಿಗೆ ಮಾತ್ರ ಅವಕಾಶವಿದ್ದು, ತಲಾ ಎರಡು ಭಾವಚಿತ್ರ, ಆಧಾರ್‌ಕಾರ್ಡ್, ರೇಷನ್ ಕಾರ್ಡ್ ಕಡ್ಡಾಯವಾಗಿದ್ದು, 4 ಸದಸ್ಯರಿಗಿಂತ ಹೆಚ್ಚುವರಿ ಸದಸ್ಯರು ಕುಟುಂಬದಲ್ಲಿ ನೊಂದಾಯಿಸಿಕೊಳ್ಳಲು ತಲಾ ಒಬ್ಬೊಬ್ಬರಿಗೆ 100 ರೂಗಳನ್ನು ಪಾವತಿಸಿ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಸದಸ್ಯರು ಜಾತಿ ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಸದಸ್ಯರಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಡಿ, 31 ಕೊನೆಯ ದಿನವಾಗಿದ್ದು, ಸದಸ್ಯರು ಯಶಸ್ವಿನಿ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಉಪಾಧ್ಯಕ್ಷ ಕೋ.ನಾ.ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಘದ ಕಾರ್ಯದರ್ಶಿ ಗಂಗಾಧರ್ ರವರನ್ನು 7353161040, 9110830279 ಸಂಪರ್ಕಿಸಬಹುದು.

ವಿದ್ಯಾ ಅಕಾಡೆಮಿ ಯಲ್ಲಿ ಎರಡನೇ ವರ್ಷದ ಕ್ರೀಡೋತ್ಸವ ಕಾರ್ಯಕ್ರಮವು ಸಂಭ್ರಮದಿಂದ ನೆರೆವೇರಿತು

ಕುಂದಾಪುರ, ಡಿಸೆಂಬರ್.17: ಐ.ಎಮ್. ಜೆ ವಿದ್ಯಾ ಸಂಸ್ಥೆಯ ಅಂಗ ಸಂಸ್ಥೆ ಆಗಿರುವ ವಿದ್ಯಾ ಅಕಾಡೆಮಿ ಯಲ್ಲಿ ಎರಡನೇ ವರ್ಷದ ಕ್ರೀಡೋತ್ಸವ ಕಾರ್ಯಕ್ರಮವು, ವಿದ್ಯಾರ್ಥಿಗಳು ಹಾಗೂ ಪೋಷಕರ ಉಪಸ್ಥಿತಿಯಲ್ಲಿ ಸಂಭ್ರಮದಿಂದ ನೆರೆವೇರಿತು.
ಈ ಕಾರ್ಯಾರಂಭವನ್ನು ಐ ಎಂ ಜೆ ವಿದ್ಯಾಸಂಸ್ಥೆಯ ನಿರ್ದೇಶಕರಾದ ಪ್ರೊ. ದೋಮ ಚಂದ್ರಶೇಖರ್ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು, ಉದ್ಘಾಟನಾ ಸಮಾರಂಭದಲ್ಲಿ ಎಂ ಐ ಟ ಕಾಲೇಜಿನ ಅಡ್ಮಿನಿಸ್ಟ್ರೇಷನ್ ಆಫೀಸರ್ ಶ್ರೀ ಪ್ರದೀಪ್ ಕುಮಾರ್, ಪಿ ರ್ ಓ ಶ್ರೀ ಸುಧೀರ್ ಹೆಗ್ಡೆ ಹಾಗೂ ದೈಹಿಕ ಶಿಕ್ಷಕ ಶ್ರೀ ಪ್ರವೀಣ್ ಖಾರ್ವಿ ಅವರು ಭಾಗವಹಿಸಿದ್ದರು,
ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ಮತ್ತು ಪೋಷಕರಿಗೆ ಹಗ್ಗ ಜಗ್ಗಾಟ, ಮ್ಯೂಸಿಕಲ್ ಚೇರ್ ನಂತಹ ಕ್ರೀಡೆಗಳು ಜರಗಿದವು, ವಿದ್ಯಾ ಅಕ್ಯಾಡೆಮಿ ಯಾ ಸಿಬ್ಬಂದಿವರ್ಗ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನೆರವೇರಿಸಿ ಕೊಟ್ಟರು.