ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಬೆಳ್ಳಿಹಬ್ಬ: ಉತ್ತಮ ನಾಗರಿಕನಾಗಲು ನೀಡುವ ಸಂಸ್ಕಾರವೆ ನಿಜವಾದ ಶಿಕ್ಷಣ- ಬಿಷಪ್ ಜೆರಾಲ್ಡ್ ಲೋಬೊ

ಕುಂದಾಪುರ, ಡಿ.17: ಉತ್ತಮ ನಾಗರಿಕನಾಗಲು ನೀಡುವ ಸಂಸ್ಕಾರವೆ ನಿಜವಾದ ಶಿಕ್ಷಣ. ನಮ್ಮ ಉಡುಪಿ ಧರ್ಮಪ್ರಾಂತ್ಯದಲ್ಲಿ ಒಟ್ಟು 67 ವಿಧ್ಯಾ ಸಂಸ್ಥೆಗಳನ್ನು ನಡೆಸಲಾಗುತ್ತದೆ, ನಮ್ಮ ಎಲ್ಲಾ ಸಂಸ್ಥೆಗಳಲ್ಲಿ ಒಂದೇ ಧ್ಯೇಯವಾಗಿದ್ದು, ಅದು ಉತ್ತಮ ಮೌಲ್ಯಗಳು ಮತ್ತು ಉತ್ತಮ ಗುಣಗಳನ್ನು ಬೆಳಸಿ ದೇಶಕ್ಕೆ ಉತ್ತಮ ನಾಗರಿಕರನ್ನು ಮಾಡುವ ಧ್ಯೇಯವಾಗಿರುತ್ತದೆ. ಜನರಲ್ಲಿ ಜ್ಞಾನದ ಕ್ರಾಂತಿಯನ್ನು ಉಂಟು ಮಾಡುವುದೆ ಉತ್ತಮ ಶಿಕ್ಷಣ’ ಎಂದು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅಭಿಪ್ರಾಯ ಪಟ್ಟರು.
ಅವರು ಕುಂದಾಪುರದ ಪ್ರತಿಷ್ಠಿತ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ರಜತ ಮಹೋತ್ಸವದ ಸಂಭ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಉಡುಪಿ ಧರ್ಮಪ್ರಾಂತ್ಯದ 67 ವಿಧ್ಯಾ ಸಂಸ್ಥೆಗಳ ಸಂಚಾಲಕರಾದ ಅವರು ‘ಶಿಕ್ಷಣ ಅಂದರೆ ಒದು ಬರಹ ಅಲ್ಲಾ, ಜ್ಞಾನ ಸಂಪಾದಿಸುವುದು ಕೂಡ ಅಲ್ಲಾ, ಬದಲಾಗಿ ಮಾನವನ ವಿಕಾಸ ಎಂದು ಸ್ವಾಮಿ ವಿವೇಕಾನಂದರ ಮಾತುಗಳನ್ನು ನೆನಪಿಸಿಕೊಂಡರು. ಶಿಕ್ಷಣ ಅಂದರೆ ಮಾನವನ ಅಧ್ಯಾತ್ಮಿಕ, ಬೌದ್ದಿಕ ಮತ್ತು ದೈಹಿಕ ಬೆಳವಣಿಗೆ ಮಾಡುವುದೇ ಶಿಕ್ಷಣ, ನಮ್ಮ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಮೌಲ್ಯಧಾರಿತ ಶಿಕ್ಷಣ ನೀಡುವುದಕ್ಕೆ ಮೊದಲ ಆಧ್ಯತೆ, ಇಲ್ಲಿನ ಅನೇಕ ಮಕ್ಕಳು, ಶಿಕ್ಷಣದಲ್ಲಿ ಮತ್ತು ಶಿಕ್ಷಣಕೇತರ ವಿಭಾಗಗಳಾದ ಆಟ ಪಾಠ, ಸಂಗೀತ, ನಾಟ್ಯ, ಕ್ರೀಡೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ, ಅಂದರೆ ಇಲ್ಲಿನ ಶಿಕ್ಷಣ ನೀಡುವ ಶಿಕ್ಷಕರ ಗುಣ ಮಟ್ಟ ಇದಕ್ಕೆ ಸಾಕ್ಶಿಯಾಗಿದೆ’ ಎನ್ನುತ್ತಾ ಇಲ್ಲಿನ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಿದ ಪೆÇೀಷಕರಿಗೆ ಅಭಿನಂದನೆ ಸಲ್ಲಿಸಿ, ಸಂಸ್ಥಾಪಕರನ್ನು, ಸಂಚಾಲಕರನ್ನು, ಮುಖ್ಯೋಪಾಧ್ಯಾನಿಯರನ್ನು, ಶಿಕ್ಷಕರನ್ನು, ಶಿಕ್ಷಕೇತರನ್ನು, ವಿದ್ಯಾರ್ಥಿಗಳನ್ನು ದಾನಿಗಳನ್ನು ಧನ್ಯವಾದ ಸಮರ್ಪಿಸಿ ಅಭಿನಂದನೆಗಳುನ್ನು ಸಲ್ಲಿಸಿದರು.
ಉಡುಪಿ ಧರ್ಮಪ್ರಾಂತ್ಯದ ವಿಧ್ಯಾಮಂಡಳಿಯ ಕಾರ್ಯದರ್ಶಿ ವಂ|ಧರ್ಮಗುರು ವಿನ್ಸೆಂಟ್ ಕ್ರಾಸ್ತಾ ಮಾತನಾಡಿ “ನಮ್ಮ ಶಾಲೆಗಳು ಉನ್ನತ ಮೌಲ್ಯವುಳ್ಳ ಶಿಕ್ಷಣ ನೀಡಲು ಶ್ರಮಿಸುತ್ತದೆ, ಕುಂದಾಪುರದ ಹ್ರದಯ ಭಾಗದಲ್ಲಿರುವ ಈ ಜಾಗದಲ್ಲಿ ವ್ಯಾಪರ ಮಳಿಗೆ ಕಟ್ಟಿದರೆ ಕುಂದಾಪುರ ಚರ್ಚಿಗೆ ಕೋಟಿ ಕಟ್ಟಲೆ ಲಾಭವಾಗುತಿತ್ತು, ಆದರೆ ಹಾಗೇ ಮಾಡಲಿಲ್ಲ, ಜನರಿಗೆ ವಿಧ್ಯೆ ನೀಡುವುದೇ ನಮ್ಮ ಕಥೊಲಿಕರ ಉದ್ದೇಶ, ಎಲ್ಲಿ ಒಂದು ಇಗರ್ಜಿ ಇದೆಯೋ ಅಲ್ಲಿ ಶಾಲೆ ಇರುತ್ತದೆ, ಕಾರಣ ಮನುಷ್ಯನ ವಿಕಾಸಕ್ಕೆ ಶಿಕ್ಷಣ ಮುಖ್ಯ ಎಂದು ತಿಳಿದು ಇದನ್ನು ನೂರಾರು ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ.
ಕುಂದಾಪುರದ ಬ್ಲಾಕ್ ಶಿಕ್ಷಣ ಅಧಿಕಾರಿ ಸಿ.ಎಸ್.ಕಾಂತಾರಾಜು ಮಾತನಾಡಿ “ರೋಜರಿ ಶಾಲೆ ಮತ್ತು ಸಂತ ಮೇರಿ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಮೌಲ್ಯಾಧಾರಿತ, ಉತ್ತಮ ಗುಣ ಮಟ್ಟದ ಶಿಕ್ಷಣ ನೀಡುವಲ್ಲಿ ಮಂಚೂಣಿಯಲ್ಲಿದ್ದಾರೆ, ಅವರ ಪ್ರೀತಿ ನಮಗೆ ಸಂತೋಷ ತಂದಿದೆ. ಮಾನವ ಸಹಿತ ಪಶು ಪಕ್ಷಿ ಇವುಗಳೆಲ್ಲವೂ ವಿಕಾಸಭರಿತರಾಗಬೇಕು, ಅದರಲ್ಲಿಯೂ ನಾವು ಮಾನವೀಯ ಗುಣಗಳನ್ನು ತಮ್ಮದಾಗಿಸಿಕೊಳ್ಳಬೇಕು, ಮೊದಲು ಸಂಸ್ಕಾರ ಕಲಿಯಬೇಕು, ಮಗು ಉದ್ದಟತನ ಪ್ರದರ್ಶಿಸಿದರೆ ಮನೆಯಲ್ಲಿ ಹೆತ್ತವರು ನಿನಗೆ ಗುರುಗಳು ಇದನ್ನೆ ಕಲಿಸಿದರೊ ಎಂದು ಕೇಳುತ್ತಾರೆ. ಶಿಕ್ಷಕ ನಿನಗೆ ಮನೆಯಲ್ಲಿ ಇದನ್ನೆ ಕಲಿಸಿದ್ದೊ ಎಂದು ಕೇಳುತ್ತಾರೆ. ಅದಕ್ಕೆ ನಾವು ಮೊದಲು ಮಾನವರಾಗೋಣ” ಎಂದು ತಿಳಿಸಿದರು.

ಮುಖ್ಯ ಅತಿಥಿ ಲಿಟಲ್ ರೋಕ್ ಆಂಗ್ಲ ಮಾಧ್ಯಮ ಶಾಲೆಯ ನಿರ್ದೇಶಕರಾದ ಪೆÇ್ರ.ಮಥ್ಯೂ ಸಿ. ನಿನಯ್ನ್ “ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಆಗುತ್ತಿದೆ, ನಮ್ಮಲ್ಲಿ ಉತ್ತಮ ವಿದ್ಯಾಭಾಷ ಸಿಗುವುದಿಲ್ಲವೆಂದು, ಭಾರತೀಯರು ವಿದೇಶಕ್ಕೆ ತೆರಳುತಿದ್ದಾರೆ, ಹಿಗಾಗಿ ಭಾರತದವರು ಮಿಲಿಯಾಕಟ್ಟಲೆ ಹಣ ವಿದೇಶದ ಪಾಲಾಗುತದೆ ಮತ್ತು ಅವರಲ್ಲಿ ಹೆಚ್ಚಿನವರು ಆಲ್ಲಿಯೆ ನೆಲೆ ನಿಲ್ಲುತ್ತಾರೆ ಅಲ್ಲದೆ ಭಾರತೀಯರು ಕೆಲಸಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ, ಹೀಗಾಗಿ ಒಳ್ಳೆಯ ಮೆದುಳುಗಳು ವಿದೇಶದ ಪಾಲಾಗುತ್ತವೆ” ಎಂದು ಹೇಳಿದರು.
ಶಾಲೆಯ ಸಂಸ್ಥಾಪಕರಾದ ಅ|ವಂ|ಸ್ಟ್ಯಾನಿ ಬಿ.ಲೋಬೊರವರನ್ನು ಸನ್ಮಾನಿಸಲಾಯಿತು. ಅವರು ಶುಭ ಕೊರೀದರು. ಮಾಜಿ ಸಂಚಾಲಕರಾದ ಧರ್ಮಗುರು ವಂ|ಅನಿಲ್ ಡಿಸೋಜಾ, ಮಾಜಿ ಮುಖ್ಯೋಪಾಧ್ಯಾಯಿನಿಯರನ್ನು, ಹಾಲಿ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜಾ ಶಾಂತಿ, ಸಂತ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸಂಗೀತ, ಮಾಜಿ ಮತ್ತು ಹಾಲಿ ಶಿಕ್ಷಕರನ್ನು, ಅತಿಥಿಗಳನ್ನು ಉತ್ತಮ ಸಾಧನೆಗೈದ ವಿಧ್ಯಾರ್ಥಿಗಳನ್ನು ದಾನಿ ಐವನ್ ಡಿಆಲ್ಮೇಡಾ ಮತ್ತಿತರನ್ನು ಸನ್ಮಾನಿಸಲಾಯಿತು.
ಶಿಕ್ಷಕರಾದ ಪ್ರೀತಿ ಆಂದ್ರಾದೆ,ಪ್ರತಿಮಾ, ರಮ್ಯಾ ಹೆಗ್ಡೆ, ಸಿಸ್ಟರ್ ಸುನೀತಾ,ನಿಮಿಷಾ ಗೊನ್ಸಾಲ್ವಿಸ್, ರಮ್ಯಾ, ವಿಧ್ಯಾ, ಪ್ರತಿಮಾ ಶೆಟ್ಟಿ,ನಿಖಿತಾ ಶೆಟ್ಟಿ, ರಂಜಿತಾ, ರತ್ನಾಕರ ಶೆಟ್ಟಿ, ಪ್ರಶಾಂತ್ ರೇಬೆರೊ,ಒರನ್ ಡಿಸೋಜಾ, ಶಿಕ್ಷೇತರ ಸಿಬಂದಿ ಸುನೀತಾ ಡಿಸೋಜಾ ಕಾರ್ಯಕ್ರಮದಲ್ಲಿ ಪರಿಚಯ ಸನ್ಮಾನ ಕಾರ್ಯಕ್ರಮದಲ್ಲಿ ಸಹಕರಿಸಿದರು.
ವೇದಿಕೆಯಲ್ಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ, ಪುರಸಭೆ ಸದಸ್ಯ ಪ್ರಭಾಕರ, ಎಸ್.ಪಿ.ಎಲ್. ಹಳೆ ವಿದ್ಯಾರ್ಥಿ ಸಂಘದ ನಾಯಕ ಉಪಸ್ಥಿತರಿದ್ದರು.
ರೋಜರಿ ಚರ್ಚಿನ ಪ್ರಧಾನ ಧರ್ಮಗುರು, ಶಾಲ ಜಂಟಿ ಕಾರ್ಯದರ್ಶಿ ಅ|ವಂ|ಸ್ಟ್ಯಾನಿ ತಾವ್ರೊ ಸ್ವಾಗತಿಸಿದರು, ಶಿಕ್ಷಕಿ ನೀತಾ ಡಿಸೋಜಾ ವಂದಿಸಿದರು, ಶಿಕ್ಷಕಿ ಸೆಲಿನ್ ಡಿಸೋಜಾ ಮತ್ತು ವಿದ್ಯಾರ್ಥಿಗಳಾದ ಹೇವಿನ್ ಕೋತಾ ಮತ್ತು ದಿಕ್ಷೀತಾ ನಿರೂಪಿಸಿದರು.
ಸಂಭ್ರಮದ ಮೊದಲ ದಿನ ಬಹುಮಾನ ವಿತರಣ ಕಾರ್ಯಕ್ರಮ ನಡೆಯಿತು. ಅ|ವಂ|ಸ್ಟ್ಯಾನಿ ತಾವ್ರೊ ವಹಿಸಿದ್ದು, ಮುಖ್ಯ ಅತಿಥಿಯಾಯಾಗಿ ಅಕೀಲೇಶ್ ಚಾರ್ಟೆಟ್ ಅಂಕ್ವಾಟೆಂಡ್ ಅವರು ತನ್ನ ತಂದೆಯ ಹೆಸರಿನಲ್ಲಿ ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ನೀಡಲು ದೇಣಿಗೆ ನೀಡಿದರು. ಜೊನ್ಸನ್ ಡಿಆಲ್ಮೇಡಾ ಮತ್ತು ವಡೇರ್ ಹೋಬಳಿ ಕ್ಲಸ್ಟರ್ ವಿಭಾಗದ ಸಂಪನ್ಮೂಲ ವ್ಯಕ್ತಿ ಶಂಕರ ಶೆಟ್ಟಿ ಅತಿಥಿಗಳಾಗಿದ್ದರು. ಅತಿಥಿ ಮತ್ತು ವಿದ್ಯಾರ್ಥಿ ಸಾಧಕರನ್ನು ಸನ್ಮಾನಿಸಲಾಯಿತು.

ಮೂಲಭೂತ ಸೌಲಭ್ಯ ಒದಗಿಸಲು ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯ ಖಂಡನೆ ವಿವಿಧ ಸಂಘಟನೆಗಳಿಂದ ಕೋಲಾರ ಬಂದ್-ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ

ಕೋಲಾರ ಬಂದ್ ಕರೆ ಹಿನ್ನಲೆಯಲ್ಲಿ ನಗರದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರು ಬೈಕ್ ರ್ಯಾಲಿ ನಡೆಸಿ ಅಂಗಡಿಗಳನ್ನು ಮುಚ್ಚಿಸಿದರು.

ಕೋಲಾರ:- ಸಾರ್ವಜನಿಕರಿಗೆ ಅಗತ್ಯ ಮೂಲ ಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿರುವ ಜಿಲ್ಲಾಡಳಿತದ ವಿರುದ್ದ ಪ್ರಗತಿಪರ ಸಂಘಟನೆಗಳು ಇಂದು ಕೋಲಾರ ಬಂದ್ ನಡೆಸಿ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದರು.
ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದಲೇ ಬಂದ್ ಯಶಸ್ಸಿಗಾಗಿ ಬೈಕ್ ರ್ಯಾಲಿ ನಡೆಸಿದ ಸಂಘಟಕರು, ನಗರದಾದ್ಯಂತ ಸಂಚರಿಸಿ ಬಂದ್‍ಗೆ ಬೆಂಬಲ ಕೋರಿದರು.
ಈ ಹಿನ್ನಲೆಯಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಚಿತ್ರಮಂದಿರ,ಹೋಟೆಲ್ ಬಂದ್ ಆಗಿದ್ದು, ಬಸ್ ಸಂಚಾರ ಕೆಲವೊತ್ತು ನಿಂತಿತ್ತಾದರೂ ನಂತರ ಸಹಜ ಸ್ಥಿತಿಗೆ ಬಂತು. ಆಟೋ ಸಂಚಾರ ಯಥಾಸ್ಥಿತಿಯಲ್ಲಿತ್ತು.
ನಗರದ ವಿವಿಧ ಪ್ರದೇಶಗಳಲ್ಲಿ ವರ್ತಕರು, ಸಂಘ ಸಂಸ್ಥೆಗಳು ಸ್ವಯಂಪ್ರೇರಿತರಾಗಿ ಸಹಕಾರ ನೀಡುವ ಮೂಲಕ ಬಂದ್ ಬೆಂಬಲಿಸಿದ್ದು ವಿಶೇಷವಾಗಿತ್ತು.


ಸಾರಿಗೆ ಡಿಪೋಗೆ ಪೊಲೀಸ್ ಬಂದೋಬಸ್ತ್


ಬೆಳಗ್ಗೆ ಸಾರಿಗೆ ಸಂಸ್ಥೆಯ ಡಿಪೋಗೆ ನುಗ್ಗಲು ಯತ್ನಿಸಿದ ಪ್ರಗರಿಪರ ಸಂಘಟನೆಗಳ ಮುಖಂಡರ ಪ್ರಯತ್ನವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ನೇತೃತ್ವದಲ್ಲಿ ಪೊಲೀಸರು ವಿಫಲಗೊಳಿಸಿ ಕಳುಹಿಸಿದರು. ಬೆಳಗ್ಗೆ 11 ಗಂಟೆಯವರೆಗೂ ಬಸ್ ಸಂಚಾರ ನಿಂತಿತ್ತಾದರೂ ನಂತರ ನಿಧಾನವಾಗಿ ಆರಂಭಗೊಂಡಿತು.
ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ತಡೆಯೊಡ್ಡಿದ ಪ್ರತಿಭಟನಾಕಾರರು ಕೆಲವು ಕಡೆ ತೆರೆದಿದ್ದ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸುವ ಕೆಲಸವನ್ನೂ ಮಾಡಿದರು.


ಹಳ್ಳಕೊಳ್ಳಗಳ ರಸ್ತೆ-ಆಕ್ರೋಷ


ಬೈಕ್ ರ್ಯಾಲಿ ನಂತರ ಬಸ್ ನಿಲ್ದಾಣ ವೃತ್ತದಲ್ಲಿ ರಸ್ತೆ ಬಂದ್ ಮಾಡಿ ಮಾತನಾಡಿದ ಪ್ರಗತಿಪರ ಸಂಘಟನೆಗಳ ಮುಖಂಡ ಹೊಳಲಿ ಪ್ರಕಾಶ್, ನಗರದಲ್ಲಿ ಪ್ರಮುಖ ಎರಡು ರಸ್ತೆಗಳು ಹೊರತು ಪಡಿಸಿ ಯಾವೂದೇ ರಸ್ತೆಗಳು ಸಂಚರಿಸಲು ಯೋಗ್ಯವಾಗಿಲ್ಲ. ಸಮರ್ಪಕವಾದ ಚರಂಡಿಗಳಿಲ್ಲ, ಸ್ವಚ್ಚತೆ ಇಲ್ಲ, ಬೀದಿ ದೀಪಗಳಿಲ್ಲ. ಕೆ.ಸಿ.ವ್ಯಾಲಿ ನೀರು ಮೂರನೆ ಹಂತದ ಸಂಸ್ಕರಣೆ ಇಲ್ಲ, ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಾದ ಮೂಲಭೂತಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತ ವಿಫಲವಾಗಿದೆ, ಮನವಿಸಲ್ಲಿಸಿದರೂ ಪ್ರಯೋಜನವಾಗಿಲ್ಲ ಈ ಹಿನ್ನಲೆಯಲ್ಲಿ ಬಂದ್ ಅನಿವಾರ್ಯವಾಯಿತು ಎಂದರು.
ಜಿಲ್ಲಾಡಳಿತವು ಪೊಲೀಸರನ್ನು ಮುಂದೆ ಮಾಡಿ ಕೊಂಡು ಪ್ರತಿಭಟನಕಾರರನ್ನು ಬೆದರಿಸುವ ತಂತ್ರ ನಡೆಸಿದೆ ಆದರೆ ನಗರದ ಜನತೆ ಸ್ವಯಂಪ್ರೇರಿತರಾಗಿ ಬೆಂಬಲ ನೀಡಿದ್ದಾರೆ, ನಮ್ಮ ಹೋರಾವು ಅಭಿವೃದ್ದಿ ಪರವಾಗಿದೆ ಹೊರತು ಯಾರದೆ ವೈಯುಕ್ತಿಕ ವಿಷಯಗಳಿಗೆ, ಯಾರಿಗೂ ಲಾಭ ಮಾಡಿ ಕೊಡುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಉದ್ಘಾಟನೆ ಮಾಡಿದ ಒಂದೇ ವಾರಕ್ಕೆ ಲಿಫ್ಟ್ ಕೆಟ್ಟಿತು, ಶೌಚಾಲಗಳು ಬೀಗ ಜಡಿದಿದ್ದವು, ಕುಡಿಯುವ ನೀರಿನ ಅವ್ಯವಸ್ಥೆಗಳಿತ್ತು, ಜಿಲ್ಲಾ ಕಚೇರಿಗೆ ಸಮರ್ಪಕವಾದ ಸಾರಿಗೆ ವ್ಯವಸ್ಥೆ ಇಲ್ಲ, ಇಷ್ಟೆಲ್ಲ ಅವ್ಯವಸ್ಥೆಗಳಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದ ಜಿಲ್ಲಾಡಳಿತ ಇನ್ನು ಎಷ್ಟು ಮಾತ್ರ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲಿದೆ ಎಂದು ಕಿಡಿಕಾರಿದರು.
ಯಾವುದೇ ಅಹಿತಕರ ಘಟನೆಗೆ ಅವಕಾಶವಿಲ್ಲದಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಿ.ದೇವರಾಜ್ ನೇತೃತ್ವದಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪ್ರತಿಭಟನೆಯಲ್ಲಿ ಜೆ.ಡಿ.ಎಸ್ ಮುಖಂಡ ಸಿ.ಎಂ.ಆರ್. ಶ್ರೀನಾಥ್, ಬಣಕನಹಳ್ಳಿ ನಟರಾಜ್, ಕುರುಬರಪೇಟೆ ವೆಂಕಟೇಶ್, ದಲಿತ್ ನಾರಾಯಣಸ್ವಾಮಿ, ರೈತ ಮುಖಂಡ ಅಬ್ಬಣಿ ಶಿವಪ್ಪ, ನಾರಾಯಣಗೌಡ, ಸದಾನಂದ, ನಾಗಭೂಷಣ್, ಟಿಪ್ಪುಸೆಕ್ಯುಲರ್ ಸೇನೆ ಆಸೀಫ್. ಕನ್ನಡಮಿತ್ರ ವೆಂಕಟಪ್ಪ, ಕಲ್ವಮಂಜಲಿ ರಾಮು ಶಿವಣ್ಣ, ಅಲ್ಪಸಂಖ್ಯಾತರ ಯುವ ಮುಖಂಡ ಇಮ್ರಾನ್, ರೋಟರಿ ಗೋಪಾಲ್. ಅಡುಗೆ ಸಂಘಟನೆಯ ರಮೇಶ್ ಮತ್ತಿತರರು ಹಾಜರಿದ್ದರು.

ಕೋಲಾರ ಬಂದ್ ಕರೆ ಹಿನ್ನಲೆಯಲ್ಲಿ ಸಂಘಟಕರು ನಗರದ ಸಾರಿಗೆ ಸಂಸ್ಥೆ ಡಿಪೋಗೆ ನುಗ್ಗಲು ಯತ್ನಿಸಿದಾಗ ಎಸ್ಪಿ ಡಿ.ದೇವರಾಜ್ ಸ್ವತಃ ಮುಂದಾಳತ್ವ ವಹಿಸಿ ಹೋರಾಟಗಾರರನ್ನು ಅಲ್ಲಿಂದ ವಾಪಸ್ಸು ಕಳುಹಿಸಿದರು.
;ಕೋಲಾರ ಬಂದ್ ಕರೆ ಹಿನ್ನಲೆಯಲ್ಲಿ ನಗರದ ಬಸ್ ನಿಲ್ದಾಣದ ಸಮೀಪ ತೆರೆದಿದ್ದ ಹೋಟೆಲ್ ಒಂದನ್ನು ಪ್ರತಿಭಟನಾಕಾರರು ಬಲವಂತವಾಗಿ ಮುಚ್ಚಿಸಿದ್ದು, ಮಾತಿನ ಚಕಮಕಿಗೂ ಕಾರಣವಾಯಿತು.

ಯೇಸು ಶಾಂತಿ ಸಮಾಧಾನಕ್ಕಾಗಿ ಶ್ರಮಿಸಲಿಕ್ಕೆ ನಮಗೆಲ್ಲರಿಗೂ ಅಹ್ವಾನ ನೀಡಿದ್ದಾರೆ -ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ

ಉಡುಪಿ: ‘ಗೋದಲಿ ಅಂದರೆ ಶಾಂತಿ ಸಮಾಧಾನದ ಸಂದೇಶ, ಗೋದಲಿ ಅಂದರೆ ಭೂಮಿ ಮತ್ತು ಸ್ವರ್ಗದ ಮಿಲನ, ಶಾಂತಿ ಸಮಾಧಾನಕ್ಕಾಗಿ ಶ್ರಮಿಸಲಿಕ್ಕೆ ಯೇಸು ಅಹ್ವಾನ ನಮಗೆಲ್ಲರಿಗೂ ನೀಡಿದ್ದಾರೆ’ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ತಿಳಿಸಿದರು.
ಅವರು ಡಿ.16 ರಂದು ಉಡುಪಿ ಶೋಕಮಾತಾ ದೇವಾಲಯದ ಸಭಾಂಗಣದಲ್ಲಿ ಧರ್ಮಪ್ರಾಂತ್ಯದ ವತಿಯಿಂದ ಆಯೋಜಿಸಿದ ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ಮಸ್ ಸ್ನೇಹಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಕ್ರಿಸ್ಮಸ್ ಸಂದರ್ಭದಲ್ಲಿ ಎಲ್ಲೆಡೆಯೂ ಗೋದಲಿಗಳು ಕಾಣುತ್ತವೆ, ಗೋದಲಿಯಲ್ಲಿ ಏನಿದೆ, ಅಲ್ಲಿ ಪುಟ್ಟ ಶಿಸುವಿದೆ, ಅವರ ಸುತ್ತಮುತ್ತ ಕುರಿಗಳು ಪಶುಗಳಿದ್ದಾವೆ, ಸಮಾಜದಲ್ಲಿ ಹಿಂದುಳಿದ ಕುರುಬರಿದ್ದಾರೆ, ಇನ್ನೊಂದೆಡೆ ಜ್ಞಾನಿಗಳು, ಅರಸರು ಇದ್ದಾರೆ. ಅಂದರೆ ಭೂಮಿ ಮತ್ತು ಸ್ವರ್ಗದ ಒಂದು ಮಿಲನ ಅಲ್ಲಿ ಆಗಿದೆ. ದೇವರ ಒಬ್ಬನೇ ಪುತ್ರ ಯೇಸು ಪುಟ್ಟ ಕಂದನಾಗಿ ಧರೆಗಿಳಿದಿದ್ದಾನೆ, ಯೇಸು ನಮಗಾಗಿ ಶಿಲುಭೆಯ ಮೇಲೆ ಪ್ರಾಣ ತೆತ್ತು, ಪ್ರೀತಿ ಏನೆಂದು ತೋರಿಸಿಕೊಟ್ಟರು. ಎಲ್ಲರೂ ಪ್ರೀತಿ ಸಮಾಧಾನದಿಂದ ಸಹಬಾಳ್ವೆ ನಡೆಸೋಣ’ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಶರ್ಮಿಳಾ ಅವರು ಮಾತನಾಡಿ, ಪತ್ರಕರ್ತರು ಸಮಾಜದ ಕಣ್ಣುಗಳು, ಕಾರ್ಯಕ್ರಮಗಳು ನಡೆದರೆ ಸಾಲದು, ಅದನ್ನು ಇತರರಿಗೆ ತಿಳಿಸುವ ಅತ್ಯಂತ ಜವಾಬ್ದಾರಿಯುತ ಕರ್ತವ್ಯ ಪತ್ರಕರ್ತರವರದಾಗಿದೆ. ಕ್ರಿಸ್ಮಸ್ ಹಬ್ಬ ಶಾಂತಿ ಮತ್ತು ಪ್ರೀತಿಯ ಸಂದೇಶವನ್ನು ಜಗತ್ತಿಗೆ ಸಾರಿದೆ. ಯೇಸು ಕ್ರಿಸ್ತರು ನೀಡಿದ ಸಂದೇಶದಂತೆ ಬಾಳಲು ಪ್ರತಿಯೊಬ್ಬರು ಪ್ರಯತ್ನಿಸೋಣ ಎಂದರು.
ಉಡುಪಿ ಜಿಲ್ಲಾ ವಾರ್ತಾಧಿಕಾರಿ ಬಿ ಮಂಜುನಾಥ್ ಸಮಾಜಕ್ಕೆ ಸಹಬಾಳ್ವೆಗೆ ಹಾನಿಯುಂಟಾಗುವಂತಹ ಸಂದೇಶಗಳು ಬರುತ್ತಾ ಇರುತ್ತವೆ, ಆದರೆ ನಾವು ಸಹಬಾಳ್ವೆಗೆ ಆಧ್ಯತೆ ನೀಡಿ ಮಾನವಾರಾಗಿ ಬದುಕಲು ಪ್ರಯತ್ನ ಪಡೋಣ’ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಮಾತಾನಾಡಿ ‘ಸಮಾಜದಲ್ಲಿ ಶಾಂತಿ ಸಮಾಧಾನ ಕೆಡಿಸುವಂತಹ ಪ್ರಯತ್ನ ಆಗುತ್ತದೆ, ಆದರೆ ನಾವು ಅಂತವರಿಗೆ ಸಹಕರಿಸುವುದು ಬೇಡ, ಶಾಂತಿ ಪ್ರೀತಿಯಿಂದ ಬದುಕೋಣ’ ಎಂದರು. ಉಡುಪಿ ಪತ್ರಿಕಾ ಭವನದ ನೂತನ ಸಂಚಾಲಕ ಹಾಗೂ ಸಹ ಸಂಚಾಲಕರಾದ ಅಜಿತ್ ಆರಾಡಿ ಮತ್ತು ಅಂಕಿತ್ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಧರ್ಮಪ್ರಾಂತ್ಯದ ಕುಲಪತಿ ವಂ|ರೋಶನ್ ಡಿ’ಸೋಜಾ, ಮಿಲಾಗ್ರಿಸ್ ಕ್ಯಾಥೆಡ್ರಲ್ ನ ರೆಕ್ಟರ್ ವಂ|ವಲೇರಿಯನ್ ಮೆಂಡೊನ್ಸಾ ಮತ್ತು ಉಡುಪಿ ಜಿಲ್ಲೆಯ ಪತ್ರಕರ್ತರು ಉಪಸ್ಥಿತರಿದ್ದರು.
ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಸ್ವಾಗತಿಸಿ, ಮಾಧ್ಯಮ ಸಂಯೋಜಕ ಮೈಕಲ್ ರೊಡ್ರಿಗಸ್ ವಂದಿಸಿದರು. ಉಜ್ವಾಡ್ ಪತ್ರಿಕೆಯ ಸಂಪಾದಕ ವಂ|ರೊಯ್ಸನ್ ಫೆನಾರ್ಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಫೇಡರಲ್ ಬ್ಯಾಂಕ್ ಸಹಕಾರ ನೀಡಿತ್ತು.

ಸಂತ ಮೇರಿ ಮಹಾವಿದ್ಯಾಲಯ ಶಿರ್ವದಲ್ಲಿ ‘ರಾಷ್ಟ್ರೀಯ ಭೂ-ಯುವಸೇನಾ ತರಬೇತಿ ಶಿಬಿರ’


ಶಿರ್ವ: ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಕಮಾಂಡಿಂಗ್ ಆಫೀಸರ್ ಕರ್ನಲ್ ಆರ್ ಕೆ ಸಿಂಗ್ ಅವರ ಮಾರ್ಗದರ್ಶನದಲ್ಲಿ ಒಂದು ದಿನದ ಶಸ್ತ್ರ ತರಬೇತಿ ಶಿಬಿರವು ಏರ್ಪಡಿಸಲಾಯಿತು.
ಶಸ್ತ್ರಾಸ್ತ್ರ ಕಲಿಕೆ ಒಂದು ಸುವರ್ಣ ಅವಕಾಶ , ಇದು ಎಲ್ಲಾ ವಿದ್ಯಾರ್ಥಿಗಳಿಗೆ ಸಿಗುವುದಿಲ್ಲ ಕೆಡೆಟ್ಗಳು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು
ಕಾಲೇಜಿನ ಪ್ರಾಂಶುಪಾಲ ಡಾ!ಹೆರಾಲ್ಡ್ ಐವನ್ ಮೋನಿಸ್ ರವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಾರ್ಕಳದ ಪೊಲೀಸ್ ಫೈರ್ ರೇಂಜ್ ಅಲ್ಲಿ ನಡೆದಂತ ಫೈರಿಂಗ್ ತರಬೇತಿಯಲ್ಲಿ ಭಾಗವಹಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ ಕಂಪನಿ ಸಾರ್ಜೆಂಟ್ ಕ್ವಾಟರ್ ಮಾಸ್ಟರ್ ಆಶಿಶ್ ಪ್ರಸಾದ್, ಕಾರ್ಪೊರಲ್ ರಿಯಾ ಸೇರಿನಾ ಡಿಸೋಜಾ ,ಕ್ಯಾಡೆಟ್ ಗಳಾದ ಪೂಜಾ, ಹುಳಿದ್ರ ಖುಷಿ, ಲಾಯ್ ವಿನ್ಸ್ಟನ್ ಫರ್ನಾಂಡಿಸ್ ರವರನ್ನು ಅಭಿನಂದಿಸಲಾಯಿತು.

ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ರವರು ಶಸ್ತ್ರಾಸ್ತ್ರವನ್ನು ಹೇಗೆ ನಿರ್ವಹಣೆ ಮಾಡಬಹುದೆಂದು ಪ್ರತಿಯೊಬ್ಬ ಕ್ಯಾಡೆಟ್‍ಗಳು ಪ್ರತ್ಯಕ್ಷವಾಗಿ ಅನುಭವ ಪಡೆದುಕೊಳ್ಳುವುದು ಅತೀ ಅಗತ್ಯ, ಮುಂದೆ ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ಹಾಗೂ ವಿವಿಧ ಉದ್ಯೋಗಾವಕಾಶಗಳಿಗೆ ಇದು ಸಹಕಾರಿ ಎಂದು ಮಾತನಾಡಿದರು
ಲ್ಯಾನ್ಸ್ ಕಾರ್ಪೋರಲ್ ಶೆಟ್ಟಿಗಾರ ಹೇಮಶ್ರೀ ಸುದರ್ಶನ್ ತರಬೇತಿನ ಮುಖ್ಯ ಉದ್ದೇಶ ಮತ್ತು ಪ್ರಯೋಜನವನ್ನು ತಿಳಿಸಿ ಪ್ರಾಸ್ತವಿಕವಾಗಿ

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ ಉಡುಪಿ ಘಟಕದ ಬಿಎಚ್‌ಎಂ ಮಹೇಂದ್ರ ಲಿಂಬು,ಹವಾಲ್ದಾರ್ ಪೆಶಲ್ ಬಿಡಿಆರ್ ತಮಾಂಗ್ , ಭೂ-ಯುವ ಸೇನಾದಳದ ಕೆಡೆಟ್‍ಗಳನ್ನು ಎನ್.ಸಿ.ಸಿ. ಪರೀಕ್ಷೆಗಳಿಗೆ ಸಜ್ಜುಗೊಳಿಸುವ ಜೊತೆಗೆ ಕವಾಯತು, ಭೂಪಟ ಅಧ್ಯಯನ, ಫೈರಿಂಗ್ ಅಣಕುಯುದ್ಧ, ಶಸ್ತ್ರಗಳನ್ನು ಹೇಗೆ ನಿರ್ವಹಣೆ ಮಾಡುವುದು ಎಂಬುದನ್ನು ಪ್ರಾತ್ಯಕ್ಷಿಕೆಯಮೂಲಕ ತಿಳಿಸಿ ತರಬೇತಿ ನಡೆಸಿಕೊಟ್ಟರು.
ಸೀನಿಯರ್ ಅಂಡರ್ ಆಫೀಸರ್ ಮೋಹಿತ್ ಎನ್ ಸಾಲಿಯಾನ್ ಜೂನಿಯರ್ ಅಂಡರ್ ಆಫೀಸರ್ ಧೀರಜ್ ಆಚಾರ್ಯ, ಲೋಬೋ ಆನ್ ರಿಯಾ ನೇವಿಲ್, ಸರ್ಜೆಂಟ್ ದೀಪಕ್, ರಿಯಾನ್ ಡಿಸೋಜಾ, ಕಾರ್ಪೋರಲ್ ಮಂಜುನಾಥ ಅಮರಾವತಿ, ಕ್ಯಾಡೆಟ್ ಅನುಪ್ ನಾಯಕ್ ಮತ್ತು ಅಲಿಸ್ಟಾರ್ ಸುಜಯ್ ಡಿಸೋಜ ಸಹಕರಿಸಿದ್ದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿರ್ದೇಶಕಿ ಯಶೋದ, ಎಲ್ಲಾ ಕ್ಯಾಡೆಟ್ಗಳು ಉಪಸ್ಥಿತರಿದ್ದರು. ವಾಣಿ ಯು ಸಾಲಿಯಾನ್ ಸ್ವಾಗತಿಸಿ, ಲ್ಯಾನ್ಸ್ ಕಾರ್ಪೋರಲ್ ಅನೀಶ್ ಭಟ್ ವಂದಿಸಿದರು. ಸೋನಾಲಿ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು

ಯುವ ಸಮುದಾಯ ದುಶ್ಚಟಗಳಿಂದ ದೂರವಿದ್ದು, ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಬೇಕು : ಎನ್.ಬಿ.ಗೋಪಾಲಗೌಡ

ಶ್ರೀನಿವಾಸಪುರ: ಯುವ ಸಮುದಾಯ ದುಶ್ಚಟಗಳಿಂದ ದೂರವಿದ್ದು, ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಹೇಳಿದರು.
ಪಟ್ಟಣದ ವೆಂಕಟೇಗೌಡ ಕಲ್ಯಾಣ ಮಂಟಪದಲ್ಲಿ ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ವತಿಯಿಂದ ಬುಧವಾರ ಏರ್ಪಡಿಸಿದ್ದ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಘಟಕದ ನಿರ್ದೇಶಕ ಮುರಳೀಧರ ಶೆಟ್ಟಿ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಈವರೆಗೆ 1630 ಮದ್ಯವರ್ಜನ ಶಿಬಿರ ನಡೆಸಲಾಗಿದೆ. ಸಾವಿರಾರು ಮದ್ಯ ವ್ಯಸನಿಗಳು ಮದ್ಯವರ್ಜನ ಮಾಡಿ ಸಂತೋಷದಿಂದ ತಮ್ಮ ಕುಟುಂಬದೊಂದಿಗೆ ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಲವಾರು ಸಮಾಜ ಸೇವಾ ಕಾರ್ಯ ಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶದ ಬಡವರ ಆರ್ಥಿಕ ಮಟ್ಟ ಸುಧಾರಣೆಗೆ ಅಗತ್ಯವಾದ ಯೋಜನೆ ರೂಪಿಸಿ ಜಾರಿಗೆ ತರಲಾಗಿದೆ. ದೇವಾಲಯಗಳ ನಿರ್ಮಾಣ ಹಾಗೂ ಪುನರುಜ್ಜೀವನಕ್ಕೆ ಆರ್ಥಿಕ ನೆರವು ನೀಡಲಾಗುತ್ತಿದೆ. ಕೆರೆ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಎಂ.ಲಕ್ಷ್ಮಣಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ರಾಜೇಂದ್ರ ಪ್ರಸಾದ್ ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್, ಪ್ರಾದೇಶಿಕ ನಿರ್ದೇಶಕ ಎಂ.ಸೀನಪ್ಪ, ಯೋಜನಾಧಿಕಾರಿ ಗಣೇಶ್ ಆಚಾರ್ಯ, ಎಸ್.ಸುರೇಶ್ ಗೌಡ ಇದ್ದರು.

ಗ್ರಾಮೀ ಪ್ರದೇಶದ ವಿದ್ಯಾರ್ಥಿಗಳು ದಾನಿಗಳ ನೆರವು ಪಡೆದು ಶೈಕ್ಷಣಿಕ ಅಭಿವೃದ್ಧಿ ಹೊಂದಬೇಕು : ಎಚ್.ನಾರಾಯಣಸ್ವಾಮಿ

ಶ್ರೀನಿವಾಸಪುರ: ಗ್ರಾಮೀ ಪ್ರದೇಶದ ವಿದ್ಯಾರ್ಥಿಗಳು ದಾನಿಗಳ ನೆರವು ಪಡೆದು ಶೈಕ್ಷಣಿಕ ಅಭಿವೃದ್ಧಿ ಹೊಂದಬೇಕು ಎಂದು ಸಮಾಜ ಸೇವಕ ಎಚ್.ನಾರಾಯಣಸ್ವಾಮಿ ಹೇಳಿದರು.
ತಾಲ್ಲೂಕಿನ ಕಲ್ಲೂರು ಗ್ರಾಮದ ಆದರ್ಶ ವಿದ್ಯಾಲಯದಲ್ಲಿ ಬುಧವಾರ ವಿದ್ಯಾರ್ಥಿಗಳಿಗೆ ತಟ್ಟೆ ಲೋಟ ವಿತರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕೀಳರಿಮೆ ಬಿಡಬೇಕು. ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲದಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕಿ ಮಮತಾ ರಾಣಿ ಮಾತನಾಡಿ, ಸರ್ಕಾರ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಪೂರಕವಾದ ಎಲ್ಲ ಯೋಜನೆಗಳನ್ನೂ ಜಾರಿಗೆ ತಂದಿದೆ. ಜತೆಗೆ ದಾನಿಗಳು ಸರ್ಕಾರಿ ಶಾಲಾ ಮಕ್ಕಳ ನೆರವಿಗೆ ಬರುತ್ತಿದ್ದಾರೆ. ಮಕ್ಕಳ ಶೈಕ್ಷಣಿಕ ಅಗತ್ಯ ಪೂರೈಸುವಲ್ಲಿ ಸಹಾಯ ಹಸ್ತ ಚಾಚಿದ್ದಾರೆ. ಅದರ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕೋಮುಲ್ ಮಾಜಿ ನಿರ್ದೇಶಕ ಪಾಳ್ಯ ಬೈರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ.ನಾಗೇಶ್, ಮುಖಂಡ ಬೈರಾರೆಡ್ಡಿ, ತಾಲ್ಲೂಕು ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕಿ ಸುಲೋಚನ, ಎಸ್‍ಡಿಎಂಸಿ ಅಧ್ಯಕ್ಷ ರಾಜೇಂದ್ರ ಪ್ರಸಾದ್, ಶಿಕ್ಷಕ ಲೋಕೇಶ್, ಶಿಕ್ಷಕಿ ಮಂಜುಳ ಇದ್ದರು.

ಶ್ರೀನಿವಾಸಪುರ : ಐಎಎಸ್ ಅಧಿಕಾರಿ ವಿನಾಯಕ್ ಘೋರ್ಪಡೆ, ನರೇಗಾ ಯೋಜನೆಯಡಿ ಕೈಗೊಳ್ಳಲಾಗಿದ್ದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು

ಶ್ರೀನಿವಾಸಪುರ: ತಾಲ್ಲೂಕಿಗೆ ಮಂಗಳವಾರ ಭೇಟಿ ನೀಡಿದ್ದ ಐಎಎಸ್ ಅಧಿಕಾರಿ ವಿನಾಯಕ್ ಘೋರ್ಪಡೆ, ನರೇಗಾ ಯೋಜನೆಯಡಿ ಕೈಗೊಳ್ಳಲಾಗಿದ್ದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ಸುರಿಯುತ್ತಿದ್ದ ಮಳೆ ಮಧ್ಯೆ ತಾಲ್ಲೂಕಿನ ಕಾಡುದೇವಂಡಹಳ್ಳಿ ಗ್ರಾಮದ ಸಮೀಪ ಧನಂಜಯಗೌಡ ನರೇಗಾ ಯೋಜನೆಯಡಿ ಬೆಳೆಸಿರುವ ಡ್ರ್ಯಾಗನ್ ಫ್ರೂಟ್ ತೋಟಕ್ಕೆ ಭೇಟಿ ನೀಡಿ ಪರಿಶೀಲಸಿದರು. ರೈತರು ವಿಶೇಷ ಕಾಳಜಿ ವಹಿಸಿ ಬೆಳೆಸಿರುವ ತೋಟ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಗಾಂಡ್ಲಹಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾಗಿರುವ ಅಂಗನವಾಡಿ ಕಟ್ಟಡ ವೀಕ್ಷಿಸಿದರು. ಕಶೆಟ್ಟಿಪಲ್ಲಿ ಗ್ರಾಮದ ಹೊರವಲಯದಲ್ಲಿ ರೂ.5ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಸ್ಮಶಾನ ಅಭಿವೃದ್ಧಿ ಕಾಮಗಾರಿ, ರೂ.4 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಗೋಟುಂಟೆ ನಿರ್ಮಾಣ ಕಾಮಗಾರಿ, ರೂ.42 ಸಾವಿರ ವೆಚ್ಚದಲ್ಲಿ ನಿರ್ಮಿಸಲಾಗಿರುವ ಜಾನುವಾರು ನೀರಿನ ತೊಟ್ಟಿ ವೀಕ್ಷಿಸಿದರು.
ಆಲವಟ್ಟ ಗ್ರಾಮದ ಸಮೀಪ ರೂ.13.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಂಜೀವಕ ಶೆಡ್, ಪಾತಪಲ್ಲಿ ಗ್ರಾಮದಲ್ಲಿ ರೂ.8 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಶಾಲಾ ಕೊಠಡಿಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಂಜನಿಯರ್‍ಗಳು ನರೇಗಾ ಕಾಮಗರಿಗಳ ಗುಣಮಟ್ಟ ಕೆಡದಂತೆ ಎಚ್ಚರ ವಹಿಸಬೇಕು. ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಹಣ ದುರುಪಯೋಗಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಮಂಜುನಾಥಸ್ವಾಮಿ, ಎಡಿಪಿಸಿ ಸತೀಶ್, ಎಂಜಿನಿಯರ್‍ಗಳಾದ ಚೇತನ್, ಟಿ.ಸಿ.ರಾಜು ಇದ್ದರು.

Visit of Cardinal Filipe Neri Ferrao of Goa and Daman and the Patriarch of the East Indies to Bethany Mother House.

“Bethany Sisters are ready to undertake the synodal journey, by being synodal persons like Jesus, ready to walk with Him, grow in intimacy with Him, and witness to His love, to His concern, to His compassion especially those on the peripheries of the society. Thus all could be missionary disciples of Jesus” empowered Cardinal Filipe Neri Ferrao of Goa and Daman, the Patriarch of the East Indies and the Chairman of the Laity Commission in the CBCI after meeting Bethany Sisters on Saturday, December 10, 2022, at 3.30 PM. On his arrival, he paid tribute to the Servant of God Raymond FC Mascarenhas at his Memorial – A Monument that has stayed in place though the tides have changed. Along with the Cardinal, Sr Rose Celine BS, the Superior General of Bethany Congregation and her Councillors, SrShanthiPriya, Sr Mariette, Sr Santhosh Maria, Sr Sandhya and Sr Violet, the procurator General, Most Rev. Peter Machado, the Archbishop of Bangalore, SrJyoti,the former Superior General, Sr Cicilia Mendonsa BS, the Provincial Superior of Mangalore Province, Sr Shaila BS, the Administrator, Rev. Fr Cedric Prakash SJ, and Sr Dona BS, the Superior of Mother House were the other dignitaries who evoked spiritual blessings of the Servant of God. He passed by the Heritage Park – A plethora that is more than just the spiritual traditions of Bethany.

It was a singular honour and a joy granted to Bethany Sisters, Mangalore, to welcome and felicitate the Cardinal at Bethany Mother House. Sr Mariette, the General Councilor, facilitated the ceremonious welcome to the Prelate through her inspiring vibes. He was overwhelmed seeing the exuberant dancers who welcomed him with warm-hearted gestures to the Dhol beats full of vibrancy, enthusiasm, and energy. Offering a jubilant welcome, Sr Rose Celine, the Superior General, felicitated the Cardinal with a shawl. The General  Councilors joined her in showing gestures of honor to him and offered him a book on Founder Raymond FC Mascarenhas. All the gathered had an opportunity to make this event memorable through a photo session with His eminence.

The Cardinal was the Chief Guest for the Golden Jubilee Celebrations of the Mangalore Diocesan Pastoral Parishad (DPP) in the morning held at Father Muller Convention Centre, Mangalore. He is the Indian Prelate who was recently elevated to the rank of Cardinal by Pope Francis.