ಶ್ರೀನಿವಾಸಪುರ : ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯಸ್ಥ ಸುನಿಲ್ ಎಸ್.ಹೊಸಮನಿ ಭೇಟಿ,ಪರಿಶೀಲನೆ

ಶ್ರೀನಿವಾಸಪುರ : ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯಸ್ಥ ಸುನಿಲ್ ಎಸ್.ಹೊಸಮನಿ ಭೇಟಿ ನೀಡಿ ಪರಿಶೀಲಿಸಿದರು . ಆಸ್ಪತ್ರೆಯ ವಿವಿಧ ಘಟಕಗಳು ಹಾಗೂ ಒಳ ರೋಗಿಗಳ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು , ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಆಸತ್ರೆಗೆ ಬರುವ ರೋಗಿಗಳಿಗೆ ಉತ್ತಮ ಸೇವೆ ಒದಗಿಸಬೇಕು . ರೋಗಿಗಳಿಗೆ ಚೆನ್ನಾಗಿ ಶುಚಿಗೊಳಿಸಿದ ಬಟ್ಟೆಗಳನ್ನು ನೀಡಬೇಕು ಎಂದು ಹೇಳಿದರು . ಆಸ್ಪತ್ರೆ ಶುಚಿತ್ವ , ನಿರ್ವಹಣೆ ಮತ್ತು ಸಿಬ್ಬಂದಿಯ ವೈದ್ಯಕೀಯ ಸೇವೆ ಕುರಿತು ತೃಪ್ತಿ ವ್ಯಕ್ತಪಡಿಸಿದ ಅವರು , ಆಸ್ಪತ್ರೆ ಮುಂದೆ ವಾಹನಗಳ ನಿಲುಗಡೆ ಮಾಡುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತದೆ . ಆದ್ದರಿಂದ ವಾಹನಗಳನ್ನು ವ್ಯವಸ್ಥಿತವಾಗಿ ನಿಲುಗಡೆ ಮಾಡಲು ಪೊಲೀಸ್ ಇಲಾಖೆ ನೆರವು ಪಡೆಯುಂತೆ ಸೂಚಿಸಿದರು . ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ . ಕುಡಿಯುವ ನೀರಿನ ಸಮಸ್ಯೆ ಇದೆ . ಐಸಿಯು ಘಟಕ ಇದೆಯಾದರೂ , ತಜ್ಞ ವೈದ್ಯರಿಲ್ಲ ಎಂದು ವೈದ್ಯರು ನ್ಯಾಯಾಧೀಶರಿಗೆ ತಿಳಿಸಿದರು . ಅದಕ್ಕೆ ಸ್ಪಂದಿಸಿದ ನ್ಯಾಯಾಧೀಶರು ಸಮಸ್ಯೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು .
ಆಸ್ಪತ್ರೆ ಆಡಳಿತಾಧಿಕಾರಿ ಡಾ . ಜಿ.ಎಸ್.ಶ್ರೀನಿವಾಸ್ , ಡಾ . ಉಮಾಶಂಕರ್‌ , ಡಾ . ದಿವಾಕರ್ , ಡಾ . ಕಮಲಮ್ಮ , ಡಾ . ನಿರಂಜನ್ , ಸಿಬ್ಬಂದಿ ಪ್ರಕಾಶ್ , ಲೀಡಿಯಾ , ಔಷಧಿಕಾರ ಮೊಹಮ್ಮದ್ ಅಲಿ , ಸೈಯದ್ , ಉಷಾ , ಇದ್ದರು

ಕೆ.ಜಯದೇವ್ ಹುಟ್ಟುಹಬ್ಬದ ಅಂಗವಾಗಿ ಆಟೋಚಾಲಕರಿಗೆ
ಸಮವಸ್ತ್ರ ವಿತರಣೆ-ವಿ.ಆರ್. ಸುದರ್ಶನ್‍ರಿಂದ ಶುಭಾಷಯ

ಕೋಲಾರ:- ನಗರದ ಸಾಯಿಬಾಬಾ ಮಂದಿರದಲ್ಲಿ ಕಾಂಗ್ರೆಸ್ ಎಸ್ಸಿಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್ ಅವರ ಹುಟ್ಟುಹಬ್ಬದ ಅಂಗವಾಗಿ ಆಟೋ ಚಾಲಕರಿಗೆ ಸಮವಸ್ತ್ರವನ್ನು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಉತ್ತಮ ಸಂವಿಧಾನ
ನೀಡಿದ್ದಾರೆ, ಅದನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಿ, ಅವರು ನೀಡಿರುವ ಸಂವಿಧಾನದ ಅಡಿಯೇ ಮುನ್ನಡೆಯಬೇಕು ಎಂದರು.
ಪ್ರತಿಯೊಬ್ಬ ನಾಗರೀಕರು, ತಮ್ಮ ಜೀವನದಲ್ಲಿ ಸಂವಿಧಾನದ ಅಂಶಗಳನ್ನು ಅಳವಡಿಸಿಕೊಂಡು ಅವರಿಗೆ ಗೌರವ ತರುವ ಕೆಲಸ ಮಾಡುವ ಸಂಕಲ್ಪ ಮಾಡಬೇಕು ಇದು ರಾಜಕೀಯ ಪಕ್ಷಗಳಿಗೆ ಮಾತ್ರವಲ್ಲ, ಸಮಾಜದ ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.
ಇದು ರಾಜಕೀಯ ಕಾರ್ಯಕ್ರಮವಲ್ಲ, ಸಾಮಾಜಿಕ ಕಾರ್ಯಕ್ರಮವಾಗಿದ್ದು, ಇಲ್ಲಿ ರಾಜಕೀಯ ಮಾತನಾಡುವುದಿಲ್ಲ ಎಂದ ಅವರು, ಆಟೋ ಚಾಲಕರಿಗೆ ಪ್ರತಿವರ್ಷ ಸಮವಸ್ತ್ರ ವಿತರಿಸುವ ಪ್ರಯತ್ನ ಶ್ಲಾಘನೀಯ ಎಂದ ಅವರು, ಸಾಯಿಬಾಬಾ ಅವರ ಆಶೀರ್ವಾದ ನಿಮಗೆ ಸದಾ ಸಿಗಲಿ ಎಂದರು.
ಜಯದೇವ್ ಅವರಿಗೆ ರಾಜಕೀಯವಾಗಿ ಉತ್ತಮ ಸ್ಥಾನಮಾನ ಸಿಗಲಿ ಎಂದು ಹಾರೈಸಿದ ಅವರು, ಸಮಾಜದಲ್ಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಮುಂದುವರೆಸಿಕೊಂಡು ಹೋಗಿ, ಅವಕಾಶ ಸಿಕ್ಕಾಗ ಕಷ್ಟಕ್ಕೆ ನೆರವಾದವರನ್ನು ಮರೆಯದಿರಿ ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ಜನತೆಗೆ ಹೊಸ ವರ್ಷದ ಶುಭಾಷಯ ಕೋರಿದ ಅವರು, ಕಳೆದ ವರ್ಷ ವರುಣನ ಕೃಪೆಯಿಂದ ಒಳ್ಳೆಯ ಮಳೆಯಾಗಿದೆ, ಇದೇ ರೀತಿ ಮುಂದಿನ ವರ್ಷವೂ ಸುಭೀಕ್ಷವಾಗಿರಲಿ, ಜನತೆ ಭಾತೃತ್ವದಿಂದ ಬದುಕ ನಡೆಸುವ ವಾತಾವರಣ ಇರಲಿ ಎಂದು ಆಶಿಸಿ ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಸಾಯಿಬಾಬಾ ಮಂದಿರದಲ್ಲಿ ಜಯದೇವ್ ಹುಟ್ಟುಹಬ್ಬದ ಅಂಗವಾಗಿ ನಡೆದ ವಿಶೇಷ ಪೂಜಾಕಾರ್ಯದಲ್ಲೂ ಅವರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಕೆ.ಎಸ್.ಗಣೇಶ್, ಕಾಂಗ್ರೆಸ್ ಮುಖಂಡರಾದ ಊರುಬಾಗಿಲು ಶ್ರೀನಿವಾಸ್, ಉದಯಶಂಕರ್, ಕದಂಬ ಸೋಮಣ್ಣ, ಜೆ.ಕೆ.ಜಯರಾಂ, ಡಾ.ಚಂದ್ರಶೇಖರ್, ಖಾದ್ರಿಪುರ ಬಾಬು,ಗೋಕುಲ ಮಿತ್ರಬಳಗದ ಚಲಪತಿ, ಮಣಿ, ಕಿಲಾರಿಪೇಟೆ ಮುನಿವೆಂಕಟಯಾದವ್, ಚಂದು, ಕಾರ್ಗಿಲ್ ವೆಂಕಟೇಶ್, ಎಸ್ಟಿ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್, ಪತ್ರಕರ್ತ ಚಾಂದ್‍ಪಾಷ, ಜ್ಯೂಸ್ ನಾರಾಯಣಸ್ವಾಮಿ, ಬಾಬಾ, ದಲಿತ ನಾರಾಯಣಸ್ವಾಮಿ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರತ್ನಮ್ಮ, ಎಸ್ಸಿಘಟಕದ ತಾಲ್ಲೂಕು ಅಧ್ಯಕ್ಷ ಜಗನ್, ಮುಖಂಡರಾದ ಚೇತನ್ ಬಾಬು,ಮತ್ತಿಕುಂಟೆ ಕೃಷ್ಣ, ಹಾರೋಹಳ್ಳಿ ನಾರಾಯಣಸ್ವಾಮಿ, ರಾಜಕುಮಾರ್,ಸಾಹುಕಾರ್ ಶಂಕರಪ್ಪ,ವಿ.ಕೆ.ರಾಜೇಶ್, ಮುನಿಕೃಷ್ಣ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

ಜನರ ಚಳಿ ಬಿಡಿಸುತ್ತಿರುವ ಕೊರೊನಾ ಹೊಸ ತಳಿ ನಿಯಂತ್ರಣಕ್ಕೆ ಸರ್ಕಾರಿ ಆಸ್ಪತೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ – ರೈತಸಂಘ

ಕೋಲಾರ: ಜನರ ಚಳಿ ಬಿಡಿಸುತ್ತಿರುವ ಕೊರೊನಾ ಹೊಸ ತಳಿ ನಿಯಂತ್ರಣಕ್ಕೆ ಸರ್ಕಾರಿ ಆಸ್ಪತೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ರೋಗ ಲಕ್ಷಣಗಳ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಕರಪತ್ರದ ಮೂಲಕ ಜಾಗೃತಿ ಮೂಡಿಸಬೇಕೆಂದು ರೈತಸಂಘದಿಂದ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಕೊರೊನಾ 1ನೇ, 2ನೇ ಅಲೆಯ ಅವಧಿಯಲ್ಲಿ ಸೃಷ್ಠಿಸಿದ್ದ ಅವಾಂತರಗಳಿಂದ ಜನಸಾಮಾನ್ಯರು ಚೇತರಿಸಿಕೊಂಡು ಸಹಜ ಜೀವನದತ್ತ ಮುನ್ನಡೆಯುತ್ತಿರುವ ಸಮಯದಲ್ಲಿ ಮುಂಗಾರು ಮಳೆಯ ಆರ್ಭಟದ ನಂತರ ಈಗ ಮತ್ತೆ ಚೀನಾ ಮತ್ತಿತರರ ದೇಶಗಳಲ್ಲಿ ಹೆಚ್ಚುತ್ತಿರುವ ರೂಪಾಂತರ ಕೊರೊನಾ ಹೊಸತಳಿಯಿಂದ ದೇಶದಲ್ಲಿ ಮುನ್ನೆಚ್ಚರಿಕೆಯಾಗಿ ಜಾಗೃತಿವಹಿಸಬೇಕಾದ ಜವಾಬ್ದಾರಿ ಸರ್ಕಾರ ಮತ್ತು ಆರೋಗ್ಯ ಇಲಾಖೆ ಮೇಲಿದೆ ಎಂದು ಹೇಳಿದರು.
ಮೊದಲ ಹಂತದಲ್ಲಿ ಕಾಣಿಸಿಕೊಂಡ ರೋಗ ನಿಯಂತ್ರಣಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅಗತ್ಯವಿದ್ದ ಆಕ್ಸಿಜನ್ ಬೆಡ್ ವೆಂಟಿಲೇಟರ್ ಮತ್ತಿತರರ ಸೌಲಭ್ಯಗಳಿಲ್ಲದೆ ಖಾಸಗಿ ದುಬಾರಿ ವೆಚ್ಚ ಭರಿಸಲಾಗದೆ ಕಣ್ಣಮುಂದೆಯೇ ಸಾವಿರಾರು ಜನರನ್ನು ಕುಟುಂಬಸ್ಥರು ಕಳೆದುಕೊಂಡಿರುವ ಹೃದಯ ವಿದ್ರಾವಕ ಘಟನೆಗಳು ಕಣ್ಣ ಮುಂದೆಯೇ ಇವೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಹೊಸ ತಳಿ ನಿಯಂತ್ರಣಕ್ಕೆ ಮುಂಜಾಗ್ರತವಾಗಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ಮೆಡಿಸಿನ್ ಮತ್ತಿತರ ಸೌಲಭ್ಯಗಳನ್ನು ಕಾಯ್ದಿರಿಸುವ ಜೊತೆಗೆ ಯಾವುದೇ ಕಾರಣಕ್ಕೂ ರೋಗ ಲಕ್ಷಣ ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ಕಡ್ಡಾಯವಾಗಿ ಚಿಕಿತ್ಸೆ ಪಡೆದುಕೊಳ್ಳುವ ದಿನದ 24 ಗಂಟೆ ವೈದ್ಯಕೀಯ ಸೇವೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ನಗರಕ್ಕೆ ಗ್ರಾಮೀಣ ಪ್ರದೇಶಗಳಿಂದ ರೈತರು, ಕೂಲಿ ಕಾರ್ಮಿಕರು ಹೆಚ್ಚಾಗಿ ಮಾರುಕಟ್ಟೆ ಮತ್ತಿತರ ಬದುಕು ಕಟ್ಟಿಕೊಳ್ಳಲು ಬರುವ ಜನತೆಗೆ ಹೊಸ ತಳಿಯ ರೋಗ ಲಕ್ಷಣಗಳ ಬಗ್ಗೆ ಕರಪತ್ರದ ಮೂಲಕ ಹಳ್ಳಿಹಳ್ಳಿಯಲ್ಲೂ ಜಾಗೃತಿ ಮೂಡಿಸಿ ಗಡಿ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಹಾಗೂ ವೈದ್ಯರ ಕೊರತೆ ಇಲ್ಲದಂತೆ ನೇಮಕ ಮಾಡಿ ಹೊಸ ತಳಿಯ ಕೊರೊನಾ ರೂಪಾಂತರಿ ತಳಿಯನ್ನು ಮೊದಲೇ ತಡೆದು ಯಾವುದೇ ಪ್ರಾಣ ಹಾನಿಯಾಗದಂತೆ ಜಾಗೃತಿವಹಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಡಿಎಚ್‍ಒ ಡಾ.ಜಗದೀಶ್ ಅವರು, ಆರೋಗ್ಯ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಎಲ್ಲಾ ಸರ್ಕಾರಿ, ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಮುಂಜಾಗ್ರತವಾಗಿ ಬೆಡ್, ವೆಂಟಿಲೇಟರ್ ಮತ್ತಿತರ ಸೌಲಭ್ಯಗಳನ್ನು ರೋಗಿಗಳಿಗೆ ಕಾಯ್ದಿರಿಸುವಂತೆ ಸೂಚಿಸಲಾಗಿದೆ. ಕರಪತ್ರದ ಮುಖಾಂತರ ಗ್ರಾಮೀಣ ಪ್ರದೇಶಗಳಲ್ಲಿ ರೋಗ ಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸುವ ಭರವಸೆಯನ್ನು ನೀಡಿದರು.
ಮನವಿ ಸಲ್ಲಿಸುವಾಗ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಮಂಗಸಂದ್ರ ತಿಮ್ಮಣ್ಣ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಯಾರಂಘಟ್ಟ ಗಿರೀಶ್, ಮಂಗಸಂದ್ರ ವೆಂಕಟೇಶ್, ಯಲ್ಲಪ್ಪ, ಮಾಸ್ತಿ ವೆಂಕಟೇಶ್, ಯಲುವಳ್ಳಿ ಪ್ರಭಾಕರ್, ತೆರ್ನಹಳ್ಳಿ ಆಂಜಿನಪ್ಪ, ಕೋಟೆ ಶ್ರೀನಿವಾಸ್, ಮಂಜುಳಮ್ಮ, ಶೇಷಾದ್ರಿ, ವೆಂಕಟ್ ಮುಂತಾದವರಿದ್ದರು.

ಕೋಲಾರ:-ಅವಿಭಜಿತ ಜಿಲ್ಲೆಯ 7 ಲಕ್ಷ ಮಹಿಳೆಯರು,ರೈತರ ಮನೆಬಾಗಿಲಿಗೆ ಆರೋಗ್ಯ ಭಾಗ್ಯದ ಸೌಲಭ್ಯ
ಡಿಸಿಸಿ ಬ್ಯಾಂಕಿನಿಂದ ಯಶಸ್ವಿನಿಯೋಜನೆ ನೋಂದಣಿಗೆ ಆಂದೋಲನ-ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:- ಡಿಸಿಸಿ ಬ್ಯಾಂಕ್ ಹಾಗೂ ಪ್ಯಾಕ್ಸ್‍ಗಳ ಮೂಲಕ ಯಶಸ್ವಿನಿ ಯೋಜನೆ ನೋಂದಣಿಯನ್ನು ಅಂದೋಲನವಾಗಿ ಮಾಡಿ, ಅವಿಭಜಿತ ಜಿಲ್ಲೆಯ 7 ಲಕ್ಷ ಮಹಿಳೆಯರ ಮನೆ ಬಾಗಿಲಿಗೆ ಆರೋಗ್ಯಭಾಗ್ಯದ ಸೌಲಭ್ಯ ತಲುಪಿಸಿ ಎಂದು ಬ್ಯಾಂಕ್ ಹಾಗೂ ಸೊಸೈಟಿ ಸಿಬ್ಬಂದಿಗೆ ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕರೆ ನೀಡಿದರು.
ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಯಶಸ್ವಿನಿ ಯೋಜನೆ ಅನುಷ್ಟಾನದ ಕುರಿತು ಪ್ಯಾಕ್ಸ್‍ಗಳು ಹಾಗೂ ಡಿಸಿಸಿ ಬ್ಯಾಂಕಿನ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಶಾಖೆಗಳ ಸಿಬ್ಬಂದಿಯೊಂದಿಗೆ ಹಮ್ಮಿಕೊಂಡಿದ್ದ ಆನ್‍ಲೈನ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಡಿಸಿಸಿ ಬ್ಯಾಂಕ್ ವ್ಯಾಪ್ತಿಯಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುಮಾರು 7 ಲಕ್ಷ ಮಹಿಳೆಯರು ಸದಸ್ಯತ್ವ ಹೊಂದಿ ಸಾಲ ಪಡೆದುಕೊಂಡಿದ್ದಾರೆ, ಇದರಲ್ಲಿ ಹರಿಜನ,ಗಿರಿಜನ, ಹಿಂದುಳಿದ ಕುಟುಂಬಗಳ ಮಹಿಳೆಯರೇ ಹೆಚ್ಚಿದ್ದು, ಯಶಸ್ವಿನಿ ಯೋಜನೆಯಿಂದಾಗಿ ಇಷ್ಟೊಂದು ಕುಟುಂಬಗಳ ಆರೋಗ್ಯ ರಕ್ಷಣೆಗೆ ಅನುಕೂಲವಾಗಲಿದೆ ಎಂದರು.
ಪ್ರತಿ ಮಹಿಳೆ ತಲಾ 500 ರೂ ನೀಡಿ ನೋಂದಾವಣೆ ಮಾಡುವುದರಿಂದ ಅವರ ಕುಟುಂಬದ ನಾಲ್ವರಿಗೆ ಯಶಸ್ವಿನಿ ಯೋಜನೆಯಡಿ 5 ಲಕ್ಷದವರೆಗೂ ಸುಮಾರು 1600ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಸಿಗಲಿದ್ದು, ನೋಂದಾಯಿಸಿ ಕಾರ್ಡ್ ಪಡೆದ 15 ದಿನಗಳ ನಂತರ ಚಿಕಿತ್ಸೆಗೆ ಅರ್ಹರಾಗುತ್ತಾರೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಆಯುಷ್ಮಾನ್ ಆರೋಗ್ಯ ಕಾರ್ಡ್‍ನಡಿ ಚಿಕಿತ್ಸೆ ಅಗತ್ಯವಿದ್ದಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸ್ಸುಗೊಂಡು ಹೋದರೆ ಮಾತ್ರವೇ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸಿಗಲಿದೆ ಆದರೆ ಯಶಸ್ವಿನಿ ಯೋಜನೆಯಲ್ಲಿ ಫಲಾನುಭವಿಗಳು ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ನಗದು ರಹಿತ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಎರಡೂ ಜಿಲ್ಲೆಗಳ ಸುಮಾರು ಆರೂವರೆ ಲಕ್ಷ ಹೆಣ್ಣು ಮಕ್ಕಳು, 50 ಸಾವಿರಕ್ಕೂ ಹೆಚ್ಚು ರೈತರು ಡಿಸಿಸಿ ಬ್ಯಾಂಕ್ ಹಾಗೂ ಅದರಡಿಯ ಪ್ಯಾಕ್ಸ್‍ಗಳ ಮೂಲಕ ಸದಸ್ಯತ್ವ ಪಡೆದು ಸಾಲ ಸೌಲಭ್ಯ ಪಡೆದುಕೊಂಡಿದ್ದಾರೆ, ಇವರೆಲ್ಲರೂ ಇಂದು ಯಶಸ್ವಿನಿ ಯೋಜನೆಯಡಿ ನೋಂದಾಯಿಸಲು ಅರ್ಹತೆ ಪಡೆದುಕೊಂಡಿದ್ದು, ನಾಲ್ವರು ಇರುವ ಕುಟುಂಬಕ್ಕೆ 500 ರೂ ಹಾಗೂ ಇನ್ನು ಹೆಚ್ಚಿನ ಸಂಖ್ಯೆಯಿದ್ದರೆ ತಲಾ 100 ರೂ ನೀಡಿ ನೋಂದಣಿ ಮಾಡಿಸಬಹುದಾಗಿದ್ದು, ಮಹಿಳೆಯರು,ರೈತರಿಗೆ ಯಶಸ್ವಿನಿ ಯೋಜನೆ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಪ್ಯಾಕ್ಸ್ ಹಾಗೂ ಬ್ಯಾಂಕ್ ಸಿಬ್ಬಂದಿ ಮಾಡಬೇಕು ಎಂದು ತಾಕೀತು ಮಾಡಿದರು.
ಈ ಯೋಜನೆ ರೈತಾಪಿ ವರ್ಗ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಅನುಕೂಲಕರವಾಗಿದ್ದು, ಇಂದಿನ ಪರಿಸ್ಥಿತಿಯಲ್ಲಿ ಆರೋಗ್ಯ ರಕ್ಷಣೆಗೆ ಹೆಚ್ಚು ಸಹಕಾರಿಯಾಗಿದೆ. ಸಾಮಾನ್ಯವಾಗಿ ಡಿಸಿಸಿ ಬ್ಯಾಂಕ್ ಹಾಗೂ ಪ್ಯಾಕ್ಸ್‍ಸೊಸೈಟಿಗಳ ಮೂಲಕ ಸಾಲ ಪಡೆದ ಎಲ್ಲಾ ಮಹಿಳೆಯರು ಬಿಪಿಎಲ್ ಕುಟುಂಬಗಳಿಂದಲೇ ಬಂದವರಾಗಿದ್ದು, ವಿವಿಧ ಆರೋಗ್ಯ ಸಮಸ್ಯೆಗಳಿಂದ ಹಲವಾರು ಮಂದಿ ನರಳುತ್ತಿದ್ದಾರೆ ಇಂತಹ ಕುಟುಂಬಗಳ ಜೀವನ ಹಾಗೂ ಆರೋಗ್ಯ ರಕ್ಷಣೆಗೆ ಯಶಸ್ವಿನಿ ಯೋಜನೆ ಸಹಕಾರಿ ಎಂದರು.
ಡಿಸಿಸಿ ಬ್ಯಾಂಕಿನಿಂದ
ವಿಶೇಷ ಆಂದೋಲನ
ಸ್ತ್ರೀ ಶಕ್ತಿ ಸಂಘಗಳಿಗೆ ಮತ್ತು ರೈತರಿಗೆ ಸಾಲ ನೀಡುವ ಸಂದರ್ಭದಲ್ಲೇ ಡಿಸಿಸಿ ಬ್ಯಾಂಕ್ ಹಾಗೂ ಪ್ಯಾಕ್ಸ್‍ಗಳ ಸಿಬ್ಬಂದಿ ಯಶಸ್ವಿನಿ ಯೋಜನೆಗೆ ನೋಂದಣಿ ಮಾಡಿಸಿದ ನಂತರವೇ ಸಾಲ ಒದಗಿಸುವ ಭರವಸೆ ನೀಡಿ, ಇದರಿಂದ ಬಡವರ ಬದುಕು ಹಸನಾಗಲಿದೆ, ವಿವಿಧ ಕಾಯಿಲೆಗಳಿಂದ ಬಳಲುತ್ತಾ, ಆಸ್ಪತ್ರೆಗೆ ಹೋಗಲು ಕಾಸಿಲ್ಲದೇ ಪರದಾಡುತ್ತಿರುವ ಕುಟುಂಬಗಳಿಗೆ ಇದು ಸಂಜೀವಿನಿಯಾಗಿ ಬಳಕೆಯಾಗಲಿ ಎಂದರು.
ಯಶಸ್ವಿನಿ ನೋಂದಣಿ ಕಾರ್ಯವನ್ನು ಡಿಸಿಸಿ ಬ್ಯಾಂಕ್ ಆಂದೋಲನವಾಗಿ ಮಾಡಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ಸಿಬ್ಬಂದಿಯ ಸಹಕಾರ ಕೋರಿದರು.
ಸಹಕಾರ ಸಂಘಗಳ ಉಪನಿಬಂಧಕ ನಾಗರಾಜ್ ಯಶಸ್ವಿನಿ ಯೋಜನೆಯಡಿ ನೋಂದಣಿ, ಇದರ ಸೌಲಭ್ಯಗಳು, ಇದರಿಂದಾಗುವ ಪ್ರಯೋಜನ ನಗದು ರಹಿತ ಚಿಕಿತ್ಸೆ ಪಡೆಯುವ ವಿಧಾನ ಮತ್ತಿತರ ಮಾಹಿತಿ ಒದಗಿಸಿ. ವರ್ಷಕ್ಕೆ ಗರಿಷ್ಟ 5 ಲಕ್ಷ ರೂಗಳವರೆಗೂ ಯಶಸ್ವಿನಿಯೋಜನೆಯ ಫಲಾನುಭವಿಗಳು ಯಶಸ್ವಿನಿ ನೆಟ್‍ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಎಜಿಎಂಗಳಾದ ಶಿವಕುಮಾರ್, ಹುಸೇನ್ ದೊಡ್ಡಮುನಿ, ಅರುಣ್ ಪ್ರಸಾದ್, ಬೈರೇಗೌಡ, ಹ್ಯಾರೀಸ್,ಪದ್ಮಮ್ಮ ಮತ್ತಿತರರು ಉಪಸ್ಥಿತರಿದ್ದರು.

Passed Away :Mrs.Celine Baretto (81) Kundapura – The funeral will be held on Today 27th December

OBITUARY : Celine Baretto (81) Kundapura St.Joseph Vaz (ward)

Born: 17-1-1942      Died : 27-12-22

W/O. Late Philip Baretto

Mother of  Late Agnel Baretto, Fathima/ Basil Dsouza, Mabel Baretto, Ledya/Ronald Dsouza

Grand Mother of Beena/Anil Mathew Carvalho, Brita Dsouza

Great Grand Mother of Anora Carvalho  

Funeral cortege leaves residence Fathima villa, Behind Costa Complex Chikkensal Road Kundapura, Tuesday 27th December 2022 at 3:00 pm. followed by mass at 3:30 pm. Holy Rosary Church, Kundapur

Contact:7760770590/7996806540

ಸೈಂಟ್ ಆಗ್ನೆಸ್ ಪಿಯು ಕಾಲೇಜ್ – ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದಿಂದ ಕ್ರಿಸ್‌ಮಸ್‌ ಸಂಭ್ರಮ

ಮಂಗಳೂರು: 23ನೇ ಡಿಸೆಂಬರ್ 2022 ರಂದು ಸೇಂಟ್ ಆಗ್ನೆಸ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದಿಂದ ಕ್ರಿಸ್‌ಮಸ್‌ ಸಂಭ್ರಮ ನಡೆಯಿತು. ಇಡೀ ಕಾಲೇಜಿನ ಕ್ರಿಸ್ಮಸ್ ಸಂಭ್ರಮದ ವಾತವರಣದಿಂದ ಕೂಡಿತ್ತು.

ವಿದ್ಯಾರ್ಥಿಗಳು ತರಗತಿಗಳನ್ನು ಅಲಂಕರಿಸಿದ್ದರು. ವರ್ಗವಾರು  ಗೋದಲಿ ಸ್ಪರ್ಧೆಗಳು ನಡೆದವು. ಫೋಟೋ ಬೂತ್,ಮೆಹೆಂದಿ ಮಳಿಗೆಗಳು, ಆಟಗಳು, ಮುಖವರ್ಣಿಕೆ, ಬೇಯಿಸಿದ ಆಹಾರಗಳು ಮತ್ತು ಕರಕುಶಲ ವಸ್ತುಗಳ ಮಾರಾಟ ಕಾರ್ಯಕ್ರಮಗಳು ಆಕರ್ಷಣೆಗಳಿಂದ ಕೂಡಿದ್ದವು.

ಪ್ರತಿಭಾವಂತ ವಿದ್ಯಾರ್ಥಿಗಳು ಚತುರತೆಯನ್ನು ಪ್ರದರ್ಶಿಸುವ ವಿವಿಧ ಕರಕುಶಲ ವಸ್ತುಗಳ ಪ್ರದರ್ಶನ,ವಿದ್ಯಾರ್ಥಿಗಳಿಗಾಗಿ  ಆಯೋಜಿಸಲಾಗಿತ್ತು.

     ಪ್ರಾರ್ಥನಾ ಗೀತೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭವಾಯಿತು. ಡಾ ಲವೀನಾ ಎಂ ನೊರೊನ್ಹಾ ಅವರು ಗೌರವಾನ್ವಿತ ಅತಿಥಿಯಾಗಿ ಮತ್ತು ತಮ್ಮ ಭಾಷಣದಲ್ಲಿ ಮಾತನಾಡಿ ’ಕ್ರಿಸ್‌ಮಸ್‌ನ ನಿಜವಾದ ಚೈತನ್ಯವು ದೇವರನ್ನು ಅನುಭವಿಸುವುದರಲ್ಲಿದೆ’ ಎಂದು ಅವರು ಹೇಳಿದರು. ಕ್ರಿಸ್ತನು ನಮ್ಮ ಹೃದಯದಲ್ಲಿ ಇರುವಿಕೆ ಅಗತ್ಯ ಅದುವೆ ನೀಜವಾದ ಕ್ರಿಸ್ಮಸ್’ ಎಂದು ಹೇಳಿದರು.

    ಸಭಾಂಗಣವನ್ನು ಮಿನುಗುವ ದೀಪಗಳು, ನಕ್ಷತ್ರಗಳು ಮತ್ತು ಕ್ರಿಸ್‌ಮಸ್‌ ಅಲಂಕಾರಿಕ ವಸ್ತುಗಳಿಂದ ಅಲಂಕರಿಸಲಾಗಿತ್ತು. ಕ್ರಿಸ್‌ಮಸ್‌ನ ನಿಜವಾದ ಮನೋಭಾವವನ್ನು ಬಿಂಬಿಸುವ ಕಿರುನಾಟಕವನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಮತ್ತು ಕೆರೋಲ್‌ ಗೀತೆಗಳು ಸಿಬ್ಬಂದಿಯ ದ್ವಂದ್ವ ಧ್ವನಿ ಆಕರ್ಶಣೆಗೆ ಒಳಗಾಗಿತ್ತು.

   ಕ್ರಿಸ್ಟಲ್ ಮಾರ್ಟಿಸ್ ಕಾರ್ಯಕ್ರಮವನ್ನು ಸಂಯೋಜಕರಾಗಿದ್ದರು. ಸೆರಾ ರೋಡ್ರಿಗಸ್ ಸ್ವಾಗತಿಸಿ ಮುಖ್ಯ ಅತಿಥಿಗಳನ್ನು  ಪರಿಚಯಿಸಿದರು. ಈಡನ್ ರೆಬೆಕಾ ತನ್ನ ಧನ್ಯವಾದಗಳನ್ನು ಅರ್ಪಿಸಿದರು. ಪ್ರಾಂಶುಪಾಲೆ ಸಿಸ್ಟರ್ ನೊರಿನ್ ಡಿಸೋಜಾ, ಉಪ ಪ್ರಾಂಶುಪಾಲೆ ಸಿಸ್ಟರ್ ಜಾನೆಟ್ ಸಿಕ್ವೇರಾ, ಅಧ್ಯಾಪಕರು, ಶಿಕ್ಷಕೇತರ ಸಿಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕೋಟ : ಆಳೆತ್ತರದ ಕಟೌಟಗಳಿಂದ ಆಕರ್ಶಕ ಗೋದಲಿ

ಕೋಟ: ಕೋಟಾದ ಸುನೀಲ್ ಫೆರ್ನಾಂಡಿಸ್ ಮತ್ತು ಕುಟುಂಬದವರು ತಮ್ಮ ಮನೆಯ ಆವರಣದಲ್ಲಿ ಹಲವಾರು ವರ್ಷಗಳಿಂದ ಆಕರ್ಶಕವಾದ ಗೋದಲಿಯನ್ನು ನಿರ್ಮಿಸುತಿದ್ದು, ಈ ಭಾರಿ (2022) ಬ್ರಹತ್ ಗಾತ್ರದ ಆಳೆತ್ತರದ ಕಟೌಟಗಳಿಂದ ಗೋದಲಿಯನ್ನು ನಿರ್ಮಿಸಿದ್ದು, ಈ ಗೋದಲಿ ಜನರನ್ನು ಆಕರ್ಶಣೆಗೆ ಒಳಗಾಗಿದೆ.

ಹಾಲಾಡಿಯಲ್ಲಿ ಭಂಡಾರಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಶಿಬಿರದಲ್ಲಿ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣೆ

ಕುಂದಾಪುರ : ಡಿಸೆಂಬರ್ 25 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೂರಿ, ಹಾಲಾಡಿಯಲ್ಲಿ ಭಂಡಾರಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಶಿಬಿರದಲ್ಲಿ ಲಯನ್ಸ್ ಕ್ಲಬ್ ಕುಂದಾಪುರ ಇವರ ಸಹಾಯೋಗದೊಂದಿಗೆ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಲಾಡಿ ಇವರ ನುರಿತ ವೈದ್ಯಾಧಿಕಾರಿಗಳಿಂದ ಊರ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಪ್ರೊ. ನವೀನ್ ಶೆಟ್ಟಿ, ಅಧ್ಯಕ್ಷರು ಲಯನ್ಸ್ ಕ್ಲಬ್ ಕುಂದಾಪುರ ಮತ್ತು ಪ್ರಾಂಶುಪಾಲರು ಆರ್. ಎನ್. ಶೆಟ್ಟಿ ಕಾಲೇಜು ಪದವಿ ಪೂರ್ವ ಕಾಲೇಜು ಕುಂದಾಪುರ ಇವರು ಕಾರ್ಯಕ್ರಮವನ್ನ ಉದ್ಘಾಟಿಸಿ ಶಿಬಿರಕ್ಕೆ ಶುಭ ಹಾರೈಸಿದರು.
ಭಂಡಾರಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಪಿ. ನಾರಾಯಣ ಶೆಟ್ಟಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಇನ್ನೂರಕ್ಕೂ ಹೆಚ್ಚು ಗ್ರಾಮಸ್ಥರು ಆರೋಗ್ಯ ತಪಾಸಣೆಯ ಉಪಯೋಗ ಪಡೆದುಕೊಂಡರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಡಾ.ಯಶ್,ಕೆ. ಎಂ. ಸಿ ಮಣಿಪಾಲ್, ಡಾ. ರಾಜೇಶ್ ಮಿತ್ರ ಕ್ಲಿನಿಕ್ ಕೋಟೇಶ್ವರ, ಡಾ. ಹೇಮಂತ್ ಭಟ್, ಪ್ರಾಥಮಿಕ ಆರೋಗ್ಯ್ ಕೇಂದ್ರ ಹಾಲಾಡಿ, ಶಂಕರ್ ಶೆಟ್ಟಿ ಲಯನ್ಸ್ ಕ್ಲಬ್ ಕೋಶಾಧಿಕಾರಿ, ಸಂಜೀವ ನಾಯ್ಕ ಮುಖ್ಯಪಾಧ್ಯಾಯರು ಸ. ಹಿ. ಪ್ರಾ. ಶಾಲೆ ಮುದೂರಿ, ರೇಖಾ ಅಂಗನವಾಡಿ ಕಾರ್ಯಕರ್ತೆ, ಗಣೇಶ್ ಎಂ. ಅಧ್ಯಕ್ಷರು ಸ. ಹಿ. ಪ್ರಾ. ಶಾಲೆ ಮುದೂರಿ, ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾಗಿರುವಂತಹ ರಾಮಚಂದ್ರ ಆಚಾರ್ ಮತ್ತು ಅರುಣ್. ಎ. ಎಸ್ ಉಪಸ್ಥಿತರಿದ್ದರು.
ಶಿಬಿರಾರ್ಥಿಯರಾದ ಸ್ನೇಹ ಸ್ವಾಗತಿಸಿ,ಸುದೀಪ್ ವಂದಿಸಿ ಮತ್ತು ಸಿಂಚನ ನಿರೂಪಿಸಿ ಕಾರ್ಯಕ್ರಮ ನಿರ್ವಹಿಸಿದರು.

ಹಾಲಾಡಿಯಲ್ಲಿ ಭಂಡಾರಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮ

ಕುಂದಾಪುರ : ಡಿಸೆಂಬರ್ 23ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೂರಿ, ಹಾಲಾಡಿಯಲ್ಲಿ ಭಂಡಾರಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಶ್ರೀ ಜನಾರ್ಧನ, ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಹಾಲಾಡಿ ಇವರು ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಪಿ ನಾರಾಯಣ ಶೆಟ್ಟಿ ವಹಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಶುಭಕರಾಚಾರಿ ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ,ವಸಂತ್ ಕುಮಾರ್ ಶೆಟ್ಟಿ ನಿವೃತ್ತ ಶಿಕ್ಷಣಧಿಕಾರಿ ಬ್ರಹ್ಮಾವರ ವಲಯ, ಯಕ್ಷ ಗುರು ಐರೋಡಿ ಮಂಜುನಾಥ್ ಕುಲಾಲ್, ಹೇಮಾ ಗ್ರಾಮ ಪಂಚಾಯತ್ ಸದಸ್ಯರು ಹಾಲಾಡಿ, ಶಂಕರ್ ಐತಾಳ್,ಅಧ್ಯಕ್ಷರು ಗೀತಾ ಫೌಂಡೇಶನ್ ಕೋಟೇಶ್ವರ, ಶೇಖರ್. ಯು ಶಿಕ್ಷಣ ಸಂಯೋಜಕರು ಹಾಲಾಡಿ ವೃತ್ತ, ಗಣೇಶ ಎಂ.,ಅಧ್ಯಕ್ಷರು ಎಸ್ ಡಿ ಎಂ ಸಿ,ಸ.ಹಿ.ಪ್ರ ಶಾಲೆ, ಮೂದೂರಿ, ಸಂಜೀವ ನಾಯ್ಕ, ಮುಖ್ಯೋಪಾಧ್ಯಾಯರು ಸ.ಹಿ.ಪ್ರ ಶಾಲೆ, ಮುದೂರಿ,ಶ್ರೀ ರಮೇಶ್ ನಾಯ್ಕ, ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ, ಸ. ಹಿ. ಪ್ರಾ ಶಾಲೆ, ಮುದೂರಿ ಮತ್ತು ಗಣೇಶ್ ಮೊಗವೀರ ಅಧ್ಯಕ್ಷರು ಮೈತ್ರಿ ಯುವಕ ಮಂಡಲ ಮುದೂರಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯಕ್ಷಗುರು ಯಕ್ಷಶ್ರೀ ಶ್ರೀ ಐರೋಡಿ ಮಂಜುನಾಥ ಕುಲಾಲ್ ಇವರನ್ನು ಸನ್ಮಾನಿಸಲಾಯಿತು.
ಈ ದಿನ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷಗುರು ಐರೋಡಿ ಮಂಜುನಾಥ್ ಕುಲಾಲ್ ಅವರ ನಿರ್ದೇಶನದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರಸಂಗ ಮೀನಾಕ್ಷಿ ಕಲ್ಯಾಣ ನಡೆಯಿತು.
ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾದ ರಾಮಚಂದ್ರ ಆಚಾರ್ ಸ್ವಾಗತಿಸಿ, ವಿದ್ಯಾರ್ಥಿನಿ ಚಿತ್ರ ವಂದಿಸಿ, ಸುಶ್ಮಿತಾ ನಿರೂಪಿಸಿ ಕಾರ್ಯಕ್ರಮ ನಿರ್ವಹಿಸಿದರು.