ಹಾಲಾಡಿಯಲ್ಲಿ ಭಂಡಾರಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಶಿಬಿರ 2022-23 ರ ಸಮಾರೋಪ ಸಮಾರಂಭ

ಕುಂದಾಪುರ : ಡಿಸೆಂಬರ್ 29ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೂರಿ, ಹಾಲಾಡಿಯಲ್ಲಿ ಭಂಡಾರಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಶಿಬಿರ 2022-23 ಇದರ ಸಮಾರೋಪ ಸಮಾರಂಭ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಡಾ. ಶುಭಕರಾಚಾರಿ ವಹಿಸಿದ್ದು ಇವರು ಶಿಬಿರವನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳು ಆಗಿರುವ ಅರುಣ ಎ. ಎಸ್,ರಾಮಚಂದ್ರ ಆಚಾರ್ ಮತ್ತು ಅಣ್ಣಪ್ಪ ಇವರಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೂರಿ ಇವರ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರಕಾರ್ಸ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ. ಎಂ. ಗೊಂಡ,ಅನೂಪ್ ಕುಮಾರ್ ಶೆಟ್ಟಿ, ಸಮೂಹ ಸಂಪನ್ಮೂಲ ಕೇಂದ್ರ ಹಾಲಾಡಿ, ಜನಾರ್ದನ್ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಹಾಲಾಡಿ,ಗುರುಪ್ರಸಾದ್ ಸದಸ್ಯರು ಗ್ರಾಮ ಪಂಚಾಯತ್ ಹಾಲಾಡಿ, ನಾಗರಾಜ್ ಗೋಳಿ ಸದಸ್ಯರು ಗ್ರಾಮ ಪಂಚಾಯತ್ ಹಾಲಾಡಿ, ಗಣೇಶ ಎಮ್ ಅಧ್ಯಕ್ಷರು ಎಸ್ ಡಿ ಎಂ ಸಿ,ಸ.ಹಿ.ಪ್ರಾ.ಶಾಲೆ ಮುದೂರಿ, ಸಂಜೀವ ಮುಖ್ಯೋಪಾಧ್ಯಾಯರು ಸ ಹಿ ಪ್ರಾ ಶಾಲೆ ಮೂದೂರಿ ಮತ್ತು ರಮೇಶ್ ನಾಯ್ಕ್ ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಮುದೂರಿ ಉಪಸ್ಥಿತರಿದ್ದರು.
ಶಿಬಿರಾರ್ಥಿಯರಾದ ಚಿತ್ರ ಸ್ವಾಗತಿಸಿ, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾದ ರಾಮಚಂದ್ರ ಆಚಾರ್ ವಂದಿಸಿ ಮತ್ತು ರೋಜಾ ನಿರೂಪಿಸಿ ಕಾರ್ಯಕ್ರಮ ನಿರ್ವಹಿಸಿದರು.

ಕುಂದಾಪುರ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿನಿ ಪೂರ್ವಿಕಾಳಿಂದ ಭರತನಾಟ್ಯದಲ್ಲಿ ರಾಜ್ಯಮಟ್ಟದ ಸಾಧನೆ


ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪೂರ್ವಿಕಾ ಇವರು ರಾಜ್ಯಮಟ್ಟದ ಕಲೋತ್ಸವ 2022 ಸ್ಪರ್ಧೆಯ ಭರತನಾಟ್ಯ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನಗಳಿಸಿರುತ್ತಾಳೆ. ಪೂರ್ವಿಕಾಳ ಈ ಉತ್ತಮ ಕಲಾಸಾಧನೆಯನ್ನು ಮೆಚ್ಚಿ, ಕಾಲೇಜಿನ ಸಂಚಾಲಕರಾದ ಶ್ರೀ ಬಿ.‌ಎಮ್. ಸುಕುಮಾರ್ ಶೆಟ್ಟಿ ಯವರು, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ್ ಶೆಟ್ಟಿಯವರು ಹಾಗೂ ಬೋಧಕ- ಬೋಧಕೇತರ ಸಿಬ್ಬಂಧಿಗಳು ಅಭಿನಂದಿಸಿದ್ದಾರೆ.

ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜ್-“ಆಧುನಿಕ ಯುಗದ ಉಪಯುಕ್ತ ತಂತ್ರಾಂಶದ ತಿಳುವಳಿಕೆ”

ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಹಾಗೂ ಇಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್ಸ್ ಇಂಜಿನಿಯರಿಂಗ್ ವಿಭಾಗದ ಸಹಯೋಗದಲ್ಲಿ “ಆಧುನಿಕ ಯುಗದ ಉಪಯುಕ್ತ ತಂತ್ರಾಂಶದ ತಿಳುವಳಿಕೆ” ಎಂಬ ವಿಷಯದ ಕುರಿತು ವಿಚಾರ ಗೋಷ್ಠಿಯನ್ನು ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಡೆಲ್ ಟೆಕ್ನಾಲಜೀಸ್‌ನ ಟೆಕ್ನಿಕಲ್ ಸ್ಟಾಫ಼್ ಆಗಿರುವ ಶ್ರೀ ಸುಬ್ರಹ್ಮಣ್ಯ ಪಡುಬಿದ್ರಿ ಅವರು ಆಗಮಿಸಿದ್ದರು. ವಿಧ್ಯಾರ್ಥಿಗಳಿಗೆ ವಿಷಯದ ಜೊತೆಗೆ ಅವರ ಕ್ರಿಯಾಶೀಲತೆ ಹಾಗೂ ದೂರದೃಷ್ಟಿ ವೃದ್ಧಿಸಲು ಸಹಾಯಕವಾಗುವಂತೆ ವಿವಿಧ ಚಟುವಟಿಕೆಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸೂರಜ್ ಪಿ ಎಂ ಎಸ್ (ಎಂಬೆಡೆಡ್ ಸಿಸ್ಟಮ್ಸ್)
ಮ್ಯಾನೇಜರ್, ಕಾಂಟಿನೆಂಟಲ್ ಆಟೋಮೋಟಿವ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ 
ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇವರು ಉಪಸ್ಥಿತರಿದ್ದು ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವಿಧ್ಯಾರ್ಥಿನಿ ಸುಶ್ಮಿತ ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರು ಧರ್ಮಪ್ರಾಂತ್ಯದ ಬಂಧುತ್ವ ಕ್ರಿಸ್ಮಸ್ ಆಚರಣೆ : ’ಕ್ರಿಶ್ಚಿಯನ್ ಧರ್ಮವು ಶಾಂತಿ ಪ್ರೀತಿಯ ಧರ್ಮ’ ’ಬದುಕು ಮತ್ತು ಬದುಕಲು ಬಿಡು ಧ್ಯೇಯದಿಂದ’ ಮನಕುಲಕ್ಕೆ ಶಾಂತಿ- ಶ್ರೀ ಶಶಿ ಕುಮಾರ್

ಕೋಲಾರ ಪೌರಾಯುಕ್ತರ ಸರ್ವಾಧಿಕಾರಿ ಧೋರಣೆ ಆರೋಪ ಅಧ್ಯಕ್ಷರಿಂದ ಪ್ರತಿಭಟನೆ: ಸದಸ್ಯರ ಗಲಾಟೆ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ

ಕೋಲಾರ: ನಗರಸಭೆ ಪೌರಾಯುಕ್ತರ ಸರ್ವಾಧಿಕಾರಿ ಧೋರಣೆಯಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದ್ದು ಕೂಡಲೇ ಅಧಿಕಾರಿಯನ್ನು ಎತ್ತಂಗಡಿ ಮಾಡಬೇಕೆಂದು ಆಗ್ರಹಿಸಿ ಅಧ್ಯಕ್ಷರು-ಉಪಾಧ್ಯಕ್ಷರ ಜತೆಗೂಡಿ ಸದಸ್ಯರು ಪ್ರತಿಭಟನೆ ನಡೆಸಿದರು. ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಕುರಿತು ಅಧ್ಯಕ್ಷೆ ಶ್ವೇತಾ ಆರ್. ಶಬರೀಶ್ ಅವರು ಟಿಪ್ಪಣಿಯನ್ನು ಕೊಡಲು ಮುಂದಾದಾಗ ಪೌರಾಯುಕ್ತರಾದ ಸುಮ ಅವರು ಪಟ್ಟಿಯನ್ನು ಪಡೆದುಕೊಳ್ಳಲು ನಿರಾಕರಿಸಿದ್ದು ಆಡಳಿತಾತ್ಮಕ ವಿಷಯಗಳನ್ನು ಮಾತ್ರವೇ ಮಂಡಿಸುವುದಾಗಿ ಹೇಳಿದಾಗ ಇಬ್ಬರ ನಡುವೆ ಅಸಮಾಧಾನ ಉಂಟಾಗಿತ್ತು. ಮಂಗಳವಾರ ಸಭೆ ಆರಂಭ ಆಗುತ್ತಿದ್ದಂತೆಯೇ ಅಧ್ಯಕ್ಷರು ಸಮಸ್ಯೆಗಳನ್ನು ಮುಂದಿಟ್ಟಾಗ ಚರ್ಚೆ ಮಾಡಲು ನಿರಾಕರಿಸಿದ ಪೌರಾಯುಕ್ತರ ನಿಲುವನ್ನು ಸದಸ್ಯರು ಖಂಡಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷೆ ಶ್ವೇತಾಶಬರೀಶ್ ಅವರು, ಸಂಸದರ ಕೈ ಗೊಂಬೆಯಂತೆ ಆಡುತ್ತಿರುವ ಪೌರಾಯುಕ್ತರು ನಗರಸಭೆಯಲ್ಲಿ ರಾಜಕೀಯ ಮಾಡುತ್ತಿದ್ದು ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸದೆ ಅಸಹಕಾರ ತೋರುತ್ತಿದ್ದಾರೆ. ಸದಸ್ಯರ ವಾರ್ಡ್‍ಗಳಲ್ಲಿನ ಸಮಸ್ಯೆಗಳ ಕುರಿತು ಚರ್ಚೆ ಮಾಡಲೂ ನಿರಾಕರಿಸುತ್ತಿರುವುದು ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿದೆ. ನಗರಸಭೆಯಲ್ಲಿ ಹಣ ಕೊಳೆಯುತ್ತಿದ್ದರೂ ಸದಸ್ಯರ ವಾರ್ಡ್‍ಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಹಿಂದೇಟು ಹಾಕುತ್ತಿದ್ದು ಬಂಗಾರಪೇಟೆ ಸರ್ಕಲ್‍ನಲ್ಲಿ ರಿಂಗ್ ಹಾಕಿಸಲು ಮನವಿ ಮಾಡಿದರೆ ಆಗುವುದಿಲ್ಲ ಎಂದರು. ಆದರೆ ಗುತ್ತಿಗೆದಾರರ ಜತೆಗೂಡಿ ನಗರಸಭೆ ಸದಸ್ಯರ ಗಮನಕ್ಕೂ ತಾರದೇ ರಿಂಗ್ ಹಾಕುವ ಕಾಮಗಾರಿ ಮಾಡಿಸುತ್ತಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ನಗರದಲ್ಲಿ ರಸ್ತೆಗಳನ್ನು ಹಾಕಿಸಲು ಬೇಡ ಎನ್ನುತ್ತಿರುವ ಪೌರಾಯುಕ್ತರು ಹೊಸ ನಗರಸಭೆ ಕಚೇರಿ ಕಟ್ಟಡ ನಿರ್ಮಾಣಕ್ಕೂ ಅಡ್ಡಗಾಲು ಹಾಕುತ್ತಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಸುಮಾ ಅವರನ್ನು ಎತ್ತಂಗಡಿ ಮಾಡಲು ಮನವಿ ಸಲ್ಲಿಸಲಾಗಿದ್ದು ಈ ನಡುವೆ ಇಷ್ಟು ತೊಂದರೆ ಮಾಡುವ ಮೂಲಕ ಕೋಲಾರದ ಅಭಿವೃದ್ಧಿ ಆಗದಂತೆ ತಡೆಯುತ್ತಿದ್ದಾರೆ ಎಂದು ಅಧ್ಯಕ್ಷೆ ಶ್ವೇತಾ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈ ನಡುವೆ ಬಹುತೇಕ ಸದಸ್ಯರು ತಮಗೆ ಸಭೆ ನಡೆಯುವ ಕುರಿತು ಮಾಹಿತಿ ನೀಡಿಲ್ಲ ಎಂದು ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡಾಗ ಪೋನ್ ಮಾಡಿ ಹೇಳಿರುವುದಾಗಿ ಸಿಬ್ಬಂದಿ ನಟರಾಜ್ ಉತ್ತರಿಸಿದರು. ಇದರಿಂದ ಕಿಡಿಕಿಡಿಯಾದ ಸದಸ್ಯರು ನಗರಸಭೆ ಮೀಟಿಂಗ್‍ಗೆ ಸದಸ್ಯರಿಗೆ
ಪೋ
ನಿನ್‍ನಲ್ಲಿ ಹೇಳುವುದು ಕಾನೂನಿನಲ್ಲಿ ಇದೆಯಾ ಎಂದು ಪ್ರಶ್ನಿಸಿದಾಗ ಪೌರಾಯುಕ್ತರ ಬದಲಿಗೆ ಆರಿಸಿದ ಸದಸ್ಯರು ಉತ್ತರಿಸಲು ಮುಂದಾದಾಗ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತ ತಲುಪಿದಾಗ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು.
ಮೌನಕ್ಕೆ ಶರಣಾಗಿದ್ದ ಪೌರಾಯುಕ್ತರು ಏನೊಂದೂ ಮಾತನಾಡದೆ ಸಭೆಯಿಂದ ನಿರ್ಗಮಿಸಿದಾಗ ಜ.4 ರಂದು ಸಭೆ ನಡೆಸುವುದಾಗಿ ಅಧ್ಯಕ್ಷೆ ಶ್ವೇತಾಶಬರೀಶ್ ಸಭೆಗೆ ಮಾಹಿತಿ ನೀಡಿದರಲ್ಲದೆ ಸದಸ್ಯರು ನೀಡುವ ಪಟ್ಟಿ ಮತ್ತು ಪೌರಾಯುಕ್ತರ ವಿಷಯಗಳನ್ನು ಸೇರಿಸಿ ಅಜೆಂಡಾ ಮಾಡುವುದಾಗಿ ಸಭೆಗೆ ಮಾಹಿತಿ ನೀಡಿದರು.
ಈ ನಡುವೆ ಸಭೆ ನಡೆಯಲೇಬೇಕೆಂದು ಪಟ್ಟು ಹಿಡಿದ ಸದಸ್ಯರಾದ ಮುರಳಿಗೌಡ ಮತ್ತು ಪ್ರವೀಣ್ ಗೌಡರಿಗೆ ಕೋರಂ ಕೊರತೆ ಉಂಟಾದ ಕಾರಣ ಸಭೆಯನ್ನು ಜ.4ಕ್ಕೆ ಅನಿವಾರ್ಯವಾಗಿ ಮುಂದೂಡಲಾಯಿತು.

ಗರ್ಭವಾಸ್ಥೆಯಲ್ಲಿ ಅಧಿಕ ರಕ್ತದೊತ್ತಡದಿಂದ ಪ್ರಿ-ಎಕ್ಲಾಂಪ್ಸಿಯಾ ಅಸ್ವಸ್ಥತೆ ಉಂಟಾಗುತ್ತದೆ- ಇದು ತಾಯಿ ಮತ್ತು ಶಿಶು ಮರಣ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ

ಕೋಲಾರ,ಡಿ.27: ಫ್ಲೋರೋಸಿಸ್ ಒಂದು ಮಹಾಮಾರಿಯಾಗಿ ಪರಿಣಮಿಸಿದೆ. ಫ್ಲೋರೋಸಿಸ್ ದಂತ ಹಾಗೂ ಮೂಳೆಯ ದುಷ್ಪರಿಣಾಮಗಳ ಜೊತೆ ಬಹು ಅಂಗಾಂಗಗಳ ಮೇಲೂ ಸಹ ಪ್ರಭಾವ ಬೀರುತ್ತದೆ. ಗರ್ಭವಾಸ್ಥೆಯನ್ನು ಸಹ ಫ್ಲೋರೋಸಿಸ್ ಹೊರೆತುಪಡಿಸಿಲ್ಲ. ಇದರ ಪ್ರಯುಕ್ತ ಬಹಳ ಸಂಶೋಧನೆಗಳು ಭಾರತ ಹಾಗೂ ಇತರ ರಾಷ್ಟ್ರಗಳಲ್ಲಿಯೂ ಸಹ ನಡೆಯುತ್ತಿದೆ.
ಅಮೇರಿಕಾದ ಮಹಾವಿದ್ಯಾಲಯದ ಪ್ರಸೂತಿ ತಜ್ಞರು ಮತ್ತು ಸ್ತ್ರೀರೋಗ ತಜ್ಞರು ಗರ್ಭವಾಸ್ಥೆಯಲ್ಲಿ ಅಧಿಕ ರಕ್ತದೊತ್ತಡದಿಂದಾಗುವ ಹಾಗೂ ಸಂಬಂಧಿತ ಅಸ್ವಸ್ಥತೆಯನ್ನು ಪ್ರಿ-ಎಕ್ಲಾಂಪ್ಸಿಯಾ ಎಂದು ವ್ಯಾಖ್ಯಾನಿಸಿದ್ದಾರೆ. ಇದು ಸಾಮಾನ್ಯವಾಗಿ 20 ವಾರಗಳ ಗರ್ಭಾವಸ್ಥೆಯ ನಂತರ ಸಂಭವಿಸುತ್ತದೆ. ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ಪ್ರಿ-ಎಕ್ಲಾಂಪ್ಸಿಯಾ ಅಸ್ವಸ್ಥತೆಯಿಂದ ತಾಯಿ ಮರಣ ಪ್ರಮಾಣ ಮತ್ತು ಶಿಶು ಮರಣ ಪ್ರಮಾಣದ ಹೆಚ್ಚಳಕ್ಕೆ ಕಾರಣವಾಗಿದೆ.
ಪ್ರಕೃತಿಯಲ್ಲಿ ಫ್ಲೋರೋನಿ ಅಂಶವು ಅನಿಲ ರೂಪದಲ್ಲಿ ಅಧಿಕವಾಗಿ ಕಂಡುಬರುತ್ತದೆ. ಫ್ಲೋರೋನಿ ಅನ್ನು ಸಂಯುಕ್ತದಿಂದ ಬೇರ್ಪಡಿಸಿದಾಗ ಫ್ಲೋರೈಡ್ ಅಯಾನು (ಈಲ) ಆಗಿ ರೂಪಗೊಳ್ಳುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ ಭ್ರೂಣದ ಬೆಳವಣಿಗೆ ಮತ್ತು ಆರೋಗ್ಯದ ಮೇಲೆ ಫ್ಲೋರೈಡ್ ಪ್ರಭಾವ ಬೀರಬಹುದು ಎಂಬುದು ಸಂಶೋಧನೆಯಿಂದ ಹಾಗೂ ಅಂಕಿ ಅಂಶಗಳಿಂದ ಧೃಡಲ್ಪಟ್ಟಿರುತ್ತದೆ. ಗರ್ಭಾಶಯದಲ್ಲಿನ ಪ್ರಿ-ಎಕ್ಲಾಂಪ್ಟಿಕ್ ಬದಲಾವಣೆಗಳನ್ನು ವೇಗಗೊಳಿಸುವಲ್ಲಿ ಫ್ಲೋರೈಡ್ ಪಾತ್ರ ಬಹು ಮುಖ್ಯವಾಗಿರುತ್ತದೆ. ಪ್ರಿ-ಎಕ್ಲಾಂಪ್ಸಿಯಾ ಮತ್ತು ಫ್ಲೋರೈಡ್ ರೋಸಿಸ್ ಸಂಬಂಧಿತ ಸಂಶೋಧನೆಯ ಧಾಖಲೆಗಳ ಕೊರತೆಯನ್ನು ಮೌಲ್ಯಮಾಪನ ಮಾಡಬೇಕಾಗಿರುವುದರಿಂದ ಹಾಗೂ ಕೋಲಾರವು, ಫ್ಲೋರೋಸಿಸ್‍ಗೆ ಹೆಚ್ಚು ಸ್ವಭಾವಕ್ಕೆ ಒಳಗಾಗುವುದರಿಂದ ಶ್ರೀದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದ (SDUMC) ಜೀವರಸಾಯನಶಾಸ್ತ್ರ ವಿಭಾಗದಲ್ಲಿ ಫ್ಲೋರೋಸಿಸ್ ಸಂಶೋಧನೆ ಮತ್ತು ಪ್ರಾಯೋಗಿಕ ಲ್ಯಾಬೋರೇಟರಿ (FRRL) ಅನ್ನು ಸ್ಥಾಪಿಸಿದ್ದು ಮತ್ತು ಸಮುದಾಯ ಮಟ್ಟದಲ್ಲಿ ತನ್ನ ಸೇವೆಗಳನ್ನು ವಿಸ್ತರಿಸುತ್ತಿದೆ.
ಇಲ್ಲಿಯವರೆಗೆ ಫ್ಲೋರೋಸಿಸ್‍ನ ಕುರಿತು ಕನಿಷ್ಠ 12 ಸಂಶೋಧನೆ ಯೋಜನೆಗಳು ಪೂರ್ಣಗೊಳಿಸಿದೆ. ಅಂಗರಚನಾಶಾಸ್ತ್ರ ಮತ್ತು ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಸಹಯೋಗದಲ್ಲಿ ಡಾ.ಶಶಿಧರ್ ಕೆ.ಎನ್, ಡಾ.ಆರ್. ಸಾಯಿ ದೀಪಿಕಾ, ಡಾ.ಹರೀಶ್ ಆರ್ ಮತ್ತು ಶ್ರೀಮತಿ ಇಂದುಮತಿ ಎ.ಎನ್ ಅವರು ಪ್ರಿ-ಎಕ್ಲಾಂಪ್ಸಿಯಾದ ಮೂರು ಯೋಜನೆಗಳನ್ನು ನಡೆಸಿದರು.
ಕೋಲಾರವು ಸಮುದ್ರ ಮಟ್ಟದಿಂದ 849 ಮೀ ಎತ್ತರದಲ್ಲಿ, ಕರ್ನಾಟಕದ ಆಗ್ನೇಯ ಭಾಗದಲ್ಲಿರುವ ಜಿಲ್ಲೆ. ಗಣಿಗಾರಿಕೆ ಮತ್ತು ಕೈಗಾರಿಕೆಗಳಿಗೆ ಹೆಸರುವಾಸಿಯಾಗಿದೆ. ಪ್ರಾಕೃತಿಕ ಕಾರಣಗಳಿಂದಲೂ ಕೋಲಾರದ ನೀರಿನಲ್ಲಿ ಫ್ಲೋರೈಡ್ ಪ್ರಮಾಣ ಹೆಚ್ಚಾಗಿರುವ ಸಾಧ್ಯತೆಯುಂಟು. ವೈದ್ಯಕೀಯ ಕ್ಷೇತ್ರದಲ್ಲಿ, ಫ್ಲೋರೋಸಿಸ್ ಪ್ರಪಂಚದಾದ್ಯಂತ ಕಾಳಜಿಯ ಕಾಯಿಲೆಯಾಗಿದ್ದು, ಇದನ್ನು ವ್ಯಾಪಕವಾಗಿ ತನಿಖೆ ಮಾಡಬೇಕು. ಶ್ರೀದೇವರಾಜ್ ಅರಸು ವೈದ್ಯಕೀಯ ಮಹಾವಿದ್ಯಾಲಯವು ಫ್ಲೋರೋಸಿಸ್ ಮತ್ತು ಪ್ರಿಕ್ಲಾಂಪ್ಸಿಯಾ ಕುರಿತು ವೆಬಿನರ್ ಅನ್ನು ಪ್ರಮುಖ ಅತಿಥಿ ಡಾ. ಲಾಜ್ಯಾ ದೇವಿ ಗೋಯಲ್ ಪ್ರಾಚಾರ್ಯ ಮತ್ತು ಸ್ತ್ರಿ ರೋಗ ಪ್ರಸೂತಿ ವಿಭಾಗದ ಮುಖ್ಯಸ್ಥರು, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಬಟಿಂದ, ಪಂಜಾ ಅವರೊಂದಿಗೆ ನಡೆಸಿತು.
ಅವರು ತಾಯಿ ಮತ್ತು ಭ್ರೂಣದ ಆರೋಗ್ಯದ ಮೇಲೆ ಫ್ಲೋರೈಡ್‍ನಿಂದ ಹಾನಿಕಾರಕ ಪರಿಣಾಮಗಳಾಗುವ ಸಾಧ್ಯತೆಗಳನ್ನು ವಿಶ್ಲೇಷಿಸಿದರು. ವೆಬಿನರ್ ಅನ್ನು ನಮ್ಮ ಫ್ಲೋರೋಸಿಸ್ ಸಂಶೋಧನೆ ಮತ್ತು ಉಲ್ಲೇಖಿತ ಲ್ಯಾಬೊರೇಟರಿ ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದು. (https://www.youtube.com/watch?v=ToODcS83JCk) ಹೆಚ್ಚಿನ ಮಾಹಿತಿಗಾಗಿ, ಈ ದೂರವಾಣಿ 9845248742 ಸಂಖ್ಯೆಯನ್ನು ಸಂಪರ್ಕಿಸಬಹುದು.

ಕಳಪೆ ಬಿತ್ತನೆಯ ಆಲೂಗಡ್ಡೆ, ಮಾಂಡೋಸ್ ಚಂಡಮಾರುತದಿಂದ ನಷ್ಟ, ಪರಿಹಾರ ನೀಡಿ, ನಾಪತ್ತೆಯಾಗಿರುವ ಬೆಳೆ ವಿಮೆ ಕಂಪನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಮಾಡಿ – ರೈತಸಂಘ

ಶ್ರೀನಿವಾಸಪುರ: ಕಳಪೆ ಬಿತ್ತನೆ ಆಲೂಗಡ್ಡೆ ಹಾಗೂ ಮಾಂಡೋಸ್ ಚಂಡಮಾರುತದಿಂದ ನಷ್ಟವಾಗಿರುವ ಪ್ರತಿ ಎಕರೆಗೆ 2 ಲಕ್ಷರೂ ಪರಿಹಾರ ನೀಡಿ ನಾಪತ್ತೆಯಾಗಿರುವ ಬೆಳೆ ವಿಮೆ ಕಂಪನಿ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ರೈತಸಂಘದಿಂದ ತೋಟಗಾರಿಕೆ ಕಚೇರಿಯೆದುರು ನಷ್ಟ ಬೆಳೆ ಸಮೇತ ಹೋರಾಟ ಮಾಡಿ, ಸಹಾಯಕ ನಿರ್ದೇಶಕರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಜಿಲ್ಲೆಯ ರೈತರ ಅಮಾಯಕತನವನ್ನೇ ಬಂಡವಾಳವಾಗಿಸಿಕೊಂಡಿರುವ ವಿಮೆ ಕಂಪನಿಗಳು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ರೈತರಿಂದ ಕೋಟಿಕೋಟಿ ಹಣವನ್ನು ಗೌರವಾನ್ವಿತ ಪ್ರಧಾನಮಂತ್ರಿ ಫಸಲ್ ಭಿಮಾ ವಿಮೆ ಹೆಸರಿನಲ್ಲಿ ಲೂಟಿ ಮಾಡುವ ಕಂಪನಿಗಳ ನಿಯಂತ್ರಣದಲ್ಲಿ ಹಿಡಿದುಕೊಳ್ಳಲು ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು.
ಅತಿವೃಷ್ಠಿ, ಅನಾವೃಷ್ಠಿ ಪ್ರಕೃತಿ ವಿಕೋಪ ಹಾಗೂ ರೋಗಗಳಿಂದ ನಷ್ಟವಾದಾಗ ರೈತರ ಕಷ್ಟಕಾಲದಲ್ಲಿ ನೆರವಾಗಬೇಕಿದ್ದ ವಿಮೆ ಕಂಪನಿಗಳೇ ನಾಪತ್ತೆಯಾಗಿದ್ದರೆ ಇನ್ನು ರೈತರಿಗೆ ನ್ಯಾಯ ಒದಗಿಸಿಕೊಳ್ಳುವ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ನೂರೊಂದು ನೆಪ ಹೇಳಿ ಕಂಪನಿ ಪರ ವಕಾಲತ್ತು ವಹಿಸುವ ಮಟ್ಟಕ್ಕೆ ಇಲಾಖೆಗಳು ಹದಗೆಟ್ಟಿವೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ, ಟೊಮೇಟೊ, ಕ್ಯಾಪ್ಸಿಕಂ ಬೆಳೆಗಳಿಗೆ ಊಜಿ ನುಸಿರೋಗದಿಂದ ಸಂಪೂರ್ಣವಾಗಿ ಬೆಳೆ ನಾಶವಾಗಿ ಹಾಕಿದ ಬಂಡವಾಳ ಕೈಗೆ ಸಿಗದೆ ಮತ್ತೆ ಸಾಲ ಮಾಡಿ ವಾಡಿಕೆಯಂತೆ ಮನೆಯ ಹೆಂಡತಿ, ಮಕ್ಕಳ ಒಡವೆಯನ್ನು ಬ್ಯಾಂಕುಗಳಲ್ಲಿ ಅಡ ಇಟ್ಟು 3,500ರೂ ಹಣ ನೀಡಿ ಪ್ರತಿ ಮೂಟೆ ಬಿತ್ತನೆ ಆಲೂಗಡ್ಡೆಗೆ ನೀಡಿ ಬಿತ್ತನೆ ಮಾಡಿರುವ ರೈತರಿಗೆ ತಾವು ನಿರೀಕ್ಷೆ ಮಾಡಿದ ಇಳುವರಿ ಬಾರದೆ ಪ್ರತಿಮೂಟೆಗೆ ಕನಿಷ್ಠಪಕ್ಷ 5 ಮೂಟೆಯೂ ಬಾರದೆ ಎಕರೆಗೆ 10 ಮೂಟೆ ಗೋಳಿ ಗಡ್ಡೆ ಬರುವ ಮುಖಾಂತರ ಅದನ್ನೇ ನಂಬಿದ್ದ ರೈತ ತಲೆ ಮೇಲೆ ಕೈ ಒತ್ತು ಕೂರಬೇಕಾದ ಪರಿಸ್ಥಿತಿ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಹವಾಮಾನ ವೈಫರೀತ್ಯ ಮಾರಾಟಗಾರರು ಹಾಗೂ ಅಧಿಕಾರಿಗಳು ನಿಮ್ಮ ನೆರವಿಗೆ ನಿಲ್ಲಲು ಸಾಧ್ಯವಿಲ್ಲ ಎಂಬ ರೈತ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಊಜಿ ರೋಗ ಅಂಗಮಾರಿ ಅರ್ಧ ಬೆಳೆಯನ್ನು ಕಸಿದುಕೊಂಡರೆ ಮಾಂಡೋಸ್ ಚಂಡಮಾರುತ ರೈತರ ವರ್ಷದ ಗಂಜಿಯಾದ ರಾಗಿ ಬೆಳೆಯನ್ನು ಹಾಗೂ ವಾಣಿಜ್ಯ ಬೆಳೆಗಳನ್ನು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿ ಹೋಗುವ ಹಾಗೆ ಕಸಿದುಕೊಂಡಿದೆ.
ಹಾಕಿದ ಬಂಡವಾಳ ಕೈಗೆ ಬಾರದೆ ಸರ್ಕಾರ ನೀಡುವ ಪರಿಹಾರಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ರೈತರಿಗೆ ಒಂದು ವಾರದೊಳಗೆ ಪರಿಹಾರದ ಹಣ ಬಿಡುಗಡೆ ಮಾಡಿ ಬೆಳೆ ವಿಮೆ ಕಟ್ಟಿಸಿಕೊಂಡು ನಾಪತ್ತೆಯಾಗಿರುವ ಕಂಪನಿ ಮಾಲೀಕರ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸು ದಾಖಲಿಸಿ ಕಂಪನಿಯ ಪರವಾನಗಿಯನ್ನು ಕಪ್ಪುಪಟ್ಟಿಗೆ ಸೇರಿಸಿ, ನಷ್ಟವಾಗಿರುವ ಪ್ರತಿ ಎಕರೆಗೆ 2 ಲಕ್ಷರೂ ಪರಿಹಾರ ಘೋಷಣೆ ಮಾಡಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತೋಟಗಾರಿಕೆ ಇಲಾಖೆ ಸಹಾಯಕ ನಿದೇರ್ಶಕರು, ಬೆಳೆ ನಷ್ಟದ ಬಗ್ಗೆ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮುಖಾಂತರ ವರದಿ ಕಳುಹಿಸಿದ್ದೇವೆ. ಬೆಳೆ ವಿಮೆ ಪಾವತಿಸದ ಕಂಪನಿ ವಿರುದ್ಧ ಕ್ರಮಕೈಗೊಳ್ಳಲು ಸಹ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದೇವೆ, ಪರಿಹಾರ ಬಂದ ತಕ್ಷಣ ರೈತರ ಖಾತೆಗಳಿಗೆ ಜಮಾ ಮಾಡುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋಟೆ ಶ್ರೀನಿವಾಸ್, ವೆಂಕಟ್, ಮುನಿರಾಜು, ಶೇಷಾದ್ರಿ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ಶೇಖ್ ಷಫೀಉಲ್ಲಾ, ವೆಂಕಟಸ್ವಾಮಿ, ವೆಂಕಟೇಶ್, ಯಲುವಳ್ಳಿ ಪ್ರಭಾಕರ್, ಸಂದೀಪ್‍ರೆಡ್ಡಿ, ಸಂದೀಪ್‍ಗೌಡ ಮುಂತಾದವರಿದ್ದರು.

ಭಂಡಾರ್‍ಕಾರ್ಸ್ ಕಾಲೇಜಿನಲ್ಲಿ ಜ. 1 ರಂದು ಕೋ.ಮ. ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭ


ಕುಂದಪ್ರಭ ಸಂಸ್ಥೆಯ ವತಿಯಿಂದ ಕುಂದಾಪುರ ಭಂಡಾರ್‍ಕಾರ್ಸ್ ಕಾಲೇಜಿನ ಆರ್. ಎನ್. ಶೆಟ್ಟಿ ಸಭಾಂಗಣದಲ್ಲಿ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರಿಗೆ ಕೋ.ಮ. ಕಾರಂತ ಪ್ರಶಸ್ತಿ ಪ್ರದಾನ ಮಾಡುವ ಸಮಾರಂಭ ಜನವರಿ 1 ರಂದು ಮಧ್ಯಾಹ್ನ 4 ಗಂಟೆಗೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಲಘು ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕರ್ನಾಟಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮಾರಂಭ ಉದ್ಘಾಟಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ವಹಿಸಲಿದ್ದಾರೆ.
ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ, ಡಾ. ಎ. ರಂಜಿತ್ ಕುಮಾರ್ ಶೆಟ್ಟಿಯವರ 20 ಕಥೆಗಳು ಬಿಡುಗಡೆ ಮಾಡಲಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಪ್ರತಿಭಾನ್ವಿತರನ್ನು ಗೌರವಿಸಲಿದ್ದಾರೆ. ರೋಟರಿ ಜಿಲ್ಲಾ ಮಾಜಿ ಗವರ್ನರ್ ಅಭಿನಂದನ್ ಶೆಟ್ಟಿ, ಅಭಿನಂದನಾ ಭಾಷಣ ಮಾಡಲಿದ್ದಾರೆ.
ಭಂಡಾರ್‍ಕಾರ್ಸ್ ಕಾಲೇಜಿನ ಸಹಯೋಗದೊಂದಿಗೆ ಸಮಾರಂಭದ ಆರಂಭದಲ್ಲಿ ಕೋಟೇಶ್ವರ ವೇಣುಗೋಪಾಲ ಭಟ್ ತಂಡದವರಿಂದ ಲಘು ಸಂಗೀತ ಕಾರ್ಯಕ್ರಮ ನಡೆಯಲಿದೆ. ಪ್ರತಿಭಾನ್ವಿತ ಕಲಾವಿದರಾದ ಕೆ. ವಿಘ್ನೇಶ್ ಕಾಮತ್, ಶ್ರೀಧರ ಭಟ್ ಕೋಟೇಶ್ವರ ಭಾಗವಹಿಸಲಿದ್ದಾರೆ.
ಈ ಸಮಾರಂಭದಲ್ಲಿ ಸಾರ್ವಜನಿಕರನ್ನು ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ, ಸಮಾರಂಭದ ಸಂಯೋಜಕ ಕೋ ಶಿವಾನಂದ ಕಾರಂತ ಸ್ವಾಗತಿಸಿದ್ದಾರೆ.

ಶ್ರೀನಿವಾಸಪುರ:ಎಸ್‍ಎಫ್‍ಎಸ್ ಪ್ರೌಢ ಶಾಲೆಯ ಬೆಳ್ಳಿ ಹಬ್ಬ-ವಿದ್ಯಾರ್ಥಿಗಳು ಗುಣಾತ್ಮಕ ಫಲಿತಾಂಶ ಪಡೆಯಬೇಕು:ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ

ಶ್ರೀನಿವಾಸಪುರ: ವಿದ್ಯಾರ್ಥಿಗಳು ಗುಣಾತ್ಮಕ ಫಲಿತಾಂಶ ಪಡೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಹೇಳಿದರು.
ಪಟ್ಟಣದ ಎಸ್‍ಎಫ್‍ಎಸ್ ಪ್ರೌಢ ಶಾಲೆಯಲ್ಲಿ ಬುಧವಾರ ಏರ್ಪಡಸಿದ್ದ ಶಾಲಾ ಬೆಳ್ಳಿ ಹಬ್ಬ ಹಾಗೂ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತಾಲ್ಲೂಕು ಶೈಕ್ಷಣಿಕವಾಗಿ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿದೆ. ಎಸ್‍ಎಫ್‍ಎಸ್ ಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಮೊದಲು ಬಂದಿದೆ ಎಂದು ಹೇಳಿದರು.
ಉತ್ತಮ ಫಲಿತಾಂಶ ಬರಬೇಕಾದರೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ದೃಢ ನಿರ್ಧಾರ ಹಾಗೂ ಪರಿಶ್ರಮ ಇದ್ದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿಗಳು ಅದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಸೇಲ್ಸ್ ಸಂಗೀತಾ ಅಕಾಡೆಮಿ ನಿರ್ದೇಶಕ ಡಾ. ಸಂತೋಷ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು. ಉತ್ತಮ ಬದುಕು ಕಟ್ಟಿಕೊಳ್ಳಲು ದೊಡ್ಡ ಮಟ್ಟದಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು. ಶಿಕ್ಷಣ ಎಲ್ಲವನ್ನೂ ಕೊಡುವ ಕಾಮಧೇನು. ಅದನ್ನು ಪಡೆದುಕೊಳ್ಳಲು ಸತತ ಪ್ರಯತ್ನ ನಡೆಸಬೇಕು. ಗುರಿ ಸಾಧಿಸಬೇಕು ಎಂದು ಹೇಳಿದರು.
ವಿಭಾಗೀಯ ವ್ಯವಸ್ಥಾಪಕ ಥಾಮಸ್ ಕಲಾರಿಪರಂಬಿಲ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯ ಪಾತ್ರ ವಹಿಸಬೇಕು. ಶಾಲೆ, ಶಿಕ್ಷಕರು ಹಾಗೂ ಪೋಷಕರಿಗೆ ಸಂತೋಷವಾಗುವಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಎ.ಈಶ್ವರ್, ಶಿಕ್ಷಕಿಯರಾದ ರೆಡ್ಡಮ್ಮ, ಪವಿತ್ರ, ಶಿಕ್ಷಕರಾದ ಪ್ರವೀಣ್, ಪವನ್ ಕುಮಾರ್,ರಾಜಣ್ಣ, ಪುರುಷೋತ್ತಮ್, ವಂದನೀಯಸ್ವಾಮಿ ಸಿರಿಯಾಕ್, ಫಾದರ್ ಪ್ರಶಾಂತ್ ಪ್ರಕಾಶ್, ಡಾ. ಆಂಥೋನಿಸ್ವಾಮಿ. ಆರೋಗ್ಯ ಮೇರಿ ಇದ್ದರು.