Passed Away : Sr. Carmelita B S. (87) ( Birthname: Cecilia Stephania Crasta)Kannada Kudru

Passed Away : Sr. Carmelita B S. (87) ( Birthname: Cecilia Stephania Crasta).

Expired today (1/1/2023

D/O Late Jerome Crasta & Late Remidia Lewis, Kannada Kudru, Gangolli Parish.

Sis/O Late Peter Crasta, Late Pius Crasta, Late Leo Crasta, Victoria Rebello, Sr. Harriette BS & Late Ida Rebello.

Expired today (1/1/2023) early morning due to Cardiac Arrest.

Funeral services will held on Monday the 2/1/2023 ( TOMORROW) at 10.00am at Rosa Mystica Convent, Kinnikambla. Gurpur.

ಕುಂದಾಪುರ ಹೋಲಿ ರೊಜರಿ ಹೊಸ ವರ್ಷಾಚರಣೆ – ಮೇರಿ ಮಾತೆಯಂತೆ ಇತರರ ಕಷ್ಟಗಳಿಗೆ ನೆರವಾಗಬೇಕು:ಫಾ|ಅಶ್ವಿನ್


ಕುಂದಾಪುರ, ಜ.1.: ಕುಂದಾಪುರ ರೋಜರಿ ಮಾತೆಯ ಇಗರ್ಜಿಯಲ್ಲಿ 2020 ರ ಹೊಸ ವರ್ಷದ ಪ್ರಯುಕ್ತ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಇವರ ಪ್ರಧಾನ ಯಾಜಕತ್ವದಲ್ಲಿ ಡಿಸೆಂಬರ್ 31 ರಂದು ಸಂಜೆ ಮಹಾ ಬಲಿದಾನವನ್ನು ಅರ್ಪಿಸಿದರು
‘’ನಾವು ಇವತ್ತು ಎರಡು ಸಂಭ್ರಾಮಚರಣೆಯನ್ನು ಮಾಡುತಿದ್ದೆವೆ. ಒಂದು ಹೊಸ ವರ್ಷದ ಆಚರರಣೆ ಮತ್ತೊಂದು ಮೇರಿ ಮಾತೆ ‘ದೇವರ ತಾಯಿ’ ಎಂಬ ಧರ್ಮಸಭೆ ಅಧಿಕÅತವಾಗಿ ಸಾರಿದ ಹಬ್ಬ. ಮೇರಿ ಮಾತೆಯಂತೆ ಇತರರ ಕಷ್ಟಗಳಿಗೆ ನೆರವಾದರು, ನಾವು ಅವರಂತೆ ಇತರರ ಕಷ್ಟಗಳಿಗೆ ನೆರವಾಗಬೇಕು. ಅವಳೊಬ್ಬಳು ಮಾಹಾ ತಾಯಿ, ನಾವು ತಾಯಿಯನ್ನು ಭಕ್ತಿ ಗೌರವದಿಂದ ಕಾಣುತ್ತೇವೆ, ಕಾರಣ ತಾಯಿ ನಮಗೆ ಮಮತಾಮಯಿ, ತ್ಯಾಗ ಬಲಿದಾನಗಳನ್ನು ಅರ್ಪಿಸುತ್ತಾಳೆ, ನಮ್ಮ ತಾಯಂದಿರು ನಮಗೆ ಇಷ್ಟು ಪ್ರೀತಿಸುತಾರಾದರೆ, ದೇವರ ತಾಯಿಯಾದ ಮೇರಿ ಮಾತೆ ನಮ್ಮನ್ನು ಎಷ್ಟು ಪ್ರೀತಿಸುತ್ತಾರೆಂದು ತಿಳಿಯಬೇಕು” ಎಂದು ಬಲಿದಾನದಲ್ಲಿ ಸಹಭಾಗಿಯಾಗಿದ್ದ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಸಂದೇಶ ನೀಡಿದರು.
“ಮೇರಿ ಮಾತೆ ಪಟ್ಟ ಕಷ್ಟ, ತ್ಯಾಗ, ಬಲಿದಾನಗಳು ಶ್ರೇಷ್ಟವಾದುವು, ಅವರು ಪವಿತ್ರ ಸಭೆಗೆ ನೀಡಿದ ಪ್ರೇರಣೆ ಅಪಾರ. ಯೇಸುವಿನ ಮರಣದ ನಂತರ ಆತನ ಶಿಷ್ಯರೆಲ್ಲರೂ, ಭಯದಿಂದ, ನಿವಾಸದ ಬಾಗಿಲನ್ನು ಭದ್ರಮಾಡಿಕೊಂಡು ಮುದುರಿ ಕುಳಿತುಕೊಂಡಾಗ ಇದೇ ಮೇರಿ ಮಾತೆ ಶಿಷ್ಯರಿಗೆ ಧೈರ್ಯ ತುಂಬಿ, ಪವಿತ್ರ ಸಭೆಗೆ ಶಕ್ತಿ ನೀಡಿದರು. ಮೇರಿ ಮಾತೆ ದೇವರ ಆಜ್ಞೆಯನ್ನು ಸೇವಕಿಯಂತೆ ನಡೆದುಕೊಂಡು ವಿಶ್ವಾಸದಿಂದ ನಡೆದುಕೊಂಡಳು. ಮೇರಿ ಮಾತೆ ಇತರರ ಪಾಲಿಗೆ ಆಶಿರ್ವಾದಂತೆ ನಡೆದುಕೊಂಡಳು, ನಾವೂ ಕೂಡ ಹೀಗೆಯೆ ಪರೋಪಕಾರಿ, ಆಶಿರ್ವಚನ ನೀಡುವರಾಗಬೆಕು” ಎಂದು ತಿಳಿಸಿದರು.
ಅದಕ್ಕೂ ಮುನ್ನಾ ಘತ ವರ್ಷದಲ್ಲಿ ನಮ್ಮನ್ನು ಕಾಪಾಡಿ ನಮಗೆ ಹಲವು ರೀತಿಗಳಿಂದ ಉಪಕಾರ ಮಾಡಿದಕ್ಕೆ ದೇವರಿಗೆ ಕ್ರತಜ್ಞತೆಗಾಗಿ ಪರಮ ಪ್ರಸಾದರ ಆರಾಧನೆಯನ್ನು ಪ್ರಧಾನ ಧರ್ಮಗುರು ಅ| ವ| ಸ್ಟ್ಯಾನಿ ತಾವ್ರೊ ನಡೆಸಿಕೊಟ್ಟು ಹಬ್ಬದ ಶುಭಾಶಯಗಳನ್ನು ಹಂಚಿಕೊಂಡರು.

ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ವಜ್ರ ಮಹೋತ್ಸವದ ಸಂಭ್ರಮಾಚರಣೆ

ಕುಂದಾಪುರ,ಜ.1 : ಅರವತ್ತರ ದಶಕದಲ್ಲೇ ರೈತರ ಹಿತಾಸಕ್ತಿಗಳಿಗಾಗಿ ಶ್ರಮಿಸಿದ ಉದಾತ್ತ ಚೇತನ ಯಡ್ತೆರೆ ಮಂಜಯ್ಯ ಶೆಟ್ಟರು. ಆಗಿನ ಎನ್ ಇ ಎಸ್ ಯೋಜನೆಯಂತೆ ಅವರು ರೈತರ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ದೂರ ದೃಷ್ಟಿಯಿಂದ ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘವನ್ನು ಸ್ಥಾಪಿಸಿದರು. ತಲ್ಲೂರಿನಲ್ಲಿ ಸುಸಜ್ಜಿತ ಅಕ್ಕಿ ಗಿರಣಿ ಪ್ರಾರಂಭಿಸಿ, ಲೆವಿ ಸಂಗ್ರಹಿತ ಬತ್ತದಿಂದ ಉತ್ತಮ ದರ್ಜೆಯ ಅಕ್ಕಿ ಉತ್ಪಾದಿಸುವ ವ್ಯವಸ್ಥೆ ಮಾಡಿದ್ದರು. ಕುಂದಾಪುರ ಪರಿಸರದಲ್ಲಿ ಮಂಜಯ್ಯ ಶೆಟ್ಟರಿಂದ ಪ್ರಾರಂಭಿಸಲ್ಪಟ್ಟ ಹಲವು ಸಂಸ್ಥೆಗಳು ಇಂದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲೊಂದು ಇದೀಗ ವಜ್ರ ಮಹೋತ್ಸವವಾಚರಿಸುತ್ತಿರುವ ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘ. ಇದು ಇನ್ನೂ ಅಭಿವೃದ್ಧಿ ಹೊಂದಿ ರೈತರ ಏಳಿಗೆಗೆ ಕಾರಣವಾಗಲಿ ಎಂದು ಹಿರಿಯ ಮುತ್ಸದ್ದಿ, ಧಾರ್ಮಿಕ ಮುಂದಾಳು ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು.

     ಶನಿವಾರ ಡಿಸೆಂಬರ್ 31 ರಂದು ಸಂಘದ ಪ್ರಧಾನ ಕಛೇರಿ ಆವರಣದಲ್ಲಿ ನಡೆದ ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ವಜ್ರ ಮಹೋತ್ಸವವನ್ನು ದೀಪ ಬೆಳಗಿ ಚಾಲನೆಗೊಳಿಸಿ ಅವರು ಶುಭ ಹಾರೈಸಿದರು.

    ಮುಖ್ಯ ಅತಿಥಿ ಎಸ್ ಸಿ ಡಿ ಸಿ ಸಿ ಬ್ಯಾಂಕಿನ ನಿರ್ದೇಶಕ ಡಾ. ದೇವಿಪ್ರಸಾದ್ ಶೆಟ್ಟಿ ಮಾತನಾಡಿ,  ರೈತಾಪಿ ವರ್ಗದ ಆರ್ಥಿಕ ಸಬಲೀಕರಣ, ಮತ್ತು ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಯಡ್ತರೆ ಮಂಜಯ್ಯ ಶೆಟ್ಟರು ಅರವತ್ತರ ದಶಕದಲ್ಲಿ ಸಹಕಾರಿ ಬೀಜ ಬಿತ್ತಿದ್ದರು. ಅದು ಇಂದು ಹೆಮ್ಮರವಾಗಿ ಬೆಳೆದು ಸಹಸ್ರಾರು ರೈತರಿಗೆ ಪ್ರಯೋಜನವಾಗಿದೆ. ಕುಂದಾಪುರ ಸಹಕಾರಿ ಕ್ಷೇತ್ರಕ್ಕೆ ಕೊಡುಗೆ ಅಪಾರ,ಕುಂದಾಪುರವೇ ಮಂಗಳೂರು ಉಡುಪಿ ಉಭಯ ಜಿಲ್ಲ್ಗೆಗಳಲ್ಲಿ ಸಹಕಾರಿ ಕ್ಷೇತ್ರವನ್ನು ಬೆಳೆಸಲು ಪ್ರೇರಣೆ ಆಗಿದೆ ರಾಜಕೀಯ, ಇನ್ನಿತರ ತಾರತಮ್ಯವಿಲ್ಲದೆ ಸಹಕಾರ ತತ್ವದಡಿ ಕಾರ್ಯಾಚರಿಸುವ ಈ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

    ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕುಂದಾಪುರ ಸಹಕಾರಿ ಸಂಘಗಳ ಸಹಾಯಕ  ನಿಬಂಧಕಿ ಲಾವಣ್ಯ ಕೆ. ಆರ್., ಬೈಂದೂರು ತಹಶೀಲ್ದಾರ್ ಶ್ರೀಕಾಂತ ಹೆಗ್ಡೆ ಮಾತನಾಡಿ ಶುಭ ಹಾರೈಸಿದರು.

     ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಲಕ್ಷ್ಮೀನಾರಾಯಣ ಜಿ. ಎನ್. ವಜ್ರ ಮಹೋತ್ಸವ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.  ತನ್ನ ಸೇವಾವಧಿಯಲ್ಲಿ ನೋಡಿದ ಅರವತ್ತರ ಸಂಭ್ರಮದ ವರ್ಷಾಚರಣೆಯನ್ನು ನಡೆಸುತ್ತಿರುವ ಪ್ರಥಮ ಸಂಸ್ಥೆ ಇದು ಎಂದರು.

ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಾಜಿ ಅಧ್ಯಕ್ಷರುಗಳನ್ನು, ನಿವೃತ್ತ ನೌಕರರನ್ನು,ಸಂಘಕ್ಕೆ ಸಹಕರಿಸಿದ, ಭೂ ಮಾಪಕ, ಚಿನ್ನ ಮಾಪಕರನ್ನು, ಬೈಂದೂರು ಸಂಘದ ಕಟ್ಟಡ ಮಾಲೀಕರನ್ನು, ಟ್ರಾನ್ಸಪೊರ್ಟರಗಳನ್ನು ಸನ್ಮಾನಿಸಲಾಯಿತು.

    ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ’ಸಂಸ್ಥಾಪಕರ ದೂರ ದ್ರಷ್ಟಿತ್ವದಿಂದ ಸ್ಥಾಪಿತವಾದ ಈ ಸಂಸ್ಥೆ ಇಂದು ವಜ್ರಮಹೋತ್ಸವವನ್ನು ಆಚರಿಸುತ್ತದೆ, ಇದರ ಹಿಂದೆ, ಹಿಂದಿನ ಎಲ್ಲಾ ಆಡಳಿತ ಮಂಡಳಿ, ಸೇವಾ ಸಿಬಂದಿ ಕಾರಣವಾಗಿದೆ.  ಆಡಳಿತ ಮಂಡಳಿ ಸಿಬಂದಿ ಜೊತೆಕೂಡಿ ಸೇವೆ ನೀಡಿದರೆ ಸಂಘಗಳು ಪ್ರಗತಿ ಸಾಧಿಸುತ್ತವೆ. ರೈತರ ಶ್ರೇಯೊಭಿವ್ರದ್ದಿಗಾಗಿ ಹುಟ್ಟು ಹಾಕಿದ ಈ ಸಂಸ್ಥೆ ಮುಂದೆ ಇನ್ನೂ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಇನ್ನು ಕೆಲವೇ ತಿಂಗಳಲ್ಲಿ ರೈತರು ಬೆಳೆದ ತರಕಾರಿಗಳನ್ನು ರೈತರು ನೇರವಾಗಿ ಮಾರಾಟ ಮಾಡುವಂತಹ, ತರಕಾರಿ ಮಾರುಕಟ್ಟೆ ಕುಂದಾಪುರದ ಸಂಗಮ್ ಹತ್ತಿರ ಆರಂಭವಾಗುತ್ತದೆ’ ಎಂದು ತಿಳಿಸಿದರು.

    ನಿರ್ದೇಶಕ ಎಸ್. ರಾಜು ಪೂಜಾರಿ ಸ್ವಾಗತಿಸಿ ಪ್ರಸ್ತಾವನೆಗೈದರು. ಅಶೋಕ್ ಕುಮಾರ್ ಶೆಟ್ಟಿ,  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಶೋಭಾಕೃಷ್ಣ,  ನಿರ್ದೇಶಕರಾದ ಮೋಹನ್ ದಾಸ್ ಶೆಟ್ಟಿ, ಮಲ್ಯಾಡಿ, ಕೆ. ಮೋಹನ್ ಪೂಜಾರಿ, ಪ್ರಭಾಕರ ಶೆಟ್ಟಿ, ಕೆ. ಸುಧಾಕರ ಶೆಟ್ಟಿ, ರವಿ ಗಾಣಿಗ, ಆನಂದ ಬಿಲ್ಲವ, ಎಚ್. ದಿನಪಾಲ್ ಶೆಟ್ಟಿ, ಎಂ. ಮಹೇಶ್ ಹೆಗ್ಡೆ, ಎಚ್. ಚಂದ್ರಶೇಖರ ಶೆಟ್ಟಿ ಚಿತ್ತೂರು, ಕೆ. ಭುಜಂಗ ಶೆಟ್ಟಿ ಮತ್ತು ಎಸ್. ಜಯರಾಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ ವಂದಿಸಿದರು.ಆರ್ ಎನ್ ಎಸ್ ಶಾಲಾ ಹಿಂದಿ ಶಿಕ್ಷಕಿ  ಜಯಶೀಲಾ ಕಾಮತ್ ಮತ್ತು ಆರ್.ಜೆ. ನಯನಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

    ಭೋಜನದ ನಂತರ ಸಂಸ್ಥೆಯ ಸ್ಥಾಪಕ ಯಡ್ತರೆ ಮಂಜಯ್ಯ ಶೆಟ್ಟಿ ಕುರಿತಾದ ವಿಚಾರಗೋಷ್ಠಿ ನಡೆಯಿತು.ವಿಚಾರಗೋಷ್ಟಿಯಲ್ಲಿ ಮಾಜಿ ಸಭಾಪತಿಗಳು, ಕರ್ನಾಟಕ ವಿಧಾನ ಪರಿಷತ್ ಇವರು ಸಂಸ್ಮರಣೆಯನ್ನು ನಡೆಸಿಕೊಟ್ಟರು. ಸಂಘದ ಅಧ್ಯಕ್ಷರಾದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ಶಾಸಕ ಮಾನ್ಯ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಕರ್ನಾಟಕದ ಆಹಾರ ನಿಗಮಗದ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಕೊಡ್ಗಿ, ಬೈಂದು ಮಾಜಿ ಶಾಸಕಾರಾಡಾ ಗೋಪಾಲ ಪೂಜಾರಿ, ಮಾಜಿ ಶಾಸಕರಾದ ಬಿ.ಅಪ್ಪಣ ಹೆಗ್ಡೆ ಭಾಗವಹಿಸಿದ್ದು,ಯಡ್ತರೆ ಮನೆಯ ಎಮ್.ಅಶೋಕ್ ಕುಮಾರ್ ಶೆಟ್ಟಿ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಅವಿಭಜಿತ ಕುಂದಾಪುರ ತಾಲೂಕು ಕೃಷಿ ಪತ್ತಿನ ಸಹಕಾರಿಗಳ ಅಧ್ಯಕ್ಷರು ಮತ್ತು  ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ನಿವ್ರತ್ತ ಪೋಪ್ ಬೆನೆಡಿಕ್ಟ್ XVI ಅವರು 95 ವರ್ಷ ವಯಸ್ಸಿನಲ್ಲಿ ನಿಧನರಾದರು

ನಿವ್ರತ್ತ ಪೋಪ್ ಬೆನೆಡಿಕ್ಟ್ XVI ಅವರು 95 ವರ್ಷ ವಯಸ್ಸಿನಲ್ಲಿ ವ್ಯಾಟಿಕನ್ ನಿವಾಸದಲ್ಲಿ ನಿಧನರಾದರು, ಸುಮಾರು ಒಂದು ದಶಕದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು, ಅವರು ಎಂಟು ವರ್ಷಗಳ ಕಾಲ ಕ್ಯಾಥೋಲಿಕ್ ಚರ್ಚ್ ಅನ್ನು ಮುನ್ನಡೆಸಿದರು 2 013 ರಲ್ಲಿ, ಅವರು 1415 ರಲ್ಲಿ ಗ್ರೆಗೊರಿ XII ರಿಂದ ರಾಜೀನಾಮೆ ನೀಡಿದ ಬಳಿಕ, ರಾಜೀನಾಮೆ ನೀಡಿದ ಮೊದಲ ಪೋಪ್ ಗುರುಗಳಾಗಿದ್ದಾರೆ.

ಬೆನೆಡಿಕ್ಟ್ ತನ್ನ ಅಂತಿಮ ವರ್ಷಗಳನ್ನು ವ್ಯಾಟಿಕನ್ ಗೋಡೆಗಳೊಳಗಿನ ಮೇಟರ್ ಎಕ್ಲೇಸಿಯಾ ಮಠದಲ್ಲಿ ಕಳೆದರು.ಅವರ ಉತ್ತರಾಧಿಕಾರಿ ಪೋಪ್ ಫ್ರಾನ್ಸಿಸ್ ಅವರು ಅಲ್ಲಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು

ವ್ಯಾಟಿಕನ್ ಹೇಳಿಕೆಯಲ್ಲಿ ಹೀಗೆ ಹೇಳಿದೆ: “ಪೋಪ್ ಎಮೆರಿಟಸ್, ಬೆನೆಡಿಕ್ಟ್ XVI, ಇಂದು 9:34 ಕ್ಕೆ ವ್ಯಾಟಿಕನ್‌ನ ಮೇಟರ್ ಎಕ್ಲೇಸಿಯಾ ಮಠದಲ್ಲಿ ನಿಧನರಾದರು ಎಂದು ನಾನು ದುಃಖದಿಂದ ನಿಮಗೆ ತಿಳಿಸುತ್ತೇನೆ. “ಹೆಚ್ಚಿನ ಮಾಹಿತಿಯನ್ನು ಸಾಧ್ಯವಾದಷ್ಟು ಬೇಗ ಒದಗಿಸಲಾಗುವುದು.”

ಪೋಪ್ ಎಮಿರಿಟಸ್ ಅವರ ಪಾರ್ಥಿವ ಶರೀರವನ್ನು ಜನವರಿ 2 ರಿಂದ ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ “ಭಕ್ತರ ಶುಭಾಶಯ” ಕ್ಕಾಗಿ ಇರಿಸಲಾಗುವುದು ಎಂದು ವ್ಯಾಟಿಕನ್ ಹೇಳಿದೆ.

ಪೋಪ್ ಬೆನೆಡಿಕ್ಟ್ ಅವರ ಅಂತ್ಯಕ್ರಿಯೆಯ ಯೋಜನೆಗಳನ್ನು ಮುಂದಿನ ಕೆಲವು ಗಂಟೆಗಳಲ್ಲಿ ಪ್ರಕಟಿಸಲಾಗುವುದು ಎಂದು ವ್ಯಾಟಿಕನ್ ಹೇಳಿದೆ.

ಮತದಾರ ಯಾವುದೇ ಆಮಿಷಕ್ಕೆ ಒಳಗಾಗದೆ, ಜವಾಬ್ದಾರಿಯುತವಾಗಿ ಮತದಾನದ ಹಕ್ಕು ಚಲಾಯಿಸಿ ಬದಲಾವಣೆ ತರಬೇಕು :ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ

ಶ್ರೀನಿವಾಸಪುರ: ಮತದಾರ ಯಾವುದೇ ಆಮಿಷಕ್ಕೆ ಒಳಗಾಗದೆ, ಜವಾಬ್ದಾರಿಯುತವಾಗಿ ಮತದಾನದ ಹಕ್ಕು ಚಲಾಯಿಸುವುದರ ಮೂಲಕ ಬದಲಾವಣೆ ತರಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು.
ಪಟ್ಟಣದ ವೆಂಕಟೇಶ್ವರ ನರ್ಸಿಂಗ್ ಹೋಂ ಸಭಾಂಗಣದಲ್ಲಿ ತಾಲ್ಲೂಕು ಎಎಪಿ ಘಟಕದ ವತಿಯಿಂದ ಏರ್ಪಡಿಸಿದ್ದ ಕುವೆಂಪು ಜನ್ಮ ದಿನಾಚರಣೆ ಹಾಗೂ ಪರಿವರ್ತನೆ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ, ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಜನ ಪ್ರತಿನಿಧಿಗಳಿಗೆ ಋಣ ಮುಕ್ತತೆ ಪರಿಕಲ್ಪನೆ ಇರಬೇಕು. ಅವರು ಸಮಾಜದ ಋಣ ತೀರಿಸಲು ಪ್ರಯತ್ನಿಸಬೇಕು. ಆದರೆ ಮತದಾರರಲ್ಲಿ ಋಣ ಮುಕ್ತತೆ ಪರಿಕಲ್ಪನೆ ಹೆಚ್ಚುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ. ಜೈಲಿಗೆ ಹೋಗಿ ಬಂದ ರಾಜಕಾರಣಿಗಳನ್ನು ಮತದಾರ ಬೆಂಬಲಿಸುವುದು ಋಣ ಮುಕ್ತತೆಗೆ ಉತ್ತಮ ಉದಾಹರಣೆ. ಜನಪ್ರತಿನಿಧಿಯೊಬ್ಬರು ಮೂರು ತಲೆಮಾರಿಗೆ ಸಾಕಾಗುಷ್ಟು ಸಂಪಾದನೆ ಮಾಡಿಕೊಳ್ಳಲು ಸಹಕರಿಸಿದ, ಕುಟುಂಬವನ್ನು ಬೆಂಬಲಿಸಿ ಮಾತನಾಡಿರುವುದು ಬೇಸರ ತರಿಸುವ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಚುನಾವಣೆಯಲ್ಲಿ ಮತ ಚಲಾಯಿಸಲು ಅಭ್ಯರ್ಥಿಯ ಜಾತಿ, ಮತ, ಭಾಷೆ, ಆಮಿಷ ಮಾನದಂಡವಾಗಬಾರದು. ಅಭ್ಯರ್ಥಿಯ ಸಾಮಾಜಿಕ ನಿಲುವು ಹಾಗೂ ಶುದ್ಧ ಹಸ್ತ ನೋಡಿ ಮತ ಚಲಾಯಿಸಬೇಕು. ಮತದಾನ ಮಾಡುವಲ್ಲಿ ಸಾರ್ವಜನಿಕರ ಜವಾಬ್ದಾರಿ ಹೆಚ್ಚಾಗಿರುತ್ತದೆ. ಯುವ ಮತದಾರರು ಎಚ್ಚೆತ್ತುಕೊಳ್ಳಬೇಕು. ಸಂವಿಧಾನದ ಆಶಯಕ್ಕೆ ಗೌರವ ನೀಡಬೇಕು ಎಂದು ಹೇಳಿದರು.
ತಾಲ್ಲೂಕು ಎಎಪಿ ಮುಖಂಡ ಡಾ. ವೈ.ವಿ.ವೆಂಕಟಾಚಲ ಮಾತನಾಡಿ, ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶೇಷವಾಗಿ ಪರಿವರ್ತನೆ ಕ್ಯಾಲೆಂಡರ್ ರಚಿಸಲಾಗಿದೆ. ರೋಗ ಹರಡದಂತೆ, ಅಪೌಷ್ಠಿಕತೆ ತಡೆಯಲು ನೆರವಾಗುವಂತೆ ಸಲಹೆ ಸೂಚನೆ ನೀಡಲಾಗಿದೆ. ಹಿರಿಯವಾಡಿ ತೆರೆಯಬೇಕಾದ ಅಗತ್ಯ ಕುರಿತು ಹೇಳಲಾಗಿದೆ. ಜನರು ಈ ಕ್ಯಾಲೆಂಡರ್ ಬಳಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರೊ.ದೊಡ್ಡರಂಗೇಗೌಡ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಗೋವಿಂದಹಳ್ಳಿ ಕೃಷ್ಣೇಗೌಡ, ಚಲನಚಿತ್ರ ನಿರ್ದೇಶಕ ಡಾ. ಗುಣವಂತ ಮಂಜು, ಡಾ. ವೈ.ಸಿ.ಬೀರೇಗೌಡ, ಡಾ. ಶುಭ, ಕೆಸಿ ಇಂಟರ್ ನ್ಯಾಷನಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೈ.ಸಿ.ಮುನೇಗೌಡ, ಡಿಎಸ್‍ಎಸ್ ಮುಖಂಡ ತಿಮ್ಮಯ್ಯ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿ.ಕೃಷ್ಣಾರೆಡ್ಡಿ, ಜಿಲ್ಲಾ ಎಎಪಿ ಅಧ್ಯಕ್ಷ ಸುರೇಶ್ ಬಾಲಕೃಷ್ಣ ಮಾತನಾಡಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಮಹತ್ವ ಹೊಂದಿರುವ ಪರಿವರ್ತನೆ ಕ್ಯಾಲೆಂಡರ್ ಉಚಿತವಾಗಿ ವಿತರಿಸಲಾಯಿತು.

ರಿಷಬ್ ಪಂತ್‌ಚಲಾಯಿಸುತಿದ್ದ ಕಾರು ಅಪಘಾತ ಕಾರು,ಸುಟ್ಟು ಕರಕಲು- ರಿಷಬ್ ತೀವ್ರ ಗಾಯಾಳು

ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ರಿಷಬ್ ಪಂತ್ ಉತ್ತರಖಂಡ ರಾಜ್ಯದಲ್ಲಿ ಕಾರು ಚಲಾಯಿಸುತ್ತಿದ್ದಾಗ ಡಿವೈಡರ್‌ಗೆ ನುಗ್ಗಿದ ಪರಿಣಾಮ ಭಾರೀ ಅಪಘಾತ ಸಂಭವಿಸಿದೆ. ತೀವ್ರ ಗಾಯಗಳಾಗಿರುವ ಅವರನ್ನು ಡೆಹ್ರಾಡೂನ್‌ನ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಈ ನಡುವೆ ಅವರ ಮರ್ಸಿಡೆಸ್ ಬೆಂಚ್ ಕಾರು ಸುಟ್ಟು ಕರಕಲಾಗಿದೆ.  

   ಇಂದು ಬೆಳಿಗ್ಗೆ ನವದೆಹಲಿಯಿಂದ ಉತ್ತರಖಂಡಕ್ಕೆ ಪ್ರಯಾಣಿಸುತ್ತಿದ್ದಾಗ ಉತ್ತರಾಖಂಡದ ರೂರ್ಕಿ ಬಳಿ ಅಪಘಾತ ಸಂಭವಿಸಿದೆ. ರಿಷಬ್ ಪಂತ್ ಸ್ವತಹ ಕಾರು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದ್ದು, ವೇಗವಾಗಿ ಚಲಿಸುವ ಕಾರು ಡಿವೈಡರ್‌ ಹಾರಿ ಹೋಗುವುದು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.

ಗಾಯಗೊಂಡ ಅವರನ್ನು ಸಕ್ಷಮ್ ಆಸ್ಪತ್ರೆ ಮಲ್ಟಿಸ್ಪೆಷಾಲಿಟಿ ಮತ್ತು ಟ್ರಾಮಾ ಸೆಂಟರ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು,. ರಿಷಬ್ ಅವರ ಹಣೆಗೆ, ಬೆನ್ನಿಗೆ ಪೆಟ್ಟಾಗಿದೆ. ಅವರ ಬಲ ಮೊಣಕಾಲು ಮತ್ತು ಪಾದದ ಬೆರಳಿಗೆ ಗಾಯವಾಗಿವೆ ಎಂದು. ಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

ಡ್ರೈವಿಂಗ್ ಮಾಡುವಾಗ ಪಂತ್ ತೂಕಡಿಸಿದ ಪರಿಣಾಮ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಆನಂತರ ವಾಹನಕ್ಕೆ ಬೆಂಕಿ ಹೊತ್ತಿಕೊಂಡಾಗ ತಪ್ಪಿಸಿಕೊಳ್ಳಲು ಕಾರಿನ ವಿಂಡ್‌ಸ್ಕ್ರೀನ್ ಅನ್ನು ಹೊಡೆದಿದ್ದಾರೆ. ಕಾರಿನಲ್ಲಿ ಪಂತ್ ಒಬ್ಬರೆ ಇದ್ದರು ಎಂದು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ತಿಳಿಸಿದ್ದಾರೆ.

ಬ್ರೆಜಿಲಿಯನ್ ಫುಟ್ ಬಾಲ್ ದಂತಕಥೆ ಪೀಲೆ 82 ನೇ ವಯಸ್ಸಿನಲ್ಲಿ ನಿಧನರಾದರು

ಮೂರು ವಿಶ್ವಕಪ್‌ಗಳನ್ನು ಗೆದ್ದು ಕ್ರೀಡೆಯ ಮೊದಲ ಜಾಗತಿಕ ಐಕಾನ್ ಎನಿಸಿಕೊಂಡಿದ್ದ ಬ್ರೆಜಿಲ್‌ನ ಫುಟ್‌ಬಾಲ್ ದಂತಕಥೆ ಪೀಲೆ ಅವರು 82 ನೇ ವಯಸ್ಸಿನಲ್ಲಿ ನಿಧನರಾದರು.

ಪೀಲೆ ಅವರು ಉಸಿರಾಟದ ಸೋಂಕು ಮತ್ತು ಕರುಳಿನ ಕ್ಯಾನ್ಸರ್‌ಗೆ ಸಂಬಂಧಿಸಿದ ಕಾಯಿಲೆಯಿಂದ ನವೆಂಬರ್ ಅಂತ್ಯದಲ್ಲಿ ಸಾವೊ ಪಾಲೊದಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ವಾರ, ಅವರ ಕ್ಯಾನ್ಸರ್ ಉಲ್ಬಣಗೊಂಡು ಅವರ ಆರೋಗ್ಯವು ಹದಗೆಟ್ಟಿತ್ತು, ಎಂದು. ಆಲ್ಬರ್ಟ್ ಐನ್‌ಸ್ಟೈನ್ ಆಸ್ಪತ್ರೆಯ ಹೇಳಿಕೆಯ ಪ್ರಕಾರ, ಕರುಳಿನ ಕ್ಯಾನ್ಸರ್‌ನ ಪ್ರಗತಿಯಿಂದಾಗಿ ಅವರು ಬಹು ಅಂಗಾಂಗ ವೈಫಲ್ಯದಿಂದ ಗುರುವಾರ ನಿಧನ ಹೊಂದಿದ್ದಾರೆ. ಎಂದು ತಿಳಿಸಿದ್ದಾರೆ.

   60 ವರ್ಷಗಳಿಗೂ ಹೆಚ್ಚು ಕಾಲ, ಪೀಲೆ ಎಂಬ ಹೆಸರಿನಿಂದ ಫುಟ್ ಬಾಲ್ ಸಮಾನಾರ್ಥಕವಾಗಿ ಹೆಸರು ಗಳಿಸಿದ್ದರು. ಅವರು ಕಾಲುಗಳು ಫುಟ್ ಬಾಲನ್ನು ಮಾಂತ್ರಿಕ ರೀತಿಯಲ್ಲಿ ನಿಯಂತ್ರಿಸುತಿದ್ದರು. ಅವರು ನಾಲ್ಕು ವಿಶ್ವಕಪ್‌ಗಳಲ್ಲಿ ಆಡಿದರು ಮತ್ತು ಇತಿಹಾಸದಲ್ಲಿ ಮೂರು ಭಾರಿ ವಿಶ್ವಕಪ್ ಗೆದ್ದ ಏಕೈಕ ಆಟಗಾರರಾಗಿದ್ದಾರೆ,  ಅವರ ಆಟಗಾರಿಕೆಯ ಪರಂಪರೆಯು ಗಮನಾರ್ಹ ಗೋಲ್-ಸ್ಕೋರಿಂಗ್ ದಾಖಲೆಯನ್ನು ಸಾರ್ವಕಾಲಿಕ ಮೀರಿ ನಿಲ್ಲುತ್ತದೆ.

   ಫುಟ್ ಬಾಲಾ ದಂತಕಥೆ ಯಾಗಿದ್ದ ಪೀಲೆಗೆ ಶ್ರದ್ಧಾಂಜಲಿಗಳ ಮಹಾಪೂರವೇ ಹರಿದು ಬಂದಿದೆ.

ಹಾಲಾಡಿಯಲ್ಲಿ ಭಂಡಾರಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಶಿಬಿರ 2022-23 ರ ಸಮಾರೋಪ ಸಮಾರಂಭ

ಕುಂದಾಪುರ : ಡಿಸೆಂಬರ್ 29ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೂರಿ, ಹಾಲಾಡಿಯಲ್ಲಿ ಭಂಡಾರಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಶಿಬಿರ 2022-23 ಇದರ ಸಮಾರೋಪ ಸಮಾರಂಭ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಡಾ. ಶುಭಕರಾಚಾರಿ ವಹಿಸಿದ್ದು ಇವರು ಶಿಬಿರವನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳು ಆಗಿರುವ ಅರುಣ ಎ. ಎಸ್,ರಾಮಚಂದ್ರ ಆಚಾರ್ ಮತ್ತು ಅಣ್ಣಪ್ಪ ಇವರಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೂರಿ ಇವರ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರಕಾರ್ಸ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ. ಎಂ. ಗೊಂಡ,ಅನೂಪ್ ಕುಮಾರ್ ಶೆಟ್ಟಿ, ಸಮೂಹ ಸಂಪನ್ಮೂಲ ಕೇಂದ್ರ ಹಾಲಾಡಿ, ಜನಾರ್ದನ್ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಹಾಲಾಡಿ,ಗುರುಪ್ರಸಾದ್ ಸದಸ್ಯರು ಗ್ರಾಮ ಪಂಚಾಯತ್ ಹಾಲಾಡಿ, ನಾಗರಾಜ್ ಗೋಳಿ ಸದಸ್ಯರು ಗ್ರಾಮ ಪಂಚಾಯತ್ ಹಾಲಾಡಿ, ಗಣೇಶ ಎಮ್ ಅಧ್ಯಕ್ಷರು ಎಸ್ ಡಿ ಎಂ ಸಿ,ಸ.ಹಿ.ಪ್ರಾ.ಶಾಲೆ ಮುದೂರಿ, ಸಂಜೀವ ಮುಖ್ಯೋಪಾಧ್ಯಾಯರು ಸ ಹಿ ಪ್ರಾ ಶಾಲೆ ಮೂದೂರಿ ಮತ್ತು ರಮೇಶ್ ನಾಯ್ಕ್ ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಮುದೂರಿ ಉಪಸ್ಥಿತರಿದ್ದರು.
ಶಿಬಿರಾರ್ಥಿಯರಾದ ಚಿತ್ರ ಸ್ವಾಗತಿಸಿ, ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾದ ರಾಮಚಂದ್ರ ಆಚಾರ್ ವಂದಿಸಿ ಮತ್ತು ರೋಜಾ ನಿರೂಪಿಸಿ ಕಾರ್ಯಕ್ರಮ ನಿರ್ವಹಿಸಿದರು.