“ರವಿ ಬಸ್ರೂರು” ಇವರಿಗೆ ಕೋ. ಮ. ಕಾರಂತ ಪ್ರಶಸ್ತಿ ಪ್ರದಾನ

ಕುಂದಾಪುರ : ರವಿ ಬಸ್ರೂರು'ರಿಗೆ ಕೋ. ಮ. ಕಾರಂತ ಪ್ರಶಸ್ತಿ ಕುಂದ ಕನ್ನಡ ಭಾಷೆಯ ಬಗ್ಗೆ ಹೊರಗಿನವರಿಗೆ ಕುತೂಹಲ ಇತ್ತು. ಆದರೆ ಮಹತ್ವ ನೀಡುತ್ತಿರಲಿಲ್ಲ. ಅರ್ಥ ಮಾಡಿಕೊಳ್ಳುವ ಪ್ರಯತ್ನವೂ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ರವಿ ಬಸ್ರೂರು ಎಂಬ ಯುವಕ ತನ್ನ ಕುಂದಾಪ್ರ ಕನ್ನಡಕ್ಕೆ ಮಹತ್ವ ಕೊಟ್ಟು ಹಾಡು, ಚಲನಚಿತ್ರ ನಿರ್ಮಾಣ ಮಾಡುವುದರೊಂದಿಗೆ ಕುಂದಾಪ್ರ ಕನ್ನಡ ಭಾಷೆಗೆ ಈ ಮಣ್ಣಿನ ಸಂಸ್ಕøತಿಗೆ ಶೋಭೆ ತಂದುಕೊಟ್ಟರು. ಇವರ ಶ್ರದ್ಧೆ ಪರಿಶ್ರಮ, ಸಾಧನೆಗೆ ಕುಂದಪ್ರಭ ಬಳಗ ಕೋ.ಮ.ಕಾರಂತ ಪ್ರಶಸ್ತಿಯನ್ನು ಅರ್ಹವಾಗಿಯೇ ಪ್ರದಾನ ಮಾಡಿದೆ. ಕೋ.ಮ.ಕಾರಂತ ಪ್ರಶಸ್ತಿ ಸ್ವೀಕರಿಸಿದ ಅತಿ ಕಿರಿಯವರಾದ ರವಿ ಬಸ್ರೂರು ತಮ್ಮ ಜೀವನದಲ್ಲಿ ಇನ್ನಷ್ಟು ಸಾಧನೆಗಳ ಮೆಟ್ಟಲು ಏರುವಲ್ಲಿ ಈ ಪ್ರಶಸ್ತಿ ಪ್ರೇರಣೆ ನೀಡಲಿ. ಕೋ.ಮ. ಕಾರಂತರೆಂಬ ಶ್ರೇಷ್ಠ ಮಹನೀಯರ ಸ್ಮರಣೆ ಈ ಮೂಲಕ ಮಾಡಲು ಸಾಧ್ಯವಾಗಿರುವುದು ಸಂತೋಷದ ವಿಚಾರ" ಎಂದು ಕರ್ನಾಟಕ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕುಂದಾಪುರ ಭಂಡಾರ್‍ಕಾರ್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಕುಂದಪ್ರಭ ಸಂಸ್ಥೆ ವತಿಯಿಂದ ನಡೆದ ಕೋ.ಮ. ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ರೋಟರಿ ಜಿಲ್ಲಾ ಮಾಜಿ ಗವರ್ನರ್ ಅಭಿನಂದನ್ ಶೆಟ್ಟಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಗಮಿಸಿದ್ದರು. ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್. ಶೆಣೈ ಸ್ವಾಗತಿಸಿದರು. ಅಂಕಣಗಾರ ಕೋ. ಶಿವಾನಂದ ಕಾರಂತ ಕೋ.ಮ. ಕಾರಂತರ ಸ್ಮರಣೆ ಮಾಡಿದರು. ರವಿ ಬಸ್ರೂರು’ ಅವರಿಗೆ ಕೋ.ಮ. ಕಾರಂತ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ಖ್ಯಾತ ಸಾಹಿತಿ ಡಾ. ರಂಜಿತ್ ಕುಮಾರ್ ಶೆಟ್ಟಿಯವರ 20 ಕಥೆಗಳು ಕೃತಿಯನ್ನು ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಬಿಡುಗಡೆ ಮಾಡಿದರು.
ನ್ಯೂಜಿಲ್ಯಾಂಡಿನ ಆಕ್ಲ್ಯಾಂಡ್‍ನಲ್ಲಿ ನಡೆದ ಕಾಮನ್‍ವೆಲ್ತ್ ಪವರ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಐದು ಚಿನ್ನದ ಪದಕ, ಬೆಳ್ಳಿ ಪದಕ ಪಡೆದ ಸತೀಶ್ ಖಾರ್ವಿಯವರನ್ನು ಶಾಸಕ ಮಂಜುನಾಥ ಭಂಡಾರಿ ಗೌರವಿಸಿದರು.

ಪ್ರತಿಭಾನ್ವಿತ ತಬಲಾ ಕಲಾವಿದರಾದ ಕೆ. ವಿಘ್ನೇಶ್ ಕಾಮತ್, ಶ್ರೀಧರ್ ಭಟ್, ಕೋಟೇಶ್ವರ ಹಾಗೂ ಗಾಯಕಿ ಧಾರಿಣಿ ಕೆ.ಎಸ್. ಅವರನ್ನು ಮಂಜುನಾಥ ಭಂಡಾರಿ ಗೌರವಿಸಿದರು.
ಡಾ| ಉಮೇಶ್ ಪುತ್ರನ್, ಡಾ| ಸದಾನಂದ ಭಟ್, ಕೆ. ರಮಾನಂದ ಕಾರಂತ, ಎಚ್. ಸೋಮಶೇಖರ ಶೆಟ್ಟಿ, ಹುಸೇನ್ ಹೈಕಾಡಿ, ಯು. ಸಂಗೀತಾ ಶೆಣೈ ಅತಿಥಿಗಳನ್ನು ಗೌರವಿಸಿದರು.
ತೆಂಕನಿಡಿಯೂರು ಪ.ಪೂ. ಕಾಲೇಜಿನ ಪ್ರಾಂಶುಪಾಲ, ಲೇಖಕ ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು.
ಹಿರಿಯ ಕಲಾವಿದ ವೇಣುಗೋಪಾಲ ಭಟ್ ಕೋಟೇಶ್ವರ ಹಾಗೂ ಗಣೇಶ್ ಗಂಗೊಳ್ಳಿ, ಅಶ್ವಿನಿ, ಮೇಘನಾ, ಪಾವನಾ ಅವರಿಂದ ಲಘು ಸಂಗೀತ ಕಾರ್ಯಕ್ರಮ ನಡೆಯಿತು.
ಲೇಖಕ ಪಿ. ಜಯವಂತ ಪೈ ವಂದಿಸಿದರು.

“ಕುಂದಾಪುರ ಭಾಷಿ, ಸಂಸ್ಕøತಿ ನಂಗೆ ದೇವಸ್ಥಾನ ಇದ್ದಾಂಗೆ” – ರವಿ ಬಸ್ರೂರು


ದೇವ್ರ ಡಬ್ಬಿಗೆ ದುಡ್ಡ್ ಹಾಕ್ರೆ ನಾಂವ್ ವಾಪಾಸ್ ತೆಗ್ಗಿತ್ತಾ? ಹಾಂಗೆ ಕುಂದಾಪ್ರ ಭಾಷಿಗಾಗಿ ದುಡ್ಡ್ ಹಾಕ್ರೆ ಅದ ದೇವ್ರ ಡಬ್ಬಿ ದುಡ್ಡ್ ಹಾಕದ್ ಹಾಗೆ. ನಂಗೆ ಕುಂದಪ್ರ ಕನ್ನಡ ದೇವಸ್ಥಾನ. ಅದ್ರ ಫಲ ದೇವ್ರ ಕೊಟ್ಟೇ ಕೊಡ್ತ. ನಂಗೂ ಅದ್ರ ಫಲ ಸಿಕ್ಕೀತ್. ಕುಂದಾಪ್ರ ಭಾಷಿ ಯಾಕೆ ಬೇರೆಯವ್ರಿಗೆ ಅರ್ಥ ಆತ್ತಿಲ್ಲ? ತಮಿಳು, ತೆಲುಗು, ಮಲಯಾಳ ಭಾಷೆ ಅರ್ಥ ಆತ್ತ್ ಅಂಬ್ರ. ಕುಂದಾಪ್ರ ಭಾಷಿ ಯಾಕ್ ಆತ್ತಿಲ್ಲ. ಏನಾರೂ ಮಾಡಿ ಅರ್ಥ ಆಪು ಹಾಂಗ್ ಮಾಡ್ಕ್ ಅಂತ ಪ್ರಯತ್ನ ಮಾಡ್ದಾಗ, ಎಷ್ಟೋ ಜನ, ಇವ್ನಿಗೆ ಮಂಡಿ ಪೆಟ್ಟ್ ಅಂದ್ರ್. ಆದ್ರೆ ಕಡಿಗೂ ಫಲ ಸಿಕ್ತ. ನಮ್ಮ ಊರ ಬದಿ ಗೌರವ ಸಿಕ್ಕು ಹಾಂಗ್ ಆಯ್ಕ್ ಅಂತ ಸಾದ್ನಿ ಮಾಡ್ಕ್ ಅಂತ ಕನ್ಸ್ ಇದಿತ್. ಈಗ ಆ ಕನ್ಸ್ ನನ್ಸ್ ಆಯ್ತ್. ಕೋ.ಮ. ಕಾರಂತ ಪ್ರಶಸ್ತಿ ಸಿಕ್ಕಿದ್ದ್ದ್ ತುಂಬ ಖುಷಿ ಆಯ್ತ್. ನನ್ನ ಜವಾಬ್ದಾರಿ ಹೆಚ್ಚಾಯ್ತ್” ಎಂದು ಕೋ.ಮ. ಕಾರಂತ ಪ್ರಶಸ್ತಿ ಸ್ವೀಕರಿಸಿ ರವಿ ಬಸ್ರೂರು ಕುಂದಾಪ್ರ ಕನ್ನಡದಲ್ಲಿ ಬಹಳ ಅರ್ಥಪೂರ್ಣವಾಗಿ ಮಾತನಾಡಿದರು.
ಕುಂದಾಪ್ರ, ಉಡುಪಿ ಜಿಲ್ಲೆ ಪರಿಸರದಲ್ಲಿ ನೂರಾರು ಮಂದಿ ಪ್ರತಿಭಾವಂತ ಯುವಕರಿದ್ದಾರೆ ಅವರ ಆಸಕ್ತಿಯ ಆಲೋಚನೆಗಳಿಗೆ ಬೆಂಬಲ ನೀಡಿ, ತುಂಬ ಮಂದಿ ಸಾಧನೆ ಮಾಡಿದವರೂ ಇದ್ದಾರೆ ಅವರನ್ನೂ ಬೆಳಕಿಗೆ ತನ್ನಿ. ಪ್ರಶಂಸೆ ಎನ್ನುವುದು ಬೇಕಾಗುತ್ತದೆ. ನಮ್ಮ ಪರಿಶ್ರಮಕ್ಕೆ ಪ್ರೋತ್ಸಾಹ ಸಿಗುವಂತೆ, ಸಮಾಧಾನ ಸಿಗುವಂತೆ ನಾವು ಪ್ರಯತ್ನಿಸಬೇಕು. ಕಾಲಕ್ಕೆ ತಕ್ಕಂತೆ ನಾವು ಬೆಳೆಯಬೇಕಾಗುತ್ತದೆ. ನಮ್ಮ ಕೆಲಸ ವೈಭವೀಕರಿಸಬೇಕಾಗುತ್ತದೆ. ಹಾಗೆ ಮಾಡಿದಾಗ ಗುರುತಿಸಲ್ಪಡುತ್ತೇವೆ. ನಮ್ಮ ಯುವಕರು ಯಾವಾಗಲೂ ಮತ್ತೊಬ್ಬರ ಬಗ್ಗೆ ಕೆಟ್ಟದ್ದು ಆಲೋಚಿಸಲು ಪುರುಸೊತ್ತು ಇಲ್ಲದಷ್ಟು ಕೆಲಸದಲ್ಲಿ ಮಗ್ನರಾಗುವಂತಾಗಬೇಕು ಎಂದು ಹೇಳಿದರು.

ಕುಂದಾಪ್ರ ಕನ್ನಡ ಅಕಾಡೆಮಿಗಾಗಿ ಪ್ರಯತ್ನಿಸಬೇಕು ಬಿ. ಅಪ್ಪಣ್ಣ ಹೆಗ್ಡೆ


ರವಿ ಬಸ್ರೂರು ಕುಟುಂಬದವರು ಮೂಲತ: ಪ್ರತಿಭಾವಂತ ಶಿಲ್ಪಿಗಳು. ಚಿನ್ನದ, ಬೆಳ್ಳಿಯ ಮುಖವಾಡ ತಯಾರಿ, ಶಿಲ್ಪಕಲೆ, ಪರಿಣಿತರು, ಹಾರ್ಮೋನಿಯಂ, ಯಕ್ಷಗಾನದ ತಾಳ ವಾದ್ಯಗಳನ್ನೂ ತಯಾರಿಸುವವರು, ಪ್ರಯೋಗಶೀಲರು. ಸಂಗೀತ, ಭಜನೆ ಆಸಕ್ತರು. ರವಿ ಚಿಕ್ಕಂದಿನಿಂದಲೂ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದು, ಹುಡುಗನಾಗಿದ್ದಾಗಲೇ ಪ್ರಯೋಗಗಳನ್ನು ನಡೆಸಿದವರು. ಈಗ ಬಸ್ರೂರಿಗೆ ಹೆಸರು ತರುವಂತಹ ಸಾಧನೆ ಮಾಡಿದ್ದಾರೆ. ಮುಖ್ಯವಾಗಿ ಕುಂದಾಪ್ರ ಕನ್ನಡ ಭಾಷೆ ಸಂಸ್ಕøತಿಯ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಈ ಶ್ರೀಮಂತ ಕುಂದಾಪ್ರ ಕನ್ನಡ, ಭಾಷೆ, ಸಂಸ್ಕøತಿ ಉಳಿದು ಬೆಳೆಯುವಂತಾಗಲೂ ಅಕಾಡೆಮಿ ಸ್ಥಾಪನೆ ಅಗತ್ಯವಾಗಿದ್ದು ಇಲ್ಲಿ ಉಪಸ್ಥಿತರಿರುವ ಮಂಜುನಾಥ ಭಂಡಾರಿಯವರೂ ಸೇರಿದಂತೆ ಜನಪ್ರತಿನಿಧಿಗಳು ಆ ಬಗ್ಗೆ ಗಂಭೀರ ಪ್ರಯತ್ನ ನಡೆಸಬೇಕು. ಕುಂದಪ್ರಭ ಈ ಭಾಷೆಯ ಅಭಿವೃದ್ಧಿಗೆ ಕುಂದಾಪುರದ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದು, ಅಕಾಡೆಮಿ ಸ್ಥಾಪನೆಗೊಂಡರೆ ಹೆಚ್ಚು ಅನುಕೂಲವಾಗುತ್ತದೆ. ರವಿ ಬಸ್ರೂರುರಂತಹ ಯುವಕರಿಗೆ ಇನ್ನಷ್ಟು ಭಾಷೆ, ಸಂಸ್ಕøತಿ ಬಗ್ಗೆ ಆಸಕ್ತಿ ಹುಟ್ಟುತ್ತದೆ ಎಂದು ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು. ಬೆಲ್ಲದಂತೆ ಬೆಳೆದ ರವಿ – ಮಂಜುನಾಥ ಭಂಡಾರಿ
“ಬೆಲ್ಲ ಎಲ್ಲಿದೆಯೋ ಅಲ್ಲಿ ಇರುವೆಗಳು ಬರುತ್ತವೆ. ಬೆಲ್ಲ ಇರುವೆಗಳ ಬಳಿ ಹೋಗುವುದಿಲ್ಲ ರವಿ ಬಸ್ರೂರು ಈಗ ಬೆಲ್ಲದಂತೆ, ಅವರ ಪ್ರತಿಭೆಯಿಂದ ಅವರು ಖ್ಯಾತರಾಗಿದ್ದಾರೆ. ಹುಟ್ಟೂರು ಬಸ್ರೂರಲ್ಲಿ ಅತ್ಯಾಧುನಿಕ ಸ್ಟುಡಿಯೋ ಮಾಡಿದುದರಿಂದ ಅವರನ್ನು ಹುಡುಕಿಕೊಂಡು ಬಸ್ರೂರಿಗೆ ಬರುತ್ತಾರೆ. ಇದು ಒಂದು ದೊಡ್ಡ ಸಾಧನೆ. ರವಿ ಬಸ್ರೂರು ಜೀವನ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ದಾಖಲಾಗುವಂತೆ ಇದೆ. ನಮ್ಮ ಶಿಕ್ಷಣ ಸಂಸ್ಥೆಗಳಿಗೂ ಅವರನ್ನು ಕರೆಸಬೇಕೆಂದಿದ್ದೇನೆ”ಎಂದು ವಿಧಾನ ಪರಿಷತ್ ಸದಸ್ಯರಾದ ಶಿಕ್ಷಣ ತಜ್ಞ ಮಂಜುನಾಥ ಭಂಡಾರಿ ಹೇಳಿದರು.
ಬಸ್ರೂರು ಒಂದು ಐತಿಹಾಸಿಕ ಗ್ರಾಮ. ಈ ಹಳ್ಳಿ ಎಷ್ಟು ಪ್ರಸಿದ್ಧವಾಗಿತ್ತು ಅಂದರೆ ವ್ಯವಹಾರ, ಲಲಿತ ಕಲೆ, ಶಿಲ್ಪಕಲೆ, ಸಾಹಿತ್ಯ, ಸಂಸ್ಕøತಿ ಎಲ್ಲ ವಿಷಯಗಳಿಗೂ ಹೆಸರುವಾಸಿಯಾಗಿತ್ತು. ವಿದೇಶಿಗರೂ ಈ ಬಸ್ರೂರಿನ ಬಗ್ಗೆ ಆಕರ್ಷಿತರಾಗಿದ್ದರು. ಈ ಭಾಗವನ್ನು ವಶಪಡಿಸಿಕೊಂಡ ವಿದೇಶಿಗರನ್ನು ಸೋಲಿಸಿ ಛತ್ರಪತಿ ಶಿವಾಜಿ ನಮ್ಮವರಿಗೆ ಮರಳಿ ಒದಗಿಸಿಕೊಟ್ಟ ಇತಿಹಾಸವಿದೆ. ಇಂತಹ ಬಸ್ರೂರಿನಲ್ಲಿ ಹುಟ್ಟಿದ ಹುಡುಗ, ಕನ್ನಡ ಚಲನಚಿತ್ರದ ಖ್ಯಾತ ನಿರ್ಮಾಪಕರೂ ಬಸ್ರೂರಿಗೆ ಬರುವಂತೆ ಸಾಧನೆ ಮಾಡಿರುವುದು ಪ್ರಶಂಸನೀಯ. ಕುಂದಪ್ರಭ ವತಿಯಿಂದ ಕೋ. ಮ. ಕಾರಂತ ಪ್ರಶಸ್ತಿ ನೀಡಿರುವುದು ಅರ್ಹ ಸಾಧಕನಿಗೆ ನೀಡಿದಂತಾಗಿದೆ ಎಂದು ಅವರು ಹೇಳಿದರು.

ಶಿಲ್ಪದಂತೆ ರೂಪುಗೊಂಡ ರವಿ – ಅಭಿನಂದನ್ ಶೆಟ್ಟಿ


ಪೆಟ್ಟು ತಿಂದು ರೂಪುಗೊಂಡ ಶಿಲ್ಪ ಗುಡಿಗೆ ಸೇರಿ ಪೂಜಿಸಲ್ಪಡ್ತದೆ. ಏನೂ ಆಗದ ಕಲ್ಲು ನಡೆದಾಡುವ ಹಾಸು ಆಗುತ್ತದೆ. ನಮ್ಮ ರವಿ ಬಸ್ರೂರು ಹಾಗೆ ತುಂಬ ಸಂಕಷ್ಟ ಅನುಭವಿಸಿಯೂ ಛÀಲದಿಂದ ಮುನ್ನಡೆದಿದ್ದಾರೆ. ಇಂದು ಕೀರ್ತಿ ತರುವಂತಹ ಸಾಧನೆಗೈದಿದ್ದಾರೆ. ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಕುಂದಾಪ್ರ ಕನ್ನಡದ ಬಗ್ಗೆ ಬೇರೆ ಕಡೆ ತಮಾಷೆ ಮಾಡುತ್ತಿದ್ದರು. ಇಂದು ರವಿ ಬಸ್ರೂರು ಅವರಂತಹ ವ್ಯಕ್ತಿಗಳ ಪ್ರಯತ್ನದಿಂದ ಕುಂದಾಪ್ರ ಕನ್ನಡ ರೋಮಾಂಚನ ಉಂಟು ಮಾಡುತ್ತಿದೆ. ಅದು “ಭಾಷೆಯಲ್ಲ ಬದುಕು” ಎಂದು ಇವರು ತೋರಿಸಿಕೊಟ್ಟಿದ್ದಾರೆ. ಕುಂದಾಪುರ ನಾಗರಿಕರು `ರವಿ’ ಅವರಿಗೆ ಚಿರ ಋಣಿಯಾಗುತ್ತಾರೆ. “ನಿರಾಡಂಬರವಾಗಿ ಕೆಲಸ ಮಾಡಿ, ಯಶಸ್ಸು ಶಬ್ದ ಮಾಡಲಿ” ಎಂಬಂತೆ ರವಿ ಬಸ್ರೂರು ಶ್ರಮಿಸಿದ್ದಾರೆ. “ಬಿದ್ದಾಗ ಸೋಲಲ್ಲ, ಬಿದ್ದು ಏಳದಿದ್ದರೆ ಸೋಲು” ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಯಶಸ್ಸು ನಿರಂತರವಾದುದು ಎನ್ನುವುದನ್ನು ಅರಿತು ಇನ್ನಷ್ಟು ಸಾಧನೆಗಾಗಿ ರವಿ ಬಸ್ರೂರು ಮುನ್ನಡೆಯಲಿ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್, ಉದ್ಯಮಿ ಅಭಿನಂದನ್ ಶೆಟ್ಟಿ ಹೇಳಿದರು.
ಬಸ್ರೂರು ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುನಿಕ ಸ್ಟುಡಿಯೋ ನಿರ್ಮಾಣ ಮಾಡಿರುವುದು ನಮಗೆ ತಿಳಿದಿರಲಿಲ್ಲ. ಅವರು ತಣ್ಣಗೆ ಸ್ಟುಡಿಯೋ ನಿರ್ಮಾಣ ಮಾಡಿ ಹುಟ್ಟೂರಲ್ಲಿ ಸಾಧನೆಗೈದಿದ್ದಾರೆ” ಎಂದು ಅವರು ಅಭಿನಂದನೆ ಸಲ್ಲಿಸಿದರು.

         

ಡಾ| ರಂಜಿತ್ ಕುಮಾರ್ ಶೆಟ್ಟಿಯವರ ಕಥಾ ಸಂಕಲನ ಬಿಡುಗಡೆ


“ಸಾಹಿತಿ ಡಾ. ರಂಜಿತ್‍ಕುಮಾರ್ ಶೆಟ್ಟಿಯವರ ಉತ್ತಮ ಕಥೆಗಾರರೂ ಕಾದಂಬರಿಗಾರರೂ ಆಗಿದ್ದು, ಅವರ ನೂತನ ಕೃತಿ “10+10 = 20 ಕಥೆಗಳು” ಬಿಡುಗಡೆ ಮಾಡಲು ಸಂತೋಷವಾಗುತ್ತದೆ. ಅವರ ಕಥೆಗಳು ತಮಾಷೆಯೊಂದಿಗೆ ಉತ್ತಮ ಸಂದೇಶಗಳನ್ನು ಸಾರುವ ಮೌಲ್ಯಯುತ ಕತೆಗಳಾಗಿರುತ್ತದೆ. ಈ ಕೃತಿ ಬಿಡುಗಡೆ ಮಾಡಲು ಹೆಮ್ಮೆಯಾಗುತ್ತದೆ” ಎಂದು ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
ಕುಂದಕನ್ನಡದ ಅಭಿವೃದ್ಧಿಗೆ ನಾವೆಲ್ಲಾ ಶ್ರಮಿಸೋಣ. ಕುಂದಾಪ್ರಕನ್ನಡದ ಸಾಹಿತ್ಯ ರಚಿಸುವಲ್ಲಿ ಎಲ್ಲರೂ ಆಸಕ್ತಿ ವಹಿಸಬೇಕು. ಕುಂದಾಪ್ರ ಕನ್ನಡದಲ್ಲಿ ಸಾಹಿತ್ಯವಿದ್ದರೆ ಅದನ್ನು ಒಟ್ಟು ಸೇರಿಸಿ ಪ್ರಕಟಿಸೋಣ. ಡಾ| ರಂಜಿತ್ ಕುಮಾರ್ ಅವರ ಕೃತಿಗಳಲ್ಲಿ, ಅವರ ಮಾತಿನಲ್ಲಿ ಕುಂದಕನ್ನಡ ನಾವು ಕಾಣುತ್ತೇವೆ. ಅವರು ಇನ್ನಷ್ಟು ಕೃತಿಗಳನ್ನು ರಚಿಸುವಂತಾಗಲಿ” ಎಂದು ಹೇಳಿದರು.
ಈ ಪುಸ್ತಕ ಕುಂದಾಪುರದ ವಿನಯಾ ಆಸ್ಪತ್ರೆಯಲ್ಲಿ ಲಭ್ಯವಿರುತ್ತವೆ. ಎಂದು ಡಾ| ರಂಜಿತ್ ಕುಮಾರ್ ಶೆಟ್ಟಿ ತಿಳಿಸಿದರು.

ಕುಂದಾಪುರ ಸಂತ ಮೇರಿ ಪ. ಪೂ. ಕಾಲೇಜಿನ  ಚೆಸ್ ಕ್ರೀಡಾ ಪಟು ನಿಶಾಂತ್ ಡಿಸೋಜಾ ರಾಷ್ಟ್ರಮಟ್ಟಕ್ಕೆ ಆಯ್ಕೆ

ಕುಂದಾಪುರ: ಸ್ಥಳೀಯ ಸಂತ ಮೇರಿಸ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಥಮ ಪಿ ಯು ವಿದ್ಯಾರ್ಥಿ ನಿಶಾಂತ್ ಡಿಸೋಜಾ ಚೆಸ್ ಆಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಚೆಸ್ ಆಟದಲ್ಲಿ ಅತೀವ ಆಸಕ್ತಿಯನ್ನು ಹೊಂದಿದ್ದು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡು ಚೆಸ್ ಮಾಸ್ಟರ್ ಬಿರುದು ಗಳಿಸಿರುವ ನಿಶಾಂತ್ ಡಿಸೋಜಾ, 2023 ರ ಹೊಸವರ್ಷದ ಪ್ರಾರಂಭದಲ್ಲೇ ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ ಆಶ್ರಯದಲ್ಲಿ ನ್ಯೂ ತುಮಕೂರು ಜಿಲ್ಲಾ ಚೆಸ್ ಸಂಸ್ಥೆ ಹಾಗೂ ಎಂ.ಎಂ.ಚೆಸ್ ಡೆವಲಪ್ ಮೆಂಟ್ ಟ್ರಸ್ಟ್ ಇವರ ಆಶ್ರಯದಲ್ಲಿ ತುಮಕೂರಿನಲ್ಲಿ ನಡೆದ ಚೆಸ್ ಪಂದ್ಯಾಟದಲ್ಲಿ 17 ರ ಒಳಗಿನ ವಯೋಮಿತಿಯಲ್ಲಿ ಸ್ಪರ್ಧಿಸಿ ವಿಜೇತನಾಗಿ, ತಮಿಳುನಾಡಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಚೆಸ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾನೆ.ಈತ ಹಂಗಳೂರು ಫ್ರಾನ್ಸಿಸ್ ಮತ್ತು ನೀತಿ ಡಿಸೋಜಾ ದಂಪತಿಯ ಪುತ್ರನಾಗಿದ್ದಾನೆ.

    ಈತನ ಈ ಸಾಧನೆಗೆ ಕಾಲೇಜಿನ, ಜಂಟಿ ಕಾರ್ಯದರ್ಶಿ ವಂ|ಧರ್ಮಗುರು ಸ್ಟ್ಯಾನಿ ತಾವ್ರೊ, ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಅಭಿನಂದನೆಯನ್ನು ಸಲ್ಲಿಸಿ,ರಾಷ್ಟ್ರಮಟ್ಟದಲ್ಲೂ ವಿಜಯಿಯಾಗಲಿ ಎಂದು ಶುಭ ಹಾರೈಸಿದ್ದಾರೆ.

ಕುಂದಾಪುರ ರೋಜರಿ ಚರ್ಚ್ ನೂತನ ಪಾಲನ ಮಂಡಳಿ ರಚನೆ:ಉಪಾಧ್ಯಕ್ಷೆಯಾಗಿ ಶಾಲೆಟ್ ರೆಬೆಲ್ಲೊ


ಕುಂದಾಪುರ, ಜ.2: ಕುಂದಾಪುರ ರೋಜರಿ ಚರ್ಚ್ ನೂತನ ಪಾಲನ ಮಂಡಳಿ ರಚನೆಯಾಗಿ ಜನವರಿ 1 ರಿಂದ ಚಾಲನೆಗೆ ಬಂದಿದೆ.
ಅ|ವಂ|ಧರ್ಮಗುರು ಸ್ಟ್ಯಾನಿ ತಾವ್ರೊ ಕುಂದಾಪುರ ರೋಜರಿ ಚರ್ಚ್ ಪಾಲನ ಮಂಡಳಿ ಅಧ್ಯಕ್ಷರಾಗಿದ್ದು, ಉಪಾಧ್ಯಕ್ಷರಾಗಿ ಶಾಲೆಟ್ ರೇಬೆಲ್ಲೊ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ, ಕಾರ್ಯದರ್ಶಿಯಾಗಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿಯಾಗಿ ಪ್ರೇಮಾ ಡಿಕುನ್ಹಾ ಪುನರ್ ಆಯ್ಕೆಗೊಂಡಿದ್ದಾರೆ, ಆರ್ಥಿಕ ಸಮಿತಿಯ ಸದಸ್ಯರಾಗಿ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಹುದ್ದೆ ಹಕ್ಕಿನಿಂದ, ಜೋನ್ಸನ್ ಡಿಆಲ್ಮೇಡಾ, ವಾಲ್ಟರ್ ಡಿಸೋಜಾ, ಡಾ|ಸೋನಿ ಡಿಕೋಸ್ತಾ ಮತ್ತು ಸೆರಾಫಿನ್ ಡಿಸಿಲ್ವಾ ಆಯ್ಕೆಯಾಗಿದ್ದಾರೆ.
13 ವಾಳೆಯ ಗುರಿಕಾರರು, ವಾಳೆಯ ಪ್ರತಿನಿಧಿಗಳು, ಹಲವು ಸಂಘಸಂಸ್ಥೆಗಳ, ಧರ್ಮಭಗಿನಿಯರ ಪ್ರತಿನಿಧಿಗಳು ಪಾಲನ ಮಂಡಳಿಯಲ್ಲಿ ಇದ್ದು, ಸುಮಾರು 40 ಮಂದಿಯ ಸದಸ್ಯತನವಿದ್ದ ನೂತನ ಮಂಡಳಿಯ ಸದಸ್ಯರು 2022 ರ ಡಿಸೆಂಬರ್ 31 ರಂದು ಸಂಜೆ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ನೇತ್ರತ್ವದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಈ ಮಂಡಳಿಯು ಮುಂದಿನ 3 ವರ್ಷಗಳ ತನಕ ಅಧಿಕಾರದಲ್ಲಿರುವುದು. ಅ|ವಂ| ಸ್ಟ್ಯಾನಿ ತಾವ್ರೊ ನೂತನ ಪಾಲನ ಮಂಡಳಿಗೆ ಅಭಿನಂದಿಸಿದರು. ಕಳೆದ ಮೂರು ವರ್ಷಗಳಿಂದ ಉಪಾಧ್ಯಕ್ಷರಾಗಿ ಸೇವೆ ನೀಡಿದ ಎಲ್.ಜೆ.ಫೆರ್ನಾಂಡಿಸ್ ಇವರನ್ನು ಗೌರವಿಸಲಾಯಿತು.

ಕುಂದಾಪುರ ರೋಜರಿ ಚರ್ಚಿನಲ್ಲಿ ನಿಧನ ಹೊಂದಿದ ನಿವ್ರತ್ತ ಪೋಪ್ ಬೆನೆಡಿಕ್ಟ್ XVI ಅವರಿಗೆ ಶ್ರದ್ದಾಂಜಲಿ

ಕುಂದಾಪುರ ರೋಜರಿ ಚರ್ಚಿನಲ್ಲಿ ನಿಧನ ಹೊಂದಿದ ನಿವ್ರತ್ತ ಪೋಪ್ ಬೆನೆಡಿಕ್ಟ್ ಅವರಿಗೆ ಶ್ರದ್ದಾಂಜಲಿ
ಕುಂದಾಪುರ ರೋಜರಿ ಚರ್ಚಿನಲ್ಲಿ ನಿಧನ ಹೊಂದಿದ ನಿವ್ರತ್ತ ಪೋಪ್ ಬೆನೆಡಿಕ್ಟ್ ಅವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ಕಳೆದ ಸಾಲಿನ ಕೊನೆಯ ದಿವಸದಂದು, ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂಈ ಸ್ಟ್ಯಾನಿ ತಾವ್ರೊ ಅವರ ನೇತ್ರರ್ವದಲ್ಲಿ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಮತ್ತು ಭಕ್ತಾಧಿಗಳು ಪ್ರಾರ್ಥನೇಯ ಮೂಲಕ ಅವರ ಆತ್ಮಕ್ಕೆ ಶಾಂತಿ ಕೊರೀದರು
.

New Year Celebration at Bondel Church

As the old year 2022 was about to end and the New Year 2023 was waiting to see the dawn, the parishioners of Bondel assembled in the Church at 6.30 p.m. on 31st December 2022 to bid good bye to the old year and welcome the New Year 2023 with prayer and hope .The parishioners of St Lawrence Church, Bondel here gathered in large numbers for the adoration of the Blessed Sacrament.
To give thanks to God for all the good things that he had showered on the people of the parish, the Holy Hour was led by Rev Fr Andrew Leo D’Souza & Rev Dr Fr Ivan D’Souza- professor in philosophy at the inter-diocesan seminary, Jeppu, . with reflection and devotion. While thanking the Lord for the blessings that He had showered on the faithful, Rev Fr. Andrew helped the people to reflect upon their own shortcomings and iniquities.
The Solemnity of the Mary, Mother of God feast began with the Eucharistic Banquet. Rev Fr Prakash Cutinha , was the main celebrant.
Rev Dr Fr Ivan D’Souza his homily, he highlighted the importance of Mary Mother of God . ಮರಿ ಆಮ್ಕಾ೦ ಎಕ್ ಬೆಸಾ೦ವ್ ಆಮ್ಚ್ಯಾ ಜಿಣಿಯೆ೦ತ್ ಎಕ್ ಲಿಸಾ೦ವ್ Today’s Feast of Mary, the Mother of God is a very appropriate way to begin a new year. This celebration reminds us that the Blessed Virgin Mary, the Mother of God, is also our Heavenly Mother. “Through Mary to Jesus!” This is an occasion to renew our devotion to Mary, who is also Mother of the Church because she is our spiritual mother — and we are the Church. The solemnity shows the relationship of Jesus to Mary. It’s a perfect example of how we should venerate Mary under all of her titles and is a good foundation for our understanding of Mary’s place in Christology. The Church puts the feast of this solemnity on the first day of the New Year to emphasize the importance of Mary’s role in the life of Christ and of the Church.

Rev. Fr Andrew Leo D’Souza Parish Priest , Rev Fr Peter Gonsalves Principal St Lawrence English Medium school , Rev Fr Lancy D’Souza Asst. Parish Priest , Rev Ravi-MSIJ, , Rev Fr Arul , Rev Fr Vipin Betharram Rev Fr Theo, Rev Fr Kiran SJ con-celebrated the mass. The Children choir enriched the spiritual atmosphere by singing melodiously the meaningful hymns.
Before the final blessings , prizes were distributed to the winners of Individual Crib Making Competition and Ward wise Star Making Competition.
The oath taking ceremony of the Newly Elected Vice President & Secretary of the Parish Pastoral Council & Financial Committee ,Office Bearers, Gurkars , Representatives & Nominated members was held. This ceremony was initiated by Rev Fr Andrew Leo D’Souza . The parishioners who participated in the Holy Eucharist witnessed the Oath Taking Ceremony.

At the end Parish Priest Rev. Fr. Andrew Leo greeted one and all and wished a very prosperous new year 2023. He Thanked the concelebrants priests, the Children choir , Liturgy Committee, Volunteers, PPC Members and all those helped in the celebration of the New Year. After the mass there was short programme conducted by SVP association.

ಅಲಂಗಾರ್‌ನಲ್ಲಿ ಬಾಲ ಯೇಸುವಿನ ಹಬ್ಬದ ತಯಾರಿಯಲ್ಲಿ ಶಿಶು ಜೀಸಸ್ ನೊವೆನಾ ಪ್ರಾರಂಭ

ಅಲಂಗಾರ್‌: ಬಾಲ ಯೇಸುವಿನ ಹಬ್ಬದ ತಯಾರಿಯಲ್ಲಿ ಅಲಂಗಾರ್‌ನಲ್ಲಿ ಶಿ 8 ಜನವರಿ 2023 ರಂದು ಪ್ರಾರಂಭವಾಯಿತು.  

      ಮೂಡುಬಿದಿರೆಯ ವಿ.ಫಾ.ಓನಿಲ್ ಡಿಸೋಜ ವಿಕಾರ್ ಫೊರಾನೆ ಉತ್ಸವದ ಧ್ವಜಾರೋಹಣವನ್ನು ನೆರವೇರಿಸಿ 9 ದಿನಗಳ ಹಬ್ಬದ ತಯಾರಿಯನ್ನು ಉದ್ಘಾಟಿಸಿದರು.”ಹಬ್ಬಕ್ಕೆ ಆಧ್ಯಾತ್ಮಿಕವಾಗಿ ತಯಾರಾಗಬೇಕು. ಇದಕ್ಕೆ ಪವಿತ್ರ ಕುಟುಂಬವು ನಮಗೆ ಅತ್ಯುತ್ತಮ ಉದಾಹರಣೆಯಾಗಿದೆ, ಅಲ್ಲಿ ಮೂವರೂ ದೇವರ ಚಿತ್ತವನ್ನು ಪಾಲಿಸಿದರು ಮತ್ತು ಅವನ ಮಾರ್ಗಗಳಿಗೆ ಶರಣಾದರು, ಇದು ಅವರು ಪವಿತ್ರರಾದರು ಮತ್ತು ನಮಗೆಲ್ಲರಿಗೂ ಮಾದರಿಯಾಗಿದೆ.

ಹಬ್ಬದ ಈ ಸಿದ್ಧತೆಯು ನಮಗೆ ಪವಿತ್ರವಾಗಿರಲು ಸಹಾಯ ಮಾಡಲಿ ಮತ್ತು ಯೇಸುವಿನ ಪ್ರೀತಿಯಲ್ಲಿ ಬೆಳೆಯಲು ನಮ್ಮನ್ನು ನೆರವಾಗಲಿ. ಎಂದು ಹೇಳಿದರು.

   ಫಾ.ಓನಿಲ್ ಪವಿತ್ರ ಮಾಸಾಚರಣೆ ನಡೆಸಿ ಭಕ್ತರಿಗಾಗಿ ಪ್ರಾರ್ಥಿಸಿದರು ಬಲಿದಾನದ ನಂತರ ಬಾಲ ಯೇಸುವಿನ ಆರಂಭಿಸಲಾಯಿತು. ನೆರೆದಿದ್ದ ಎಲ್ಲ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು

2023ರ ನೂತನ ಕ್ಯಾಲೆಂಡರ್‍ನ್ನು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಶಿವಾರೆಡ್ಡಿ ರವರು ಬಿಡುಗಡೆ

ಪಟ್ಟಣದ ಹಳೇ ಮಾವಿನ ಮಂಡಿ ಬಳಿ ನವ ಕರ್ನಾಟಕ ಸ್ವಾಭಿಮಾನಿ ವೇದಿಕೆ ಕಚೇರಿಯಲ್ಲಿ ಶನಿವಾರ 2023ರ ನೂತನ ಕ್ಯಾಲೆಂಡರ್‍ನ್ನು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಶಿವಾರೆಡ್ಡಿ ರವರು ಬಿಡುಗಡೆ ಮಾಡಿದರು.
ಈ ಸಮಯದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ , ಮುಖಂಡರಾದ ಸಾಧಿಕ್ ಅಹಮ್ಮದ್, ರವಿ,ಜಗನ್, ಕಾರ್‍ಬಾಬು, ಬಕಾಶ್, ಇದಾಯಿತ್, ರಿಯಾಜ್,ಏಜಾಜ್ ಪಾಷ ಇದ್ದರು.

ಮಾದಕ ದ್ರವ್ಯದ ವ್ಯಸನಿಯ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತದೆ : ಅಬಕಾರಿ ಉಪ ಆಯುಕ್ತ ಎಚ್.ಎಂ.ರಮೇಶ್‍ಕುಮಾರ್

ಶ್ರೀನಿವಾಸಪುರ: ಮಾದಕ ವಸ್ತುಗಳ ಸೇವೆನೆಗೊಮ್ಮೆ ಒಳಗಾದರೆ ಅದರಿಂದ ಹೊರಬರುವುದು ಕಷ್ಟ ಇದರಿಂದ ಮಾದಕ ದ್ರವ್ಯದ ವ್ಯಸನಿಯ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತ ಎಚ್.ಎಂ.ರಮೇಶ್‍ಕುಮಾರ್ ಹೇಳಿದರು.
ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ತಾಲೂಕು ಅಬಕಾರಿ ಇಲಾಖೆ , ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಮಾದಕ ವಸ್ತು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕು ಅಬಕಾರಿ ನಿರೀಕ್ಷಕ ರೋಹಿತ್ ಮಾತನಾಡಿ ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ಹದಿಹರೆಯ ವಯಸ್ಸಿನವರು ಒಳಗಾಗುತ್ತಾರೆ. ಒಮ್ಮೆ ಮಾದಕ ವಸ್ತುಗಳ ಸೇವೆನೆಗೆ ಒಳಗಾದರೆ ಅದರಿಂದ ಹೊರಬರುವುದು ತುಂಬಾ ಕಷ್ಟ. ದುಶ್ಚಟಕ್ಕೆ ಬಾಣಸರಾದವರು ಸಾಮಾನ್ಯವಾಗಿ ಸುಳ್ಳು ಹೇಳುವುದು ಜಾಸ್ತಿ. ಈ ಒಂದು ದೃಷ್ಟಿಯಿಂದ ಯುವ ಪೀಳಿಗೆಯು ಎಚ್ಚರದೊಂದಿಗೆ ಜೀವನ ನಡೆಸಬೇಕು ಎಂದರು.
ಉಪನ್ಯಾಸಕರಾದ ಮೃತ್ಯುಂಜಯ, ಹರೀಶ್, ನವೀನ್ ಇದ್ದರು.

ಬ್ಲಡ್ ಕ್ಯಾನ್ಸರನ್ನೇ ಗೆದ್ದು ಹೊಸ ಬದುಕಿನತ್ತ ಮರಳಿದ ಬಾಲಕಿಯ ಕೃತಜ್ಞತೆ
ಚಿಕಿತ್ಸೆಗೆ ನೆರವಾಗಿ ಜೀವ ಉಳಿಸಿದ ಬ್ಯಾಲಹಳ್ಳಿ ಗೋವಿಂದಗೌಡರಿಗೆ ಧನ್ಯವಾದ

ಕೋಲಾರ:- ಆರು ವರ್ಷದ ಬಾಲಕಿಯೊಬ್ಬಳು ಕಳೆದ 2019 ರಲ್ಲಿ ಬ್ಲಡ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಸುದ್ದಿ ತಿಳಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಖುದ್ದ ಮಗುವಿನ ಮನೆಗೆ ಹೋಗಿ ಚಿಕಿತ್ಸೆಗೆ 1.5 ಲಕ್ಷ ನೆರವು ಒದಗಿಸಿದ್ದರಿಂದಾಗಿ ಆಕೆ ಇದೀಗ ಆರೋಗ್ಯವಂತಳಾಗಿ ಹೊಸ ಬದುಕಿನತ್ತ ಹೆಜ್ಜೆ ಹಾಕಿದ್ದು, ಜೀವ ಉಳಿಸಿದ ನೆರವಿಗೆ ಬ್ಯಾಂಕಿಗೆ ಆಗಮಿಸಿ ಧನ್ಯವಾದ ಸಲ್ಲಿಸಿದ ಘಟನೆ ಶನಿವಾರ ನಡೆಯಿತು.
ತಾಲ್ಲೂಕಿನ ಬೆತ್ತನಿ ಗ್ರಾಮದ ಸುಮಂತ್ ಕುಮಾರ್,ಚೈತ್ರಾ ದಂಪತಿಗಳ ಈ ಮುದ್ದಾದ 6 ವರ್ಷದ ಬಾಲಕಿ ಕಾರುಣ್ಯ ಮಾರಕ ಬ್ಲಡ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದು,ತಲೆಯಲ್ಲಿ ಪೂರ್ಣ ಕೂದಲು ಉದುರಿಹೋಗಿತ್ತಲ್ಲದೇ ರೋಗ ಪ್ರಥಮ ಹಂತದಲ್ಲಿರುವುದರಿಂದ ಕೂಡಲೇ ಚಿಕಿತ್ಸೆ ನೀಡಿದಲ್ಲಿ ಗುಣವಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು.
ಆದರೆ ಖಾಸಗಿ ಶಾಲೆಯೊಂದರ ವಾಹನ ಚಾಲಕರಾಗಿದ್ದ ಸುಮಂತ್ ಕುಮಾರ್, ಸಾಲ ಮಾಡಿ 1.5 ಲಕ್ಷಕ್ಕೂ ಹೆಚ್ಚಿನ ಹಣವನ್ನು ಚಿಕಿತ್ಸೆಗೆ ಖರ್ಚು ಮಾಡಿದ್ದರು. ಉಳಿದಂತೆ ಸೆಂಟ್‍ಜಾನ್ಸ್ ಆಸ್ಪತ್ರೆಯ ವೈದ್ಯರ ಪ್ರಕಾರ ಚಿಕಿತ್ಸೆಗೆ 7.5 ಲಕ್ಷ ರೂಗಳ ಅಗತ್ಯವಿದ್ದು, ಈ ಹಣ ಕ್ರೋಢೀಕರಿಸಲಾಗದೇ ಆತಂಕದಲ್ಲೇ ಜೀವನ ದೂಡುತ್ತಿದ್ದರು.


ಗೋವಿಂದಗೌಡರಿಂದ ಮಾನವೀಯ ನೆರವು

ಮುದ್ದಾದ ಈ ಬಾಲಕಿಯ ಅನಾರೋಗ್ಯದ ಕುರಿತು ತಿಳಿದ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರು ಪೋಷಕರನ್ನು ಕರೆಸಿಕೊಂಡು ವಿವರ ಪಡೆದು ತಕ್ಷಣವೇ 50 ಸಾವಿರ ನೆರವು ನೀಡಿ, ಉಳಿದ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಒದಗಿಸುವುದಾಗಿ ತಿಳಿಸಿದ್ದಲ್ಲದೇ ಆಕೆಯ ಚಿಕಿತ್ಸೆಗೆ ಉಳಿದ ಹಣ ನೀಡಿ ಧೈರ್ಯ ತುಂಬಿದ್ದರು.
ಅಂದು ಸಹಾಯಹಸ್ತ ಚಾಚಿ ಹೃದಯ ತುಂಬಿ ಮಾತನಾಡಿದ್ದ ಗೋವಿಂದಗೌಡರು, ಈ ಮುದ್ದಾದ ಮಗುವನ್ನು ಕಂಡಾಗ ದೇವರು ಬಡವರಿಗೆ ಏಕೆ ಇಂತಹ ದೊಡ್ಡ ಕಾಯಿಲೆಗಳನ್ನು ನೀಡಿದ ಎಂದು ವಿಷಾದವಾಗುತ್ತದೆ ಎಂದು ನೊಂದು ತಿಳಿಸಿದ್ದರು.
ಶಾಲೆಗೆ ಹೋಗಿ ಎಲ್ಲರಂತೆ ಕಲಿಯಬೇಕಾದ ಮಗು ಇಂದು ನೋವಿನಿಂದ ಕಾಲ ನೂಕುತ್ತಿದೆ, ಆ ಮಗುವಿನ ಕಣ್ಣುಗಳಲ್ಲಿ ಭಯ ಕಾಣುತ್ತಿದೆ,ಜತೆಗೆ ಇಂತಹ ಮುದ್ದಾದ ಮಗುವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ತಂದೆ,ತಾಯಿಯ ದುಃಖಕ್ಕೆ ಪ್ರತಿಯೊಬ್ಬರು ಸ್ಪಂದಿಸಬೇಕಾದ ಅಗತ್ಯವೂ ಇದೆ ಎಂದು ಹೇಳಿ ನೆರವಾಗಿದ್ದರು.
ಅಂದು ದುಃಖಿತರಾಗಿದ್ದ ತಂದೆತಾಯಿಗೆ ಧೈರ್ಯ ತುಂಬಿದ್ದ ಅವರು, ಚಿಂತೆ ಮಾಡದಿರಿ, ಇಂತಹ ಮುದ್ದಾದ ಮಗುವನ್ನು ದೇವರು ಉಳಿಸಿಕೊಡುತ್ತಾನೆ, ಚಿಕಿತ್ಸೆಗೆ ಹಣದ ಕುರಿತು ಚಿಂತೆ ಮಾಡದಿರಿ, ಚಿಕಿತ್ಸೆ ಆರಂಭವಾಗುತ್ತಿದ್ದಂತೆ ಅಗತ್ಯ ನೆರವು ಪೂರ್ತಿ ನಾನೇ ಒದಗಿಸುವುದಾಗಿ ಭರವಸೆ ನೀಡಿ ಅದರಂತೆ ಚಿಕಿತ್ಸೆಗೆ ಅಗತ್ಯವಾದ ನೆರವನ್ನು ಮೂರು ಬಾರಿ ಒದಗಿಸಿದ್ದರು.
ಬದುಕುಳಿಯಲು


ನೆರವಾದವರಿಗೆ ಕೃತಜ್ಞತೆ ಚೇತರಿಕೆ ಧನ್ಯವಾದ


ಗೋವಿಂದಗೌಡರ ಹೃದಯವಂತಿಕೆ ಹಾಗೂ ಹಾರೈಕೆಯಿಂದ ಇದೀಗ ಬ್ಲಡ್ ಕ್ಯಾನ್ಸರ್ ಅನ್ನು ಗೆದ್ದು ಚೇತರಿಸಿಕೊಂಡಿರುವ ಈ ಬಾಲಕಿ ಕಾರುಣ್ಯ ತಾನು ಬದುಕುಳಿಯಲು ನೆರವಾದ ಬ್ಯಾಲಹಳ್ಳಿ ಗೋವಿಂದಗೌಡರನ್ನು ತಮ್ಮ ಪೋಷಕರೊಂದಿಗೆ ಶನಿವಾರ ಭೇಟಿಯಾಗಿ ಧನ್ಯವಾದ ಸಲ್ಲಿಸಿದಳು.
ಈ ಮಗುವಿಗೆ ಇದೀಗ ಎದೆ ಬಳಿ ಕಿಮೋಪೋರ್ಟ್ ಅಳವಡಿಸಿದ್ದು, ಅದನ್ನು ನ.2 ರ ಸೋಮವಾರ ತೆಗೆಯುತ್ತಿದ್ದು, ಅದಕ್ಕಾಗಿ ಇನ್ನೂ 1.8 ಲಕ್ಷ ನೆರವಿನ ಅಗತ್ಯವಿದೆ ಎಂದು ಪೋಷಕರು ತಿಳಿಸಿ, ಒಟ್ಟಾರೆ ಮಗು ಸಾವಿನ ಭಯದಿಂದ ಪಾರಾಗಿದ್ದಾಳೆ ಎಂದು ಕೃತಜ್ಞತೆ ತಿಳಿಸಿದರು.
ಈ ಚಿಕಿತ್ಸೆಗೂ ನೆರವಾಗುವ ಭರವಸೆ ನೀಡಿದ ಬ್ಯಾಲಹಳ್ಳಿ ಗೋವಿಂದಗೌಡರು ಸಾವಿಗೆ ಹತ್ತಿರವಾಗಿದ್ದ ಮಗುವಿನಲ್ಲಿ ಆತ್ಮಸ್ಥೈರ್ಯ ತುಂಬಿ, ಚಿಕಿತ್ಸೆಗೆ ನೆರವಾಗುವ ಮೂಲಕ ಆ ಮಗುವನ್ನು ಕ್ಯಾನ್ಸರ್ ಮಾರಿಯಿಂದ ರಕ್ಷಿಸಿ ಹೃದಯವಂತಿಕೆ ಮೆರೆದಿದ್ದು ಮಾತ್ರವಲ್ಲ, ಆ ಮಗುವಿಗೆ ಸುಂದರ ಬದುಕು ಸಿಗಲು ನೆರವಾಗಿದ್ದಾರೆ.