ಕೊಟೇಶ್ವರ ಚರ್ಚ್ ವಾರ್ಷಿಕ ಮಹಾ ಹಬ್ಬ – “ಸ್ವರ್ಗದ ದಾರಿಗೆ, ಪ್ರಾರ್ಥನೆಯ ಆಯುಧದೊಂದಿಗೆ”

ಕುಂದಾಪುರ,ಜ.4: “ಸ್ವರ್ಗದ ದಾರಿಗೆ, ಪ್ರಾರ್ಥನೆಯ ಆಯುಧದೊಂದಿಗೆ” ಎಂಬ ಧ್ಯೇಯ ವಾಕ್ಯದೊಂದಿಗೆ ಕೊಟೇಶ್ವರ ಸಂತ ಅಂತೋನಿ ಚರ್ಚಿನಲ್ಲಿ ವಾರ್ಷಿಕ ಮಹಾ ಹಬ್ಬವು ಭಕ್ತಿ ಸಡಗರದ ಬಲಿದಾನದ ಅರ್ಪಿಸುವ ಮೂಲಕ ಜನವರಿ 4 ರಂದು ಆಚರಿಸಲಾಯಿತು
“ಪ್ರಾರ್ಥನೆ ಅಂದರೆ, ದೇವರ ಹತ್ತಿರ ಅನ್ಯೊನ್ಯವಾಗಿ ಗೆಳೆಯರಂತೆ ಮಾತನಾಡುವುದು. ಯೇಸು ಸ್ವಾಮಿಯೆ ಹೇಳಿದಂತೆ, ನೀವು ಉದ್ದುದ್ದಕ್ಕೂ, ಪ್ರಾರ್ಥನೆ ಅಂತಾ ಬಡಬಡಿಸುವಂತೆ ಬೊಬ್ಬಿಡಬೇಡಿ, ಚಿಕ್ಕದಾದ ಭಕ್ತಿ ಪೂರ್ವಕವಾಗಿ ಪ್ರಾರ್ಥಿಸಿರಿ, ನೀವು ಬೇಡುವುದಕ್ಕಿಂತ ಮೊದಲು, ನಿಮಗೇನು ಬೇಕೆಂದು ದೇವರಿಗೆ ತಿಳಿದಿದೆ” ಕಾರ್ಮೆಲ್ ಮೇಳದ ಖ್ಯಾತ ಧರ್ಮಗುರು ವಂ|ಡಾ|ವಿಲ್ಫ್ರೆಡ್ ರೊಡ್ರಿಗಸ್ ವಾರ್ಷಿಕ ಮಹಾಹಬ್ಬದ ಬಲಿದಾನವನ್ನು ಅರ್ಪಿಸಿ ಸಂದೇಶ ನೀಡಿದರು.
‘ಪ್ರಾರ್ಥನೆಗೆ ದೇವಾಲಯವೇ ಬೇಕೆಂಬುದಿಲ್ಲ. ಕೆಲವೊಂದು ಸಲ ದೇವಾಲ್ಯಗಳು ಇಲ್ಲದೆ ಜಾಗದಲ್ಲಿ ನಾವುರುತ್ತೇವೆ, ನೀವು ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ, ನೀವು ಪ್ರಾರ್ಥಿಸಬಹುದು, ಅವಿಲಿನ ಸಣ್ಣ ಪುಷ್ಪ ಸಂತ ತೆರೆಜಾ, ಅಡಿಗೆ ಕೋಣೆಯಲ್ಲಿ, ಪಾತ್ರೆ ಪಗಡಿಯ ಜೊತೆ ಕೂಡ ದೇವರಿದ್ದಾನೆ ಎಂದು ಹೇಳುತ್ತಾಳೆ. ಯೇಸುವಿನ ಸಣ್ಣ ಪುಷ್ಪ ಸಂತ ತೆರೆಜಾ ಹೂ ತೋಟಗಳ ಮಧ್ಯೆ ಪ್ರಾಥನೆಯಿಂದ ಮಗ್ನನಾಗಿ, ಧ್ಯಾನಿಸುತಿದ್ದಳು, ಶಿಲುಭೆಯ ಸಂತ ಜೋನ್ ಕೂಡ ನಮಗೆ ಪ್ರಾರ್ಥನೆಗೆ ಮಾರ್ಗದರ್ಶಕರಾಗಿದ್ದಾರೆ, ಈ ಮೂವರು ಪ್ರಾರ್ಥನಾ ವಿಷದಲ್ಲಿ ಡಾಕ್ಟರೇಟ್ ಪಡೆದುಕೊಂಡ ಕಾರ್ಮೆಲ್ ಮೇಳದವರು” ಅನ್ನುತ್ತಾ ‘ಬಾಯಿ ಪಾಠಗಳ ಪ್ರಾರ್ಥನೆಕಿಂತ, ಸ್ವಂತವಿವೇಚೆನೆಯಿಂದ ಮಾಡಿದ ಪ್ರಾರ್ಥನೆಗಳು ಉತ್ತಮಾವಾಗಿರುತ್ತೆ, ಹೀಗೆ ನಾವು ಪ್ರಾರ್ಥನೆ ಎಂಬ ಆಯುಧವನ್ನು ಉಪಯೋಗಿಸಿಕೊಂಡು ಸ್ವರ್ಗರಾಜ್ಯವನ್ನು ಪಡೆದುಕೊಳ್ಳುವಂತಹ ಪ್ರಯತ್ನ ಪಡೋಣ’ ಎಂದು ಹೇಳಿದರು.
ಸಂಭ್ರಮದ ಬಲಿದಾನದಲ್ಲಿ ಕುಂದಾಪುರ ವಲಯ ಪ್ರಧಾನರಾದ ಅ|ವಂ| ಸ್ಟ್ಯಾನಿ ತಾವ್ರೊ ಬಲಿದಾನದಲ್ಲಿ ಭಾಗಿಯಾಗಿ ಶುಭ ಕೋರಿದರು. ಕೊಟೇಶ್ವರ ಚರ್ಚಿನ ಧರ್ಮಗುರು ವಂ|ಸಿರಿಲ್ ಎ. ಮಿನೇಜೆಸ್ ಬಲಿದಾನದಲ್ಲಿ ಭಾಗಿಯಾಗಿ ಧನ್ಯವಾದಗಳನ್ನು ಸಮರ್ಪಿಸಿದರು.
ಕಟ್ಕರೆ ಬಾಲ ಯೇಸುವಿನ ಆಶ್ರಮದ ಮುಖ್ಯಸ್ಥರಾದ ವಂ|ಧರ್ಮಗುರು ಆಲ್ವಿನ್ ಸಿಕ್ವೇರಾ, ಬಲಿದಾನಕ್ಕಾಗಿ ಅವರೆ ರಚಿಸಿದ ಭಕ್ತಿಗೀತೆಗಳಿಗೆ ಗಾಯನ ಪಂಗಡಕ್ಕೆ ನಿರ್ದೇಶನ ನೀಡಿದರು. ವಂ|ನಿಶಾಲ್ ಮೊನಿಸ್ ಸಂಗೀತ ನೀಡಿದರು. ಕಾರ್ಮೆಲ್ ರಾಣಿಪುರ ಮಠದ ಮುಖ್ಯಸ್ಥರಾದ ವಂ|ಆರ್ಚಿಬಾಲ್ಡ್ ಗೊನ್ಸಾಲ್ವಿಸ್, ಕೆರೆಕಟ್ಟೆ ಸಂತ ಅಂತೋನಿ ಪುಣ್ಯಕ್ಷೇತ್ರದ ರೆಕ್ಟರ್ ಸುನೀಲ್ ವೇಗಸ್, ಕಟ್ಕರೆ ಬಾಲಾ ಯೇಸುವಿ ಮಠದ ಕಾರ್ಮೆಲ್ ಮೇಳದ ಧರ್ಮಗುರುಗಳಾದ ವಂ| ದೀಪ್ ಫೆರ್ನಾಂಡಿಸ್, ವಂ|ಫ್ರಾನ್ಸಿಸ್ ಮೊಂತೇರೊ, ಕುಂದಾಪುರ ವಲಯದ ಧರ್ಮಗುರುಗಳಾದ ವಂ|ಆಲ್ಬರ್ಟ್ ಕ್ರಾಸ್ತಾ, ಕುಂದಾಪುರ ವಲಯದ ವಂ|ಫ್ರಾನ್ಸಿಸ್ ಕರ್ನೇಲಿಯೊ, ವಂ|ಎಡ್ವಿನ್ ಡಿಸೋಜಾ, ವಂ|ಆಲ್ಫೊನ್ಸ್ ಡಿಲೀಮಾ, ವಂ|ಚಾಲ್ರ್ಸ್ ಲುವಿಸ್ ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ, ವಂ|ತೋಮಸ್ ಡಿಸೋಜಾ ಮತ್ತು ಧರ್ಮಭಗಿನಿಯರು ಹಾಗೂ ಚಚಿನ ಭಕ್ತಾಧಿಗಳು ಬಲಿದಾನದಲ್ಲಿ ಭಾಗಿಯಾಗಿದ್ದರು.

ಸಾವಿತ್ರಿ ಬಾಯಿ ಪುಲೆ ಆದರ್ಶ ಪಾಲಿಸಿ ಪ್ರತಿಯೊಬ್ಬ
ಮಹಿಳೆಯೂ ವಿದ್ಯಾವಂತರಾಗಿ-ಸಿಎಂಆರ್ ಶ್ರೀನಾಥ್

ಕೋಲಾರ: ಸಾವಿತ್ರಿ ಬಾಯಿ ಪುಲೆ ಆದರ್ಶವನ್ನು ಪ್ರತಿಯೊಬ್ಬ ಮಹಿಳೆಯೂ ಶಿಕ್ಷಣವಂತರಾಗಿ ಸದೃಢ ಸಮಾಜ ನಿರ್ಮಾಣ ಮಾಡಬೇಕೆಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.
ನಗರದ ರೋಟರಿ ಸೆಂಟ್ರಲ್ ಕಟ್ಟಡದಲ್ಲಿ ಜಿಲ್ಲಾ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರ ಸಂಘದವತಿಯಿಂದ ಆಯೋಜಿಸಲಾಗಿದ್ದ ಸಾವಿತ್ರಿ ಬಾಯಿ ಪುಲೆ ಜನ್ಮ ದಿನಾಚರಣೆ ಮತ್ತು ಸಾಧಕ ಹತ್ತು ಮಂದಿ ಶಿಕ್ಷಕಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಶಿಕ್ಷಣ ಯಾವುದೇ ಮನುಷ್ಯನನ್ನು ಉನ್ನತ ಸ್ಥಾನಕ್ಕೇರಿಸುತ್ತದೆ, ಅದರಲ್ಲೂ ಮಹಿಳೆಯರು ವಿದ್ಯಾವಂತರಾದರೆ ಇಡೀ ಕುಟುಂಬ ವಿದ್ಯಾವಂತರಾದಂತಾಗುತ್ತದೆ, ಮಹಿಳೆಯರ ವಿದ್ಯಾಭ್ಯಾಸಕ್ಕೆ ಅಡ್ಡಿ ಇದ್ದ ಸಂದರ್ಭದಲ್ಲಿ ಧೈರ್ಯದಿಂದ ಕಷ್ಟ ಸವಾಲುಗಳನ್ನು ಎದುರಿಸಿ ಸಾವಿತ್ರಿ ಬಾಯಿಪುಲೆ ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕಿಗಾಗಿ ಹೋರಾಡಿದ್ದರು ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟಿದ್ದರೆಂದರು.
ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಸರಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದಅಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಸಾವಿತ್ರಿ ಬಾಯಿ ಪುಲೆಯವರ ಜನ್ಮ ಜಯಂತಿಯಂತು ಸಾಧಕ ಶಿಕ್ಷಕರಿಯನ್ನು ತಮ್ಮ ಸಂಘ ಹಿಂದಿನಿಂದಲೂ ಸನ್ಮಾನಿಸಿಕೊಂಡು ಬರುತ್ತಿದೆ, ಇದೀಗ ರೋಟರಿ ಸೆಂಟ್ರಲ್‍ಸಹಭಾಗಿತ್ವದಲ್ಲಿ ಹತ್ತು ಮಂದಿ ಶಿಕ್ಷಕಿಯರನ್ನು ಗುರುತಿಸಿ ಸನ್ಮಾನಿಸುತ್ತಿದೆಯೆಂದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಸಾವಿತ್ರಿ ಬಾಯಿ ಪುಲೆಯವರ ಹೋರಾಟದ -ಫಲವಾಗಿ ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಇಂದು ಪಾಲುದಾರಿಕೆ ಪಡೆದು ಮಿಂಚುವಂತಾಗಿದೆ ಎಂದರು.
ಸಾವಿತ್ರಿ ಬಾಯಿ ಪುಲೆ ನೆನಪಿನಲ್ಲಿ ಸಾಧಕ ಶಿಕ್ಷಕಿಯರಾದ ಕೆ.ಎಸ್.ಸುನಂದಮ್ಮ, ಎಂ.ಮಂಜುಳ, ಎನ್.ರಮ, ಎಂ.ಮಂಜುಳ, ಎನ್.ಪುಷ್ಪ, ಎಂ.ಚೌಡಮ್ಮ, ಟಿ.ಸುಧಾ, ಟಿ.ಜಿ.ಹೇಮಲತಾ, ವಿ.ಶಾಮಲಮ್ಮ, ಪಾರ್ವತಮ್ಮರನ್ನು ಸಿಎಂಆರ್ ಶ್ರೀನಾಥ್ ಸಾವಿತ್ರಿ ಪುಲೆ ಭಾವಚಿತ್ರ ನೀಡಿ ಗೌರವಿಸಿ ಸನ್ಮಾನಿಸಿದರು.
ರೋಟರಿ ಸೆಂಟ್ರಲ್ ಕಾರ್ಯದರ್ಶಿ ಎಸ್.ಸುಧಾಕರ್, ಜ್ನಾನ ವಿಜ್ನಾನ ಸಮಿತಿಯ ಕಾರ್ಯದರ್ಶಿ ಡಿ.ಎನ್.ಮುಕುಂದ, ಎಲ್.ಶ್ರೀನಿವಾಸ್, ಸಿ.ವಿ.ನಾಗರಾಜ್ ಹಾಜರಿದ್ದರು.
ರಮಾ ಪ್ರಾರ್ಥಿಸಿ, ಬಿ.ಎಂ.ನಾರಾಯಣಸ್ವಾಮಿ ಸ್ವಾಗತಿಸಿ, ಕರ್ನಾಟಕ ಜ್ನಾನ ವಿಜ್ನಾನ ಸಮಿತಿ ಕಾರ್ಯದರ್ಶಿ ಶರಣಪ್ಪ ಜಮಾದಾರ್ ನಿರೂಪಿಸಿ, ಸಹ ಕಾರ್ಯದರ್ಶಿ ಕೆ.ವಿ.ಜಗನ್ನಾಥ್ ವಂದಿಸಿದರು.

ಕೋಲಾರದ ನಮ್ಮಸುದ್ದಿ ಡಾಟ್ ನೆಟ್ ವೆಬ್‍ಸೈಟ್‍ಗೆ ವಿದ್ಯುಕ್ತ ಚಾಲನೆ
ಮಾದ್ಯಮಗಳು ಸಮಾಜಮುಖಿ ಜವಾಬ್ದಾರಿಯಿಂದ ಜಾರಿಕೊಳ್ಳಬಾರದು-ಡಾ.ಡೊಮಿನಿಕ್

ಕೋಲಾರ:- ಮಾಧ್ಯಮಗಳು ಎಷ್ಟೇ ಆಧುನಿಕಗೊಂಡರೂ, ಸಮಾಜ ಪರಿವರ್ತನೆ ಹಾಗೂ ಸಮಾಜ ಸುಧಾರಣೆ ಜವಾಬ್ದಾರಿಗಳಿಂದ ಜಾರಿಕೊಳ್ಳಬಾರದು ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲ ಸಚಿವ ಪ್ರೊ .ಡಾ.ಡಿ.ಡೊಮಿನಿಕ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ನಮ್ಮ ಸುದ್ದಿ ಡಾಟ್ ನೆಟ್ ಸುದ್ದಿ ವೆಬ್ ಸೈಟ್ ಉದ್ಘಾಟಿಸಿ, ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ರವರ ಜನ್ಮದಿನಾಚರಣೆ ಪ್ರಯುಕ್ತ ಐವರು ಸಾಧಕ ಮಹಿಳೆಯರನ್ನು ಸನ್ಮಾನಿಸಿ ಮಾತನಾಡಿದ ಅವರು,
ಕಾರ್ಪೊರೇಟ್ ಜಗತ್ತಿನಲ್ಲಿ ಯಾವುದೇ ನವ ಕಾರ್ಯಗಳನ್ನು ಮಾಡುವಾಗಲು ಹಣದ ಮೌಲ್ಯವೇ ಪ್ರಧಾನವಾಗಿ ಬಿಂಬಿತವಾಗುತ್ತದೆ. ಡಾಲರ್ ಎದುರು ರೂಪಾಯಿಯ ಅಪಮೌಲ್ಯ ಹೆಚ್ಚಾದಂತೆ ಜನರ ಮೌಲ್ಯವು ಕಡಿಮೆಯಾಗುತ್ತದೆ ಎಂದ ಅವರು, ಇಂತ ಪರಿಸ್ಥಿತಿಯಲ್ಲಿಯೂ ಮಾದ್ಯಮಗಳು ಅದರಲ್ಲೂ ನವ ಮಾಧ್ಯಮಗಳು ಜನಸಾಮಾನ್ಯರ ಪರವಾದ ನ್ಯಾಯ ಸಮ್ಮತವಾದ ಸುದ್ದಿಯನ್ನು ಬಿತ್ತರಿಸಬೇಕು ಎಂದು ಹೇಳಿದರು.
ತಂತ್ರಜ್ಞಾನ ಬೆಳೆಯುತ್ತಿದ್ದು ಗೂಗಲ್, ಫೇಸ್ಬುಕ್ ಟ್ವಿಟ್ಟರ್, ಮೈಕ್ರೋಸಾಫ್ಟ್ ಹಾಗೂ ಇನ್ಸ್ಟಾಗ್ರಾಮ್ ಮೂಲಕ ಕ್ಷಣಮಾತ್ರದಲ್ಲಿ ಜಗತ್ತಿನಲ್ಲೇ ಹೆಸರುವಾಸಿಯಾಗಲು ಸಾಧ್ಯವಾಗಿದೆ. ಆದರೆ ಅದನ್ನು ಸಮಾಜದ ಒಳತಿಗಾಗಿ ಇವುಗಳನ್ನು ಬಳಸಿಕೊಳ್ಳುವುದು ಎಲ್ಲರ ಕರ್ತವ್ಯವಾಗಬೇಕೆಂದರು.
ಸಾವಿತ್ರಿಬಾಯಿ ಪುಲೆ ಅವರ ಆದರ್ಶವನ್ನು ಮೈಗೂಡಿಸಿಕೊಂಡು ಪ್ರತಿ ಮಹಿಳೆಯು ವಿದ್ಯಾವಂತರಾಗಿ ನಿಮ್ಮ ಸಮಾಜದಲ್ಲಿರುವವರನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಸ್ಪರ್ಧಾತ್ಮಕ ಯುಗದಲ್ಲಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆವಹಿಸಿ ಮಾತನಾಡಿ, ಸಮ ಸಮಾಜ ನಿರ್ಮಿಸಲು ಶ್ರಮಿಸಬೇಕಾಗಿದ್ದ ಪತ್ರಿಕೋದ್ಯಮವು ಈಗ ಜಾಹೀರಾತುದಾರರ ಸಂತೋಷಪಡಿಸುವ ಸುದ್ದಿಗಳನ್ನು ಪ್ರಸಾರ ಮಾಡಲು ಸೀಮಿತವಾಗುತ್ತಿದೆ, ಜನಪರ ಮಾಧ್ಯಮವು ನಶಿಸಿ, ಧನಪರ ಮಾಧ್ಯಮವಾಗಿ ಮಾರ್ಪಡುತ್ತಿದೆ, ಬರೆಯುವ ಪತ್ರಕರ್ತರಿಗಿಂತಲೂ ಬರೆಸುವ ಪತ್ರಕರ್ತರು ಹೆಚ್ಚಾಗುತ್ತಿದ್ದಾರೆ, ಇದಕ್ಕೆ ಕಡಿವಾಣ ಹಾಕಿ ಸಮಾಜಮುಖಿ ಸುದ್ದಿಗಳನ್ನು ನೀಡುವ ಕಾರ್ಯ ಮಾಡಬೇಕಾಗಿದೆ ಎಂದು ತಿಳಿಸಿದರು.
ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್ ಮಾತನಾಡಿ, ಮಾದ್ಯಮಗಳು ಮಾಲೀಕರ ಮೂಗಿನ ನೇರಕ್ಕೆ, ಮಾಲೀಕರು ಪ್ರತಿನಿ„ಸುವ ಧರ್ಮ, ರಾಜಕೀಯ ಪಕ್ಷ ಮತ್ತು ಅವರು ಬೆಂಬಲಿಸುವ ಸರಕಾರಗಳಿಗೆ ನಿಷ್ಠೆ ತೋರುತ್ತಿದ್ದು, ಜನಸಾಮಾನ್ಯರು ಸಾಮಾಜಿಕ ಜಾಲತಾಣಗಳನ್ನು ತಮ್ಮ ಅಭಿಪ್ರಾಯ ಹಂಚಲು ಬಳಸಿಕೊಳ್ಳುತ್ತಿದ್ದಾರೆ, ಸಾಮಾಜಿಕ ಜಾಲ ತಾಣಗಳಲ್ಲಿಯೂ ನಂಬಿಕೆ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದ್ದು, ಜನಪರ ಮಾದ್ಯಮ ರೂಪಿಸುವುದು ಎಲ್ಲರ ಜವಾಬ್ದಾರಿಯಾಗಬೇಕಿದೆ ಎಂದರು.
ಈ ನಿಟ್ಟಿನಲ್ಲಿ ಈದಿನ ಡಾಟ್ ಕಾಮ್ ಕುವೆಂಪು ಜನ್ಮದಿನಾಚರಣೆಯಂದು ಆರಂಭವಾಗಿದ್ದು, ಕರ್ನಾಟಕದಲ್ಲಿ ಜನಪರಮಾಧ್ಯಮವನ್ನು ಜನರಿಂದಲೇ ರೂಪಿಸುವ ಮಾದರಿಯ ಪ್ರಬಲ ಮಾದ್ಯಮವಾಗಿ ರೂಪುಗೊಳ್ಳುತ್ತಿದ್ದು, ಜನಪರ ಹೋರಾಟಗಾರರು, ಸಾರ್ವಜನಿಕರು, ಜನಸಾಮಾನ್ಯರು, ವಿದ್ಯಾರ್ಥಿ ಯುವಕ ಯುವತಿಯರು ಈ ಕ್ರಾಂತಿಕಾರಿ ಯೋಜನೆಯ ಭಾಗವಾಗಬೇಕೆಂದು ಮನವಿ ಮಾಡಿಕೊಂಡರು.
ಬೆಂಗಳೂರು ಉತ್ತರ ವಿವಿ ಪ್ರಾಧ್ಯಾಪಕಿ ಡಾ.ನೇತ್ರಾವತಿ ಸಾವಿತ್ರಿ ಬಾಯಿಪುಲೆ ಕುರಿತಂತೆ ಉಪನ್ಯಾಸ ನೀಡಿ, ಸಾವಿತ್ರಿಬಾಯಿ ಪುಲೆ ಸಾಮಾಜಿಕ ಕೌಟುಂಬಿಕವಾಗಿ ಸಾಕಷ್ಟು ಸಮಸ್ಯೆ ಸವಾಲುಗಳನ್ನು ಎದುರಿಸಿದರೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಸಬೇಕೆಂಬ ವಿಚಾರದಿಂದ ಹಿಂದೆ ಸರಿಯಲಿಲ್ಲ, ಜೀವಮಾನವಿಡಿ ತಮ್ಮ ಪತಿ ಜ್ಯೋತಿ ಬಾಯಿ ಪುಲೆ ಸಹಕಾರದಿಂದ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಹೆಣ್ಣು ಮಕ್ಕಳ ಮೇಲೆ ಹೇರಿದ್ದ ಅನಿಷ್ಠ ಪದ್ಧತಿಗಳ ನಿವಾರಣೆಗೆ ಶ್ರಮಿಸಿದರೆಂದು ವಿವರಿಸಿದರು.
ಮಹಿಳಾ ಸಾಧಕರಾದ ಸಮಾಜ ಸೇವಕಿ ವಿನುತ ಕೃಷ್ಣ, ನಿರೂಪಕರಾದ ರೇಣುಕಾ, ಮಂಜುಳ ಕೊಂಡರಾಜನಹಳ್ಳಿ, ವಕೀಲರಾದ ಶಹತಾಜ್ ನಸೀಮ್ ಹಾಗೂ ಮಹಿಳಾ ರೈತ ಮುಖಂಡರಾದ ನಳಿನಿಗೌಡರನ್ನು ಸಾವಿತ್ರಿ ಬಾಯಿಪುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆ ಮುಖಂಡರು, ಹಿರಿಯ ಪತ್ರಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.
ಮತ್ತಿಕುಂಟೆ ಕೃಷ್ಣರಿಂದ ಕುವೆಂಪು ಅನಿಕೇತನ ಆಶಯಗೀತೆ ಗಾಯನ, ಕೆ.ರಾಮಮೂರ್ತಿ ನಿರೂಪಿಸಿ, ಸಿ.ವಿ.ನಾಗರಾಜ್ ಸ್ವಾಗತಿಸಿದರು.

ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ವಿಜ್ಞಾನ ಹಾಗೂ ಕರಕುಶಲ ವಸ್ತು ಪ್ರದರ್ಶನ


ಕುಂದಾಪುರ: ಸ್ಥಳೀಯ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ, ಗಣಿತ, ಸಮಾಜ ಹಾಗೂ ಕರಕುಶಲ ವಿಷಯಕ್ಕೆ ಸಂಬಂಧಿಸಿದ ವಿವಿಧ ಮಾದರಿಗಳ ಪ್ರದರ್ಶನ 03-01-2023 ರಂದು ನೆಡೆಯಿತು.

ಪ್ರದರ್ಶನವನ್ನು ಸಮಾಜ ವಿಜ್ಞಾನ ಶಿಕ್ಷಕರಾದ ಅಶೋಕ್ ದೇವಾಡಿಗ ಇವರು ಉದ್ಘಾಟಿಸಿ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳನ್ನು ಹೊರತರಲು ಸೂಕ್ತವಾದ ವೇದಿಕೆ ಹಾಗೂ ವಿದ್ಯಾರ್ಥಿಗಳಲ್ಲಿ ಬೌದ್ಧಿಕ ವಿಕಸನ ವೃದ್ಧಿಯಾಗುವುದು ಎಂದರು. ಗಮನ ಸೆಳೆಯುವಂತಹ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐವಿ ಅಭಿನಂದನೆಗಳನ್ನು ಸಲ್ಲಿಸಿದರು.

ಶಾಲೆಯ ಶಿಕ್ಷಕರಾದ ಮೈಕಲ್ ಸರ್, ಶಿಕ್ಷಕಿಯರಾದ ಶ್ರೀಮತಿ ಶೀಲತಾ, ಶ್ರೀಮತಿ ಸರಸ್ವತಿ, ಶ್ರೀಮತಿ ಸೆಲಿನ್, ಶ್ರೀಮತಿ ಸ್ವಾತಿ ಸಹಕರಿಸಿದರು.

ಕುಂದಾಪುರ:ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಅಭಿನಂದನಾ ಸಭೆ

ಕುಂದಾಪುರ: ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಕುಂದಾಪುರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಿ ’ಶಿಕ್ಷಣಾಧಿಕಾರಿಗಳು ಉಡುಪಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸ್ಥಳೀಯ ಸಂಸ್ಥೆಯಿಂದ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ,ಭಾಗವಹಿಸಿರುವ ಬಗ್ಗೆ ತಮ್ಮ ಸಂತೋಷವನ್ನು ಹಂಚಿಕೊಂಡರು .ಎಲ್ಲಾ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಬಂದಿರುವ ಶಿಕ್ಷಕರ ಜವಾಬ್ದಾರಿಯನ್ನು ಹೊಗಳಿದರು. ಇದೇ ರೀತಿಯಲ್ಲಿ ಮುಂದೆಯೂ ಒಗ್ಗಟ್ಟಾಗಿ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗಿ ಹಾಗೂ ಇಂತಹ ಜವಾಬ್ದಾರಿಯುತ ಶಿಕ್ಷಕರಿಂದ ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿಯನ್ನು ಕಾಣಲಿ ಎಂದು ಆಶಿಸಿದರು. ಸ್ಥಳೀಯ ಸಂಸ್ಥೆ ವತಿಯಿಂದ ಭಾಗವಹಿಸಿದ ಪ್ರತಿಯೊಂದು ಶಾಲೆಯ ಶಿಕ್ಷಕ – ಶಿಕ್ಷಕಿಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಮ್ಮ ಸಂಸ್ಥೆಯಲ್ಲಿ ಸುಮಾರು 25 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಇದೀಗ 15 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಗುಣ ರತ್ನ ಮತ್ತು ಕಾರ್ಯದರ್ಶಿ ಶ್ರೀಮತಿ ರೇಖಾ ರವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲು ಹೊದಿಸಿ ಫಲ – ಪುಷ್ಪ ನೀಡಿ ಅಭಿನಂದಿಸಿದರು. ಸ್ಕೌಟ್ ಶಿಕ್ಷಕರಾದ ಶ್ರೀಯುತ ಯಶವಂತ್ ಹಾಗೂಶಿಕ್ಷಕಿ ಶ್ರೀಮತಿ ತಾರ ರವರು ಜಾಂಬೂರಿಯ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಶ್ರೀಮತಿ ಗುಣರತ್ನ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಜಾಂಬೂರಿಯ ಯಶಸ್ವಿಗೆ ಕಾರಣರಾದ ಎಲ್ಲರನ್ನೂ ಸ್ಮರಿಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿರುವ ಸರ್ ಮಿಲ್ಟನ್ ಉಪಸ್ಥಿತರಿದ್ದರು. ಶ್ರೀ ಸದಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಯುತ ಗಣೇಶ್ ಶೇಟ್ ವಂದಿಸಿದರು.

ಒತ್ತಡ ಜೀವನದಲ್ಲಿ ಆಧ್ಯಾತ್ಮ ಮತ್ತು ದೇವರ ಆರಾಧನೆಗೆ ಕೊಂಚ ಕಾಲವನ್ನು ವಿನಿಯೋಗಿಸಿ, ನೆಮ್ಮದಿ ಪಡೆದುಕೊಳ್ಳಬಹುದು : ಕೆ.ಆರ್.ರಮೇಶ್‍ಕುಮಾರ್

ಶ್ರೀನಿವಾಸಪುರ 1 : ಒತ್ತಡ ಜೀವನದಲ್ಲಿ ಆಧ್ಯಾತ್ಮ ಮತ್ತು ದೇವರ ಆರಾಧನೆಗೆ ಕೊಂಚ ಕಾಲವನ್ನು ವಿನಿಯೋಗಿಸುವ ಮೂಲಕ ನೆಮ್ಮದಿ ಪಡೆದುಕೊಳ್ಳಬಹುದು ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ತಿಳಿಸಿದರು.
ಶ್ರೀನಿವಾಸಪುರ ತಾಲೂಕಿನ ರೋಣೂರು ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯಕ್ಕೆ ವೈಕುಂಠ ಏಕಾದಶಿ ಅಂಗವಾಗಿ ಬೇಟಿ ನೀಡಿ ಮಾತನಾಡಿ,
ಮಾನವೀಯ ಮೌಲ್ಯಗಳನ್ನು ಬೆಳೆಸಲು ವಿಶೇಷ ಹಬ್ಬ,ಪರಂಪರೆಯ ಸಂಪ್ರದಾಯಗಳನ್ನು ಆಚರಿಸಬೇಕು ಹಾಗೂ ಅವುಗಳ ಮಹತ್ವದ ಬಗ್ಗೆ ಹಿರಿಯರಿಂದ ಯುವಪೀಳಿಗೆ ಅರಿಯಬೇಕೆಂದರು.
ಸ್ವಾಮಿಗೆ ಪಾಂಚರಾತ್ರಾಗಮ ಪ್ರಕಾರ ಸುಪ್ರಬಾತ ಸೇವೆ ,ಪಂಚಾಮೃತ ಅಭಿಷೇಕ,ಅಲಂಕಾರ ಮುಂಜಾನೆ 5ಗಂಟೆಗೆ ವೈಕುಂಠದ್ವಾರ ಪೂಜೆ,ವೈಕುಂಠ ದ್ವಾರ ಪ್ರವೇಶ,ಶಾತ್ತುಮೊರೈ,ಮಹಾಮಂಗಳಾರತಿ,ತೀರ್ಥಪ್ರಸಾದ ವಿನಿಯೋಗ ಮಾಡಲಾಗಿತ್ತು.
ತಾಲೂಕಿನ ಪುರಾಣ ಪ್ರಸಿದ್ಧ ದೇವಸ್ಥಾನವಾದ ಗನಿಬಂಡೆ ಹಾಗೂ ತಾಲೂಕಿನ ಎಲ್ಲಾ ವಿಷ್ಣು ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆಗಳು ನಡೆಯಿತು. ಸಾವಿರಾರು ಭಕ್ತರು ಗೋವಿಂದನಾಮಸ್ಮರಣೆಯೊಂದಿಗೆ ಶ್ರದ್ದ,ಭಕ್ತಿಯೊಂದಿಗೆ ವೈಕುಂಠದ್ವಾರದ ಮೂಲಕ ಸರದಿಸಾಲಿನಲ್ಲಿ ದೇವರ ದರ್ಶನ ಪಡೆದರು.
ಪಿಎಲ್‍ಡಿ ಬ್ಯಾಂಕ್‍ನ ಅಧ್ಯಕ್ಷ ದಿಂಬಾಲ್ ಅಶೋಕ್, ತಾ.ಪಂ. ಮಾಜಿ ಸದಸ್ಯ ಕೆ.ಕೆ.ಮಂಜುನಾಥ್, ರಾಯಲ್ಪಾಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ್‍ರೆಡ್ಡಿ , ಗ್ರಾಮದ ಮುಖಂಡರಾದ ಎಸ್.ಡಿ.ಪ್ರತಾಪ್ , ಶ್ರೀನಿವಾಸರಾವ್ ಇದ್ದರು.

ಅಪಘಾತಕ್ಕೀಡಾಗಿದ್ದ ಕುಟುಂಬ ಹಾಗೂ ಪಾಶ್ರ್ವವಾಯು ಪೀಡಿತರಿಗೂ ನೆರವು
ಮೂವರಿಗೆ ನೆರವಾಗಿ ಮಾನವೀಯತೆ ಮೆರೆದ ಬ್ಯಾಲಹಳ್ಳಿ ಗೋವಿಂದಗೌಡ

ಕೋಲಾರ:- ಅಪಘಾತದಿಂದ ಕಾಲಿಗೆ ಶಸ್ತ್ರಚಿಕಿತ್ಸೆಗೆ ಇದ್ದೆಲ್ಲಾ ಹಣ ಖರ್ಚು ಮಾಡಿ ತನ್ನ ಮಗಳ ಮದುವೆಗೆ ಹಣವಿಲ್ಲದೇ ನೊಂದಿದ್ದ ಕುಟುಂಬಕ್ಕೆ ಹಾಗೂ ಪಾಶ್ರ್ವವಾಯು ಪೀಡಿತ ಇಬ್ಬರಿಗೆ ಆರ್ಥಿಕ ನೆರವು ನೀಡುವ ಮೂಲಕ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾನವೀಯತೆ ಮೆರೆದಿದ್ದಾರೆ.
ಇಲ್ಲಿನ ಮುನೇಶ್ವರ ನಗರದ ನಿವಾಸಿಯಾಗಿದ್ದು, ಗಾರೆ ಕೆಲಸದಿಂದ ಜೀವನ ಸಾಗಿಸುತ್ತಿದ್ದ ನಾಗರಾಜ್ ಎಂಬುವವರಿಗೆ ಅಪಘಾತವಾಗಿ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಮಗಳ ಮದುವೆಗೆಂದು ಕೂಡಿಟ್ಟಿದ್ದ ಒಂದೂವರೆ ಲಕ್ಷ ಹಣವನ್ನು ತಮ್ಮ ಚಿಕಿತ್ಸೆಗೆ ಖರ್ಚು ಮಾಡಿದ್ದರು.
ಮಗಳ ಮದುವೆ ಮಾಡಲು ಹಣವಿಲ್ಲದೇ ಜೀವನ ನಿರ್ವಹಣೆಗೂ ಕಷ್ಟವಾಗಿತ್ತು. ಅವರ ಪತ್ನಿ ಭಾಗ್ಯಮ್ಮ ಮೂರುಮನೆಗಳಲ್ಲಿ ಮನೆ ಕೆಲಸ ಮಾಡಿ ಮನೆಯನ್ನು ಸಾಗಿಸುತ್ತಿದ್ದರು. ಅವರ ಕುರಿತು ಮಾಹಿತಿ ಪಡೆದ ಗೋವಿಂದಗೌಡರು ಅವರ ನಿವಾಸಕ್ಕೆ ತೆರಳಿ ಆರ್ಥಿಕ ನೆರವು ನೀಡಿದರು.
ಜತೆಗೆ ಮುಂದಿನ ಫೆಬ್ರವರಿ ತಿಂಗಳಲ್ಲಿ ನಿಗಧಿಯಾಗಿದ್ದ ಮಗಳ ಮದುವೆ ನಡೆಸಲಾಗದ ನೋವು ತೋಡಿಕೊಂಡ ಕುಟುಂಬದ ನೆರವಿಗೆ ಮುಂದಾದ ಬ್ಯಾಲಹಳ್ಳಿ ಗೋವಿಂದಗೌಡರು ಮದುವೆ ಖರ್ಚಿಗೂ ನೆರವು ಒದಗಿಸುವ ಭರವಸೆ ನೀಡಿ ಆ ಕುಟುಂಬಕ್ಕೆ ಧೈರ್ಯ ತುಂಬಿದರು.

ಪಾಶ್ರ್ವವಾಯು ಪೀಡಿತರಿಗೂ ನೆರವು


ಮುನೇಶ್ವರ ನಗರದಲ್ಲಿ ಪತಿಯನ್ನು ಕಳೆದುಕೊಂಡಿದ್ದರೂ ಎದೆಗುಂದದೇ ಸುಮಾರು 10 ವರ್ಷಗಳಿಂದ ಹೂ ಕಟ್ಟಿ ಮಾರಿ ಮಗಳೊಂದಿಗೆ ಕುಟುಂಬ ನಿರ್ವಹಿಸುತ್ತಿದ್ದ ಭಾಗ್ಯಮ್ಮ ಎಂಬ ಮಹಿಳೆ ಇತ್ತೀಚೆಗೆ ಪಾಶ್ರ್ವವಾಯುವಿನಿಂದಾಗಿ ಹಾಸಿಗೆ ಹಿಡಿದಿದ್ದು, ತುತ್ತು ಅನ್ನಕ್ಕೂ ಅತ್ಯಂತ ಕಷ್ಟಪಡುತ್ತಿದ್ದರು.
ಈ ಭಾಗದ ಮುಖಂಡ ಬೆಟ್ಟಪ್ಪ ಮತ್ತಿತರರಿಂದ ಈ ಮಹಿಳೆಯ ಸಂಕಷ್ಟದ ಕುರಿತು ಮಾಹಿತಿ ಪಡೆದ ಬ್ಯಾಲಹಳ್ಳಿ ಗೋವಿಂದಗೌಡರು, ಆಕೆಗೂ ಆರ್ಥಿಕ ನೆರವು ನೀಡಿ ಹೃದಯವಂತಿಕೆ ಮೆರೆದರು.
ಇದೇ ರೀತಿ ಮಕ್ಕಳಿಲ್ಲವೆಂಬ ಚುಚ್ಚುಮಾತಿನಿಂದ ಮನನೊಂದಿದ್ದ ನಗರದ ಕಾರಂಜಿಕಟ್ಟೆ 8ನೇ ಕ್ರಾಸ್‍ನ ಮಹಿಳೆ ಗಾಯಿತ್ರಿ ಇತ್ತೀಚೆಗೆ ಮಾನಸಿಕ ಯಾತನೆಗೆ ಗುರಿಯಾಗಿ ಪಾಶ್ರ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದರು.
ಈಕೆಗೆ ತಂದೆ ಇಲ್ಲ, ತಾಯಿಯೇ ಜೀವನಕ್ಕೆ ಆಸರೆಯಾಗಿದ್ದು, ಕೂಲಿ ಮಾಡಿ ಮಗಳನ್ನು ಸಾಕುತ್ತಿದ್ದಳು, ಆಕೆಯ ಪತಿ ಈಕೆಯನ್ನು ತವರು ಮನೆಯಲ್ಲೇ ಬಿಟ್ಟಿದ್ದು, ಈಕೆಯ ಸಂಕಷ್ಟ ಕಂಡು ಮನನೊಂದ ಬ್ಯಾಲಹಳ್ಳಿ ಗೋವಿಂದಗೌಡರು ಈಕೆಗೂ ಆರ್ಥಿಕ ನೆರವುನೀಡಿ ಮಾನವೀಯತೆ ಮೆರೆದರು.
ಹತ್ತಾರು ವರ್ಷಗಳಿಂದಲೂ ಬಡರೋಗಿಗಳಿಗೆ, ಬಡವರ ಮದುವೆಗೆ ನಿರಂತರವಾಗಿ ಆರ್ಥಿಕ ನೆರವು ನೀಡಿಕೊಂಡು ಬಂದಿರುವ ಬ್ಯಾಲಹಳ್ಳಿ ಗೋವಿಂದಗೌಡರ ಹೃದಯವಂತಿಕೆಗೆ ಈ ಭಾಗದ ಮುಖಂಡ ಬೆಟ್ಟಪ್ಪ ಧನ್ಯವಾದ ಸಲ್ಲಿಸಿ, ಕಳೆದ 2019 ರಂದು ಕ್ಯಾನ್ಸರ್ ಪೀಡಿಗ ಮಗುವಿನ ಚಿಕಿತ್ಸೆಗೆನೆರವಾಗಿ ಜೀವ ಉಳಿಸಿದ ಸುದ್ದಿಯನ್ನು ಕಂಡು ಈ ಭಾಗದಲ್ಲಿ ಸಂಕಷ್ಟದಲ್ಲಿರುವ ಈ ಮೂರು ಕುಟುಂಬಗಳಿಗೆ ನೆರವಾಗಲು ಕೋರಿದ್ದೆ, ತಕ್ಷಣವೇ ನೆರವಿಗೆ ಮುಂದಾಗಿ ಸಹಾಯಹಸ್ತ ಚಾಚಿದ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಈ ಭಾಗದ ಮುಖಂಡರಾದ ಬೆಟ್ಟಪ್ಪ, ರಮೇಶ್,ಪೈಂಟರ್ ರಾಜ್‍ಕುಮಾರ್ ಮತ್ತಿತರರಿದ್ದರು.

ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ’ಲಾಸ್ಯ ಮಧ್ಯಸ್ಥ” ಯೋಗಾಸನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ದಿನಾಂಕ-2-1-2023 ರಂದು ಉಪ ನಿರ್ದೇಶಕರ ಕಛೇರಿ ಶಾಲಾ ಶಿಕ್ಷಣ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ  ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ  ಶಾಖೆ ಇವರ ಸಂಯುಕ್ತ ಆಶ್ರಯದಲ್ಲಿ  ನಡೆದ 14/17 ರ ವಯೋಮಿತಿಯೊಳಗಿನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ ಬಾಲಕಿಯರ ರಾಜ್ಯ ಮಟ್ಟದ ಯೋಗಾಸನ  ಸ್ಪರ್ಧೆಯಲ್ಲಿ  ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲಾ 6ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಲಾಸ್ಯ ಮಧ್ಯಸ್ಥ ಪ್ರಥಮ ಸ್ಥಾನ ಪಡೆದು ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಈಕೆ ಕುಂದಾಪುರದ ಅರುಣ್ ಮತ್ತು ಲತಾ ಮಧ್ಯಸ್ಥ ದಂಪತಿಗಳ ಪುತ್ರಿ. ಇವಳ ಈ  ಸಾಧನೆಗೆ ಶಾಲಾ ಜಂಟಿ ಕಾರ್ಯದರ್ಶಿಗಳಾದ ವಂ|ಸ್ಟ್ಯಾನಿ ತಾವ್ರೊ,ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯಿನಿ ಹಾಗು ಅಧ್ಯಾಪಕ ವ್ರಂದದವರು ಅಭಿನಂದನೆ ಸಲ್ಲಿಸಿದ್ದಾರೆ.

“ರವಿ ಬಸ್ರೂರು” ಇವರಿಗೆ ಕೋ. ಮ. ಕಾರಂತ ಪ್ರಶಸ್ತಿ ಪ್ರದಾನ

ಕುಂದಾಪುರ : ರವಿ ಬಸ್ರೂರು'ರಿಗೆ ಕೋ. ಮ. ಕಾರಂತ ಪ್ರಶಸ್ತಿ ಕುಂದ ಕನ್ನಡ ಭಾಷೆಯ ಬಗ್ಗೆ ಹೊರಗಿನವರಿಗೆ ಕುತೂಹಲ ಇತ್ತು. ಆದರೆ ಮಹತ್ವ ನೀಡುತ್ತಿರಲಿಲ್ಲ. ಅರ್ಥ ಮಾಡಿಕೊಳ್ಳುವ ಪ್ರಯತ್ನವೂ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ರವಿ ಬಸ್ರೂರು ಎಂಬ ಯುವಕ ತನ್ನ ಕುಂದಾಪ್ರ ಕನ್ನಡಕ್ಕೆ ಮಹತ್ವ ಕೊಟ್ಟು ಹಾಡು, ಚಲನಚಿತ್ರ ನಿರ್ಮಾಣ ಮಾಡುವುದರೊಂದಿಗೆ ಕುಂದಾಪ್ರ ಕನ್ನಡ ಭಾಷೆಗೆ ಈ ಮಣ್ಣಿನ ಸಂಸ್ಕøತಿಗೆ ಶೋಭೆ ತಂದುಕೊಟ್ಟರು. ಇವರ ಶ್ರದ್ಧೆ ಪರಿಶ್ರಮ, ಸಾಧನೆಗೆ ಕುಂದಪ್ರಭ ಬಳಗ ಕೋ.ಮ.ಕಾರಂತ ಪ್ರಶಸ್ತಿಯನ್ನು ಅರ್ಹವಾಗಿಯೇ ಪ್ರದಾನ ಮಾಡಿದೆ. ಕೋ.ಮ.ಕಾರಂತ ಪ್ರಶಸ್ತಿ ಸ್ವೀಕರಿಸಿದ ಅತಿ ಕಿರಿಯವರಾದ ರವಿ ಬಸ್ರೂರು ತಮ್ಮ ಜೀವನದಲ್ಲಿ ಇನ್ನಷ್ಟು ಸಾಧನೆಗಳ ಮೆಟ್ಟಲು ಏರುವಲ್ಲಿ ಈ ಪ್ರಶಸ್ತಿ ಪ್ರೇರಣೆ ನೀಡಲಿ. ಕೋ.ಮ. ಕಾರಂತರೆಂಬ ಶ್ರೇಷ್ಠ ಮಹನೀಯರ ಸ್ಮರಣೆ ಈ ಮೂಲಕ ಮಾಡಲು ಸಾಧ್ಯವಾಗಿರುವುದು ಸಂತೋಷದ ವಿಚಾರ" ಎಂದು ಕರ್ನಾಟಕ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕುಂದಾಪುರ ಭಂಡಾರ್‍ಕಾರ್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಕುಂದಪ್ರಭ ಸಂಸ್ಥೆ ವತಿಯಿಂದ ನಡೆದ ಕೋ.ಮ. ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ರೋಟರಿ ಜಿಲ್ಲಾ ಮಾಜಿ ಗವರ್ನರ್ ಅಭಿನಂದನ್ ಶೆಟ್ಟಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಗಮಿಸಿದ್ದರು. ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್. ಶೆಣೈ ಸ್ವಾಗತಿಸಿದರು. ಅಂಕಣಗಾರ ಕೋ. ಶಿವಾನಂದ ಕಾರಂತ ಕೋ.ಮ. ಕಾರಂತರ ಸ್ಮರಣೆ ಮಾಡಿದರು. ರವಿ ಬಸ್ರೂರು’ ಅವರಿಗೆ ಕೋ.ಮ. ಕಾರಂತ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ಖ್ಯಾತ ಸಾಹಿತಿ ಡಾ. ರಂಜಿತ್ ಕುಮಾರ್ ಶೆಟ್ಟಿಯವರ 20 ಕಥೆಗಳು ಕೃತಿಯನ್ನು ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಬಿಡುಗಡೆ ಮಾಡಿದರು.
ನ್ಯೂಜಿಲ್ಯಾಂಡಿನ ಆಕ್ಲ್ಯಾಂಡ್‍ನಲ್ಲಿ ನಡೆದ ಕಾಮನ್‍ವೆಲ್ತ್ ಪವರ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಐದು ಚಿನ್ನದ ಪದಕ, ಬೆಳ್ಳಿ ಪದಕ ಪಡೆದ ಸತೀಶ್ ಖಾರ್ವಿಯವರನ್ನು ಶಾಸಕ ಮಂಜುನಾಥ ಭಂಡಾರಿ ಗೌರವಿಸಿದರು.

ಪ್ರತಿಭಾನ್ವಿತ ತಬಲಾ ಕಲಾವಿದರಾದ ಕೆ. ವಿಘ್ನೇಶ್ ಕಾಮತ್, ಶ್ರೀಧರ್ ಭಟ್, ಕೋಟೇಶ್ವರ ಹಾಗೂ ಗಾಯಕಿ ಧಾರಿಣಿ ಕೆ.ಎಸ್. ಅವರನ್ನು ಮಂಜುನಾಥ ಭಂಡಾರಿ ಗೌರವಿಸಿದರು.
ಡಾ| ಉಮೇಶ್ ಪುತ್ರನ್, ಡಾ| ಸದಾನಂದ ಭಟ್, ಕೆ. ರಮಾನಂದ ಕಾರಂತ, ಎಚ್. ಸೋಮಶೇಖರ ಶೆಟ್ಟಿ, ಹುಸೇನ್ ಹೈಕಾಡಿ, ಯು. ಸಂಗೀತಾ ಶೆಣೈ ಅತಿಥಿಗಳನ್ನು ಗೌರವಿಸಿದರು.
ತೆಂಕನಿಡಿಯೂರು ಪ.ಪೂ. ಕಾಲೇಜಿನ ಪ್ರಾಂಶುಪಾಲ, ಲೇಖಕ ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು.
ಹಿರಿಯ ಕಲಾವಿದ ವೇಣುಗೋಪಾಲ ಭಟ್ ಕೋಟೇಶ್ವರ ಹಾಗೂ ಗಣೇಶ್ ಗಂಗೊಳ್ಳಿ, ಅಶ್ವಿನಿ, ಮೇಘನಾ, ಪಾವನಾ ಅವರಿಂದ ಲಘು ಸಂಗೀತ ಕಾರ್ಯಕ್ರಮ ನಡೆಯಿತು.
ಲೇಖಕ ಪಿ. ಜಯವಂತ ಪೈ ವಂದಿಸಿದರು.

“ಕುಂದಾಪುರ ಭಾಷಿ, ಸಂಸ್ಕøತಿ ನಂಗೆ ದೇವಸ್ಥಾನ ಇದ್ದಾಂಗೆ” – ರವಿ ಬಸ್ರೂರು


ದೇವ್ರ ಡಬ್ಬಿಗೆ ದುಡ್ಡ್ ಹಾಕ್ರೆ ನಾಂವ್ ವಾಪಾಸ್ ತೆಗ್ಗಿತ್ತಾ? ಹಾಂಗೆ ಕುಂದಾಪ್ರ ಭಾಷಿಗಾಗಿ ದುಡ್ಡ್ ಹಾಕ್ರೆ ಅದ ದೇವ್ರ ಡಬ್ಬಿ ದುಡ್ಡ್ ಹಾಕದ್ ಹಾಗೆ. ನಂಗೆ ಕುಂದಪ್ರ ಕನ್ನಡ ದೇವಸ್ಥಾನ. ಅದ್ರ ಫಲ ದೇವ್ರ ಕೊಟ್ಟೇ ಕೊಡ್ತ. ನಂಗೂ ಅದ್ರ ಫಲ ಸಿಕ್ಕೀತ್. ಕುಂದಾಪ್ರ ಭಾಷಿ ಯಾಕೆ ಬೇರೆಯವ್ರಿಗೆ ಅರ್ಥ ಆತ್ತಿಲ್ಲ? ತಮಿಳು, ತೆಲುಗು, ಮಲಯಾಳ ಭಾಷೆ ಅರ್ಥ ಆತ್ತ್ ಅಂಬ್ರ. ಕುಂದಾಪ್ರ ಭಾಷಿ ಯಾಕ್ ಆತ್ತಿಲ್ಲ. ಏನಾರೂ ಮಾಡಿ ಅರ್ಥ ಆಪು ಹಾಂಗ್ ಮಾಡ್ಕ್ ಅಂತ ಪ್ರಯತ್ನ ಮಾಡ್ದಾಗ, ಎಷ್ಟೋ ಜನ, ಇವ್ನಿಗೆ ಮಂಡಿ ಪೆಟ್ಟ್ ಅಂದ್ರ್. ಆದ್ರೆ ಕಡಿಗೂ ಫಲ ಸಿಕ್ತ. ನಮ್ಮ ಊರ ಬದಿ ಗೌರವ ಸಿಕ್ಕು ಹಾಂಗ್ ಆಯ್ಕ್ ಅಂತ ಸಾದ್ನಿ ಮಾಡ್ಕ್ ಅಂತ ಕನ್ಸ್ ಇದಿತ್. ಈಗ ಆ ಕನ್ಸ್ ನನ್ಸ್ ಆಯ್ತ್. ಕೋ.ಮ. ಕಾರಂತ ಪ್ರಶಸ್ತಿ ಸಿಕ್ಕಿದ್ದ್ದ್ ತುಂಬ ಖುಷಿ ಆಯ್ತ್. ನನ್ನ ಜವಾಬ್ದಾರಿ ಹೆಚ್ಚಾಯ್ತ್” ಎಂದು ಕೋ.ಮ. ಕಾರಂತ ಪ್ರಶಸ್ತಿ ಸ್ವೀಕರಿಸಿ ರವಿ ಬಸ್ರೂರು ಕುಂದಾಪ್ರ ಕನ್ನಡದಲ್ಲಿ ಬಹಳ ಅರ್ಥಪೂರ್ಣವಾಗಿ ಮಾತನಾಡಿದರು.
ಕುಂದಾಪ್ರ, ಉಡುಪಿ ಜಿಲ್ಲೆ ಪರಿಸರದಲ್ಲಿ ನೂರಾರು ಮಂದಿ ಪ್ರತಿಭಾವಂತ ಯುವಕರಿದ್ದಾರೆ ಅವರ ಆಸಕ್ತಿಯ ಆಲೋಚನೆಗಳಿಗೆ ಬೆಂಬಲ ನೀಡಿ, ತುಂಬ ಮಂದಿ ಸಾಧನೆ ಮಾಡಿದವರೂ ಇದ್ದಾರೆ ಅವರನ್ನೂ ಬೆಳಕಿಗೆ ತನ್ನಿ. ಪ್ರಶಂಸೆ ಎನ್ನುವುದು ಬೇಕಾಗುತ್ತದೆ. ನಮ್ಮ ಪರಿಶ್ರಮಕ್ಕೆ ಪ್ರೋತ್ಸಾಹ ಸಿಗುವಂತೆ, ಸಮಾಧಾನ ಸಿಗುವಂತೆ ನಾವು ಪ್ರಯತ್ನಿಸಬೇಕು. ಕಾಲಕ್ಕೆ ತಕ್ಕಂತೆ ನಾವು ಬೆಳೆಯಬೇಕಾಗುತ್ತದೆ. ನಮ್ಮ ಕೆಲಸ ವೈಭವೀಕರಿಸಬೇಕಾಗುತ್ತದೆ. ಹಾಗೆ ಮಾಡಿದಾಗ ಗುರುತಿಸಲ್ಪಡುತ್ತೇವೆ. ನಮ್ಮ ಯುವಕರು ಯಾವಾಗಲೂ ಮತ್ತೊಬ್ಬರ ಬಗ್ಗೆ ಕೆಟ್ಟದ್ದು ಆಲೋಚಿಸಲು ಪುರುಸೊತ್ತು ಇಲ್ಲದಷ್ಟು ಕೆಲಸದಲ್ಲಿ ಮಗ್ನರಾಗುವಂತಾಗಬೇಕು ಎಂದು ಹೇಳಿದರು.

ಕುಂದಾಪ್ರ ಕನ್ನಡ ಅಕಾಡೆಮಿಗಾಗಿ ಪ್ರಯತ್ನಿಸಬೇಕು ಬಿ. ಅಪ್ಪಣ್ಣ ಹೆಗ್ಡೆ


ರವಿ ಬಸ್ರೂರು ಕುಟುಂಬದವರು ಮೂಲತ: ಪ್ರತಿಭಾವಂತ ಶಿಲ್ಪಿಗಳು. ಚಿನ್ನದ, ಬೆಳ್ಳಿಯ ಮುಖವಾಡ ತಯಾರಿ, ಶಿಲ್ಪಕಲೆ, ಪರಿಣಿತರು, ಹಾರ್ಮೋನಿಯಂ, ಯಕ್ಷಗಾನದ ತಾಳ ವಾದ್ಯಗಳನ್ನೂ ತಯಾರಿಸುವವರು, ಪ್ರಯೋಗಶೀಲರು. ಸಂಗೀತ, ಭಜನೆ ಆಸಕ್ತರು. ರವಿ ಚಿಕ್ಕಂದಿನಿಂದಲೂ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದು, ಹುಡುಗನಾಗಿದ್ದಾಗಲೇ ಪ್ರಯೋಗಗಳನ್ನು ನಡೆಸಿದವರು. ಈಗ ಬಸ್ರೂರಿಗೆ ಹೆಸರು ತರುವಂತಹ ಸಾಧನೆ ಮಾಡಿದ್ದಾರೆ. ಮುಖ್ಯವಾಗಿ ಕುಂದಾಪ್ರ ಕನ್ನಡ ಭಾಷೆ ಸಂಸ್ಕøತಿಯ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಈ ಶ್ರೀಮಂತ ಕುಂದಾಪ್ರ ಕನ್ನಡ, ಭಾಷೆ, ಸಂಸ್ಕøತಿ ಉಳಿದು ಬೆಳೆಯುವಂತಾಗಲೂ ಅಕಾಡೆಮಿ ಸ್ಥಾಪನೆ ಅಗತ್ಯವಾಗಿದ್ದು ಇಲ್ಲಿ ಉಪಸ್ಥಿತರಿರುವ ಮಂಜುನಾಥ ಭಂಡಾರಿಯವರೂ ಸೇರಿದಂತೆ ಜನಪ್ರತಿನಿಧಿಗಳು ಆ ಬಗ್ಗೆ ಗಂಭೀರ ಪ್ರಯತ್ನ ನಡೆಸಬೇಕು. ಕುಂದಪ್ರಭ ಈ ಭಾಷೆಯ ಅಭಿವೃದ್ಧಿಗೆ ಕುಂದಾಪುರದ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದು, ಅಕಾಡೆಮಿ ಸ್ಥಾಪನೆಗೊಂಡರೆ ಹೆಚ್ಚು ಅನುಕೂಲವಾಗುತ್ತದೆ. ರವಿ ಬಸ್ರೂರುರಂತಹ ಯುವಕರಿಗೆ ಇನ್ನಷ್ಟು ಭಾಷೆ, ಸಂಸ್ಕøತಿ ಬಗ್ಗೆ ಆಸಕ್ತಿ ಹುಟ್ಟುತ್ತದೆ ಎಂದು ಬಸ್ರೂರು ಅಪ್ಪಣ್ಣ ಹೆಗ್ಡೆ ಹೇಳಿದರು. ಬೆಲ್ಲದಂತೆ ಬೆಳೆದ ರವಿ – ಮಂಜುನಾಥ ಭಂಡಾರಿ
“ಬೆಲ್ಲ ಎಲ್ಲಿದೆಯೋ ಅಲ್ಲಿ ಇರುವೆಗಳು ಬರುತ್ತವೆ. ಬೆಲ್ಲ ಇರುವೆಗಳ ಬಳಿ ಹೋಗುವುದಿಲ್ಲ ರವಿ ಬಸ್ರೂರು ಈಗ ಬೆಲ್ಲದಂತೆ, ಅವರ ಪ್ರತಿಭೆಯಿಂದ ಅವರು ಖ್ಯಾತರಾಗಿದ್ದಾರೆ. ಹುಟ್ಟೂರು ಬಸ್ರೂರಲ್ಲಿ ಅತ್ಯಾಧುನಿಕ ಸ್ಟುಡಿಯೋ ಮಾಡಿದುದರಿಂದ ಅವರನ್ನು ಹುಡುಕಿಕೊಂಡು ಬಸ್ರೂರಿಗೆ ಬರುತ್ತಾರೆ. ಇದು ಒಂದು ದೊಡ್ಡ ಸಾಧನೆ. ರವಿ ಬಸ್ರೂರು ಜೀವನ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ದಾಖಲಾಗುವಂತೆ ಇದೆ. ನಮ್ಮ ಶಿಕ್ಷಣ ಸಂಸ್ಥೆಗಳಿಗೂ ಅವರನ್ನು ಕರೆಸಬೇಕೆಂದಿದ್ದೇನೆ”ಎಂದು ವಿಧಾನ ಪರಿಷತ್ ಸದಸ್ಯರಾದ ಶಿಕ್ಷಣ ತಜ್ಞ ಮಂಜುನಾಥ ಭಂಡಾರಿ ಹೇಳಿದರು.
ಬಸ್ರೂರು ಒಂದು ಐತಿಹಾಸಿಕ ಗ್ರಾಮ. ಈ ಹಳ್ಳಿ ಎಷ್ಟು ಪ್ರಸಿದ್ಧವಾಗಿತ್ತು ಅಂದರೆ ವ್ಯವಹಾರ, ಲಲಿತ ಕಲೆ, ಶಿಲ್ಪಕಲೆ, ಸಾಹಿತ್ಯ, ಸಂಸ್ಕøತಿ ಎಲ್ಲ ವಿಷಯಗಳಿಗೂ ಹೆಸರುವಾಸಿಯಾಗಿತ್ತು. ವಿದೇಶಿಗರೂ ಈ ಬಸ್ರೂರಿನ ಬಗ್ಗೆ ಆಕರ್ಷಿತರಾಗಿದ್ದರು. ಈ ಭಾಗವನ್ನು ವಶಪಡಿಸಿಕೊಂಡ ವಿದೇಶಿಗರನ್ನು ಸೋಲಿಸಿ ಛತ್ರಪತಿ ಶಿವಾಜಿ ನಮ್ಮವರಿಗೆ ಮರಳಿ ಒದಗಿಸಿಕೊಟ್ಟ ಇತಿಹಾಸವಿದೆ. ಇಂತಹ ಬಸ್ರೂರಿನಲ್ಲಿ ಹುಟ್ಟಿದ ಹುಡುಗ, ಕನ್ನಡ ಚಲನಚಿತ್ರದ ಖ್ಯಾತ ನಿರ್ಮಾಪಕರೂ ಬಸ್ರೂರಿಗೆ ಬರುವಂತೆ ಸಾಧನೆ ಮಾಡಿರುವುದು ಪ್ರಶಂಸನೀಯ. ಕುಂದಪ್ರಭ ವತಿಯಿಂದ ಕೋ. ಮ. ಕಾರಂತ ಪ್ರಶಸ್ತಿ ನೀಡಿರುವುದು ಅರ್ಹ ಸಾಧಕನಿಗೆ ನೀಡಿದಂತಾಗಿದೆ ಎಂದು ಅವರು ಹೇಳಿದರು.

ಶಿಲ್ಪದಂತೆ ರೂಪುಗೊಂಡ ರವಿ – ಅಭಿನಂದನ್ ಶೆಟ್ಟಿ


ಪೆಟ್ಟು ತಿಂದು ರೂಪುಗೊಂಡ ಶಿಲ್ಪ ಗುಡಿಗೆ ಸೇರಿ ಪೂಜಿಸಲ್ಪಡ್ತದೆ. ಏನೂ ಆಗದ ಕಲ್ಲು ನಡೆದಾಡುವ ಹಾಸು ಆಗುತ್ತದೆ. ನಮ್ಮ ರವಿ ಬಸ್ರೂರು ಹಾಗೆ ತುಂಬ ಸಂಕಷ್ಟ ಅನುಭವಿಸಿಯೂ ಛÀಲದಿಂದ ಮುನ್ನಡೆದಿದ್ದಾರೆ. ಇಂದು ಕೀರ್ತಿ ತರುವಂತಹ ಸಾಧನೆಗೈದಿದ್ದಾರೆ. ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಕುಂದಾಪ್ರ ಕನ್ನಡದ ಬಗ್ಗೆ ಬೇರೆ ಕಡೆ ತಮಾಷೆ ಮಾಡುತ್ತಿದ್ದರು. ಇಂದು ರವಿ ಬಸ್ರೂರು ಅವರಂತಹ ವ್ಯಕ್ತಿಗಳ ಪ್ರಯತ್ನದಿಂದ ಕುಂದಾಪ್ರ ಕನ್ನಡ ರೋಮಾಂಚನ ಉಂಟು ಮಾಡುತ್ತಿದೆ. ಅದು “ಭಾಷೆಯಲ್ಲ ಬದುಕು” ಎಂದು ಇವರು ತೋರಿಸಿಕೊಟ್ಟಿದ್ದಾರೆ. ಕುಂದಾಪುರ ನಾಗರಿಕರು `ರವಿ’ ಅವರಿಗೆ ಚಿರ ಋಣಿಯಾಗುತ್ತಾರೆ. “ನಿರಾಡಂಬರವಾಗಿ ಕೆಲಸ ಮಾಡಿ, ಯಶಸ್ಸು ಶಬ್ದ ಮಾಡಲಿ” ಎಂಬಂತೆ ರವಿ ಬಸ್ರೂರು ಶ್ರಮಿಸಿದ್ದಾರೆ. “ಬಿದ್ದಾಗ ಸೋಲಲ್ಲ, ಬಿದ್ದು ಏಳದಿದ್ದರೆ ಸೋಲು” ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಯಶಸ್ಸು ನಿರಂತರವಾದುದು ಎನ್ನುವುದನ್ನು ಅರಿತು ಇನ್ನಷ್ಟು ಸಾಧನೆಗಾಗಿ ರವಿ ಬಸ್ರೂರು ಮುನ್ನಡೆಯಲಿ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್, ಉದ್ಯಮಿ ಅಭಿನಂದನ್ ಶೆಟ್ಟಿ ಹೇಳಿದರು.
ಬಸ್ರೂರು ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುನಿಕ ಸ್ಟುಡಿಯೋ ನಿರ್ಮಾಣ ಮಾಡಿರುವುದು ನಮಗೆ ತಿಳಿದಿರಲಿಲ್ಲ. ಅವರು ತಣ್ಣಗೆ ಸ್ಟುಡಿಯೋ ನಿರ್ಮಾಣ ಮಾಡಿ ಹುಟ್ಟೂರಲ್ಲಿ ಸಾಧನೆಗೈದಿದ್ದಾರೆ” ಎಂದು ಅವರು ಅಭಿನಂದನೆ ಸಲ್ಲಿಸಿದರು.

         

ಡಾ| ರಂಜಿತ್ ಕುಮಾರ್ ಶೆಟ್ಟಿಯವರ ಕಥಾ ಸಂಕಲನ ಬಿಡುಗಡೆ


“ಸಾಹಿತಿ ಡಾ. ರಂಜಿತ್‍ಕುಮಾರ್ ಶೆಟ್ಟಿಯವರ ಉತ್ತಮ ಕಥೆಗಾರರೂ ಕಾದಂಬರಿಗಾರರೂ ಆಗಿದ್ದು, ಅವರ ನೂತನ ಕೃತಿ “10+10 = 20 ಕಥೆಗಳು” ಬಿಡುಗಡೆ ಮಾಡಲು ಸಂತೋಷವಾಗುತ್ತದೆ. ಅವರ ಕಥೆಗಳು ತಮಾಷೆಯೊಂದಿಗೆ ಉತ್ತಮ ಸಂದೇಶಗಳನ್ನು ಸಾರುವ ಮೌಲ್ಯಯುತ ಕತೆಗಳಾಗಿರುತ್ತದೆ. ಈ ಕೃತಿ ಬಿಡುಗಡೆ ಮಾಡಲು ಹೆಮ್ಮೆಯಾಗುತ್ತದೆ” ಎಂದು ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
ಕುಂದಕನ್ನಡದ ಅಭಿವೃದ್ಧಿಗೆ ನಾವೆಲ್ಲಾ ಶ್ರಮಿಸೋಣ. ಕುಂದಾಪ್ರಕನ್ನಡದ ಸಾಹಿತ್ಯ ರಚಿಸುವಲ್ಲಿ ಎಲ್ಲರೂ ಆಸಕ್ತಿ ವಹಿಸಬೇಕು. ಕುಂದಾಪ್ರ ಕನ್ನಡದಲ್ಲಿ ಸಾಹಿತ್ಯವಿದ್ದರೆ ಅದನ್ನು ಒಟ್ಟು ಸೇರಿಸಿ ಪ್ರಕಟಿಸೋಣ. ಡಾ| ರಂಜಿತ್ ಕುಮಾರ್ ಅವರ ಕೃತಿಗಳಲ್ಲಿ, ಅವರ ಮಾತಿನಲ್ಲಿ ಕುಂದಕನ್ನಡ ನಾವು ಕಾಣುತ್ತೇವೆ. ಅವರು ಇನ್ನಷ್ಟು ಕೃತಿಗಳನ್ನು ರಚಿಸುವಂತಾಗಲಿ” ಎಂದು ಹೇಳಿದರು.
ಈ ಪುಸ್ತಕ ಕುಂದಾಪುರದ ವಿನಯಾ ಆಸ್ಪತ್ರೆಯಲ್ಲಿ ಲಭ್ಯವಿರುತ್ತವೆ. ಎಂದು ಡಾ| ರಂಜಿತ್ ಕುಮಾರ್ ಶೆಟ್ಟಿ ತಿಳಿಸಿದರು.