ವ್ಯಕ್ತಿತ್ವ ವಿಕಸನ ಮತ್ತು ಜೀವನ ಮೌಲ್ಯಗಳು ಮಾಹಿತಿ ಶಿಬಿರ 2023

ನಾವೆಲ್ಲಾ ಕೂಡು ಕುಟುಂಬ ಪದ್ಧತಿಯಿಂದ ಬಂದುದರಿಂದ ನಮ್ಮಲ್ಲಿ ನಮಗರಿವಿಲ್ಲದೇ ರೀತಿ ನೀತಿ ಸಾಮಾಜಿಕ ಕಟ್ಟುಪಾಡುಗಳಿಂದ ಬದ್ಧರಾಗಿದ್ದೇವೆ. ಆದರೆ ಜಾಗತೀಕರಣದಿಂದಾಗಿ ವಿಜ್ಞಾನ ಮತ್ತು ತಾಂತ್ರಿಕತೆ ಗಣನೀಯ ಬೆಳವಣಿಗೆ ಹೊಂದಿರುವುದರ ಜೊತೆಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವೆಲ್ಲ ಬಾಳಿ ಬದುಕಬೇಕಾಗಿದೆ. ಗತಕಾಲದ ರೀತಿ-ನೀತಿ ನಿಯಮ ಹಬ್ಬ-ಹರಿದಿನ ಆಚರಣೆ ನಂಬಿಕೆ ಇವುಗಳ ಅರಿವು ಇಂದಿನ ವಿದ್ಯಾರ್ಥಿಗಳಿಗೆ ಖಂಡಿತವಾಗಿಯೂ ಬೇಕಾಗುತ್ತದೆ. ಎಂದು ಶ್ರೀಮತಿ ಶಾರದಾ ಗೊಲ್ಲ ಅಧ್ಯಕ್ಷರು ಗ್ರಾಮ ಪಂಚಾಯತ್ ಹೊಸಂಗಡಿ ಇವರು ಹೇಳಿದರು. ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ), ಬಾಳ್ಕುದ್ರು ಹಂಗಾರಕಟ್ಟೆ, ಗ್ರಾಮ ಪಂಚಾಯತ್ ಹೊಸಂಗಡಿ, ಸರಕಾರಿ ಪ್ರೌಢಶಾಲೆ ಹೊಸಂಗಡಿ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ವ್ಯಕ್ತಿತ್ವ ವಿಕಸನ ಮತ್ತು ಜೀವನಮೌಲ್ಯಗಳು ಎಂಬ ಮಾಹಿತಿ ಶಿಬಿರ ಉದ್ಘಾಟಿಸಿ ಮಾತಾಡಿದರು.
ಸಭಾಧ್ಯಕ್ಷತೆಯನ್ನು ಶ್ರೀ ಗುರುಪ್ರಸಾದ್ ಎಚ್. ಮುಖ್ಯಶಿಕ್ಷಕರು ಸರಕಾರಿ ಪ್ರೌಢಶಾಲೆ ಹೊಸಂಗಡಿ ಇವರು ಮಾತನಾಡಿ ನಮ್ಮ ಜೀವನವೇ ಒಂದು ಮೌಲ್ಯ ಈ ಮೌಲ್ಯ ಸಾಧನೆಗಾಗಿ ನಾವು ದೀರ್ಘ ಹೋರಾಟ, ಪ್ರಯತ್ನಶೀಲತೆ, ಕಷ್ಟಸಹಿಷ್ಣುತೆ, ಅಗಾಧ ಆತ್ಮವಿಶ್ವಾಸ, ವಿದ್ಯಾರ್ಥಿ ದೆಸೆಯಿಂದಲೇ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು,
ಮುಖ್ಯ ಅತಿಥಿಯಾಗಿ ಶ್ರೀ ನಾಗು ಕುಲಾಲ್ ಉದ್ಯಮಿ, ಸಿದ್ಧಾಪುರ ಇವರು ಮಾತನಾಡಿ ಪ್ರತಿಭೆ ಎನ್ನುವುದು. ಪ್ರತೀ ವ್ಯಕ್ತಿಯಲ್ಲೂ ಅಡಕವಾಗಿದೆ. ಅದನ್ನು ಕಾಲಕಾಲಕ್ಕೆ ಉತ್ತೇಜಿಸಿ ಬೆಳೆಸಿದಾಗ ಅದು ಅನಾವರಣಗೊಳ್ಳುವುದು. ಅಲ್ಲದೇ ನಾವು ಅತಿಯಾದ ತಾಂತ್ರಿಕತೆ ಅಂದರೆ ಮೊಬೈಲ್ ಬಳಕೆ ಸಲ್ಲದು. ಅದನ್ನು ಹಿತಮಿತವಾಗಿ ಬಳಸಬೇಕು. ನಮ್ಮ ಹಬ್ಬ-ಹರಿದಿನಗಳ ಬಗ್ಗೆ ಆಸಕ್ತಿ ಬೆಳೆಸಿ ನಮ್ಮ ಪರಂಪರೆಯನ್ನು ನಾವೇ ಉಳಿಸಬೇಕೆಂದು ಕರೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿ ಶ್ರೀ ಆನಂದ ಶೆಟ್ಟಿ ಮಾತನಾಡಿ ನಮ್ಮಲ್ಲಿರುವ ಜೀವನ ಮೌಲ್ಯಗಳು ನಮ್ಮ ಅಂತರಂಗದ ನೆಲೆಗಳಾಗಿರುತ್ತದೆ. ಇದು ನಮ್ಮ ಬದುಕಿಗೆ ಬೆಳಕಾಗಬೇಕೆಂತಾದರೆ ಅದು ಸಮಾಜದ ವಿವಿಧ ಹಂತಗಳನ್ನು ಪರಿಗಣಿಸಿ ಸುಧಾರಣಾ ಕ್ರಮವಾಗಿ ಬದಲಾಗಬೇಕಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಶ್ರೀಮತಿ ಯಶೋಧಾ ಶೆಟ್ಟಿ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಹೊಸಂಗಡಿ ಸದಸ್ಯರಾದ ರವಿ ಶೆಟ್ಟಿ ಅವಿನಾಶ್ ಶೆಟ್ಟಿ, ಉದ್ಯಮಿ ನಾಗಯ್ಯ ಶೆಟ್ಟಿ, ಶ್ರೀ ನಾಗು ಕುಲಾಲ್, ಸಂಪನ್ಮೂಲ ವ್ಯಕ್ತಿ ಅಬ್ದುಲ್ ರವೂಫ್, ಮುಖ್ಯ ಶಿಕ್ಷಕರು ಸರಕಾರಿ ಪ್ರೌಢಶಾಲೆ ಹೆಸ್ಕೆತ್ತೂರು, ಕುಂದಾಪುರ ವಲಯ ಹಾಗೂ ಶ್ರೀ ರಮೇಶ್ ವಕ್ವಾಡಿ, ಕಾರ್ಯದರ್ಶಿ ಅಭಿವೃದ್ಧಿ ಸಂಸ್ಥೆ (ರಿ.) ಬಾಳ್ಕುದ್ರು ಹಂಗಾರಕಟ್ಟೆ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಶ್ರೀಮತಿ ವಿದ್ಯಾ ಮೋಹನ್ ಬೆಳ್ಮಣ್ ನಿರೂಪಿಸಿ ಶ್ರೀ ಗುರುಪ್ರಸಾದ್ ಎಚ್., ಮುಖ್ಯ ಶಿಕ್ಷಕರು ಸರಕಾರಿ ಪ್ರೌಢಶಾಲೆ ಹೊಸಂಗಡಿ ಸ್ವಾಗತಿಸಿ ಶ್ರೀ ರಮೇಶ್ ವಕ್ವಾಡಿ ಪ್ರಾಸ್ತಾವನೆಗೈದರು. ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿ ಅಬ್ದುಲ್ ರವೂಫ್ ವ್ಯಕ್ತಿತ್ವ ವಿಕಸನ ಮತ್ತು ಜೀವನಮೌಲ್ಯಗಳು ಕುರಿತು ಉಪನ್ಯಾಸ ನೀಡಿ ಸಂವಾದ ನಡೆಸಿಕೊಟ್ಟರು ಸುಮಾರು 136 ವಿದ್ಯಾರ್ಥಿಗಳು ಈ ಶಿಬಿರದಿಂದ ಪ್ರಯೋಜನ ಪಡೆದರು.

ಆಟೋ ಚಾಲಕರು ಶ್ರಮಜೀವಿಗಳು ಅವರನ್ನು ಗೌರವಿಸೋಣ

ಕೋಲಾರ,ಜ.6: ಸಮಾಜದಲ್ಲಿ ಆಟೋ ಚಾಲಕರು ಶ್ರಮಜೀವಿಗಳು ಅವರ ಸೇವೆಯನ್ನು ಗುರ್ತಿಸುವ ಮೂಲಕ ಗೌರವಿಸುವುದು ಪ್ರತಿಯೊಬ್ಬರ ಅದ್ಯ ಜವಾಬ್ದಾರಿಯಾಗಬೇಕು ಎಂದು ಜೆ.ಡಿ.ಎಸ್ ಅಭ್ಯರ್ಥಿ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.
ನಗರದ ಜಮೀರ್ ಪಾಷ ಅವರ ನಿವಾಸದಲ್ಲಿ ಆಟೋ ಚಾಲಕರಿಗೆ ಲೈಸನ್ಸ್ ವಿತರಿಸಿ ಮಾತನಾಡಿ, ಆಟೋ ಚಾಲಕರು ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಅವರ ಬಳಿ ಎಲ್ಲಾ ದಾಖಲೆಗಳು ಸಮರ್ಪಕವಾಗಿ ಇರಬೇಕೆಂಬ ಉದ್ದೇಶದಿಂದ ನೆಮ್ಮದಿ ಜೀವನ ನಡೆಸಲು ಅನಕೂಲವಾಗಲೆಂದು ತಮ್ಮ ಕೈಲಾದ ಅಳಿಲು ಸೇವೆ ಮಾಡುತ್ತಿದ್ದೇನೆ ಎಂದರು.
ಈ ಬಾರಿ ಜೆ.ಡಿ.ಎಸ್.ಅಧಿಕಾರಕ್ಕೆ ಬರಲಿದ್ದು, ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಲಿದ್ದಾರೆ. ಕೋಲಾರ ವಿಧಾನ ಸಭಾ ಕ್ಷೇತ್ರದಲ್ಲಿ ತಾವು ನನಗೆ ಮತ ನೀಡಿ ಆಶೀರ್ವದಿಸಿದದರೆ ಕೋಲಾರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದು ಈಗಿರುವ ಕೋಲಾರವನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಮಾದರಿ ಕೋಲಾರವನ್ನು ಮಾಡುವುದಾಗಿ ತಿಳಿಸಿದರು.
ಅಂಜುಮಾನ್ ಇಸ್ಲಾಮಿಯಾ ಅಧ್ಯಕ್ಷ ಜಮೀರ್‍ಪಾಷ ಮಾತನಾಡಿ, ಈ ಬಾರಿ ಸ್ಥಳೀಯ ಜೆ.ಡಿ.ಎಸ್ ಅಭ್ಯರ್ಥಿಯಾದ ಸಿ.ಎಂ.ಆರ್.ಶ್ರೀನಾಥ್ ಅವರಿಗೆ ಮತ ನೀಡಿ ಅವರ ಕೈ ಬಲ ಪಡಿಸಿದರೆ ಕೋಲಾರ ಅಭಿವೃದ್ಧಿಗೆ ಮುನ್ನಡಿ ಬರೆಯಲಿದ್ದಾರೆ.
ಈಗಾಗಲೇ ಶಾಸಕರಾಗಿರುವವರು ಕೋಲಾರದ ಅಭಿವೃದ್ಧಿಗಿಂತ ತಮ್ಮ ಅಭಿವೃದ್ಧಿ ಕಡೆಗೆ ಗಮನ ನೀಡಿದ ಹಿನ್ನಲೆ ಕೋಲಾರ ಇಂದಿಗೂ ಸಹ ಚಿಕ್ಕ ಹಳ್ಳಿಯಂತಿದೆ. ಇದುವರೆಗೂ ಯಾರೂ ಸಹ ಕೋಲಾರದ ಅಭಿವೃದ್ಧಿಗೆ ಸಹಕರಿಸಲಿಲ್ಲ. ಇಂತಹ ಸಂದರ್ಭದಲ್ಲಿ ಯಾವುದೇ ಜಾತಿ, ಮತ ಬೇಧಗಳನ್ನು ಮಾಡದೆ ನಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿರುವ ಸ್ಥಳೀಯ ಜೆ.ಡಿ.ಎಸ್. ಅಭ್ಯರ್ಥಿ ಸಿ.ಎಂ.ಆರ್.ಶ್ರೀನಾಥ್ ಅವರನ್ನು ಬೆಂಬಲಿಸಿ ಕೋಲಾರ ಅಭಿವೃದ್ಧಿಗೆ ಮುಂದಾಗಬೇಕೆಂದು ಕರೆ ನೀಡಿದರು.
ಸಿ.ಎಂ.ಆರ್ ಶ್ರೀನಾಥ್ ಅವರು ಕೊರೋನಾ ಸಂದರ್ಭದಲ್ಲಿ ಕೊರೋನಾ ಪಾಸಿಟಿವ್ ಬಂದ ಮನೆಗಳಿಗೆ ತೆರಳಿ ಅವರಿಗೆ ಔಷಧಿ ಕಿಟ್‍ಗಳನ್ನು ವಿತರಿಸಿ ಆತ್ಮಸ್ಥೈರ್ಯವನ್ನು ತುಂಬುವ ಕೆಲಸ ಮಾಡಿದ್ದಾರೆ. ಮಳೆ ಬಂದು ಕೋಲಾರದ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡ ಸಂದರ್ಭದಲ್ಲಿ ತಕ್ಷಣ ಅಲ್ಲಿಗೆ ಧಾವಿಸಿ ಸಹಾಯ ಹಸ್ತ ಚಾಚುವುದರ ಜೊತೆಗೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಜನ ಸಾಮಾನ್ಯರಂತೆ ನಮ್ಮಲ್ಲೊಬ್ಬರಾಗಿರುವ ಸಿ.ಎಂ.ಆರ್.ಶ್ರೀನಾಥ್ ಅವರನ್ನು ಗೆಲ್ಲಿಸುವ ಮೂಲಕ ಕೋಲಾರದ ಹಣೆಬರಹವನ್ನು ಬದಲಾಯಿಸೋಣ ಎಂದು ಹೇಳಿದರು.
ಸಭೆಯಲ್ಲಿ ಅಲ್ಪಸಂಖ್ಯಾತ ಮುಖಂಡರು, ಜೆ.ಡಿ.ಎಸ್.ಮುಖಂಡರು ಭಾಗವಹಿಸಿದ್ದರು.

ಸಾವಿತ್ರಿಬಾಯಿ ಫುಲೆ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದ ದಿಟ್ಟಮಹಿಳೆ ; ಎನ್.ಬಿ.ಗೋಪಾಲಗೌಡ

ಕೋಲಾರ ಜನವರಿ 6 : ಭಾರತೀಯ ಚರಿತ್ರೆಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ನೂರ ಎಪ್ಪತ್ತು ವರ್ಷಗಳ ಹಿಂದೆಯೇ ಹೋರಾಡಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ ಫುಲೆ. ಅಂದಿನ ಸಮಾಜದಲ್ಲಿ ಎದುರಾದ ಎಲ್ಲಾ ವಿರೋಧಗಳನ್ನು ಲೆಕ್ಕಿಸದೆ ಛಲಬಿಡದ ಧರಣಿಯಂತೆ ಹೆಣ್ಣು ಮಕ್ಕಳ ಅಕ್ಷರಕ್ರಾಂತಿಗೆ ದೀಪ ಬೆಳಗಿಸಿದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಎನ್.ಬಿ.ಗೋಪಾಲಗೌಡ ತಿಳಿಸಿದರು.
ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಕೋಲಾರ ಜಿಲ್ಲಾ ಘಟಕ ಹಾಗೂ ಅಕ್ಷರದವ್ವ ಫಾತಿಮಾ ಶೇಖ್ ಪ್ರತಿμÁ್ಠನವು ಸಹಯೋಗದಲ್ಲಿ ಹಮ್ಮಿಕೊಂಡಿರುವ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಫಾತಿಮಾ ಶೇಖ್ ಸಪ್ತಾಹ ಸಂಭ್ರಮದ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದರು.
ಭಾರತೀಯ ಮುಸ್ಲಿಂ ಸಮಾಜದಲ್ಲಿ ಹುಟ್ಟಿ ಫುಲೆ ದಂಪತಿಗಳ ಜೊತೆಯಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಬಂಡಾಯದ ಕಹಳೆ ಊದುದ ಧೀಮಂತ ಮಹಿಳೆ ಫಾತಿಮಾ ಶೇಖ್. ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಖ್ ಇವರಿಬ್ಬರೂ ಗೆಳತಿಯರಾಗಿ, ಸಹಪಾಠಿಗಳಾಗಿ, ಭಾರತದ ಮೊದಲ ಶಿಕ್ಷಕಿಯರಾಗಿ ಅಕ್ಷರ ದೀವಿಗೆ ಬೆಳಗಿಸಲು ಹೋರಾಟ ನಡೆಸಿದವರು. ಸಾವಿತ್ರಿಬಾಯಿ ಹುಟ್ಟಿದ್ದು ಜನವರಿ 3, ಫಾತಿಮಾ ಶೇಖ್ ಹುಟ್ಟಿದ್ದು ಜನವರಿ 9. ಇವರಿಬ್ಬರ ಜನ್ಮ ದಿನಾಚರಣೆಗಳನ್ನು ಮಾಡುವ ನಿಟ್ಟಿನಲ್ಲಿ ಮೂರರಿಂದ ಒಂಭತ್ತರವರೆಗೆ ಏಳು ದಿನಗಳ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಶಿಕ್ಷಕರಾದ ಜಾಬಿರ್ ಅಹಮ್ಮದ್‍ರವರು ಮಾತನಾಡುತ್ತ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಮಹಿಳೆಯೊಬ್ಬಳು ಸುಶಿಕ್ಷಿತಳಾದರೆ ತನ್ನ ಇಡೀ ಮನೆ ಕುಟುಂಬವನ್ನು ವಿದ್ಯಾವಂತರನ್ನಾಗಿ ಮಾಡುತ್ತಾಳೆ. ನಾಲ್ಕು ಗೋಡೆಗಳ ನಡುವೆ ಕುಳಿತಿದ್ದ ಹೆಣ್ಣು ಇವತ್ತು ಅಕ್ಷರಸ್ತಳಾಗಿ ಸಮಾಜದ ಎಲ್ಲಾ ಸ್ತರದಲ್ಲಿ ಸಾಧನೆ ಮಾಡುತ್ತಿದ್ದಾಳೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಬಿ.ಶಿವಕುಮಾರ್ ಅವರು ಮಾತನಾಡುತ್ತ ಕಳೆದ ವರ್ಷದಿಂದ ನಾವು ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಖ್ ಅವರು ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದೇವೆ. ಈ ಬಾರಿ ನಾವು ಸಪ್ತಾಹ ಸಂಭ್ರಮವನ್ನು ಹಮ್ಮಿಕೊಳ್ಳುವ ಮೂಲಕ ಏಳು ದಿನಗಳ ಕಾರ್ಯಕ್ರಮವನ್ನು ಆಯೋಜಿಸಿದ್ದು ಉಪನ್ಯಾಸ, ಕವಿಗೋಷ್ಠಿ, ಪ್ರಶಸ್ತಿ, ಪುಸ್ತಕ ಓದು ಹೀಗೆ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದೇವೆ. ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಖ್ ಅವರ ಸ್ಮರಣೆ ಮಾಡುವ ಮೂಲಕ ಜನ ಸಾಮಾನ್ಯರ ಬಳಿಗೆ ಇವರ ಚರಿತ್ರೆಯನ್ನು ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ಕವಿಗಳಾದ ಕಾ.ಹು.ಚಾನ್‍ಪಾಷ ಅವರು ಮಾತನಾಡುತ್ತ ಸಾವಿತ್ರಿಬಾಯಿ ಫುಲೆ ಹಾಗೂ ಫಾತಿಮಾ ಶೇಖ್ ರವರು ಇವತ್ತು ನಮಗೆ ಆದರ್ಶವಾಗಬೇಕಾದ ತುರ್ತು ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇವರಿಬ್ಬರನ್ನೂ ನಾವು ಜೊತೆಗಿಟ್ಟೇ ನೋಡಬೇಕು. ನೂರ ಎಪ್ಪತ್ತು ವರ್ಷಗಳ ಹಿಂದಿನ ಸಾಮಾಜಿಕ, ರಾಜಕೀಯ, ಧಾರ್ಮಿಕ ಪರಿಸ್ಥಿತಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೆಜ್ಜೆಗಳನಿಟ್ಟಿದ್ದೇ ಒಂದು ಬಂಡಾಯ. ನೋವು, ದುಃಖ, ಅವಮಾನಗಳನ್ನು ಸಹಿಸಿಕೊಂಡು ಸೌಹಾರ್ದ ಬಹುತ್ವ ಭಾರತವನ್ನು ಕಟ್ಟುವ ನಿಟ್ಟಿನಲ್ಲಿ ಅವರು ಅಂದೇ ಅಕ್ಷರದ ದೀವಿಗೆಯನ್ನು ಮನೆಮನೆಗೆ ತಪುಪಿಸುವ ಕಾಯಕವನ್ನು ಮಾಡಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಿ.ಆರ್.ಪಿ.ಗಳಾದ ಜಮೀಲ್ ಅಹಮ್ಮದ್ ಹಾಗೂ ಜಬೀವುಲ್ಲಾ ಶರೀಪ್ ಅವರು ಕಾರ್ಯಕ್ರಮವನ್ನು ಕುರಿತು ಮಾತನಾಡಿದರು. ಶಾಹೀನ್ ತಾಜ್.ಹೆಚ್.ಎ, ಮಂಜುಳ ಕೊಂಡರಾಜನಹಳ್ಳಿ, ಕೆ.ವಿ.ನೇತ್ರಾವತಿ ಹಾಗೂ ಎನ್.ಸರಸ್ವತಿ ಅವರ ಸಾಮಾಜಿಕ, ಶೈಕ್ಷಣಿಕ, ಹೋರಾಟಗಳ ಸಾಧನೆಗಳನ್ನು ಗುರುತಿಸಿ ಸಾವಿತ್ರಿಬಾಯಿ ಫುಲೆ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸೈಯದ್ ಆಸಿಫ್ ಅಹಮ್ಮದ್, ಕೌಸರ್ ಶಬೀನ್, ಶಾಹಿಸ್ತ ತಸ್ನೀಮ್ ತಾಜ್, ಆಮಿರಾ ಫಾತಿಮಾ, ಸಲ್ಮಾ ಕೌಸರ್ ಮೊದಲಾದವರು ಉಪಸ್ಥಿತರಿದ್ದರು.

ಬಿಕರ್ನಕಟ್ಟೆಯ ಬಾಲ ಯೇಸುವಿನ ವಾರ್ಷಿಕ ಮಹೋತ್ಸವ ಧ್ವಜಾರೋಹಣದೊಂದಿಗೆ ಚಾಲನೆ

ಬಾಲಯೇಸುವಿನ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವಕ್ಕೆ ಅಣಿಯಾಗಲು ನವದಿನಗಳ ಪ್ರಾರ್ಥನಾವಿಧಿ ಹಾಗೂ ನವೇನಾ ಪೂಜೆಗಳಿಗೆ ಧ್ವಜಾರೋಹಣದೊಂದಿಗೆ ಬುಧವಾರ 04, 2023 ಸಂಜೆ 6.30ಗೆ ಪುಣ್ಯಕ್ಷೇತ್ರದ ಅವರಣದಲ್ಲಿ ಚಾಲನೆ ನೀಡಲಾಯಿತು. ಧ್ವಜಾರೋಹಣದ ಮುಂಚೆ ಕೈಕಂಬ-ಬಿಕರ್ನಕಟ್ಟೆ ಮೈದಾನದಿಂದ ಪುಣ್ಯಕ್ಷೇತ್ರದ ಕಡೆಗೆ ಹೊರೆಕಾಣಿಕೆ ಮೆರವಣಿಗೆ ನೆರವೇರಿತು. ವಂದನೀಯ ಗುರು ಲ್ಯಾನ್ಸಿ ಲುವಿಸ್‍ ಪ್ರಾರ್ಥನವಿಧಿಯನ್ನು ನಡೆಸಿಕೊಟ್ಟರು. ಅನೇಕ ಭಕ್ತಾದಿಗಳು ಈ ಮೆರವಣಿಗೆಯಲ್ಲಿ ಪಾಲ್ಗೊಂಡರು.  

     ತದನಂತರ ಬಾಲ ಯೇಸುವಿನ ಆವರಣದಲ್ಲಿ ಧ್ವಜಾರೋಹಣದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸ್ಥಳೀಯ ಕಾರ್ಪೊರೇಟರಗಳು ಹಾಗು ಇತರ ಪ್ರಮುಖ ಗಣ್ಯರಿಗೆ ಗೌರವ ಸಲ್ಲಿಸಲಾಯಿತು. ವಂದನೀಯ ಗುರು ಜೇಮ್ಸ್ ಡಿ ಸೋಜಾ, ವಲಯಧಿಕಾರಿಗಳು ಆಶೀರ್ವಚನ ನಡಿಸಿ, ಮಂಗಳೂರಿನ ಮಾನ್ಯ ಆಯುಕ್ತ, ಶ್ರೀ ಎನ್ ಶಶಿಕುಮಾರ್ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ವಂದನೀಯ ಗುರು ಚಾಲ್ರ್ಸ್ ಸೆರಾವೊ (ಕಾರ್ಮೆಲ್ ಗುರುಮಠದ ಮುಖ್ಯಸ್ಥರು) ಹಾಗೂ ವಂ. ಗುರು ರೋವೆಲ್ ಡಿ ಸೋಜಾ (ಪುಣ್ಯಕ್ಷೇತ್ರದ ನಿರ್ದೇಶಕರು), ಶ್ರೀ ಐವನ್ ಡಿ ಸೋಜಾ, (ಮಾಜಿ ಎಮ್‍ಎಲ್‍ಸಿ), ಶ್ರೀಮತಿ ಕಾವ್ಯ ನಟರಾಜ್ ಆಳ್ವ (ಕಾರ್ಪೊರೇಟರ್) ಮತ್ತಿತರ ಸ್ಥಳಿಯ ಕಾರ್ಪೊರೇಟರಗಳು ಉಪಸ್ಥಿತರಿದ್ದರು. ವಂ. ಗುರು ಸ್ಟೀವನ್ ಪಿರೇರಾ ಹಾಗೂ ವಂ. ಗುರು ರಾಯನ್ ಪಿಂಟೊ ಕಾರ್ಯಕ್ರಮವನ್ನು ಆಯೋಜಿಸಿ ನಡೆಸಿಕೊಟ್ಟರು.

    ಜನವರಿ 5ರಿಂದ ಸತತ ನವದಿನಗಳ ಕಾಲ ಇಡೀ ದಿನ ಕೊಂಕಣಿ, ಕನ್ನಡ, ಮಲಯಾಳಂ, ಇಂಗ್ಲಿಷ್, ಭಾಷೆಗಳಲ್ಲಿ ಒಂಬತ್ತು ಬಲಿಪೂಜೆಗಳು ನಡೆಯುವವು. ಪ್ರತಿದಿನ ಮಧ್ಯಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರುವುದು. ಬಾಲ ಯೇಸುವಿನ ವಾರ್ಷಿಕ ಮಹೋತ್ಸವ ಜನವರಿ 14 ಹಾಗೂ 15 ರಂದು ವಿಜೃಂಭಣೆಯಿಂದ ಆಚರಿಸಲಾಗುವುದು.

ಬೆಳ್ಮಣ್ಣು ಮಂಡಲ ಪೂಜಾ ಮಹೋತ್ಸವ

  ಇತಿಹಾಸ ಪ್ರಸಿದ್ದ ಸಾವಿರಾರು ವರ್ಷಗಳ ಇತಿಹಾಸವಿರುವ ಶ್ರೀ ವನದುರ್ಗೆ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮಂಡಲ ಪೂಜಾ ಮಹೋತ್ಸವವು ಮಂಗಳವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ವೇದಮೂರ್ತಿ ಬಿ.ಕೆ.ವಿಘ್ನೇಶ್ ಭಟ್ ಅವರ ನೇತೃತ್ವದಲ್ಲಿ ಜರಗಿತು.
    ಬೆಳಿಗ್ಗೆ ಪಂಚಾಮೃತಾಭಿಷೇಕ, ನವಕ ಕಲಶಾಭಿಷೇಕ ಅಲಂಕಾರ ಪೂಜೆ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಮಂಡಲ ಪೂಜೆ, ಉತ್ಸವ ಬಲಿ, ಪಲ್ಲ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ತಾಳಮದ್ದಲೆ “ಶರಸೇತು ಬಂಧ” ಹಾಗೂ ಕಲ್ಲಡ್ಕ ವಿಠಲ ನಾಯಕ್ ಅವರಿಂದ ವಿನೂತನ ಶೈಲಿಯ ಹೊಸತನದಿಂದ ಕೂಡಿದ ಜೀವನ ಸಂದೇಶ ನೀಡುವ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಜರಗಿತು. ರಾತ್ರಿ ಪ್ರಸನ್ನ ಪೂಜೆ, ಉತ್ಸವ ಬಲಿ ಹಾಗೂ ರಂಗಪೂಜೆ ಜರಗಿತು.

ಶ್ರೀನಿವಾಸಪುರ: ರೋಣೂರು ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯಕ್ಕೆ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಡಾ. ವೈ.ಎ.ನಾರಾಯಣಸ್ವಾಮಿ ಭೇಟಿ

ಶ್ರೀನಿವಾಸಪುರ: ರೋಣೂರು ಗ್ರಾಮದ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯಕ್ಕೆ ಮಂಗಳವಾರ ದ್ವಾದಶಿ ಪ್ರಯಕ್ತ, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಡಾ. ವೈ.ಎ.ನಾರಾಯಣಸ್ವಾಮಿ ಭೇಟಿ ನೀಡಿ ದೇವರ ದರ್ಶನ ಪಡೆದರು.
ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್, ತಾಲ್ಲೂಕು ಘಟಕದ ಅಧ್ಯಕ್ಷ ಎ.ಅಶೋಕರೆಡ್ಡಿ, ಮುಖಂಡರಾದ ರೋಣೂರು ಚಂದ್ರಶೇಖರ್ ಇದ್ದರು.
ದೇವಾಲಯದ ಆವರಣದಲ್ಲಿ ಸಂಗೀತ ಕಲಾವಿದೆ ಮಾಯಾ ಬಾಲಚಂದ್ರ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಗೀತ ಕಲಾವಿದರಾದ ಕೆ.ನರಸಿಂಹಮೂರ್ತಿ ಹಾಗೂ ಬಾನುತೇಜ ಅವರಿಂದ ಗೀತ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ತಾಲ್ಲೂಕಿನ ವಿವಿಧೆಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಕುತೂಹಲವೇ ಹೊಸ ಸಂಶೋಧನೆಗೆ ದಾರಿ ಮಾಡಿಕೊಡುತ್ತದೆ : ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ

ಶ್ರೀನಿವಾಸಪುರ: ವಿದ್ಯಾರ್ಥಿಗಳು ಕುತೂಹಲ ಉಳಿಸಿಕೊಳ್ಳಬೇಕು. ಕುತೂಹಲವೇ ಹೊಸ ಸಂಶೋಧನೆಗೆ ದಾರಿ ಮಾಡಿಕೊಡುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಹೇಳಿದರು.
ತಾಲ್ಲೂಕಿನ ಬೈರಪಲ್ಲಿ ಗ್ರಾಮದ ಭೈರವೇಶ್ವರ ವಿದ್ಯಾನಿಕೇತನದ ಆವರಣದಲ್ಲಿ ಭಾರತ ಸರ್ಕಾರದ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಟೆಕ್ನಾಲಜಿ ಕಮ್ಯುನಿಕೇಷನ್ ಸಹಕಾರದೊಂದಿಗೆ, ಕೆ.ಸಿ.ರೆಡ್ಡಿ ಸರೋಜಮ್ಮ ಕ್ಷೇಮಾಭಿವೃಧ್ಧಿ ಫೌಂಡೇಷನ್ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ತಾಲ್ಲೂಕು ಮಂಟ್ಟದ ಪ್ರೌಢ ಶಾಲಾ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಸಮಾಜದ ಎಲ್ಲ ವರ್ಗದ ಜನರಲ್ಲೂ ಒಂದು ಮಟ್ಟದಲ್ಲಿ ಮೂಢನಂಬಿಕೆ ಮನೆಮಾಡಿದೆ. ಅರಿವಿಲ್ಲದೆ ಅದರ ಪಾಲನೆಯಾಗುತ್ತಿದೆ. ಆದ್ದರಿಂದ ಅರ್ಥವಾಗದ ವಿಷಯಗಳ ಬಗ್ಗೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವಲ್ಲಿ ವಿದ್ಯಾವಂತ ಸಮುದಾಯ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.
ಭೈರವೇಶ್ವರ ವಿದ್ಯಾ ಸಂಸ್ಥೆಗಳ ನಿರ್ದೇಶಕ ಎ.ವೆಂಕಟರೆಡ್ಡಿ ಮಾತನಾಡಿ, ಶಿಕ್ಷಣ ವ್ಯಕ್ತಿಗೆ ಶಕ್ತಿ ನೀಡುವ ಸಾಧನ. ಶಿಕ್ಷಣದ ಮೂಲಕ ಪಡೆದುಕೊಂಡ ಶಕ್ತಿ ಸಮಾಜದ ಒಳಿತಿಗೆ ಬಳಕೆಯಾಗಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ಬದುಕಿಗೆ ಹೊಸ ಆಯಾಮ ನೀಡಿದೆ. ಆದರೆ ಕೆಲವರು ವಿಜ್ಞಾನದ ಸಂಶೋಧನೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಹೇಳಿದರು.
ಫೌಡೇಷನ್ ಅಧ್ಯಕ್ಷೆ ವಸಂತ ಕವಿತಾ ಮಾತನಾಡಿದರು.
ಪ್ರಾಂಶುಪಾಲ ಗಂಗಾಧರ ಗೌಡ, ಮುಖ್ಯ ಶಿಕ್ಷಕ ವೆಂಕಟರಮಣಾರೆಡ್ಡಿ, ಇಸಿಒಗಳಾದ ಅಮರನಾಥ್, ಲಕ್ಷ್ಮೀನಾರಾಯಣ, ಕೋದಂಡಪ್ಪ, ಸಂಯುಕ್ತ, ತಾಲ್ಲೂಕು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರಾಮಚಂದ್ರ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ರಮಣಿ ಇದ್ದರು.

ಉಪ್ಪುಂದ:ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕದಿಂದ ’ಈ ಶ್ರವಣ’ ಸಾಧನ ಕೊಡುಗೆ

ಉಪ್ಪುಂದದಲ್ಲಿ ಆಯೋಜಿಸಿದ JCI ಕಾರ್ಯಕ್ರಮ ದಲ್ಲಿ ಕಿವಿ ಕೇಳಿಸದ ವಿದ್ಯಾರ್ಥಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕ ಇವರ ವತಿಯಿಂದ ಶ್ರವಣ ಸಾಧನವನ್ನು ನೀಡಲಾಯಿತು. 15,000/- ಮೌಲ್ಯದ ಈ ಶ್ರವಣ ಸಾಧನವನ್ನು ಡಾ. ದಿನಕಕರ ಶೆಟ್ಟಿ ( U. S. A) ದಂಪತಿಗಳು ನೀಡಿದ್ದು, ಇವರುಗಳು ಸದಾ ಒಂದಲ್ಲಾ ಒಂದು ರೀತಿಯ ದೇಣಿಗೆ ನೀಡುತ್ತಿರುವ ಶ್ರೀಮತಿ ಪ್ರತಿಮಾ ಮತ್ತು ಡಾ. ದಿನಕರ ಶೆಟ್ಟಿ ದಂಪತಿಗಳಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸದಾ ಚಿರ ಋಣಿ.

ಈ ಕಾರ್ಯಕ್ರಮ ದಲ್ಲಿ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ, ಸದಸ್ಯರಾದ ಡಾ. ಸೋನಿ, ಲಯನ್ ಉಪ್ಪುಂದದ ಅದ್ಯಕ್ಷರು ಮತ್ತು ಲಯನ್ ಸದಸ್ಯರು ಉಪಸ್ಥಿತರಿದ್ದರು.

ಕೊಟೇಶ್ವರ ಚರ್ಚ್ ವಾರ್ಷಿಕ ಮಹಾ ಹಬ್ಬ – “ಸ್ವರ್ಗದ ದಾರಿಗೆ, ಪ್ರಾರ್ಥನೆಯ ಆಯುಧದೊಂದಿಗೆ”

ಕುಂದಾಪುರ,ಜ.4: “ಸ್ವರ್ಗದ ದಾರಿಗೆ, ಪ್ರಾರ್ಥನೆಯ ಆಯುಧದೊಂದಿಗೆ” ಎಂಬ ಧ್ಯೇಯ ವಾಕ್ಯದೊಂದಿಗೆ ಕೊಟೇಶ್ವರ ಸಂತ ಅಂತೋನಿ ಚರ್ಚಿನಲ್ಲಿ ವಾರ್ಷಿಕ ಮಹಾ ಹಬ್ಬವು ಭಕ್ತಿ ಸಡಗರದ ಬಲಿದಾನದ ಅರ್ಪಿಸುವ ಮೂಲಕ ಜನವರಿ 4 ರಂದು ಆಚರಿಸಲಾಯಿತು
“ಪ್ರಾರ್ಥನೆ ಅಂದರೆ, ದೇವರ ಹತ್ತಿರ ಅನ್ಯೊನ್ಯವಾಗಿ ಗೆಳೆಯರಂತೆ ಮಾತನಾಡುವುದು. ಯೇಸು ಸ್ವಾಮಿಯೆ ಹೇಳಿದಂತೆ, ನೀವು ಉದ್ದುದ್ದಕ್ಕೂ, ಪ್ರಾರ್ಥನೆ ಅಂತಾ ಬಡಬಡಿಸುವಂತೆ ಬೊಬ್ಬಿಡಬೇಡಿ, ಚಿಕ್ಕದಾದ ಭಕ್ತಿ ಪೂರ್ವಕವಾಗಿ ಪ್ರಾರ್ಥಿಸಿರಿ, ನೀವು ಬೇಡುವುದಕ್ಕಿಂತ ಮೊದಲು, ನಿಮಗೇನು ಬೇಕೆಂದು ದೇವರಿಗೆ ತಿಳಿದಿದೆ” ಕಾರ್ಮೆಲ್ ಮೇಳದ ಖ್ಯಾತ ಧರ್ಮಗುರು ವಂ|ಡಾ|ವಿಲ್ಫ್ರೆಡ್ ರೊಡ್ರಿಗಸ್ ವಾರ್ಷಿಕ ಮಹಾಹಬ್ಬದ ಬಲಿದಾನವನ್ನು ಅರ್ಪಿಸಿ ಸಂದೇಶ ನೀಡಿದರು.
‘ಪ್ರಾರ್ಥನೆಗೆ ದೇವಾಲಯವೇ ಬೇಕೆಂಬುದಿಲ್ಲ. ಕೆಲವೊಂದು ಸಲ ದೇವಾಲ್ಯಗಳು ಇಲ್ಲದೆ ಜಾಗದಲ್ಲಿ ನಾವುರುತ್ತೇವೆ, ನೀವು ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ, ನೀವು ಪ್ರಾರ್ಥಿಸಬಹುದು, ಅವಿಲಿನ ಸಣ್ಣ ಪುಷ್ಪ ಸಂತ ತೆರೆಜಾ, ಅಡಿಗೆ ಕೋಣೆಯಲ್ಲಿ, ಪಾತ್ರೆ ಪಗಡಿಯ ಜೊತೆ ಕೂಡ ದೇವರಿದ್ದಾನೆ ಎಂದು ಹೇಳುತ್ತಾಳೆ. ಯೇಸುವಿನ ಸಣ್ಣ ಪುಷ್ಪ ಸಂತ ತೆರೆಜಾ ಹೂ ತೋಟಗಳ ಮಧ್ಯೆ ಪ್ರಾಥನೆಯಿಂದ ಮಗ್ನನಾಗಿ, ಧ್ಯಾನಿಸುತಿದ್ದಳು, ಶಿಲುಭೆಯ ಸಂತ ಜೋನ್ ಕೂಡ ನಮಗೆ ಪ್ರಾರ್ಥನೆಗೆ ಮಾರ್ಗದರ್ಶಕರಾಗಿದ್ದಾರೆ, ಈ ಮೂವರು ಪ್ರಾರ್ಥನಾ ವಿಷದಲ್ಲಿ ಡಾಕ್ಟರೇಟ್ ಪಡೆದುಕೊಂಡ ಕಾರ್ಮೆಲ್ ಮೇಳದವರು” ಅನ್ನುತ್ತಾ ‘ಬಾಯಿ ಪಾಠಗಳ ಪ್ರಾರ್ಥನೆಕಿಂತ, ಸ್ವಂತವಿವೇಚೆನೆಯಿಂದ ಮಾಡಿದ ಪ್ರಾರ್ಥನೆಗಳು ಉತ್ತಮಾವಾಗಿರುತ್ತೆ, ಹೀಗೆ ನಾವು ಪ್ರಾರ್ಥನೆ ಎಂಬ ಆಯುಧವನ್ನು ಉಪಯೋಗಿಸಿಕೊಂಡು ಸ್ವರ್ಗರಾಜ್ಯವನ್ನು ಪಡೆದುಕೊಳ್ಳುವಂತಹ ಪ್ರಯತ್ನ ಪಡೋಣ’ ಎಂದು ಹೇಳಿದರು.
ಸಂಭ್ರಮದ ಬಲಿದಾನದಲ್ಲಿ ಕುಂದಾಪುರ ವಲಯ ಪ್ರಧಾನರಾದ ಅ|ವಂ| ಸ್ಟ್ಯಾನಿ ತಾವ್ರೊ ಬಲಿದಾನದಲ್ಲಿ ಭಾಗಿಯಾಗಿ ಶುಭ ಕೋರಿದರು. ಕೊಟೇಶ್ವರ ಚರ್ಚಿನ ಧರ್ಮಗುರು ವಂ|ಸಿರಿಲ್ ಎ. ಮಿನೇಜೆಸ್ ಬಲಿದಾನದಲ್ಲಿ ಭಾಗಿಯಾಗಿ ಧನ್ಯವಾದಗಳನ್ನು ಸಮರ್ಪಿಸಿದರು.
ಕಟ್ಕರೆ ಬಾಲ ಯೇಸುವಿನ ಆಶ್ರಮದ ಮುಖ್ಯಸ್ಥರಾದ ವಂ|ಧರ್ಮಗುರು ಆಲ್ವಿನ್ ಸಿಕ್ವೇರಾ, ಬಲಿದಾನಕ್ಕಾಗಿ ಅವರೆ ರಚಿಸಿದ ಭಕ್ತಿಗೀತೆಗಳಿಗೆ ಗಾಯನ ಪಂಗಡಕ್ಕೆ ನಿರ್ದೇಶನ ನೀಡಿದರು. ವಂ|ನಿಶಾಲ್ ಮೊನಿಸ್ ಸಂಗೀತ ನೀಡಿದರು. ಕಾರ್ಮೆಲ್ ರಾಣಿಪುರ ಮಠದ ಮುಖ್ಯಸ್ಥರಾದ ವಂ|ಆರ್ಚಿಬಾಲ್ಡ್ ಗೊನ್ಸಾಲ್ವಿಸ್, ಕೆರೆಕಟ್ಟೆ ಸಂತ ಅಂತೋನಿ ಪುಣ್ಯಕ್ಷೇತ್ರದ ರೆಕ್ಟರ್ ಸುನೀಲ್ ವೇಗಸ್, ಕಟ್ಕರೆ ಬಾಲಾ ಯೇಸುವಿ ಮಠದ ಕಾರ್ಮೆಲ್ ಮೇಳದ ಧರ್ಮಗುರುಗಳಾದ ವಂ| ದೀಪ್ ಫೆರ್ನಾಂಡಿಸ್, ವಂ|ಫ್ರಾನ್ಸಿಸ್ ಮೊಂತೇರೊ, ಕುಂದಾಪುರ ವಲಯದ ಧರ್ಮಗುರುಗಳಾದ ವಂ|ಆಲ್ಬರ್ಟ್ ಕ್ರಾಸ್ತಾ, ಕುಂದಾಪುರ ವಲಯದ ವಂ|ಫ್ರಾನ್ಸಿಸ್ ಕರ್ನೇಲಿಯೊ, ವಂ|ಎಡ್ವಿನ್ ಡಿಸೋಜಾ, ವಂ|ಆಲ್ಫೊನ್ಸ್ ಡಿಲೀಮಾ, ವಂ|ಚಾಲ್ರ್ಸ್ ಲುವಿಸ್ ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ, ವಂ|ತೋಮಸ್ ಡಿಸೋಜಾ ಮತ್ತು ಧರ್ಮಭಗಿನಿಯರು ಹಾಗೂ ಚಚಿನ ಭಕ್ತಾಧಿಗಳು ಬಲಿದಾನದಲ್ಲಿ ಭಾಗಿಯಾಗಿದ್ದರು.