ನೈಸರ್ಗಿಕ ಕ್ರಿಸ್ಮಸ್ ನಕ್ಷತ್ರ ತಯಾರಿಕೆಗೆ ದಶಮಾನೋತ್ಸವ ಸಂಭ್ರಮ- ಈ ಬಾರಿ 10 ಬಗೆ ವಸ್ತುಗಳಿಂದ ತಯಾರಾದ ವಿಶಿಷ್ಟ ನಕ್ಷತ್ರ

ಮೂಡುಬಿದಿರೆ : ಸಾಸಿವೆ, ಕೊತ್ತಂಬರಿ, ಹುರುಳಿ, ರಾಗಿ ಸೇರಿದಂತೆ ಹಸಿ ಮತ್ತು ಒಣ ಅಡಿಕೆಯಿಂದ ವಿಶಿಷ್ಟ ತಿರುಗುವ ಕ್ರಿಸ್ಮಸ್ ನಕ್ಷತ್ರವನ್ನು ಶಿರ್ತಾಡಿಯ ಲೈಫ್ ಸೇವಾ ಸಂಸ್ಥೆಯವರು ನಿರ್ಮಿಸಿದ್ದಾರೆ.
ಈ ನಕ್ಷತ್ರವನ್ನು ಶಿರ್ತಾಡಿಯ ಮೌಂಟ್ ಕಾರ್ಮೆಲ್ ಚರ್ಚ್ ನ ಆವರಣದಲ್ಲಿ ಕ್ರಿಸ್ಮಸ್ ಪ್ರಯುಕ್ತ ಡಿ.23 ರಿಂದ ಜ.5 ರವರೆಗೆ ಪ್ರದರ್ಶನಕ್ಕೆ ಇರಿಸಲಾಗುತ್ತದೆ.
ಈ ನಕ್ಷತ್ರವು 120 ಕೆಜಿ ತೂಕ, 12 ಅಡಿ ಎತ್ತರ, 11 ಅಡಿ ಅಗಲವಿದ್ದು, ನಕ್ಷತ್ರದ ಮಧ್ಯಭಾಗದಲ್ಲಿ ಏಸುಕ್ರಿಸ್ತನ ಹುಟ್ಟನ್ನು ‌ಬಿಂಬಿಸುವ ಬೈಹುಲ್ಲಿನ ಮೇಲ್ಛಾವಣಿ ಹೊಂದಿರುವ ಆಕರ್ಷಕ ಗೋದಳಿಯನ್ನು ಅಳವಡಿಸಲಾಗಿದೆ.
ಈ ನಕ್ಷತ್ರವು ಚಲಿಸುವ ಮಾದರಿಯಲ್ಲಿ ರಚಿಸಲಾಗಿದ್ದು, ಇದಕ್ಕಾಗಿ 1 ಹೆಚ್ ಪಿ ಮೋಟಾರ್ ಹಾಗೂ ವಾಹನದ ಹೌಸಿಂಗ್ ಅನ್ನು ಅಳವಡಿಸಲಾಗಿದೆ.
ನಿರಂತರ 3 ವಾರಗಳ ಕಾಲ ಸಂಸ್ಥೆಯ ಮುಖ್ಯಸ್ಥ ಪ್ರಸನ್ನ ಜೋಯೆಲ್ ಸಿಕ್ವೇರಾ ಈ ನಕ್ಷತ್ರವನ್ನು ತಯಾರಿಸುವಲ್ಲಿ ‌ಶ್ರಮಿಸಿದ್ದಾರೆ. ಇವರ ಜೊತೆಗೆ ಸಂಸ್ಥೆಯ ಸದಸ್ಯರಾದ ನವೀನ್ ಶೆಟ್ಟಿ ಶಿರ್ತಾಡಿ, ಸಿಪ್ರಿಯಾನ್ ಡಿಸೋಜಾ ಶಿರ್ತಾಡಿ, ರಮೇಶ್ ಶೆಟ್ಟಿ ಮಂಗಳೂರು, ನಾಗರಾಜ್ ಅಲಂಗಾರು ಸಹಕರಿಸಿದ್ದಾರೆ.

ವಿಶೇಷತೆ :

ಸಂಸ್ಥೆಯು ಕಳೆದ 10 ವರ್ಷಗಳಿಂದ ಬೃಹತ್ ಗಾತ್ರದ ನಕ್ಷತ್ರ ತಯಾರಿಕೆಯಲ್ಲಿ ತೊಡಗಿಕೊಂಡಿದ್ದು, ವರ್ಷಂಪ್ರತಿ ವಿಶಿಷ್ಟ ಬಗೆಯ ವಸ್ತುಗಳನ್ನು ಬಳಸಿ‌ ನಕ್ಷತ್ರ ತಯಾರಿಸುತ್ತಿದೆ.
ಈ ಬಾರಿಯ ನಕ್ಷತ್ರಕ್ಕೆ 10 ವಿವಿಧ ಬಗೆಯ ವಸ್ತುಗಳನ್ನು ‌ಬಳಸಲಾಗಿದೆ.
1 ಕೆಜಿ ಸಾಸಿವೆ, 1 ಕೆಜಿ ಕೊತ್ತಂಬರಿ, 1 ಕೆಜಿ‌ ಹುರುಳಿ, 1 ಕೆಜಿ ರಾಗಿ, 2 ಕೆಜಿ ನೆಲಗಡಲೆ, 20 ಕೆಜಿ ಹಸಿ ಅಡಿಕೆ, 2 ಕೆಜಿ ಒಣ ಅಡಿಕೆ, ಮೋಟಾರ್, ವಾಹನದ ಹೌಸಿಂಗ್, ಮರದ ತುಂಡುಗಳನ್ನು ‌ಬಳಸಿ‌ ನಿರ್ಮಿಸಿರುವ ಈ ನಕ್ಷತ್ರವು ವಿದ್ಯುತ್ ಚಾಲಿತವಾಗಿ ತಿರುಗುತ್ತ, ದೀಪಗಳಿಂದ ಅಲಂಕೃತಗೊಳಿಸಿ ಆಕರ್ಷಣೀಯವೆನಿಸಿದೆ.

ಸೌಹಾರ್ದತೆಯ ಪಾಠ

ಕೋಮು ಸೌಹಾರ್ದತೆಯ ಮೂಲ ಉದ್ದೇಶದಿಂದ ಈ ನಕ್ಷತ್ರವನ್ನು ಸರ್ವಧರ್ಮೀಯರ ಸಹಕಾರದಿಂದ ‌ನಿರ್ಮಿಸಲಾಗಿದೆ. ಪರಸ್ಪರ ಶಾಂತಿ, ನೆಮ್ಮದಿ ‌ಅಗತ್ಯವನ್ನು ಇದು ಸಾರಿ ಹೇಳುತ್ತದೆ.

ಪ್ರಸನ್ನ ಜೋಯೆಲ್ ಸಿಕ್ವೇರಾ, ಲೈಫ್ ಸೇವಾ ಸಂಸ್ಥೆ.

ವಿಶೇಷತೆ : ಸಂಸ್ಥೆಯು ಕಳೆದ 10 ವರ್ಷಗಳಿಂದ ಬೃಹತ್ ಗಾತ್ರದ ನಕ್ಷತ್ರ ತಯಾರಿಕೆಯಲ್ಲಿ ತೊಡಗಿಕೊಂಡಿದ್ದು, ವರ್ಷಂಪ್ರತಿ ವಿಶಿಷ್ಟ ಬಗೆಯ ವಸ್ತುಗಳನ್ನು ಬಳಸಿ‌ ನಕ್ಷತ್ರ ತಯಾರಿಸುತ್ತಿದೆ.
ಈ ಬಾರಿಯ ನಕ್ಷತ್ರಕ್ಕೆ 10 ವಿವಿಧ ಬಗೆಯ ವಸ್ತುಗಳನ್ನು ‌ಬಳಸಲಾಗಿದೆ.
1 ಕೆಜಿ ಸಾಸಿವೆ, 1 ಕೆಜಿ ಕೊತ್ತಂಬರಿ, 1 ಕೆಜಿ‌ ಹುರುಳಿ, 1 ಕೆಜಿ ರಾಗಿ, 2 ಕೆಜಿ ನೆಲಗಡಲೆ, 20 ಕೆಜಿ ಹಸಿ ಅಡಿಕೆ, 2 ಕೆಜಿ ಒಣ ಅಡಿಕೆ, ಮೋಟಾರ್, ವಾಹನದ ಹೌಸಿಂಗ್, ಮರದ ತುಂಡುಗಳನ್ನು ‌ಬಳಸಿ‌ ನಿರ್ಮಿಸಿರುವ ಈ ನಕ್ಷತ್ರವು ವಿದ್ಯುತ್ ಚಾಲಿತವಾಗಿ ತಿರುಗುತ್ತ, ದೀಪಗಳಿಂದ ಅಲಂಕೃತಗೊಳಿಸಿ ಆಕರ್ಷಣೀಯವೆನಿಸಿ
ಸೌಹಾರಕೋಮು ಸೌಹಾರ್ದತೆಯ ಮೂಲ ಉದ್ದೇಶದಿಂದ ಈ ನಕ್ಷತ್ರವನ್ನು ಸರ್ವಧರ್ಮೀಯರ ಸಹಕಾರದಿಂದ ‌ನಿರ್ಮಿಸಲಾಗಿದೆ. ಪರಸ್ಪರ ಶಾಂತಿ, ನೆಮ್ಮದಿ ‌ಅಗತ್ಯವನ್ನು ಇದು ಸಾರಿ ಹೇಳುತ್ತದೆ.

Christmas at St Joseph Church, Jeppu

Christmas brings cheer and love and parishioners of St Joseph Church celebrated it with the same religious gaiety, fervor, and enthusiasm spreading the message of love and joy among the young and old! The program began at 6:30 pm with a prayer song followed by an impressive array of melodious songs, Christmas Tableau in Tulu language, thematic skits and rhythmic dance performances by the vibrant and enthusiastic ward members who added gaiety by vibrantly dressing for the celebration.There was an add-on surprises of auction of ‘kuswar’, Housie, food stalls etc. The audience was completely spellbound with the Christmas gratification. The program was specially organized keeping in mind its sanctity and relevance. The parish priest Fr Maxim D’Souza expressed his sentiments of gratitude to all those who were responsible for organizing this beautiful programme.

ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ಕ್ರಿಸ್ಮಸ್

ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ರೆ. ಫಾ. ವಿನ್ಸೆಂಟ್ ಕುವೆಲ್ಲೋ, ರೆ.ಫಾ. ರಾಯಲ್ ನಜ್ರೆತ್, ರೆ.ಫಾ. ಸಿರಿಲ್ ಲೋಬೋ, ರೆ.ಫಾ ಕಿರಣ್ ನಜ್ರೆತ್ ರವರ ನೇತ್ರತ್ವದಲ್ಲಿ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು.

ಕುಂದಾಪುರ ಕ್ರಿಸ್ಮಸ್ ಆಚರಣೆ – ನಮ್ಮಲ್ಲಿ ಮನುಷ್ಯತ್ವ ದೂರವಾಗಿದೆ, ಅದಕ್ಕಾಗಿ ದೇವ ಪುತ್ರನೇ ಮುಷ್ಯನಾಗಿ ಹುಟ್ಟಿ ಬಂದಿದ್ದಾನೆ : ಫಾ|ನೆಲ್ಸನ್ ಲೋಬೊ


ಕುಂದಾಪುರ, ಡಿ.25: 452 ವರ್ಷದ ಇತಿಹಾಸವುಳ್ಳ ಕೆನರಾದಲ್ಲೆ ಅತ್ಯಂತ ಪುರಾತನ ಚರ್ಚಗಳಲ್ಲಿ ಎರಡನೇ ಚರ್ಚ್ ಅದ ಹೋಲಿ ರೋಜರಿ ಚರ್ಚಿನಲ್ಲಿ ಕ್ರಿಸ್ಮಸ ಹಬ್ಬದ ಆಚರಣೆಯನ್ನು ಸಡಗರ ಭಕ್ತಿಭಾವದಿಂದ ಆಚರಿಸಲಾಯಿತು. “ಪ್ರಾಣಿಗಳಲ್ಲಿಯೂ ಇದಂತಹ ಮಾನವೀಯ ಗುಣಗಳಿದ್ದು, ಅವರು ಮಮತೆ, ಪ್ರೀತಿ, ದಯೆ, ಸಹಾಯ ನೀಡುತ್ತವೆ, ಆದರೆ ಮಾನವರಾದ ನಮ್ಮಲ್ಲಿ ಇಂತಹ ಮನುಷ್ಯತ್ವ ದೂರವಾಗಿದೆ, ಅದಕ್ಕಾಗಿಯೇ ದೇವ ಪುತ್ರನು ಮುಷ್ಯನಾಗಿ ಹುಟ್ಟಿದ್ದಾನೆ” ಎಂದು ಬ್ರಹ್ಮಾವರ ಪವಿತ್ರ ಕುಟುಂಬ ಇಗರ್ಜಿಯ ಧರ್ಮಗುರು ವಂ|ನೆಲ್ಸನ್ ಲೋಬೊ ಹೇಳಿದರು.
ಅವರು 452 ವರ್ಷದ ಇತಿಹಾಸವುಳ್ಳ ಕೆನರಾದಲ್ಲೆ ಅತ್ಯಂತ ಪ್ರಾಚೀನ ಇಗರ್ಜಿಗಳಲ್ಲಿ ಎರಡನೇ ಇಗರ್ಜಿಯಾದ ಹೋಲಿ ರೋಜರಿ ಇಗರ್ಜಿಯಲ್ಲಿ ಕ್ರಿಸ್ಮಸ ಹಬ್ಬದ ಆಚರಣೆಯನ್ನು ಸಡಗರ ಭಕ್ತಿಭಾವದ ಆಚರಣೆಯ ವೇಳೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತಮ್ಮ ನೇತ್ರತ್ವದಲ್ಲಿ ಪವಿತ್ರ ಬಲಿದಾನದ ಅರ್ಪಿಸಿ ಸಂದೇಶ ನೀಡಿದರು.
“ಕ್ರಿಸ್ಮಸ್ ಅಂದರೆ ಪ್ರೀತಿ ಮತ್ತು ತ್ಯಾಗ, ಅದಕ್ಕಾಗಿಯೆ ದೇವರ ಪುತ್ರ ಯೇಸು ಮನುಷ್ಯನ ರೂಪದಲ್ಲಿ ಭೂಮಿಯಲ್ಲಿ ಜನಿಸಿ ನಮಗೆ ಪ್ರೀತಿ ಮತ್ತು ತ್ಯಾಗ ಬಲಿದಾನವನ್ನು ಅರ್ಪಿಸಲು ಬಂದವನು. ಯೇಸು ಕ್ರಿಸ್ತರ ಪ್ರೀತಿ ಮತ್ತು ತ್ಯಾಗ ಬಹಳ ಶ್ರೇಷ್ಟವಾದುದು. ದೇವರು ನಮಗಾಗಿ ಆತನ ಒಬ್ಬನೇ ಪುತ್ರನನ್ನು ನಮಗೆ ದಯಾ ಮಾಡಿಸಿದ ಗುಟ್ಟನ್ನು ಸಂಭ್ರಮಿಸುವುದೆ ಕ್ರಿಸ್ಮಸ್. ದೇವರು ನಮಗೆ ನೀಡಿದ ಶ್ರೇಷ್ಠ ಕಾಣಿಕೆಯಲ್ಲಿ, ನಮಗೆ ಯೇಸುವನ್ನು ನೀಡಿದ ಕಾಣಿಕೆ ಅತೀ ಶ್ರೇಷ್ಠವಾದ ಕಾಣಿಕೆಯಾಗಿದೆ. ನಾವು ದೇವರನ್ನು ಮರೆತರೂ, ದೇವರು ನಮ್ಮನ್ನು ಮರೆತಿಲ್ಲ, ಅದಕ್ಕಾಗಿ ಯೇಸುವಿನ ರೂಪದಲ್ಲಿ ಮಾನವರನ್ನು ಭೇಟಿ ಮಾಡಲು ಬಂದಿರುವನು. ದೇವರು ತನ್ನ ಪುತ್ರ ಯೇಸುವಿನ ಮೂಲಕ ನಮ್ಮ ಜೊತೆ ಮಾತನಾಡಲು ಬಂದಿದ್ದಾನೆ, ಭೂಮಿಗೆ ಬಂದ ಯೇಸು ಜೀವನಪೂರ್ತಿ ನಮಗಾಗಿ ಮುಡಿಪಿಟ್ಟು ತನ್ನ ತಂದೆ ದೇವರ ಆಣತಿಯಂತೆ ಜೀವಿಸಿ, ನಮ್ಮ ಪಾಪಕ್ರತ್ಯಗಳಿಗಾಗಿ ನಮಗೆ ವಿಮೋಚನೆ ನೀಡಲು, ಶಿಲುಭೆಯ ಮೇಲೆ ಪ್ರಾಣ ತ್ಯಾಗ ಮಾಡಿದನು. ಹೀಗೆ ದೇವರ ಯೋಜನೆಯಂತೆ ನಾವು ಪಾಪಕ್ರತ್ಯಗಳಿಂದ ದೂರವಿದ್ದು, ಸ್ವರ್ಗರಾಜ್ಯದಲ್ಲಿ ಪ್ರವೇಶ ಪಡೆಯಲು, ನಾವು ಒಳ್ಳೆಯ ಮನುಷ್ಯರಾಗಲು ಪ್ರಯತ್ನಿಸೋಣ” ಎಂದು ಸಂದೇಶ ನೀಡಿದರು
ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ| ಸ್ಟ್ಯಾನಿ ತಾವ್ರೊ, ಕ್ರಿಸ್ಮಸ್ ಹಬ್ಬದ ಬಲಿಪೂಜೆಯಲ್ಲಿ ಭಾಗಿಯಾಗಿ ಹಬ್ಬದ ಶುಭಾಶಯಗಳನ್ನು ಕೋರಿದರು. ಸಹಾಯಕ ಧರ್ಮಗುರು ವಂ|ಸ್ಶ್ವಿನ್ ಆರಾನ್ಹಾ ಬಲಿದಾನದಲ್ಲಿ ಭಾಗಿಯಾಗಿದ್ದರು. ಬಲಿದಾನದ ಬಳಿಕ ವಾಳೆವಾರು ಭಾಗ್ಯಶಾಲಿ ಕುಟುಂಬಗಳಿಗೆ, ಹೌಸಿ ಆಟದ, ಮತ್ತು ಗೋದಲಿ ಗ್ರೀಟಿಂಗ್ಸ್ ಕಾರ್ಡ್ ರಚಿಸುವ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಐ.ಸಿ.ವೈ.ಎಮ್. ಸಂಘಟನೆಯಿಂದ ಬಹುಮಾನಗಳನ್ನು ವಿತರಿಸಲಾಯಿತು.

ಶ್ರೀನಿವಾಸಪುರ:ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಕೆ.ಎಲ್.ಮಂಜುನಾಥ್

ಶ್ರೀನಿವಾಸಪುರ: ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಕೆ.ಎಲ್.ಮಂಜುನಾಥ್ ಹೇಳಿದರು.
ತಾಲ್ಲೂಕಿನ ಪನಸಮಾಕನಹಳ್ಳಿಯಲ್ಲಿ ಅನುಗ್ರಹ ರೈತ ಉತ್ಪಾದಕರ ಕಂಪನಿ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ರೈತ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಚೌದರಿ ಚರಣ್ ಸಿಂಗ್ ಅವರ ಜನ್ಮದಿನಾಚರಣೆಯನ್ನು ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತಿದೆ ಎಂದು ಹೇಳಿದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಶ್ರೀರಾಮರೆಡ್ಡಿ ಮಾತನಾಡಿ, ರೈತರ ಸಮಸ್ಯೆಗಳ ಬಗ್ಗೆ ಸರ್ಕಾರ ದಿವ್ಯ ನಿರ್ಲಕ್ಷ್ಯ ತಳೆದಿದೆ. ಜನ ಪ್ರತಿನಿಧಿಗಳು ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಓಟಿಗಾಗಿ ಗ್ರಾಮ ಸುತ್ತುವುದನ್ನು ಹೊರತುಪಡಿಸಿದರೆ ಮತ್ತೆ ಆ ಕಡೆ ಸುಳಿಯುವುದಿಲ್ಲ ಎಂದು ಆಪಾದಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉಪಾಧ್ಯಕ್ಷ ವೀರಭದ್ರಸ್ವಾಮಿ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್ ಮಾತನಾಡಿದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸನ್ ಮಾತನಾಡಿ, ತೋಟಗಾರಿಕಾ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಿದರು. ಮಾವಿನ ಬೆಳೆ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳುವಳಿಕೆ ನೀಡಿದರು.
ರೈತ ಮುಖಂಡ ಪ್ರಭಾಕರಗೌಡ, ತೋಟಗಾರಕಾ ಇಲಾಖೆ ಅಧಿಕಾರಿಗಳಾದ ಸುರೇಶ್, ಹರೀಶ್, ಪ್ರಶಾಂತ್, ಈಶ್ವರ್, ಹುಮಾಯೂನ್, ಮಂಜುಳ ಇದ್ದರು

ಶ್ರೀನಿವಾಸಪುರ: ಪಟ್ಟಣದ ಇಂದ್ರಾ ಭವನ್ ವೃತ್ತದ ಸಮೀಪ ಅನಧಿಕೃತ ಅಂಗಡಿ – ಚರ್ಚಿಸುವುದರ ಮೂಲಕ ಬಗೆಹರಿಸಲಾಯಿತು

ಶ್ರೀನಿವಾಸಪುರ: ಪಟ್ಟಣದ ಇಂದ್ರಾ ಭವನ್ ವೃತ್ತದ ಸಮೀಪ ಗುರುವಾರ ಅನಧಿಕೃತವಾಗಿ ಇಡಲಾಗಿದ್ದ ಪೆಟ್ಟಿಗೆ ಅಂಗಡಿ ವಿವಾದವನ್ನು, ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ಅವರೊಂದಿಗೆ ಚರ್ಚಿಸುವುದರ ಮೂಲಕ ಬಗೆಹರಿಸಲಾಯಿತು.
ಪಟ್ಟಣದ ಅಮರಾವತಿ ಎಂಬುವವರಿಗೆ ಬಸ್ ನಿಲ್ದಾಣದ ಪಾಸಲೆಯಲ್ಲಿ ಅಂಗಡಿ ತೆರೆಯು ಬಗ್ಗೆ ಪುರಸಭೆ ಪ್ರಸ್ತಾವನೆಯಲ್ಲಿ ಒಪ್ಪಿಗೆ ಸೂಚಿಸಲಾಗಿತ್ತು ಎಂದು ಹೇಳಲಾಗಿದ್ದು, ಅವರ ಕಡೆಯವರು ಪುರಸಭೆ ವಾಣಿಜ್ಯ ಮಳಿಗೆ ಮುಂಭಾಗದಲ್ಲಿ ಪೆಟ್ಟಿಗೆ ಅಂಗಡಿ ತಂದಿಟ್ಟಿದ್ದರು. ಆ ಸ್ಥಳದಲ್ಲಿ ಯೋಗಿ ನಾರೇಯಣ ಯತೀಂದ್ರರ ಪ್ರತಿಮೆ ಸ್ಥಾಪಿಸಲು ಹಾಗೂ ವೃತ್ತಕ್ಕೆ ನಾರೇಯಣ ಯಂತ್ರೀಂದ್ರರ ಹೆಸರಿಡಲು ಪುರಸಭೆ ಸರ್ವ ಸದಸ್ಯರ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗೆ ಕಳುಹಿಸಲು ತೀರ್ಮಾನಿಸಲಾಗಿದೆ.
ಹಾಗಾಗಿ ಅಲ್ಲಿ ಅಂಗಡಿ ತೆರೆಯಲು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪುರಸಭೆ ಸಿಬ್ಬಂದಿ ಪೆಟ್ಟಿಗೆ ಅಂಗಡಿಯನ್ನು ತೆರವುಗೊಳಿಸಿ ಪುರಸಭೆ ಕಚೇರಿ ಆವರಣದಲ್ಲಿ ಇಟ್ಟಿದ್ದರು. ಆದರೆ ಕೆಲವರು ಪುರಸಭೆ ಕ್ರಮ ವಿರೋಧಿಸಿ, ಪೆಟ್ಟಿಗೆ ಅಂಗಡಿಯನ್ನು ಮತ್ತೆ ಪುರಸಭೆ ಆವರಣದಿಂದ ಈ ಹಿಂದೆ ಇಡಲಾಗಿದ್ದ ಸ್ಥಳಕ್ಕೆ ಸ್ಥಳಾಂತರಿಸಿರು.
ಅದರಿಂದ ಸಿಟ್ಟುಗೊಂಡ ಪುರಸಭಾ ಸದಸ್ಯ ಭಾಸ್ಕರ್ ಮುಖ್ಯಾಧಿಕಾರಿಯನ್ನು ಭೇಟಿಯಾಗಿ, ಆ ಸ್ಥಳದಲ್ಲಿ ಈಗಾಗಲೆ ಪುರಸಭೆ ಕೈಗೊಂಡಿರುವ ನಿರ್ಧಾರದಂತೆ ಯೋಗಿ ನಾರೇಯಣ ಯಂತ್ರೀಂದ್ರರ ಪುತ್ಥಳಿ ಸ್ಥಾಪನೆಗೆ ಅವಕಾಶ ನೀಡಬೇಕು ಆಗ್ರಹಿಸಿದರು. ಕೆಲವು ಜೆಡಿಎಸ್ ಮುಖಂಡರು ಮುಖ್ಯಾಧಿಕಾರಿ ಕಚೇರಿ ಪ್ರವೇಶಿಸಿ ಅಂಗಡಿ ಇಡಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು.
ಆಗ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಜೆ.ಇ.ನಾರಾಯಣಸ್ವಾಮಿ ಮಧ್ಯಪ್ರವೇಶಿಸಿ, ಕಾನೂನು ಮೀರದಂತೆ ನಡೆದುಕೊಳ್ಳಲು ಸೂಚಿಸಿದರು. ಆಗ ನಾರೇಯಣ ಯತೀಂದ್ರರ ಪುತ್ಥಳಿ ಸ್ಥಾಪನೆಗೆ ನಮ್ಮ ವಿರೋಧ ಇಲ್ಲ. ಆದರೆ ಅಂಗಡಿ ಇಡಲು ಸ್ಥಳ ನೀಡಬೇಕು ಎಂದು ಜೆಡಿಎಸ್ ಮುಖಂಡರು ತಿಳಿಸಿದರು. ಆಗ ಪರಿಸ್ಥಿತಿ ತಿಳಿಯಾಯಿತು. ಅಂಗಡಿ ತೆರವುಗೊಳಿಸಲಾಯಿತು.
ಪುರಸಭಾ ಸದಸ್ಯ ಭಾಸ್ಕರ್, ಮುಖಂಡರಾದ ರವಿ, ಜನನ್ನಾಥ್ ಚರ್ಚೆಯಲ್ಲಿ ಭಾಗವಹಿಸಿದ್ದರು.

ಸಂತ ಮೇರಿ ಪದವಿ ಪೂರ್ವ ಕಾಲೇಜಿನಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ

ಕುಂದಾಪುರ, ಡಿ.24: ಸ್ಥಳೀಯ ಸಂತ ಮೇರಿ ಪದವಿ ಪೂರ್ವ ಕಾಲೇಜಿನಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮವು ಡಿ.23 ರಂದು ಕಾಲೇಜಿನ ಸಭಾಭವನದಲ್ಲಿ ನಡೆಯಿತು.

   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಜಂಟಿ ಕಾರ್ಯದರ್ಶಿಯಾಗಿರುವ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ವಹಿಸಿ “ಆಟ ಪಾಠ ಎರಡು ಸಮಾನವಾಗಿವೆ, ಮನುಷ್ಯನಿಗೆ ಎರಡರವು ಅಗತ್ಯವಿದೆ. ಎರಡರಲ್ಲಿಯೂ ಸಾಧನೆ ಮಾಡಿ ಇವತ್ತು ನೀವು ಬಹುಮಾನಗಳನ್ನು ಪಡೆದುಕೊಂಡಿದ್ದಕ್ಕೆ ನಿಮ್ಮಲ್ಲಿ ಬಹಳ ಸಂತೋಷ ಉಂಟಾಗಿದೆ, ನಾನು ಎಲ್ಲರನ್ನು ಅಬ್ಬಿನಂದಿಸುತ್ತೇನೆ. ಕಲಿಯಲು ಮನಸಿದ್ದರೆ ಹೇಗೂ ಕಲಿಯಬಹುದು. ಕೇರಳದಲ್ಲಿ ಕೂಲಿ ಮಾಡುತ್ತಿದ್ದ ಒರ್ವ ಬಡ ಹುಡುಗ ಒಂದು ಮೊಬಾಯ್ಲ್ ಖರೀದಿಸಿ, ಅದರ ಆತ ಮೂಲಕ ಕೆ.ಪಿ.ಎಸ್. ಪರೀಕ್ಷೆಯ ಪಾಠ ಕಲಿಯತೊಡಗಿದ,ಮೊಬಾಯ್ಲನಲ್ಲೆ ಆತ ಕಲಿತು, ಕೆಲವೇ ವರ್ಷಗಳಲ್ಲಿ ಕೆ.ಪಿ.ಎಸ್. ಪಾಸ್ ಮಾಡಿ ಈಗ ಕೇರಳದಲ್ಲಿ ಕೆ.ಪಿ.ಎಸ್. ಅಧಿಕಾರಿಯಾಗಿದ್ದಾನೆ. ಆತ ಮೊಬಾಯ್ಲನ್ನು ಉತ್ತಮವಾಗಿ ಬಳಸಿಕೊಂಡು ತನ್ನ ಭವಿಸ್ಯವನ್ನು ಉಜ್ವಲ ಗೊಳಿಸಿಕೊಂಡ. ಹಾಗೇಯೆ ಇವತ್ತಿನ ಮುಖ್ಯ ಅತಿಥಿ ರೈನಿಶ್ ಡಿಆಲ್ಮೇಡಾ ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿ, ಉತ್ತಮ ಶಿಕ್ಷಣ ಪಡೆದು ಇವತ್ತು ಹಡಗಿನ ಸೆಕೆಂಡ್ ಎಂಜಿನಿಯರ್ ಆಗಿದ್ದಾನೆ, ಇವರಲ್ಲದೆ ಇನ್ನೂ ಹಲವು ಈ ಕಾಲೇಜಿನ ಹಳೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಉತ್ತಮ ಹುದ್ದೆಯಲ್ಲಿದ್ದಾರೆ, ಅವರನ್ನು ನೀವು ಅನುಸರಿಸಿ ಜೀವನದಲ್ಲಿ ಸಫಲತೆಯನ್ನು ಪಡೇಯಬೇಕು” ಸಂದೇಶ ನೀಡಿದರು.

   ಮುಖ್ಯಅತಿಥಿ ರೈನಿಶ್ ಡಿಆಲ್ಮೇಡಾ ಮಾತನಾಡಿ ಉತ್ತಮ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಕಾಲೇಜಿನ ಪರವಾಗಿ ರೈನಿಶ್ ಮತ್ತು ರೀಮಾ ಡಿಆಲ್ಮೇಡಾ ದಂಪತಿಯನ್ನು ಸನ್ಮಾನಿಸಲಾಯಿತು. ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿ, ಶುಭಾಶಯ ಕೋರಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

   ಅತಿಥಿಗಳು ಬಹುಮಾನಗಳನ್ನು ವಿತರಿಸಿದರು.ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು. ಶಾಲಾ ನಾಯಕ ಪ್ರಿತೇಶ್ ಕರ್ವಾಲ್ಲೊ, ಕಾಲೇಜು ಕಾರ್ಯದರ್ಶಿ ಪ್ರೀತಿಕಾ ಉಪಸ್ಥಿರಿದ್ದು, ಪ್ರಾಧ್ಯಪಕರಾದ ನಾಗರಾಜ ಶೆಟ್ಟಿ, ಪ್ರಪ್ಪುಲ್ಲಾ, ಸುಶ್ಮಾ, ಪಲ್ಲವಿ, ಶಿಲ್ಪಾಶ್ರೀ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಾಂಶುಪಾಲೆ ರೆಶ್ಮಾ ಫೆರ್ನಾಂಡಿಸ್ ವರದಿ ವಾಚಿಸಿದರು. ಉಪಪ್ರಾಂಸುಪಾಲೆ ಮಂಜುಳಾ ನಾಯರ್ ವಂದಿಸಿದರು. ವಿದ್ಯಾರ್ಥಿನಿ ವೆನೀಶಾ ಡಿಸೋಜಾ ನಿರೂಪಿಸಿದರು.

ಕುಂದಾಪುರ ಸಂತ ಜೋಸೆಫ್ ವಿದ್ಯಾರ್ಥಿ ನಿಲಯದ ಶಾಲಾ ಮಕ್ಕಳೊಂದಿಗೆ ಕ್ರಿಸ್ಮಸ್ ಕೂಟ

ಕುಂದಾಪುರ, ಡಿ.24: ಸ್ಥಳೀಯ ಸಂತ ಜೋಸೆಫ್ ವಸತಿ ಶಾಲಾ ಮಕ್ಕಳೊಂದಿಗೆ ಕ್ರಿಸ್ಮಸ್ ಸಂತೋಷ ಕೂಟ ದಾನಿಗಳಾದ ಸ್ಟ್ಯಾನ್ಲಿ ಚೆರೀಯನ್ ಮತ್ತು ಕುಂದಾಪುರದ ಐವನ್ ಆಲ್ಮೇಡ ಕುಟುಂಬದ ವತಿಯಿಂದ ಡಿಸೆಂಬರ್ 23 ರಂದು ಜೋಸೆಫ್ ವಸತಿ ಗ್ರಹದಲ್ಲಿ ನಡೆಯಿತು.

   ಮುಖ್ಯ ಅತಿಥಿಗಳಾಗಿದ್ದ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ “ಕ್ರಿಸ್ಮಸ್ ಸಮಯದಲ್ಲಿ ಇಡೀ ಜಗತ್ತು ಸಂತೋಷವನ್ನು ಆಚರಿಸುತ್ತದೆ, ಇವತ್ತು ನಾವುಗಳು ನಿಮ್ಮ ಜೊತೆ ಈ ಸಂತೋಷವನ್ನು ಹಂಚಿಕೊಳ್ಳಲಿಕ್ಕೆ ನಿಮ್ಮ ಜೊತೆ ಸೇರಿದ್ದೆವೆ. ಯೇಸು ಸ್ವಾಮಿ ನಮಗೆ ಪಾಪಗಳಿಂದ ವಿಮೋಚನೆ ಗೊಳಿಸಲು ಈ ಧರೆಗೆ ಬಂದರು, ಜಗತ್ತಿಗೆ ಶಾಂತಿಯ ಅಗತ್ಯವಿದೆ, ಸ್ವಾಮಿ ಯೇಸು ಜಗತ್ತಿಗೆ ಶಾಂತಿ ದೂತನಾಗಿದ್ದಾನೆ, ಯೇಸುವಿಗೆ ಚಿಕ್ಕ ಮಕ್ಕಳೆಂದರೆ ಬಹಳ ಪ್ರೀತಿ, ಸ್ವರ್ಗರಾಜ್ಯವು ಚಿಕ್ಕ ಮಕ್ಕಳದು, ಏಕೆಂದರೆ, ಅವರಲ್ಲಿ ಮುಗ್ದತೆ ಇದೆ, ಪ್ರಮಾಣಿಕತೆ ಇದೆ, ನಿರ್ಮಲ ಮನಸ್ಸಿದೆ, ಕೊನೆಯವರೆಗೂ ಇದೇ ಮನ ಸ್ಥಿಯಲ್ಲಿ ನೀವು ಇರಬೇಕು” ಏಂದು ಅವರು ಕ್ರಿಸ್ಮಸ್ ಶುಭಾಶಯ ಕೋರಿದರು.

   ಕಲಿಕೆಯಲ್ಲಿ ಮುಂದಿದ್ದ ಹಲವು ವಿದ್ಯಾರ್ಥಿಗಳಿಗೆ ಐವನ್ ಆಲ್ಮೇಡಾರವರು ನಗದು ಬಹುಮಾನವನ್ನು ವಿತರಿಸಿದರು. ಮಕ್ಕಳಿಗಾಗಿ ಕಿರು ಆಟಗಳನ್ನು ನಡೆಸಲಾಯಿತು. ಮಕ್ಕಳು ವಿವಿಧ ನ್ರತ್ಯ ಹಾಡುಗಳ ಮೂಲಕ ರಂಜಿಸಿದರು. ವಿಲ್ಸನ್ ಆಲ್ಮೇಡಾ ಸಾಂತಾಕ್ಲಾಸ್ ರೂಪ ಧರಿಸಿ ಮಕ್ಕಳೊಂದಿಗೆ ನ್ರತ್ಯ ಮಾಡಿದರು.ಮಕ್ಕಳಿಗೆ ಕ್ರಿಸ್ಮಸ್ ಕೇಕ್ ಮತ್ತು ಉಟೋಪಚಾರದಿಂದ ಸಂತೋಷಪಡಿಸಲಾಯಿತು.

    ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಭೋಜನದ ಮೇಲೆ ಆಶಿರ್ವದಿಸಿದರು, ಅತಿಥಿಗಳಾಗಿ ಸಾಹಿತಿ ಬರ್ನಾಡ್ ಡಿಕೋಸ್ತಾ, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸಂಗೀತ ಮತ್ತು ಇತರ ಧರ್ಮಭಗಿನಿಯವರು. ದಾನಿ ಕಾರ್ಮಿಣ್ ಆಲ್ಮೇಡಾ, ಜಾನೆಟ್ ಆಲ್ಮೇಡಾ, ಕಿಯೋನಾ ಆಲ್ಮೇಡಾ ಉಪಸ್ಥಿತರಿದ್ದರು.

    ವಸತಿ ನಿಲಯದ ಮುಖ್ಯಸ್ಥೆ ಸಿಸ್ಟರ್ ಆಶಾ ಸ್ವಾಗತಿಸಿದರು. ವಿದ್ಯಾರ್ಥಿಗಳು ನಿರೂಪಿಸಿ ವಂದಿಸಿದರು.   

ರೋಟರಿ ಕ್ಲಬ್ ಕುಂದಾಪುರ ದಕ್ಷಿಣ,ರಮಾನಂದ ಕಾರಂತರ ಸಂಬಂಧಿಕರು ಹಾಗೂ ಸವಿತಾ ಫೌಂಡೇಶನ್, “ಆಯಿ” ಯಿಂದ ಬಿ.ಬಿ. ಹೆಗ್ಡೆ ಕಾಲೇಜಿಗೆ ಶುದ್ಧ ಕುಡಿಯುವ ನೀರಿನ ಘಟಕ

ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ ರೋ. ರಮಾನಂದ ಕಾರಂತರ ಸಂಬಂಧಿಕರು ಹಾಗೂ ಸವಿತಾ ಫೌಂಡೇಶನ್, “ಆಯಿ” ಹಂಗಳೂರು ಇವರ ದೇಣಿಗೆಯಿಂದ ಬೆಚ್ಚನೆಯ ಹಾಗೂ ತಣ್ಣನೆಯ ಶುದ್ಧ ಕುಡಿಯುವ ನೀರಿನ ಘಟಕವನ್ನು ಬಿ. ಬಿ. ಹೆಗ್ಡೆ ಕಾಲೇಜಿಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ದಕ್ಷಿಣದ ಅಧ್ಯಕ್ಷ ರೋ. ಸತ್ಯನಾರಾಯಣ ಪುರಾಣಿಕ, ಮಾಜಿ ಅಧ್ಯಕ್ಷ ರೋ. ಯು.ಎಸ್.ಶೆಣೈ, ರೋ.ರಮಾನಂದ ಕಾರಂತ, ಪ್ರಾಂಶುಪಾಲ ಪ್ರೊ. ಕೆ. ಉಮೇಶ ಶೆಟ್ಟಿ ಹಾಗೂ ಉಪ ಪ್ರಾಂಶುಪಾಲ ಕೋವಾಡಿ ಚೇತನ್ ಶೆಟ್ಟಿ ಉಪಸ್ಥಿತರಿದ್ದರು.