

ಉಡುಪಿ: ನಾವು ದಾನ ಮಾಡುವಾಗ, ಅದನ್ನು ಪ್ರಚಾರ ನಿರೀಕ್ಷಿಸದೆ, ಪ್ರೀತಿ ಭಾವದಿಂದ ಮಾಡಬೇಕು ಎಂದು ಉದ್ಯಮಿ ಹಾಗೂ ದಾನಿ ಜೊಸೇಫ್ ಮಿನೇಜಸ್ ಹೇಳಿದರು.
ಅವರು ಭಾನುವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ನಡೆದ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ವಾರ್ಷಿಕ ಮಹಾಸಭೆ, ಸಹಮಿಲನ ಮತ್ತು ದಿ. ಡೆನಿಸ್ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇವರು ದೇವಾಲಯಗಳ ಮೂರ್ತಿಗಳಲ್ಲಿದ್ದಾನೆಂದು ಅಲ್ಲ, ಅವನು ಜೀವಿಗಳಲ್ಲಿ ಇದ್ದಾನೆ—ಆಸ್ಪತ್ರೆಯ ರೋಗಿಗಳಲ್ಲಿ, ನೆರೆಹೊರೆಯ ಅಗತ್ಯವಿರುವ ಜನರಲ್ಲಿ. ಅವರನ್ನು ಸೇವಿಸುವುದು ದೇವರ ನಿಜವಾದ ಪ್ರೀತಿ. ಕಥೊಲಿಕ್ ಸಭಾ ಉಡುಪಿ ಪ್ರದೇಶ ಎಲ್ಲಾ ಸಮುದಾಯದವರಿಗೂ ನೀಡುತ್ತಿರುವ ವಿಶೇಷ ಸೇವೆ ಶ್ಲಾಘನೀಯವಾದುದು ಇದು ಮುಂದುವರೆಯಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ನೂತನ ಟೆಲಿಫೋನ್ ಡೈರಕ್ಟರಿಯನ್ನು ಆಧ್ಯಾತ್ಮಿಕ ನಿರ್ದೇಶಕ ಹಾಗೂ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಅನಾವರಣಗೊಳಿಸಿದರು.
ದಿ. ಡೆನಿಸ್ ಡಿಸಿಲ್ವಾ ಸ್ಮಾರಕ ಪ್ರಬಂಧ ಸ್ಪರ್ಧೆಯಯಲ್ಲಿ ವಿಜೇತರಾದ 21 ವಿದ್ಯಾರ್ಥಿಗಳಿಗೆ ಡಾಲಿಯಾ ರೋಡ್ರಿಗ್ಸ್ ಮತ್ತು ಡಯಾನಾ ಬ್ರಿಟ್ಟೋ ಬಹುಮಾನ ವಿತರಣೆ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ರೊನಾಲ್ಡ್ ಡಿ ಆಲ್ಮೇಡಾ ವಹಿಸಿ ಮಾತನಾಡಿ ಮುಂದಿನ ದಿನಗಳಲ್ಲಿ ಅಗತ್ಯವಿರುವವರಿಗೆ ರಕ್ತ ಬ್ಯಾಂಕ್ ಮತ್ತು ಗೋರಟ್ಟಿ ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯಗಳನ್ನು ಒದಗಿಸುವ ಕುರಿತು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ಇತ್ತೀಚೆಗೆ ರಾಜ್ಯ ಕಾರ್ಮಿಕ ಕಲ್ಯಾಣ ಫೆಡರೇಶನ್ ಅಧ್ಯಕ್ಷರಾಗಿ ನೇಮಕಗೊಂಡಿರುವ ಎಲ್ ರೋಯ್ ಕಿರಣ್ ಕ್ರಾಸ್ಟೋ ಮತ್ತು ಕುಂದಾಪುರ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿರುವ ವಿನೋದ್ ಕ್ರಾಸ್ಟೋ ಹಾಗೂ ಜೋಸೆಫ್ ಮಿನೇಜಸ್ ಅವರನ್ನು ಸನ್ಮಾನಿಸಲಾಯಿತು. ಉಪಸ್ಥಿತರಿದ್ದರು.
ಅತ್ಯುತ್ತಮ ಸೇವಾ ಪ್ರದರ್ಶನ, ಆಮ್ಚೊ ಸಂದೇಶ್ ಚಂದಾದಾರರು ಹಾಗೂ ಜಾಹೀರಾತು ಸಂಗ್ರಹದ ಘಟಕ ಮತ್ತು ವಲಯಗಳಿಗೆ ಪ್ರಶಸ್ತಿ ನೀಡಲಾಯಿತು
ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಸಂತೋಷ್ ಕರ್ನೆಲಿಯೋ, ಕೇಂದ್ರಿಯ ಕೋಶಾಧಿಕಾರಿ ಗ್ಯಾರಿಫಿಲ್ಡ್ ಉರ್ಬಾನ್, ನಿಯೋಜಿತ ಅಧ್ಯಕ್ಷರಾದ ಲೂವಿಸ್ ಡಿಸೋಜಾ ವಲಯ ಅಧ್ಯಕ್ಷರುಗಳು, ಮಾಜಿ ಅಧ್ಯಕ್ಷರುಗಳಾದ ವಲೇರಿಯನ್ ಫೆರ್ನಾಂಡಿಸ್, ವಾಲ್ಟರ್ ಸಿರಿಲ್ ಪಿಂಟೊ, ಆಲ್ಫೋನ್ಸ್ ಡಿಕೋಸ್ತಾ, ಆಲ್ವಿನ್ ಕ್ವಾಡ್ರಸ್ ಹಾಗೂ ಇತರರು ಉಪಸ್ಥಿತರಿದ್ದರು.
ಕೇಂದ್ರಿಯ ಕಾರ್ಯದರ್ಶಿ ಜೋಯೆಲ್ ಅಲ್ಮೇಡಾ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮವನ್ನು ಎರಿಕ್ ಸೋನ್ಸ್ ನಿರ್ವಹಿಸಿದರು.
ಸಹಮಿಲನಕ್ಕೂ ಮುನ್ನ ಅಧ್ಯಕ್ಷರಾದ ರೊನಾಲ್ಡ್ ಡಿ ಆಲ್ಮೇಡಾ ಅಧ್ಯಕಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ಜರುಗಿತು. ಸಭೆಯಲ್ಲಿ ವಾರ್ಷಿಕ ವರದಿ, ಲೆಕ್ಕಪತ್ರ ಮಂಡನೆ ಮಾಡಲಾಯಿತು.

































































































































































