

ಬೆಳ್ತಂಗಡಿ, ಗಂಡಿಬಾಗಿಲು; ದಿನಾಂಕ 09 .11 .2025 ರಂದು ಸೇಕ್ರೆಡ್ ಹಾರ್ಟ್ ಚರ್ಚ್,ತೊಡಂಬಿಲ, ಚರ್ಚ್ನ ಧರ್ಮಗುರುಗಳಾದ ಅತಿ ವಂದನೀಯ ಅಂತೋನಿ ಲೋಬೊರವರ ಮಾರ್ಗದರ್ಶನದಲ್ಲಿ, ಕಾರ್ಮಿಕ, ಪರಿಸರ ಮತ್ತು ಅಂತರ್ಧರ್ಮೀಯ ಆಯೋಗಗಳ ಸಂಯುಕ್ತ ಪೋಷಕತ್ವದಲ್ಲಿ, “ನಿರಾಶ್ರಿತರಲ್ಲಿ ಹೃದಯಗಳ ಬೆಸುಗೆ” ಎಂಬ ಪರಿಕಲ್ಪನೆಯಡಿ ಸಿಯೋನ್ ಆಶ್ರಮ ಟ್ರಸ್ಟ್ (ರಿ.), ಗಂಡಿಬಾಗಿನ ನಿರ್ಗತಿಕರಿಗಾಗಿ ಸುಮಾರು ರೂ. 2 ಲಕ್ಷ ಮೌಲ್ಯದ ನಿತ್ಯೋಪಯೋಗಿ ವಸ್ತುಗಳನ್ನು ಸಂಗ್ರಹಿಸಿ ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಡಾ. ಯು.ಸಿ. ಪೌಲೋಸ್ ರವರಿಗೆ ಹಸ್ತಾಂತರಿಸಲಾಯಿತು.
ಈ ಉತ್ತಮ ಸೇವಾ ಚಟುವಟಿಕೆಯನ್ನು ಶ್ಲಾಘಿಸಿದ ಡಾ. ಯು.ಸಿ. ಪೌಲೋಸ್ ರವರು ಮಾತನಾಡಿ, “ನಿರ್ಗತಿಕರಲ್ಲಿ ಹೃದಯಗಳ ಬಾಂಧವ್ಯತೆ ನಿರ್ಮಿಸಲು ಇದು ದಾನಭಾವನೆಯ ಸುಂದರ ನಿದರ್ಶನ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಚರ್ಚ್ನ ಪಾಲನಾ ಮಂಡಳಿ ಸದಸ್ಯರು, ವಿವಿಧ ಆಯೋಗ ಸದಸ್ಯರು ಹಾಗೂ ಚರ್ಚ್ನ ಭಕ್ತಜನರು ಉಪಸ್ಥಿತರಿದ್ದರು.


