

ಕುಂದಾಪುರ; ರೆಡ್ ಕ್ರಾಸನ ಸಂಸ್ಥಾಪಕ ಜೀನ್ ಹೆನ್ರಿ ಡ್ಯೂನಾಂಟ್ ಅವರ ಪುಣ್ಯತಿಥಿಯನ್ನು ಕುಂದಾಪುರ ಇಂಡಿಯನ್ ರೆಡ್ ಕ್ರಾಸನಲ್ಲಿ ಆಚರಿಸಲಾಯಿತು. ಕುಂದಾಪುರ ರೆಡ್ ಕ್ರಾಸನ ಸಭಾಪತಿ ಎಸ್ ಜಯಕರ ಶೆಟ್ಟಿಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂಸ್ಥಾಪಕ ಜೀನ್ ಹೆನ್ರಿ ಡ್ಯೂನಾಂಟ್ ಅಂದು ಸ್ಥಾಪಿಸಿದ ರೆಡ್ ಕ್ರಾಸ್ ಸಂಸ್ಥೆಯ ಯಶೋಗಾಥೆಯನ್ನು ವಿವರಸಿ, ಪ್ರಸ್ತುತ ಕುಂದಾಪುರ ತಾಲೂಕು ಘಟಕದ ಕಾರ್ಯ ಕ್ಷೇತ್ರದ ಪರಿಚಯ ಮಾಡಿಸಿದರು. ಸಮಾಜಕ್ಕೆ ಅಗತ್ಯವಿರುವ ಸಹಾಯ ಮಾಡುತ್ತಿರುವ ಕುಂದಾಪುರ ರೆಡ್ ಕ್ರಾಸ ಈ ಸಂದರ್ಭದಲ್ಲಿ ಮಳೆ, ಗಾಳಿ, ನೆರೆಗೆ ತೊಂದರೆಗೆ ಒಳಗಾದ ಮನೆಯವರಿಗೆ ಟಾರ್ಪಲಿನ್ ಹಾಗೂ ಅಡುಗೆ ಮನೆ ಪಾತ್ರೆಗಳ ಸೆಟ್ಟಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರೆಡ್ ಕ್ರಾಸನ ಖಜಾಂಜಿ ಶಿವರಾಮ ಶೆಟ್ಟಿ, ಕಾರ್ಯದರ್ಶಿ ಸತ್ಯನಾರಾಯಣ ಪುರಾಣಿಕ, ಆಡಳಿತ ಮಂಡಳಿಯ ಸದಸ್ಯರಾದ ಸೀತಾರಾಮ ಶೆಟ್ಟಿ, ಗಣೇಶ ಆಚಾರ್ಯ ಹಾಗೂ ರಕ್ತ ನಿಧಿ ಕೇಂದ್ರದ ಸಿಬ್ಬಂದಿ ವರ್ಗ ಭಾಗವಹಿಸಿದರು.


















































































































































