

ಕುಂದಾಪುರ,ನ.2. ಉಡುಪಿ ಧರ್ಮಪ್ರಾಂತ್ಯದ ಹಿರಿಯ ಇಗರ್ಜಿಯಾದ ಹೋಲಿ ರೋಜರಿ ಚರ್ಚಿನಲ್ಲಿ, ಮ್ರತಪಟ್ಟು ನಮ್ಮನ್ನು ಅಗಲಿದ “ಸಕಲ ಆತ್ಮಗಳ ಸ್ಮರಣೆಯ ದಿನ” ವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು. ಚರ್ಚಿನ ಧರ್ಮಗುರು ವಂ|ಮನೋಜ್ ಬ್ರಗಾಂಜಾ ಬಲಿದಾನ ಅರ್ಪಿಸಿ ‘ನಮ್ಮನ್ನು ಅಗಲಿದ ನಮ್ಮ ಹಿರಿಯವರಿಗೆ, ಕಿರಿಯರಿಗೆ ಸದ್ಗತಿ ದೊರೆಯಲು ನಮ್ಮ ಪ್ರಾರ್ಥನೇಯ ಅಗತ್ಯವಿದೆ, ಇಂದು ದುಖ್ಖದ ದಿನವು, ಸಂತೋಷದ ದಿನವೂ ಅಲ್ಲ ಇಂದು ಪ್ರೀತಿಯ ದಿನ, ಮ್ರತ ಪಡುವುದು ಅಂದರೆ, ದೇವರ ಸಾಮಿಪ್ಯಕ್ಕೆ ಹೋಗಲಿಕ್ಕಾಗಿ ಪ್ರಥಮ ಮೆಟ್ಟಲು ಆಗಿದೆ, ನಮ್ಮವರ ಹಿಂದೆ ನಮಗೂ ಹೊಗಲಿಕ್ಕೆ ಇದೆಯೆಂದು ತಿಳಿದು ಉತ್ತಮ ಬದುಕು ಜಿವಿಸೋಣ’ ಎಂದು ಸಂದೇಶ ನೀಡಿದರು. ನಂತರ ಸಮಾಧಿ ಭೂಮಿಗೆ ತೆರಳಿ ಅ| ವಂ|ಪಾವ್ಲ್ ರೇಗೊರವ ಮುಂದಾಳತ್ವದಲ್ಲಿ ಅಗಲಿದ ಎಲ್ಲಾ ಆತ್ಮಗಳಿಗೆ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಇರ್ವರೂ ಧರ್ಮಗುರುಗಳು ಪವಿತ್ರ ಜಲದಿಂದ ಸಮಾಧಿ ಭೂಮಿಯಲ್ಲಿರುವ ಎಲ್ಲಾ ಸಮಾಧಿಗಳನ್ನು ಆಶಿರ್ವದಿಸಲಾಯಿತು. ಕಥೊಲಿಕ್ ಪವಿತ್ರ ಸಭೆಯು, ಪಾಪ ವಿಮೋಚನೆಯಿಂದ ಬಿಡುಗಡೆಯಾಗದೆ ಇರುವ ಆತ್ಮಗಳಿಗೆ, ಬಿಡುಗಡೆಯಾಗಿ ಸ್ವರ್ಗ ಸೇರಲು ನಮ್ಮ ಪ್ರಾರ್ಥನೆಯ ಅಗತ್ಯ ಇದೆಯೆಂದು ತಿಳಿಸುತ್ತದೆ. ಅದಕ್ಕಾಗಿ ಪವಿತ್ರಸಭೆಯ ನಿರ್ಣಯದಂತೆ, ಈ ದಿನವನ್ನು ಪ್ರಪಂಚದ ಎಲ್ಲೆಡೆ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಭಕ್ತಾಧಿಗಳು ಅಗಲಿದ ತಮ್ಮವರ ಸಮಾಧಿಗಳ ಮೇಲೆ ಮೇಣದ ಬತ್ತಿಗಳನ್ನು ಉರಿಸಿ, ಪುಷ್ಪಗಳಿಂದ ಶ್ರಂಗಾರ ಮಾಡಿದ್ದರು.











































