

ಕೋಲಾರ: ಕೋಲಾರ ಜಿಲ್ಲೆಯ ಶಿಕ್ಷಣ ಇಲಾಖೆಯ ನೂತನ ಉಪನಿರ್ದೇಶಕರಾಗಿ ಅಲ್ಮಾಸ್ ಪರ್ವೀನ್ ತಾಜ್ ರವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಜಿಲ್ಲೆಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮುಸ್ಲಿಂ ಮಹಿಳೆ ಉಪನಿರ್ದೇಶಕರಾಗಿ ನೇಮಕವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಅಲ್ಮಾಸ್ ಪರ್ವೀನ್ ತಾಜ್ ರವರು ಈ ಹಿಂದೆ ರಾಜ್ಯ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಸೇವಾ ಅವಧಿಯಲ್ಲಿ ಶ್ರಮಶೀಲತೆ ಹಾಗೂ ನಿಷ್ಠೆಯಿಂದ ಕಾರ್ಯನಿರ್ವಹಿಸಿದ ಕಾರಣ, ಅವರನ್ನು ಕೋಲಾರ ಜಿಲ್ಲೆಗೆ ವರ್ಗಾವಣೆ ಮಾಡಿ ಉಪನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಇಂದು ಬೆಳಿಗ್ಗೆ ನಡೆದ ಸರಳ ಕಾರ್ಯಕ್ರಮದಲ್ಲಿ ಅವರು ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಆರ್ ವೀಣಾ , ಸಯೀದಾ ಫಾತಿಮಾ ಡಿವೈಪಿಸಿ, ಉಪನಿರ್ದೇಶಕರ ಕಚೇರಿಯ ಅಧೀಕ್ಷಕು ದಿನೇಶ್ ಬಾಬು, ಕಚೇರಿಯ ಕೇಶವ ರೆಡ್ಡಿ , ಗೋವಿಂದ ಗೌಡ , ಚಂದ್ರಶೇಖರ್, ಬೆಂಜಮಿನ್ , ಮಂಜುನಾಥ್, ಚಿರಂಜೀವಿ
ಹಾಗೂ ಕಚೇರಿಯ ಸಿಬ್ಬಂದಿ ವರ್ಗ ಹಾಜರಿದ್ದರು. ಸಿಬ್ಬಂದಿ ಅಲ್ಮಾಸ್ ಪರ್ವೀನ್ ತಾಜ್ ರವರಿಗೆ ಹಾರ್ದಿಕ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಎಸ್.ಆರ್. ವೀಣಾ ಶಿಕ್ಷಣಾಧಿಕಾರಿ, ಸಯೀದಾ ನಯೀದಾ ಫಾತೀಮಾ ಡಿ.ವೈ.ಪಿ.ಸಿ (ಆರ್.ಎಂ.ಎಸ್.ಎ), ಶರಣಪ್ಪ ಬಿರೇದಾರ್ ಎ.ಪಿ.ಸಿ.ಓ, ಗೋವಿಂದಗೌಡ ಲೆಕ್ಕಾಧೀಕ್ಷಕರು, ದಿನೇಶ್ಬಾಬು ಅಧೀಕ್ಷಕರು, ಕೇಶವರೆಡ್ಡಿ ಅಧೀಕ್ಷಕರು, ಚಂದ್ರಶೇಖರ್ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕರು, ಮಂಜುನಾಥ ಪ್ರ.ದ.ಸ, ಚಿರಂಜೀವಿ ದ್ವಿ.ದ.ಸ, ಬೆಂಜಮಿನ್ ದ್ವಿ.ದ.ಸ ಸೇರಿದಂತೆ ಇಲಾಖೆಯ ಹಲವಾರು ಸಿಬ್ಬಂದಿ ಹಾಜರಿದ್ದರು.
ಹಾಜರಿದ್ದವರು ಅಲ್ಮಾಸ್ ಪರ್ವೀನ್ ತಾಜ್ ರವರಿಗೆ ಹಾರ್ದಿಕ ಸ್ವಾಗತ ಕೋರಿದರು ಹಾಗೂ ಅವರ ಮುಂದಿನ ಕಾರ್ಯಭಾರಕ್ಕೆ ಶುಭ ಹಾರೈಸಿದರು.

