

ಶ್ರೀನಿವಾಸಪುರ : ತಾಲೂಕಿನ ಗೌನಿಪಲ್ಲಿಯಲ್ಲಿ ಗುರುವಾರ ವಿವಿಧ ಬೇಡಿಕೆಗಳಿಗಾಗಿ ಗೌನಿಪಲ್ಲಿ ಗೆಳೆಯರ ಬಳಗದವತಿಯಿಂದ ಬಂದ್ ಹಮ್ಮಿಕೊಳ್ಳಾಗಿತ್ತು.
ಗೆಳಯರ ಬಳಗದ ಪ್ರಮುಖ್ ಮರಸನಪಲ್ಲಿ ಕೆ.ವಿ.ಶಿವರಾಮ್ ಮಾತನಾಡಿ ಗ್ರಾಮೀಣ ಭಾಗದಲ್ಲಿನ ಕೆಲ ಹಳ್ಳಿಗಳ ರಸ್ತೆಗಳು ಮಳೆಯಿಂದ ಹಾಳಾಗಿದೆ. ತುರ್ತಾಗಿ ಗೌನಿಪಲ್ಲಿಯಿಂದ ರಾಜ್ಯದ ಗಡಿಯವರೆಗೂ ರಸ್ತೆ ನಿರ್ಮಾಣವಾಗಬೇಕು, ಸಾರ್ವಜನಿಕ ಆಸ್ಪತ್ರೆಗೆ ವೈದ್ಯರು ಅವಶ್ಯಕತೆ ಇದ್ದು, ವೈದ್ಯರನ್ನು ನೇಮಿಸುವುದು, ಗ್ರಾಮದಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸುವುದು, ಎಪಿಎಂಸಿ ಮಾರ್ಕೆಟ್ ವ್ಯವಸ್ಥೆ ಮಾಡಿಕೊಡುವುದು, ಪ್ರಥಮ ದರ್ಜೆ ಕಾಲೇಜು ಪ್ರಾರಂಭ ಮಾಡುವುದು, ಗೌನಿಪಲ್ಲಿಯನ್ನು ಪಟ್ಟಣಪಂಚಾಯತಿಯಾಗ ಮೇಲ್ದರ್ಜೆಗೆಏರಿಸಬೇಕು. ಬೈರಗಾನಪಲ್ಲಿ ಪಂಚಾಯಿತಿಯ ಮರಸನಪಲ್ಲಿ, ಬಚ್ಚಿರೆಡ್ಡಿಗಾರಿಪಲ್ಲಿ, ಚಿಲ್ಲಾರಪಲ್ಲಿ ಗ್ರಾಮಗಳಿಗೆ ಹಾದುಹೋಗುವ ರಸ್ತೆಯಲ್ಲಿ ಹರಿಯುವ ಹೊಳೆಗೆ ಸೇತುವೆ ನಿರ್ಮಸುವುದು, ಕೋಡಿಪಲ್ಲಿ ಕೆರೆ ಅಭಿವೃದ್ಧಿಯಾಗಬೇಕು, ತಾಡಿಗೋಲ್ ಕ್ರಾಸ್ನಿಂದ ರಾಜ್ಯದ ಗಡಿಯವರೆಗೆ ರಾಷ್ಟ್ರೀಯ ಹೆದ್ದಾರಿ ದರ್ಜೆಗೆ ಸೇರಿಸಬೇಕು, ಈ ರಸ್ತೆಯಲ್ಲಿ ಬಾರಿ ವಾಹನಗಳು ಸಂಚರಿಸದಂತೆ ಚೆಕ್ಪೋಸ್ಟ್ ನಿರ್ಮಿಸಬೇಕು ಹೀಗೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
ಗ್ರಾಮದ ಮುಖಂಡ ಜಾಮಕಾಯಿಲ ವೆಂಕಟೇಶ್ ಮಾತನಾಡಿ ಕಳೆದ ಎರಡು ವರ್ಷದಿಂದಲೂ ನಿರಂತರವಾಗಿ ರಸ್ತೆಗಾಗಿ ಹೋರಾಟ ಮಾಡುತ್ತಿದ್ದೇವೆ. ಆದರೂ ನಮ್ಮ ಸಮಸ್ಯೆ ಈಡೇರುತ್ತಿಲ್ಲ. ಒಂದು ಘಂಟೆ ಹಿಂದೆ ಬೈರಗಾನಪಲ್ಲಿ ಗ್ರಾಮದ ಬಳಿ ಅಪಘಾತವಾಗಿ ದ್ವಿಚಕ್ರವಾಹನ ಸವಾರನಿಗೆ ಕಾಲು ಮುರಿದಿದೆ. ಆಸ್ಪತ್ರೆಯಲ್ಲಿ 24 ಗಂಟೆಯು ವೈದ್ಯರ ಸೇವೆ ಇರುಬೇಕು ಈ ಭಾಗದಲ್ಲಿ ಆರೋಗ್ಯ ಸಮಸ್ಯೆಗಳು ಬರುತ್ತಲೇ ಇರುತ್ತವೆ ಆದ್ದರಿಂದ ಆಸ್ಪತ್ರೆಯಲ್ಲಿ 24 ಗಂಟೆಯೂ ವೈದ್ಯರ ಸೇವೆ ಲಭ್ಯವಿರಬೇಕು ಎಂದು ಒತ್ತಾಯಿಸಿದರು.
ಲೋಕೋಪಯೋಗಿ ಇಲಾಖೆ ಇಎಎ ಮಂಜುನಾಥ್ ಮನವಿಯನ್ನು ಸ್ವೀಕರಿಸಿ ಮಾತನಾಡಿ ನಮ್ಮ ಇಲಾಖೆಗೆ ಸಂಬಂದಿಸಿದಂತೆ ಮುಂದಿನ ತಿಂಗಳು 15 ರ ಒಳಗಾಗಿ ಗುಣಿಗಳನ್ನು ಸಮತಟ್ಟು ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಗೌನಿಪಲ್ಲಿ ಗೆಳೆಯರ ಬಳಗದಿಂದ ಸಂಸದರಿಗೆ, ಶಾಸಕರಿಗೆ ತಹಶೀಲ್ದಾರ್ ರವರಿಗೆ ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ಸ್ಥಳದಲ್ಲಿ ಇದ್ದ ಅಧಿಕಾರಿಗಳ ಮೂಲಕ ರವಾನಿಸಿದರು.
ಈ ಸಮಯದಲ್ಲಿ ಗ್ರಾಮದ ಬಸ್ಸ್ ನಿಲ್ದಾಣದಲ್ಲಿನ ಗುಣಿಗಳಲ್ಲಿ ಗಿಡಗಳನ್ನು ನಾಟಿ ಮಾಡುವುದರ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಸರ್ಕಾರಿ , ಖಾಸಗಿ ಶಾಲಾ ಕಾಲೇಜುಗಳನ್ನು ಬಂದ್ನಿಂದಾಗಿ ರಜಾಘೋಷಿಸಲಾಗಿತ್ತು. ವಾಹನಗಳ ಸಂಚಾರ ಬಂದ್ ಆಗಿತ್ತು. ಇಲಾಖಾಧಿಕಾರಿಗಳ ಭರವಸೆ ನೀಡಿದ ಹಿನ್ನೆಲೆಯಲ್ಲಿ ಬಂದ್ ನಿರತರು ಬಂದ್ನ್ನು ಹಿಂಪಡೆದರು. ಒಟ್ಟಿನಲ್ಲಿ ಕರೆ ನೀಡಿದ್ದ ಬಂದ್ ಯಶ್ವಸಿಯಾಯಿತು.
ಡಿವೈಎಸ್ಪಿ ನಂದಕುಮಾರ್, ಗೌನಿಪಲ್ಲಿ ವೃತ್ತ ನಿರೀಕ್ಷಕ ಶಿವಕುಮಾರ್, ಗ್ರಾ.ಪಂ ಸದಸ್ಯ ಬಕ್ಷುಸಾಬ್, ಮುಖಂಡರಾದ ಚುಕ್ಕಾಮಂಜು, ಗೌನಿಪಲ್ಲಿ ಗೆಳೆಯರ ಬಳಗದ ಪದಾಧಿಕಾರಿಗಳಾದ ಚಿಲ್ಲೋರಪಲ್ಲಿ ವೆಂಕಟರಮಣಾರೆಡ್ಡಿ, ಸಿ.ಎಸ್. ಬೈರಾರೆಡ್ಡಿ, ರೋಷನ್ಅಹ್ಮದ್ , ಶ್ರೀರಾಮ್, ಖಾದರ್ಪಾಷಾ, ಗಾಜುಲ ಸೀನಪ್ಪ , ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಗೌರವಾಧ್ಯಕ್ಷ ಮುಜಾಹಿದ್ .ಎ , ಖಾಸಿಂ ಹುಸೇನ್, ಮುಜ್ಜು, ಆಸೀಫ್ ಇದ್ದರು.


