

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಮಂಗಳೂರು ದಕ್ಷಿಣ ವಲಯ ಹಾಗೂ ಅಲಿಫ್ ಪಬ್ಲಿಕ್ ಶಾಲೆ, ಉರುಮನೆ, ನಾಟೇಕಲ್ ಇವರ ಸಹಯೋಗದೊಂದಿಗೆ ತಾಲ್ಲೂಕು ಮಟ್ಟದ 14/17ರ ವಯೋಮಿತಿಯ ಬಾಲಕ–ಬಾಲಕಿಯರ ಫುಟ್ಬಾಲ್ ಪಂದ್ಯಾಟ–2026 ದಿನಾಂಕ 17-09-2026, ಗುರುವಾರ ಮತ್ತು 19-09-2026, ಶನಿವಾರದಂದು ಮಂಗಳೂರು ವಿಶ್ವವಿದ್ಯಾಲಯ ಕ್ರೀಡಾಂಗಣ, ಕೊಣಾಜೆ ಇಲ್ಲಿ ನಡೆಯಿತು.
ಕ್ರೀಡಾಕೂಟದಲ್ಲಿ 14ರ ವಯೋಮಿತಿಯ 28 , 17ರ ವಯೋಮಿತಿಯ 32 ,ಬಾಲಕಿಯರ 14ರ 2 ಹಾಗೂ 17ರ 5 ತಂಡಗಳು ಭಾಗವಹಿಸಿದ್ದವು.
ಅಲಿಫ್ ಪಬ್ಲಿಕ್ ಸ್ಕೂಲ್ನ ಅಧ್ಯಕ್ಷರಾದ ಶ್ರೀ ಮುಹಮ್ಮದ್ ಹುಸೈನ್ ಅವರು ಫುಟ್ಬಾಲ್ ಒದೆಯುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಮುಹಮ್ಮದ್ ಇಕ್ಬಾಲ್, ದೈಹಿಕ ಶಿಕ್ಷಣ ಸಂಘ, ದಕ್ಷಿಣ ವಲಯದ ಪ್ರಧಾನ ಕಾರ್ಯದರ್ಶಿ ಶ್ರೀ ಮೋಹನ್ ಶಿರ್ಲಾಲ್ ಹಾಗೂ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀಮತಿ ಜಯಶ್ರೀ ಅವರು ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ನಡೆದ ಈ ಪಂದ್ಯಾಟದಲ್ಲಿ 14ರ ಒಳಗಿನ ಬಾಲಕಿಯರ ವಿಭಾಗದಲ್ಲಿ ಸೆಂಟ್ ಜೋಸೆಫ್ ಜಾಯ್ಲ್ಯಾಂಡ್ ಶಾಲೆ ಪ್ರಥಮ ಸ್ಥಾನವನ್ನು ಹಾಗೂ ಉಚ್ಚಿಲ ಬೋವಿ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡವು. ವಿಜೇತರು ಅತಿಥಿಗಳಿಂದ ಕಪ್ ಹಾಗೂ ಪ್ರಶಸ್ತಿ ಪತ್ರಗಳನ್ನು ಸ್ವೀಕರಿಸಿದರು.
ಬಾಲಕರ ವಿಭಾಗದ 14ರ ಕೆಳಗಿನ ವಯೋಮಿತಿಯಲ್ಲಿ ಹಜರತ್ ಆಂಗ್ಲ ಮಾಧ್ಯಮ ಶಾಲೆ, ಉಳ್ಳಾಲ ಪ್ರಥಮ ಸ್ಥಾನವನ್ನು ಹಾಗೂ ಸೇಂಟ್ ರೀಟಾ ಇಂಗ್ಲಿಷ್ ಮಾಧ್ಯಮ ಶಾಲೆ, ಜೆಪ್ಪು ದ್ವಿತೀಯ ಸ್ಥಾನವನ್ನು ಪಡೆದುಕೊಂಡವು.
17ರ ಕೆಳಗಿನ ವಯೋಮಿತಿಯ ವಿಭಾಗದಲ್ಲಿ ಇಸ್ಲಾಹಿ ಆಂಗ್ಲ ಮಾಧ್ಯಮ ಶಾಲೆ, ಉಳ್ಳಾಲ ಪ್ರಥಮ ಸ್ಥಾನವನ್ನು ಹಾಗೂ ಹಜರತ್ ಸೈಯದ್ ಮದನಿ ಆಂಗ್ಲ ಮಾಧ್ಯಮ ಶಾಲೆ, ಉಳ್ಳಾಲ ದ್ವಿತೀಯ ಸ್ಥಾನವನ್ನು ಪಡೆದುಕೊಂಡವು.
ವಿಜೇತರಿಗೆ ಅಲಿಫ್ ಶಾಲೆಯ ವ್ಯವಸ್ಥಾಪಕರಾದ ಶ್ರೀ ಜನಾಬ್ ಮುಹಮ್ಮದ್ ಹುಸೈನ್ ಅವರು ಟ್ರೋಫಿ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.
ಕ್ರೀಡಾಕೂಟವು ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಮುಹಮ್ಮದ್ ಇಕ್ಬಾಲ್ ಅವರು ವಂದಿಸಿದರು.





