

ಕುಂದಾಪುರ: 11 ಸೆಪ್ಟೆಂಬರ್ 2026ರಂದು “ಅಂತರರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ 2026–27” ರ ಅಂಗವಾಗಿ ಕುಂದಾಪುರ ಪುರಸಭೆಯ ವತಿಯಿಂದ ಕೋಡಿ ಬೀಚ್, ಕುಂದಾಪುರದಲ್ಲಿ ಕರಾವಳಿ ಸ್ವಚ್ಛತಾ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕರಾವಳಿ ಪ್ರದೇಶವನ್ನು ಸ್ವಚ್ಛವಾಗಿಡುವುದು, ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದು, ಪ್ಲಾಸ್ಟಿಕ್ ಮಾಲಿನ್ಯವನ್ನು ನಿಯಂತ್ರಿಸುವುದು ಹಾಗೂ ಸಮುದ್ರ ಮತ್ತು ಕರಾವಳಿ ಪರಿಸರವನ್ನು ಸಂರಕ್ಷಿಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ಕಾರ್ಯಕ್ರಮದಲ್ಲಿ ಕುಂದಾಪುರ ಪುರಸಭೆಯ ಮುಖ್ಯಸ್ಥರು ಹಾಗೂ ಅಧಿಕಾರಿಗಳು, ಭಂಡಾರ್ಕಾರ್ಸ್
ಕಾಲೇಜಿನ ಎನ್.ಸಿ.ಸಿ.ಮತ್ತು ಎನ್.ಎಸ್.ಎಸ್ ಘಟಕಗಳ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಎನ್.ಸಿ.ಸಿ ಅಧಿಕಾರಿ ಮನೋಹರ್ ನಾಗಪ್ಪಯ್ಯ, ಎನ್ .ಎಸ್.ಎಸ್. ಅಧಿಕಾರಿಗಳಾದ ಅರುಣ್ ಎ.ಎಸ್. ಮತ್ತು ರಾಮಚಂದ್ರ ಆಚಾರ್ಯ, ಹಾಗೂ ಹಾಸ್ಟೆಲ್ ವಾರ್ಡನ್ ನಿತಿನ್ ಅವರ ಮಾರ್ಗದರ್ಶನದಲ್ಲಿ ಬೀಚ್ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಇದರೊಂದಿಗೆ ಕರಾವಳಿ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು. ಸಂದರ್ಭದಲ್ಲಿ “ಸ್ವಚ್ಛ ಕರಾವಳಿ – ಆರೋಗ್ಯಕರ ಪರಿಸರ” ಎಂಬ ಸಂದೇಶವನ್ನು ಸಾರಲಾಯಿತು.

