

ಕು೦ದಾಪ್ರುರ, ಜು. 19: ಕುಂದಾಪುರಕ್ಕೆ ಆಟೋಮೇಷನ್ ತಂತ್ರಜ್ಞಾನ ಪಾದರ್ಪಣೆ ಸೋವಿರ್ ಟೆಕ್ನಾಲಿಜಿಸ್ ವಿದ್ಯುಕ್ತವಾಗಿ ಜು. 19 ರಂದು ಲೋಕಾರ್ಪಣೆ ಮಾಡಲಾಯಿತು.
ಬೆಳಿಗ್ಗೆ ಕೋಟೇಶ್ವದಲ್ಲಿ ಸೋವಿರ್ ಟೆಕ್ನಾಲಿಜಿಸ್ ಕಛೇರಿಯನ್ನು ಸಂಸ್ಥಾಪಕ ಸೋಹನ್ ಡಿಸೋಜಾ ಇವರ ಅಜ್ಜಿ ಲಿಡ್ವಿನ್ ಬರೆಟ್ಟೊ ಇವರು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು. ಕೊಟೇಶ್ವರ ಚರ್ಚಿನ ಧರ್ಮಗುರು ವಂ।ಪ್ರವೀಣ್ ಪಿಂಟೊ ಆಶಿರ್ವವಚನ ಮಾಡಿದರು. ಧರ್ಮಗುರು ವಂ।ದೊನಾತ್ ರೇಬೆರೊ ಶುಭ ಕೋರಿದರು.
ಸಂಜೆ ಯುವ ಮನೀಶ್ ಹೋಟೆಲ್ ಸಭಾಭವನದಲ್ಲಿ ಉದ್ಯಮಿ, ರಾಜಕೀಯ ಮುಖಂಡ ಮೊಳಹಳ್ಳಿದಿನೇಶ್ ಹೆಗ್ಡೆ ಸೋವಿರ್ ಟೆಕ್ನಾಲಿಜಿಸ್ ಕಂಪಟ್ಯೂರ್ ಗುಂಡಿ ಒತ್ತುವ ಮೂಲಕ ವಿದ್ಯುಕ್ತವಾಗಿ ಲೋಕಾರ್ಪಣೆ ಮಾಡಿ “ಕುಂದಾಪುರ ಭಾಗದಲ್ಲಿ ಸಾಕಷ್ಟು ಸಣ್ಣ ಪ್ರಮಾಣದ ಉದ್ವಮಗಳು, ಕೈಗಾರಿಕೆಗಳಿವೆ. ಅದರ ಪರಿವರ್ತನೆ, ಉನ್ನತೀಕರಣ, ಅದರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಈ ಸೋವಿರ್ ಟೆಕ್ನಾಲಿಜಿಸ್ ಸಂಸ್ಥೆ ಕುಂದಾಪುರಕ್ಕೆ ಕಾಲಿಟ್ಟದು ಉತ್ತಮ ಬೆಳವಣಿಗೆಯಾಗಿದೆ. ಇದು ಕುಂದಾಪುರಕ್ಕೆ ಉತ್ತಮ ಕೊಡುಗೆಯಾಗಿದೆ. ಎಲ್ಲ ರೀತಿಯಿಂದಲೂ ಈ ಭಾಗದ ಕೈಗಾರಿಕೋದ್ಯಮಗಳಿಗೆ ಇದು ಸಹಕಾರಿಯಾಗಲಿದೆ ಎಂದು ಹೇಳಿದರು,ಯುವ ಸಂಸ್ಥಾಪಕ ಸೋಹನ್ ಅವರು ಊರಿನಲ್ಲಿಯೇ ಉದ್ದಿಮೆಯನ್ನು ಆರಂಭಿಸಿರುವುದು ಸಮಾಜಕ್ಕೆ ಮಾದರಿಯಾಗಿದೆ ಪರ ಊರಲ್ಲಿ ಹೋಗಿ ಬದುಕು ಕಟ್ಟಿಕೊಳ್ಳುವ ಬದಲು, ಇಲ್ಲಿಯೇ ಸ್ವಂತ ಉದ್ದಿಮೆ ಆರಂಭಿಸಿದ್ದು, ಶ್ಲಾಘನೀಯು ಕಾರ್ಯ ಎಂದವರು ನುಡಿದರು.
ಕುಂದಾಪುರ ವಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ತ್ರ. ಮಾತನಾಡಿ, ಆಟೋಮೇಷನ್ ತಂತ್ರಜ್ಞಾನ ಕುಂದಾಪುರಕ್ಕೆ ಮತ್ತು ಆಸು ಪಾಸಿಗೆ ಹೊಸದು.ಯಾವುದೇ ಉದ್ಯಮಗಳಲ್ಲಿ ತಂತ್ರಜ್ಞಾನ ಬಳಕೆ ಅನ್ನುವುದು ಬೇಕು. ಅದರ ಜತೆಗೆ ಕಾಲ-ಕಾಲಕ್ಕೆ ತಕ್ಕಂತೆ ಬದಲಾಗುತ್ತಿರಬೇಕು, ನೂತನ ತಂತ್ರಜ್ಞಾನ, ಅವಿಷ್ಕಾರಗಳನ್ನು ಬಳಸಿಕೊಳ್ಳಬೇಕು, ಬದಲಾವಣೆ ಎಂಬುದು ಅಭಿವ್ರದ್ದಿಯ ಸಂಕೇತ. ಈ ಪ್ರೆಪೋಟಿ ಯುಗದಲ್ಲಿ ಉದ್ವಮ ಉಳಿಸಿಕೊಳ್ಳಲು, ನಾವು ಬೆಳೆಯಲು ಬದಲಾಗದಿದ್ದರೆ ಸಾಧ್ಯವಾಗುವುದಿಲ್ಲ’ ಎಂದು ತಿಳಿಸಿದರು.
ಸೋವರ್ ಟೆಕ್ನಾಲಜೀಸ್ ಸಂಸ್ಥೆಯ ಸಂಸ್ಥಾಪಕ ಸೋಹನ್ ಡಿಸೋಜಾ ಅತಿಥಿಗಳಿಗೆ ಹೂ ಗುಚ್ಚ ನೀಡುವ ಮೂಲಕ ಸ್ವಾಗತಿಸಿದರು. ಸಿವಿಲ್ ಎಂಜಿನಿಯರ್ ಪ್ರಸನ್ನ ಕೆದ್ಲಾಯ, ಮೆಲ್ವಿನ್ ಬರೆಟ್ಟೋ ಕತಾರ್, ಉಪಸ್ಥಿತರಿದ್ದರು.ಇದೇ ವೇಳೆ ಇಟೇಲಿಯಿಂದ ಆಗಮಿಸಿದ ಊರಿನವರೇ ಆದ ಫಾ। ದೊನಾತ್ ರೇಬೆರೊ, ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲ ಮ್ಯಾಕ್ಷಿಮ್ ಡಿ'ಸೋಜಾ, ಅರ್ನಾಲ್ಡ್ ಮ್ಯಾಥ್ಯೂ, ವಿವಿಯನ್ ಕ್ರಾಸ್ತಾ, ಪತಕರ್ತರನ್ನು ಮತ್ತು ಇತರರನ್ನು ಗೌರವಿಸಲಾಯಿತು. ಸಂಸ್ಥೆಯ ಪಿ. ಆರ್. ಒ. ಪ್ರಜ್ವಲ್ ಮಾರ್ಟಿಸ್ ಸೋವಿರ್ ಟೆಕ್ನಾಲಿಜಿಸ್ ಬಗ್ಗೆ ವಿವರವಾಗಿ ವಿವರಿಸಿದರು ಹಳೆಯ ಕೈಗಾರಿಕೆಗಳಿಗೆ ಹೊಸ ರೂಪ ಕೊಡುವ ಆಟೋಮೇಷನ್ ತಂತ್ರಜ್ಞಾನವಿದು ಎಂದು ತಿಳಿಸುತ್ತಾ, ಇದನ್ನು ಅಳವ್ಡಿಕೊಳ್ಳುವ ಮೂಲಕ ಉತ್ಪಾದನೆ ಹೆಚ್ಚಳವಾಗುತ್ತೆ, ಗುಣ ಮಟ್ಟ ಉತ್ತಮಗೊಳ್ಳುತ್ತದೆ, ಮಾನವಶಕ್ತಿ(Manpower) ಕಡಿಮೆ ಬೇಕಾಗುತ್ತೆ, ಆಟೋಮೇಷನ್ ತಂತ್ರಜ್ಞಾನ ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ಸಿಮೀತವಾಗಿದೆ, ಕರಾವಳಿ ಭಾಗದಲ್ಲಿ ಆಟೋಮೇಷನ್ ತಂತ್ರಜ್ಞಾನದ ಸೋವಿರ್ ಟೆಕ್ನಾಲಿಜಿಸ್ ಕಂಪನಿ ಮೊದಲನೇದಾಗಿದೆ’ ಎಂದು ತಿಳಿಸಿದರು.
ಪ್ರಣ್ಯುತ್ ಆರ್. ಗಾಣಿಗ ಸ್ವಾಗತಿಸಿ, ನಿರೂಪಿಸಿದರು. ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮೆಲಿಟಾ ಡಿ'ಸೋಜಾ ವಂದಿಸಿದರು.






































