Rain Day Celebration at Kundapur CSI Krupa Vidyalaya


ಕುಂದಾಪುರ; ದಿನಾಂಕ 16/07/2026 ರಂದು ಕುಂದಾಪುರ ಸಿ.ಎಸ್.ಐ. ಕ್ರಪಾ ವಿದ್ಯಾಲಯದಲ್ಲಿ ಮಳೆಯ ದಿನಾಚರಣೆ ನಡೆಯಿತು. ಮುಖ್ಯ ಅತಿಥಿಯಾಗಿ ಕುಂದಾಪುರ ಸಿ.ಎಸ್.ಐ. ಕ್ರಪಾ ಚರ್ಚಿನ ಧರ್ಮಗುರು ವಂ। ಇಮ್ಯಾನುವೇಲ್ ಜಯಕರ್ ಸಂದೇಶ ನೀಡಿ ಮಕ್ಕಳ ಜೊತೆ ಮಳೆಯಲ್ಲಿ ಸಂತೋಷ ಪಟ್ಟರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕಿ ಐರಿನ್ ಸಾಲಿನ್ಸ್ ಅಧ್ಯಕ್ಷೀಯ ಭಾಷಣ ಮಾಡಿದರು. ಚಿಣ್ಣರು ಮಳೆಗೆ ಸಂಬಂಧಿಸಿದಂತೆ ಬಣ್ಣ ಬಣ್ಣದ ಚಿತ್ರಗಳನ್ನು ರಚಿಸಿ ಆನಂದಿಸಿದರು.
ಯು.ಬಿ.ಎಮ್. ಸಿ. ಆಂಗ್ಲಾ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಅನಿತಾ ಆಲಿಸ್ ಪ್ರಸ್ತಾವಿಕ ನುಡಿಗಳನ್ನಾಡಿ ಮಕ್ಕಳನ್ನು ಹುರಿದುಂಬಿಸಿದರು. ಸಿ.ಎಸ್. ಐ. ಕೃಪಾ ನರ್ಸರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸವಿತಾ ಸ್ವಾಗತಿಸಿದರು. ಸಹ ಶಿಕ್ಷಕಿ ರೇಖಾ ಆಲ್ಮೇಡಾ ನಿರೂಪಿಸಿದರು. ಸಹ ಶಿಕ್ಷಕಿ ವಿಲ್ಮಾ ಶೈಲೇಟ್ ವಂದಿಸಿದರು.
Rain Day Celebration at Kundapur CSI Krupa Vidyalaya

Kundapur; Rain Day celebration was held at Kundapur CSI Krapa Vidyalaya on 16/07/2026. The chief guest was the Reverend Vm. Emmanuel Jayakar, the priest of Kundapur CSI Krapa Church and he rejoiced in the rain with the children. The school principal Irene Sallins, who presided over the program, delivered the presidential address. The children enjoyed creating colorful pictures related to rain.
Anita Alice, Principal of UBM C. English Medium School, delivered the introductory remarks and encouraged the children. Savitha, Headmistress of CSI Krupa Nursery School, welcomed the gathering. Co-teacher Rekha Almeida delivered the speech. Co-teacher Vilma Shailat proposed the vote of thanks. proposed the vote of thanks.















