
Father Muller Homeopathic Medical College – Graduation Ceremony on April 16th

ಮಂಗಳೂರು; ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಗಳ ಅ೦ಗವಾದ ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 36 ನೇ ಪದವಿ ಪ್ರದಾನ ಸಮಾರಂಭವನ್ನು ಏಪ್ರಿಲ್ 16, 2026 ರಂದು ಗುರುವಾರ ಬೆಳಿಗ್ಗೆ 10.00 ಗಂಟೆಗೆ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ನಲ್ಲಿ ಆಯೋಜಿಸಲಾಗಿದೆ.
ಸಮಾರಂಭದ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಯೆನೆಪೊಯ (ಡೀಮ್ಡ್ ಟು ಬಿ ಯುನಿವರ್ಸಿಟಿ) ಕುಲಪತಿ ಡಾ. ಕೆ. ಎಸ್. ಗಂಗಾಧರ ಸೋಮಯಾಜಿ ಮತ್ತು ನವದೆಹಲಿಯ ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಅಧ್ಯಕ್ಷ ಡಾ. ತಾರಕೇಶ್ವರ ಜೈನ್ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಒಟ್ಟು 111 ವಿದ್ಯಾರ್ಥಿಗಳು, ಇದರಲ್ಲಿ 92 ಪದವಿಪೂರ್ವ (BHMS) ಇಂಟರ್ನ್ಗಳು ಮತ್ತು 19 ಸ್ನಾತಕೋತ್ತರ (MD ಹೋಮಿಯೋಪತಿ) ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ.
ಈ ಸಮಾರಂಭದಲ್ಲಿ ಪದವಿ ಪ್ರದಾನ, ವೃತ್ತಿಪರ ಪ್ರಮಾಣವಚನ ಬೋಧನೆ ಮತ್ತು ಶೈಕ್ಷಣಿಕ ಸಾಧನೆಗಳನ್ನು ಗುರುತಿಸಲಾಗುತ್ತದೆ. “ದಿ ಫಾದರ್ ಮುಲ್ಲರ್ ಚಾರಿಟೆಬಲ್ ಇನ್ಸ್ಟಿಟ್ಯೂಷನ್ಸ್ ಪ್ರೆಸಿಡೆಂಟ್ಸ್ ಗೋಲ್ಡ್ ಮೆಡಲ್” ಅನ್ನು ಅತ್ಯುತ್ತಮ ಬೆಸ್ಟ್ ಔಟ್ಗೋಯಿಂಗ್ ಪದವಿಪೂರ್ವ ವಿದ್ಯಾರ್ಥಿಗೆ ನೀಡಲಾಗವುದು.
ಹೊರಹೋಗುವ ಬ್ಯಾಚ್ಗೆ ಈ ಕೆಳಕ೦ಡ೦ತೆ ಪ್ರಶಸ್ತಿಗಳನ್ನು ನೀಡಲಾಗುವುದು.
- ಅವಾರ್ಡ್ ಆಫ್ ಎಕ್ಸಲೆನ್ಸ್ – ಪದವಿಪೂರ್ವ
- ಬೆಸ್ಟ್ ಔಟ್ಗೋಯಿಂಗ್ ಪೋಸ್ಟ್ ಗ್ರ್ಯಾಜುವೇಟ್
- ಅವಾರ್ಡ್ ಆಫ್ ಎಕ್ಸಲೆನ್ಸ್ – ಸ್ನಾತಕೋತ್ತರ ವಿಭಾಗ
- ಬೆಸ್ಟ್ ಸ್ಟೂಡೆಂಟ್ ರಿಸರ್ಚ್ ಅವಾರ್ಡ್
ಇದಲ್ಲದೆ, ಶೈಕ್ಷಣಿಕ ಗೌರವಗಳು ಈ ಕೆಳಕ೦ಡ೦ತಿದೆ
- ಇನ್ಸ್ಟಿಟ್ಯೂಷನಲ್ ಪ್ರೈಜಸ್ : 8
- ಸಬ್ಜೆಕ್ಟ್ ವೈಸ್ ಪ್ರೈಜಸ್ : 17 (UG & PG)
- RGUHS ಯುನಿವರ್ಸಿಟಿ ರಾ೦ರ್ಕ್ಸ್: ಪದವಿಪೂರ್ವ – 4, ಸ್ನಾತಕೋತ್ತರ ಪದವಿ – 12
- ಹೋಮಿಯೋಪತಿ ಮೆಟೀರಿಯಾ ಮೆಡಿಕಾದ RGUHS ಚಿನ್ನದ ಪದಕ: 1
- ಕ್ವಾಲಿಟಿ MD ಡಿಸರ್ಟೇಶನ್ ಅವಾರ್ಡ್ (CCRH ವತಿಯಿಂದ): 1
ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಆಸ್ಪತ್ರೆಯು, ಜನವರಿ 6, 2026 ರಿಂದ ಜನವರಿ 5, 2028 ರವರೆಗಿನ ಅವಧಿಗೆ ಆಯುಷ್ ಪ್ರವೇಶ ಮಟ್ಟದ NABH ಮಾನ್ಯತೆ ಪಡೆದಿದೆ ಎಂದು ಘೋಷಿಸಲು ಹೆಮ್ಮೆಪಡುತ್ತದೆ. ಇದಲ್ಲದೆ, ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿರುವ “ವೈದ್ಯಕೀಯ ಪ್ರಯೋಗಾಲಯ”ವು ಏಪ್ರಿಲ್ 1, 2026 ರಿಂದ 31 ಮಾರ್ಚ್ 2030 ರವರೆಗಿನ ಅವಧಿಗೆ NABL ನೊಂದಿಗೆ ಮಾನ್ಯತೆ ಪಡೆದಿದೆ.
ಈ ಪದವಿ ಪ್ರದಾನ ಸಮಾರಂಭವು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಲಿದೆ.
ಈ ಸಂಸ್ಥೆಯು ಹೋಮಿಯೋಪತಿ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಶ್ರೇಷ್ಠತೆಗೆ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. - Father Muller Homoeopathic Medical College & Hospital, a unit of Father Muller Charitable Institutions, will be hosting its 36th Graduation Ceremony on Thursday, 16th April 2026 at 10.00 a.m., at the Father Muller Convention Centre, Kankanady, Mangaluru.
- The Chief Guests for the ceremony areDr K. S. Gangadhara Somayaji, Hon’ble Vice Chancellor, Yenepoya (Deemed to be University), Mangaluru, andDr Tarkeshwar Jain, Chairman, National Commission for Homoeopathy, New Delhi.
- A total of 111 students will be graduating on this occasion, including 92 Undergraduate (BHMS) interns and 19 Postgraduate (MD Homoeopathy) students.
- The ceremony comprises the conferment of degrees, administration of the professional oath, and recognition of academic achievements. The Father Muller Charitable Institutions President’s Gold Medal will be awarded to the Best Outgoing Undergraduate student.
- Awards will be presented to the outgoing batch, including:
- Award of Excellence – Undergraduate
- Best Outgoing Postgraduate
- Award of Excellence – Postgraduate
- Best student Researcher Award
- In addition, academic honours include:
- Institutional Prizes: 8
- Subject-wise prizes : 17 (UG & PG)
- RGUHS University Ranks: Undergraduate – 4, Postgraduate – 12
- RGUHS Gold Medal in Homoeopathic Materia Medica: 1
- Quality MD Dissertation Award (awarded by CCRH): 1
- The institution takes pride in announcing thatFather Muller Homoeopathic Medical College & Hospital has been accredited with NABH AYUSH Entry Level accreditation for the period from 6th January 2026 to 5th January 2028. Further, the“Medical laboratory” at Father Muller Homoeopathic Medical College Hospital has been accredited with NABL for the period from 1st April 2026 to 31st March 2030.
- The Graduation Ceremony marks an important milestone in the academic journey of the students and reflects the institution’s continued commitment to excellence in Homoeopathic education and healthcare.

