

ಪಡುಕೋಣೆ :- ಸಂತ ಅಂತೋನಿ ಕಿರಿಯ ಪ್ರಾಥಮಿಕ ಶಾಲೆ ಗುಡ್ಡೆ ಅಂಗಡಿ – ಸೇನಾಪುರ ಗ್ರಾಮ,
ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮುಖ್ಯ ಶಿಕ್ಷಕಿ ಐವಿ ರೇಗೊರವರು ದಿನಾಂಕ 24.1.1994ರಂದು ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆ ಪಡುಕೋಣೆ ಯಲ್ಲಿ ಸೇವೆಗೆ ಸೇರ್ಪಡೆಯಾಗಿ ಸೇವೆ ಸಲ್ಲಿಸಿ, ದಿನಾಂಕ 1.6.1998 ರಂದು ಅದೇ ಸಂಸ್ಥೆಯ ಸಂತ.ಅಂತೋನಿ ಕಿರಿಯ ಪ್ರಾಥಮಿಕ ಶಾಲೆ, ಗುಡ್ಡೆಅಂಗಡಿಯಲ್ಲಿ ವರ್ಗಾವಣೆಯಾಗಿ ಸೇವೆ ಸಲ್ಲಿಸುತ್ತಿರುವಾಗಲೇದಿನಾಂಕ 1.8.2006 ರಂದು., ಆ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿ ಸುವ ಮುಖ್ಯ ಶಿಕ್ಷಕರಾದ ಸ್ಟ್ಯಾನಿಸ್ಲಾಸ್ ಲುವಿಸ್ ರವರು ನಿವ್ರತ್ತಿಯಾದರು. ಆ ಹುದ್ದೆಗೆ ಇವರನ್ನು ಮುಖ್ಯ ಶಿಕ್ಷಕರಾಗಿ ನೇಮಿಸಿದರು.ದಿನಾಂಕ 31.1.2026 ರಂದು ನಿವ್ರತ್ತರಾದರು. ಸತತ ಸರಕಾರದ ಅನುದಾನಕ್ಕೆ 32 ವರ್ಷಗಳ ನಿರಂತರ ಸೇವೆ ಸಲ್ಲಿಸಿ ಸೇವೆಯಿಂದ ನಿವ್ರತ್ತಿಯಾದರು.
ಆ ಶಾಲೆಯ ನಿವೃತ್ತ ಶಿಕ್ಷಕಿ ಡೇರಿ ಸುವಾರಿಸ್ ರವರು, ಶಿಕ್ಷಕಿ ಐವಿ ರೇಗೊರವರು ಮಾಡಿದ ಉತ್ತಮ ಸೇವೆಯನ್ನು ಶ್ಲಾಘಿಸಿ, ಸನ್ಮಾನ ಪತ್ರವನ್ನು ಓದಿ ಹಸ್ತಾಂತರಿಸಿದರು. ಶಾಲಾ ಸಂಚಾಲಕರು, ಶಾಲಾಭಿವ್ರಧಿ ಸಮಿತಿಯ ಸದಸ್ಯರು ಶಿಕ್ಷಕವ್ರಂದವರು, ನಿವ್ರತ್ತ ಶಿಕ್ಷಕರು, ದಾನಿಗಳು, ಊರಿನ ಗಣ್ಯ ವ್ಯಕ್ತಿಗಳು, ಶಾಲಾಹಿರಿಯ ವಿದ್ಯಾರ್ಥಿಗಳು, ಮಕ್ಕಳ ರಕ್ಷಕರು, ವಿದ್ಯಾರ್ಥಿಗಳು, ಸೇರಿ ನಿವ್ರತ್ತ ಶಿಕ್ಷಕಿ ಐವಿ ರೇಗೊರವರ ಸೇವೆ ಹಾಗೂ ಅವರು ಮಾಡಿದ ಉತ್ತಮ ಕರ್ತವ್ಯದ ಬಗ್ಗೆ ಪ್ರಶಂಸಿ ಸನ್ಮಾನಿಸಿದರು. ತದನಂತರ ಶಾಲೆಯ ಅಭಿವೃದ್ಧಿಗಾಗಿ ಸಹಕಾರ ನೀಡಿರುವ ಹಾಗೂ ಮುಂದೆಯೂ ಸಹಾ ಶಾಲೆಯ ಅಭಿವೃದ್ಧಿಗೆ ಸಹಕರಿಸಲು ಶಕ್ತಾರಾಗಿರುವ ಸಹೃದಯಿ ವ್ಯಕ್ತಿಗಳಾದ ವಿನಯಾ ಮತ್ತು ಮಂಜು ಪೂಜಾರಿ ಸೇನಾಪುರ, ಹಾಗೂ ಜಯಂತಿ ಮತ್ತು ಡಾ।ವಿಜಯ್ ಕೖಷ್ಣಾ ಪಡುಕೋಣೆ ಇವರನ್ನು ಸನ್ಮಾನಿಸಲಾಯಿತು . ವೇದಿಕೆಯಲ್ಲಿ ಆಸೀನರಾಗಿದ್ದ ತಾಲೂಕು ಪಂಚಾಯತ್ ಅಧ್ಯಕ್ಷ ರಾದ ಶಂಕರ್ ಶೆಟ್ಟಿ, ಸೇನಾಪುರ ಗ್ರಾಮದ ಸದಶ್ಯರಾದ ಸಂದೀಪ್ ಪೂಜಾರಿ, ಮಂಜು ಪೂಜಾರಿ, ಡಾ।ವಿಜಯ್ ಕ್ರಷ್ಣ, ಪ್ರಭು ಕೆನಡಿ ಪಿರೇರಾ,ಇವರೆಲ್ಲಾರೂತಮ್ಮ ಅನಿಸಿಕೆಗಳನ್ನು ತಿಳಿಸಿದರು. ಅಧ್ಯಕ್ಷರಾದ ವಂದನೀಯ ಫಾ। ಪ್ರಾನ್ಸಿಸ್ ಕರ್ನೆಲಿಯೊರವರು ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ ಶಿಕ್ಷಕಿಯು ಮಾಡಿದ ಸೇವೆ, ಅವರು ಮಕ್ಕಳ ಬಗ್ಗೆ ಪಟ್ಟ ಶ್ರಮ ಇದನ್ನೆಲ್ಲಾ ನೆನಪಿಸುತ್ತಾ ಅವರ ಮುಂದಿನ ನಿವ್ರತ್ತಿ ಜೀವನಕ್ಕೆ ಶುಭಹಾರೖಸಿದರು. ಕಿ, ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಫಾತಿಮಾ ಬರೆಟ್ಟೊ ಸ್ವಾಗತಿಸಿದರು, ಹಿ. ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಶಾಂತಿ ಪಾಯಸ್ ಧನ್ಯವಾದ ನೀಡಿದರು. ಕಾರ್ಯಕ್ರಮವನ್ನುಶಿಕ್ಷಕಿ ರೇವತಿ ನಿರೂಪಿಸಿದರು. ಕಾರ್ಯಕ್ರಮದ ಊಟ ಹಾಗೂ ಇತರ ಎಲ್ಲಾ ಪ್ರಾಯೋಜಕತ್ವನ್ನು ಶ್ರೀಮತಿ ಮತ್ತು ಶ್ರೀ ಮ಼ಂಜು ಪೂಜಾರಿ ಸೇನಾಪುರ ಇವರು ವಹಿಸಿಕೊಂಡಿದ್ದರು.




















