

2025 26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಬೈಂದೂರು ರಾವತನ್ಕಟ್ಟೆ ನಿವಾಸಿ ಜಿನಲ್ ಫೆರ್ನಾಂಡಿಸ್ ಅತ್ಯುತ್ತಮ ಸಾಧನೆ ಮಾಡಿರುತ್ತಾರೆ. ಕುಂದಾಪುರದ ಹೆಮ್ಮಾಡಿಯ ಜನತಾ ಇಂಡಿಪೆಂಡೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಯಾಗಿರುವ ಇವಳು ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ 576 ಅಂಕಗಳನ್ನು ಗಳಿಸುವ ಮೂಲಕ ಡಿಸ್ಟಿಂಕ್ಷನ್ ನಲ್ಲಿ 96 ಶೇಕಡ ಪ್ರತಿಶತದೊಂದಿಗೆ ತೆರ್ಗೆಗಡೆಯಾಗಿರುತ್ತಾರೆ.
ಇವಳು ಬೈಂದೂರು ರಾಹುತಿನ ಕಟ್ಟೆ ನಿವಾಸಿ ಸ್ಟೇಫನ್ ರಾಜ್ ಮತ್ತು ಜ್ಯೋತಿ ಫೆರ್ನಾಂಡಿಸ್ ದಂಪತಿಯ ಸುಪುತ್ರಿಯಾಗಿದ್ದಾಳೆ.
ಝೀನಲ್ ಫೆರ್ನಾಂಡಿಸ್ ಇವಳಿಗೆ ಹಿಂದೆ 9 ವರ್ಷಗಳಿಂದ ಜಿನಲ್ ಫೆರ್ನಾಂಡಿಸ್ ಇವಳಿಗೆ ಈ ಹಿಂದೆ 9 ವರ್ಷಗಳಿಂದ ಬೋಧನೆ ಮಾಡಿದ ಐಬಿಬಿಎಸ್ ಬೆಸ್ಟ್ ಟೀಚರ್ ಅವಾರ್ಡ್ ಶಿಕ್ಷಕಿ ಕುಮಾರಿ ಆಶಾ ವೀಣಾ ಡಯಾಸ್ ಇವರು ತಮ್ಮ ಶಿಷ್ಯೆ ಉತ್ತಮ ಸಾಧನೆ ಗೈದಿದಕ್ಕೆ ತುಂಬಾ ಹರ್ಷಿತರಾಗಿದ್ದು, ತನ್ನ ಶಿಷ್ಯೆಯನ್ನು “ಮನಸಿದ್ದರೆ ಮಾರ್ಗ” ಎಂಬ ಉಕ್ತಿಗೆ ಹೋಲಿಸಿರುತ್ತಾರೆ, ಹಾಗೆ ತನ್ನ ನೆಚ್ಚಿನ ವಿದ್ಯಾರ್ಥಿನಿಯಾದ ಝೀನಲ್ ಫೆರ್ನಾಂಡಿಸ್ ಮಾಡಿದ ಸಾಧನೆಗೆ ಮನಸಾರೆ ಅಭಿನಂದಿಸಿದ್ದಾರೆ. ಝೀನಲ್ ಫೆರ್ನಾಂಡಿಸ್, “ಬೆಳೆಯುವ ಸಿರಿ ಮೊಳಕೆಯಲ್ಲಿಯೆ” ಸಣ್ಣವಳಿರುವಾಗಲೇ ಬಹು ಮುಖ ಪ್ರತಿಭೆಯಾಗಿದ್ದಳು ಎಂದು ಅವಳ ಬಗ್ಗೆ ಅಭಿಮಾನದಿಂದ ಹೇಳುತ್ತಾ, ಆಶಾ ವೀಣಾ ಡಯಾಸ್ ಇವರು ತಮ್ಮ ಝೀನಲ್ ಫೆರ್ನಾಂಡಿಸ್ ಅವಳಿಗೆ ಮುಂದಿನ ಭವಿಸ್ಯಕ್ಕೆ ಶುಭ ಕೋರಿದ್ದಾರೆ





