

ಮಂಗಳೂರಿನ ಮಿಲಾಗ್ರೆಸ್ನ ಲೇಡಿ ಆಫ್ ಮಿರಾಕಲ್ಸ್ ಚರ್ಚ್ನಲ್ಲಿ ಯೇಸುವಿನ ಕೊನೆಯ ಭೋಜನದ ಸ್ಮರಣೆಯನ್ನು ಆಚರಿಸಲಾಯಿತು. ವಂದನೀಯ ಧರ್ಮ ಗುರು ಉದಯ್ ಫೆರ್ನಾಂಡಿಸ್ ಬಲಿಪೂಜೆಯನ್ನು ಅರ್ಪಿಸಿದರು ವಂದನೀಯ ಧರ್ಮ ಗುರು ಅವಿತ್ ಪಾಯ್ಸ್ ಪ್ರಬೋಧನೆ ನೀಡಿ ಪವಿತ್ರ ಪ್ರಸಾದ ಸ್ಥಾಪನೆ, ಪೌರೋಹಿತ್ಯದ ಸಂಸ್ಕಾರ ಮತ್ತು ಸೇವೆಯಲ್ಲಿರಲು ಪ್ರೀತಿಯ ಆಜ್ಞೆಯೊಂದಿಗೆ ದಿನದ ಮಹತ್ವವನ್ನು ಎತ್ತಿ ತೋರಿಸಿದರು. ವಂದನೀಯ ಧರ್ಮ ಗುರು ಬೋನವೆಂಚೆರ್ ನಝರೆತ್ ಆಯ್ಕೆಯಾದ ಪ್ರತಿನಿಧಿಗಳ ಪಾದಗಳನ್ನು ತೊಳೆದು, ವಿಶೇಷವಾಗಿ ಮಕ್ಕಳಿಗೆ ವರ್ಷವನ್ನು ಸಮರ್ಪಿಸಿದರು. ವಂದನೀಯ ಧರ್ಮ ರಾಜೇಶ್ ರೋಸಾರಿಯೋ (ರೆಕ್ಟರ್ ಸಂತ ಜೋಸೆಫರ ಸೆಮಿನರಿ ) ಗುರು ಆಲ್ವಿನ್ ಮತ್ತು ವಂದನೀಯ ಧರ್ಮಗುರು ಜೆರಾಲ್ಡ್, ವಂದನೀಯ ಧರ್ಮಗುರು ಉದಯ್ ಫೆರ್ನಾಂಡಿಸ್ ಮತ್ತು ಧರ್ಮ ಭಗೀನಿ ಯರು ಮತ್ತು ಹೆಚ್ಚಿನ ಸಂಖ್ಯೆಯ ವಿಶ್ವಾಸಿಗಳು ಪವಿತ್ರ ಬಲಿ ಪೂಜೆ ಯಲ್ಲಿ ಭಾಗವಹಿಸಿ ಯೇಸುವಿನ ಮಾನವೀಯತೆಯ ಮೇಲಿನ ಬೇಷರತ್ತಾದ ಮತ್ತು ನಿಷ್ಠಾವಂತ ಪ್ರೀತಿಯ ಬಗ್ಗೆ ಧ್ಯಾನಿಸಿದರು.
Jesus last supper commemoration was celebrated at our Lady of miracles church milagres ,mangalore

Jesus last supper commemoration was celebrated at our Lady of miracles church milagres ,mangalore. Fr Rajesh Rosrieo( Rector St Joseph seminary) celebrated the Mass,fr Avith Pais highlighted the significance of the day with the institution of the Holy Eucharist,Sacrament of Priesthood and commandment of love to be at service.The Parish Priest washed the feet of the chosen representatives, especially the children being the year dedicated to them and conducted the adoration. Fr Uday Fernandes Rev Fr Alwyn and fr Gerald concelebrated .A large number of faithful participated in the service meditating on the unconditional and faithful love of Jesus for humanity.





































