ಕುಂದಾಪುರ,ಮಾ.29 (2026) ; ಉಡುಪಿ ಜಿಲ್ಲೆಯ ಅತ್ಯಂತ ಹಿರಿಯ ಚರ್ಚ್ ಆಗಿರುವ ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಗರಿಗಳ ಭಾನುವಾರದಂದು ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ ಚರ್ಚಿನ ಎದುರುಗಡೆ ಗರಿಗಳ ಸಂಸ್ಕಾರದ ಪ್ರಾರ್ಥನ ವಿಧಿಯನ್ನು ನೇರವೆರಿಸಿದರು, ಗರಿಗಳನ್ನು ಆಶಿರ್ವಧಿಸಿ ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು. ನಂತರ ಗರಿಗಳ ಮೆರವಣೆಗೆಯ ಮೂಲಕ ಚರ್ಚಿನೊಳಗೆ ಪ್ರವೇಶಿಸಿ ಪವಿತ್ರ ಬಲಿದಾನವನ್ನು ಭಕ್ತರೊಂದಿಗೆ ಅರ್ಪಿಸಲಾಯಿತು. ‘ತ್ಯಾಗದ ಹೊರತು ಮುಕ್ತಿಯಿಲ್ಲ, ಶಿಲುಭೆಯ ಹೊರತು ಮುಕುಟವಿಲ್ಲ’ ಎಂದು ಸಂದೇಶ ನೀಡಿ, ಯೇಸು ಕ್ರಿಸ್ತರು ತನ್ನನ್ನು ತಾನೆ ಬಲಿದಾನಕ್ಕೆ ಸಿದ್ದವಾಗಿ ಜೆರುಸೆಲೇಮ್ ನಗರಕ್ಕೆ ನಗರಕ್ಕೆ ಪ್ರವೇಶ ಮಾಡುವಾಗ ಅವರ ಹಿಂಬಾಲಕರು, ಒಲೀವ್ ಗೀಡದ ಗರಿಗಳನ್ನು ತೆಗೆದುಕೊಂಡು ಜಯಕಾರ ಹಾಕಿ ಸ್ವಾಗತಿಸಿದ್ದರು, ಹಾಗೇ ನಾವು ಗರಿಗಳ ಭಾನುವಾರದ ಮೂಲಕ ಪವಿತ್ರ ವಾರ ಆರಂಭಿಸೋಣ’ ಎಂದು ಕರೆ ನೀಡಿದರು. ಈ ಪ್ರಾರ್ಥನ ವಿಧಿಯಲ್ಲಿ ಅಪಾರ ಭಕ್ತಾಧಿಗಳು ನೆರೆದಿದ್ದರು.

Click the link below to join our Jananudi news group – Also please share this link to others ನಮ್ಮ ಜನನುಡಿ ವಾರ್ತೆಗಳ ಗುಂಪಿಗೆ ಸೇರಲು ಕೆಳಗಿನ ಲಿಂಕನ್ನು ಒತ್ತಿ – ಹಾಗೆಯೇ ದಯವಿಟ್ಟು ಈ ಲಿಂಕನ್ನು ಇತರರಿಗೆ ಹಂಚಿಕೊಳ್ಳಿ
https://chat.whatsapp.com/Ev3k8gPa7GoEoPPXlyxtW6 (jananudi news orga)
Click the link below to join our Jananudi news group – Also please share this link to others ನಮ್ಮ ಜನನುಡಿ ವಾರ್ತೆಗಳ ಗುಂಪಿಗೆ ಸೇರಲು ಕೆಳಗಿನ ಲಿಂಕನ್ನು ಒತ್ತಿ – ಹಾಗೆಯೇ ದಯವಿಟ್ಟು ಈ ಲಿಂಕನ್ನು ಇತರರಿಗೆ ಹಂಚಿಕೊಳ್ಳಿ
https://chat.whatsapp.com/KsqVmxkVQZA61f4rAB31mQ (jananudi byndoor)
Click the link below to join our Jananudi news group – Also please share this link to others ನಮ್ಮ ಜನನುಡಿ ವಾರ್ತೆಗಳ ಗುಂಪಿಗೆ ಸೇರಲು ಕೆಳಗಿನ ಲಿಂಕನ್ನು ಒತ್ತಿ – ಹಾಗೆಯೇ ದಯವಿಟ್ಟು ಈ ಲಿಂಕನ್ನು ಇತರರಿಗೆ ಹಂಚಿಕೊಳ್ಳಿ
https://chat.whatsapp.com/EJ5qhOlV441ASSM9IUi0Yw (Amche kundapur)