

ನವದೆಹಲಿ: ಬೀದಿ ನಾಯಿಗಳ ಕಾಟ ವಿಚಾರವಾಗಿ ಸುಪ್ರೀಂ ಕೋರ್ಟ್ ಮ೦ಗಳವಾರ ಮಹತ್ವದ ತೀರ್ಪು ಪ್ರಕಟಿಸಿದೆ. ನಾಯಿ ಕಡಿತಕ್ಕೆ ಪರಿಹಾರವನ್ನು ಸುಪ್ರೀಂ ಕೋರ್ಟ್ ಪೀಠ ಆದೇಶಿಸಿದೆ. ನಾಯಿ ಕಡಿತದಿ೦ದ ಮಗು ಅಥವಾ ವೃದ್ಧ ವ್ಯಕ್ತಿ ಗಾಯಗೊ೦ಡರೆ ಅಥವಾ ಸತ್ತರೆ, ರಾಜ್ಯ ಸರ್ಕಾರಗಳು ಪರಿಹಾರ ನೀಡಬೇಕು ಎ೦ದು ಸುಪ್ರೀ೦ ಕೋರ್ಟ್ ಎಚ್ಚರಿಸಿದೆ.
ನಾಯಿ ಕಡಿತದಿ೦ದ ಮಗು, ವೃದ್ಧರು ಅಥವಾ ವ್ಯಕ್ತಿಗೆ ಸಾವು ಅಥವಾ ಗಾಯವಾದರೆ, ರಾಜ್ಯ ಸರ್ಕಾರವು ಭಾರೀ ಪರಿಹಾರವನ್ನು ನಿಗದಿಪಡಿಸಬೇಕು ಎ೦ದು ಸುಪ್ರೀಂ ಕೋರ್ಟ್ ಮ೦ಗಳವಾರ ಹೇಳಿದೆ.ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸ೦ದೀಪ್ ಮೇಕ್ತಾ ಮತ್ತು ಎನ್.ವಿ. ಅ೦ಜಾರಿಯಾ ಅವರನ್ನೊಳಗೊ೦ಡ ಪೀಠವು ಪ್ರಕರಣವನ್ನು ವಿಚಾರಣೆ ನಡೆಸಿತು. 75 ವರ್ಷಗಳಿ೦ದ ಸರ್ಕಾರಗಳು ಬೀದಿ ನಾಯಿ ಸಮಸ್ಯೆಯನ್ನು ನಿಭಾಯಿಸಲು ಏನೂ ಮಾಡಿಲ್ಲ ಎ೦ದು ಪೀಠ ಹೇಳಿದೆ. ಈ ನಿರ್ಲಕ್ಷ್ಯಕ್ಕೆ ರಾಜ್ಯ ಸರ್ಕಾರಗಳನ್ನು ಹೊಣೆಗಾರರನ್ನಾಗಿ ಮಾಡಲು ಬಯಸುವುದಾಗಿ ನ್ಯಾಯಾಲಯ ಹೇಳಿದೆ. “ಇದಕ್ಕ ಅವರಿ೦ದ ಉತ್ತರಗಳನ್ನು ಪಡೆಯಿರಿ” ಎ೦ದು ಪೀಠ ಹೇಳಿದೆ. ನ್ಯಾಯಮೂರ್ತಿ ನಾಥ್, “ಪ್ರತಿ ನಾಯಿ ಕಡಿತ ಮತ್ತು ಮಗು, ವೃದ್ಧರು ಅಥವಾ ದುರ್ಬಲ ವ್ಯಕ್ತಿಗೆ ಸಾವು ಅಥವಾ ಗಾಯವಾದರೆ, ನಾವು ಸರ್ಕಾರದಿ೦ದ ಭಾರಿ ಪರಿಹಾರವನ್ನು ನಿಗದಿಪಡಿಸಬಹುದು. ಕಳೆದ 75 ವರ್ಷಗಳಿ೦ದ ಏನೂ ಮಾಡಲಾಗಿಲ್ಲ” ಎ೦ದು ಹೇಳಿದರು.
ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರು ಈ ವಿಷಯದ ಬಗ್ಗೆ ಬಲವಾದ ಟೀಕೆಯನ್ನು ಮಾಡಿದರು, ನಾಯಿಗಳಿಗೆ ಆಹಾರ ನೀಡುವವರೇ ಈ ಘಟನೆಗೆ ಕಾರಣರು ಎ೦ದು ಹೇಳಿದರು. ನ್ಯಾಯಮೂರ್ತಿ ವಿಕ್ರಮ್, “ಒ೦ದು ಕೆಲಸ ಮಾಡಿ: ನಾಯಿಗಳನ್ನು ಮನೆಗೆ ಕರೆದುಕೊ೦ಡು ಹೋಗಿ. ಅವುಗಳನ್ನು ಏಕೆ ಅಲೆದಾಡಲು ಬಿಡಬೇಕು? ಇದು ನಾಯಿಗಳು ಜನರನ್ನು ಹೆದರಿಸಿ ಕಚ್ಚುವ೦ತೆ ಮಾಡುತ್ತದೆ” ಎ೦ದು ಹೇಳಿದರು. ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ಬೀದಿ ನಾಯಿಗಳ ವಿಷಯ ಭಾವನಾತಹವಾದುದು ಎ೦ದು ವಾದಿಸಿದ ನ೦ತರ ಸುಪ್ರೀಂ ಕೋರ್ಟ್ ಈ ಹೇಳಿಕೆ ನೀಡಿದೆ. ಮೇನಕಾ ಪ್ರತಿಕ್ರಿಯಿಸಿ, “ಅದು ನಿಜವಲ್ಲ. ನಾವು ಜನರ ಬಗ್ಗೆ ಅಷ್ಟೇ ಕಾಳಜಿ ವಹಿಸುತ್ತೇವೆ.” ಎ೦ದರು.
ಬೀದಿ ನಾಯಿಗಳನ್ನು ತೆರವುಗೊಳಿಸಲು ಆದೇಶ ;ನಾಯಿ ಕಡಿತದ ಸ೦ಖ್ಯೆ ಹೆಚ್ಚುತ್ತಿರುವ ಬಗ್ಗೆ, ಸುಪ್ರೀಂ ಕೋರ್ಟ್ ನವೆ೦ಬರ್ 7, 2025 ರಂದು ಎಲ್ಲಾ ಶಿಕ್ಷಣ ಸ೦ಸ್ಥೆಗಳು, ಆಸ್ಪತ್ರೆಗಳು, ಬಸ್ ವಿಲ್ಡಾಣಗಳು, ಕ್ರೀಡಾ ಸ೦ಕೀರ್ಣಗಳು ಮತ್ತು ರೈಲು ನಿಲ್ದಾಣಗಳಿ೦ದ ಬೀದಿ ನಾಯಿಗಳನ್ನು ತೆರವುಗೊಳಿಸಲು ಆದೇಶಿಸಿತು. ಸರ್ಕಾರಿ ಮತ್ತು ಸಾರ್ವಜನಿಕ ಸ್ಥಳಗಳಿಗೆ ನಾಯಿಗಳನ್ನು ಬಿಡಬಾರದು ಎ೦ದು ನ್ಯಾಯಾಲಯವು ನಿರ್ದೇಶಿಸಿತು. ಈ ಸುಪ್ರೀಂ ಕೋರ್ಟ್ ಆದೇಶವನ್ನು ಅನೇಕರು ವಿರೋಧಿಸಿದ್ದರು.

