

ಕುಂದಾಪುರ; ಸಂಗೀತ ಭಾರತಿ ಟ್ರಸ್ಟ್ (ರಿ.), ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ “ಶಿಶಿರ ಸಂಗೀತೋತ್ಸವ” ಕಾಲೇಜಿನ ರಂಗ ಅಧ್ಯಯನ ಕೇಂದ್ರದಲ್ಲಿ ಡಿ. ೨೮ ರಂದು ಆದಿತ್ಯವಾರ ನಡೆಯಿತು. ದಿ| ಎ. ವೈಕುಂಠ ಹೆಬ್ಬಾರ್ ಹಾಗೂ ದಿ| ಅವಿನಾಶ್ ಹೆಬ್ಬಾರ್ ಸ್ಮರಣಾರ್ಥ ಏರ್ಪಡಿಸಿದ ಕಾರ್ಯಕ್ರಮವನ್ನು ಖ್ಯಾತ ಗಾಯಕರಾದ ಓಂಕಾರ್ ಹವಾಲ್ದಾರ್ ಮತ್ತು ಶ್ರೀಮತಿ ಮಾನಸಿ ಶಾಸ್ತಿç ಬೆಂಗಳೂರು ದೀಪ ಬೆಳಗಿಸಿ ಉದ್ಘಾಟಿಸಿದರು.
ಸಂಗೀತ ಭಾರತಿ ಟ್ರಸ್ಟ್ (ರಿ.) ಅಧ್ಯಕ್ಷ ಕೆ. ಶ್ರೀಧರ ಕಾಮತ್, ಭಂಡಾರ್ಕರ್ಸ್ ಕಾಲೇಜು ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷ ಕೆ. ಶಾಂತಾರಾಮ ಪ್ರಭು, ಸಂಗೀತ ಭಾರತಿ ಟ್ರಸ್ಟಿನ ಕಾರ್ಯದರ್ಶಿ ನಾರಾಯಣ ಕೆ., ಟ್ರಸ್ಟಿಗಳಾದ ಕೆ. ಸೀತಾರಾಮ ನಕ್ಕತ್ತಾಯ, ಡಾ| ಎಚ್. ಆರ್. ಹೆಬ್ಬಾರ್, ಡಾ| ಆದರ್ಶ ಹೆಬ್ಬಾರ್, ಶ್ರೀಮತಿ ಸುಪ್ರಸನ್ನ ನಕ್ಕತ್ತಾಯ, ರೇಖಾ ಕಾರಂತ್ ಉಪಸ್ಥಿತರಿದ್ದರು.
ಕಲಾವಿದರಾದ ಸಿತಾರ್ ವಾದಕ ಅರ್ಜುನ್ ಆನಂದ ಬೆಂಗಳೂರು, ತಬಲಾ ಕಲಾವಿದರಾದ ಸಾಗರ್ಭರತ್ ರಾಜ್ ಬೆಂಗಳೂರು, ವಿಘ್ನೇಶ್ ಕಾಮತ್ ಕೋಟೇಶ್ವರ, ಹಾರ್ಮೋನಿಯಮ್ ಕಲಾವಿದ ಶ್ರೀಧರ್ ಭಟ್ ಕೋಟೇಶ್ವರ, ಕು. ಯುಕ್ತಾ ಹೊಳ್ಳ, ಕುಂದಾಪುರ ಭಾಗವಹಿಸಿದ್ದರು. ಕೆ. ಶ್ರೀಧರ ಕಾಮತ್ ಸ್ವಾಗತಿಸಿದರು. ರಾಮ್ ಮೋಹನ್ ಕಾರಂತ್ ಅವರು ದಿ| ಎ. ವೈಕುಂಠ ಹೆಬ್ಬಾರ್ ಹಾಗೂ ದಿ| ಅವಿನಾಶ್ ಹೆಬ್ಬಾರ್ ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗೂ ಹಿಂದುಸ್ತಾನಿ ಗಾಯಕರನ್ನು ಕುಂದಾಪುರದಲ್ಲಿ ಪರಿಚಯಿಸುವಲ್ಲಿ ತೋರುತ್ತಿದ್ದ ಆಸಕ್ತಿಯನ್ನು ಸ್ಮರಿಸಿದರು. ಕೆ. ವಿವೇಕ್ ಪೈ, ಡಾ| ಎಚ್. ಆರ್. ಹೆಬ್ಬಾರ್, ನಾರಾಯಣ ಕೆ. ಕಲಾವಿದರನ್ನು ಪರಿಚಯಿಸಿದರು.
ಸಂಗೀತ ಭಾರತಿ ಟ್ರಸ್ಟ್ನ ವಿಶ್ವಸ್ಥರಾದ ಯು. ಎಸ್. ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಶಿಶಿರ ಸಂಗೀತೋತ್ಸವದಲ್ಲಿ ಪ್ರಪ್ರಥಮವಾಗಿ ಶ್ರೀಮತಿ ಮಾನಸಿ ಶಾಸ್ತಿç ತಮ್ಮ ಹಿಂದುಸ್ತಾನಿ ಗಾಯನದ ಮೂಲಕ ಶ್ರೋತೃ ವರ್ಗದವರ ಮೆಚ್ಚುಗೆಗೆ ಪಾತ್ರರಾದರು. ಇವರಿಗೆ ಸಾಗರಭರತ್ ರಾಜ್ ತಬಲಾದಲ್ಲಿ ಹಾಗೂ ಶ್ರೀಧರ್ ಭಟ್ ಹಾರ್ಮೋನಿಯಮ್ನಲ್ಲಿ ಸಹಕರಿಸಿದರು.
ನಂತರ ಅರ್ಜುನ್ ಆನಂದ ಅವರಿಂದ ಸಿತಾರ್ ವಾದನ ಕಾರ್ಯಕ್ರಮ ನಡೆಯಿತು. ಮೂರನೇ ಅವಧಿಯಲ್ಲಿ ಓಂಕಾರ್ ಹವಾಲ್ದಾರ್ ಬೆಂಗಳೂರು ತಮ್ಮ ಅಪೂರ್ವ ಗಾಯನದಿಂದ ಅಭಿನಂದನೆಗೆ ಪಾತ್ರರಾದರು. ಇವರಿಗೆ ಕೆ. ವಿಘ್ನೇಶ್ ಕಾಮತ್ ತಬಲಾದಲ್ಲಿ, ಶ್ರೀಧರ್ ಭಟ್ ಹಾರ್ಮೋನಿಯಮ್ನಲ್ಲಿ ಸಹಕರಿಸಿದ್ದರು. ಕು. ಯುಕ್ತಾ ಹೊಳ್ಳ ತಾನ್ಪುರದಲ್ಲಿ ಸಹಕರಿಸಿದರು.
ಡಾ| ಆದರ್ಶ ಹೆಬ್ಬಾರ್ ಕಲಾವಿದರೆಲ್ಲರ ಪ್ರತಿಭೆಗೆ ಅಭಿನಂದಿಸಿ, ವಂದಿಸಿದರು.


