

ಕೋಟ ಸಂತ ಜೊಸೇಫರ ಇಗರ್ಜಿಯಲ್ಲಿ ಹೊಸ ವರ್ಷದ ಆಚರಣೆಯ ಅಂಗವಾಗಿ ಪರಮ ಪ್ರಸಾದದ ಆರಾಧನೆ ನಡೆಯಿತು. ಅಥಿತಿ ಗುರುಗಳಾಗಿ ಆಗಮಿಸಿದ ವಂ। ಜೋನ್ ಸಿಕ್ವೇರಾ ಅವರು ಆರಾಧನೆಯನ್ನು ನಡೆಸಿದರು. ನಂತರ ಪವಿತ್ರ ಬಲಿಪೂಜೆ ನೆರವೇರಿತು. ಚರ್ಚಿನ ಧರ್ಮಗುರುಗಳಾದ ವಂ। ಸ್ಟ್ಯಾನಿ ತಾವ್ರೊ ಹಾಗು ಇನ್ನೋರ್ವ ಅಥಿತಿ ಧರ್ಮಗುರುಗಳಾದ ವಂ। ದೀಪಕ್ ಫುರ್ಟಾಡೊ ಅವರು ಬಲಿಪುಜೆಯಲ್ಲಿ ಸಹಕರಿಸಿದರು. ಭಕ್ತಾದಿಗಳು ಭಕ್ತಿ ಪೂರ್ವಕವಾಗಿ ಬಲಿಪೂಜೆಯಲ್ಲಿ ಪಾಲ್ಗೊಂಡರು. ಕಳೆದ ವರ್ಷದಲ್ಲಿ ದೇವರು ಕರುಣಿಸಿದ ಆಶಿರ್ವಾದಗಳಿಗಾಗಿ ದೇವರಿಗೆ ಧನ್ಯವಾದಾಗಳನ್ನು ಅರ್ಪಿಸುತ್ತ ಹೊಸ ವರ್ಷವನ್ನು ಸ್ವಾಗತಿಸಿದರು.
ನಂತರ ನಡೆದ ಸಹಮಿಲನ ಕಾರ್ಯಕ್ರಮದಲ್ಲಿ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಕ್ರಿಸ್ಮಸ್ ಕ್ರಿಬ್, ಕಾರ್ಡ್, ಭಾಶಣ, ಗಾಯನ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಎಲ್ಲರಿಗೂ ಲಘು ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.












































