

ಗದಗ -23 ಮಕಾನದಾರ ಸಾಹಿತ್ಯ ಪ್ರತಿಷ್ಟಾನ ಗಜೇಂದ್ರಗಡ, ಗದಗಿನ ನಿರಂತರ ಪ್ರಕಾಶನದ ವತಿಯಿಂದ 2025ನೇ ಸಾಲಿನ ‘ನಿರಂತರ ಸಾಹಿತ್ಯ ಪುರಸ್ಕಾರ”ಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಶಿಕ್ಷಕಿ, ಅನುವಾದಕಿ ಕವಯತ್ರಿ ಫ್ಲಾವಿಯಾ ಅಲ್ಬು ಕರ್ಕ್ ಆಯ್ಕೆ ಆಗಿದ್ದರೆಂದು ಪ್ರಕಾಶಕ, ಹಿರಿಯ ಕವಿ ಎ ಎಸ್. ಮಕಾನದಾರ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ನಾಡಿನ ಹಿರಿ ಕಿರಿಯ ಅನೇಕ ಕವಿಗಳ ಕವಿತೆ ಮತ್ತು ಗದ್ಯ ಸಾಹಿತ್ಯವನ್ನು ಕನ್ನಡ ಭಾಷೆಯಿಂದ ಕೊಂಕಣಿ ಭಾಷೆಗೆ ಅನುವಾದಗೊಳಿಸುವದರ ಜೊತೆಗೆ ಕೊಂಕಣಿಯ ತ್ರಿಲಿಪಿಗಳಿಗೆ ಅನುವಾದಮಾಡಿ ಕಡಲ ಕಿನಾರೆಯ ದ್ವಿಭಾಷಾ ಓದುಗರಲ್ಲಿ ಹಾಗೂ ಕೊಂಕಣಿಯ ತ್ರಿ ಲಿಪಿಯ ಮುಂಬಾಯ್,ಗೋವಾ ಹಾಗೂ ವಿದೇಶಿ ಓದುಗರಿಗೆ ಚಿರಪರಿಚಿತರಾಗಿದ್ದಾರೆ.ದೆಹಲಿ ಸಾಹಿತ್ಯ ಅಕಾಡೆಮಿ, ಮಂಗಳೂರಿನ
ಕೊಂಕಣಿ ಸಾಹಿತ್ಯ ಅಕಾಡೆಮಿಗಳ ಕಾರ್ಯಕ್ರಮಗಳಲ್ಲಿ.ವಿವಿಧ ಕವಿಗೋಷ್ಟಿಗಳಲ್ಲಿ, ಕವಿತಾ ಟ್ರಸ್ಟ್,ಆಶಾವಾದಿ ಪ್ರಕಾಶನ್ , ಮಾಂಡ್ ಸೊಭಾನ್ ಗಳ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವದರ ಜೊತೆಗೆ
ಮಂಗಳೂರು ಆಕಾಶವಾಣಿಯಲ್ಲಿ ಕವಯತ್ರಿ ಫ್ಲಾವಿಯಾ ಅವರ ಕವಿತೆಗಳು, ಚಿಂತನೆಗಳು ಪ್ರಸಾರಗೊಂಡಿವೆ. ಪತಿ ಸಿಪ್ರಿಯನ್ ಮೊರಾಸ್.ಮಕ್ಕಳಾದ ಕೆಲ್ವಿನ್ ಫೆಬಿಯನ್ ಮೊರಾಸ್.ವಿಯೊನ್ ಕೆರೊಲ್ ಮೊರಾಸ್ ರೊಂದಿಗೆ ಪುತ್ತೂರಿನಲ್ಲಿ ವಾಸಿಸುತ್ತಿದ್ದಾರೆ. ವಿದ್ಯಾರ್ಥಿ ಸಮೂಹ ಮೆಚ್ಚಿದ ಶಿಕ್ಷಕಿಯಾಗಿ ಸದಾ ಹೊಸತನಕ್ಕೆ ತುಡಿಯುವ. ಬರವಣಿಗೆಯ ಮೂಲಕ ಸಮಾಜಮುಖಿ ಚಿಂತನೆಗಳ ಜೊತೆಗೆ ಪ್ರಗತಿಪರ ಸಂಘಟನೆಗಳಲ್ಲಿ ಗುರುತಿಸಿ ಕೊಂಡಿರುವ ಫ್ಲಾವಿಯಾ ಅವರ ಸಾಹಿತ್ಯ ಸೇವೆಗೆ ಕರ್ನಾಟಕ ರಾಜ್ಯ ಭಾವೈಕ್ಯ ಪರಿಷತ್ ದ.ಕ ಹಾಗೂ ಭಾರತೀಯ ಮಾದಕ ದ್ರವ್ಯ ವಿರೋಧಿ ಮಂಡಳಿ ಮಂಗಳೂರು ಇವರಿಂದ “ಭಾವೈಕ್ಯತಾ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ” ಕೂಡ ಲಭಿಸಿದೆ. ಮಾಣಿಕ್ಯ ಪ್ರಕಾಶನ(ರಿ) ಹಾಸನದ “ರಾಜ್ಯ ಮಟ್ಟದ ಜನ್ನ ಕಾವ್ಯ ಪ್ರಶಸ್ತಿ – 2025″ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕನ್ನಡ ನಾಡು – ನುಡಿ ಸಾಹಿತ್ಯ ಸಮ್ಮೇಳನದಲ್ಲಿ ಕಾವ್ಯ ದಶವತಾರ ಕವಿ- ಕಾವ್ಯ ಪುರಸ್ಕಾರ” ,ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ( ರಿ) ಬೆಂಗಳೂರು ರಾಜ್ಯ ಘಟಕ ಮಹಾರಾಷ್ಟ್ರ ನಡೆದ ಅಖಿಲ ಭಾರತ ಪ್ರಥಮ ಕೇಂದ್ರ ಸಾಹಿತ್ಯ ಸಮ್ನೇಳನ ಮುಂಬಾಯಲ್ಲಿ ” ನುಡಿ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ- 2025″ , ಕನ್ನಡ ಸ್ವಾಭಿಮಾನ ಪ್ರತೀಕವಾದ ರಾಷ್ಟ್ರ ಕವಿ ಕುವೆಂಪು ಅವರ ಸ್ಮರಣೆಯಲ್ಲಿ ” ಕನ್ನಡ ಸ್ವಾಭಿಮಾನ ಸ್ಮರಣಿಕೆ” ಯ ಗೌರವ ಸಿರಿಗನ್ನಡ ಪ್ರಕಾಶನ ಚಿತ್ರದುರ್ಗದಿಂದ ಪಡೆದಿರುತ್ತಾರೆ.
ದಿನಾಂಕ ಡಿಸೆಂಬರ್ 28 ರವಿವಾರ ಪುತ್ತೂರಿನಲ್ಲಿ ಬಹು ಭಾಷಾ ಕವಿಗೋಷ್ಠಿ, ಚುಟುಕು ಗೋಷ್ಠಿ ಫ್ಲಾವಿಯಾ ಅಲ್ಬು ಕರ್ಕ್ ಅವರ ‘ ಸಖಿ ಸೂಸಿದ ಸೌಗಂಧ” ಚುಟುಕು ಸಂಕಲನದ ಬಿಡುಗಡೆ ಸಮಾರಂಭದ ಜೊತೆಗೆ ನಿರಂತರ ಸಾಹಿತ್ಯ ಪುರಸ್ಕಾರ ಪ್ರಧಾನ ಸಮಾರಂಭ ಜರುಗಲಿದೆಯೆಂದು ಸಂಘಟಕ ಮಕಾನದಾರ ತಿಳಿಸಿದ್ದಾರೆ.


