

ಶ್ರೀನಿವಾಸಪುರ : ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುವಲ್ಲಿ ಹಿಂದಿನ ಬಿಜೆಪಿ ಸರ್ಕಾರ ಹಾಗು ಇಂದಿನ ಕಾಂಗ್ರೆಸ್ ಸರ್ಕಾರವು ವಿಫಲವಾಗಿವೆ ಎಂದು ಕೆಪಿಆರ್ಎಸ್ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಆರೋಪಿಸಿದರು .
ಪಟ್ಟಣದ ಶಂಕರಮಠದ ಬಳಿಯ ಕೆಪಿಆರ್ಎಸ್ ಕಚೇರಿಯಲ್ಲಿ ಶುಕ್ರವಾರ ಕೆಪಿಆರ್ಎಸ್ ವತಿಯಿಂದ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಯಾವ ರೈತರ ಭೂಮಿಯನ್ನು ಕಿತ್ತುಕೊಂಡಿಲ್ಲ ಎಂದು ಸುಳ್ಳು ವರಧಿಯನ್ನು ನೀಡಿರುವ ಸಚಿವರ ಬಗ್ಗೆ ಅಸಮದಾನವನ್ನು ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆಗೆ ಪದೇ ಪದೇ ಯಾವದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಬಾರದೆಂದು ಹೇಳುತ್ತಿದ್ದರು , ಸಹ ಅರಣ್ಯ ಇಲಾಖೆ ರೈತರ ಮೇಲೆ ನಿರಂತರ ದೌರ್ಜನ್ಯ ನಡೆಸಿ, ರೈತರ ಬೆಳೆಗಳನ್ನು ನಾಶ ಮಾಡಿ, ರೈತರನ್ನು ಒಕ್ಕಲೆಬ್ಬಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಡೀ ರಾಜ್ಯದಲ್ಲಿ ಬಗರ್ಹುಕ್ಕಂ, ಸಾಗುವಳಿ, ಪಿ.ನಂಬರ್ ಅರಣ್ಯಭೂಮಿಯನ್ನ ಬಲವಂತ ಭೂಸ್ವಾಧೀನ ಮಾಡಿಕೊಳ್ಳಬಾರದು ಈ ವಿಷಯವಾಗಿ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ಪರಿಹಾರ ಕೈಗೊಳ್ಳಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘವು ಆಗ್ರಹಿಸಿದೆ.
ಕೆಪಿಆರ್ಎಸ್ ಸಂಘದ ಜಿಲ್ಲಾಧ್ಯಕ್ಷ ಟಿ.ಎಂ.ವೆಂಟೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾತಕೋಟೆ ನವೀನ್ಕುಮಾರ್, ಜಿಲ್ಲಾ ಮುಖಂಡರಾದ ಮಂಜುಳ, ಹನುಮಪ್ಪ ಇದ್ದರು.
12, ಎಸ್ವಿಪುರ್ 2 : ಪಟ್ಟಣದ ಶಂಕರಮಠದ ಬಳಿಯ ಕೆಪಿಆರ್ಎಸ್ ಕಚೇರಿಯಲ್ಲಿ ಕೆಪಿಆರ್ಎಸ್ ವತಿಯಿಂದ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಪಿ.ಆರ್.ಸೂರ್ಯನಾರಾಯಣ ಮಾತನಾಡಿದರು.

